Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕೆಎಸ್ಆರ್ ಟಿಸಿಯಿಂದ ವಿವಿಧ ಕಾರಣಗಳಿಂದ ಮೃತಪಟ್ಟಂತ 16 ನೌಕರರ ಕುಟುಂಬದಲವರಿಗೆ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರವಾಗಿ ತಲಾ 10 ಲಕ್ಷವನ್ನು ನೀಡಲಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ತನ್ನ ನೌಕರರ ಅವಲಂಭಿತರಿಗೆ ಅಪಘಾತ ಪರಿಹಾರ ವಿಮೆ ರೂ.1 ಕೋಟಿ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ (ಹೃದಯಾಘಾತ/ ಕ್ಯಾನ್ಸರ್ , ಸ್ಟ್ರೋಕ್) 16 ನೌಕರರ ಕುಟುಂಬದವರಿಗೆ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಹಣ ರೂ.10 ಲಕ್ಷ ನೀಡಲಾಗಿದೆ ಎಂದಿದೆ. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸಿಬ್ಬಂದಿಗಳ ಅವಲಂಬಿತರನ್ನು ಭೇಟಿ ಮಾಡಿ, ನಿಗಮವು ಕಳೆದ ಎರಡು ತಿಂಗಳ ಹಿಂದಷ್ಟೇ ಪರಿಹಾರ ಮೊತ್ತವನ್ನು ರೂ.3 ಲಕ್ಷದಿಂದ ರೂ.10 ಲಕ್ಷಗಳಿಗೆ ಏರಿಕೆ ಮಾಡಿದ್ದು, ಇದರಿಂದ ಇಂದು 16 ಕುಟುಂಬಗಳಿಗೆ ಆರ್ಥಿಕವಾಗಿ ಸ್ವಲ್ಪ ಹೆಚ್ಚು ಹಣ ದೊರೆಯುವಂತಾಗಿದ್ದು, ಜೀವಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ, ಆದರೂ ಪರಿಹಾರ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಸುಸೂತ್ರ ಜೀವನ…
ನವದೆಹಲಿ: ರಾಜ್ಯಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಕ್ರೀಯ ರಾಜಕಾರಣದಿಂದ ದೂರವೇ ಉಳಿದಿದ್ದಂತ ಸೋನಿಯಾ ಗಾಂಧಿ, ಇದೀಗ ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ಕಣಕ್ಕೆ ಇಳಿಯಲಿದ್ದಾರೆ. ಈ ಕುರಿತಂತೆ ಎಐಸಿಸಿ ಜನರಲ್ ಸೆಕ್ರೇಟರಿ ಕೆ.ಸಿ ವೇಣುಗೋಪಾಲ್ ಅವರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮುಂಬರುವಂತ ರಾಜ್ಯಸಭಾ ಚುನಾವಣೆ 2024ಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿರೋದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಪ್ರಕಟಿಸಿರುವಂತ ಪಟ್ಟಿಯಲ್ಲಿ ರಾಜಸ್ಥಾನದಿಂದ ಸೋನಿಯಾ ಗಾಂಧಿ, ಬಿಹಾರದಿಂದ ಡಾ.ಅಖಿಲೇಶ್ ಪ್ರಸಾದ್ ಸಿಂಗ್, ಹಿಮಾಚಲ ಪ್ರದೇಶದಿಂದ ಅಭಿಷೇಕ್ ಮನು ಸಿಂಘ್ವಿ ಹಾಗೂ ಮಹಾರಾಷ್ಟ್ರದಿಂದ ಚಂದ್ರಕಾಂತ್ ಹಂದೊರೆ ಕಣಕ್ಕೆ ಇಳಿಯೋದಾಗಿ ತಿಳಿಸಿದೆ. https://twitter.com/INCIndia/status/1757649263822352547
