Author: kannadanewsnow09

ಬೆಂಗಳೂರು: ಕಾರವಾರ ಕ್ಷೇತ್ರದ ಶಾಸಕ ಸತೀಶ್ ಕೆ ಸೈಲ್ ಮತ್ತು ಇತರರು ಭಾಗಿಯಾಗಿರುವ ಕಬ್ಬಿಣದ ಅದಿರು ಅಕ್ರಮ ರಫ್ತಿಗೆ ಸಂಬಂಧಿಸಿದಂತೆ, 2002 ರ ಹಣ ಅಕ್ರಮ ತಡೆ ಕಾಯ್ದೆ (Provisions of the Prevention of Money Laundering Act -PMLA) ನಿಬಂಧನೆಗಳ ಅಡಿಯಲ್ಲಿ 21 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಬೆಂಗಳೂರು ವಲಯ ಕಚೇರಿಯ ಜಾರಿ ನಿರ್ದೇಶನಾಲಯ (Directorate of Enforcement -ED) ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಅವರ ಆಸ್ತಿಗಳನ್ನು ಗೋವಾದ ಮೆಸರ್ಸ್ ಶ್ರೀ ಮಲ್ಲಿಕಾರ್ಜುನ್ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ (ಎಸ್‌ಎಂಎಸ್‌ಪಿಎಲ್) ಮೂಲಕ ಹೊಂದಿದ್ದಾರೆ ಮತ್ತು ಕಾನೂನು ಜಾರಿ ಸಂಸ್ಥೆ ಸಲ್ಲಿಸಿದ ಎಲ್‌ಇಎ ಚಾರ್ಜ್‌ಶೀಟ್ ಪ್ರಕಾರ, ಅರಣ್ಯ ಇಲಾಖೆಯ ಅಧಿಕಾರಿಗಳು ಮಾರ್ಚ್ 15, 2010 ರಂದು ಬೇಲೆಕೇರಿ ಬಂದರಿಗೆ ಭೇಟಿ ನೀಡಿದ್ದರು ಮತ್ತು ಬಂದರು ಪ್ರದೇಶದೊಳಗೆ ಸಂಗ್ರಹವಾಗಿರುವ ದೊಡ್ಡ ಪ್ರಮಾಣದ ಕಬ್ಬಿಣದ ಅದಿರನ್ನು ಕಂಡುಹಿಡಿದರು. ಅವರ ವಿಚಾರಣೆಯಲ್ಲಿ ಒಂದು ಭಾಗವು ಗಣಿ…

Read More

ದಾವಣಗೆರೆ : ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರಕುತ್ತಿರುವ ಬಗ್ಗೆ ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳು ರಜೆಯ ಮೇಲೆ ತೆರಳಿದ್ದರು. ನಾಳೆ ಗೃಹ ಸಚಿವರು ಈ ಬಗ್ಗೆ ಸಭೆ ಕರೆದಿದ್ದಾರೆ. ತಪ್ಪು ಮಾಡಿದವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಹಾಗೂ ಇನ್ನೂ ಮುಂದೆ ಇಂಥದ್ದು ನಡೆಯದಂತೆ ಕ್ರಮ ವಹಿಸಲಾಗುವುದು ಎಂದರು. ಅವರು ಇಂದು ದಾವಣಗೆರೆಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಭಾಗವತ್ ಹೇಳಿದ್ದಕ್ಕೆಲ್ಲ ನಾವು ಉತ್ತರಿಸಲಾಗುವುದಿಲ್ಲ ಬ್ರಿಟಿಷರ ಕಾಲದಲ್ಲಿಯೇ ಆರ್.ಎಸ್.ಎಸ್ ಇತ್ತು , ಆಗಲೇ ನೋಂದಣಿ ಮಾಡಿಕೊಳ್ಳಬೇಕಿತ್ತು ಎಂಬ ಬಗ್ಗೆ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಆರ್.ಎಸ್.ಎಸ್. ನ್ನು ಹೊರಗಿಡುವ ಬಗ್ಗೆ ಸರ್ಕಾರದ ಆದೇಶದಲ್ಲಿ ಹೇಳಿಲ್ಲ. ಯಾವುದೇ ಸಂಘ ಸಂಸ್ಥೆಗಳು ಆಯಾ ಜಿಲ್ಲಾಧಿಕಾರಿಗಳ ಬಳಿ ಅನುಮತಿ ಪಡೆಯಬೇಕು ಎಂದು ಹೇಳಿದೆ. ಅವರು ಹಾಗೆ ಭಾವಿಸಿಕೊಂಡಿದ್ದಾರೆ ಎಂದರು. ಭಾಗವತ್ ಹೇಳಿದ್ದಕ್ಕೆಲ್ಲ ನಾವು ಉತ್ತರಿಸಲಾಗುವುದಿಲ್ಲ ಎಂದರು. ನ್ಯಾಯಾಲಯದ ಆದೇಶದ ಮೇರೆಗೆ ತಾಲ್ಲೂಕು ಮತ್ತು ಜಿಲ್ಲಾ…

