Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಅಮೀರ್ ಖಾನ್ ನಂತರ, ರಣವೀರ್ ಸಿಂಗ್ ರಾಜಕೀಯ ಪಕ್ಷವನ್ನು ಅನುಮೋದಿಸುವ ವೀಡಿಯೊ ವೈರಲ್ ಆಗಿದೆ. ಮೂಲತಃ, ಈ ವೀಡಿಯೊ ನಟನ ಇತ್ತೀಚಿನ ವಾರಣಾಸಿ ಭೇಟಿಯಿಂದ ಬಂದಿದೆ, ಅಲ್ಲಿ ಅವರು ನಗರಕ್ಕೆ ಭೇಟಿ ನೀಡಿದ ತಮ್ಮ ದೈವಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ವಾರಣಾಸಿಯ ನಮೋ ಘಾಟ್ನಲ್ಲಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಫ್ಯಾಷನ್ ಶೋಗಾಗಿ ರಣವೀರ್ ಸಿಂಗ್ ಕೃತಿ ಸನೋನ್ ಅವರೊಂದಿಗೆ ಶೋ ಸ್ಟಾಪರ್ ಆಗಿದ್ದರು. ಕಾರ್ಯಕ್ರಮಕ್ಕೂ ಮುನ್ನ ಇಬ್ಬರು ನಟರು ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಹಂಚಿಕೊಂಡರು. ಈಗ, 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಪಕ್ಷವನ್ನು ಅನುಮೋದಿಸುವ ‘ಗಲ್ಲಿ ಬಾಯ್’ ನಟನ ಎಐ-ರಚಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. https://twitter.com/SujataIndia1st/status/1780625636924547314 ಈ ಹಿಂದೆ, ಅಮೀರ್ ಖಾನ್ ಅವರು ರಾಜಕೀಯ ಪಕ್ಷವನ್ನು ಉತ್ತೇಜಿಸುವ ವೀಡಿಯೊ ವೈರಲ್ ಆದ ಡೀಪ್ ಫೇಕ್ ಗಳಿಗೆ ಬಲಿಯಾಗಿದ್ದರು. ವೀಡಿಯೊವನ್ನು “ನಕಲಿ” ಎಂದು ಕರೆದ 59 ವರ್ಷದ ನಟ ಮುಂಬೈ ಪೊಲೀಸರ…
ನವದೆಹಲಿ: ಅಬಕಾರಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟೈಪ್ 2 ಮಧುಮೇಹ ಹೊಂದಿದ್ದರೂ ವೈದ್ಯಕೀಯ ಜಾಮೀನು ಪಡೆಯಲು ಕಾರಣಗಳನ್ನು ಸೃಷ್ಟಿಸಲು ಪ್ರತಿದಿನ ಮಾವು ಮತ್ತು ಸಿಹಿತಿಂಡಿಗಳಂತಹ ಸಕ್ಕರೆ ಹೆಚ್ಚಿರುವ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಇಡಿ ಗುರುವಾರ ನ್ಯಾಯಾಲಯಕ್ಕೆ ಹೇಳಿದೆ. ಸಿಬಿಐ ಮತ್ತು ಇಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಜಾರಿ ನಿರ್ದೇಶನಾಲಯ (ಇಡಿ) ಈ ಹಕ್ಕು ಮಂಡಿಸಿದ್ದು, ಕೇಜ್ರಿವಾಲ್ ಅವರ ಡಯಟ್ ಚಾರ್ಟ್ ಸೇರಿದಂತೆ ಈ ವಿಷಯದಲ್ಲಿ ವರದಿ ಸಲ್ಲಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತಮ್ಮ ಸಾಮಾನ್ಯ ವೈದ್ಯರನ್ನು ಸಂಪರ್ಕಿಸಲು ಅನುಮತಿ ಕೋರಿ ಕೇಜ್ರಿವಾಲ್ ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ರಕ್ತದಲ್ಲಿನ ಸಕ್ಕರೆ ಏರಿಳಿತಗೊಳ್ಳುತ್ತಿದೆ ಎಂದು ಹೇಳಲಾಗುತ್ತದೆ. ಅವರು ತಮ್ಮ ನಿಯಮಿತ ವೈದ್ಯರನ್ನು ಸಂಪರ್ಕಿಸಲು ಬಯಸುತ್ತಾರೆ. ವಿಶೇಷ ನ್ಯಾಯಾಧೀಶ ರಾಕೇಶ್ ಸಿಯಾಲ್ ಅವರು ಅರ್ಜಿಯ ಬಗ್ಗೆ ಉತ್ತರವನ್ನು ಸಲ್ಲಿಸುವಂತೆ ಇಡಿಗೆ ನಿರ್ದೇಶನ ನೀಡಿದ್ದರು. ನ್ಯಾಯಾಲಯವು…
