Author: kannadanewsnow09

ಶಿವಮೊಗ್ಗ: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟವನ್ನು ಬಿ.ವೈ ವಿಜಯೇಂದ್ರ ಕಳೆದುಕೊಳ್ಳಲಿದ್ದಾರೆ ಎಂಬುದಾಗಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಲೋಕಸಭಾ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಇದು ಇಡೀ ರಾಜ್ಯದಲ್ಲೇ ಚರ್ಚೆಯಾಗಲಿದೆ. ನನ್ನ ಪುತ್ರನನ್ನು ಎಂಎಲ್ಸಿ ಮಾಡ್ತೀವಿ ಅಂದಿದ್ದರು, ನನ್ನ ರಾಜ್ಯಪಾಲರನ್ನಾಗಿ ಮಾಡ್ತೀವಿ ಅಂದಿದ್ದರು. ಆದ್ರೇ ನನಗೆ ಯಾವುದು ಬೇಡ ಎಂದರು. ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಘೋಷಣೆಯಾದ ಬಳಿಕ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರ ಹುದ್ದೆ ಕಳೆದುಕೊಳ್ಳುತ್ತಾರೆ. ಇದರಲ್ಲಿ ಎರಡು ಮಾತಿಲ್ಲ ಎಂಬುದಾಗಿ ಭವಿಷ್ಯ ನುಡಿದರು. ಕೆ.ಎಸ್ ಈಶ್ವರಪ್ಪ ಅವರ ಈ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಾನು ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಏನೂ ಪ್ರತಿಕ್ರಿಯಿಸೋದಿಲ್ಲ ಅಂತ ಹೇಳಿದರು. https://kannadanewsnow.com/kannada/after-ks-eshwarappa-another-bjp-leader-rebel-sanganna-karadi-to-contest-as-independent-candidate/ https://kannadanewsnow.com/kannada/evms-are-proof-of-transparency-in-democratic-process-external-affairs-minister-dr-s-jaishankar/

