Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಭಾರತದ ಉನ್ನತ ಆರೋಗ್ಯ ಸಂಶೋಧನಾ ಸಂಸ್ಥೆಗಳು ನಡೆಸಿದ ಸಮಗ್ರ ಅಧ್ಯಯನಗಳು, ವಿಶೇಷವಾಗಿ 18–45 ವರ್ಷ ವಯಸ್ಸಿನ ವಯಸ್ಕರಲ್ಲಿ, COVID-19 ಲಸಿಕೆಯನ್ನು ( COVID-19 vaccination ) ಹಠಾತ್ ಸಾವುಗಳಿಗೆ ಯಾವುದೇ ಪುರಾವೆಗಳಿಲ್ಲ ಎಂಬುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಸಂಶೋಧನೆಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research -ICMR), ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (National Centre for Disease Control – NCDC) ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (All India Institute of Medical Sciences – AIIMS) ನಡೆಸಿದ ಅಧ್ಯಯನಿಂದ ಬೆಳಕಿಗೆ ಬಂದಿದೆ. COVID-19 ಸಾಂಕ್ರಾಮಿಕ ರೋಗದ ನಂತರ ಹಠಾತ್ ಮತ್ತು ವಿವರಿಸಲಾಗದ ಸಾವುಗಳ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಕಳವಳದ ಮಧ್ಯೆ ಈ ಅಧ್ಯಯನಗಳನ್ನು ಪ್ರಾರಂಭಿಸಲಾಗಿದೆ. ಆದಾಗ್ಯೂ, ಸಂಶೋಧನಾ ಫಲಿತಾಂಶಗಳು ಲಸಿಕೆಗಳು ಮತ್ತು ಅಂತಹ ಸಾವುಗಳ ನಡುವಿನ ಯಾವುದೇ ನೇರ ಸಂಬಂಧವನ್ನು ನಿರ್ಣಾಯಕವಾಗಿ…
ಬೆಂಗಳೂರು: 2024ರ ವರ್ಷದ ಜೆಇ ವರ್ಗಾವಣೆಯಲ್ಲೂ ಕೆಪಿಟಿಸಿಎಲ್ ಗೊಂದಲ ನಿರ್ಮಾಣ ಮಾಡಿ, ನೌಕರರು ಕೋರ್ಟು ಕಚೇರಿ ಅಲೆಯುವಂತೆ ಮಾಡಿತ್ತು. ಈ ಕುರಿತಂತ ‘ಕೆಪಿಟಿಸಿಎಲ್ 226 ಜೆಇ ವರ್ಗಾವಣೆ’ಯಲ್ಲಿ ಪಾಲನೆಯಾಗದ ‘ನೀತಿ-ನಿಯಮ’: ‘ಷರತ್ತು’ ಮೀರಿ ‘ಪೋಸ್ಟಿಂಗ್’ ಎಂಬುದಾಗಿ ಸುದ್ದಿ ಪ್ರಕಟಿಸಿತ್ತು. ಈಗ ಕಿರಿಯ ಇಂಜಿನಿಯರ್ ( ವಿದ್ಯುತ್ ) ಅವರುಗಳ 2025ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಯಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕಿದ್ದಂತ ಇಲಾಖೆ, ಮಾಡಿಕೊಂಡಿಲ್ಲ. ಈ ಬಾರಿಯೂ ಷರತ್ತಿನಲ್ಲಿ ಸ್ಪಷ್ಟತೆ ನೀಡಿ, ಅವುಗಳನ್ನೇ ಉಲ್ಲಂಘಿಸಿ ಜೆಇ ವರ್ಗಾವಣೆ ಮಾಡಿ ನೌಕರರನ್ನು ಗೊಂದಲಕ್ಕೆ ದೂಡಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ದೇಶಕರು 233 ಜೆಇಗಳನ್ನು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಈ ವರ್ಗಾವಣೆಯಲ್ಲಿ ಹಲವು ಗೊಂದಲಕ್ಕೆ ಕಾರಣವಾಗಿದೆ. ಒಬ್ಬರಿಗೆ ಎರಡು ವರ್ಗಾವಣೆ ಸ್ಥಳವನ್ನು ತೋರಿಸಿದ್ದರೇ, ಮತ್ತೆ ಕೆಲವರು ಕಾರ್ಯ ನಿರ್ವಹಿಸುತ್ತಿರುವಂತ ಹುದ್ದೆಗೂ ವರ್ಗಾವಣೆಗೆ ಅರ್ಹರಿಲ್ಲದಿದ್ದರೂ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಜೆಇ ವರ್ಗಾವಣೆಯ ಷರತ್ತು ಹಾಗೂ ಸೂಚನೆಗಳಲ್ಲಿ ಏನಿದೆ.? 1. ಬದಲಾವಣೆಗೆ ಅನುಮತಿ ನೀಡಲಾದ ಗ್ರೂಪ್ “ಸಿ” ಪದವೃಂದದ ನೌಕರರು ಪ್ರಸ್ತುತ…
