Author: kannadanewsnow09

ಬೆಂಗಳೂರು: ನೀವು ಸರ್ಕಾರಿ ಆಸ್ಪತ್ರೆಗೆ ತೆರಳಿದಾಗ ಆರೋಗ್ಯ ಸೇವೆ ಸರಿಯಾಗಿ ಸಿಗ್ತಾ ಇಲ್ವ? ಈಗ ಸಮಸ್ಯೆ ಬಗ್ಗೆ ದೂರು, ಸಲಹೆ ನೀಡಲು ಆರೋಗ್ಯ ಇಲಾಖೆಯಿಂದ ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆನ್ನು ಆರಂಭಿಸಲಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಸರ್ಕಾರಿ ಆಸ್ಪತ್ರೆಗಳು ಅಥವಾ ಆರೋಗ್ಯ ಸೇವೆಗಳ ಕುರಿತು ದೂರು ಅಥವಾ ಸಲಹೆ ಮಾಡಲು ವಾಟ್ಸ್ ಆಪ್ ಸಹಾಯವಾಣಿಗೆ ಕಳುಹಿಸುವಂತೆ ಮನವಿ ಮಾಡಿದೆ. ವಾಟ್ಸ್ ಆಪ್ ಮೂಲಕ ನಮಗೆ ಮೆಸೇಜ್ ಮಾಡಿ, ಅಗತ್ಯವಿದ್ದರೇ ಪೋಟೋ, ವೀಡಿಯೋಗಳನ್ನು ಕಳುಹಿಸಿ. ನಿಮ್ಮ ಸಮಸ್ಯೆಯನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೇರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂಬುದಾಗಿ ತಿಳಿಸಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯ ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆ 9449843001 ಗೆ ದೂರು, ಸಲಹೆಯನ್ನು ಮಾಡಬಹುದಾಗಿದೆ. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು. ಕೇವಲ ಸಂದೇಶಗಳನ್ನು ಮಾತ್ರ ಸ್ವೀಕರಿಸಲಾಗುವುದು. ದೂರವಾಣಿ ಕರೆಗಳಿಗೆ ಉತ್ತರಿಸಲಾಗುವುದಿಲ್ಲ ಎಂಬುದಾಗಿ ಹೇಳಿದೆ. https://twitter.com/DHFWKA/status/1929161379577254323 https://kannadanewsnow.com/kannada/it-is-even-easier-to-register-your-electricity-related-complaint/ https://kannadanewsnow.com/kannada/good-news-for-rural-people-under-this-scheme-you-will-get-rs-2-lakh-subsidized-loan/

Read More

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಹೆಚ್ಚಳದ ನಡುವೆ ಶಾಲೆಗಳು ಆರಂಭಗೊಂಡಿದ್ದಾವೆ. ಈ ಸಂದರ್ಭದಲ್ಲಿ ಜ್ವರ, ಕೆಮ್ಮು, ನೆಗಡಿ ಇರುವಂತ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂಬುದಾಗಿ ಶಾಲಾ ಶಿಕ್ಷಣ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಪ್ರಕಟಿಸಲಾಗಿದೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ  ಕೋವಿಡ್-19 ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಮಾರ್ಗಸೂಚಿ ಪ್ರಕಟಿಸಲಾಗಿದೆ. ರಾಜ್ಯಾದ್ಯಂತ ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷವು ದಿನಾಂಕ ಪುನರಾರಂಭಗೊಂಡಿದ್ದು, ಶಾಲೆಗಳಲ್ಲಿ ದೈನಂದಿನ ಶಾಲಾ ಚಟುವಟಿಕೆಗಳು ಪ್ರಾರಂಭವಾಗಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಇರುವ ಕೋವಿಡ್ 19 ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುತ್ತದೆ. ಉಲ್ಲೇಖಿತ ಪತ್ರದಲ್ಲಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಈಗಾಗಲೇ ಸೂಚನೆಗಳನ್ನು ನೀಡಲಾಗಿರುತ್ತದೆ. ಮುಂದುವರೆದು, ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ಕೆಳಕಂಡ ಸೂಚನೆಗಳನ್ನು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ…

