Author: kannadanewsnow09

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟೆ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಎರಡು ವಾಹನಗಳು ಭಾರಿ ಗುಂಡಿನ ದಾಳಿಗೆ ಒಳಗಾಗಿದ್ದು, ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಸೇನೆಯ ಮೇಲೆ ಸರಣಿ ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾದ ಈ ಪ್ರದೇಶದಲ್ಲಿ ಈ ವರ್ಷ ಸಶಸ್ತ್ರ ಪಡೆಗಳ ಮೇಲೆ ನಡೆದ ಮೊದಲ ಪ್ರಮುಖ ದಾಳಿ ಇದಾಗಿದೆ. ಈ ದಾಳಿಯಲ್ಲಿ ಯಾವುದೇ ಹಾನಿ ಅಥವಾ ಸಾವುನೋವು ವರದಿಯಾಗಿಲ್ಲ. ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶಕ್ಕೆ ಬಲವರ್ಧನೆಯನ್ನು ರವಾನಿಸಲಾಗಿದ್ದು, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ನಡೆಯುತ್ತಿವೆ. https://twitter.com/ANI/status/1786758948084752456 https://kannadanewsnow.com/kannada/good-news-for-job-seekers-application-deadline-for-1000-va-recruitment-extended-till-may-15/ https://kannadanewsnow.com/kannada/sit-officials-arrive-at-former-pm-hd-deve-gowdas-residence-after-son/

Read More

ಹುಟ್ಟಿನಿಂದ ಸಾಯುವವರೆಗೂ ನಾವೆಲ್ಲರೂ ದಿನವೂ ಹೊಸದನ್ನು ಕಲಿಯಲೇಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಆದರೆ, “ಕಲಿಯುವುದು ಕೈಯಷ್ಟು ದೊಡ್ಡದು, ಆದರೆ ಕಲ್ಲಿನಷ್ಟು ದೊಡ್ಡದು” ಎಂಬ ಅವೈ ಪಟ್ಟಿಯ ಮಾತಿನಂತೆ, ನಾವು ಎಷ್ಟೇ ಅಧ್ಯಯನ ಮಾಡಿದರೂ, ಈ ಜಗತ್ತಿನಲ್ಲಿ ನಾವು ತಿಳಿದುಕೊಳ್ಳಬೇಕಾದ ಹಲವಾರು ವಿಷಯಗಳಿವೆ. ಈ ಮಂತ್ರದ ಬಗ್ಗೆ ನಾವು ಈ ಪೋಸ್ಟ್‌ನಲ್ಲಿ ನೋಡಲಿದ್ದೇವೆ ನಾವು ತಿಳಿದುಕೊಳ್ಳಲು ಬಯಸುವ ಜ್ಞಾನ ಮತ್ತು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಯಾವ ಮಂತ್ರವನ್ನು ಬಳಸಬೇಕು ಎಂಬುದನ್ನು ನಾವು ನೋಡಲಿದ್ದೇವೆ . ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ…

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೌಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಇಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಹೊಳೆನರಸೀಪುರ ನಿವಾಸದಲ್ಲಿ ಸಂತ್ರಸ್ತೆಯೊಂದಿಗೆ ತೆರಳಿದ್ದಂತ ಎಸ್ಐಟಿ ಅಧಿಕಾರಿಗಳು, ಸ್ಥಳ ಮಹಜರು ನಡೆಸಿದ್ದರು. ಈಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ನಿವಾಸಕ್ಕೂ ಆಗಮಿಸಿದ್ದಾರೆ. ಕಾರಣ ಹೆಚ್.ಡಿ ರೇವಣ್ಣ ಅವರು ದೇವೇಗೌಡ ನಿವಾಸದಲ್ಲಿ ಇರೋ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ದೊರೆತಿರೋದಾಗಿದೆ. ಹೀಗಾಗಿ ಹುಡುಕಾಡೋದಕ್ಕಾಗಿ ಆಗಮಿಸಿದ್ದರು. ಅಂತಿಮವಾಗಿ ಹೆಚ್.ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿದಂತ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದ್ರೇ ಕೋರ್ಟ್ ವಾದ ಪ್ರತಿವಾದವನ್ನು ಆಲಿಸಿದ ನಂತ್ರ, ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ನಕಾರ ವ್ಯಕ್ತ ಪಡಿಸಿತ್ತು. ಈ ಹಿನ್ನಲೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಬಂಧನದ…

