Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: “ಇಂದು ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಬೆಳಗ್ಗೆ ಪಕ್ಷದ ಎಲ್ಲಾ ಶಾಸಕರು, ಪದಾಧಿಕಾರಿಗಳು, ಚುನಾವಣೆ ಸ್ಪರ್ಧಿಸಿದ್ದ ನಾಯಕರ ಸಭೆ ನಡೆಸಲಾಗುವುದು. ಮಧ್ಯಾಹ್ನ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜತೆ ಸಭೆ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯ ಇಂದಿರಾ ಭವನದಲ್ಲಿ ಸಭೆ ಆರಂಭಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಈ ಸಭೆಯಲ್ಲಿ ಪಕ್ಷದ ಸಂಘಟನೆ, ಬೂತ್ ಮಟ್ಟದಲ್ಲಿ ಬಿಎಲ್ಎಗಳು, ಮತದಾರರ ಹೆಸರು ಸೇರ್ಪಡೆ, ಪರಿಷ್ಕರಣೆ, ಗ್ಯಾರಂಟಿ ಅನುಷ್ಠಾನ, ಜಿಲ್ಲಾ ಮಟ್ಟದ ಸಭೆ, ವಿಧಾನಸಭೆ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸಭೆ, ಕಾರ್ಯಕರ್ತರ ಸಮಾವೇಶ, ರಾಜ್ಯ ಮಟ್ಟದ ಸಮಾವೇಶದ ಬಗ್ಗೆ ಚರ್ಚೆ ಮಾಡಲಿದ್ದೇವೆ” ಎಂದು ತಿಳಿಸಿದರು. ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಿಗೆ ‘ಸಂಪುಟ ದರ್ಜೆ’ ಸ್ಥಾನಮಾನ: ‘ಸಿಎಂ ಸಿದ್ಧರಾಮಯ್ಯ’ ಮಹತ್ವದ ಘೋಷಣೆ ಬೆಂಗಳೂರು: ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡೋದಾಗಿ ಸಿಎಂ ಸಿದ್ಧರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ.…
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಜನವರಿ 11 ರಂದು ಭಾರತದಲ್ಲಿ ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ 20 ಐ ಸರಣಿಯಿಂದ ಹೊರಗುಳಿದಿದ್ದಾರೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ 20 ಪಂದ್ಯದ ಮುನ್ನಾದಿನದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಫ್ಘಾನಿಸ್ತಾನದ ನಾಯಕ ಇಬ್ರಾಹಿಂ ಝದ್ರನ್, ರಶೀದ್ ಅನುಪಸ್ಥಿತಿಯ ಸುದ್ದಿಯನ್ನು ದೃಢಪಡಿಸಿದರು. ಅವರು (ರಶೀದ್) ಸಂಪೂರ್ಣವಾಗಿ ಫಿಟ್ ಆಗಿಲ್ಲ ಆದರೆ ತಂಡದೊಂದಿಗೆ ಪ್ರಯಾಣಿಸುತ್ತಿದ್ದಾರೆ” ಎಂದು ಜದ್ರಾನ್ ಹೇಳಿದರು. “ನಾವು ನಿರೀಕ್ಷಿಸಿದಷ್ಟು ಬೇಗ ಅವರು ಫಿಟ್ ಆಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಅವರು ವೈದ್ಯರೊಂದಿಗೆ ತಮ್ಮ ಪುನಶ್ಚೇತನವನ್ನು ಮಾಡುತ್ತಿದ್ದಾರೆ, ಮತ್ತು ನಾವು ಅವರನ್ನು ಸರಣಿಯಲ್ಲಿ ಮಿಸ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಟಿ 20 ಪಂದ್ಯಗಳಲ್ಲಿ ಅಫ್ಘಾನಿಸ್ತಾನದ ಅತಿ ಹೆಚ್ಚು ವಿಕೆಟ್ ಪಡೆದ 25 ವರ್ಷದ ಕ್ರಿಕೆಟಿಗ, ಕೆಲವು ತಿಂಗಳ ಹಿಂದೆ ಬೆನ್ನುನೋವಿನಿಂದ ಬಳಲುತ್ತಿದ್ದರು. ಅಂದಿನಿಂದ ಆಟದಿಂದ ಹೊರಗುಳಿದಿದ್ದಾರೆ. ಅವರು ತಂಡದೊಂದಿಗೆ ಭಾರತಕ್ಕೆ ಪ್ರಯಾಣಿಸಿದರು ಮತ್ತು ತರಬೇತಿ ಅವಧಿಗಳಲ್ಲಿ ಭಾಗವಹಿಸಿದರು.…
