Author: kannadanewsnow09

ಚಿತ್ರದುರ್ಗ: ಮಾಜಿ ಸಚಿವ ದಿವಂಗತ ಕೆ.ಹೆಚ್ ರಂಗನಾಥ್ ಅವರ ಮೊಮ್ಮಗ ಹರ್ಷವರ್ಧನ್(33) ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದಿಂದ ಆಯ್ಕೆಯಾಗಿ, ಸಚಿವರಾಗಿದ್ದಂತ ದಿ.ಕೆ.ಹೆಚ್ ರಂಗನಾಥ್ ಅವರ ಮೊಮ್ಮಗ ಹರ್ಷವರ್ಧನ್ ಶುಕ್ರವಾರ ನಿಧನರಾಗಿದ್ದಾರೆ. ಅವರ ತಂದೆ ಕೆಪಿಸಿಸಿ ಸದಸ್ಯ ವಿಜಯ್ ಕುಮಾರ್ ಆಗಿದ್ದಾರೆ. ಇಂದು ಹರ್ಷವರ್ಧನ್ ಅವರ ಅಂತ್ಯಕ್ರಿಯೆಯನ್ನು ಹಿರಿಯೂರು ತಾಲೂಕಿನ ಹೊಸಯಳನಾಡು ಸಮೀಪದ ಕಸವನಹಳ್ಳಿ ಗ್ರಾಮದಲ್ಲಿರುವ ಕೆ.ಹೆಚ್ ರಂಗನಾಥ್ ಅವರ ಸಮಾಧಿಯ ಬಳಿಯಲ್ಲಿ ನೆರವೇರಿಸಲಾಗುತ್ತದೆ ಎಂಬುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಇನ್ನೂ ಮಾಜಿ ಸಚಿವ ಕೆ.ಹೆಚ್ ರಂಗನಾಥ್ ಅವರ ಮೊಮ್ಮಗ ಹರ್ಷವರ್ಧನ್ ನಿಧಕ್ಕೆ ಮಾಜಿ ಸಚಿವ ಹೆಚ್.ಆಂಜನೇಯ ತೀವ್ರ ಸಂತಾಪ ಸೂಚಿಸಿದ್ದಾರೆ.

Read More

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿಹಾಸಿಕ ಹಂಪಿ ಉತ್ಸವವನ್ನು ವೈಭವದ ಕಲಾತ್ಮಕ ವೇದಿಕೆಯಲ್ಲಿ ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿದರು. ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್, ಕ್ರೀಡಾ ಮತ್ತು ಯುವಜನ ಸಭಲೀಕರಣ ಸಚಿವ ನಾಗೇಂದ್ರ, ಕೆಕೆಆರ್ ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್, ಮಾಜಿ ಸಂಸದ ಉಗ್ರಪ್ಪ, ಶಾಸಕರುಗಳಾದ ಈ.ತುಕಾರಾಮ್, ಕಂಪ್ಲಿ ಗಣೇಶ್, ಲತಾ ಎಂಪಿ ಪ್ರಕಾಶ್, ರಾಘವೇಂದ್ರ ಹಿಟ್ನಾಳ್ , ನಾರಾ ಭರತ್ ರೆಡ್ಡಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ಕಚೇರಿ ಉದ್ಘಾಟನೆ ಹೊಸಪೇಟೆ : ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶುಕ್ರವಾರ ಹೊಸಪೇಟೆ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ಕಚೇರಿ ಉದ್ಘಾಟನೆ ಮಾಡಿದರು. ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿ…

