Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಶಿವಮೊಗ್ಗ: ಜಿಲ್ಲೆಯ ಸಾಗರದ ಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವಂತ ಬಸವನಹೊಳೆ ಹೊಸ ಸೇತುವೆಯು ಕಾಮಗಾರಿ ನಡೆಸುತ್ತಿದ್ದಂತ ಸಂದರ್ಭದಲ್ಲಿಯೇ ಸಾರ್ವೆ ಕುಸಿತಗೊಂಡಿದೆ. ಸೇತುವೆಯ ಸಾರ್ವೆ ಸ್ವಲ್ಪ ವಾಲಿ ಕುಸಿತಗೊಂಡ ಪರಿಣಾಮ, ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಶಿವಮೊಗ್ಗ ರಸ್ತೆಯಲ್ಲಿ ಹೊಸದಾಗಿ ಬಸವನ ಹೊಳೆಗೆ ಸೇತುವೆಯನ್ನು ನಿರ್ಮಿಸುವಂತ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 206ರಲ್ಲಿನ ಈ ಕಾಮಗಾರಿಯು ಕೆಲ ದಿನಗಳಿಂದ ನಡೆಯುತ್ತಿದೆ. ಇಂದು ಸ್ಲ್ಯಾಬ್ ಹಾಕುವಂತ ಸಂದರ್ಭದಲ್ಲಿ ಸೇತುವೆಯ ಸಾರ್ವೆ ಕುಸಿತಗೊಂಡ ಪರಿಣಾಮ, ಕಬ್ಬಿಣದ ಸರಳುಗಳೆಲ್ಲ ಬಗ್ಗಿ ಹೋಗಿದ್ದಾವೆ. ಒಂದು ವೇಳೆ ಸೇತುವೆ ಕೆಳಗಿನ ಸಾರ್ವೆ ಸಂಪೂರ್ಣ ಕುಸಿತಗೊಂಡಿದ್ದರೇ ಕಾಮಗಾರಿ ನಡೆಸುತ್ತಿದ್ದಂತ ಕಾರ್ಮಿಕರ ಜೀವ ಹಾನಿಯೇ ಸಂಭವಿಸುತ್ತಿತ್ತು ಎಂಬುದಾಗಿ ಪ್ರತ್ಯಕ್ಷ ದರ್ಶಿಗಳ ಮಾತು. ಇನ್ನೂ ಸ್ಲ್ಯಾಬ್ ಸಪೋರ್ಟಿಂಗ್ ಹಾಕೋದಲ್ಲಿ ನಿಲ್ಲಿಸಿದ್ದಂತ ಸಾರ್ವೆ ಕುಸಿತಗೊಂಡರೂ, ಅವುಗಳನ್ನು ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಬೇಕು. ಆದರೇ ಇಂಜಿನಿಯರ್ ಬಾಗಿದ, ಬೆಂಡಾಗಿರುವಂತ ಕಂಬಿಗಳ ನಡುವೆಯೂ ಸೇತುವೆ ಕಾಮಗಾರಿ ಮುಂದುವರೆಸಿದ್ದಾರೆ. ಇದರಿಂದ ಮುಂದೊಂದು ದಿನ ಬಹುದೊಡ್ಡ ಅನಾಹುತಕ್ಕೆ ದಾರಿ…