Read More

ಬೆಂಗಳೂರು : “ನಾವು ಜೆಡಿಎಸ್ ನಾಯಕರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಆ ಮೂಲಕ ದೇಶ ಹಾಗೂ ರಾಜ್ಯದ ಜನರ ನೆನಪಿನಲ್ಲಿ ಅವರು ಉಳಿಯುವಂತೆ ಮಾಡಿದ್ದೇವೆ” ಎಂದು ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಸುರೇಶ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ಸಿನಂತೆ ಬಿಜೆಪಿಯವರು ಕುತ್ತಿಗೆ ಕೊಯ್ಯುವ ಕೆಲಸ ಮಾಡಿಲ್ಲ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ ಸುರೇಶ್ ಉತ್ತರಿಸಿದ ಅವರು, “ಜೆಡಿಎಸ್ ನವರನ್ನು ಈ ದೇಶದ ಪ್ರಧಾನಿ, ರಾಜ್ಯದ ಸಿಎಂ ಮಾಡಿದ್ದೇವೆ. ಈ ದೇಶ ಗುರುತಿಸುವಂತಹ ಕೆಲಸಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಕಾಂಗ್ರೆಸ್ ಪ್ರಧಾನಿ ಮಾಡದೇ ಹೋಗಿದ್ದರೆ ಅವರನ್ನು ಈ ದೇಶ ನೆನಪಿಸಿಕೊಳ್ಳುತ್ತಿರಲಿಲ್ಲ. ರಾಜ್ಯದ ಮೂವತ್ತು ಸಿಎಂಗಳಲ್ಲಿ ಕುಮಾರಸ್ವಾಮಿ ಅವರು ಒಬ್ಬರಾಗುತ್ತಿರಲಿಲ್ಲ” ಎಂದು ತಿರುಗೇಟು ನೀಡಿದರು. ಆಸ್ಪತ್ರೆಯಿಂದ ಬಂದ ನಂತರ ಬಲಿಷ್ಠವಾಗಿ ಪ್ರಚಾರ ಮಾಡುತ್ತೇನೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರ ಪ್ರಶ್ನೆಗಳಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ಆರೋಗ್ಯ ಸರಿ ಇಲ್ಲ…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಆಮ್ಸ್ಟರ್ಡ್ಯಾಮ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ಗೆ ಸೇರಿದ ತಜ್ಞರು ಪ್ರಯೋಗಾಲಯ ಪ್ರಯೋಗಗಳ ಸಮಯದಲ್ಲಿ ಸೋಂಕಿತ ಕೋಶಗಳಿಂದ ಎಚ್ಐವಿಯನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅವರು ಬಳಸಿದ ಪ್ರಕ್ರಿಯೆಯನ್ನು ಕ್ರಿಸ್ಪರ್ ಎಂದು ಕರೆಯಲಾಗುತ್ತದೆ. ಕತ್ತರಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಹಾಗೆಯೇ ಡಿಎನ್ಎ ಎಳೆಗಳನ್ನು ಕತ್ತರಿಸಲು ಕ್ರಿಸ್ಪರ್ ನಿರ್ದಿಷ್ಟ ಕಿಣ್ವಗಳನ್ನು ಬಳಸುತ್ತದೆ. ಅಧ್ಯಯನದ ಲೇಖಕಿ ಡಾ.ಎಲೆನಾ ಹೆರೆರಾ-ಕ್ಯಾರಿಲ್ಲೊ ಅವರ ಪ್ರಕಾರ, ಈ ತಂತ್ರಜ್ಞಾನವು ವೈರಸ್ ಅನ್ನು ಪತ್ತೆಹಚ್ಚಲು ಮತ್ತು ನಿರ್ಮೂಲನೆ ಮಾಡಲು ಸಾಧ್ಯವಾಗಿಸುತ್ತದೆ. “ದಿಗಂತದಲ್ಲಿ ಚಿಕಿತ್ಸೆ ಇದೆ ಎಂದು ಘೋಷಿಸಲು ಈ ಪ್ರಾಥಮಿಕ ಸಂಶೋಧನೆಗಳು ತುಂಬಾ ಪ್ರೋತ್ಸಾಹದಾಯಕವಾಗಿವೆ” ಎಂದು ಅವರು ಹೇಳಿದ್ದನ್ನು ಸನ್ ಉಲ್ಲೇಖಿಸಿದೆ. ವೈರಸ್ ಪೀಡಿತ 95% ಕ್ಕಿಂತ ಹೆಚ್ಚು ಬ್ರಿಟಿಷ್ ಜನರು ತುಂಬಾ ಕಡಿಮೆ ಮಟ್ಟವನ್ನು ಹೊಂದಿದ್ದಾರೆ. ಅದು ಅವರ ರಕ್ತದಲ್ಲಿ ಕಂಡುಬರುವುದಿಲ್ಲ ಅಥವಾ ಹರಡುವುದಿಲ್ಲ, ವೈದ್ಯಕೀಯ ತಂತ್ರಜ್ಞಾನದ ಪ್ರಗತಿಗೆ ಧನ್ಯವಾದಗಳು. ಆದಾಗ್ಯೂ, ಅವರಿಗೆ ದೀರ್ಘಕಾಲೀನ ಔಷಧದ ಅಗತ್ಯವಿದೆ. ತಮ್ಮ ಅನಾರೋಗ್ಯದ ಬಗ್ಗೆ ತಿಳಿದಿಲ್ಲದವರಿಗೆ ಅಥವಾ ಗುಣಮಟ್ಟದ ಆರೋಗ್ಯ ರಕ್ಷಣೆಗೆ…

