Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದ ಕಾರಾಗೃಹದಲ್ಲಿ ಖಾಲಿ ಇರುವಂತ ವಾರ್ಡರ್, ಇನ್ ಸ್ಟ್ರಕ್ಟರ್ ಸೇರಿದಂತೆ ವಿವಿಧ 1,222 ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಒಂದೇ ಕಡೆ ಐದು ವರ್ಷ ಕಾರ್ಯನಿರ್ವಹಿಸಿದ ಕಾರಾಗೃಹ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಲಾಗುವುದು. ಕಾರಾಗೃಹಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂಬ ಸಬೂಬು ಹೇಳುತ್ತಿದ್ದಾರೆ. 197 ವಾರ್ಡರ್, 22 ಇನ್‌ಸ್ಟ್ರಕ್ಟರ್, 3 ಜನ ಅಸಿಸ್ಟೆಂಟ್ ಸೂಪರಿಡೆಂಟ್ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ. 983 ವಾರ್ಡರ್, 17 ಜನ ಜೈಲರ್ಸ್‌ಗಳ ನೇಮಕಾತಿಗೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಹೈಪವರ್ ಕಮಿಟಿ ರಚನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 5000 ಕೈದಿಗಳಿದ್ದಾರೆ. ಅಂಡರ್ ಟ್ರಯಲ್ಸ್, ಸಜಾ ಕೈದಿಗಳಿದ್ದಾರೆ. ಬೇರೆಬೇರೆ ಬ್ಯಾರಕ್‌ಗಳಲ್ಲಿ ಇದ್ದಾರೆ. ಈ ಕಾರಾಗೃಹದಲ್ಲಿ ಸೆಲಿಬ್ರಿಟಿಗಳು ಹೆಚ್ಚಿನ ಗಮನ ಈ ಕಾರಾಗೃಹದ ಮೇಲಿರುತ್ತದೆ. ಇಲ್ಲಿ ನಡೆದಿರುವ…
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಬ್ಬರು ಇಮ್ಮಿಡಿಯಟ್ ಸೂಪರಿಡೆಂಟ್ ಹಾಗೂ ಸಹಾಯಕ ಸೂಪರಿಂಟ್‌ಡೆಂಟ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು. ಕಾರಾಗೃಹಗಳ ಪ್ರಧಾನ ಕಚೇರಿಯಲ್ಲಿ ‘ರಾಜ್ಯದ ಕಾರಾಗೃಹಗಳಲ್ಲಿ ಆಡಳಿತ ಮತ್ತು ಭದ್ರತೆಯ’ ಕುರಿತಂತೆ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಘಟನೆಯ ಜವಾಬ್ದಾರಿಯನ್ನು ಮೂವರು ಅಧಿಕಾರಿಗಳ ಮೇಲೆ ಹಾಕಲಾಗಿದೆ. ಚೀಫ್ ಸೂಪರಿಡೆಂಟ್ ಕೆ.ಸುರೇಶ್ ಅವರನ್ನು ಕೂಡಲೇ ವರ್ಗಾವಣೆ ಮಾಡಲಾಗಿದೆ. ಇಮ್ಮಿಡಿಯಟ್ ಸೂಪರಿಡೆಂಟ್ ಮ್ಯಾಗೇರಿ ಹಾಗೂ ಸಹಾಯಕ ಸೂಪರಿಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ. ಚೀಫ್ ಸೂಪರಿಡೆಂಟ್ ಸ್ಥಳಕ್ಕೆ, ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯನ್ನು ನಿಯೋಜಿಸಲಾಗುವುದು. ಇನ್ನು ಮುಂದೆ ಪರಪ್ಪನ ಅಗ್ರಹಾರಕ್ಕೆ ಚೀಫ್ ಸೂಪರಿಡೆಂಟ್ ಹುದ್ದೆಯ ಅಧಿಕಾರವನ್ನು ಐಪಿಎಸ್ ಅಧಿಕಾರಿಗೆ ವಹಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿನ ಕಾರಾಗೃಹಗಳ ಈವರೆಗಿನ ಬೆಳವಣಿಗೆಗಳ ಬಗ್ಗೆ…