ನವದೆಹಲಿ: ರಾಜ್ಯಸಭಾ ಚುನಾವಣೆಗೆ ( Rajya Sabha Election ) ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ( BJP ) ಸೇರಿದ್ದಂತ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚೌವ್ಹಾಣ್ ಅವರಿಗೂ ರಾಜ್ಯಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಈ ಸಂಬಂಧ ಬಿಜೆಪಿಯಿಂದ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚೌವ್ಹಾಣ್ ಅವರಿಗೆ ಟಿಕೆಟ್ ನೀಡಲಾಗಿದೆ. ಮಧ್ಯಪ್ರದೇಶದಿಂದ ಎಲ್ ಮುರುಗನ್ ಕಣಕ್ಕೆ ಇಳಿಯಲಿದ್ದಾರೆ. ಒಡಿಶಾದಿಂದ ಅಶ್ವಿನಿ ವೈಷ್ಣವ್ ಕಣಕ್ಕೆ ಇಳಿದ್ರೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಹೀಗಿದೆ ಬಿಜೆಪಿ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಮಹಾರಾಷ್ಟ್ರ- ಅಶೋಕ್ ಚೌವ್ಹಾಣ್ ಗುಜರಾತ್ – ಜೆಪಿ ನಡ್ಡಾ ಒಡಿಶಾ – ಅಶ್ವಿನಿ ವೈಷ್ಣವ್ ಮಧ್ಯಪ್ರದೇಶ – ಎಲ್ ಮುರುಗನ್ https://twitter.com/ANI/status/1757688142121877623
ಬೆಂಗಳೂರು: ಫೆಬ್ರವರಿ.17ರಂದು ರಾಜ್ಯಾಧ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವಣಗೊಳಿಸಲಾಗುತ್ತದೆ. ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಘೋಷವಾಕ್ಯ ಇಡೀ ರಾಜ್ಯದ ತುಂಬೆಲ್ಲ ಮೊಳಗಲಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು. ಈ ಬಳಿಕ ಮಾತನಾಡಿದ ಅವರು, ಫೆ. 17 ರಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲ್ಲೂಕು ಮಟ್ಟದಲ್ಲಿ ಶಾಸಕರು ಹಾಗೂ ಎಲ್ಲಾ ನಗರ ಹಾಗೂ ಗ್ರಾಮೀಣ ಸಂಸ್ಥೆಗಳಲ್ಲಿ ಆಯಾ ಅಧ್ಯಕ್ಷರಿಂದ ನೆರವೇರಿಸಲು ಸೂಚಿಸಲಾಗಿದೆ. ಎಲ್ಲ ಕಚೇರಿಗಳಲ್ಲಿಯೂ ಬಸವಣ್ಣನವರ ಭಾವಚಿತ್ರವಿರಬೇಕು, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕು ಎಂದರು. ನುಡಿದಂತೆ ನಡೆದವರ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ವರ್ಗರಹಿತ, ಜಾತಿರಹಿತ, ಮೌಢ್ಯಗಳಿಲ್ಲದ ವೈಚಾರಿಕ ಸಮಾಜ ಸ್ಥಾಪನೆಯ ಆಶಯದಿಂದ ವಚನಗಳನ್ನು ರಚಿಸಿದರು. ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಚನಗಳನ್ನು…
ನವದೆಹಲಿ: ಶಿಕ್ಷಕರ ನೇಮಕಾತಿಗೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ಹೊಸ ನಿಯಮಗಳನ್ನು ಪ್ರಸ್ತಾಪಿಸಿದೆ. ಈ ಮೂಲಕ 9 ರಿಂದ 12ನೇ ತರಗತಿ ಶಿಕ್ಷಕರಾಗೋದಕ್ಕೆ ಬಯಸೋ ಅಭ್ಯರ್ಥಿಗಳಿಗೆ ಟಿಇಟಿ ಪರೀಕ್ಷೆಯನ್ನು ಪಾಸ್ ಕಡ್ಡಾಯಗೊಳಿಸೋದಕ್ಕೆ ಮುಂದಾಗಿದೆ. ಎನ್ಇಪಿ ಪ್ರಸ್ತಾವನೆಯ ಪ್ರಕಾರ, ನಿನ್ನೆ ನಡೆದ ಟಿಇಟಿ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಚರ್ಚಿಸಿದಂತೆ ಮಾಧ್ಯಮಿಕ ಮಟ್ಟದಲ್ಲಿ (9 ರಿಂದ 12 ನೇ ತರಗತಿ) ಟಿಇಟಿಯನ್ನು ಕಡ್ಡಾಯಗೊಳಿಸಲು