Read More

ನವದೆಹಲಿ: ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಮೊದಲ ಪಟ್ಟಿಯನ್ನು ಲೋಕಸಭಾ ಚುನಾವಣೆಗೆ ಪ್ರಕಟಿಸಲಾಗಿತ್ತು. ನಾಳೆ ಇನ್ನುಳಿದ ಕರ್ನಾಟಕದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ. ದೆಹಲಿಯಲ್ಲಿ ಇಂದು ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು ನಾಳೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕರ್ನಾಟಕದ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡುವುದಾಗಿ ತಿಳಿಸಿದರು. ದೆಹಲಿಯ ಇಂದಿನ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಕರ್ನಾಟಕದ ಉಳಿದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಯಿತು. ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ನಾಳೆ ಪಟ್ಟಿಯನ್ನು ಪ್ರಕಟಿಸುವುದಾಗಿ ಘೋಷಿಸಿದರು. ಅಂದಹಾಗೇ ನಾಳೆ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕದ ಉಳಿಕ ಲೋಕಸಭಾ ಕ್ಷೇತ್ರಗಳಿಗೆ ಹೆಸರು ಘೋಷಣೆಗೂ ಮುನ್ನಾ ಉನ್ನತ ಮೂಲಗಳಿಂದ ಸಂಭವನೀಯ ಪಟ್ಟಿ ಹೊರ ಬಿದ್ದಿದೆ. ಕಾಂಗ್ರೆಸ್ ಮೂಲಗಳಿಂದ ದೊರೆತ ಮಾಹಿತಿಯಂತೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮೃಣಾಲ್ ಹೆಬ್ಬಾಳ್ಕರ್, ಚಿತ್ರದುರ್ಗಕ್ಕೆ ಚಂದ್ರಪ್ಪ, ಬಾಗಲಕೋಟೆಗೆ ಸಂಯುಕ್ತಾ ಶಿವಾನಂದ ಪಾಟೀಲ್, ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕುಮಾರ ನಾಯಕಗೆ ಟಿಕೆಟ್…

Read More

ರಾಮನಗರ : “ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಬಿಜೆಪಿಯವರು ಅದನ್ನು ದೇಶ ವಿಭಜನೆ ಎಂದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ” ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು. ರಾಮನಗರ ಜಿಲ್ಲೆ ಹಾರೋಹಳ್ಳಿಯಲ್ಲಿ ಮಂಗಳವಾರ ಅನ್ಯಪಕ್ಷಗಳ ನಾಯಕರ ಬೆಂಬಲ ಪಡೆದ ನಂತರ ಮಾಧ್ಯಮಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು. “ಅವರು ಏನೇ ಹೇಳಿದರೂ ನಡೆಯುತ್ತದೆ ಎಂಬ ಧಾಟಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ನೀವು ನನ್ನನ್ನು ಪ್ರಶ್ನೆ ಮಾಡಿದ ರೀತಿಯಲ್ಲಿ ಅವರನ್ನು ಪ್ರಶ್ನೆ ಮಾಡಿ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ಯಾವ ಕಾರಣಕ್ಕೆ ಆ ಹೇಳಿಕೆ ನೀಡಿದೆ ಎಂದು ನೀವು ಪ್ರಧಾನಿಯವರನ್ನು ಕೇಳಿ. ಮೋದಿ ಅವರು ಕಳೆದ 10 ವರ್ಷಗಳಲ್ಲಿ ಬೆಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಚರ್ಚೆ ಮಾಡಿ. ನೀರಿನ ಅಭಾವ ಇರುವ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಯಾಕೆ ನೀಡುತ್ತಿಲ್ಲ? ಈ ಯೋಜನೆಗೆ ಅನುಮತಿ ನೀಡಲು ಯಾವ ಸಮಸ್ಯೆ ಇದೆ. ನಾನು ಕನ್ನಡಿಗರ ಪರವಾಗಿ ಧ್ವನಿ…

