Author: kannadanewsnow09

ಬೆಂಗಳೂರು: ಅನಾರೋಗ್ಯದಿಂದಾಗಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧರಾಗಿದ್ದರು. ಅವರ ಪಾರ್ಥೀವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವಂತೆ ರಾಜ್ಯ ಸರ್ಕಾರದ ಆದೇಶಿಸಿದೆ. ಈ ಕುರಿತು ರಾಜ್ಯ ಸರ್ಕಾರದ ರಾಜ್ಯ ಶಿಷ್ಠಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ವಿ. ಶ್ರೀನಿವಾಸ ಪುಸಾದ್‌, ಸಂಸದರು ಹಾಗೂ ಮಾಜಿ ಸಚಿವರು ಇವರು ದಿನಾಂಕ:29.04.2024ರಂದು ನಿಧನರಾದ ವಿಷಯವನ್ನು ರಾಜ್ಯ ಸರ್ಕಾರವು ತೀವು ಸಂತಾಪದಿಂದ ಈ ಮೂಲಕ ಪ್ರಕಟಿಸಿದೆ. ದಿವಂಗತರ ಗೌರವಾರ್ಥವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಿಗೂ ಹಾಗೂ ಎಲ್ಲಾ ಶಾಲಾ ಕಾಲೇಜುಗಳಿಗೂ (ಪೂರ್ವ ನಿಗಧಿಯಾಗಿರುವ ಪರೀಕ್ಷೆಗಳನ್ನು ಹೊರತುಪಡಿಸಿ), ಅನುದಾನ ಪಡೆಯುವ ಎಲ್ಲಾ ವಿದ್ಯಾ ಸಂಸ್ಥೆಗಳಿಗೂ ದಿನಾಂಕ:30.04.2024ರಂದು ರಜೆ ಘೋಷಿಸಲಾಗಿದೆ. ಸದರಿ ಆದೇಶವು ನಗೋಷಿಯಬಲ್ ಇನ್ಸ್‌ಸ್ಟ್ರುಮೆಂಟ್ ಆಕ್ಟ್ 1881ರ ಪಕಾರವು ಕೂಡ ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ. ಅಲ್ಲದೇ ಮೃತರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ಆದೇಶಿಸಿದ್ದಾರೆ. https://kannadanewsnow.com/kannada/prajwal-revanna-pornography-video-case-kumaraswamy-ji-tell-me-when-this-case-came-to-your-notice-says-ramesh-babu/ https://kannadanewsnow.com/kannada/amit-shahs-fake-video-case-assam-police-arrests-first-accused/

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ ನಿಮ್ಮ ಗಮನಕ್ಕೆ ಯಾವಾಗ ಬಂದಿತ್ತು ಕುಮಾರಸ್ವಾಮಿಯವರೇ ತಿಳಿಸಿ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥರಾದಂತ ರಮೇಶ್ ಬಾಬು ಒತ್ತಾಯಿಸಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕರ್ನಾಟಕದ ಸಂಸ್ಕೃತಿ, ರಾಜಕಾರಣಕ್ಕೆ ಮಸಿ ಬಳಿಯುವಂತಹ ಲೈಂಗಿಕ ಶೋಷಣೆಯ ಘಟನೆ ನಡೆದಿದ್ದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ ಇದಾಗಿದೆ. ಹಾಲಿ ಸಂಸದ ಹಾಗೂ ಎನ್ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ಶೋಷಣೆಯ ಆರೋಪ ಬಂದಿದೆ. ಕೇವಲ ಇವರ ಮೇಲೆ ಮಾತ್ರ ಆರೋಪ ಬಂದಿಲ್ಲ. ಇಡೀ ಕುಟುಂಬದ ಮೇಲೆ ಆರೋಪ ಬಂದಿದ್ದು, ಅವರ ತಂದೆಯ ಮೇಲೆಯೂ ದೂರು ದಾಖಲಾಗಿದೆ ಎಂದರು. ಸತ್ಯಹರಿಶ್ಚಂದ್ರನ ಮನೆಯವರಂತೆ ಬಿಜೆಪಿಯವರು ಕಳೆದ 10 ವರ್ಷಗಳಿಂದ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದರು. ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ ಎನ್ನುವಂತೆ ಈ ಘಟನೆ ಬಗ್ಗೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ. ಈ ದೇಶದ ಜನಕ್ಕೆ, ಮಹಿಳೆಯರಿಗೆ…