Read More

ಕೂಡ್ಲಿಗಿ : “ನಾವು ಕರ್ನಾಟಕದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿಯವರು ಟೀಕೆ ಮಾಡುತ್ತಿದ್ದರು.‌ ಈಗ ಹರಿಯಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮಕ್ಕೆ ಶಿವಕುಮಾರ್ ಅವರು ಭಾನುವಾರ ಚಾಲನೆ ನೀಡಿ ಮಾತನಾಡಿದರು. “ಕರ್ನಾಟಕದ ಕಾಂಗ್ರೆಸ್ ‌ಪಕ್ಷದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ.‌ ಬೇರೆ ಪಕ್ಷದವರು ಈಗ ಜನರ ಕಲ್ಯಾಣದ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಕರುನಾಡಿನ ಜನರ ಸೇವೆಯನ್ನು ಉತ್ತಮ ಸರ್ಕಾರ ಮುನ್ನಡೆಸುತ್ತಿದೆ. ಭವಿಷ್ಯದಲ್ಲಿ ಇದಕ್ಕಿಂತ ಉತ್ತಮ ಆಡಳಿತ ನೀಡುತ್ತೇವೆ. 2028 ಕ್ಕೆ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ‌ಅಧಿಕಾರಕ್ಕೆ ಬಂದು ನಿಮ್ಮ ಸೇವೆ ಮಾಡಲಿದೆ” ಎಂದರು. ಏಳನೇ ಗ್ಯಾರಂಟಿಯಾಗಿ ಕೆರೆಗಳಿಗೆ ನೀರು…

Read More

ನವದೆಹಲಿ: ಮುಕೇಶ್ ಅಂಬಾನಿ ಅವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ಕೋಟ್ಯಂತರ ರೂಪಾಯಿಯ ದೇಣಿಗೆಯನ್ನು ಘೋಷಣೆ ಮಾಡಿದ್ದಾರೆ. ಒಟ್ಟು ಮೂರು ತೀರ್ಥಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದಾರೆ. ಮೊದಲಿಗೆ ಅಂಬಾನಿ ಅವರು ನಾಥದ್ವಾರಕ್ಕೆ ಭೇಟಿ ನೀಡಿ, ಅಲ್ಲಿ ಶ್ರೀನಾಥಜಿಯವರ ಭೋಗ್ ಆರತಿ ದರ್ಶನ ಪಡೆದು ಮತ್ತು ಗುರು ಶ್ರೀ ವಿಶಾಲ್ ಬಾವಾ ಸಾಹೇಬ್ ಅವರಿಂದ ಆಶೀರ್ವಾದ ಪಡೆದರು. ತಮ್ಮ ಭೇಟಿಯ ಸಮಯದಲ್ಲಿ, ಅವರು ನಾಥದ್ವಾರದಲ್ಲಿ ಆಧುನಿಕ, ಸುಸಜ್ಜಿತ “ಯಾತ್ರಿ ಏವಂ ವರಿಷ್ಠ ಸೇವಾ ಸದನ” (ಯಾತ್ರಿಕರು ಮತ್ತು ಹಿರಿಯ ನಾಗರಿಕ ಸೇವಾ ಕೇಂದ್ರ) ಸ್ಥಾಪನೆಯನ್ನು ಘೋಷಿಸಿದರು ಮತ್ತು ಶ್ರೀ ನಾಥದ್ವಾರ ದೇವಾಲಯಕ್ಕೆ ರೂ. 15 ಕೋಟಿ ದೇಣಿಗೆ ನೀಡಿದರು. ಈ ಸೇವಾ ಸದನದಲ್ಲಿ 100ಕ್ಕೂ ಹೆಚ್ಚು ಕೊಠಡಿ ಇದ್ದು, ವೃದ್ಧ ವೈಷ್ಣವರು ಮತ್ತು ಭೇಟಿ ನೀಡುವ ಭಕ್ತರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಗೌರವಾನ್ವಿತ ವಸತಿ ಸೌಕರ್ಯವನ್ನು ಒದಗಿಸುತ್ತದೆ. ಇದು 24 ಗಂಟೆಗಳ ವೈದ್ಯಕೀಯ ಘಟಕ, ನರ್ಸಿಂಗ್ ಮತ್ತು ಭೌತಚಿಕಿತ್ಸೆಯ ಸೇವೆಗಳು, ಸತ್ಸಂಗ ಮತ್ತು ಪ್ರವಚನ…