Read More

ಭಾನುವಾರ ನಡೆದ ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಮೆಕ್‌ಲಾರೆನ್ ತಂಡದ ಸಹ ಆಟಗಾರ ಆಸ್ಕರ್ ಪಿಯಾಸ್ಟ್ರಿ ದೋಷರಹಿತ ಪ್ರದರ್ಶನ ನೀಡಿ ಗೆದ್ದ ನಂತರ ಲ್ಯಾಂಡೊ ನಾರ್ರಿಸ್ ಚಾಂಪಿಯನ್‌ಶಿಪ್ ರೇಸ್‌ನಲ್ಲಿ ಸ್ಥಾನ ಕಳೆದುಕೊಂಡರು. ರೆಡ್ ಬುಲ್‌ನ ಮ್ಯಾಕ್ಸ್ ವರ್ಸ್ಟಪ್ಪೆನ್ ವಿರುದ್ಧ ಲೈನ್‌ನಿಂದ ಹೊರಬಿದ್ದರೂ, ಪಿಯಾಸ್ಟ್ರಿಗಿಂತ 2.4 ಸೆಕೆಂಡುಗಳ ಹಿಂದೆ ಚೆಕ್ಕರ್ ಫ್ಲ್ಯಾಗ್ ತೆಗೆದುಕೊಂಡು ನಾರ್ರಿಸ್ ಎರಡನೇ ಸ್ಥಾನ ಪಡೆದು ಅದೇ ಸ್ಥಾನದಲ್ಲಿ ಮುಗಿಸಿದರು. ಸುರಕ್ಷತಾ ಕಾರು ಮರುಪ್ರಾರಂಭವಾದ ನಂತರ ವೆರ್ಸ್ಟಪ್ಪೆನ್ ಅವರನ್ನು ದಾಟಿ ಹೋರಾಡಿದ ಫೆರಾರಿಯ ಚಾರ್ಲ್ಸ್ ಲೆಕ್ಲರ್ಕ್ ವೇದಿಕೆಯನ್ನು ಪೂರ್ಣಗೊಳಿಸಿದರು. ಆದಾಗ್ಯೂ, ಲೆಕ್ಲರ್ಕ್ ನೇರ ಮಾರ್ಗದಲ್ಲಿ ಸ್ವಲ್ಪ ಸಂಪರ್ಕಕ್ಕೆ ಬಂದಾಗ ಜಾರ್ಜ್ ರಸೆಲ್ ಅವರನ್ನು ರಕ್ಷಿಸಲು ಪ್ರಯತ್ನಿಸುವಾಗ ರಸ್ತೆಯಿಂದ ಬಿದ್ದಾಗ ವೆರ್ಸ್ಟಪ್ಪೆನ್ ಅವರನ್ನು ಡಿಕ್ಕಿ ಹೊಡೆದುರುಳಿಸಿದರು ಎಂದು ಆರೋಪಿಸಿದರು. ಪೆನಾಲ್ಟಿ ತಪ್ಪಿಸಲು ರಸೆಲ್‌ಗೆ ಸ್ಥಾನವನ್ನು ನೀಡುವಂತೆ ವರ್ಸ್ಟಪ್ಪೆನ್‌ಗೆ ಸೂಚಿಸಲಾಯಿತು, ಮತ್ತು ಅವರು ರಸೆಲ್‌ಗೆ ಅವಕಾಶ ನೀಡಲು ಸಿದ್ಧರಾಗಿದ್ದರೂ, ಅವರು ಮರ್ಸಿಡಿಸ್‌ಗೆ ಚಾಲನೆ ಮಾಡಿದಂತೆ ತೋರುತ್ತಿತ್ತು. https://twitter.com/McLarenF1/status/1929186829900587171