ಬೆಂಗಳೂರು: ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡೋದಾಗಿ ಸಿಎಂ ಸಿದ್ಧರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ, ಜಿಲ್ಲಾ, ತಾಲೂಕು ಹಾಗೂ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ ಮಾಡಲಾಗುತ್ತದೆ ಎಂದರು. KPCC ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳ ಸಭೆಯಲ್ಲಿ ಸಿಎಂ ಮಹತ್ವದ ಘೋಷಣೆ ಘೋಷಣೆ ಮಾಡಿದರು. ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗುತ್ತದೆ. ಐದು ಮಂದಿ ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗುತ್ತದೆ. ಉಳಿದ ಸಮಿತಿ ಅಧ್ಯಕ್ಷ ಉಪಾಧ್ಯಕ್ಷರು, ಸದಸ್ಯರಿಗೆ ಗೌರವ ಧನ ನೀಡಲಾಗುತ್ತದೆ. ವಾರ್ಷಿಕ 16 ಕೋಟಿ ರೂ. ವೆಚ್ಚ ಮಾಡಲಾಗುವುದು. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಹಿನ್ನೆಲೆಯಲ್ಲಿ ಈ ನಿರ್ಧಾರ ಎಂದು ತಿಳಿಸಿದ್ದಾರೆ. https://kannadanewsnow.com/kannada/muzrai-departments-temple-hundi-money-will-be-used-for-the-temple-minister-ramalinga-reddy/ https://kannadanewsnow.com/kannada/makar-sankranti-2024-when-is-makar-sankranti-this-year-the-date-auspicious-time-method-of-worship-are-as-follows/
ಬೆಂಗಳೂರು: ಮುಜರಾಯಿ ಇಲಾಖೆಯ ದೇವಸ್ಥಾನದ ಹುಂಡಿ ಹಣವನ್ನು ಆ ದೇಗುಲಕ್ಕೆ ಬಳಕೆ ಮಾಡೋದಾಗಿ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಅವರು, ಮುಜರಾಯಿ ವ್ಯಾಪ್ತಿಯ ದೇವಸ್ಥಾನದ ಹುಂಡಿಯಲ್ಲಿ ಸೇರಿದ ಹಣವನ್ನು ಅದೇ ದೇವಸ್ಥಾನಕ್ಕೆ ಮಾತ್ರ ಬಳಕೆ ಮಾಡಲಾಗುತ್ತದೆ. ಬೇರೆ ದೇಗುಲಗಳ ಅಭಿವೃದ್ಧಿಗೂ ಈ ಹಣವನ್ನು ವರ್ಗಾವಣೆ ಮಾಡಲು ಬರೋದಿಲ್ಲ ಅಂತ ತಿಳಿಸಿದ್ದಾರೆ. ಒಟ್ಟಾರೆಯಾಗಿ ಒಂದು ದೇವಸ್ಥಾನದ ಹುಂಡಿ ಹಣವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಅನ್ಯ ಉದ್ದೇಶಕ್ಕಾಗಲಿ, ಬೇರೆ ದೇವಸ್ಥಾನದ ಅಭಿವೃದ್ಧಿಗೂ ಈ ಹಣವನ್ನು ವರ್ಗಾವಣೆ ಮಾಡೋದಿಲ್ಲ ಅಂತ ಹೇಳಿದ್ದಾರೆ. https://twitter.com/KarnatakaVarthe/status/1744704989459878179 https://kannadanewsnow.com/kannada/no-spiritual-gimmick-in-lok-sabha-elections-madhu-bangarappa/ https://kannadanewsnow.com/kannada/makar-sankranti-2024-when-is-makar-sankranti-this-year-the-date-auspicious-time-method-of-worship-are-as-follows/
