Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದ ಕಾರಣ, ತಾಯಿ-ಮಗಳ ನಡುವೆ ವಾಗ್ವಾದ ಉಂಟಾಗಿದೆ. ವಾಗ್ವಾದ ತಾರಕಕ್ಕೇರಿದ ಪರಿಣಾಮ ತಾಯಿ-ಮಗಳು ಪರಸ್ವರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ಘಟನೆಯಲ್ಲಿ ಪುತ್ರಿ ತೀವ್ರ ರಕ್ತಸ್ತ್ರಾವದೊಂದಿಗೆ ಸಾವನ್ನಪ್ಪಿರೋ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಹಾಗೂ ಪುತ್ರಿಯ ನಡುವೆ ವಾಗ್ವಾದ ಉಂಟಾಗಿದೆ. ವಾಗ್ವಾದ ತರಾಕಕ್ಕೇರಿ ತಾಯಿ ಪದ್ಮಜಾ ಹಾಗೂ ಪುತ್ರಿ ಸಾಹಿತಿ(18) ಪರಸ್ಪರ ಚಾಕುವಿನಿಂದ ಇರಿದಾಡಿಕೊಂಡಿದ್ದಾರೆ. ಪದ್ಮಜಾಗೆ 4-5 ಬಾರಿ ಪುತ್ರಿ ಸಾಹಿತಿ ಇರಿದಿದ್ದರೇ, ಪ್ರತಿಯಾಗಿ ಪದ್ಮಜಾ ಪುತ್ರಿಗೆ ಇರಿದ ಪರಿಣಾಮ ತೀವ್ರ ರಕ್ತ ಸ್ತ್ರಾವದೊಂದಿಗೆ ಮನೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಸದ್ಯ ತಾಯಿ ಪದ್ಮಜಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/cm-siddaramaiah-pays-last-respects-to-sreenivasa-prasad-to-be-cremated-with-state-honours-tomorrow/ https://kannadanewsnow.com/kannada/baba-ramdev-crossed-red-line-with-false-statement-of-covid-19-cure-ima-president/
ಮೈಸೂರು: ದಿವಂಗತ ಶ್ರೀನಿವಾಸ್ ಪ್ರಸಾದ್ ರವರ ನಿಧನಕ್ಕೆ ಗೌರವ ಸೂಚಕವಾಗಿ ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು . ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಚಾಮರಾಜನಗರದ ಹಾಲಿ ಸಂಸದರಾಗಿದ್ದ ದಿವಂಗತ ಶ್ರೀನಿವಾಸ್ ಪ್ರಸಾದ್ ರವರ ಪ್ರಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು. 15 ದಿನಗಳ ಹಿಂದೆ ಭೇಟಿಯಾಗಿದ್ದಾಗ ರಾಜಕೀಯ ಮಾತನಾಡಿದೆವು. ರಾಜಕೀಯದಲ್ಲಿ ಸಂತೋಷದ ಕ್ಷಣ ಬಹಳ ಕಡಿಮೆ. ಹೋರಾಟ ಮಾಡುವಾಗ ಸಂತೋಷದ ಕ್ಷಣಗಳು ಕಡಿಮೆ. ಬಹಳ ವರ್ಷ ಗಳ ನಂತರ ಭೇಟಿಯಾಗಿದ್ದ ಕಾರಣ ಸಂತೋಷವಾಗಿದೆ ಎಂದು ಹೇಳಿರಬಹುದು ಎಂದು ಮುಖ್ಯಮಂತ್ರಿಗಳು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜೊತೆಯಲ್ಲಿಯೇ ರಾಜಕಾರಣ ಮಾಡಿದವರು, ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಜನತಾ ಪಕ್ಷ ಹಾಗೂ ಕಾಂಗ್ರೆಸ್ ನಲ್ಲಿ ಒಟ್ಟಿಗಿದ್ದವರನ್ನು ಕಳೆದುಕೊಂಡಾಗ ಬಹಳ ದುಃಖವಾಗುತ್ತದೆ ಎಂದರು. ದಮನಿತರ ಧ್ವನಿಯಾಗಿ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಶ್ರೀನಿವಾಸ ಪ್ರಸಾದ್ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ…
