Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ರಾಜ್ಯದ ಜನತೆಗೆ ಸರ್ಕಾರದಿಂದ ಗುಡ್ ನ್ಯೂಸ್ ಹೊರ ಬಿದ್ದಿದೆ. ಇಂದಿನಿಂದ ಜಾರಿಗೆ ಬರುವಂತೆ ವಿದ್ಯುತ್ ದರವನ್ನು ಇಳಿಕೆ ಮಾಡಿ, 15 ವರ್ಷಗಳ ಬಳಿಕ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ( KERC ) ಅಧಿಕೃತ ಆದೇಶ ಹೊರಡಿಸಿದೆ. ಅದರಲ್ಲಿ ಎಲ್ ಟಿ ಗೃಹ ಬಳಕೆಯಲ ವಿದ್ಯುತ್ ದೀಪದ 100 ಯೂನಿಟ್ ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್ ಗೆ 110 ಪೈಸೆ ಇಳಿಕೆ ಮಾಡಲಾಗಿದೆ. ಅಲ್ಲದೇ ಹೆಚ್.ಟಿ ವಾಣಿಜ್ಯ ಬಳಕೆಯ ಇಂಧನ ಶುಲ್ಕ ಪ್ರತಿ ಯೂನಿಟ್ ಗೆ 125ಪೈಸೆ ನಿಗದಿ ಮಾಡಿದ್ದರೇ, ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ ರೂ.10 ಇಳಿಕೆ ಮಾಡಲಾಗಿದೆ ಎಂದಿದೆ. ಇನ್ನೂ ಹೆಚ್.ಟಿ ಕೈಗಾರಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 50 ಪೈಸೆ ಮಾಡಿದ್ದರೇ, ಡಿಮಾಂಡ್ ಶುಲ್ಕ ಪರ್ತಿ ಕೆವಿಎಗೆ ರೂ.10 ಇಳಿಕೆ ಮಾಡಲಾಗಿದೆ. ಹೆಚ್ ಟಿ ಖಾಸಗಿ ಏತ ನೀರಾವರಿ ಇಂಧನ…
ನವದೆಹಲಿ: ದಿನೇ ದಿನೇ ಚಿನ್ನದ ಬೆಲೆಯು ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇಂದು ಚಿನ್ನದ ಬೆಲೆ ಬರೋಬ್ಬರಿ ರೂ.69,487 ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಸಾಗರೋತ್ತರ ಮಾರುಕಟ್ಟೆಗಳಲ್ಲಿನ ಲಾಭ ಮತ್ತು ವಿಶ್ವದ ಎರಡನೇ ಅತಿದೊಡ್ಡ ಅಮೂಲ್ಯ ಲೋಹದ ಗ್ರಾಹಕರಲ್ಲಿ ಬೇಡಿಕೆಯನ್ನು ಹಿಂಡುವ ಮೂಲಕ ಭಾರತೀಯ ಚಿನ್ನದ ಭವಿಷ್ಯವು ಸೋಮವಾರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಡೀಲರ್ ಗಳು ತಿಳಿಸಿದ್ದಾರೆ. ದೇಶೀಯ ಚಿನ್ನದ ಭವಿಷ್ಯವು 10 ಗ್ರಾಂಗೆ 69,487 ಭಾರತೀಯ ರೂಪಾಯಿಗಳಿಗೆ (834.07 ಡಾಲರ್) ಏರಿದೆ, ಇದು 2024 ರಲ್ಲಿ ಇಲ್ಲಿಯವರೆಗೆ ಸುಮಾರು 10% ಹೆಚ್ಚಾಗಿದೆ. ಭಾರತದ ಚಿನ್ನದ ಆಮದು ಹಿಂದಿನ ತಿಂಗಳಿಗೆ ಹೋಲಿಸಿದರೆ ಮಾರ್ಚ್ನಲ್ಲಿ 90% ಕ್ಕಿಂತ ಹೆಚ್ಚು ಕುಸಿಯಲಿದ್ದು, ಕೋವಿಡ್ ಸಾಂಕ್ರಾಮಿಕ ರೋಗದ ನಂತರದ ಕನಿಷ್ಠ ಮಟ್ಟವನ್ನು ತಲುಪಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮತ್ತು ಇಬ್ಬರು ಬ್ಯಾಂಕ್ ವಿತರಕರು ಕಳೆದ ವಾರ ರಾಯಿಟರ್ಸ್ಗೆ ತಿಳಿಸಿದ್ದಾರೆ. https://kannadanewsnow.com/kannada/no-new-change-in-tax-rules-from-today-finance-ministry/ https://kannadanewsnow.com/kannada/our-aim-is-to-defeat-joshi-dingaleshwar-sri-vighna-to-union-ministers-dream-of-winning-for-5th-time/
ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀ ಸಿಡಿದೆದ್ದಿದ್ದಾರೆ. ಬಿಜೆಪಿಯ ಭದ್ರಕೋಟೆಯಾದಂತ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂಬುದಾಗಿ ಗುಡುಗಿದ್ದಾರೆ. ಈ ಮೂಲಕ 5ನೇ ಬಾರಿ ಸಂಸದರಾಗೋ ಕೇಂದ್ರ ಸಚಿವ ಜೋಶಿ ಕನಸಿಗೆ ವಿಘ್ನ ಎದುರಾದಂತೆ ಆಗಿದೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ನಮ್ಮ ಮುಂದಿನ ಗುರಿ ಬೇರೇನೂ ಇಲ್ಲ. ಧಮನಕಾರಿ ಆಡಳಿತ ನಡೆಸುತ್ತಿರುವಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸುವುದೇ ಆಗಿದೆ ಎಂದು ಹೇಳಿದರು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲು ಲಿಂಗಾಯತ ಸಮುದಾಯವನ್ನು ಒಟ್ಟು ಮಾಡಲಾಗುತ್ತಿದೆ. ಜೋಶಿ ಬಿಜೆಪಿಗೆ ಅನಿವಾರ್ಯವಾದ್ರೇ, ನನಗೆ ಹೋರಾಟ ಅನಿವಾರ್ಯವಾಗಿದೆ ಎಂಬುದಾಗಿ ಗುಡುಗಿದರು. https://kannadanewsnow.com/kannada/no-new-change-in-tax-rules-from-today-finance-ministry/ https://kannadanewsnow.com/kannada/bengaluru-rural-candidate-to-file-nomination-on-april-4-dr-cn-manjunath/
ತುಮಕೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಏಪ್ರಿಲ್.4ರಂದು ನಾಮಪತ್ರ ಸಲ್ಲಿಸುವುದಾಗಿ ಡಾ.ಸಿಎನ್ ಮಂಜುನಾಥ್ ಘೋಷಿಸಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಸಿದ್ಧಗಂಗಾ ಶ್ರೀ ಗದ್ದುಗೆಗೆ ಪೂಜೆ ಸಲ್ಲಿಸಿ, ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಏಪ್ರಿಲ್.4ರಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಬೃಹತ್ ರ್ಯಾಲಿಯ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸೋದಾಗಿ ತಿಳಿಸಿದರು. ಬೆಂಗಳೂರು ಗ್ರಾಮಾಂತರದಲ್ಲಿ ಕುಕ್ಕರ್ ಹಂಚಿಕೆ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದಂತ ಅವರು, ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಕುಕ್ಕರ್ ಹಂಚಿಕೆ ಆರೋಪ ಸಂಬಂಧ ಎಫ್ಐಆರ್ ದಾಖಲಾಗಿದೆ ಎಂದರು. https://kannadanewsnow.com/kannada/no-new-change-in-tax-rules-from-today-finance-ministry/ https://kannadanewsnow.com/kannada/notice-to-the-public-these-rules-that-have-changed-from-today-will-have-a-direct-impact-on-your-pocket/