ನವದೆಹಲಿ: ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬಂಗ್ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ‘ಭಾರತ್ ನ್ಯಾಯ್ ಯಾತ್ರೆ’ಗೆ ಮಣಿಪುರ ಸರ್ಕಾರ ಬುಧವಾರ ‘ಗ್ರೌಂಡ್ ಪರ್ಮಿಟ್’ ನಿರಾಕರಿಸಿದೆ. ಜನವರಿ 14ರಂದು ಇಂಫಾಲ್ ನಿಂದ ಯಾತ್ರೆ ಆರಂಭವಾಗಬೇಕಿತ್ತು. ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ಹಿರಿಯ ಕಾಂಗ್ರೆಸ್ ಶಾಸಕ ಕೆ.ಮೇಘಚಂದ್ರ ಅವರು ಪಕ್ಷದ ನಾಯಕರ ತಂಡದೊಂದಿಗೆ ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರನ್ನು ಅವರ ಕಚೇರಿ ಸಂಕೀರ್ಣ ಮತ್ತು ಬಂಗಲೆಯಲ್ಲಿ ಭೇಟಿಯಾದರು. ಸರ್ಕಾರದ ಪ್ರತಿಕ್ರಿಯೆಯನ್ನು “ತುಂಬಾ ದುರದೃಷ್ಟಕರ” ಎಂದು ಕರೆದ ಮೇಘಚಂದ್ರ, ಆದಾಗ್ಯೂ, ಕುಸಿತದ ನಂತರ, ಅವರು ಸ್ಥಳವನ್ನು ತೌಬಲ್ ಜಿಲ್ಲೆಯ ಖೊಂಗ್ಜೋಮ್ನಲ್ಲಿ ಖಾಸಗಿ ಸ್ಥಳಕ್ಕೆ ಬದಲಾಯಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು 14 ರಾಜ್ಯಗಳು ಮತ್ತು 85 ಜಿಲ್ಲೆಗಳನ್ನು ಒಳಗೊಂಡ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ರ್ಯಾಲಿಯಲ್ಲಿ, ಕಾಲ್ನಡಿಗೆ ಮೆರವಣಿಗೆ ಮತ್ತು ಬಸ್ ಸವಾರಿ ಇರುತ್ತದೆ. https://kannadanewsnow.com/kannada/no-spiritual-gimmick-in-lok-sabha-elections-madhu-bangarappa/ https://kannadanewsnow.com/kannada/cm-should-talk-about-the-lack-of-development-in-the-state-nikhil-kumaraswamy/
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ( KPCC)ಯಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಚುನಾವಣಾ ಮುಂಚಿತವಾಗಿ 28 ಜಿಲ್ಲೆಗಳಿಗೆ ಜಿಲ್ಲಾ ಸಂಯೋಜಕರನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ. ಈ ಕುರಿತಂತೆ ಇಂದು ಆದೇಶಿಸಿರುವಂತ ಅವರು, ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಗೆ ಸಂಸತ್ ಕ್ಷೇತ್ರವಾರು ಸಂಯೋಜಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅನುಮೋದನೆ ನೀಡಿದೆ ಎಂದಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಇದನ್ನು ಈ ಕೆಳಗಿನಂತೆ ಮಾರ್ಪಡಿಸಲಾಗಿದೆ. ಈ ಕೆಳಗಿನ ಬದಲಾವಣೆಗಳನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಜವಾಬ್ದಾರಿಗಳನ್ನು ತೆಗೆದುಕೊಳ್ಳುವಂತೆ ನಾನು ಎಲ್ಲಾ ಮಂತ್ರಿಗಳನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ. ಹೀಗಿದೆ ಲೋಕಸಭಾ ಚುನಾವಣೆಗಾಗಿ ನೇಮಕ ಮಾಡಲಾಗಿರುವಂತ ಜಿಲ್ಲಾ ಸಂಯೋಜಕರ ಪಟ್ಟಿ ಬಾಗಲಕೋಟೆ-ಆರ್.ಬಿ ತಿಮ್ಮಾಪುರ್ ಬೆಂಗಳೂರು ಕೇಂದ್ರ – ಜಮೀನ್ ಅಹ್ಮದ್ ಖಾನ್ ಬೆಂಗಳೂರು ಉತ್ತರ – ಕೃಷ್ಣಬೈರೇಗೌಡ ಬೆಂಗಳೂರು ಗ್ರಾಮಾಂತರ – ಡಾ.ಎಂ.ಸಿ ಸುಧಾಕರ್ ಬೆಂಗಳೂರು ದಕ್ಷಿಣ – ರಾಮಲಿಂಗಾರೆಡ್ಡಿ ಬೆಳಗಾವಿ- ಸತೀಶ್…