ಬೆಂಗಳೂರು: ಲೋಕಸಭಾ ಚುನಾವಣೆ ಮತದಾನದ ಬಳಿಕ ಚುನಾವಣೋತ್ತರ ಸಮೀಕ್ಷೆಯನ್ನು ನಿಷೇಧಿಸಿ ಚುನಾವಣಾ ಆಯೋಗವು ಖಡಕ್ ಆದೇಶ ಹೊರಡಿಸಿದೆ. ಈ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದಂತ ಸೂರಳ್ ಕರ್ ವಿಕಾರ್ ಕಿಶೋರ್ ಅವರು ಎಲ್ಲಾ ಮಾಧ್ಯಮಗಳ ಸಂಪಾದಕರು, ವರದಿಗಾರರು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ “126A Restriction on publication and dissemination of rrsult of exit polls, etc (1) no person shall conduct any exit poll and publish or publicise by means of the print or electronic media or disseminate in any other manner, whatsover, the result of any exit poll during such period, as may be notified by the Election Commission in this regard” ಮೇಲಿನ ಕಲಂನಲ್ಲಿ ಭಾರತ…
ನವದೆಹಲಿ: ಎಚ್ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಗುರುವಾರ ತನ್ನ ನಾಲ್ಕನೇ ತ್ರೈಮಾಸಿಕದ ಸ್ವತಂತ್ರ ಲಾಭದಲ್ಲಿ (ಕ್ಯೂ 4 ಎಫ್ವೈ 24 ಪಿಎಟಿ) ಶೇಕಡಾ 14.76 ರಷ್ಟು ಏರಿಕೆ ಕಂಡು ಸುಮಾರು 412 ಕೋಟಿ ರೂ.ಗೆ ತಲುಪಿದೆ. ಖಾಸಗಿ ವಿಮಾದಾರರ ನಿವ್ವಳ ಪ್ರೀಮಿಯಂ ಆದಾಯವು 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 5.46 ರಷ್ಟು ಏರಿಕೆಯಾಗಿ 20,488 ಕೋಟಿ ರೂ.ಗೆ ತಲುಪಿದೆ. ಎಚ್ಡಿಎಫ್ಸಿ ಲೈಫ್ ಪ್ರತಿ ಷೇರಿಗೆ 2 ರೂ.ಗಳ ಲಾಭಾಂಶವನ್ನು ಘೋಷಿಸಿದೆ. ಈ ಷೇರು ಕೊನೆಯದಾಗಿ ಶೇಕಡಾ 1.19 ರಷ್ಟು ಏರಿಕೆಯಾಗಿ 611.65 ರೂ.ಗೆ ತಲುಪಿದೆ. ಎಚ್ಡಿಎಫ್ಸಿ ಲೈಫ್ ಪ್ರಕಾರ, “ನಮ್ಮ ಹೊಸ ವ್ಯವಹಾರದ ಲಾಭವು ಶೇಕಡಾ 26.3 ರಷ್ಟಿದೆ. ಹೊಸ ವ್ಯವಹಾರದ ಮೌಲ್ಯವು 3,501 ಕೋಟಿ ರೂ.ಗಳಾಗಿದ್ದು, 2 ವರ್ಷಗಳ ಸಿಎಜಿಆರ್ ಅನ್ನು ಶೇಕಡಾ 14 ರಷ್ಟು ಸೂಚಿಸುತ್ತದೆ. ಎಂಬೆಡೆಡ್ ಮೌಲ್ಯವು 47,468 ಕೋಟಿ ರೂ.ಗಳಾಗಿದ್ದು, ಎಂಬೆಡೆಡ್ ಮೌಲ್ಯದ ಮೇಲೆ ಕಾರ್ಯಾಚರಣೆಯ ಆದಾಯವು ಶೇಕಡಾ 17.5 ರಷ್ಟಿದೆ. ನಾವು…