ವಿಜಯನಗರ: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಎಂ.ಪಿ ಪ್ರಕಾಶ್ ಅವರ ಧರ್ಮ ಪತ್ನಿ ರುದ್ರಾಂಬ(78) ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಮಾಜಿ ಡಿಸಿಎಂ ದಿ. ಎಂ.ಪಿ ಪ್ರಕಾಶ್ ಅವರ ಪತ್ನಿ ರುದ್ರಾಂಬ ಇಂದು ಸಂಜೆ 7.30ರ ವೇಳೆಗೆ ಹೂವಿನ ಹಡಗಲಿಯಲ್ಲಿ ವಿಧಿವಶರಾಗಿದ್ದಾರೆ. ಇಂದು ನಿಧನರಾದಂತ ಎಂ.ಪಿ ಪ್ರಕಾಶ್ ಅವರ ಪತ್ನಿ ರುದ್ರಾಂಬ ಅವರ ಅಂತ್ಯಕ್ರಿಯೆಯನ್ನು ನಾಳೆ ಲಿಂಗಾಯತ ಸಂಪ್ರದಾಯದಂತೆ ನಾಳೆ ಸಂಜೆ 4.30ಕ್ಕೆ ದಿ. ಎಂ.ಪಿ ಪ್ರಕಾಶ್ ಅವರ ಸಮಾಧಿಯ ಪಕ್ಕದಲ್ಲೇ ಜರುಗಲಿದೆ ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. https://kannadanewsnow.com/kannada/uttarakhand-govt-cancels-licence-of-15-products-sold-by-patanjali-ayurved/ https://kannadanewsnow.com/kannada/baba-ramdev-crossed-red-line-with-false-statement-of-covid-19-cure-ima-president/
ಬೆಂಗಳೂರು: ಬಿಜೆಪಿ ನಾಯಕರೇ ಏಕೆ ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಎಕ್ಸ್ ಮಾಡಿ ಪ್ರಶ್ನಿಸಿದೆ. ಈ ಕುರಿತಂತೆ ಎಕ್ಸ್ ಮಾಡಿರುವಂತ ಕಾಂಗ್ರೆಸ್, ಅಂದು – ಪ್ರಜ್ವಲ್, ರೇವಣ್ಣನ ಮಗ ಅಲ್ಲ, ನನ್ನ ಮಗ. ಇಂದು – ಅವರೇ ಬೇರೆ, ನಾವೇ ಬೇರೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಅಂದು – “ಪ್ರಜ್ವಲ್ ರೇವಣ್ಣನನ್ನು ಬೆಂಬಲಿಸಿ ನನಗೆ ಶಕ್ತಿ ತುಂಬಿ” ಇಂದು – ಮೌನವನ್ನು ಪ್ರಧಾನಿ ನರೇಂದ್ರ ಮೋದಿಯವರು ವಹಿಸಿದ್ದಾರೆ ಎಂಬುದಾಗಿ ಹೇಳಿದೆ. ಬಿಜೆಪಿ ಹಾಗೂ ಮಿತ್ರರ ನಾಲಿಗೆಗೆ ಮೂಳೆ ಇಲ್ಲದ ನಾಲಿಗೆ ಯಾವಾಗ ಹೇಗೆ ಬೇಕಾದರೂ ಹೊರಳುತ್ತದೆ, ಅವರ ಸಿದ್ದಾಂತವೂ ಅಷ್ಟೇ, ಅವರ ಯೋಚನೆಯೂ ಅಷ್ಟೇ! ಬಿಜೆಪಿ ನಾಯಕರೇ, ಏಕೆ ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರ ಬಗ್ಗೆ ಕಾಳಜಿ ತೋರುತ್ತಿಲ್ಲ? ನಿಮ್ಮ ನಾಲಿಗೆಗಳು ಈಗ ಏಕೆ ನಲಿದಾಡುತ್ತಿಲ್ಲ? ಎಂದು ಪ್ರಶ್ನಿಸಿದೆ. https://twitter.com/INCKarnataka/status/1784968713097351363 https://kannadanewsnow.com/kannada/woman-dies-of-heart-attack-while-dancing-during-wedding-mehndi-shastra/ https://kannadanewsnow.com/kannada/baba-ramdev-crossed-red-line-with-false-statement-of-covid-19-cure-ima-president/