Read More

ಪತಿ ಉದ್ಧಾರವಾದಾಗ ಮಾತ್ರ, ಪತ್ನಿ ಮತ್ತು ಮಕ್ಕಳನ್ನು ಚೆನ್ನಾಗಿ ಸಾಕಲು ಸಾಧ್ಯವಾಗುತ್ತದೆ. ಅವರಿಗೆ ಬೇಕಾದ್ದನ್ನು ತೆಗೆದುಕೊಡಲು, ಒಳ್ಳೆಯ ಬಟ್ಟೆ, ಹೊಟ್ಟೆ ತುಂಬ ಊಟ ಹಾಕಲು ಸಾಧ್ಯವಾಗುತ್ತದೆ. ಇನ್ನು ಹಿಂದೂ ಧರ್ಮದ ಪ್ರಕಾರ, ಪತಿ ಉದ್ಧಾರವಾಗಬೇಕು, ಶ್ರೀಮಂತನಾಗಬೇಕು ಅಂದ್ರೆ, ಪತ್ನಿ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಹಾಗಾದ್ರೆ ಏನು ಆ ಕೆಲಸ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ…

Read More

ಧಾರವಾಡ: ವಾಯವ್ಯ ಸಾರಿಗೆಯಲ್ಲಿ ಜನಪರ, ಕಾರ್ಮಿಕ‌ ಸ್ನೇಹಿ ಹಲವು ಉಪಕ್ರಮಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. 1. ಧಾರವಾಡ ನೂತನ ನಗರ ಬಸ್‌ ನಿಲ್ದಾಣ ಉದ್ಘಾಟನೆ 2. ಹುಬ್ಬಳ್ಳಿಯ ನವೀಕೃತ ಕೇಂದ್ರ ಬಸ್‌ ನಿಲ್ದಾಣದ ಉದ್ಘಾಟನೆ 3. ಅಪಘಾತ/ ಅಪರಾಧ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭ 4. ಅನುಕಂಪ ಆಧಾರದಲ್ಲಿ ಕುಟುಂಬದವರಿಗೆ ನೇಮಕಾತಿ ಆದೇಶ ವಿತರಣೆ 5. ಹೊಸ ಬಸ್ಸುಗಳ ಸೇರ್ಪಡೆ 6. ನಗದು ರಹಿತ‌ ಸೇವೆಗಾಗಿ ನೂತನ ಸ್ಮಾರ್ಟ್ ETM (Electronic ticket machine) ಅನುಷ್ಠಾನ 7. ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂದವರಿಗೆ ರೂ.1 ಕೋಟಿ ವಿಮಾ ಚೆಕ್ ವಿತರಣೆ. 8. ನೌಕರರ ಕುಟುಂಬ ಕಲ್ಯಾಣ ನಿಧಿ ಯೋಜನೆಯಡಿಯಲ್ಲಿ ಮೃತ ಅವಲಂಬಿಥಿಗೆ ರೂ.5 ಲಕ್ಷ ವಿಮಾ ಚೆಕ್ ವಿತರಣೆ 9. ನೌಕರರು ನಿಧನರಾದ ಪ್ರಕರಣಗಳಲ್ಲಿ ( ಅಪಘಾತ ಹೊರತುಪಡಿಸಿ) ಮೃತರ ಅವಲಂಬಿತರಿಗೆ ತಲಾ ರೂ.6.00 ಲಕ್ಷ ವಿತರಣೆ 10. SBI ರವರಿಂದ Cash…