Read More

ಬೆಂಗಳೂರು: ಇಂದು ರಾಜ್ಯ ಸರ್ಕಾರದಿಂದ ಬೆಳಗಾವಿಯಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಎಎಸ್ಐ ಸಾವನ್ನಪ್ಪಿದ ಘಟನೆ ನಡೆದ ನಂತ್ರ, ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹೆಲ್ಮೆಟ್ ಧರಿಸೋದನ್ನು ಕಡ್ಡಾಯಗೊಳಿಸಿ ಆದೇಶ ಮಾಡಲಾಗಿದೆ. ಆದ್ರೇ ಇಷ್ಟು ದಿನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಹೆಲ್ಮೆಟ್ ಧರಿಸೋದು ಕಡ್ಡಾಯವಿರಲಿಲ್ಲವೇ? ಜನರಿಗೊಂದು ನ್ಯಾಯ, ಪೊಲೀಸರಿಗೊಂದು ಕಾನೂನಾ ಅಂತ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಮಾರ್ಚ್.17ರಂದು ಮುರಗೋಡ ಪೊಲೀಸ್ ಠಾಣೆಯ ಪಿಎಸ್ಐ ಅವರನ್ನು ಬೆಳಗಾವಿ ಎಸ್. ಪಿ ಭೀಮಾಶಂಕರ್ ಗುಳೆದ ಅವರು ಸೇವೆಯಿಂದ ಅಮಾನತುಪಡಿಸಿದ್ದರು. ಈ ಸುದ್ದಿ ಓದಿದಂತ ಎಂಥಹವರಿಗೂ ಖೇದ ಉಂಟು ಮಾಡಿತ್ತು. ಕಾರಣ ಎಸ್ಪಿ ಹೆಲ್ಮೆಟ್ ಧರಿಸದೇ ಎಎಸ್ಐ ಸಾವನ್ನಪ್ಪಿದ್ದಕ್ಕೆ, ಪಿಎಸ್ಐ ಅಮಾನತುಗೊಳಿಸಿದಂತ ಆದೇಶವಾಗಿತ್ತು. ಪಿಎಸ್ಐ ನಂದೀಶ ಅವರನ್ನು ಸಕಾರಣವಿಲ್ಲದೇ ಅಮಾನತು ಪಡಿಸಿದ ಬೆಳಗಾವಿ ಎಸ್. ಪಿ ಭೀಮಾಶಂಕರ್ 2017 ರಲ್ಲಿ ತಮ್ಮ ಕಚೇರಿಯಲ್ಲಿಯೇ ಸೆಕ್ಸ್ ಸ್ಕ್ಯಾಮ್ ನಲ್ಲಿ ಸಿಲುಕಿಕೊಂಡಿದ್ದರು. ಇದು ಮಾಧ್ಯಮ ಮತ್ತು ಇಲಾಖಾ ವಲಯಗಳಲ್ಲಿ ಭಾರಿ ಸುದ್ದಿಯಾಗಿತ್ತು. ಆಗ ಕರ್ನಾಟಕದ ಪೊಲೀಸ್ ಚೀಫ್ ಅವರಿಗೆ ಗುಳೆದ್…