ನವದೆಹಲಿ: ಡಿಜಿಟಲ್ ಹಣಕಾಸು ಸೇರ್ಪಡೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಕ್ಕಳು ಮತ್ತು ಹದಿಹರೆಯದವರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ವಿಶಿಷ್ಟ ಡಿಜಿಟಲ್ ವ್ಯಾಲೆಟ್ ಅನ್ನು ಪ್ರಾರಂಭಿಸಲು Junio Payments Private Limited ಗೆ ಅನುಮೋದನೆ ನೀಡಿದೆ. ಈ ನವೀನ ಉಪಕ್ರಮವು ಅಪ್ರಾಪ್ತ ವಯಸ್ಕರು ಬ್ಯಾಂಕ್ ಖಾತೆಯನ್ನು ಹೊಂದದೆ UPI ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ, ಇದು ಭಾರತದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಯುವ ಪೀಳಿಗೆಗೆ ಹಣಕಾಸು ಸೇರ್ಪಡೆಯತ್ತ ಒಂದು ಹೆಜ್ಜೆ ಸಾಂಪ್ರದಾಯಿಕವಾಗಿ, UPI ವಹಿವಾಟುಗಳನ್ನು ಸಕ್ರಿಯ ಬ್ಯಾಂಕ್ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಸೀಮಿತಗೊಳಿಸಲಾಗಿದೆ. ಆದಾಗ್ಯೂ, Junio Payments ಗೆ RBI ಅನುಮೋದನೆಯು ಪ್ರಿಪೇಯ್ಡ್ ವ್ಯಾಲೆಟ್ ವ್ಯವಸ್ಥೆಯ ಮೂಲಕ UPI QR ಕೋಡ್‌ಗಳನ್ನು ಬಳಸಿಕೊಂಡು ನೇರವಾಗಿ ಡಿಜಿಟಲ್ ಪಾವತಿಗಳನ್ನು ಮಾಡಲು ಮಕ್ಕಳಿಗೆ ಅಧಿಕಾರ ನೀಡುವ ಮೂಲಕ ಈ ರೂಢಿಯನ್ನು ಬದಲಾಯಿಸುತ್ತದೆ. ಈ ಪರಿಕಲ್ಪನೆಯು ಡಿಜಿಟಲ್ ವಹಿವಾಟುಗಳನ್ನು ಸರಳಗೊಳಿಸುವುದಲ್ಲದೆ, ಯುವ ಬಳಕೆದಾರರಲ್ಲಿ ಆರಂಭಿಕ…
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ವೀಡಿಯೋ ವೈರಲ್ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ 3 ಎನ್ ಸಿ ಆರ್, 1 ಎಫ್ಐಆರ್ ದಾಖಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕಾದಂತ ಇಮಾಮ್ ಸಾಬ್ ಮ್ಯಾಗೇರಿ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಸಜಾ ಕೈದಿ ಪ್ಯಾಟ್ರಿಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ವೈರಲ್ ಆಗಿದ್ದಂತ ಡ್ಯಾನ್ಸ್ ವೀಡಿಯೋದಲ್ಲಿ ಜೈಲಲ್ಲಿ ತಟ್ಟೆ, ಡ್ರಮ್ ಬಾರಿಸಿ ಡ್ಯಾನ್ಸ್ ಅನ್ನು ಪ್ಯಾಟ್ರಿಕ್ ಟೀಮ್ ಮಾಡಿತ್ತು. ಈ ಹಿನ್ನಲೆಯಲ್ಲಿ ಪ್ಯಾಟ್ರಿಕ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. https://kannadanewsnow.com/kannada/royal-hospitality-for-prisoners-at-parappana-agrahara-jail-actor-dhanveers-mobile-seized/ https://kannadanewsnow.com/kannada/big-news-good-news-for-caste-census-surveyors-and-supervisors-honorary-allowance-released-by-the-state-government/