ತುಮಕೂರು: ಜಿಲ್ಲೆಯಲ್ಲಿ ರಾಮ ನವಮಿ ಪಾಲನಕ, ಮಜ್ಜಿಗೆ ಸೇವಿಸಿದಂತ 45ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಲ್ಲರಹಟ್ಟಿಯಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದ ರಾಮ ನವಮಿ ಪ್ರಯುಕ್ತ ಮಜ್ಜಿಗೆ, ಪಾನಕ, ಪಲಾರ ಮಾಡಲಾಗಿತ್ತು. ಇಂತಹ ದೇವರ ಪ್ರಸಾದ ಎಂಬುದಾಗಿ ನೀಡಿದಂತ ಪಾನಕ, ಮಜ್ಜಿಗೆಯನ್ನು ಹಂಚಲಾಗಿದೆ. ಹೀಗೆ ದೇವಸ್ಥಾನದಲ್ಲಿ ಹಂಚಿದಂತ ಮಜ್ಜಿಗೆ, ಪಾನಕ ಸೇವಿಸಿದಂತ 45ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಅವರಿಗೆ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಎಡೆಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ, ಪರಿಶೀಲನೆ ನಡೆಸಿ, ವಾಂತಿ, ಬೇಧಿಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚೋದಕ್ಕಾಗಿ ಪಾನಕ, ಮಜ್ಜಿಗೆಯ ಮಾದರಿಯನ್ನು ಸಂಗ್ರಹಿಸಿ ಕೊಂಡೊಯ್ತಿದ್ದಾರೆ ಎನ್ನಲಾಗಿದೆ. https://kannadanewsnow.com/kannada/breaking-sc-asks-ec-to-explain-evm-vvpat-verification-process/ https://kannadanewsnow.com/kannada/vote-for-congress-darshan-campaigns-for-star-chandru-in-mandya/
ನವದೆಹಲಿ: ಜಪಾನಿನ ಪ್ರಮುಖ ಉದ್ಯೋಗದಾತ ತೋಷಿಬಾ ಕಾರ್ಪೊರೇಷನ್ ಮಹತ್ವದ ಪುನರ್ರಚನೆ ಉಪಕ್ರಮವನ್ನು ಪ್ರಾರಂಭಿಸುತ್ತಿದೆ. ಇದು ಸುಮಾರು 5,000 ಉದ್ಯೋಗಗಳನ್ನು ಕಡಿತಗೊಳಿಸುತ್ತದೆ, ಇದು ಅದರ ದೇಶೀಯ ಉದ್ಯೋಗಿಗಳ ಸುಮಾರು 10% ರಷ್ಟಿದೆ. ಈ ಕ್ರಮವು ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಮತ್ತು ಮೂಲಸೌಕರ್ಯ ಮತ್ತು ಡಿಜಿಟಲ್ ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿದೆ. ಪುನರ್ರಚನೆ ಪ್ರಯತ್ನವು 100 ಬಿಲಿಯನ್ ಯೆನ್ ಒಂದು ಬಾರಿಯ ವೆಚ್ಚವನ್ನು ಭರಿಸುವ ನಿರೀಕ್ಷೆಯಿದೆ. ಇದು ಸುಮಾರು $ 650 ಮಿಲಿಯನ್ ಗೆ ಸಮಾನವಾಗಿದೆ. ಏಕೆ ಉದ್ಯೋಗ ಕಡಿತ? ಇಂತಹ ಗಣನೀಯ ಉದ್ಯೋಗ ಕಡಿತಗಳನ್ನು ಜಾರಿಗೆ ತರುವ ನಿರ್ಧಾರವು ನಡೆಯುತ್ತಿರುವ ಆರ್ಥಿಕ ಸವಾಲುಗಳಿಗೆ ತೋಷಿಬಾದ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ. ಅಕೌಂಟಿಂಗ್ ಅಕ್ರಮಗಳಿಗೆ ವಿಧಿಸಲಾದ ಗಮನಾರ್ಹ ದಂಡಗಳು ಮತ್ತು ಅದರ ಪರಮಾಣು ವಿದ್ಯುತ್ ಸ್ಥಾವರ ಉದ್ಯಮಗಳಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಅದರ ಮೆಮೊರಿ ಚಿಪ್ ಘಟಕವನ್ನು ಮಾರಾಟ ಮಾಡುವ ಅವಶ್ಯಕತೆ ಸೇರಿದಂತೆ ವಿವಿಧ ಅಂಶಗಳಿಂದ ಈ ಸವಾಲುಗಳು ಉಲ್ಬಣಗೊಂಡಿವೆ. ಈ ಪುನರ್ರಚನೆಯು…
ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಸಿಡಿದೆದ್ದಿರುವಂತ ದಿಂಗಾಲೇಶ್ವರಶ್ರೀಗಳು, ಇಂದು ಅಧಿಕರೃತವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಮೆರವಣಿಗೆ ಇಲ್ಲದೇ ಸಾಂಕೇತಿಕವಾಗಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದಂತ ದಿಂಗಾಲೇಶ್ವರ ಶ್ರೀಗಳು, ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಕೇವಲ ನಾಲ್ವರು ಬೆಂಬಲಿಗರೊಂದಿಗೆ ಆಗಮಿಸಿ, ಧಾರವಾಡದ ಡಿಸಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ದಿಂಗಾಲೇಶ್ವರ ಶ್ರೀಗಳು ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಈ ಬಳಿಕ ಮೆರವಣಿಗೆ ಸ್ಥಳಕ್ಕೆ ತೆರಳಿದಂತ ಅವರು, ಧಾರವಾಡದ ಕಾರ್ಪೋರೇಷನ್ ವೃತ್ತದಿಂದ ದಿಂಗಾಲೇಶ್ವರ ಶ್ರೀಗಳು ಮೆರವಣಿಗೆಯಲ್ಲಿ ಆಗಮಿಸಿದರು. ಮೆರವಣಿಗೆ ಮೂಲಕ ಮತ್ತೆ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರವನ್ನು ಸಲ್ಲಿಕೆ ಮಾಡಿದರು. 15 ನಿಮಿಷ ನಡೆದು, ಆನಂತ್ರ ಮೆರವಣಿಗೆಯಲ್ಲಿ ಸಾಗಿ ಬಂದ ಅವರೊಂದಿಗೆ 200ಕ್ಕೂ ಹೆಚ್ಚು ಬೆಂಬಲಿಗರು ಇದ್ದರು. ಈ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ದಿಂಗಾಲೇಶ್ವರಶ್ರೀಗಳು ನಾಮಪತ್ರವನ್ನು ಸಲ್ಲಿಸಿದರು. https://kannadanewsnow.com/kannada/over-45-people-fall-ill-after-consuming-ram-navami-buttermilk-in-tumkur-hospitalised/ https://kannadanewsnow.com/kannada/breaking-sc-asks-ec-to-explain-evm-vvpat-verification-process/
ತುಮಕೂರು: ಜಿಲ್ಲೆಯಲ್ಲಿ ನಿನ್ನೆ ರಾಮನವಮಿ ಪ್ರಯುಕ್ತ ಮಾಡಲಾಗಿದ್ದಂತ ಮಜ್ಜಿಗೆ ಸೇವಿಸಿದಂತ 45ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ರಾಮನವಮಿ ಪ್ರಯುಕ್ತ ಮಜ್ಜಿಗೆ, ಪಾನಕ, ಪಲ್ಲಾರ ಮಾಡಲಾಗಿತ್ತು. ನಿನ್ನೆ ಸಂಜೆ ದೇವಸ್ಥಾನದ ಮುಂದೆ ನೆರೆದಿದ್ದಂತ ಗೊಲ್ಲರಹಟ್ಟಿಯ ಜನತೆಗೆ ಮಜ್ಜಿಗೆಯನ್ನು ವಿತರಿಸಲಾಗಿತ್ತು. ರಾಮನವಮಿ ಪ್ರಯುಕ್ತ ನೀಡಲಾಗಿದ್ದಂತ ಮಜ್ಜಿಗೆ ಸೇವಿಸಿದಂತ 45ಕ್ಕೂ ಹೆಚ್ಚು ಜನರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದೀಗ ಅನೇಕರು ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/good-news-for-farmers-in-the-state-5-days-of-rain-accompanied-by-thunder-lightning-from-today/ https://kannadanewsnow.com/kannada/breaking-sc-asks-ec-to-explain-evm-vvpat-verification-process/