Read More

ಬೆಂಗಳೂರು : ಕಳೆದ ಗುರುವಾರ (ಮೇ 3) ಸುರಿದ ಧಾರಾಕಾರ ಮಳೆಗೆ ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 305 ವಿದ್ಯುತ್ ಕಂಬಗಳು ಧರೆಗುರುಳಿದ್ದು, 57 ವಿದ್ಯುತ್ ಪರಿವರ್ತಕಗಳು (ಟಿಸಿ) ಹಾನಿಗೊಳಗಾಗಿವೆ. ಭಾರೀ ಗಾಳಿ- ಮಳೆಗೆ ವಿದ್ಯುತ್ ಮೂಲಸೌಕರ್ಯ ಹಾನಿಗೊಂಡಿದ್ದು, ದುರಸ್ಥಿ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ವಿದ್ಯುತ್ 305 ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ 25.62 ಲಕ್ಷ ರೂ. ಹಾಗೂ ಟಿಸಿಗಳು ಹಾನಿಗೊಳಗಾಗಿದ್ದರಿಂದ 86.20 ಲಕ್ಷ ರೂ. ನಷ್ಟವಾಗಿದೆ. ಮತ್ತು 18 ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಯಾಗಿದ್ದು, 6.67 ಲಕ್ಷ ರೂ. ನಷ್ಟವಾಗಿದೆ. ಒಟ್ಟಾರೆಯಾಗಿ ಗುರುವಾರ ಸುರಿದ ಮಳೆಗೆ ಬೆಸ್ಕಾಂಗೆ 118.50 ಲಕ್ಷ ರೂ. ನಷ್ಟ ಉಂಟಾಗಿದೆ. ಬೆಸ್ಕಾಂ ಅಭಿಯಂತರರು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ. ಬಹುತೇಕ ಕಡೆಗಳಲ್ಲಿ ವಿದ್ಯುತ್ ಪೂರೈಕೆ ಪುನಾರಂಭಗೊಂಡಿದೆ. ಕೆಲ ಪ್ರದೇಶದಲ್ಲಿ ಭಾರೀ ಗಾಳಿಗೆ ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಮರ ಹಾಗೂ ಕೊಂಬೆಗಳನ್ನು…