Read More

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯದ ವಿಷಯಗಳು ವೀಡಿಯೋಗಳ ಮೂಲಕ ದಿನಕ್ಕೊಂದು ಬಹಿರಂಗವಾಗುತ್ತಿವೆ. ಈಗ ನಾನ್ ವೆಜ್, ಎಣ್ಣೆ, ಪುಲ್ ಮೋಜು-ಮಸ್ತಿಯೊಂದಿಗೆ ಕೈದಿಗಳು ಭರ್ಜರಿ ಡ್ಯಾನ್ಸ್ ಮಾಡಿದಂತ ವೀಡಿಯೋ ವೈರಲ್ ಆಗಿದೆ. ಹೌದು.. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮದ್ಯ ಕುಡಿದು ಕೈದಿಗಳು ಭರ್ಜರಿ ಡ್ಯಾನ್ಸ್ ಮಾಡಿರುವಂತ ವೀಡಿಯೋ ವೈರಲ್ ಆಗಿದೆ. ಜೈಲಿನಲ್ಲಿರುವಂತ ಡ್ರಮ್, ತಟ್ಟೆಗಳನ್ನೇ ವಾದ್ಯದ ವಸ್ತುಗಳನ್ನಾಗಿ ಬಡಿದುಕೊಂಡು, ಕುಡಿದು ಡ್ಯಾನ್ಸ್ ಮಾಡಿರುವುದು ವೀಡಿಯೋದಲ್ಲಿನ ದೃಶ್ಯಗಳಲ್ಲಿ ಕಂಡು ಬಂದಿದೆ. ಜೈಲಿನ ವೈರಲ್ ವೀಡಿಯೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನದ್ದಾ ಅಥವಾ ಬೇರೆಯ ಜೈಲಿನದ್ದಾ ಎನ್ನುವ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಇದೆಲ್ಲದರ ನಡುವೆ ಪರಪ್ಪನ ಅಗ್ರಹಾರದ ಕರ್ಮಕಾಂಡ ಮಾತ್ರ ಬಗೆದಷ್ಟು ಬಯಲಾಗುತ್ತಿದೆ. https://kannadanewsnow.com/kannada/it-is-illegal-to-label-children-in-conflict-with-law-as-juvenile-delinquents-child-protection-directorate/ https://kannadanewsnow.com/kannada/centers-ban-on-sharavati-pumped-storage-project-victory-for-environmentalists-fight/

Read More

ಮೈಸೂರು: ಅರಸೀಕೆರೆ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯಲಿರುವ ಪ್ಲಾಟ್‌ಫಾರ್ಮ್ ಶೆಲ್ಟರ್ ಕಾಮಗಾರಿಯ ಸಲುವಾಗಿ, ಕೆಲವು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂಬುದಾಗಿ ಮೈಸೂರಿನ ನೈರುತ್ಯ ರೈಲ್ವೆ ವಿಭಾಗವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನವೆಂಬರ್ 9 ರಿಂದ ಡಿಸೆಂಬರ್ 13 ರವರೆಗೆ ರೈಲು ಸಂಖ್ಯೆ 16214 ಎಸ್.ಎಸ್.ಎಸ್. ಹುಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ ರೈಲು ಬೀರೂರು ಮತ್ತು ಅರಸೀಕೆರೆ ನಡುವೆ ರದ್ದಾಗಲಿದ್ದು, ಈ ರೈಲು ಬೀರೂರು ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿವೆ. ಅದೇ ರೀತಿ, ನವೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ ಸಂಚರಿಸುವ ರೈಲು ಸಂಖ್ಯೆ 16213 ಅರಸೀಕೆರೆ – ಎಸ್.ಎಸ್.ಎಸ್. ಹುಬ್ಬಳ್ಳಿ ಎಕ್ಸ್‌ಪ್ರೆಸ್ ಸೇವೆಯು ಅರಸೀಕೆರೆ ಮತ್ತು ಬೀರೂರು ನಡುವೆ ರದ್ದಾಗಲಿದೆ; ಈ ರೈಲು ಅರಸೀಕೆರೆಗೆ ಬದಲು ಬೀರೂರು ನಿಲ್ದಾಣದಿಂದಲೇ ತನ್ನ ನಿಗದಿತ ಸಮಯದಲ್ಲಿ ಹೊರಡಲಿವೆ. ಇದರ ಜೊತೆಗೆ, ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು ಕೂಡ ನವೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ…