Read More

ಬೆಂಗಳೂರು: ಮನೆಯಲ್ಲಿ ಕೆಲಸಕ್ಕಿದ್ದಂತ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಶಾಸಕ ಹೆಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ ನಟ ಚೇತನ್ ಏನು ಹೇಳಿದ್ರು ಅಂತ ಮುಂದೆ ಓದಿ. ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವಂತ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಸ್ಐಟಿಯಿಂದ ತನಿಖೆ ಚುರುಕುಗೊಳಿಸಲಾಗಿದೆ. ಮೂವರು ಸಂತ್ರಸ್ತೆಯರು ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ಪ್ರಕರಣ ಕುರಿತಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳು ಗಂಭೀರವಾಗಿದ್ದು ಆಗಿದೆ. ತಪ್ಪು ಸಬೀತಾದ್ರೇ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅನ್ಯಾಯಕ್ಕೆ ಒಳಗಾದ ಮಹಿಳೆಯರು ತಮ್ಮ ಕಷ್ಟಗಳನ್ನು ವಿವರಿಸೋ ಧೈರ್ಯದಿಂದ ಮುಂದೆ ಬರುತ್ತಿರೋದು ನೋಡಿದ್ರೇ ಸಂತೋಷವಾಗುತ್ತಿದೆ ಎಂದಿದ್ದಾರೆ. https://twitter.com/ChetanAhimsa/status/1784785041685618853 ಪೆನ್ ಡ್ರೈವ್ ಸಮಸ್ಯೆಯನ್ನು ಸಾವಿರಾರು ನಿರ್ಭಯಾ ಗಳಿಗೆ ಹೋಲಿಸಿ, ಅದಕ್ಕೆ…

Read More

ಬೆಂಗಳೂರು: ಪಿ.ಸಿ.ಗದ್ದಿಗೌಡರ್ ಹಾಗೂ ರಮೇಶ್ ಜಿಗಜಿಣಗಿ ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಮಾಡಿದರು. ಬಾಗಲಕೋಟೆಯಲ್ಲಿ ಇಂದು ಏರ್ಪಡಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವ ಬೃಹತ್ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕುಡಿಯುವ ನೀರಿನ ಹಾಹಾಕಾರ ಇದೆ. ರೈತರು ಸಂಕಷ್ಟದಲ್ಲಿದ್ದರೂ ಈ ಸರಕಾರ ಕೈಕಟ್ಟಿ ಕೂತಿದೆ ಎಂದು ಟೀಕಿಸಿದರು. ಇಂಥ ಬೇಜವಾಬ್ದಾರಿ ಸರಕಾರವು ಕರ್ನಾಟಕದಲ್ಲಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ತಿಳಿಸಿದರು. ಶಾಸಕ ಬಿ.ಆರ್.ಪಾಟೀಲ ಯತ್ನಾಳ್ ಅವರು ಮಾತನಾಡಿ, ಸನಾತನ ಧರ್ಮ ಉಳಿಸಲು ಬಿಜೆಪಿಗೆ ಮತ ಕೊಡಿ ಎಂದು ವಿನಂತಿಸಿದರು. ಹುಬ್ಬಳ್ಳಿ ಘಟನೆ ನೆನಪಿರಲಿ; ಬಾಗಲಕೋಟೆ ಹೆಣ್ಮಕ್ಕಳ ರಕ್ಷಣೆಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ತಿಳಿಸಿದರು. ಬಟಾಟೆಯಿಂದ ಚಿನ್ನ ತೆಗೆಯುವ ರಾಹುಲ್ ಗಾಂಧಿ, ಪಿತ್ರಾರ್ಜಿತ ಆಸ್ತಿಗೂ ಶೇ 55 ತೆರಿಗೆ ಹಾಕುತ್ತಾರೆ ಎಂಬುದು ನೆನಪಿರಲಿ ಎಂದು ವಿವರಿಸಿದರು. ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು…

Read More

ನವದೆಹಲಿ: ಓಲಾ ಕ್ಯಾಬ್ ಸಿಇಒ ಹುದ್ದೆಗೆ ಹೇಮಂತ್ ಬಕ್ಷಿ ಅವರು ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಓಲಾ ಕಂಪನಿಯಿಂದ ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ. ಓಲಾ ಕ್ಯಾಬ್ಸ್ ಸಿಇಒ ಹೇಮಂತ್ ಬಕ್ಷಿ ಅವರು ಕೆಲಸಕ್ಕೆ ಸೇರಿದ ನಾಲ್ಕು ತಿಂಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಮನಿಕಂಟ್ರೋಲ್ ವರದಿಯ ಪ್ರಕಾರ, ಕಂಪನಿಯು ಪುನರ್ರಚನೆ ಮಾಡಲು ಯೋಚಿಸುತ್ತಿದೆ. ಶೇಕಡಾ 10 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ. https://kannadanewsnow.com/kannada/pocso-case-muruga-sri-surrenders-before-court/ https://kannadanewsnow.com/kannada/amit-shahs-fake-video-case-assam-police-arrests-first-accused/