ಮೀರತ್: ತನ್ನ ಸೋದರಸಂಬಂಧಿಯ ‘ಹಲ್ದಿ ಸಮಾರಂಭ’ದಲ್ಲಿ ನೃತ್ಯ ಮಾಡುವಾಗ 18 ವರ್ಷದ ಯುವತಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೀರತ್ ನಲ್ಲಿ ಶನಿವಾರ ಸಂಜೆ ನಡೆದಿದೆ. ಸಂತ್ರಸ್ತೆ ಲಿಸಾರಿ ಗೇಟ್ ನಿವಾಸಿಯಾಗಿದ್ದು, ಸಮಾರಂಭವು ನಗರದ ಅಹ್ಮದ್ ನಗರ ಪ್ರದೇಶದಲ್ಲಿ ನಡೆಯುತ್ತಿತ್ತು. ದುರಂತ ಘಟನೆಯ ವೀಡಿಯೊವನ್ನು ನಂತರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವೈರಲ್ ಆಗಿರುವಂತ 30 ಸೆಕೆಂಡುಗಳ ಕ್ಲಿಪ್ನಲ್ಲಿ, 18 ವರ್ಷದ ರಿಮ್ಷಾ ಹಳದಿ ಉಡುಪನ್ನು ಧರಿಸಿ, ತನ್ನ ಸಂಬಂಧಿಕರೊಂದಿಗೆ ಬಾಲಿವುಡ್ ಹಾಡಿಗೆ ಮಾಡುತ್ತಿರುವುದನ್ನು ಕಾಣಬಹುದು. https://twitter.com/SachinGuptaUP/status/1784539218448199936 ಅವಳು ಇದ್ದಕ್ಕಿದ್ದಂತೆ ತನ್ನ ಎದೆಯನ್ನು ಹಿಡ್ಕೊಳ್ಳುತ್ತಾಳೆ. ಆ ನಂತ್ರ ನೆಲದ ಮೇಲೆ ಕುಸಿದು ಬೀಳುವ ಮೊದಲು ಇನ್ನೊಬ್ಬರ ಕೈಯನ್ನು ಹಿಡಿಯಲು ಪ್ರಯತ್ನಿಸುತ್ತಾಳೆ. ಆದ್ರೆ ಆ ಬಾಲಕನ ಕೈ ಹಿಡಿದು, ಆತನನ್ನು ಎಳೆದುಕೊಂಡು ಹೃದಯಾಘಾತದಿಂದ ಕುಸಿದು ಬೀಳುವುದನ್ನು ವೀಡಿಯೋದಲ್ಲಿ ನೀವು ಕಾಣಬಹುದಾಗಿದೆ. ಈ ಬಗ್ಗೆ ಆಕೆಯ ನೆರೆಹೊರೆಯವರಲ್ಲೊಬ್ಬರಾದ 42 ವರ್ಷದ ಮೊಹಮ್ಮದ್ ಅಹ್ಮದ್, “ರಿಮ್ಷಾ ಇತರರೊಂದಿಗೆ ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮೂರ್ಛೆ ಹೋದಳು. ಕೂಡಲೇ ಅವಳನ್ನು…
ಬೆಂಗಳೂರು: ನಗರದಲ್ಲಿ 14ನೇ ಮಹಡಿಯಿಂದ ಕೆಳಗೆ ಬಿದ್ದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ತಘಟ್ಟಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಶೋಭಾ ಹಿಲ್ಸ್ ವ್ಯೂ ಅಪಾರ್ಮೆಂಟಿನ 14ನೇ ಮಹಡಿಯಿಂದ ಕೆಳಗೆ ಬಿದ್ದಂತ ಸಂಜೀವ್(25) ಎಂಬ ಯುವಕ ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಸ್ಥಳೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಂತ ಸಂಜೀವ್, ಶೋಭಾ ಹಿಲ್ಸ್ ವ್ಯೂ ಅಪಾರ್ಮೆಂಟಿನ 14ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಶಂಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೀಗ ಆತ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/heat-wave-conditions-likely-to-prevail-in-several-districts-of-the-state-till-may-2-imd/ https://kannadanewsnow.com/kannada/amit-shahs-fake-video-case-assam-police-arrests-first-accused/