Read More

ಬೆಂಗಳೂರು: ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಮಾರ್ಚ್.2024ರಲ್ಲಿ ನಡೆದಂತ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರವನ್ನು ಇಂದು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವಂತ ಮಂಡಳಿಯು, ದಿನಾಂಕ 01-03-2024ರಿಂದ 18-03-2024ರವರೆಗೆ ನಡೆದಂತ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ಪ್ರಕಟಿಸಲಾಗಿದೆ. ದಿನಾಂಕ 20-03-2024ರಿಂದ 22-03-2024ರವರೆಗೆ ನಡೆಯಲಿರುವಂತ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ನಂತರ ಪ್ರಕಟಿಸುವುದಾಗಿ ತಿಳಿಸಿದೆ. ಇದೀಗ ಪ್ರಕಟಿಸಿರುವಂತ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರಗಳಲ್ಲಿ ದ್ವಂದ್ವಾರ್ಥ ಬರುವಂತ ಪ್ರಶ್ನೆಗಳು, ಅಪೂರ್ಣ ಪ್ರಶ್ನೆಗಳು, ಪಠ್ಯಕ್ರಮದಲ್ಲಿ ಇಲ್ಲದೇ ಇರುವಂತ ಪ್ರಶ್ನೆಗಳು, ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಯಲ್ಲಿ ಬೇರೆ ಬೇರೆ ಅರ್ಥ ಬರುವಂತಿದ್ದರೇ, ಒಂದು ಆಯ್ಕೆಗಿಂತ ಹೆಚ್ಚು ಆಯ್ಕೆಗಳು ಸರಿ ಇರುವ ಬಹು ಆಯ್ಕೆ ಪ್ರಶ್ನೆಗಳಿದ್ದರೇ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕೋರಿದೆ. ಈ ಆಕ್ಷೇಪಣೆಗಳನ್ನು ದಿನಾಂಕ 19-03-2024ರ ಇಂದಿನಿಂದ 21-03-2024ರ ಸಂಜೆ 5 ಗಂಟೆಯವರೆಗೆ ಸಲ್ಲಿಸೋದಕ್ಕೆ ಅವಕಾಶ ನೀಡಲಾಗಿದೆ. ಈ ದಿನಾಂಕದ ನಂತ್ರ ಬಂದಂತ ಆಕ್ಷೇಪಣೆಗಳನ್ನು ಪರಿಗಣಿಸೋದಿಲ್ಲ ಅಂತ ಹೇಳಿದೆ.…

Read More

ಬೆಂಗಳೂರು : “ದೇವೇಗೌಡರ ಅಳಿಯ ಅವರು ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡಲು ಅವಕಾಶ ನೀಡಿದ್ದು ಜೆಡಿಎಸ್ ನ ಮೊದಲ ಆತ್ಮಹತ್ಯೆ ಪ್ರಯತ್ನ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬಣ್ಣಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯಿಸಿದರು. 2 ಸ್ಥಾನಕ್ಕಾಗಿ ಮೈತ್ರಿ ಮಾಡಿಕೊಳ್ಳಬೇಕಿತ್ತೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ; “ಇದನ್ನು ನಾನು ನಿರೀಕ್ಷೆ ಮಾಡಿದ್ದೆ. ಬಿಜೆಪಿ ಮೈತ್ರಿಯಿಂದ ಜೆಡಿಎಸ್ ಪಕ್ಷಕ್ಕೆ ಬಹಳ ಮುಜುಗರವಾಗಿದೆ. ಅವರ ಆಂತರಿಕ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಜೆಡಿಎಸ್ ಗೆ ಕೆಲವು ಕ್ಷೇತ್ರಗಳಲ್ಲಿ ಸ್ವಂತ ಶಾಸಕರು, ಸಂಸದರು ಇದ್ದಾರೆ. ಅವರ ಶಕ್ತಿ ಪಕ್ಷಕ್ಕೆ ಬೇಕಾಗಿದೆ. ಆದರೆ ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಬಿಜೆಪಿ ಇದೇ ರೀತಿ ಮಾಡಿಕೊಂಡು ಬಂದಿದೆ. ಇದು ಅವರ ಪಕ್ಷಗಳ ಆಂತರಿಕ ವಿಚಾರ. ಆ ಬಗ್ಗೆ ಅವರೇ ತೀರ್ಮಾನ ಮಾಡಿಕೊಳ್ಳಲಿ. ನನಗೂ ಅದಕ್ಕೂ ಸಂಬಂಧವಿಲ್ಲ” ಎಂದು ತಿಳಿಸಿದರು. ಸದಾನಂದಗೌಡರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಲು ಆಪರೇಶನ್ ಮಾಡಲಾಗುತ್ತಿದೆ ಎಂಬ…