Read More

ಬೆಂಗಳೂರು: ಅತ್ಯಾಚಾರ ಆರೋಪದ ದೂರು ನೀಡಿದ್ರೂ ಹೊಳೆನರಸೀಪುರ ಪೊಲೀಸರು ರೇಪ್ ಸೆಕ್ಷನ್ ದಾಖಲಿಸದೇ ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ. ಈ ಕುರಿತಂತೆ ಸಮಾನ ಮನಸ್ಕರು ಕರ್ನಾಟಕ ಪೊಲೀಸ್ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದು, ದಿನಾಂಕ 28.04.2024 ರಂದು 47 ವರ್ಷದ ಸಂತ್ರಸ್ತ ಮಹಿಳೆ ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ರಿ ದೂರನ್ನು ಪಡೆದುಕೊಂಡಿರುವ ಹೊಳೆನರಸೀಪುರ ಪೊಲೀಸರು ಅಪರಾಧ ಸಂಖ್ಯೆ 107/2024 ಎಂದು ದಾಖಲಿಸಿಕೊಂಡು ಐಪಿಸಿ ಸೆಕ್ಷನ್ 354a, 354d, 506, 509 ದಾಖಲಿಸಿಕೊಂಡಿದ್ದಾರೆ ಎಂದಿದ್ದಾರೆ. ಸಂತ್ರಸ್ತ ಮಹಿಳೆ ನೀಡಿರುವ ದೂರು ಮತ್ತು ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ಸಾರಾಂಶದಲ್ಲಿ “ಪಿರ್ಯಾದಿಗೆ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಎಚ್ ಡಿ ರೇವಣ್ಣರವರ ಮನೆಯಲ್ಲಿ ಮೂರುವರೆ ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದು ಅವರ ಮನೆಗೆ ಕೆಲಸಕ್ಕೆ ಸೇರಿಕೊಂಡ 4 ತಿಂಗಳ ನಂತರ ಹೆಚ್ ಡಿ ರೇವಣ್ಣ ರವರು ತಮ್ಮ ಕೊಠಡಿಗೆ ಬರುವಂತೆ ಅಹ್ವಾನಿಸುತ್ತಿದ್ದರು. ಮನೆಯಲ್ಲಿ 6 ಜನ ಹೆಣ್ಣು…

Read More

ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಬಳಿಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಬಂಧಿಸಲಾಗಿದ್ದಂತ ಇಬ್ಬರು ಆರೋಪಿಗಳಿಗೆ ಇಂದು ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮೊಹಮ್ಮದ್ ಮತೀನ್ ಹಾಗೂ ಮುಸಾವಿರ್ ಹುಸೇನ್ ಎಂಬಾತನನ್ನು ಬಂಧಿಸಲಾಗಿತ್ತು. ಬಂಧಿತ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿ, ಎನ್ಐಎ ಅಧಿಕಾರಿಗಳು ತಮ್ಮ ವಶಕ್ಕೆ ಹೆಚ್ಚಿನ ವಿಚಾರಣೆಗಾಗಿ ಪಡೆದಿದ್ದರು. ಎನ್ಐಎ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನಲೆಯಲ್ಲಿ ಇಂದು ಎನ್ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದಂತ ಎನ್ಐಎ ಕೋರ್ಟ್, ಮೊಹಮ್ಮದ್ ಮತೀನ್ ಹಾಗೂ ಮುಸಾವರಿ ಹುಸೇನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. https://kannadanewsnow.com/kannada/five-students-who-went-missing-while-swimming-in-mekedatu-sangama-drowned/ https://kannadanewsnow.com/kannada/pocso-case-muruga-sri-surrenders-before-court/

Read More

ರಾಮನಗರ: ಮೇಕೆದಾಟು ಸಂಗಮದಲ್ಲಿ ಈಜಲು ತೆರಳಿದ್ದಂತ ಐವರು ವಿದ್ಯಾರ್ಥಿಗಳು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ನಾಪತ್ತೆಯಾಗಿರುವಂತ ಐವರು ವಿದ್ಯಾರ್ಥಿಗಳು ಬೆಂಗಳೂರಿನ ಖಾಸಗೀ ಕಾಲೇಜಿನ ವಿದ್ಯಾರ್ಥಿಗಳು ಎಂಬುದಾಗಿ ತಿಳಿದು ಬಂದಿದೆ. ಅವರು ನೀರುಪಾಲಾಗಿ, ಸಾವನ್ನಪ್ಪಿದಾಗಿ ತಿಳಿದು ಬಂದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಲ್ಲಿ ಈಜಲು ತೆರಳಿದ್ದಂತ ಬೆಂಗಳೂರಿನ ಖಾಸಗಿ ಕಾಲೇಜಿನ ಐವರು ವಿದ್ಯಾರ್ಥಿಗಳು ನಾಪತ್ತೆಯಾಗಿರೋದಾಗಿ ಘಟನೆ ನಡೆದಿತ್ತು. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಂತ ಮೂವರು ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಕನಕಪುರ ಗ್ರಾಮಾಂತರ ಠಾಣೆಯ ಪೊಲೀಸರು ದೌಡಾಯಿಸಿದ್ದು, ನಾಪತ್ತೆಯಾಗಿರೋ ವಿದ್ಯಾರ್ಥಿಗಳ ಪತ್ತೆಗೆ ಕ್ರಮವಹಿಸಿದ್ದರು. ವಿದ್ಯಾರ್ಥಿಗಳು ಕಾವೇರಿ ನದಿಯ ಸಮೀಪದಲ್ಲಿ ಶವವಾಗಿ ಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಅವರ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಹೊರತೆಗೆದಿದ್ದಾರೆ. https://kannadanewsnow.com/kannada/pocso-case-muruga-sri-surrenders-before-court/