ಬೆಂಗಳೂರು: ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ. ಕಳೆದ ವರ್ಷ ಕೂಡ ಮೊದಲಿಗೆ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿ, ವಿವಾದದ ಸ್ವರೂಪ ಪಡೆದ ನಂತರ ಅನುಮತಿ ನೀಡಿತ್ತು, ಈ ಬಾರಿ ಮತ್ತೆ ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಮುಂದುವರೆಸಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್ ಮಾಡಿರುವಂತ ಅವರು, ನವಕರ್ನಾಟಕದ ಅಭಿವೃದ್ಧಿಯ ದೃಷ್ಠಾರ, ಸಾಮಾಜಿಕ ನ್ಯಾಯದ ಹರಿಕಾರ, ನೀರಾವರಿ, ಬ್ಯಾಂಕಿಂಗ್, ಮೂಲಸೌಕರ್ಯದ ಕ್ಷೇತ್ರಗಳ ಅಭಿವೃದ್ದಿಯ ಮೂಲಕ ಮೈಸೂರನ್ನು ಒಂದು ಮಾದರಿ ರಾಜ್ಯವಾಗಿ ಕಟ್ಟಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ತಬ್ಧಚಿತ್ರ, ರಾಜಧಾನಿ ಬೆಂಗಳೂರಿನ ಗ್ರಾಮದೇವತೆ, ಸುಮಾರು 10ನೇ ಶತಮಾನದಲ್ಲಿ ನಿರ್ಮಿಸಿಲ್ಪಟ್ಟ ಅಣ್ಣಮ್ಮದೇವಿಯ ದೇವಸ್ಥಾನದ ಸ್ತಬ್ಧಚಿತ್ರ ಒಳಗೊಂಡಂತೆ ಸುಮಾರು 4 ಸ್ತಬ್ಧಚಿತ್ರ ಮಾದರಿಗಳಿಗೆ ಅವಕಾಶ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರದ ಆಯ್ಕೆ ಸಮಿತಿಯು…
ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ( Corona ) ಆರ್ಭಟ ಮುಂದಿವರೆದಿದೆ. ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 252 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ ಇಬ್ಬರು ಸಾವನ್ನಪ್ಪಿದ್ದಾರೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 7359 ಮಂದಿಯನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬೆಂಗಳಊರು 172, ಹಾಸನ 20, ಮೈಸೂರು 08 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 252 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ ಎಂದಿದೆ. ಇಂದು 441 ಸೋಂಕಿತರು ಗುಣಮುಖರಾಗಿದ್ದಾರೆ. 252 ಮಂದಿ ಸೋಂಕಿತರಿಗೆ ಪಾಸಿಟಿವ್ ಬಂದ ಕಾರಣ ಸಕ್ರೀಯ ಸೋಂಕಿತರ ( Covid19 Case ) ಸಂಖ್ಯೆ 1031ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.3.42ರಷ್ಟಿದೆ ಎಂಬುದಾಗಿ ತಿಳಿಸಿದೆ. https://kannadanewsnow.com/kannada/good-news-for-devotees-of-savadatti-yellamma-minister-ramalinga-reddys-master-plan-for-holistic-development/ https://kannadanewsnow.com/kannada/bcci-announces-official-partners-for-team-indias-home-season-2024-26/
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುವಂತ 2024ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕಗಳನ್ನು ಬದಲಾವಣೆ ಮಾಡಲಾಗಿದೆ. ಈ ಮೊದಲಿನ ದಿನಾಂಕಕ್ಕೂ ಎರಡು ದಿನ ಮೊದಲೇ ಪರೀಕ್ಷೆ ನಡೆಸೋದಾಗಿ ಮರು ದಿನಾಂಕವನ್ನು ಕೆಇಎ ಪ್ರಕಟಿಸಿದೆ. ಈ ಕುರಿತಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2024ನೇ ಸಾಲಿನ ಸಿಇಟಿ ಪರೀಕ್ಷಾ ದಿನಾಂಕಗಳಂದೇ ಎನ್ ಡಿಎ ಪರೀಕ್ಷೆ ನಿಗದಿಯಾಗಿತ್ತು. ವಿದ್ಯಾರ್ಥಿಗಳು ಪರೀಕ್ಷಾ ದಿನಾಂಕ ಬದಲಾವಣೆ ಮಾಡುವಂತೆ ಕೋರಿದ್ದರು. ಹೀಗಾಗಿ ಪರೀಕ್ಷೆ ದಿನಾಂಕವನ್ನು ಬದಲಾವಣೆ ಮಾಡಿರೋದಾಗಿ ತಿಳಿಸಿದ್ದಾರೆ. ಕೆಇಎಯಿಂದ ಏಪ್ರಿಲ್ 20, 21ರಂದು ಈ ಮೊದಲು ಸಿಇಟಿ ಪರೀಕ್ಷೆ ನಡೆಸೋದಾಗಿ ದಿನಾಂಕ ಘೋಷಣೆ ಮಾಡಲಾಗಿತ್ತು. ಆದ್ರೇ ಎನ್ ಡಿಎ ಪರೀಕ್ಷೆ 21ರಂದು ಇದ್ದ ಕಾರಣ ಸಿಇಟಿ 2024ರ ಪರೀಕ್ಷೆಯನ್ನು ಏಪ್ರಿಲ್ 18, 19ರಂದು ನಡೆಸೋದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಕೆಇಎಯಿಂದ 2024ರ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 20, 21ರ ಬದಲಾಗಿ ಏಪ್ರಿಲ್ 18, 19ಕ್ಕೆ ಎರಡು ದಿನ ಮುಂಚೆ ನಡೆಸೋದಾಗಿ ದಿನಾಂಕವನ್ನು…
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2024-2026ರ ದೇಶೀಯ ಮತ್ತು ಅಂತರರಾಷ್ಟ್ರೀಯ ಋತುವಿಗೆ ಟೀಮ್ ಇಂಡಿಯಾದ ಅಧಿಕೃತ ಪಾಲುದಾರರನ್ನು ಮಂಗಳವಾರ ಪ್ರಕಟಿಸಿದೆ. ಕ್ಯಾಂಪಾ ಮತ್ತು ಆಟಂಬರ್ಗ್ ಟೆಕ್ನಾಲಜೀಸ್ ಅನ್ನು ಭಾರತೀಯ ತವರು ಋತುವಿನಲ್ಲಿ ಅಧಿಕೃತ ಪಾಲುದಾರರಾಗಿ ನೇಮಿಸಲಾಗಿದೆ ಎಂದು ಉನ್ನತ ಕ್ರಿಕೆಟ್ ಮಂಡಳಿ ದೃಢಪಡಿಸಿದೆ. ಭಾರತೀಯ ಪುರುಷರ ತಂಡ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಪೂರ್ಣಗೊಳಿಸಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಟಿ20 ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ನಂತರ ಕೆ.ಎಲ್.ರಾಹುಲ್ ಪಡೆ ದಕ್ಷಿಣ ಆಫ್ರಿಕಾವನ್ನು 2-1 ಅಂತರದಿಂದ ಸೋಲಿಸಿ ಏಕದಿನ ಸರಣಿಯನ್ನು ಗೆದ್ದುಕೊಂಡಿತು. ಕೇಪ್ಟೌನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಶತಕದ ನೆರವಿನಿಂದ ಭಾರತ 1-1ರ ಸಮಬಲ ಸಾಧಿಸಿದೆ. ಆಲ್ರೌಂಡರ್ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ 20 ಐ ಸರಣಿಗೆ ಆತಿಥ್ಯ ವಹಿಸಲಿದೆ. ಅಫ್ಘಾನಿಸ್ತಾನ ವಿರುದ್ಧದ ಟಿ 20 ಐ ಸರಣಿಗೆ…