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೌಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಇಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಹೊಳೆನರಸೀಪುರ ನಿವಾಸದಲ್ಲಿ ಸಂತ್ರಸ್ತೆಯೊಂದಿಗೆ ತೆರಳಿದ್ದಂತ ಎಸ್ಐಟಿ ಅಧಿಕಾರಿಗಳು, ಸ್ಥಳ ಮಹಜರು ನಡೆಸಿದ್ದರು. ಈಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ನಿವಾಸಕ್ಕೂ ಆಗಮಿಸಿದ್ದಾರೆ. ಕಾರಣ ಹೆಚ್.ಡಿ ರೇವಣ್ಣ ಅವರು ದೇವೇಗೌಡ ನಿವಾಸದಲ್ಲಿ ಇರೋ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ದೊರೆತಿರೋದಾಗಿದೆ. ಹೀಗಾಗಿ ಹುಡುಕಾಡೋದಕ್ಕಾಗಿ ಆಗಮಿಸಿದ್ದಾರೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿದಂತ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದ್ರೇ ಕೋರ್ಟ್ ವಾದ ಪ್ರತಿವಾದವನ್ನು ಆಲಿಸಿದ ನಂತ್ರ, ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ನಕಾರ ವ್ಯಕ್ತ ಪಡಿಸಿತ್ತು. ಈ ಹಿನ್ನಲೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಬಂಧನದ ಭೀತಿ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಮಾಜಿ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ಮಾಹಿತಿ ಆಯೋಗದ ಹಂಗಾಮಿ ಮುಖ್ಯ ಮಾಹಿತಿ ಆಯುಕ್ತರಾಗಿ ಡಾ.ಹೆಚ್.ಸಿ ಸತ್ಯನ್ ಅವರನ್ನು  ನೇಮಿಸಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದ್ದು, ಕರ್ನಾಟಕ ಮಾಹಿತಿ ಹಕ್ಕು ನಿಯಮಗಳು, 2005 ರ ನಿಯಮ 12 ಎ ಅಡಿಯಲ್ಲಿ, ಕರ್ನಾಟಕ ರಾಜ್ಯಪಾಲ ಐ.ಥಾವರ್ ಚಂದ್ ಗೆಹ್ಲೋಟ್ ಅವರು 06.05.2024 ರಿಂದ ಜಾರಿಗೆ ಬರುವಂತೆ ಹೊಸ ರಾಜ್ಯ ಮುಖ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡುವವರೆಗೆ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಯ ಉಸ್ತುವಾರಿ ರಾಜ್ಯ ಮಾಹಿತಿ ಆಯುಕ್ತ ಡಾ.ಎಚ್.ಸಿ.ಸತ್ಯನ್ ಅವರನ್ನು ನೇಮಕ ಮಾಡಲಾಗಿದೆ ಎಂದಿದೆ. https://kannadanewsnow.com/kannada/state-government-issues-advisory-for-pre-monsoon-and-pre-monsoon-preparations-for-2024/ https://kannadanewsnow.com/kannada/good-news-for-job-seekers-application-deadline-for-1000-va-recruitment-extended-till-may-15/

Read More

ಬೆಂಗಳೂರು: ರಾಜ್ಯ ಸರ್ಕಾರದಿದಂ 2024ನೇ ಸಾಲಿನ ಮುಂಗಾರು, ಪೂರ್ವ ಮುಂಗಾರು ಮಳೆ ಅವಧಿಯ ಪೂರ್ವ ಸಿದ್ಧತೆ ಕುರಿತು ಸಲಹೆ ಸೂಚನೆಗಳನ್ನು ಪ್ರಕಟಿಸಲಾಗಿದೆ. ಇಂದು ರಾಜ್ಯ ಸರ್ಕಾರದಿಂದ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರಲ್ಲಿ ಏಪ್ರಿಲ್.15, 2024ರಂದು ಭಾರತೀಯ ಹವಾಮಾನ ಇಲಾಖೆಯು ಹೊರಡಿಸಿರ ನೈರುತ್ಯ ಮಾನ್ಸೂನ್-2024ರ ಮೊದಲ ಹಂತದ ಕಾರ್ಯಾಚರಣೆಯ ದೀರ್ಘ ವ್ಯಾಪ್ತಿಯ ಮುನ್ಸೂಚನೆಯ ಪ್ರಕಾರಣ ಒಟ್ಟಾರೆಯಾಗಿ ದೇಶಾದ್ಯಂತ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿ ಇರುತ್ತದೆ ಎಂದಿದೆ ಎಂದು ತಿಳಿಸಿದೆ. ಮಾನ್ಸೂನ್ ಮನೆ ದೀರ್ಘಾವಧಿ ಸರಾಸರಿಯು ಶೇ.104ಕ್ಕಿಂತ ಹೆಚ್ಚು ಇದೆ. ಪ್ರಾದೇಶಿಕ ವಿತರಣೆಯು ಕರ್ನಾಟಕ ಸೇರಿದಂತೆ ಭಾರತದ ಪರ್ಯಾಯ ಪ್ರೇದಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆಯನ್ನು ಸೂಚಿಸುತ್ತದೆ ಎಂದಿದೆ. ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಉಂಟಾದಲ್ಲಿ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಹಾನಿಯನ್ನು ತಗ್ಗಿಸಲು ಮುಂಗಾರು ಪೂರ್ವದಲ್ಲಿ ಪೂರ್ವ ಸಿದ್ಧತೆ, ಸನ್ನದ್ದತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹೀಗಾಗಿ ಕೆಲ ಸಲಹೆ ಸೂಚನೆಗಳನ್ನು ಹೊರಡಿಸಿದೆ. ಆ ಸಲೆಹೆ ಸೂಚನೆಗಳು ಈ ಕೆಳಗಿನ ಆದೇಶದಲ್ಲಿದೆ ಓದಿ. https://kannadanewsnow.com/kannada/if-bjp-comes-to-power-for-the-third-time-they-will-finish-off-minorities-zameer-ahmed/ https://kannadanewsnow.com/kannada/court-reserves-order-on-anticipatory-bail-plea-of-former-minister-hd-revanna/