ವರದಿ; ವಸಂತ ಬಿ ಈಶ್ವರಗೆರೆ ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 101 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಮಹತ್ವದ ಆದೇಶವನ್ನು ಮಾಡಿದೆ. ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ವರ್ಗಾವಣೆ ಆದೇಶ ಮಾಡಿದ್ದು, ಬಾಗಲಕೋಟೆ ವಲಯ ಅರಣ್ಯಾಧಿಕಾರಿಯಾಗಿದ್ದಂತ ಮಹೇಂದ್ರ ದೇಸಾಯಿ ಅವರನ್ನು ಬೆಳಗಾವಿ ವಲಯ ಅರಣ್ಯಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಶಿವಪುತ್ರ ಶಂಕರ ತಳವಾರ ಅವರನ್ನು ಬೆಳಗಾವಿಯ ಗುಜನಾಳ ವಲಯ ಅರಣ್ಯಾಧಿಕಾರಿಯಾಗಿ, ಪಂಚಾಕ್ಷರಯ್ಯ ಪುರಾಣಿಕಮಠ ಅವರನ್ನು ಬೆಳಗಾವಿ ಕಾರ್ಯಯೋಜನೆ ಘಟಕದ ವಲಯ ಅರಣ್ಯಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸೊರಬ ವಲಯ ಅರಣ್ಯಾಧಿಕಾರಿಯಾಗಿದ್ದಂತ ಜಾವೇದ್ ಬಾಷ ಅಂಗಡಿ ಅವರನ್ನು ಶಿರಾಳಕೊಪ್ಪ ವಲಯ ಅರಣ್ಯಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸೊರಬ ವಲಯ ಅರಣ್ಯಾಧಿಕಾರಿಯಾಗಿ ಕೋಗಾರು ಶರಾವತಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಯಾಗಿದ್ದಂತ ಶ್ರೀಪಾದ ಈರ ನಾಯ್ಕ್ ಅವರನ್ನು ನೇಮಕ ಮಾಡಲಾಗಿದೆ. ಕಾರ್ಗಲ್ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಸಂತೋಷ್ ಎಂ ಪವಾರ ಅವರನ್ನು ಯಲ್ಲಾಪುರ ವಿಭಾಗದ ಕಿರವತ್ತಿಯ ಸರ್ಕಾರಿ ಮರಮುಟ್ಟು ಸಂಗ್ರಹಾಲಯದ ವಲಯ…
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ…
ಬೆಂಗಳೂರು: ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಿರುವ ಆಘಾತಕಾರಿ ಸಂಗತಿ ಅಧ್ಯಯನದಿಂದ ಹೊರ ಬಿದ್ದಿದೆ. ಅಧ್ಯಯನಕ್ಕೆ ಒಳಪಟ್ಟ 8 ಮತ್ತು 9 ನೇ ತರಗತಿಯ 30 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಮಧುಮೇಹದಿಂದ ಬಳಲುತ್ತಿದ್ದರೆ, ನಾಲ್ಕು ವಿದ್ಯಾರ್ಥಿಗಳು ಹೈಪರ್ ಟೆನ್ಷನ್ ನಿಂದ ನರಳುತ್ತಿದ್ದು ಚಿಕಿತ್ಸೆಗೆ ಒಳಗಾಗಿದ್ದಾರೆ! 