Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶ 2024 ರ ಎರಡನೇ ದಿನದಂದು ಬಿಜೆಪಿ ನಾಯಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿರೋಧ ಪಕ್ಷದ ನಾಯಕರು ‘ಎನ್ಡಿಎ ಸರ್ಕಾರ್, 400 ಪಾರ್’ (ಈ ಬಾರಿ ಎನ್ಡಿಎಗೆ 400 ಸ್ಥಾನಗಳು) ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಹೇಳಿದರು. “ಎನ್ಡಿಎಯನ್ನು 400 ಕ್ಕೆ ಕೊಂಡೊಯ್ಯಲು, ಬಿಜೆಪಿ 370 ಸ್ಥಾನಗಳನ್ನು ದಾಟಬೇಕಾಗುತ್ತದೆ” ಎಂದು ಅವರು ಹೇಳಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, “ನಾವು ದೇಶವನ್ನು ಮೆಗಾ ಹಗರಣಗಳು ಮತ್ತು ಭಯೋತ್ಪಾದಕ ದಾಳಿಗಳ ಭಯದಿಂದ ಮುಕ್ತಗೊಳಿಸಿದ್ದೇವೆ ಎಂದು ಇಡೀ ದೇಶ ನಂಬಿದೆ. ನಾವು ಬಡವರು ಮತ್ತು ಮಧ್ಯಮ ವರ್ಗದ ಜೀವನವನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ ಎಂದರು. ‘ವಿಕ್ಷಿತ್ ಭಾರತ್’ (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಾಣದತ್ತ ದೈತ್ಯ ಹೆಜ್ಜೆ ಇಡಬೇಕಾಗಿರುವುದರಿಂದ ಮುಂದಿನ ಐದು ವರ್ಷಗಳು “ಮುಖ್ಯ” ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. “ಈಗ ದೇಶದ ಕನಸು ಮತ್ತು ಸಂಕಲ್ಪ ದೊಡ್ಡದಾಗಲಿದೆ. ನಮ್ಮ ಕನಸು ಮತ್ತು ಸಂಕಲ್ಪವೆಂದರೆ ನಾವು…
ಬೆಂಗಳೂರು: ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಳೆದ ನಾಲ್ಕು ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ದಾಖಲಾಗಿದ್ದರು. ಇಂತಹ ಅವರು ಗುಣಮುಖರಾದ ಕಾರಣ, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಫೆಬ್ರವರಿ.15ರಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿಮ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ತಪಾಸಣೆಗೆ ಒಳಪಡಿಸಿದ್ದಂತ ವೈದ್ಯರು, ಚಿಕಿತ್ಸೆಯನ್ನು ನೀಡಿದ್ದರು. ಇಂದು ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/govt-school-headmasters-darbar-in-vijayapura-car-cleaning-by-hands-of-students/ https://kannadanewsnow.com/kannada/breaking-rajkumar-santoshi/
ವಿಜಯಪುರ: ಶಾಲೆಯ ಶೌಚಾಲಯವನ್ನು ವಿದ್ಯಾರ್ಥಿಗಳಿಂದಲೇ ಕ್ಲೀನ್ ಮಾಡಿಸಿದ ಘಟನೆ ಹಸಿಯಾಗಿರೋ ಮುನ್ನವೇ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರೊಬ್ಬರ ದರ್ಬಾರ್ ಹೊರ ಬಿದ್ದಿದೆ. ವಿದ್ಯಾರ್ಥಿಗಳಿಂದಲೇ ತಮ್ಮ ಕಾರನ್ನು ಕ್ಲೀನ್ ಮಾಡಿಸಿರೋ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ, ತಮ್ಮ ಕಾರನ್ನು ವಿದ್ಯಾರ್ಥಿಗಳಿಂದ ಕ್ಲೀನ್ ಮಾಡಿಸಿಕೊಂಡಿರೋ ಆರೋಪ ಕೇಳಿ ಬಂದಿದೆ. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಎಂಬುವರೇ ಶಾಲೆಯ ಮಕ್ಕಳಿಂದ ತಮ್ಮ ಕಾರನ್ನು ಕ್ಲೀನ್ ಮಾಡಿಸಿಕೊಂಡಿರೋ ಆರೋಪ ಎದುರಿಸುತ್ತಿರುವವರು ಆಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಕಾರನ್ನು ನೀರಿನಿಂದ ತೊಳೆಯುತ್ತಿರೋ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೇ ಶಾಲಾ ಮುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಅವರ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ. https://kannadanewsnow.com/kannada/breaking-rajkumar-santoshi/ https://kannadanewsnow.com/kannada/pm-modi-exhorts-bjp-workers-at-party-national-convention-says-next-100-days-are-important/
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ಗುಂಪಾದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) 400 ಸ್ಥಾನಗಳ ಗುರಿಯನ್ನು ಸಾಧಿಸಬೇಕಾದರೆ, ಬಿಜೆಪಿ 370 ಸ್ಥಾನಗಳ ಗಡಿಯನ್ನು ದಾಟಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಮುಂದಿನ 100 ದಿನಗಳಲ್ಲಿ ಪ್ರತಿ ಹೊಸ ಮತದಾರರು, ಪ್ರತಿ ಫಲಾನುಭವಿ, ಪ್ರತಿ ವಲಯ ಮತ್ತು ಪ್ರತಿ ಸಮುದಾಯವನ್ನು ಒಗ್ಗೂಡಿಸುವುದು ಮತ್ತು ತೊಡಗಿಸಿಕೊಳ್ಳುವುದು ಮತ್ತು ಜನರ ವಿಶ್ವಾಸವನ್ನು ಗಳಿಸುವುದು ಕೇಸರಿ ಪಕ್ಷದ ಗುರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಸಮಾವೇಶ 2024 ರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳು ಸಹ ‘ಎನ್ಡಿಎ ಸರ್ಕಾರ್ 400 ಪಾರ್’ ಘೋಷಣೆಗಳನ್ನು ಕೂಗುತ್ತಿವೆ ಎಂದು ಲೇವಡಿ ಮಾಡಿದರು. ಇಂದು ವಿರೋಧ ಪಕ್ಷದ ನಾಯಕರು ಕೂಡ ‘ಎನ್ಡಿಎ ಸರ್ಕಾರ್ 400 ಪಾರ್’ ಘೋಷಣೆಗಳನ್ನು ಕೂಗುತ್ತಿದ್ದಾರೆ. ಎನ್ಡಿಎಯನ್ನು 400 ಕ್ಕೆ ಕೊಂಡೊಯ್ಯಲು, ಬಿಜೆಪಿ 370 ಸ್ಥಾನಗಳನ್ನು ದಾಟಬೇಕು ಎಂದು ಪ್ರಧಾನಿ ಮೋದಿ…
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನುಡಿದಂತೆ ನಡೆಯದ, ಸುಳ್ಳು ಹೇಳಿಕೊಂಡು ಜನರನ್ನು ಎತ್ತಿಕಟ್ಟುತ್ತಿರುವಂತ ಬಿಜೆಪಿ, ಜೆಿಎಸ್ ಪಕ್ಷಕ್ಕೆ ಮತ ಹಾಕಬೇಡಿ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಗೆಲ್ಲಿಸಿ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ ಇಂದು ಗ್ಯಾರಂಟಿ ಯೋಜನೆ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಬಿಜೆಪಿ, ಜೆಡಿಎಸ್ ಪಕ್ಷದವರು ಕೊಟ್ಟ ಮಾತು ಯಾವತ್ತೂ ಉಳಿಸಿಕೊಂಡಿಲ್ಲ. ಮಾತು ತಪ್ಪಿದ್ದಾರೆ. ನಾವು ಅಧಿಕಾರಕ್ಕೆ ಬಂದ 8 ತಿಗಂಳಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು. ನಮ್ಮ ಸರ್ಕಾರ ಐದು ಗ್ಯಾರಂಟಿ ಜಾರಿ ಮಾಡಿದೆ. ನುಡಿದಂತೆ ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದಂತ ಮಂಡ್ಯದ ಮಳವಳ್ಳಿಯ ಜನತೆಗೆ ಧನ್ಯವಾದಗಳು. ಮಳವಳ್ಳಿ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದರು. ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ 28 ಸೀಟುಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲೋದಕ್ಕೆ ಸಾಧ್ಯನ ಅಂತ ಕೇಳುತ್ತಿದೆ. ನೀವು ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವದಿಸಿದ್ದೀರಿ. ಲೋಕಸಭಾ ಚುನಾವಣೆಯಲ್ಲೂ ಆಶೀರ್ವದಿಸೋ ಭರವಸೆ ಇದೆ.…
ನವದೆಹಲಿ: ದೆಹಲಿಯ ಭಾರತ್ ಮಂಟಪದಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ನೂರು ದಿನಗಳು ಪಕ್ಷಕ್ಕೆ ಮುಖ್ಯ ಎಂದು ಹೇಳಿದರು. ಅಧಿಕಾರಕ್ಕೆ ಬಂದ ನಂತರವೂ ಬಿಜೆಪಿ ಕಾರ್ಯಕರ್ತರು ಸಮಾಜಕ್ಕಾಗಿ ತುಂಬಾ ಮಾಡುತ್ತಾರೆ. ಅವರು ಹಗಲು ರಾತ್ರಿ ಓಡುತ್ತಾರೆ. ಅವರು ಅದನ್ನು ಭಾರತ ಮಾತೆಯ ವೈಭವಕ್ಕಾಗಿ ಮಾತ್ರ ಮಾಡುತ್ತಾರೆ ಎಂದು ಅವರು ಹೇಳಿದರು. ಇಲ್ಲಿ ಹಾಜರಿರುವ ಎಲ್ಲಾ ಕಾರ್ಮಿಕರನ್ನು ನಾನು ಅಭಿನಂದಿಸುತ್ತೇನೆ. ಬಿಜೆಪಿ ಕಾರ್ಯಕರ್ತರು ವರ್ಷದ ಪ್ರತಿದಿನವೂ ದೇಶ ಸೇವೆಗಾಗಿ ಏನನ್ನಾದರೂ ಮಾಡುತ್ತಲೇ ಇರುತ್ತಾರೆ. ಆದರೆ ಈಗ ಮುಂದಿನ 100 ದಿನಗಳು ಹೊಸ ಶಕ್ತಿ, ಹೊಸ ಉತ್ಸಾಹ, ಹೊಸ ಉತ್ಸಾಹ, ಹೊಸ ಆತ್ಮವಿಶ್ವಾಸ, ಹೊಸ ಉತ್ಸಾಹದೊಂದಿಗೆ ಕೆಲಸ ಮಾಡುತ್ತಾ ಸಾಗಬೇಕು. ಮುಂದಿನ 100 ದಿನ ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿದ ವೇಗದ ಬಗ್ಗೆ ಜಗತ್ತು ಮಾತನಾಡುತ್ತಿದೆ. ಇದು ಪ್ರತಿಯೊಂದು ಕ್ಷೇತ್ರದಲ್ಲೂ ಎತ್ತರವನ್ನು ಸಾಧಿಸಿದೆ. ಇವು…
ಮಂಡ್ಯ : ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದು ಈ ಬಾರಿ ಕನಿಷ್ಠ ಇಪ್ಪತ್ತು ಲೋಕಸಭಾ ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಅವರು ಇಂದು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಯವರು 28 ಕ್ಕೆ 28 ನ್ನೂ ಗೆಲ್ಲುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು. ಅವರಿಗೆ ಜನ ಈ ಬಾರಿ ಕಾಂಗ್ರೆಸ್ಸಿಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ತಿಳಿದಿದೆ. ಅದಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದರು. ಸ್ಥಳೀಯ ಮುಖಂಡರು ಸೂಚಿಸಿದವರಿಗೆ ಟಿಕೆಟ್ ಸ್ಥಳೀಯವಾಗಿ ಶಾಸಕರು, ಜಿಲ್ಲಾ ಬ್ಲಾಕ್ ಸಮಿತಿ ಅಧ್ಯಕ್ಷರು, ಮುಖಂಡರು ಯಾರನ್ನು ಸೂಚಿಸುತ್ತಾರೋ ಅವರಿಗೆ ಲೋಕಸಭಾ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಹೇಳಿದರು. ಡಾಲಿ ಧನಂಜಯಗೆ ಟಿಕೆಟ್ : ಈ ಬಗ್ಗೆ ಗೊತ್ತಿಲ್ಲ ಚಿತ್ರ ನಟ ಡಾಲಿ ಧನಂಜಯ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಮ್ಮ ಪಕ್ಷದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಇದರ ಬಗ್ಗೆ ನನಗೆ ಗೊತ್ತೂ…