Read More

ಬೆಂಗಳೂರು: ಫೆಬ್ರವರಿ.7ರಂದು ಕೇಂದ್ರ ಮದ್ಯಂತರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಆಗಿರೋ ಅನ್ಯಾಯ ಪ್ರತಿಭಟಿಸಿ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ನವದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇದೇ ದಿನ ಬೆಂಗಳೂರಿನ ವಿಧಾನಸೌಧದಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಇಂದಿನ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಫೆಬ್ರವರಿ.7ರಂದು ನವದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸೋ ದಿನವೇ, ಬೆಂಗಳೂರಿನ ವಿಧಾನಸೌಧದಲ್ಲಿ ಬಿಜೆಪಿ ಶಾಸಕರಿಗೆ ಪ್ರತಿಭಟನೆ ನಡೆಸೋ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿ: ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಎಸಗಿರುವ ಅನ್ಯಾಯವನ್ನು ವಿರೋಧಿಸಿ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಹಂಪಿ ವಿಶ್ವವಿದ್ಯಾಲಯ ಆವರಣದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯಕ್ಕೆ ಕೇಂದ್ರ ಬಜೆಟ್ ನಿಂದ ಅನ್ಯಾಯವಾಗಿರುವ ಕಾರಣಕ್ಕೆ ನವದೆಹಲಿಯಲ್ಲಿ ಕೇಂದ್ರ…

Read More

ಬೆಂಗಳೂರು: ಇಂದು ಅರಣ್ಯ ಕೈಗಾರಿಕಾ ನಿಗಮದ ನೂತನ ಅಧ್ಯಕ್ಷರಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಿಗಮದ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಶಂಕಿನಮಠ, ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸೂಡಾ ಮಾಜಿ ಅಧ್ಯಕ್ಷ ರಮೇಶ್, ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಶ್ರೀದರ್, ಈಡಿಗ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಕಾಂಗ್ರೆಸ್ ಹಿರಿಯ ಮುಖಂಡ ಶ್ರೀಕಾಂತ್ ಸೇರಿದಂತೆ‌ ಅನೇಕ ಕಾಂಗ್ರೆಸ್ ಮುಖಂಡರು ಆಗಮಿಸಿ ಶುಭ ಕೋರಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಅರಣ್ಯ ಕೈಗಾರಿಕಾ ನಿಗಮದವತಿಯಿಂದ ಇನ್ನು ಮುಂದೆ ನೂತನವಾಗಿ ಲಿಡ್ಕರ್ ಮಾದರಿಯಲ್ಲಿ ಆಸನ ಪೀಠಪೋಕರಣಗಳ ಮಳಿಗೆಗಳನ್ನು ಆರಂಭಿಸಲಾಗುವುದು ಇದರಿಂದ ನಿಗಮಕ್ಕೆ ಹಾಗೂ ಸರ್ಕಾರಕ್ಕೆ ಹೆಚ್ಚಿನ ಲಾಭ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ ಎಂದರು. ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಚೇರಿಗಳಿಗೆ ಅರಣ್ಯ ಕೈಗಾರಿಕಾ ನಿಗಮದಿಂದಲೇ ತಯಾರಿಸಿದ ಕುರ್ಚಿ, ಟೇಬಲ್, ಬೆಂಚುಗಳನ್ನು ಇನ್ನು ಮುಂದೆ ಸರಬರಾಜು ಮಾಡಲು ಕ್ರಮ…