Read More

ಬೆಂಗಳೂರು: ಕಳೆದ ಒಂಬತ್ತು ತಿಂಗಳಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ನಡೆದಿದೆ ಎಂದು ನೀವು ಕೊಟ್ಟಿರುವ ಸಾವಿನ ಲೆಕ್ಕಾಚಾರವೇ ಕಪೋಲ‌ ಕಲ್ಪಿತ ಮತ್ತು ಉತ್ಪ್ರೇಕ್ಷೆ ಎಂಬುದಾಗಿ ಬಿಜೆಪಿಗರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸಾವಿನಲ್ಲಿ ರಾಜಕಾರಣ ನಡೆಸುವುದು ಹಾಗೂ ರಾಜಕೀಯ ಹುಡುಕುವುದೇ ಹೇಯ. ಇದು ನಾಗರಿಕ ಸಮಾಜ ಒಪ್ಪುವ ಸಂಗತಿಯಲ್ಲವೇ ಅಲ್ಲ ಎಂಬುದನ್ನು BJP ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ಮೊದಲು ತಿಳಿಸಬಯಸುತ್ತೇನೆ. ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆ ಎಂಬುದು ನಿರಂತರ ಪ್ರಕ್ರಿಯೆ. ಇಲ್ಲಿ ಸವಾಲು ಹಾಗೂ ಸಂವೇದನೆಗೆ ನಮ್ಮನ್ನು ನಿತ್ಯ ಒಡ್ಡಿಕೊಳ್ಳಬೇಕಾಗುತ್ತದೆ. ಈ ದಿಶೆಯಲ್ಲಿ ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರತಿದಿನವೂ ಹೆಜ್ಜೆ ಇಡುತ್ತಿದ್ದೇನೆ ಎಂದಿದ್ದಾರೆ. ಕಳೆದ ಒಂಬತ್ತು ತಿಂಗಳಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ನಡೆದಿದೆ ಎಂದು ನೀವು ಕೊಟ್ಟಿರುವ ಸಾವಿನ ಲೆಕ್ಕಾಚಾರವೇ ಕಪೋಲ‌ ಕಲ್ಪಿತ ಮತ್ತು ಉತ್ಪ್ರೇಕ್ಷೆ. 2019ರಿಂದ ಇಲ್ಲಿಯವರೆಗಿನ ಅಧಿಕೃತ ಅಂಕಿ ಸಂಖ್ಯೆಗಳನ್ನು ಅವಲೋಕಿಸಿದಾಗ ಈ ವರ್ಷ ಅತಿ ಕಡಿಮೆ ಬಾಣಂತಿ ಹಾಗೂ…

Read More

ಬೆಂಗಳೂರು: ಡಾ. ಪುನೀತ್‌ ರಾಜ್‌ಕುಮಾರ್‌ ಹೃದಯಜ್ಯೋತಿ ಯೋಜನೆಯ ಎರಡನೇ ಹಂತದಲ್ಲಿ ʼಟೆನೆಕ್ಟ್‌ ಪ್ಲಸ್‌ʼ ಚುಚ್ಚುಮದ್ದನ್ನು ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ. ಈ ಚುಚ್ಚುಮದ್ದು ಒಂದು ಬಾಟಲಿಗೆ ₹30 ಸಾವಿರ ದರ ಇದ್ದು, ಉಚಿತವಾಗಿ ನೀಡಲಾಗುತ್ತಿದೆ. ಹೃದಯಾಘಾತಕ್ಕೆ ಒಳಗಾದವರಿಗೆ ಇಸಿಜಿ ಪರೀಕ್ಷೆ ನಡೆಸಿ, ಚುಚ್ಚುಮದ್ದು ಅಗತ್ಯವಿದ್ದಲ್ಲಿ ನೀಡಲಾಗುತ್ತಿದೆ. ತೃತೀಯ ಹಂತದ ಚಿಕಿತ್ಸೆಗೆ ʼಹಬ್‌ ಆಸ್ಪತ್ರೆʼಗಳಾಗಿ ನೋಂದಾಯಿತವಾಗಿರುವ ಜಯದೇವ ಹೃದ್ರೋಗ ಸಂಸ್ಥೆ ಸೇರಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಇದೇ ಚುಚ್ಚುಮದ್ದುಗಳಿಗೆ ರವಾನಿಸಲಾಗುತ್ತಿದೆ. ಡಾ. ಪುನೀತ್‌ ರಾಜ್‌ಕುಮಾರ್‌ ಹೃದಯಜ್ಯೋತಿ ಯೋಜನೆಯಡಿ ಕಳೆದ ಒಂದು ತಿಂಗಳಲ್ಲಿ 348 ಮಂದಿಯ ಜೀವ ರಕ್ಷಿಸಲಾಗಿದೆ. ಹಬ್‌ ಮತ್ತು ಸ್ಪೋಕ್‌ ಮಾದರಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. 3 ಲಕ್ಷಕ್ಕೂ ಅಧಿಕ ಮಂದಿಗೆ ಇಸಿಜಿ ಪರೀಕ್ಷೆ ಮಾಡಿಸಲಾಗಿದೆ. https://twitter.com/KarnatakaVarthe/status/1862086916684079363 https://kannadanewsnow.com/kannada/dearness-allowance-for-state-government-employees-retirees-hiked-by-2-25/ https://kannadanewsnow.com/kannada/earthquake-strikes-kashmir-valley/