Read More

ನವದೆಹಲಿ: ಜನಪ್ರಿಯ ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ‘ಎಕ್ಸ್’ ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿತ್ತು, ಇದು ವಿಶ್ವಾದ್ಯಂತ ಬಳಕೆದಾರರಿಗೆ ತೊಂದರೆಯನ್ನು ಸೃಷ್ಟಿಸುತ್ತಿದೆ ಎಂದು ವರದಿಯಾಗಿದೆ. ಡೌನ್ಡೆಟೆಕ್ಟರ್ ಪ್ರಕಾರ, ಭಾರತೀಯ ಬಳಕೆದಾರರು ಎಲೋನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಅನ್ನು ವೆಬ್ ಮತ್ತು ಅಪ್ಲಿಕೇಶನ್ ಎರಡರಲ್ಲೂ ಪ್ರವೇಶಿಸುವಲ್ಲಿ ಸಮಸ್ಯೆ ಇದೆ ಎಂದು ದೂರು ನೀಡಿದ್ದಾರೆ. ಡೌನ್ಡೆಟೆಕ್ಟರ್ ಜಾಗತಿಕ ಬಳಕೆದಾರರೊಂದಿಗೆ, ಮುಖ್ಯವಾಗಿ ಅಪ್ಲಿಕೇಶನ್ನಲ್ಲಿನ ಸಮಸ್ಯೆಗಳೊಂದಿಗೆ ಹೆಚ್ಚಳವನ್ನು ತೋರಿಸಿದೆ. ಕೆಲ ದಿನಗಳ ಹಿಂದಷ್ಟೇ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಎಕ್ಸ್ ಸರ್ವರ್ ಡೌನ್ ಆಗಿತ್ತು. ಈಗ ಮತ್ತೆ ಕೈಕೊಟ್ಟಿದ್ದು, ಬಳಕೆದಾರರು ಪರದಾಡುವಂತೆ ಆಗಿದೆ. https://kannadanewsnow.com/kannada/prajwal-revanna-expelled-from-jds-former-cm-hd-kumaraswamy/ https://kannadanewsnow.com/kannada/pm-modis-next-target-is-zero-electricity-bill-installation-of-solar-panel-in-every-household/

Read More

ಶಿವಮೊಗ್ಗ: ಜೆಡಿಎಸ್ ಪಕ್ಷದಿಂದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಚಾಟಿಸಲಾಗಿದೆ ಎಂಬುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯಾರು ಎಲ್ಲಿ ಹೋಗುತ್ತಾರೆ ಎಂದು ಕಾಯಲು ಆಗೋದಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದರು. ನಾವೇ ಹೇಳುತ್ತಿದ್ದೇವಲ್ಲ ಸಮಗ್ರ ತನಿಖೆ ಆಗಬೇಕೆಂದು. ಬಿಜೆಪಿಗೂ ಇದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ನನಗೂ, ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಸ್ಪಷ್ಟ ಪಡಿಸಿದರು. ಅಂದಹಾಗೇ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅಶ್ಲೀಲ ವೀಡಿಯೋ ಪ್ರಕರಣ ಹೊರ ಬಂದಿತ್ತು. ಪೆನ್ ಡ್ರೈವ್ ಕೇಸ್ ಎಂಬುದಾಗಿಯೇ ಎಂಬುದಾಗಿ ವೀಡಿಯೋ ವೈರಲ್ ಆಗಿತ್ತು. https://kannadanewsnow.com/kannada/five-students-who-had-gone-for-a-swim-at-mekedatu-sangama-went-missing/ https://kannadanewsnow.com/kannada/pm-modis-next-target-is-zero-electricity-bill-installation-of-solar-panel-in-every-household/

Read More