Read More

ಕೂಡ್ಲಿಗಿ : 1,70,000 ಜನರಿಗೆ ಕುಡಿಯುವ ನೀರು ಒದಗಿಸುವ ಜೊತೆಗೆ ಕೂಡ್ಲಿಗಿಯ ಅಂತರ್ಜಲ ವೃದ್ಧಿಗೆ ಶ್ರಮಿಸಿ ಯಶಸ್ವಿಯಾದ ಶಾಸಕ ಶ್ರೀನಿವಾಸ್ ಅವರನ್ನು ಪಡೆದ ಕೂಡ್ಲಿಗಿ ಜನತೆ ಅತ್ಯಂತ ಅದೃಷ್ಟವಂತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಪಾರವಾಗಿ ಶ್ಲಾಘಿಸಿದರು. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ, ಹಲವು ಅಭಿವೃದ್ಧಿ ಕಾರ್ಯಕ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಬರಡು ನೆಲ ಕೂಡ್ಲಿಗಿಯನ್ನು ಹಸಿರಿನ ನೆಲವನ್ನಾಗಿ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿರುವ ಶಾಸಕ ಶ್ರೀನಿವಾಸ್ ಅವರು ಅತ್ಯಂತ ಕ್ರಿಯಾಶೀಲರು. ಇವರಿಂದ ಕ್ಷೇತ್ರದ ಅಭಿವೃದ್ಧಿ ಅತ್ಯಂತ ವೇಗ ಪಡೆದುಕೊಂಡಿದೆ ಎಂದರು. ನಮ್ಮದು ಅಭಿವೃದ್ಧಿ ಪರವಾದ ನುಡಿದಂತೆ ನಡೆಯುತ್ತಿರುವ ಸರ್ಕಾರ. ಕಳೆದ ಎರಡು ವರ್ಷಗಳಲ್ಲಿ ಕೂಡ್ಲಿಗಿ‌ ಕ್ಷೇತ್ರಕ್ಕೆ 1750 ಕೋಟಿಗೂ ಅಧಿಕ ಮೊತ್ತದ ಹಣದಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜೊತೆಗೆ ಚುನಾವಣೆ ವೇಳೆ ಘೋಷಿಸಿದ್ದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿ, ಐದಕ್ಕೆ ಐದನ್ನೂ ಜಾರಿ ಮಾಡಿದ್ದೇವೆ. ರಾಜ್ಯದ ಜನರ ಮನೆ ಬಾಗಿಲಿಗೆ ಪ್ರತೀ…

Read More

ಬೆಂಗಳೂರು: ಉಗ್ರಂ ಮಂಜು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಂಧ್ಯಾ ಎನ್ನುವವರ ಜೊತೆಗೆ ಉಗ್ರಂ ಮಂಜು ನಿಶ್ಚಿತಾರ್ಥ ಸದ್ದಿಲ್ಲದೇ ನೆರವೇರಿದೆ. ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ನಟ ಉಗ್ರಂ ಮಂಜು ನಿಶ್ಚಿತಾರ್ಥ ಸದ್ದಿಲ್ಲದೇ ನೆರವೇರಿದೆ. ಸಂಧ್ಯಾ ಎಂಬುವರ ಕೈಯನ್ನು ಉಗ್ರಂ ಮಂಜು ಇಂದು ಸರಳವಾಗಿ ಹೂ ಮುಡಿಸುವ ಮೂಲಕ ಶಾಸ್ತ್ರದ ಜೊತೆಗೆ ನಿಶ್ಚಿತಾರ್ಥವನ್ನು ನೆರವೇರಿಸಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿ ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಟ ಉಗ್ರಂ ಮಂಜು ಹಾಗೂ ಸಂಧ್ಯಾ ನಿಶ್ಚಿತಾರ್ಥ ನೆರವೇರಿದೆ. 2026ರ ಜನವರಿಯಲ್ಲಿ ಉಗ್ರಂ ಮಂಜು ಹಾಗೂ ಸಂಧ್ಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಇವರಿಬ್ಬರ ನಿಶ್ಚಿತಾರ್ಥದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. https://kannadanewsnow.com/kannada/a-tusk-cut-during-the-wild-boar-capture-operation-elephant-moaning/ https://kannadanewsnow.com/kannada/centers-ban-on-sharavati-pumped-storage-project-victory-for-environmentalists-fight/

Read More