Read More

ಎಷ್ಟೇ ಹಣ, ಸಂಪತ್ತು ಗಳಿಸಿದರೂ ನಮಗೆ ಅದು ಹೊಟ್ಟೆಗೆ ಮಾತ್ರ ಊಟ. ಒಂದು ದಿನವೂ ಹಸಿವಿನಿಂದ ಇರಬಾರದು ಎಂದು ಓಡಿ ಹಣ ಸಂಗ್ರಹಿಸುತ್ತೇವೆ. ಎಷ್ಟೇ ಹಣವಿದ್ದರೂ ಹತ್ತು ದಿನದ ಆಹಾರವನ್ನು ಒಂದೇ ದಿನದಲ್ಲಿ ತಿನ್ನಲು ಸಾಧ್ಯವಿಲ್ಲ. ಒಂದು ದಿನವೂ ತಿನ್ನದೆ ಹಸಿವಿನಿಂದ ಇರಲು ಸಾಧ್ಯವಿಲ್ಲ. ಅನ್ನಪೂರ್ಣಿಯೇ ನಮಗೆ ಈ ಅನ್ನವನ್ನು ಕೊಡುತ್ತಾಳೆ. ಅನ್ನಪುರಣಿಯನ್ನು ವರ್ಷದಲ್ಲಿ ಒಂದು ದಿನ ಪಠಿಸಬಹುದಾದ ರೀತಿಯಲ್ಲಿ ಪೂಜಿಸಿದರೆ ನಿಮ್ಮ ಮನೆಗೆ ಬಡತನ ಎಂಬ ಪದ ಬರುವುದಿಲ್ಲ. ಸಂಪತ್ತು ಹೇರಳವಾಗಲಿದೆ. ಈ ಪೋಸ್ಟ್ ಮೂಲಕ ನಾವು ಶಕ್ತಿಶಾಲಿ ಅನ್ನಪುರಣಿ ಪೂಜೆಯ ಬಗ್ಗೆ ಅಪರೂಪದ ಆಧ್ಯಾತ್ಮಿಕ ಮಾಹಿತಿಯನ್ನು ತಿಳಿಯಲಿದ್ದೇವೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ,…

Read More

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (Enforcement Directorate -ED) ನೀಡಿದ ಎಲ್ಲಾ ಸಮನ್ಸ್ ಗಳನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ( Delhi chief minister Arvind Kejriwal ) ಮಂಗಳವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆಮ್ ಆದ್ಮಿ ಪಕ್ಷದ (Aam Aadmi Party -AAP)  ಸಂಚಾಲಕರ ಮನವಿಯನ್ನು ಹೈಕೋರ್ಟ್ನ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಲಿದೆ. ಅಬಕಾರಿ ನೀತಿ-ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಗುರುವಾರ ಅಂದರೆ ಮಾರ್ಚ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಸಂಸ್ಥೆ ಭಾನುವಾರ ಕೇಜ್ರಿವಾಲ್ ಅವರಿಗೆ ಒಂಬತ್ತನೇ ಸಮನ್ಸ್ ನೀಡಿತ್ತು. ಈ ಪ್ರಕರಣದಲ್ಲಿ ಹಿಂದಿನ ಎಂಟು ಸಮನ್ಸ್ಗಳಲ್ಲಿ 6 ತಪ್ಪಿಸಿಕೊಂಡಿದ್ದಕ್ಕಾಗಿ ಅವರ ವಿರುದ್ಧ ಇಡಿ ಸಲ್ಲಿಸಿದ ಎರಡು ದೂರುಗಳ ಮೇರೆಗೆ ದೆಹಲಿ ನ್ಯಾಯಾಲಯವು ದೆಹಲಿ ಸಿಎಂಗೆ ಜಾಮೀನು ನೀಡಿದ ಒಂದು ದಿನದ ನಂತರ ಈ ಸಮನ್ಸ್ ಹೊರಡಿಸಲಾಗಿದೆ. https://kannadanewsnow.com/kannada/state-school-education-department-releases-sample-answer-sheets-for-ii-puc-exam-1/ https://kannadanewsnow.com/kannada/mr-dk-shivakumar-today-you-are-responsible-for-jds-bjp-alliance-hd-kumaraswamy/

Read More