ನಿಮ್ಮ ಕನಸುಗಳನ್ನು ನನಸಾಗಿಸಲು ನೀವು ಬಯಸಿದರೆ, ನಿಮಗೆ ಮೊದಲನೆಯದು ನಂಬಿಕೆ. ನಾವು ದೃಢಸಂಕಲ್ಪ ಮತ್ತು ಆತ್ಮವಿಶ್ವಾಸವನ್ನು ಹೊಂದಿದ್ದರೆ ಮಾತ್ರ ನಮ್ಮ ಆಸೆಗಳು ಈಡೇರುತ್ತವೆ. ಕನಸುಗಳು ನಿಜವಾಗುತ್ತವೆ. ಯಾವ ಮನುಷ್ಯನೂ ಆಸೆಯಿಲ್ಲದೆ ಬದುಕಲಾರ. ನಿಮ್ಮ ಮನಸ್ಸಿನಲ್ಲಿ ಖಂಡಿತವಾಗಿಯೂ ಅಪೂರ್ಣವಾದದ್ದು ಇದೆ. ಉದಾಹರಣೆಗೆ, ನಾವು ಒಳ್ಳೆಯ ಉದ್ಯೋಗ ಪಡೆಯಬೇಕು, ಕೈತುಂಬಾ ಹಣ ಸಂಪಾದಿಸಬೇಕು, ಸಮಾಜದಲ್ಲಿ ನಾಲ್ಕು ಜನ ಗೌರವಿಸುವ ಉನ್ನತ ಸ್ಥಾನದಲ್ಲಿ ಬದುಕಬೇಕು. ಆ ಆಸೆಯನ್ನು ಈಡೇರಿಸಿಕೊಳ್ಳಲು ಸತತ ಪ್ರಯತ್ನ ಮಾಡಬೇಕು. ನಾವು ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು ಮತ್ತು ಪ್ರಗತಿಯತ್ತ ಮಾತ್ರ ಗಮನಹರಿಸಬೇಕು. ಇತರ ಅನಗತ್ಯ ವಿಷಯಗಳತ್ತ ಗಮನ ಹರಿಸಬಾರದು. ಅದಕ್ಕೊಂದು ಪುಟ್ಟ ಕಸರತ್ತು ಈ ಶಕ್ತಿ ಸರ್ಕಾರ್ ಕಸರತ್ತು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ…
ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ವೈಯಕ್ತಿಕವಾಗಿ ಮಾತನಾಡುತ್ತಿದ್ದ ಕಾರ್ಯಕ್ರಮದಲ್ಲಿ ‘ಖಲಿಸ್ತಾನ್’ ಕುರಿತು ಪ್ರತ್ಯೇಕತಾವಾದಿ ಘೋಷಣೆಗಳನ್ನು ಎತ್ತಿದ್ದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯ ಸೋಮವಾರ ಕೆನಡಾದ ಉಪ ಹೈಕಮಿಷನರ್ ಗೆ ಸಮನ್ಸ್ ನೀಡಿದೆ. “ಇಂತಹ ಗೊಂದಲಕಾರಿ ಕ್ರಮಗಳನ್ನು ಈ ಕಾರ್ಯಕ್ರಮದಲ್ಲಿ ಅನಿಯಂತ್ರಿತವಾಗಿ ಮುಂದುವರಿಸಲು ಅನುಮತಿಸುವುದರ ಬಗ್ಗೆ ಭಾರತ ಸರ್ಕಾರದ ತೀವ್ರ ಕಳವಳ ಮತ್ತು ಬಲವಾದ ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೇಳಿದೆ. ಪ್ರತ್ಯೇಕತಾವಾದ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ಕೆನಡಾದಲ್ಲಿ ನೀಡಲಾದ ರಾಜಕೀಯ ಸ್ಥಳವನ್ನು ಇದು ಮತ್ತೊಮ್ಮೆ ವಿವರಿಸುತ್ತದೆ. ಅವರ ನಿರಂತರ ಅಭಿವ್ಯಕ್ತಿಗಳು ಭಾರತ-ಕೆನಡಾ ಸಂಬಂಧಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಕೆನಡಾದಲ್ಲಿ ಹಿಂಸಾಚಾರ ಮತ್ತು ಅಪರಾಧದ ವಾತಾವರಣವನ್ನು ಉತ್ತೇಜಿಸುತ್ತವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. https://kannadanewsnow.com/kannada/heat-wave-conditions-likely-to-prevail-in-several-districts-of-the-state-till-may-2-imd/ https://kannadanewsnow.com/kannada/amit-shahs-fake-video-case-assam-police-arrests-first-accused/
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಗೆ ಜನ, ಜಾನುವಾರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಮೇ.2ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದೆ. ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಗ್ಗೆ ರಾಜ್ಯ ವಾರ್ತಾ ಇಲಾಖೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 2ರವರೆಗೆ ಬಿಸಿಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ ಎಂದು ತಿಳಿಸಿದೆ. ರಾಜ್ಯದ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಅನ್ನು ಬಿಸಿಗಾಳಿ ಎಚ್ಚರಿಕೆಯನ್ನು ನೀಡಲಾಗಿದೆ. ಇನ್ನೂ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೂ ಉಷ್ಣಾಂಶ ಗರಿಷ್ಠ ಮಟ್ಟ ತಲುಪಲಿದೆ ಬಿಸಿ ವಾತಾವರಣದ ಮುನ್ಸೂಚನೆಯನ್ನು ನೀಡಿದೆ. https://twitter.com/KarnatakaVarthe/status/1784902313200796123 https://kannadanewsnow.com/kannada/aaps-dilip-pandey-demands-bjps-stand-on-prajwal-revanna-issue/ https://kannadanewsnow.com/kannada/amit-shahs-fake-video-case-assam-police-arrests-first-accused/
ದೆಹಲಿ: ಅತ್ಯಾಚಾರ, ಮಹಿಳಾ ಶೋಷಣೆ ಮಾಡುವುದೇ ಬಿಜೆಪಿಯಲ್ಲಿ ಚುನಾವಣಾ ಟಿಕೆಟ್ ಪಡೆಯಲು ಮಾನದಂಡವಾಗಿದೆಯೇ? ಎಂದು ದೆಹಲಿ ಶಾಸಕ , ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಆಮ್ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯದ ಉಸ್ತುವಾರಿ ದಿಲೀಪ್ ಪಾಂಡೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ 3000 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಬಿಡುಗಡೆಯಾಗಿವೆ. ಇದೇ ವ್ಯಕ್ತಿಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಜನರ ಮುಂದೆ ಕೈಮುಗಿದು ಮತಯಾಚನೆ ಮಾಡಿದ್ದಾರೆ. ಇದೇನಾ ಬಿಜೆಪಿ ಸಂಸ್ಕೃತಿ? ಬಿಜೆಪಿ ಮೈತ್ರಕೂಟದ ಪಾಲುದಾರ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರವಾಗಿ, ಬಿಜೆಪಿಯವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. https://twitter.com/AamAadmiParty/status/1784918139421012288 ಬ್ರಿಜ್ ಭೂಷಣ್ ರಿಂದ ಹಿಡಿದು ಪ್ರಜ್ವಲ್ ರೇವಣ್ಣವರೆಗೆ ಇಂತಹ ಹಲವು ಮಹಿಳಾ ಶೋಷಕರನ್ನು ಬಿಜೆಪಿಯಲ್ಲಿ ನೋಡಬಹುದು. ಪ್ರಧಾನಿ ಮೋದಿ ಅವರೆ ಅತ್ಯಾಚಾರಿಗಳಿಗೆ ನೀವು ಬೆಂಬಲ…