Read More

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತರ ತುಟ್ಟಿಭತ್ಯೆಯನ್ನು ಆಗಸ್ಟ್‌ 1 ರಿಂದ ಪೂರ್ವಾನ್ವಯವಾಗುವಂತೆ ಶೇ. 2.25 ರಷ್ಟು ಹೆಚ್ಚಳ ಮಾಡಲಾಗಿದೆ. ನೌಕರರು ತಮ್ಮ ಮೂಲ ವೇತನದ ಶೇ. 8.50 ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದು, ಆರ್ಥಿಕ ಇಲಾಖೆಯ ಹೊಸ ಆದೇಶದಿಂದಾಗಿ ಒಟ್ಟು ತುಟ್ಟಿಭತ್ಯೆ ಪ್ರಮಾಣ 10.75ಕ್ಕೆ ಏರಿಕೆಯಾಗಿದೆ. https://twitter.com/KarnatakaVarthe/status/1862108227305103595 https://kannadanewsnow.com/kannada/earthquake-strikes-kashmir-valley/ https://kannadanewsnow.com/kannada/breaking-ed-officials-on-duty-attacked-in-delhi-director-injured/

Read More

ಬೆಂಗಳೂರು: ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ವತಿಯಿಂದ ಆಯೋಜಿಸಲಾಗಿರುವ ಬಹುನಿರೀಕ್ಷಿತ “ಬಿಎಲ್‌ಆರ್‌ಹಬ್ಬ”ವು ಇದೇ ನವೆಂಬರ್‌ 30 ರಿಂದ ಆರಂಭವಾಗಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರಿಂದ “ನಮ್ಮ ಜಾತ್ರೆ” ಉದ್ಘಾಟನಾ ಸಮಾರಂಭದ ಮೂಲಕ ಅದ್ಧೂರಿ ಚಾಲನೆ ದೊರೆಯಲಿದೆ. ನವೆಂಬರ್‌ 30ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗ “ಬಿಎಲ್‌ಆರ್‌ ಹಬ್ಬ”ದ ಭಾಗವಾಗಿ ನಡೆಯಲಿರುವ “ನಮ್ಮ ಜಾತ್ರೆ”ಯ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ. ಈ ಮೂಲಕ ಕರ್ನಾಟಕದ ಶ್ರೀಮಂತ ಪರಂಪರೆ, ಕಲೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ. ಅಂದು ರಾಜ್ಯಾದ್ಯಂತ 50 ವೈವಿಧ್ಯಮಯ ಜಾನಪದ ನೃತ್ಯ ತಂಡಗಳಿಂದ 500 ಕ್ಕೂ ಹೆಚ್ಚು ಜಾನಪದ ನೃತ್ಯಗಾರರ ಸಮ್ಮೋಹನಗೊಳಿಸುವ ಪ್ರದರ್ಶನದೊಂದಿಗೆ ಉತ್ಸವ ಪ್ರಾರಂಭಗೊಳ್ಳಲಿದೆ. ವಿಶೇಷವಾಗಿ ಸಂಯೋಜಿಸಿದ ಸಂಗೀತಕ್ಕೆ ಹೊಂದಿಸಲಾದ ಈ ಪ್ರದರ್ಶನಗಳು ರಾಜ್ಯದ ನೃತ್ಯ ಪ್ರಕಾರಗಳ ಶ್ರೀಮಂತ ವೈವಿಧ್ಯತೆಯ ರೂಪಗಳನ್ನು ಅನಾವರಣಗೊಳಿಸಲಿವೆ. ವಿಧಾನಸೌಧದ ಭವ್ಯವಾದ ಮೆಟ್ಟಿಲುಗಳ ಮೇಲೆ ಈ ರೋಮಾಂಚಕ ದೃಶ್ಯವನ್ನು ವೀಕ್ಷಿಸಲು ನಾಗರಿಕರನ್ನು ಆಹ್ವಾನಿಸಲಾಗಿದ್ದು, ನಮ್ಮ ಪರಂಪರೆ, ಆಚರಣೆಗಳನ್ನು ಕಣ್ತುಂಬಿಸಿಕೊಳ್ಳಲು ಅವಕಾಶ ನೀಡಲಿದೆ. ಊದ್ಘಾಟನೆ…