ಅವರು ಶಿಫಾರಸು ಮಾಡಿದ್ದಾರೆ. ಶಾಲೆಗಳಲ್ಲಿ ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ ಒಂದು ಪ್ರಮುಖ ಪರೀಕ್ಷೆಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್ಇಪಿ) ಬೆಳಕಿನಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಚರ್ಚಿಸಲು ಮತ್ತು ಕೆಲಸ ಮಾಡಲು ಕೌನ್ಸಿಲ್ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಸಹಭಾಗಿತ್ವದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕುರಿತು 1 ದಿನದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು. ಅಧಿವೇಶನದಲ್ಲಿ, ಎನ್ಸಿಟಿಇ ಸದಸ್ಯ ಕಾರ್ಯದರ್ಶಿ ಕೇಸಾಂಗ್ ವೈ. ಶೆರ್ಪಾ ಐಆರ್ಎಸ್, ಎನ್ಇಪಿ 2020 ವಿವಿಧ ಹಂತಗಳಲ್ಲಿ ಟಿಇಟಿಯನ್ನು ಶಿಫಾರಸು…
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ, ಸದ್ದಿಲ್ಲದಂತೆ ಮದ್ಯದ ದರ ಹೆಚ್ಚಳ ಮಾಡಲಾಗಿತ್ತು. ಈಗ 200 ಯೂನಿಟ್ ಉಚಿತ ವಿದ್ಯುತ್ ಕೊಟ್ಟು, ಬೆಂಗಳೂರಲ್ಲಿ ನೀರಿನ ಬಿಲ್ ಹೆಚ್ಚಳಕ್ಕೆ ಚಿಂತನೆ ನಡೆಸಿರೋ ಸುಳಿವನ್ನು ಸ್ವತಹ ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿದ್ದಾರೆ. ಈ ಕುರಿತಂತೆ ವಿಧಾನಸಭೆಯಲ್ಲಿ ಮಂಗಳವಾರದಂದು ಸದಸ್ಯ ಸಿ.ಕೆ ರಾಮಮೂರ್ತಿ ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಬೆಂಗಳೂರಿನಲ್ಲಿ ಜಲಮಂಡಳಿಯ ನೀರಿನ ದರ ಹೆಚ್ಚಳವಾಗದ ಬಗ್ಗೆ ಪ್ರಸ್ತಾಪ ಮಾಡಿದರು. ಕಳೆದ 11 ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡಲು ಆಗಿಲ್ಲ. ಆದ್ರೇ ರಾಜ್ಯದಲ್ಲಿ ಪ್ರತಿ ವರ್ಷ ವಿದ್ಯುತ್ ದರ ಹೆಚ್ಚಾಗುತ್ತಲೇ ಇದೆ ಎಂದರು. ರಾಜಧಾನಿ ಬೆಂಗಳೂರಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಕುಡಿಯುವ ನೀರಿಗೂ ತೀವ್ರ ಬೇಡಿಕೆ ಉಂಟಾಗುತ್ತಿದೆ. ವಿವಿಧ ಕಾರಣಕ್ಕಾಗಿ ನೀರಿನ ದರವನ್ನು ಹೆಚ್ಚಳ ಮಾಡಲಾಗಿಲ್ಲ. ಬೆಂಗಳೂರಲ್ಲಿ ಶೇ.20ರಷ್ಟು ನೀರಿನ ಅಗತ್ಯವನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ನೀರಿನ…
ಬೆಂಗಳೂರು: 2023-24ನೇ ಸಾಲಿನಲ್ಲಿ ಒಟ್ಟು 241 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ ₹50,025 ಕೋಟಿ ಬಂಡವಾಳ ಹರಿದುಬಂದಿದೆ. ಇವುಗಳ ಮೂಲಕ 58,051 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಮಂಗಳವಾರ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಏಕಗವಾಕ್ಷಿ ಅನುಮೋದನಾ ಸಮಿತಿಯು ಹಸಿರು ನಿಶಾನೆ ನೀಡಿರುವ ಈ ಯೋಜನೆಗಳ ಪೈಕಿ 