Read More

ಬೆಂಗಳೂರು: ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಅರಣ್ಯ ಕೈಗಾರಿಕಾ ನಿಗಮದಿಂದಲೇ ಪೀಠೋಪಕರಣಗಳನ್ನು ಪೂರೈಕೆ ಮಾಡಲಾಗುತ್ತದೆ ಎಂಬುದಾಗಿ ಅರಣ್ಯ ಕೈಗಾರಿಕಾ ನಿಗಮದ ನೂತನ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ. ಇಂದು ಅರಣ್ಯ ಕೈಗಾರಿಕಾ ನಿಗಮದ ನೂತನ ಅಧ್ಯಕ್ಷರಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಿಗಮದ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಶಂಕಿನಮಠ, ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸೂಡಾ ಮಾಜಿ ಅಧ್ಯಕ್ಷ ರಮೇಶ್, ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಶ್ರೀದರ್, ಈಡಿಗ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಕಾಂಗ್ರೆಸ್ ಹಿರಿಯ ಮುಖಂಡ ಶ್ರೀಕಾಂತ್ ಸೇರಿದಂತೆ‌ ಅನೇಕ ಕಾಂಗ್ರೆಸ್ ಮುಖಂಡರು ಆಗಮಿಸಿ ಶುಭ ಕೋರಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಅರಣ್ಯ ಕೈಗಾರಿಕಾ ನಿಗಮದವತಿಯಿಂದ ಇನ್ನು ಮುಂದೆ ನೂತನವಾಗಿ ಲಿಡ್ಕರ್ ಮಾದರಿಯಲ್ಲಿ ಆಸನ ಪೀಠಪೋಕರಣಗಳ ಮಳಿಗೆಗಳನ್ನು ಆರಂಭಿಸಲಾಗುವುದು ಇದರಿಂದ ನಿಗಮಕ್ಕೆ ಹಾಗೂ ಸರ್ಕಾರಕ್ಕೆ ಹೆಚ್ಚಿನ ಲಾಭ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ ಎಂದು…

Read More

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40% ಕಮೀಷನ್ ದಂಧೆ ನಡೆಯುತ್ತಿದೆ ಎಂಬುದಾಗಿ ಕಿಡಿಕಾರಿದ್ವಿ. ಈಗ ನಮ್ಮದೇ ಸರ್ಕಾರದಲ್ಲಿ ಅದಕ್ಕಿಂತ ಹೆಚ್ಚು ಕಮೀಷನ್ ದಂಧೆ ನಡೆಯುತ್ತಿದೆ. ಇದನ್ನ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಎದುರೇ ಹೇಳಿದ್ದೇನೆ ಎಂಬುದಾಗಿ ಸ್ವ ಪಕ್ಷದ ವಿರುದ್ಧವೇ ಕಾಂಗ್ರೆಸ್ ಶಾಸಕ ಶಿವರಾಂ ಗುಡುಗಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಇದನ್ನು ಅವತ್ತು ನಾನು ಮುಖ್ಯಮಂತ್ರಿ ಎದುರಿಗೆ ನೇರವಾಗಿ ಹೇಳಿದೆ. ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬರ್ತಾ ಇದೆ. ಸರಿಯಾಗಿ ಬುದ್ಧಿ ಹೇಳಿ ಅಂತ ನೇರವಾಗೇ ಹೇಳಿದೆ. ನಾನೊಬ್ಬನೇ ಅಲ್ಲ ಎಲ್ಲರೂ ಹೇಳಿದ್ವಿ ಎಂದರು. ಪಕ್ಷ ಉಳಿಯಬೇಕಾದ್ರೇ ಇವುಗಳನ್ನೆಲ್ಲ ಕಾಪಾಡಿಕೊಳ್ಳಬೇಕು. ನಾನು ನೇರವಾಗಿ ಹೇಳಿದ್ದಕ್ಕೆ ನಿಷ್ಟೂರವಾದಿ. ಇಷ್ಟು ಆಕ್ರೋಶ ಆಗೋದಕ್ಕೆ ಇದೇ ಕಾರಣ. ನಾನು ಶೇ.40ರಷ್ಟು ಬಿಜೆಪಿ ಅವಧಿಯಲ್ಲಿ ಕಮೀಷನ್, ಭ್ರಷ್ಟಾಚಾರ ದಂಧೆ ನಡೆಯುತ್ತಿತ್ತು. ಈಗ ಅದಕ್ಕಿಂತ ಹೆಚ್ಚು ಎಂದು ಹೇಳುತ್ತಿದ್ದೇನೆ ಎಂಬುದಾಗಿ ಆಕ್ರೋಶವನ್ನು ಹೊರ ಹಾಕಿದರು. ಎಕ್ಸ್ ಮಾಡಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಿಡಿ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ…