Read More

ಬಾಗಲಕೋಟೆ: ಈಗ ನಡೆಯುತ್ತಿರುವಂತ ಲೋಕಸಭಾ ಚುನಾವಣೆ ದೇಶ ಬಚಾವ್ ಎಲೆಕ್ಷನ್ ಆಗಿದೆ. ಈಗಾಗಲೇ ಎರಡು ಬಾರಿ ಬಿಜೆಪಿ ಆಡಳಿತ ಮಾಡಿದೆ. ಮೂರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅವರು ಅಲ್ಪ ಸಂಖ್ಯಾತರನ್ನು ಮುಗಿಸುತ್ತಾರೆ ಎಂಬುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಬಿಜೆಪಿ ಒಳಗೆ ಒಂದು ರೋಗವಿದೆ. ಅದೇ ಬಿಜೆಪಿ ಅಂದ್ರೆ ಕ್ಯಾನ್ಸರ್ ಇದ್ದಂತೆ. ಫಸ್ಟ್ ಟೈಮ್ ಕ್ಯಾನ್ಸರ್ ಎಂಬುದು ಗೊತ್ತಾದ್ರೆ ಉಳಿಯುತ್ತಾರೆ. ಸೆಕೆಂಡ್ ಸ್ಟೇಚ್ ಇದ್ದಾಗಲೂ ಉಳಿಸಬಹುದು. ಆದ್ರೇ ಮೂರನೇ ಬಾರಿ ಬಂದ್ರೆ ನಿಮ್ಮನ್ನೇ ತಗೊಂಡು ಹೋಗುತ್ತೆ ಎಂದರು. ಬಾಗಲಕೋಟೆ ಕಾಂಗ್ರೆಸ್ ಭ್ಯರ್ಥಿ ಸಂಯುಕ್ತಾ ಶಿವಾನಂದ ಪಾಟೀಲ್ ನನ್ನ ಪುತ್ರಿ ಇದದಂತೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿ. ಈ ಬಾರಿ ದೇಶವನ್ನು ಬಿಜೆಪಿಯಿಂದ ಬಚಾವ್ ಮಾಡೋದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಕರೆ ನೀಡಿದರು. https://kannadanewsnow.com/kannada/bjp-will-take-out-bike-rallies-padayatras-in-all-14-constituencies-sunil-kumar/ https://kannadanewsnow.com/kannada/court-reserves-order-on-anticipatory-bail-plea-of-former-minister-hd-revanna/