ಬೆಂಗಳೂರು: ಬಿರು ಬಿಸಿಲಿನಿಂದ ತತ್ತರಿಸಿರೋ ಜನತೆಗೆ, ಬೆಳೆ ಒಳಗುತ್ತಿರೋ ಆತಂಕದಲ್ಲಿರೋ ರೈತರಿಗೆ ಸಂತಸದ ಸುದ್ದಿಯನ್ನು ಹವಾಮಾನ ಇಲಾಖೆ ನೀಡಿದೆ. ಅದೇ ಇಂದಿನಿಂದ ಐದು ದಿನಗಳ ಕಾಲ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ಹವಾಮಾನ ಇಲಾಖೆಯು ರಾಜ್ಯಾಧ್ಯಂತ ಅಲ್ಲಲ್ಲಿ ಚದುರಿದಂತೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ ಎಂಬುದಾಗಿ ತಿಳಿಸಿದೆ. ಏಪ್ರಿಲ್.18ರ ಇಂದಿನಿಂದ ಏಪ್ರಿಲ್.22ರವರೆಗೆ ಸಾಧಾರಣ ಮಳೆಯಾಗಲಿದೆ. ಏಪ್ರಿಲ್.21ರಂದು ಮಾತ್ರ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದೂ, ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ತಿಳಿಸಿದೆ. ಇಂದು ಶಿವಮೊಗ್ಗ, ದಾವಣಗೆರೆ, ಕೊಡಗು, ಹಾಸನ, ಮೈಸೂರು, ಚಿಕ್ಕಮಗಳೂರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗೋ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. https://kannadanewsnow.com/kannada/breaking-sc-asks-ec-to-explain-evm-vvpat-verification-process/ https://kannadanewsnow.com/kannada/vote-for-congress-darshan-campaigns-for-star-chandru-in-mandya/
ಮಂಡ್ಯ: ಸುಮಲತಾ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದು, ಕಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕಣದಲ್ಲಿದ್ದಾರೆ. ಇದೀಗ ಹಿಂದೆ ಸುಮಲತಾ ಬೆನ್ನಿಗೆ ನಿಂತಿದ್ದಂತ ಡಿ ಬಾಸ್, ಈಗ ಅವರ ಪರ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಜೊತೆ ನಿಂತು ಪ್ರಚಾರ ಮಾಡದೇ, ಅವರ ವಿರುದ್ಧದ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಸ್ಟಾರ್ ಚಂದ್ರು ಪರ ಅಬ್ಬರದ ಪ್ರಚಾರಕ್ಕೆ ಇಳಿದಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಹಲಗೂರಿನಲ್ಲಿ ನಟ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಮತ ಯಾಚನೆ ಮಾಡಿದ್ರು. ಈ ವೇಳೆ ಮಾತನಾಡಿದಂತ ಅವರು, ನಾನು ಯಾವುದೇ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ನಾನು ಸ್ಟಾರ್ ಚಂದ್ರು ಪರ ಮತಯಾಚಿಸಲು ಇಲ್ಲಿಗೆ ಬಂದಿದ್ದೀನಿ ಅಷ್ಟೇ ಎಂದರು. ಸುಮಲತಾ ಟಿಕೆಟ್ ಸಿಕ್ಕಿಲ್ಲ ಎಂದರೇ ಪ್ರಚಾರಕ್ಕೆ ಬನ್ನಿ ಎಂದು ಶಾಸಕ ಉದಯ್ ಕೇಳಿದ್ರು. ಆ ಕಾರಣಕ್ಕಾಗಿ ವ್ಯಕ್ತಿಯ ಪರವಾಗಿ ಈ ಪ್ರಚಾರಕ್ಕೆ ಬಂದಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಸ್ವಾಮಿ…