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ವೀಡಿಯೋ ವೈರಲ್ ಆದ ಬೆನ್ನಲ್ಲೇ, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಲ್ಲದೇ ನಟ ದರ್ಶನ್ ಆಪ್ತ, ನಟ ಧನ್ವೀರ್ ಅವರ ಮೊಬೈಲ್ ಜಪ್ತಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಲ್ಲಿ ಕೈದಿಗಳಿಗೆ ರಾಜಾತಿಥ್ಯದ ವಿಚಾರವಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ನಟ ಧನ್ವೀರ್ ವಿಚಾರಣೆ ನಡೆಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ ಅವರು ನಟ ಧನ್ವೀರ್ ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆಯ ವೇಳೆಯಲ್ಲಿ ನಟ ಧನ್ವೀರ್ ನನಗೆ ಪರಪ್ಪನ ಅಗ್ರಹಾರ ಜೈಲಿನ ಒಳಗಿನ ವೀಡಿಯೋಗಳನ್ನು ಆತ್ಮೀಯರೊಬ್ಬರು ಕಳುಹಿಸಿದ್ದರು. ನನಗೆ ಕಳುಹಿಸಿದ್ದ ವೀಡಿಯೋವನ್ನು ನಾನು ಯಾರಿಗೂ ಶೇರ್ ಮಾಡಿಲ್ಲ ಎಂಬುದಾಗಿ ತಿಳಿಸಿದ್ದಾರೆ. ವೀಡಿಯೋ ವೈರಲ್ ಹಿನ್ನಲೆಯಲ್ಲಿ ಕೊಲೆ ಆರೋಪಿ ದರ್ಶನ್ ಆಪ್ತ, ನಟ ಧನ್ವೀರ್ ಮೊಬೈಲ್ ಜಪ್ತಿ ಮಾಡಿದ್ದಾರೆ. ಆ ಬಳಿಕ ಧನ್ವೀರ್ ಮೊಬೈಲ್ ರಿಟ್ರೀವ್ ಮಾಡಲು ಎಫ್ ಎಸ್ ಎಲ್ ಗೆ ಪೊಲೀಸರು ರವಾನಿಸಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲೇ ನಟ ಧನ್ವೀರ್…
ಶಿವಮೊಗ್ಗ: ನಾಡಿದ್ದು ಸಾಗರ ತಾಲ್ಲೂಕಿನ ಜನತೆಯ ಸಮಸ್ಯೆ ನಿವಾರಿಸಲು ಶಾಸಕ ಗೋಪಾಲಕೃಷ್ಣ ಬೇಳೂರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅದೇ ನವೆಂಬರ್.12ರ ನಾಡಿದ್ದು ಬೆಳಗ್ಗೆ 11 ಗಂಟೆಯಿಂದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರು ಜನಸಂಪರ್ಕ ಸಭೆಯನ್ನು ನಡೆಸಲಿದ್ದಾರೆ. ಈ ಜನಸಂಪರ್ಕ ಸಭೆಯಲ್ಲಿ ಸಾಗರ ತಾಲ್ಲೂಕಿನ ಜನತೆಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವಂತ ಕೆಲಸವನ್ನು ಮಾಡಲಿದ್ದಾರೆ. ಈ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ: 12-11-2025ರ ನಾಡಿದ್ದು ಬೆಳಿಗ್ಗೆ 11 ಗಂಟೆಗೆ ಕಲ್ಮನೆ ಗ್ರಾಮ ಪಾಂಚಾಯಿತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎದುರು ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ತಿಳಿಸಿದೆ. ಕಂದಾಯ ಇಲಾಖೆಯಿಂದ ಪೌತಿ ಖಾತೆ ಆಂದೋಲನ ಮಾಡಿ, ಪೌತಿ ಖಾತೆ ಅರ್ಜಿ ಸ್ವೀಕೃತಿ ಹಾಗೂ ಕಡತಗಳ ತಯಾರಿಕೆ ಕಾರ್ಯ ಮಾಡಲಾಗುತ್ತದೆ. 94ಸಿ ಮನೆ ಹಕ್ಕುಪತ್ರ ಅರ್ಜಿಗಳ ಪರಿಶೀಲನೆ ಮಾಡಲಾಗುವುದು. ಸಾಗರ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಹಾಗೂ ಕಂದಾಯ ಇಲಾಖಾ…