ಮೇಷನಿಮ್ಮಂತೆಯೇ ಇತರರೂ ಸ್ವಾತಂತ್ರ್ಯ ಹಾಗೂ ಸಂತೋಷವಾಗಿರಬೇಕೆಂಬ ಮನೋಭಾವದಿಂದಾಗಿ ಹೆಚ್ಚಿನ ಗೌರವವನ್ನು ಪಡೆದುಕೊಳ್ಳುವಿರಿ. ತಾಯಿ ಜಗನ್ಮಾತೆ ದುರ್ಗಾಪರಮೇಶ್ವರಿಯ ಆರಾಧನೆ ಶುಭ ತರಲಿದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು…
ಶಿವಮೊಗ್ಗ: ಜಿಲ್ಲೆಯ ಶಿರಾಳಕೊಪ್ಪ ಬಸ್ ನಿಲ್ದಾಣದ ಸಮೀಪದಲ್ಲಿ ನಿಗೂಢ ವಸ್ತು ಸ್ಪೋಟಗೊಂಡ ಪರಿಣಾಮ, ಇಬ್ಬರು ಗಾಯಗೊಂಡಿರೋ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿರೋದಾಗಿ ತಿಳಿದು ಬಂದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಸ್ ನಿಲ್ದಾಣದ ಸಮೀಪ ಬ್ಯಾಗ್ ನಲ್ಲಿ ಇಟ್ಟಿದ್ದಂತ ವಸ್ತು ಸ್ಪೋಟಗೊಂಡಿದೆ. ಉಮೇಶ್ ಎಂಬಾತ ಇಟ್ಟುಹೋಗಿದ್ದಂತ ಬ್ಯಾಗ್ ನಲ್ಲಿದ್ದ ವಸ್ತುವೊಂದು ಸ್ಪೋಟಗೊಂಡ ಪರಿಣಾಮ ಬೆಡ್ ಶೀಟ್ ಮಾರಲು ಬಂದಿದ್ದಂತ ಆಂಥೋನಿ ಸೇರಿದಂತೆ, ಇಬ್ಬರು ಗಾಯಗೊಂಡಿರೋದ್ದಾರೆ. ಗಾಯಾಳುಗಳನ್ನು ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದಂತ ಶಿರಾಳಕೊಪ್ಪ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/power-india-use/ https://kannadanewsnow.com/kannada/fir-lodged-against-59-people-for-throwing-slippers-at-rambhapuri-seers-car/
ಬಾಲಕೋಟೆ: ಜಿಲ್ಲೆಯಲ್ಲಿ ರಂಭಾಪುರಿ ಶ್ರೀಗಳ ಕಾರಿನ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದಿದ್ದ ಘಟನೆ ನಿನ್ನೆ ನಡೆದಿತ್ತು. ಈ ಘಟನೆ ಸಂಬಂಧ ಮಹಿಳೆಯರು ಸೇರಿದಂತೆ 59 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆಯಲ್ಲಿ ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆದ ಘಟನೆ ಸಂಬಂಧ ಪುರುಷರು, ಮಹಿಳೆಯರು ಸೇರಿದಂತೆ 59 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ರಂಭಾಪುರಿ ಶ್ರೀಗಳ ಭಕ್ತರ ಕಡೆಯಿಂದ ದೂರು ನೀಡಲಾಗಿತ್ತು. ಈ ದೂರು ಆಧರಿಸಿ, ಕಲಾದಗಿ ಠಾಣೆಯ ಪೊಲೀಸರು ಮಹಿಳೆಯರು, ಪುರುಷರು ಸೇರಿದಂತೆ 59 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವಿವಾದ ಕೋರ್ಟ್ ನಲ್ಲಿ ಇರುವಾಗಲೇ ಕಾನೂನು ಸುವ್ಯವಸ್ಥೆ ಹಾಳು ಮಾಡಲಾಗಿದೆ. ಶಾಂತಿ ಕದಡುವಂತ ಉದ್ದೇಶದಿಂದ ಗಲಾಟೆ, ಶ್ರೀಗಳಿಗೆ ಅವಮಾನ ಮಾಡಲಾಗಿದೆ. ಶ್ರೀಗಳಿಗೆ ಆದಂತ ಅವಮಾನ ಎಲ್ಲವನ್ನು ಪರಿಗಣಿಸಿ, ಸಲ್ಲಿಸಲಾದಂತ ದೂರಿನ ಹಿನ್ನಲೆಯಲ್ಲಿ ಪೊಲೀಸರು FIR ದಾಖಲಿಸಿದ್ದಾರೆ. https://kannadanewsnow.com/kannada/power-india-use/ https://kannadanewsnow.com/kannada/several-injured-as-bag-explodes-at-shiralakoppa-in-shivamogga/