Read More

ಒಂದು ವೇಳೆ ನೀವು ಯಾರಿಗಾದರೂ ಹಣವನ್ನು ನೀಡಿದ್ದರೆ ಹಾಗೂ ಆ ಹಣವನ್ನು ಕೇಳಲು ಹೋದಾಗ ಇಂದು ಹಣ ಕೊಡಲು ಸಾಧ್ಯವಿಲ್ಲ ಮತ್ತೊಂದು ದಿನ ಕೊಡುತ್ತೇವೆ ಎಂದು ಹೇಳುತ್ತಿದ್ದರೆ ನಾವು ಹೇಳುವ ಈ ಉಪಾಯವನ್ನು ಮಾಡಿದರೆ ಖಂಡಿತವಾಗಿ ನಿಮ್ಮ ಹಣ ಮರಳಿ ಬರುತ್ತದೆ. ಇದರ ಜೊತೆಗೆ ಮನೆಯಲ್ಲಿ ಯಾರಿಗಾದರೂ ದೃಷ್ಟಿ ದೋಷ ಇದ್ದರೂ ಸಹ ನಿವಾರಣೆಯಾಗುತ್ತದೆ. ಈ ಉಪಾಯವನ್ನು ಮನೆಯ ಹೆಣ್ಣುಮಕ್ಕಳು ಆಗಲಿ ಅಥವಾ ಗಂಡುಮಕ್ಕಳು ಆಗಲಿ ಯಾರಾದರೂ ಮಾಡಬಹುದು. ಈ ಉಪಾಯವನ್ನು ಬೆಳಿಗ್ಗೆಯಿಂದ ರಾತ್ರಿ ತನಕ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು, ಈ ಉಪಾಯ ಮಾಡುವುದಕ್ಕೆ ನಿಮಗೆ ಬೇಕಾಗಿರುವುದು ಒಂದು ಬಿಳಿಹಾಳೆ ಹಾಗೂ ಕೆಂಪು ಬಣ್ಣದ ಪೆನ್ನು. ಈ ಉಪಾಯವನ್ನು ಸ್ನಾನ ಮಾಡಿದ ನಂತರವೇ ಮಾಡಬೇಕು ಹಾಗೂ ಪರಿಪೂರ್ಣವಾದ ನಂಬಿಕೆ ಇದ್ದರೆ ಮಾತ್ರ ಮಾಡಬೇಕು. ಬಿಳಿ ಹಾಳೆಯ ಮೇಲೆ ಮೊದಲಿಗೆ ಕೆಂಪುಬಣ್ಣದ ಪೆನ್ನಿನಿಂದ 1- 2- 27- 9 ಸಂಖ್ಯೆಯನ್ನು ಬರೆಯಬೇಕು. 1-ಸೂರ್ಯನಿಗೆ ಸಂಬಂಧಪಟ್ಟಿದ್ದು 2-ಗ್ರಹಗಳಿಗೆ ಸಂಬಂಧಪಟ್ಟಿದ್ದು 27-ನಕ್ಷತ್ರಗಳಿಗೆ ಸಂಬಂಧಪಟ್ಟಿದ್ದು 9-ಸಂಖ್ಯೆಗೆ…

Read More

ಹಂಪಿ : ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಎಸಗಿರುವ ಅನ್ಯಾಯವನ್ನು ವಿರೋಧಿಸಿ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಹಂಪಿ ವಿಶ್ವವಿದ್ಯಾಲಯ ಆವರಣದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ರಾಜ್ಯಕ್ಕೆ ಕೇಂದ್ರ ಬಜೆಟ್ ನಿಂದ ಅನ್ಯಾಯವಾಗಿರುವ ಕಾರಣಕ್ಕೆ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,. ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನನ್ನೂ ನೀಡದೇ ರಾಜ್ಯಕ್ಕೆ ಅನ್ಯಾಯವನ್ನು ಎಸೆಗಲಾಗಿದೆ. ರಾಜ್ಯಕ್ಕೆ ಬರಗಾಲದ ಪರಿಹಾರವಾಗಿ ಎನ್ ಡಿಆರ್ ಎಫ್ ನಿಂದ 4663 ಕೋಟಿ ರೂ. ಮೊತ್ತವನ್ನು ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಿ ನಾಲ್ಕು ತಿಂಗಳೂ ಕಳೆದಿದ್ದರೂ , ಕೇಂದ್ರದಿಂದ ಯಾವ ಸ್ಪಂದನೆಯೂ ದೊರೆತಿಲ್ಲ. ಈ ಎಲ್ಲ ಕಾರಣಗಳಿಗಾಗಿ ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ತಾನೂ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ದೇಶ ಅಖಂಡವಾಗಿರಬೇಕು ಸಂಸದ ಡಿ.ಕೆ.ಸುರೇಶ್ ಅವರ ದೇಶವನ್ನು ಇಬ್ಭಾಗವಾಗಿಸುವ ಹೇಳಿಕೆ…