ಬೆಂಗಳೂರು: ಕಾಡಿನಿಂದ ಹೊರಬಂದು ಜಾನುವಾರಗಳ ಮೇಲೆ ದಾಳಿ ಮಾಡುತ್ತಿತ್ತು ಎನ್ನಲಾದ 5 ವರ್ಷದ ಹೆಣ್ಣು ಹುಲಿ ಹಾಗೂ ಅದರ 3 ಮರಿಗಳನ್ನು ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿ ಬಳಿ ಮೂರು ಮರಿಗಳ ರಕ್ಷಣೆಯೊಂದಿಗೆ ಸೆರೆ ಹಿಡಿಯಲಾಗಿರುವ ಈ ಹೆಣ್ಣು ಹುಲಿ ವಸತಿ ಪ್ರದೇಶಗಳಿಗೆ ಬಂದು ಹಲವು ಜಾನುವಾರಗಳ ಮೇಲೆ ದಾಳಿ ಮಾಡಿತ್ತು ಎಂಬುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಸಚಿವರು ವಿವರಿಸಿದರು. ಪ್ರಸ್ತುತ ಸೆರೆ ಹಿಡಿಲಾದ ಹೆಣ್ಣು ಹುಲಿ ಮತ್ತು ರಕ್ಷಿಸಲಾದ ಮೂರು ಮರಿಗಳು ಪಶುವೈದ್ಯರ ನಿಗಾದಲ್ಲಿವೆ. ಕಾಡಿನ ಹೊರಗೆ ಸಂಚರಿಸುತ್ತಿರುವ ಹುಲಿಗಳ ಕಾರ್ಯಾಚರಣೆ ಮುಂದುವರಿದಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಇತ್ತೀಚೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವಸತಿ ಪ್ರದೇಶಗಳಲ್ಲಿ ಹುಲಿಗಳು ಕಾಣಿಸಿಕೊಂಡು ಜನ, ಜಾನುವಾರುಗಳ ಮೇಲೆ ಪದೇಪದೇ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಂತಹ…
ಬೆಂಗಳೂರು: ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರ ಆಯ್ಕೆ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಜೆಡಿಎಸ್ ಕೋರ್ ಕಮಿಟಿ ನೂತನ ಅಧ್ಯಕ್ಷರಾಗಿ ಕೃಷ್ಣಾರೆಡ್ಡಿ ನೇಮಕ ಮಾಡಲಾಗಿದೆ. ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ ದೇವೇಗೌಡಗೆ ಕೋಕ್ ನೀಡಲಾಗಿದೆ. ಈ ಬಗ್ಗೆ ಜೆಡಿಎಸ್ ಪಕ್ಷದಿಂದ ಮಾಹಿತಿ ನೀಡಲಾಗಿದ್ದು, ಜೆಡಿಎಸ್ ಕೋರ್ ಕಮಿಟಿ ನೂತನ ಅಧ್ಯಕ್ಷರಾಗಿ ಕೃಷ್ಣಾರೆಡ್ಡಿ ನೇಮಕ ಮಾಡಲಾಗಿದೆ. ಡೆಪ್ಯೂಟಿ ಸ್ವೀಕರ್, ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಕೃಷ್ಣಾರೆಡ್ಡಿ ಆಗಿದ್ದಾರೆ ಎಂದಿದೆ. https://kannadanewsnow.com/kannada/committee-formed-under-adgp-leadership-to-rein-in-prisoners-in-parappana-agrahara-jail/ https://kannadanewsnow.com/kannada/attention-people-of-the-state-today-is-the-last-chance-to-participate-in-the-caste-census-survey/
ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿ, ಮುಕ್ತಾಯಗೊಳಿಸಲಾಗಿತ್ತು. ಆ ಬಳಿಕ ಆನ್ ಲೈನ್ ಮೂಲಕ ಭಾಗವಹಿಸದೇ ಇರುವವರಿಗೆ ಅವಕಾಶ ನೀಡಲಾಗಿತ್ತು. ಆ ಅವಕಾಶವು ಇಂದೇ ಕೊನೆಯಾಗಲಿದೆ. ಸೆಪ್ಟೆಂಬರ್ 22 ರಿಂದ ಆರಂಭಿಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಇಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ ಆದಷ್ಟು ಬೇಗ ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದವರು ಆನ್ ಲೈನ್ ಮೂಲಕ ದಾಖಲಿಸುವಂತೆ ಹಿಂದುಳಿದ ವರ್ಗಗಳ ಆಯೋಗವು ಮನವಿ ಮಾಡಿದೆ. ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದಲ್ಲಿ, ಆನ್‌ಲೈನ್ ಮೂಲಕವೂ ನಿಮ್ಮ ವಿವರಗಳನ್ನು ದಾಖಲಿಸಲು ಇಂದೇ ಕೊನೆಯ ದಿನವಾಗಿದೆ. ಈ ಕೂಡಲೇ https://kscbcselfdeclaration.karnataka.gov.in ಲಿಂಕ್‌ಗೆ ಭೇಟಿ ನೀಡಿ, ಕೇಳಿರುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಮೂಲಕ ಸಮೀಕ್ಷೆ ಯಶಸ್ವಿಯಾಗುವಲ್ಲಿ ನಮ್ಮೊಂದಿಗೆ ಸಹಕರಿಸಿ. https://twitter.com/KarnatakaVarthe/status/1987823615954632830 https://kannadanewsnow.com/kannada/man-shoots-himself-dead-in-broad-dyalight-at-crowded-jantar-mantar/ https://kannadanewsnow.com/kannada/committee-formed-under-adgp-leadership-to-rein-in-prisoners-in-parappana-agrahara-jail/
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹತದಲ್ಲಿ ಕೈದಿಗಳಿಗೆ ರಾಜಾತಿಥ್ಯದ ವೀಡಿಯೋ ವೈರಲ್ ಆಗಿದ್ದವು. ಈ ಬೆನ್ನಲ್ಲೇ ಕೈದಿಗಳಿಗೆ ಲಗಾಮು ಹಾಕಲು ಎಡಿಜಿಪಿ ನೇತೃತ್ವದಲ್ಲಿ ಸಮಿತಿ ರಚನೆಯನ್ನು ಮಾಡಿರುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಇಂದು ಈ ಸಂಬಂಧ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ನಿಯಮ ಮೀರಿ ವಿಶೇಷ ಸವಲತ್ತು ನೀಡಿರುವ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಈ ರೀತಿಯ ಪ್ರಕರಣ ಮರುಕಳಿಸದೆ ಇರಲು ಎಡಿಜಿಪಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ ಎಂದು ಹೇಳಿದರು. https://twitter.com/KarnatakaVarthe/status/1987830707625070717 https://kannadanewsnow.com/kannada/man-shoots-himself-dead-in-broad-dyalight-at-crowded-jantar-mantar/ https://kannadanewsnow.com/kannada/a-9th-grade-girl-in-bengaluru-committed-suicide-after-hearing-heartbreaking-news-of-her-friends-death/