Read More

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ನಟ ದರ್ಶ್ ಪರ ವಕೀಲರ ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು, ನಾಳೆಗೆ ಅರ್ಜಿಯ ವಿಚಾರಣೆಯನ್ನು ಮುಂದೂಡಿತು. ಇಂದು ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಲಾಯಿತು. ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಆರಂಭಿಸಿ ಎ.13 ದೀಪಕ್ ಕುಮಾರ್ ಶೆಡ್ ನಲ್ಲಿ ಇವರು ಕಾರ್ಮಿಕರು. ಇವರಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಶೆಡ್ ಅನ್ನು ದೀಪಕ್ ಕುಮಾರ್ ಬಳಕೆ ಮಾಡುತ್ತಿದ್ದನು. ಈತನೂ ಹಲ್ಲೆ ಮಾಡಿದವರಲ್ಲಿ ಒಬ್ಬನಾಗಿದ್ದಾನೆ ಎಂದರು. 6 ಜನರನ್ನು ಪ್ರತ್ಯಕ್ಷ ಸಾಕ್ಷಿ ಎಂದು ಪ್ರಾಸಿಕ್ಯೂಷನ್ ಉಲ್ಲೇಖಿಸಿದೆ. ದರ್ಶಿಗಳೆಂದು ಉಲ್ಲೇಖಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿ ಪುನೀತ್ ಎಂಬುದಾಗಿ ಹೆಸರಿಸಲಾಗಿದೆ. ಈತನೇ ಪೋಟೋ ತೆಗೆದಿರುವುದಾಗಿ ಆರೋಪಿಯೊಬ್ಬನ ಹೇಳಿಕೆ ಇದೆ. ಈತನೇ ಪವಿತ್ರಳನ್ನು ಮನೆಗೆ ಕರೆದುಕೊಂಡು ಹೋಗಿದ್ದನು. ಕೃತ್ಯದ ಬಳಿಕ…

Read More

ಬೆಂಗಳೂರು: ಜನವರಿ 1, 2025 ರಿಂದ ಜಾರಿಗೆ ಬರುವಂತೆ ದಕ್ಷಿಣ ಮಧ್ಯ ರೈಲ್ವೆ ತನ್ನ ಒಡೆತನದ ಹತ್ತು ಪ್ಯಾಸೆಂಜರ್ ವಿಶೇಷ ರೈಲುಗಳನ್ನು ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಮರು ಸಂಖ್ಯೆ ನೀಡಲು ಅಧಿಸೂಚನೆ ಹೊರಡಿಸಿದೆ. ಬದಲಾವಣೆಗಳ ವಿವರಗಳು ಈ ಕೆಳಗಿನಂತಿವೆ: 1. ಗುಂತಕಲ್-ಹಿಂದೂಪುರ-ಗುಂತಕಲ್ ರೈಲು ಸಂಖ್ಯೆ 07693/07694 ಈಗ 77213/77214 ಎಂದು ಮರುಸಂಖ್ಯೆ ನೀಡಲಾಗಿದೆ. 2. ತಿರುಪತಿ-ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ ರೈಲು ಸಂಖ್ಯೆ 07657/07658 ಈಗ 57401/57402 ಎಂದು ಮರುಸಂಖ್ಯೆ ನೀಡಲಾಗಿದೆ. 3. ತಿರುಪತಿ-ಕದಿದೇವರಪಲ್ಲಿ-ತಿರುಪತಿ ರೈಲು ಸಂಖ್ಯೆ 07589/07590 ಈಗ 57405/57406 ಎಂದು ಮರುಸಂಖ್ಯೆ ನೀಡಲಾಗಿದೆ. 4. ಚಿಕ್ಕಜಾಜೂರು-ಗುಂತಕಲ್-ಚಿಕ್ಕಜಾಜೂರು ರೈಲು ಸಂಖ್ಯೆ 07585/07586 ಈಗ 57416/57415 ಎಂದು ಮರುಸಂಖ್ಯೆ ಮಾಡಲಾಗಿದೆ. 5. ವಿಜಯಪುರ-ರಾಯಚೂರು-ವಿಜಯಪುರ ರೈಲು ಸಂಖ್ಯೆ 07663/07664 ಈಗ 57662/57661 ಎಂದು ಮರುಸಂಖ್ಯೆ ಮಾಡಲಾಗಿದೆ. ಪ್ರಯಾಣಿಕರು ಈ ಮಾರ್ಪಾಡುಗಳನ್ನು ಗಮನದಲ್ಲಿಟ್ಟುಕೊಂಡು ಸುಗಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಬೇಕು. ರಾಜ್ಯದ ‘ದ್ವಿತೀಯ PUC ವಿದ್ಯಾರ್ಥಿ’ಗಳಿಗೆ ಮಹತ್ವದ ಮಾಹಿತಿ: ‘ಕೌಶಲ್ಯಾಭಿವೃದ್ಧಿ ತರಬೇತಿ’ಗೆ ಅರ್ಜಿ ಆಹ್ವಾನ – Kannada News |…

Read More

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಗುರುವಾರ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲೂ ಭೂಕಂಪದ ಅನುಭವವಾಗಿದೆ. ಅಫ್ಘಾನಿಸ್ತಾನದಲ್ಲಿ ಉಂಟಾದಂತ 5.0 ತೀವ್ರತೆಯ ಭೂಕಂಪನದ ಕಾರಣ, ಭಾರತದ ಕಾಶ್ಮೀರ ಕಣಿವೆಯಲ್ಲೂ ಭೂಮಿ ಕಂಪಿಸಿದಂತ ಅನುಭವ ಉಂಟಾಗಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/important-information-for-second-puc-students-in-the-state-applications-invited-for-skill-development-training/ https://kannadanewsnow.com/kannada/breaking-ed-officials-on-duty-attacked-in-delhi-director-injured/

Read More

ಬೆಂಗಳೂರು : ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಈ ನಿಟ್ಟಿನಲ್ಲಿ 2023-2024 ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇಕಡ 70ಕ್ಕಿಂತ ಹೆಚ್ಚು ಅಂಕ ಪಡೆದು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ದೇಶದ ಅತಿ ದೊಡ್ಡ ಸಾಫ್ಟ್‌ವೇರ್‌ ಸಂಸ್ಥೆಗಳಲ್ಲಿ ಒಂದಾಗಿರುವ ಎಚ್‌.ಸಿ.ಎಲ್‌-ಟೆಕ್ ಬೀ ಸಂಸ್ಥೆಯು ವಿದ್ಯಾರ್ಥಿಗಳಿಗೆ ತರಬೇತಿ, ಉದ್ಯೋಗಾವಕಾಶ ಮತ್ತು ಹಣಕಾಸಿನ ನೆರವಿನೊಂದಿಗೆ ಉನ್ನತ ಪದವಿ ಶಿಕ್ಷಣ ಪಡೆಯಲು ಅವಕಾಶವನ್ನು ಕಲ್ಪಿಸಿದೆ. ಈ ಕುರಿತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದೊಂದಿಗೆ (KSDC) ಎಚ್‌ಸಿಎಲ್‌-ಟೆಕ್ ಬೀ ಸಂಸ್ಥೆಯು ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ. ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಕನಗವಲ್ಲಿ ಮತ್ತು ಎಚ್‌ಸಿಎಲ್‌-ಟೆಕ್ ಬೀ ರಾಜ್ಯ ಮುಖ್ಯಸ್ಥರಾದ ಆರ್. ಪಾಪಿರೆಡ್ಡಿ ಅವರು ಇತ್ತೀಚಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಈ ಮೂಲಕ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನೇತರ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಲು ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ…

Read More

ಶಿವಮೊಗ್ಗ : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 2024-25ನೇ ಸಾಲಿನ ಡ್ರೋನ್ ಆಧಾರಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಪರಿಶಿಷ್ಟ ಪಂಗಡದ ಯುವಕ/ ಯುವತಿಯರಿಗೆ ಡ್ರೋನ್ ತರಬೇತಿ ನೀಡಲು ಯೋಚಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಡಿ.10 ರೊಳಗಾಗಿ ಸಲ್ಲಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕಿ ಲತಾ ಸಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.:08182-200266 / 9482762350 ಗಳನ್ನು ಸಂಪರ್ಕಿಸುವುದು. https://kannadanewsnow.com/kannada/breaking-ed-officials-on-duty-attacked-in-delhi-director-injured/ https://kannadanewsnow.com/kannada/hemant-soren-takes-oath-as-jharkhand-cm/

Read More