Read More

ಬೆಂಗಳೂರು: ಕರ್ನಾಟಕದ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯ ಪ್ರಚಾರ ಕಾರ್ಯವು ನಾಳೆ (ಮೇ 5) ಕೊನೆಗೊಳ್ಳಲಿದೆ. ಇದೇ 7ರಂದು ಮತದಾನ ನಡೆಯಲಿದ್ದು, ಎಲ್ಲ ಪ್ರಮುಖರು, ಕಾರ್ಯಕರ್ತರು ಜನರ ಮನೆ- ಮನಗಳನ್ನು ತಲುಪಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ. ಮತ್ತೊಮ್ಮೆ ವಿಶ್ವವಂದ್ಯ ನಾಯಕರಾದ ನರೇಂದ್ರ ಮೋದಿಜೀ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಪ್ರಚಾರ ಕಾರ್ಯಗಳಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಯಂಸ್ಫೂರ್ತಿಯಿಂದ ಭಾಗವಹಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಮೇ 5ರ ಬೆಳಿಗ್ಗೆ ಪ್ರಚಾರ ಪ್ರಮುಖರು ಸಾಮಾಜಿಕ ಕಾರ್ಯಕರ್ತರ ಮನೆಯಲ್ಲಿ ಉಪಾಹಾರ ಮಾಡಲಿದ್ದಾರೆ. ಬಳಿಕ ಸ್ಥಳೀಯ ಪ್ರಮುಖ ಮಹನೀಯರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸುವರು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾಗೋಷ್ಠಿಗಳನ್ನು ಆಯೋಜಿಸಲಾಗುವುದು. ಮನೆ ಮನೆಗಳ ಸಂಪರ್ಕ, ಬೈಕ್ ರ್ಯಾಲಿ ಮತ್ತು ಪಾದಯಾತ್ರೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ವಿವರ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು…

Read More

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನೇ ಗೆದ್ದ ಹಾಗೆ ಎಂದು ಸಿ.ಎಂ.ಸಿದ್ದರಾಮಯ್ಯ ಘೋಷಿಸಿದರು. ದಾವಣಗೆರೆಯಲ್ಲಿ ನಡೆದ ಪ್ರಜಾಧ್ವನಿ ಜನಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಕರೆ ನೀಡಿ ಮಾತನಾಡಿದರು. ಹತ್ತತ್ತು ವರ್ಷ ಪ್ರಧಾನಿಯಾಗಿ ಮೋದಿ ಮಾಡಿದ್ದೇನು ಎನ್ನುವುದನ್ನು ಭಾರತೀಯರಿಗೆ ತಿಳಿಸಿ ಮತ ಕೇಳುತ್ತಿಲ್ಲ. ಬದಲಿಗೆ ಹೊಸ ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬಂದಿದ್ದಾರೆ ಎಂದರು. ಇಂಥಾ ಬಿಜೆಪಿಗೆ ಅನುಕೂಲ ಮಾಡಿಕೊಡಲು ಪಕ್ಷೇತರ ಅಭ್ಯರ್ಥಿಯಾಗಿ ವಿನಯ್ ಸ್ಪರ್ಧಿಸುತ್ತಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಗೆ ಓಟು ಹಾಕಿದರೆ,ಬಿಜೆಪಿಗೆ ಓಟು ಹಾಕಿದಂತೆ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ನೀವುಗಳು ಹಾಕುವ ಪ್ರತೀ ಓಟು ನನಗೇ ಹಾಕಿದಂತೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಕಣದಲ್ಲಿ ಇದ್ದೇನೆ ಎಂದುಕೊಂಡು ಮತ ಹಾಕಿ ಭರ್ಜರಿ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡಿದರು. 15 ಲಕ್ಷ ರೂಪಾಯಿ ಪ್ರತಿಯೊಬ್ಬ ಭಾರತೀಯರ ಖಾತೆಗೆ ಹಾಕ್ತೀನಿ ಎಂದು ನಂಬಿಸಿದ ಮೋದಿ ಈ ಹತ್ತು ವರ್ಷದಲ್ಲಿ…

Read More