11 ವಿದ್ಯಾರ್ಥಿಗಳಲ್ಲಿ ಟೈಗ್ರಿಸೈರೆಡ್ ( ಕೊಬ್ಬು) ಕೊಬ್ಬಿನಾಂಶ ಹೆಚ್ಚಾಗಿದ್ದು, ಒಬ್ಬ ವಿದ್ಯಾರ್ಥಿಯಲ್ಲಿ ಅಪಾಯಕಾರಿ ಹಂತ ತಲುಪಿದೆ! ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ ನ ಮಲ್ಟಿ ಡಿಸಿಪ್ಲೆನರಿ ರಿಸರ್ಚ್ ಘಟಕ ಇತ್ತೀಚಿನ ದಿನಗಳಲ್ಲಿ ಕಿಶೋರರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅಧ್ಯಯನ ನಡೆಸಿತು. ಧಾರವಾಡ ಜಿಲ್ಲೆಯಲ್ಲಿ 8 ರಿಂದ 9 ನೇ ತರಗತಿಯಲ್ಲಿ ವ್ಯಾಸಂಗ ಮಾಆಡುತ್ತಿರುವ ಆರು ಶಾಲೆಗಳ 30 ಅಧಿಕ ತೂಕದ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಬಾಲ್ಯಾವ್ಯಸ್ಥೆಯಲ್ಲಿ ಕಾಣಿಸಿಕೊಳ್ಳುತ್ತಿರುವ ರೋಗಗಳ ಬಗ್ಗೆ ವೈದ್ಯರ ತಂಡ ಅಧ್ಯಯನ ನಡೆಸಿದಾಗ ಆಘಾತಕಾರಿ ಸಂಗತಿಗಳು ಹೊರ…
ಬೆಂಗಳೂರು: ದಶಕದ ಬಳಿಕ ಆರೋಗ್ಯ ಇಲಾಖೆಯಲ್ಲಿ ಪೂರ್ಣಪ್ರಮಾಣದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಯುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಆರೋಗ್ಯ ಸೌಧದಲ್ಲಿ ಸತತವಾಗಿ ವೈದ್ಯರು, ಸಿಬ್ಬಂದಿಗಳೊಂದಿಗೆ ವರ್ಗಾವಣೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಪ್ರಕ್ರಿಯೆಯನ್ನು ಖುದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಪರಿಶೀಲನೆ ನಡೆಸಿದರು. ಕೌನ್ಸೆಲಿಂಗ್ ಗೆ ಅರ್ಜಿ ಹಾಕಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ವ್ಯವಸ್ಥೆ ಕುರಿತಂತೆ ಸಚಿವರು ಚರ್ಚೆ ನಡೆಸಿದರು. ಹಲವು ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸುತ್ತಿರುವುದಕ್ಕೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿಗಳು ಧನ್ಯವಾದ ತಿಳಿಸಿದರು. ಪಾರದರ್ಶಕವಾಗಿ ಕೌನ್ಸೆಲಿಂಗ್ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತಿದೆಯಾ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಸಿಬ್ಬಂದಿಗಳೊಂದಿಗೆ ಚರ್ಚಿಸಿ, ಪರಿಶೀಲನೆ ನಡೆಸಿದರು.. ಸಚಿವರ ಪರಿಶೀಲನೆ ವೇಳೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಇಲಾಖೆ ಆಯುಕ್ತರಾದ ಕೆ.ಬಿ ಶಿವಕುಮಾರ್ ಅವರು ಉಪಸ್ಥಿತರಿದ್ದರು. ಇಲ್ಲಿಯ ವರೆಗೆ…
ಬೆಂಗಳೂರು: ವಿಶ್ವದ ಅತಿ ದೊಡ್ಡ ಟ್ರಾಕ್ಟರ್ ಮತ್ತು ಕೃಷಿ ಉಪಕರಣ ತಯಾರಕಾ ಸಂಸ್ಥೆಯಾದ TAFE ಸಂಸ್ಥೆಯು AGCO ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಬ್ರ್ಯಾಂಡ್, ವಾಣಿಜ್ಯ ಸಮಸ್ಯೆ ಮತ್ತು ಷೇರುಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ಸಮಗ್ರತೆಯನ್ನು ಈ ಒಪ್ಪಂದ ಒಳಗೊಂಡಿರಲಿದೆ. TAFE ನ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾದ ಮಲ್ಲಿಕಾ ಶ್ರೀನಿವಾಸನ್ ಮಾತನಾಡಿ, ಮ್ಯಾಸ್ಸಿ ಫರ್ಗುಸನ್” ಮತ್ತು ಸಂಬಂಧಿತ ಟ್ರೇಡ್‌ಮಾರ್ಕ್ ಗಳಲ್ಲಿನ ಎಲ್ಲಾ ಹಕ್ಕುಗಳು, ಟೈಟಲ್ ಮತ್ತು ಆಸಕ್ತಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸದ್ಭಾವನೆಗಳನ್ನು ಒಳಗೊಂಡಂತೆ ಮ್ಯಾಸಿ ಫರ್ಗುಸನ್ ಬ್ರ್ಯಾಂಡ್ ನ ಮಾಲೀಕತ್ವವು ಭಾರತ, ನೇಪಾಳ ಮತ್ತು ಭೂತಾನ್ ಗೆ ಏಕೈಕ ಮತ್ತು ವಿಶೇಷ ಮಾಲೀಕರಾಗಿ TAFE ನೊಂದಿಗೆ ಇರುತ್ತದೆ. TAFE ನಲ್ಲಿರುವ AGCO ಷೇರುಗಳನ್ನು TAFE ಮತ್ತೆ $260 ಮಿಲಿಯನ್‌ಗೆ ಖರೀದಿಸಲಿದೆ ಮತ್ತು ಇದು TAFE ನ ಷೇರುಗಳ 20.7% ರಷ್ಟಿದೆ. ಇದು TAFE ಅನ್ನು ಭಾರತದ ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವೈವಿಧ್ಯಮಯ ಕೈಗಾರಿಕಾ ಸಮೂಹವಾದ…
ಹುಬ್ಬಳ್ಳಿ: ಕಡಿಮೆ ಪ್ರಯಾಣಿಕರ ಸಂಖ್ಯೆಯಿಂದಾಗಿ, ನೈಋತ್ಯ ರೈಲ್ವೆಯು ರೈಲು ಸಂಖ್ಯೆ 17347/17348 ಎಸ್ಎಸ್ಎಸ್ ಹುಬ್ಬಳ್ಳಿ – ಚಿತ್ರದುರ್ಗ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲುಗಳ ಚಿಕ್ಕಜಾಜೂರು ಮತ್ತು ಚಿತ್ರದುರ್ಗ ನಡುವಿನ ಭಾಗಶಃ ರದ್ದತಿಯನ್ನು ವಿಸ್ತರಿಸಿದೆ. ಈ ಹಿಂದೆ ಜೂನ್ 30, 2025 ರವರೆಗೆ ಸೂಚಿಸಲಾಗಿದ್ದ ಈ ಭಾಗಶಃ ರದ್ದತಿಯು, ಈಗ ಜುಲೈ 2 ರಿಂದ ಡಿಸೆಂಬರ್ 31, 2025ರವರೆಗೆ ಜಾರಿಯಲ್ಲಿರುತ್ತದೆ. ಇದರನ್ವಯ, ರೈಲು ಸಂಖ್ಯೆ 17347 ಎಸ್ಎಸ್ಎಸ್ ಹುಬ್ಬಳ್ಳಿ – ಚಿತ್ರದುರ್ಗ ದೈನಂದಿನ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲು ಚಿತ್ರದುರ್ಗದ ಬದಲು ಚಿಕ್ಕಜಾಜೂರಿನಲ್ಲಿ ತನ್ನ ಸೇವೆಯನ್ನು ಕೊನೆಗೊಳಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17348 ಚಿತ್ರದುರ್ಗ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲು ಈಗ ಚಿತ್ರದುರ್ಗದ ಬದಲು ಚಿಕ್ಕಜಾಜೂರಿನಿಂದ ಹೊರಡಲಿದೆ. ಈ ಅವಧಿಯಲ್ಲಿ ಚಿತ್ರದುರ್ಗ ಮತ್ತು ಚಿಕ್ಕಜಾಜೂರು ನಡುವಿನ ರೈಲು ಸೇವೆಗಳು ಭಾಗಶಃ ರದ್ದುಗೊಂಡಿರುತ್ತವೆ. https://kannadanewsnow.com/kannada/attention-passengers-the-operation-of-these-trains-is-canceled-route-changes/ https://kannadanewsnow.com/kannada/in-karnataka-82-tigers-have-died-in-five-and-a-half-years/
ಹುಬ್ಬಳ್ಳಿ: ಬೈಯಪ್ಪನಹಳ್ಳಿ–ಹೊಸೂರು ನಡುವಿನ ಜೋಡಿ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ, ಮರನಾಯಕನಹಳ್ಳಿ ಯಾರ್ಡನಲ್ಲಿ ರಸ್ತೆ ಕೆಳ ಸೇತುವೆ (ಸಂಖ್ಯೆ 427A) ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದಾಗಿ, ಕೆಳಕಂಡ ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ಮಾರ್ಗ ಬದಲಾಯಿಸಲಾಗಿದೆ. ರೈಲುಗಳ ಭಾಗಶಃ ರದ್ದು: ಜುಲೈ 5, 7, ಮತ್ತು 8, 2025 ರಂದು ಮೂರು ದಿನಗಳ ಕಾಲ ಕೆಳಕಂಡ ಮೆಮು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ: ರೈಲು ಸಂಖ್ಯೆ 06591 ಯಶವಂತಪುರ – ಹೊಸೂರು, ರೈಲು ಸಂಖ್ಯೆ 66563 ಯಶವಂತಪುರ – ಹೊಸೂರು, ಮತ್ತು ರೈಲು ಸಂಖ್ಯೆ 66585 ಯಶವಂತಪುರ – ಹೊಸೂರು ರೈಲುಗಳು ಹೀಲಲಿಗೆ ಮತ್ತು ಹೊಸೂರು ನಡುವೆ ಭಾಗಶಃ ರದ್ದಾಗುತ್ತವೆ. ಈ ರೈಲುಗಳು ಹೀಲಲಿಗೆ ನಿಲ್ದಾಣದಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸುತ್ತವೆ. ಅದೇ ರೀತಿ, ರೈಲು ಸಂಖ್ಯೆ 06592 ಹೊಸೂರು – ಯಶವಂತಪುರ, ರೈಲು ಸಂಖ್ಯೆ 66564 ಹೊಸೂರು – ಯಶವಂತಪುರ, ಮತ್ತು ರೈಲು ಸಂಖ್ಯೆ 66586 ಹೊಸೂರು – ಯಶವಂತಪುರ ರೈಲುಗಳು ಹೊಸೂರು ಮತ್ತು…
ಬೆಂಗಳೂರು: ಸಾಮಾನ್ಯ ಜನರ ಸಾರಿಗೆಯಾಗಿಯೇ ಜನಪ್ರಿಯವಾಗಿರುವ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ಮಧ್ಯಮ ಮತ್ತು ಬಡವರ್ಗದ ಬದುಕಿನ ಮೇಲೆ ಬರೆ ಎಳೆದಿದೆ. ಈ ಬೆಲೆ ಏರಿಕೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಏರುತ್ತಲೇ ಇರುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರಗಳ ಭಾರದಿಂದ ಜನರು ಈಗಾಗಲೇ ತತ್ತರಿಸಿಹೋಗಿದ್ದಾರೆ. ಹಾಲು, ಮೊಸರು, ಚಹಾ ಪುಡಿಯಿಂದ ಹಿಡಿದು ಪಾಪ್ ಕಾರ್ನ್ ವರೆಗೆ ಎಲ್ಲದರ ಮೇಲೆ ಜಿಎಸ್‌ಟಿ ಹೇರಿಕೆಯಿಂದಾಗಿ ಪ್ರತಿಯೊಂದು ಕುಟುಂಬದ ಬಜೆಟ್ ಏರುಪೇರಾಗಿದೆ. ಇದೇ ವೇಳೆ ರೈಲು ಪ್ರಯಾಣದ ದರ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡಲು ಹೊರಟಿದೆ ಎಂಬುದಾಗಿ ಕಿಡಿಕಾರಿದ್ದಾರೆ. ನಮ್ಮ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ದರ ಏರಿಕೆ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ ಬಿಜೆಪಿ ನಾಯಕರು…