24 ಯೋಜನೆಗಳು ಮಾತ್ರ ಬೆಂಗಳೂರು ಜಿಲ್ಲೆಯಲ್ಲಿದ್ದು, ಉಳಿದ 217 ಯೋಜನೆಗಳು ಹೊರಗಿನ ಜಿಲ್ಲೆಗಳಲ್ಲಿವೆ. ಬೆಂಗಳೂರು ಜಿಲ್ಲೆಯಲ್ಲಿ 21,537 ಕೋಟಿ ರೂ. ಹೂಡಿಕೆ ಆಗುತ್ತಿದ್ದು, 19,243 ಉದ್ಯೋಗ ಸೃಷ್ಟಿ ಆಗಲಿವೆ. ಉಳಿದ ಜಿಲ್ಲೆಗಳಲ್ಲಿ 28,488 ಕೋಟಿ ರೂ. ಬಂಡವಾಳ ಹೂಡಿಕೆ ಆಗುತ್ತಿದ್ದು, 38,808 ಮಂದಿಗೆ ಉದ್ಯೋಗ ಸಿಗಲಿವೆ ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದರು. ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಮಿಕ್ಕ ಭಾಗಗಳಲ್ಲಿ ಉದ್ದಿಮೆಗಳು ನೆಲೆಯೂರಿ, ಉದ್ಯೋಗ ಸೃಷ್ಟಿಯಾಗುವಂತೆ ಮಾಡಲು ಸರಕಾರವು ಬಿಯಾಂಡ್ ಬೆಂಗಳೂರು…
ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ಗೌರವಧವನ್ನು 5 ಸಾವಿರದಿಂದ 7 ಸಾವಿರಕ್ಕೆ ಹೆಚ್ಚಳ ಮಾಡಲಾಗುತ್ತದೆ. ಉಚಿತ ಮೊಬೈಲ್ ನೀಡಲಾಗುತ್ತದೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಮೂಲಕ ಭರ್ಜರಿ ಸಿಹಿಸುದ್ದಿಯನ್ನು ನೀಡಿದ್ದಾರೆ. ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತ ಆಶಾ ಕಾರ್ಯಕರ್ತೆಯರ ಬಳಿಗೆ ತೆರಳಿದಂತ ಅವರು, ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಖಾತ್ರಿಯಾಗಿ ಪಾವತಿಯಾಗುತ್ತಿದ್ದ 5 ಸಾವಿರದ ಬದಲು 7 ಸಾವಿರ ನೇರ ವರ್ಗಾವಣೆಗೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದರು. ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತೆಯರ ಅಹವಾಲುಗಳನ್ನ ಆಲೀಸಿದ ಸಚಿವವರು, ಆಶಾ ಕಾರ್ಯಕರ್ತೆಯರ ಪರ ಸರ್ಕಾರವಿದೆ. ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಆಶಾ ಕಾರ್ಯಕರ್ತೆಯರ ಕುಂದುಕೊರತೆಗಳ ನಿವಾರಣೆಯ ನಿಟ್ಟಿನಲ್ಲಿ ನಮ್ಮ ಸರ್ಕಾರ ಮತ್ತು ಇಲಾಖೆಯು ಮುಕ್ತ ಮನಸ್ಸಿನಲ್ಲಿದ್ದು, ತ್ವರಿತ ಪ್ರತಿಸ್ಪಂದನೆಗೆ ಸದಾ ಸಿದ್ಧವಾಗಿದೆ. ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನದ ವಿತರಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ…
ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಫೆಬ್ರವರಿ.16ರಂದು ಚುನಾವಣೆ ಘೋಷಣೆ ಮಾಡಲಾಗಿದೆ. ಚುನಾವಣೆಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರದಲ್ಲಿ 48 ಗಂಟೆ ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳ ಕ್ರಮ ಪ್ರಶ್ನಿಸಿ ಇದೀಗ ಹೋಟೆಲ್ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಹೈಕೋರ್ಟ್ ಗೆ ಬೆಂಗಳೂರು ಹೋಟೇಲ್ ಮಾಲೀಕರ ಸಂಘದಿಂದ ಅರ್ಜಿಯನ್ನು ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳು 48 ಗಂಟೆ ಮಧ್ಯ ಮಾರಾಟ ನಿಷೇಧ ಮಾಡಿ ಹೊರಡಿಸಿರುವಂತ ಆದೇಶವನ್ನು ಪ್ರಶ್ನಿಸಿದ್ದಾರೆ. ಹೈಕೋರ್ಟ್ ಗೆ ಸಲ್ಲಿಸಿರುವಂತ ಅರ್ಜಿಯಲ್ಲಿ ಕೇವಲ 16 ಸಾವಿರ ಶಿಕ್ಷಕ ಮತದಾರರು ಚುನಾವಣೆಯಲ್ಲಿ ಭಾಗಿಯಾಗಿದ್ದಾರೆ. ಮದ್ಯ ಮಾರಾಟ ಮಾಡುವುದರಿಂದ ವರ್ತಕರು, ಹೋಟೆಲ್ ಗಳಿಗೆ ಕುತ್ತು ಬಂದು ಸಮಸ್ಯೆ ಉಂಟಾಗಲಿದೆ. 48 ಗಂಟೆಗಳ ಅವಧಿಗೆ ಮಧ್ಯ ಮಾರಾಟ ನಿಷೇಧ ಅನಗತ್ಯವೆಂದು ಮನವಿ ಮಾಡಲಾಗಿದೆ. ಹೋಟೆಲ್ ಮಾಲೀಕರು ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ನಾಳೆಯೊಳಗೆ ಸರ್ಕಾರ ಪ್ರತಿಕ್ರಿಯಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿದೆ. https://kannadanewsnow.com/kannada/development-of-irrigation-filling-up-of-tanks-top-priority-deputy-cm-dk-shivakumar-shivakumar/ https://kannadanewsnow.com/kannada/india-uae-dosti-zindabad-here-are-the-highlights-of-pm-modis-speech/
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಬುಧಾಬಿಯಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡುತ್ತಾ, ಕ್ರೀಡಾಂಗಣದಲ್ಲಿನ ಪ್ರತಿ ಉಸಿರು, ಪ್ರತಿ ಧ್ವನಿ ಭಾರತ-ಯುಎಇ ‘ದೋಸ್ತಿ ಜಿಂದಾಬಾದ್’ (ಭಾರತ-ಯುಎಇ ಸ್ನೇಹವು ದೀರ್ಘಕಾಲ ಬಾಳಲಿ) ಎಂದು ಹೇಳುತ್ತಿದೆ ಎಂದು ಹೇಳಿದರು. ಈ ಮೂಲಕ ಅಬುದಾಬಿಯಲ್ಲಿ ಭಾರತ-ಯುಎಇ ದೋಸ್ತಿ ಜಿಂದಾಬಾದ್ ಮೊಳಗಿತು. ಹಾಗಾದ್ರೇ ಇಂದಿನ ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಮುಂದೆ ಓದಿ. ಅಬುದಾಬಿಯಲ್ಲಿ ಇಂದು ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಇಂದು ಅಬುಧಾಬಿಯಲ್ಲಿ ನೀವು ಹೊಸ ಇತಿಹಾಸವನ್ನು ರಚಿಸಿದ್ದೀರಿ. ನೀವು ಯುಎಇಯ ಎಲ್ಲಾ ಮೂಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದಿದ್ದೀರಿ. ಆದರೆ ಎಲ್ಲರ ಹೃದಯ ಸಂಪರ್ಕ ಹೊಂದಿದೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ, ಪ್ರತಿ ಹೃದಯ ಬಡಿತ, ಪ್ರತಿ ಉಸಿರು, ಪ್ರತಿ ಧ್ವನಿ ಹೇಳುತ್ತದೆ – ಭಾರತ-ಯುಎಇ ಸ್ನೇಹವು ದೀರ್ಘಕಾಲ ಬಾಳಲಿ ಎಂದರು. https://twitter.com/ANI/status/1757422549082816979 ಕುಟುಂಬ ಸದಸ್ಯರನ್ನು ಭೇಟಿಯಾಗಲು ಅಬುಧಾಬಿಗೆ ಬಂದಿದ್ದೇನೆ ಎಂದು ಭಾಸವಾಗುತ್ತಿದೆ. ನೀವು ಹುಟ್ಟಿದ ಮಣ್ಣಿನ ಸುಗಂಧವನ್ನು ನಾನು ತಂದಿದ್ದೇನೆ. 140 ಕೋಟಿ…