ಬೆಂಗಳೂರು: ನಗರದ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಅಪರಿಚಿತ ಪುರಷನ ಗುರುತು ಪತ್ತೆಯಾದ್ರೇ, ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪಿರ್ಯಾದುದಾರರಾದ ನಾರಾಯಣಪ್ಪ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಎಂದಿನಂತೆ ಈ ದಿನ ದಿನಾಂಕ:-14/03/2024 ರಂದು ಬೆಳಿಗ್ಗೆ ಸುಮಾರು 7-00 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದು, ಬೆಳಿಗ್ಗೆ ಸುಮಾರು 10-20 ಗಂಟೆಯ ಸಮಯದಲ್ಲಿ ಕರ್ತವ್ಯದಲ್ಲಿರುವಾಗ್ಗೆ ನೈಸ್ ಕಂಪನಿಯ ಕಂಟ್ರೋಲ್ ರೂಂನಿಂದ, ಹೊಸುರು ನೈಸ್ ರಸ್ತೆಯಿಂದ ಕನಕಪುರ ನೈಸ್ ರಸ್ತೆ ಮಾರ್ಗ ಮಧ್ಯೆ ಇರುವ ಅಂಜನಾಪುರ ಬ್ರಿಡ್ಜ್ ಹತ್ತಿರ ಮೋರಿಯಲ್ಲಿ ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿರುತ್ತಾರೆಂದು ಸಾರ್ವಜನಿಕರು ತಿಳಿಸಿರುವುದಾಗಿ ಪೋನ್ ಮೂಲಕ ತಿಳಿಸಿರುತ್ತಾರೆ ಎಂದಿದೆ. ನಾನು ಬೆಳಿಗ್ಗೆ 10-30 ಗಂಟೆಯ ಸಮಯಕ್ಕೆ ಹೋಗಿ ನೋಡಲಾಗಿ ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿರುವುದು, ಕಂಡುಬಂದಿರುತ್ತದೆ. ಈತನ ಮೈಮೇಲೆ ಬಲಗಾಲಿನ ಮಂಡಿಯ ಕೆಳಗೆ ತರಚಿದ ಗಾಯ, ಎಡಭಾಗದ…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಮೇಷ ರಾಶಿ ಈ ದಿನ ನೀವಾಡುವ ಮತಿನ ಬಗ್ಗೆ ಜಾಗ್ರತೆವಹಿಸಬೇಕು, ನಿಮ್ಮ ಮಾತು ಬೇರೆಯವರ ಮನಸ್ಸಿಗೆ ನೋವುಂಟು ಮಾಡದಂತೆ, ನಿಮ್ಮ ಮಾತಿನಿಂದ ಜಗಳ ಉಂಟಾಗದಂತೆ ಜಾಗ್ರತೆವಹಿಸಬೇಕು. ಈ ದಿನ ಕೆಲಸದ ಹೊರೆ ಅಧಿಕವಿರಲಿದೆ. ಆದರೆ ನಿಮ್ಮ ಕಠಿಣ ಶ್ರಮಕ್ಕೆ ಶೀಘ್ರದಲ್ಲೇ ನೀವು ಸರಿಯಾದ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯಮಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನೀವು ಯಾವುದೇ ದುಬಾರಿ ಐಷಾರಾಮಿ ವಸ್ತುಗಳನ್ನು ಖರೀದಿಸಲು ಬಯಸಿದರೆ ಇನ್ನೂ ಸ್ವಲ್ಪ ಸಮಯ ಕಾಯಲು ನಿಮಗೆ ಸಲಹೆ ನೀಡಲಾಗುವುದು. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ ವೃಷಭ ರಾಶಿ ನಿಮ್ಮ ಕುಟುಂಬದ ಸದಸ್ಯರ ಅಗತ್ಯಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳಿ. ಅವರನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ. ಸಂಗಾತಿ ಹಾಗೂ ನಿಮ್ಮ ನಡುವೆ ಅಹಂ ಕಮ್ಮಿಯಾದರೆ ಎಲ್ಲವೂ ಸರಿಯಾಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಸಾಲ…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಆರ್ಥಿಕ ಸಮಸ್ಯೆ, ಮಾನಸಿಕ ಸಮಸ್ಯೆ, ಕುಟುಂಬದ ಸಮಸ್ಯೆ, ಶಾರೀರಿಕ ಸಮಸ್ಯೆ ಇದ್ದರೂ ಕೂಡ ಈ ಸಂಖ್ಯೆಯನ್ನು ಮನಸ್ಸಿನಲ್ಲಿ ಹೇಳಿಕೊಳ್ಳುವುದರಿಂದ ಎಲ್ಲಾ ಸಮಸ್ಯೆಯು ದೂರವಾಗುತ್ತದೆ. ಹಾಗಾದರೆ ಅದ್ಭುತವಾದ ದೈವಿಕ ಸಂಖ್ಯೆ ಯಾವುದು ಅದನ್ನು ದಿನಕ್ಕೆ ಎಷ್ಟು ಬಾರಿ ಹೇಳಬೇಕು ಹಾಗೂ ಯಾವ ಸಮಯದಲ್ಲಿ ಹೇಳಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಅದ್ಭುತವಾದ ದೈವಿಕ ಸಂಖ್ಯೆಯನ್ನು ಮುಂಜಾನೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆ 21 ಬಾರಿ ಹೇಳಿಕೊಳ್ಳಬೇಕು. ಆ ಅದ್ಭುತವಾದ ಸಂಖ್ಯೆ ಯಾವುದೆಂದರೆ 489 712 819 48, 548 491 318 816, 1488588, 498471816, 891019 4918808. ಈ ಮೇಲಿನ ಅದ್ಭುತವಾದ ದೈವಿಕ ಸಂಖ್ಯೆಯನ್ನು ಬಿಳಿ ಹಾಳೆಯ ಮೇಲೆ ಬರೆದು ಮುಂಜಾನೆ 21 ಬಾರಿ ಮಧ್ಯಾಹ್ನ 21 ಬಾರಿ ಹಾಗೂ ರಾತ್ರಿ ವೇಳೆ 21 ಬಾರಿ ಮನಸ್ಸಿನಲ್ಲಿ ಹೇಳಿಕೊಳ್ಳಬೇಕು.…
ಇಂದು ಆದಾಯದಲ್ಲಿ ಅಪಾರ ಪ್ರಮಾಣದ ಹಣವನ್ನು ತೆಗೆದುಕೊಂಡು ಆಸ್ಪತ್ರೆಗೆ ಸುರಿಯುತ್ತಿದ್ದೇವೆ. ಏಕೆಂದರೆ ಸಮಯದ ಪರಿಸ್ಥಿತಿಗೆ ತಕ್ಕಂತೆ ದೈಹಿಕ ಆರೋಗ್ಯವೂ ಬದಲಾಗುತ್ತಿರುತ್ತದೆ. ದೈಹಿಕ ಆರೋಗ್ಯದ ಕೊರತೆಯಿಂದ ಮನೆಯಲ್ಲಿರುವವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆಗಾಗ ಆಸ್ಪತ್ರೆಗೆ ಹೋಗಿ ಹಣ ಪೋಲು ಮಾಡಿ ಔಷಧ ಮಾತ್ರೆ ಸೇವಿಸುತ್ತೇವೆ. ನೀವು ದೀರ್ಘಕಾಲ ಮಾತ್ರೆ ತೆಗೆದುಕೊಳ್ಳುವವರಾಗಿದ್ದರೆ ಮತ್ತು ದೀರ್ಘಕಾಲದವರೆಗೆ ಅದೇ ನೋವಿನಿಂದ ಬಳಲುತ್ತಿದ್ದರೆ ಈ ಪರಿಹಾರವನ್ನು ಪ್ರಯತ್ನಿಸಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ,…
ಬೆಂಗಳೂರು: ರಾಜ್ಯದಲ್ಲಿ ಬಿಸಿಲ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಮುಂಗಾರು ಮಳೆ ಕೈಕೊಟ್ಟ ನಂತ್ರ, ನೀರಿನ ಆಹಾಕಾರದ ನಡುವೆ ಬಿಸಿಲಾಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಈ ನಡುವೆ ಏಪ್ರಿಲ್.3, 4ರಂದು ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ. ಎಚ್ಚರದಿಂದ ಇರುವಂತೆ ಹಾವಮಾನ ಇಲಾಖಎ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಹವಾಮಾನ ಇಲಾಖೆಯು, ಶಾಖದ ಅಲೆಯ ಎಚ್ಚರಿಕೆ: ರಾಜ್ಯದ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 03.04.2024 ರಿಂದ 05.04.2024 ರವರೆಗೆ ಶಾಖದ ಅಲೆಯ ಹೆಚ್ಚಾಗಿ ಇರುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. https://twitter.com/KarnatakaSNDMC/status/1774343047469220230 ರಾಜ್ಯದಲ್ಲಿ ‘ಬಿಸಿಲಾಘಾತ’ಕ್ಕೆ ಇಬ್ಬರು ಬಲಿ | Heat Stroke ರಾಯಚೂರು: ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ಮನೆಯಿಂದ ಹೊಸ ಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯ ಬಿಸಿಲಾಘಾತಕ್ಕೆ ರಾಜ್ಯದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಕಲಬುರ್ಗಿ ಜಿಲ್ಲೆಯ ಆಲಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸದಲ್ಲಿ ಶರಣಪ್ಪ ಸಮಗಾರ(42) ತೊಡಗಿದ್ದರು. ನಾಲ್ಕು…
ಬೆಂಗಳೂರು: ನಗರದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರೆದಿದೆ. ಕಾರಿನಲ್ಲಿ ತೆರಳುತ್ತಿದ್ದಂತ ಮಹಿಳೆಯನ್ನು ಫಾಲೋ ಮಾಡಿಕೊಂಡು, ಚೇಸ್ ಮಾಡಿಕೊಂಡು ಬಂದಂತ ಮೂವರು ಕಿಡಿಗೇಡಿಗಳು, ಮಹಿಳೆಗೆ ಕಿರುಕುಳ ನೀಡಿರೋ ಘಟನೆ ನಡೆದಿತ್ತು. ಈ ಸಂಬಂಧ ಮಹಿಳೆ ನೀಡಿದಂತ ದೂರು ಆಧರಿಸಿ, ಪೊಲೀಸರು ಮೂವರು ಪುಂಡರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಮಡಿವಾಳದಿಂದ ಕೋರಮಂಗಲದವರೆಗೆ ಮಹಿಳೆಯೊಬ್ಬರ ಕಾರನ್ನು ಚೇಸ್ ಮಾಡಿಕೊಂಡು ಒಂದೇ ಬೈಕ್ ನಲ್ಲಿ ಮೂವರು ಪುಂಡರು ತೆರಳಿದ್ದಾರೆ. ದಾರಿ ಮಧ್ಯೆ ಕಾರು ಸುತ್ತುವರೆದು, ಡೋರ್ ಓಪನ್ ಮಾಡೋದಕ್ಕೂ ಪ್ರಯತ್ನಿಸಿ, ಮಹಿಳೆಗೆ ಕಿರುಕುಳ ನೀಡಿದ್ದಾರೆ. ಕಾರು ಫಾಲೋ ಮಾಡಿ ಬೈಕಲ್ಲಿ ಪುಂಡರು ಬಂದಿದ್ದನ್ನು ಗಮನಿಸಿದಂತ ಮಹಿಳೆ, ಆತಂಕದಿಂದ ತಕ್ಷಣವೇ 112ಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದರು. ಮಡಿವಾಳದಿಂದ ಕೋರಮಂಗಲದವರೆಗೆ ಬಿಂಬಾಲಿಸಿ ಬಂದಿದ್ದಂತ ಪುಂಡರು, ಮಹಿಳೆಯ ಕಾರು ಅಡ್ಡಗಡ್ಡಿ ಕಿರುಕುಳ ನೀಡಿದ್ದಾರೆ ಎಂಬುದಾಗಿ ಮಹಿಳೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆದರಿಸಿ ಪುಂಡರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಗೆ…