Author: kannadanewsnow09

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಬ್ಯಾಂಕ್ ನಿಂದ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದ್ದು, ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವಂತ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ ಸೈಟ್ www.chikkamagalurudccbank.com  ಗೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ ಎಂದಿದೆ. ಹುದ್ದೆಗಳ ವಿವರ ಸಹಾಯಕ ವ್ಯವಸ್ಥಾಪಕರು – 4 ಹುದ್ದೆ ಪ್ರಥಮ ದರ್ಜೆ ಸಹಾಯಕರು, ಮೇಲ್ವಿಚಾರಕರು – 18 ಹುದ್ದೆ ಕಿರಿಯ ಸಹಾಯಕರು – 53 ಹುದ್ದೆ ಡಿ ವೃಂದದ ಸಹಾಯಕರು, ಅಟೆಂಡರ್ – 10 ಹುದ್ದೆ ವೇತನ ಸಹಾಯಕ ವ್ಯವಸ್ಥಾಪಕರು – ರೂ.36,000ದಿಂದ 67,550. ಪ್ರಥಮ ದರ್ಜೆ ಸಹಾಯಕರು, ಮೇಲ್ವಿಚಾರಕರು – ರೂ.27,650 ರಿಂದ ರೂ.52,650 ಕಿರಿಯ ಸಹಾಯಕರು – ರೂ.21,400 ರಿಂದ ರೂ.42,000 ಡಿ ವೃಂದದ ಸಹಾಯಕರು,…

Read More

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟದ ನಿರ್ಣಾಯಕ ವಿಜಯದ ನಂತರ, ಹೇಮಂತ್ ಸೊರೆನ್ ನವೆಂಬರ್ 28 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಈ ಬಳಿಕ ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೊರೆನ್, ನವೆಂಬರ್ 28 ರ ಗುರುವಾರ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ದೃಢಪಡಿಸಿದರು. ಜೆಎಂಎಂ ನೇತೃತ್ವದ ಮೈತ್ರಿಕೂಟವು ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ರಾಂಚಿಯಲ್ಲಿ ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರನ್ನು ಭೇಟಿಯಾಗಿ ಸೊರೆನ್ ಅವರ ನಾಯಕತ್ವದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ನಾವು ಸಮ್ಮಿಶ್ರ ಸರ್ಕಾರದ ನಾಯಕನನ್ನು ಆಯ್ಕೆ ಮಾಡುತ್ತೇವೆ ಮತ್ತು ಸಮಯವನ್ನು ವ್ಯರ್ಥ ಮಾಡದೆ, ಸರ್ಕಾರ ರಚನೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ನ ಜಾರ್ಖಂಡ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. https://kannadanewsnow.com/kannada/hemant-soren-to-take-oath-as-new-chief-minister-of-jharkhand-on-november-28/ https://kannadanewsnow.com/kannada/eat-more-amla-in-winter-and-get-this-benefit/

Read More

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ಅವರು ನವೆಂಬರ್ 28 ರಂದು ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಹೇಳಿದರು. ಇಂದು ನಾವು (ಭಾರತ) ಮೈತ್ರಿ ಸರ್ಕಾರವನ್ನು ರಚಿಸುವ ಕಾರ್ಯವಿಧಾನವನ್ನು ಪ್ರಾರಂಭಿಸಿದ್ದೇವೆ ಮತ್ತು ಆ ಸರಣಿಯಲ್ಲಿ, ನಾವು ರಾಜ್ಯಪಾಲರ ಮುಂದೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದೇವೆ. ನಾನು ಕೂಡ ನನ್ನ ರಾಜೀನಾಮೆಯನ್ನು ಅವರಿಗೆ ಸಲ್ಲಿಸಿದ್ದೇನೆ… ಕಾಂಗ್ರೆಸ್ ಮತ್ತು ಆರ್ಜೆಡಿ ಉಸ್ತುವಾರಿ ಕೂಡ ಇಲ್ಲಿ ಹಾಜರಿದ್ದರು… ನವೆಂಬರ್ 28ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದಿದ್ದಾರೆ. https://twitter.com/ANI/status/1860639683774148727 https://kannadanewsnow.com/kannada/eat-more-amla-in-winter-and-get-this-benefit/ https://kannadanewsnow.com/kannada/breaking-peanut-test-begins-at-basavanagudi-in-bengaluru/

Read More

ರಾಯಚೂರು: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವಿದ್ಯಾರ್ಥಿನಿಯರಿಂದಲೇ ಹಾಸ್ಟೆಲ್ ವಾರ್ಡನ್ ಒಬ್ಬರು ಶೌಚಾಲಯ ಕ್ಲೀನ್ ಮಾಡಿಸಿರುವಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿರುವಂತ ಮೆಟ್ರಿಂಕ್ ನಂತ್ರ ಬಾಲಕಿಯರ ವಿದ್ಯಾರ್ಥಿನಿಯರಿಂದ ವಾರ್ಡನ್ ರಜಿಯಾ ಸುಲ್ತಾನ್ ಎಂಬುವರು ಪ್ರತಿ ನಿತ್ಯ ಹಾಸ್ಟೆಲ್ ಶೌಚಾಲಯ ಕ್ಲೀನ್ ಮಾಡಿಸಿದಂತ ಆರೋಪ ಕೇಳಿ ಬಂದಿದೆ. ಇದಷ್ಟೇ ಅಲ್ಲದೇ ವಿದ್ಯಾರ್ಥಿನಿಯರಿಂದಲೇ ಹಾಸ್ಟೆಲ್ ಶೌಚಾಲಯ ಕ್ಲೀನ್ ಮಾಡಿಸಿದಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶವನ್ನು ಹೊರ ಹಾಕಿದ್ದಾರೆ. ಇನ್ನೂ ನಾವು ಓದಬೇಕು ಮೇಡಂ. ಓದೋದಕ್ಕೆ ಬಂದಿರೋದು, ನಮ್ಮನ್ನು ಓದುವುದಕ್ಕೆ ಬಿಡಿ ಅಂತ ಹೇಳಿದ್ರೂ ಬಿಡದಂತ ವಾರ್ಡನ್ ರಜಿಯಾ ಸುಲ್ತಾನ್ ಶೌಚಾಲಯ ಕ್ಲೀನ್ ಮಾಡಿಸುವುದು ಸೇರಿದಂತೆ ವಿವಿಧ ಕೆಲಸ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ವಿದ್ಯಾರ್ಥಿನಿಯರು ಪತ್ರ ಬರೆದು ಆಕ್ರೋಶ ಹೊರ ಹಾಕಿದ್ದಾರೆ. https://kannadanewsnow.com/kannada/glucose-bottle-contains-rotten-fibre-state-health-department-orders-not-to-use-it/ https://kannadanewsnow.com/kannada/eat-more-amla-in-winter-and-get-this-benefit/

Read More

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾದಂತ ಗ್ಲುಕೋಸ್ ಬಾಟಲಿಯಲ್ಲಿ ಕೊಳೆತ ನಾರಿನಾಂಶ ಪತ್ತೆಯಾಗಿದೆಯಂತೆ. ಅಲ್ಲದೇ ಬಾಟಲಿಯ ಮೇಲೆ ಫಂಗಸ್ ಬೆಳೆದಿರೋದು ಪತ್ತೆಯಾಗಿದೆ. ಈ ಕಾರಣದಿಂದ ಒಂದು ಫಾರ್ಮಸಿ ಕಂಪನಿಯಿಂದ ಸರಬರಾಜು ಮಾಡಲಾದಂತ ಗ್ಲುಕೋಸ್ ಬಾಟಲಿಯನ್ನು ಸರಬರಾಜು ಮಾಡದಂತೆ ಆರೋಗ್ಯ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಿಗೆ ಸೂಚಿಸಿದೆ. ಈ ಸಂಬಂಧ ಕೆ ಎಸ್ ಎಂ ಎಸ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಸಿದ್ದು, M/s Paschim Banga Pharmaceuticals ಸಂಸ್ಥೆಯು ತಯಾರಿಸಿ ಸರಬರಾಜು ಮಾಡಿರುವ 26.29 Ringer Lactate Infusion FFS As per TP Lx500ml ನ ಬಗ್ಗೆ ದೂರು ಬಂದಿರುವುದರಿಂದ ಈ ಪಕ್ರದೊಂದಿಗೆ ಲಗತ್ತಿಸಿರುವ ಎಲ್ಲಾ ಬ್ಯಾಚ್ ಗಳನ್ನು ekushadi ತಂತ್ರಾಂಶದಲ್ಲಿ ಫ್ರೀಜ್ ಮಾಡಲಾಗಿರುತ್ತದೆ, ತಮ್ಮಲ್ಲಿ ಲಭ್ಯವಿರುವ ಸದರಿ ಸಂಸ್ಥೆಯು ಸರಾಟರಜು ಮಾಡಿರುವ Ringe Lactate Infusion ಔಷದವನ್ನು ಬಳಕೆ ಮಾಡದಂತೆ ಸೂಚಿಸಿದ್ದಾರೆ. ಎಲ್ಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮತ್ತು ಎಲ್ಲಾ ಆರೋಗ, ಸಂಸೆಗಳ ಪ್ರದ್ಯಾಧಿಕಾರಿಗಳಿಗೆ…

Read More

ಸೌದಿ: ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತನ್ನ ಎಡಗೈ ವೇಗದ ಬೌಲರ್ ಅರ್ಷ್ದೀಪ್ ಸಿಂಗ್ ಅವರನ್ನು 18 ಕೋಟಿ ರೂ.ಗೆ ಖರೀದಿಸಿತು. ಸನ್ರೈಸರ್ಸ್ ಹೈದರಾಬಾದ್ನಿಂದ ಬಿಡ್ಡಿಂಗ್ ಯುದ್ಧವನ್ನು ಗೆದ್ದ ನಂತರ ಪಿಬಿಕೆಎಸ್ ತಮ್ಮ ಆಟಗಾರನನ್ನು ರೈಟ್ ಟು ಮ್ಯಾಚ್ ಮೂಲಕ ಮರಳಿ ಪಡೆದುಕೊಂಡಿತು, ಅವರು ಗೆಲುವಿನ ಬಿಡ್ ಅನ್ನು 15.75 ಕೋಟಿಗೆ ಮಾಡಿ ನಂತರ ಅದನ್ನು 18 ಕೋಟಿಗೆ ಹೆಚ್ಚಿಸಿದರು. ಪಿಬಿಕೆಎಸ್ ಆಟಗಾರನನ್ನು 18 ಕೋಟಿ ರೂ.ಗೆ ಖರೀದಿಸಿತು. ಐಪಿಎಲ್ 2025 ರ ಮೆಗಾ ಹರಾಜಿಗೆ ಮುಂಚಿತವಾಗಿ ಅರ್ಷ್ದೀಪ್ ಸಿಂಗ್ ಅವರನ್ನು ಅವರ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿತು. ಪಿಬಿಕೆಎಸ್ ಕೇವಲ ಇಬ್ಬರು ಅನ್ಕ್ಯಾಪ್ಡ್ ಆಟಗಾರರಾದ ಶಶಾಂಕ್ ಸಿಂಗ್ ಮತ್ತು ಪ್ರಭ್ಸಿಮ್ರನ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ಅರ್ಷ್ದೀಪ್ 2 ಕೋಟಿ ರೂ.ಗಳ ಮೂಲ ಬೆಲೆಗೆ ಬಂದರು. ಸ್ವಲ್ಪ ಸಮಯದ ಕಾಯುವಿಕೆಯ ನಂತರ, ಚೆನ್ನೈ ಸೂಪರ್ ಕಿಂಗ್ಸ್ ಅರ್ಷ್ದೀಪ್ಗೆ ಪೆಡಲ್ ಎತ್ತಿದ ಮೊದಲ ತಂಡವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್…

Read More

ರಾಂಚಿ: ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ನವೆಂಬರ್.26ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅವರು ಸ್ವೀಕರಿಸಲಿದ್ದಾರೆ ಅಂತ ಮೂಲಗಳು ತಿಳಿಸಿವೆ. ಈ ಬಗ್ಗೆ ಎನ್ ಡಿಟಿವಿ ವರದಿ ಮಾಡಿದ್ದು, ಇಂದು ಹೇಮಂತ್ ಸೊರೇನ್ ಅವರು ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರನ್ನು ಭೇಟಿ ಮಾಡಿ, ತಮ್ಮ ಸರ್ಕಾರ ರಚನೆಯ ಹಕ್ಕು ಮಾಡಿಸೋದಾಗಿ ತಿಳಿದು ಬಂದಿದೆ. ಅಂದಹಾಗೆ ನವೆಂಬರ್.13 ಮತ್ತು 20ರಂದು ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ನಡೆದಿತ್ತು. ನವೆಂಬರ್.23ರಂದು ಮತಏಣಿಕೆ ನಡೆದು, ಫಲಿತಾಂಶ ಹೊರಬಿದ್ದಿತ್ತು. ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟವು 81 ಸ್ಥಾನಗಳ ಪೈಕಿ 56 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಜೆಎಂಎಂ 34 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದರೇ, ಇಂಡಿಯಾ ಮೈತ್ರಿ ಕೂಟದ ಮಿತ್ರಪಕ್ಷಗಳಾದಂತ ಕಾಂಗ್ರೆಸ್ ಹಾಗೂ ಆರ್ ಜೆಡಿ ಕ್ರಮವಾಗಿ 16 ಮತ್ತು 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. https://kannadanewsnow.com/kannada/eat-more-amla-in-winter-and-get-this-benefit/ https://kannadanewsnow.com/kannada/breaking-peanut-test-begins-at-basavanagudi-in-bengaluru/

Read More

ಕನಕಪುರ: ಜನರ ಆಶೀರ್ವಾದದಿಂದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ವಿರೋಧಿಗಳ ಟೀಕೆಗೆ ಜನ ಉತ್ತರ ಕೊಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಗ್ಯಾರಂಟಿಗಳನ್ನು ನೀಡಿದೆ. ಮಹಿಳೆಯರು ಕೂಡ ಗ್ಯಾರಂಟಿಗಳ ಪ್ರಯೋಜನ ಪಡೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅನುಕೂಲ ಆಗಿದೆ. ಗ್ಯಾರಂಟಿಗಳ ಬಗ್ಗೆ ವಿರೋಧಿಗಳು ಪದೇ ಪದೇ ಟೀಕೆ ಮಾಡುತ್ತಿದ್ದರು. ಈ ಎಲ್ಲಾ ಟೀಕೆಗಳಿಗೂ ಮತದಾರರು ಉತ್ತರ ನೀಡಿದ್ದಾರೆ‌ ಎಂದು ಹೇಳಿದರು. ಬಿಜೆಪಿಯವರು ಸರ್ಕಾರದ ವಿರುದ್ಧ ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದರು. ಏನೂ ಇಲ್ಲದಿದ್ದರೂ ಬಿಜೆಪಿಯವರು ಹಗರಣ ಇದೆ ಎಂದು ಆರೋಪ ಮಾಡುತ್ತಿದ್ದರು‌. ಉಪ ಚುನಾವಣೆಯಲ್ಲಿ ಅದಕ್ಕೆಲ್ಲಾ ಶಾಸ್ತಿ‌ಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. BIG NEWS : 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ : ಭವಿಷ್ಯ ನುಡಿದ ಸಂಸದ ಯದುವೀರ್ ಒಡೆಯರ್ – Kannada News | India News…

Read More

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸುಳ್ಳುಗಳನ್ನು ಯಾರೂ ನಂಬಿಲ್ಲ. ಇದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ. ಬಿಜೆಪಿ- ಜೆಡಿಎಸ್ ನಾಯಕರ ಸುಳ್ಳು ಆರೋಪಗಳೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು ಅಂತ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಈ ಕುರಿತಂತೆ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವಂತ ಅವರು, ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ ಎನ್ನಲು ಖುಷಿಯಿದೆ. ಇದು ರಾಜ್ಯ ಸರ್ಕಾರದ ಸಾಧನೆ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವಾಗಿದೆ ಎಂದಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಸತ್ಯ ಮತ್ತು ಬಿಜೆಪಿ-ಜೆಡಿಸ್ ಪಕ್ಷಗಳ ಸುಳ್ಳುಗಳ ನಡುವಿನ ಚುನಾವಣೆಯಾಗಿತ್ತು. ಸತ್ಯ ಗೆದ್ದಿದೆ. ವಿರೋಧ ಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವ ಈ ಗೆಲುವು ಹೊಸ ಸ್ಪೂರ್ತಿ ತುಂಬಿದೆ ಎಂದು ತಿಳಿಸಿದ್ದಾರೆ. ನಮ್ಮ ಸರ್ಕಾರದ ಸಾಧನೆಗಳನ್ನು ನಮ್ಮ ಜನ ಬೆಂಬಲಿಸುತ್ತಲೇ ಬಂದಿದ್ದಾರೆ. ನಾನು ದಂತದ ಗೋಪುರದಲ್ಲಿ ಕೂತವನಲ್ಲ, ನಿರಂತರವಾಗಿ…

Read More

ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League – IPL)  ಋತುವಿನ ಮೆಗಾ ಹರಾಜನ್ನು ವೀಕ್ಷಿಸಲು ಲಕ್ಷಾಂತರ ಜನರು ಜಿಯೋ ಸಿನೆಮಾಗೆ ( Jio Cinema ) ಲಾಗ್ ಇನ್ ಆಗುತ್ತಿದ್ದಂತೆ, ಅಂಬಾನಿ ಒಡೆತನದ ಪ್ಲಾಟ್ಫಾರ್ಮ್ ಕುಸಿದಿದೆ. ಇದು ನೆಟ್ಟಿಗರನ್ನು ಕೆರಳಿಸಿದೆ. ಎಲೋನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ಕೋಪದ ಪ್ರತಿಕ್ರಿಯೆಗಳಿಂದ ತುಂಬಿದೆ, ನೆಟ್ಟಿಗರು ಕಳಪೆ ಸಿದ್ಧತೆಗೆ ಉತ್ತರಗಳನ್ನು ಒತ್ತಾಯಿಸಿದರು. “ಜಿಯೋ ಸಿನೆಮಾ ಯಶಸ್ವಿಯಾಗುತ್ತದೆ” ಎಂದು ಒಬ್ಬ ಬಳಕೆದಾರರು ಬರೆದರೆ, ಇನ್ನೊಬ್ಬರು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ವೇದಿಕೆಗೆ ಕರೆ ನೀಡಿದರು. “ಜಿಯೋ ಸಿನೆಮಾ ಸೇವೆಯನ್ನು ಒದಗಿಸಲು ನಿಮ್ಮಲ್ಲಿ ಮೂಲಸೌಕರ್ಯಗಳಿಲ್ಲದಿದ್ದರೆ ದಯವಿಟ್ಟು ಹಕ್ಕುಗಳನ್ನು ತೆಗೆದುಕೊಳ್ಳಬೇಡಿ” ಎಂದು ಇನ್ನೊಬ್ಬರು ಬರೆದಿದ್ದಾರೆ. https://kannadanewsnow.com/kannada/eat-more-amla-in-winter-and-get-this-benefit/ https://kannadanewsnow.com/kannada/breaking-peanut-test-begins-at-basavanagudi-in-bengaluru/

Read More