Read More

ಬೆಂಗಳೂರು: ಸನಾತನ ಧರ್ಮ ಹೇಳಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಬೆಂಗಳೂರು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಬೆಂಗಳೂರಿನ ಸ್ಥಳೀಯ ಪರಮೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಚಿವರಿಗೆ ಸಮನ್ಸ್ ಜಾರಿ ಮಾಡಿದೆ. ಮಾರ್ಚ್ 4 ರಂದು ನಿಗದಿಯಾಗಿರುವ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯವು ಅವರಿಗೆ ಸಮನ್ಸ್ ಜಾರಿ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಕಳೆದ ವರ್ಷ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸುವ ಮೂಲಕ ವಿವಾದ ಸೃಷ್ಟಿಸಿದ್ದರು. ಸೆಪ್ಟೆಂಬರ್ 2023 ರಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದರು. ತಮ್ಮ ಹೇಳಿಕೆಯಿಂದ ಹಿನ್ನಡೆಯನ್ನು ಎದುರಿಸುತ್ತಿದ್ದರೂ, ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಶಾಶ್ವತವಾಗಿ ವಿರೋಧಿಸುವುದಾಗಿ ಹೇಳಿದರು. https://kannadanewsnow.com/kannada/breaking-sensex-nifty-hit-record-highs-investors-gain-rs-3-32-lakh-crore/ https://kannadanewsnow.com/kannada/fir-against-ed-officials-hc-stays-police-probe/

Read More

ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು, ನಮಗೆ ಬಂದ ಮಾಹಿತಿ ಪ್ರಕಾರ ಡಿಕೆಶಿ ಹೈಕಮಾಂಡ್ ಮುಂದೆ ಶಾಸಕರ ಪರೇಡ್ ಮಾಡಲು ಹೋಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್‍ಕುಮಾರ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಮ್ಮ ಪರ ಎಷ್ಟು ಶಾಸಕರ ಬಲ ಇದೆ ಎಂದು ಹೈಕಮಾಂಡ್ ಶಕ್ತಿಪ್ರದರ್ಶನ ಮಾಡಲು ಡಿಕೆಶಿ ಮುಂದಾಗಿದ್ದಾರೆ ಎಂದೂ ಅವರು ನುಡಿದರು. ದೆಹಲಿಯಲ್ಲಿ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ ಬಗ್ಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಘೋಷಣೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು. ಕೇಂದ್ರದಿಂದ ಅನುದಾನ ಬಂದಿಲ್ಲವೆಂದು ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ಪ್ರತಿಭಟನೆ ಮಾಡ್ತೀವಿ ಅಂದಿರೋದು ಹಾಸ್ಯಾಸ್ಪದ ವಿಚಾರ. ಡಿಕೆ ಸುರೇಶ್ ಹೇಳಿಕೆಯಿಂದ ಆಗುವ ಹಾನಿ ತಪ್ಪಿಸಲು ಈ ಹೇಳಿಕೆ ಮೂಲಕ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು. ಅನುದಾನ ಬಂದಿಲ್ಲ ಅಂತ ಹತ್ತಾರು ಸಲ ಸುಳ್ಳು ಹೇಳಿ ಕಾಂಗ್ರೆಸ್…

Read More