Read More

ನಾಸಿಕ್: ನಾಸಿಕ್-ತ್ರಿಂಬಕೇಶ್ವರ ಸಿಂಹಸ್ಥ ಕುಂಭಮೇಳವು ಅಕ್ಟೋಬರ್ 31, 2026 ರಂದು ಎರಡು ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಸಾಂಪ್ರದಾಯಿಕ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಲಿದ್ದು, ಗೋದಾವರಿ ನದಿಯಲ್ಲಿ ಮೊದಲ ‘ಅಮೃತ ಸ್ನಾನ’ ಅಥವಾ ಧಾರ್ಮಿಕ ಸ್ನಾನವು ಆಗಸ್ಟ್ 2, 2027 ರಂದು ನಡೆಯಲಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧ್ಯಕ್ಷತೆಯಲ್ಲಿ ನಾಸಿಕ್‌ನಲ್ಲಿ ನಡೆದ ಸಾಧುಗಳು ಮತ್ತು ಮಹಾಂತರ ಸಭೆಯಲ್ಲಿ ಬಹುನಿರೀಕ್ಷಿತ ದಿನಾಂಕಗಳನ್ನು ಘೋಷಿಸಲಾಯಿತು. ಅವರು ಭವ್ಯವಾದ ಸಭೆಗೆ ಮಾಡಬೇಕಾದ ವ್ಯವಸ್ಥೆಗಳ ಪ್ರಮಾಣವನ್ನು ನೋಡಿ ಜಗತ್ತು ಬೆರಗುಗೊಳ್ಳುತ್ತದೆ ಎಂದು ಹೇಳಿದರು. ಸಿಂಹಸ್ಥ ಕುಂಭಮೇಳವು ಅಕ್ಟೋಬರ್ 31, 2026 ರಂದು ನಾಸಿಕ್‌ನ ತ್ರಿಂಬಕೇಶ್ವರ ಮತ್ತು ರಾಮಕುಂಡ್‌ನಲ್ಲಿ ‘ಧ್ವಜಾರೋಹಣ’ (ಧ್ವಜಾರೋಹಣ) ದೊಂದಿಗೆ ಪ್ರಾರಂಭವಾಗಲಿದೆ. ಜುಲೈ 29, 2027 ರಂದು ‘ನಗರ ಪ್ರದಕ್ಷಿಣೆ’ ನಾಸಿಕ್‌ನಲ್ಲಿ ನಡೆಯಲಿದ್ದು, ಮೊದಲ ‘ಅಮೃತ್ ಸ್ನಾನ’ ಆಗಸ್ಟ್ 2, 2027 ರಂದು ನಡೆಯಲಿದೆ. ಎರಡನೇ ಅಮೃತ್ ಸ್ನಾನ ಆಗಸ್ಟ್ 31, 2027 ರಂದು ನಡೆಯಲಿದೆ ಮತ್ತು ಮೂರನೇ ಮತ್ತು ಕೊನೆಯದು ನಾಸಿಕ್‌ನಲ್ಲಿ ಸೆಪ್ಟೆಂಬರ್ 11, 2027 ರಂದು…

Read More

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಜೂನ್ 1 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವಿನ ಬಹು ನಿರೀಕ್ಷಿತ ಐಪಿಎಲ್ 2025 ಕ್ವಾಲಿಫೈಯರ್ 2 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಅನಿರೀಕ್ಷಿತ ಅಡಚಣೆ ಎದುರಾಯಿತು. ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಆರಂಭವಾಗಬೇಕಿದ್ದ ಪಂದ್ಯದಲ್ಲಿ, ಪಿಬಿಕೆಎಸ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಪಂದ್ಯ ಪ್ರಾರಂಭವಾಗುತ್ತಿದ್ದಂತೆ, ಮಳೆ ಬೀಳಲು ಪ್ರಾರಂಭಿಸಿತು. ಪಂದ್ಯದ ಆರಂಭವನ್ನು ವಿಳಂಬಗೊಳಿಸಿತು. ಆಟಗಾರರು ಮತ್ತು ಅಭಿಮಾನಿಗಳು ಹೆಚ್ಚಿನ ನವೀಕರಣಗಳಿಗಾಗಿ ಕಾಯುತ್ತಿದ್ದಾಗ ಮೈದಾನದ ಸಿಬ್ಬಂದಿ ತಕ್ಷಣ ಪಿಚ್ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಆವರಿಸಿದರು. ಐಪಿಎಲ್ ನಿಯಮಗಳ ಪ್ರಕಾರ, ಪಂದ್ಯವನ್ನು ರೂಪಿಸಲು ಪ್ರತಿ ತಂಡಕ್ಕೆ ಕನಿಷ್ಠ ಐದು ಓವರ್‌ಗಳನ್ನು ಪೂರ್ಣಗೊಳಿಸಬೇಕು. ಮಳೆಯಿಂದಾಗಿ ವಿಳಂಬವಾಗುವ ಪಂದ್ಯವನ್ನು ತಪ್ಪಿಸಲು ಐಪಿಎಲ್ ಎರಡು ಗಂಟೆಗಳ ಕಾಲಾವಕಾಶ ನೀಡಿದೆ. ಆದ್ದರಿಂದ, ರಾತ್ರಿ 9:30 ಕ್ಕೆ 20 ಓವರ್‌ಗಳ ಪಂದ್ಯಕ್ಕೆ ಕಟ್-ಆಫ್ ಸಮಯ. ನಿಗದಿತ…

Read More

ಉಕ್ರೇನ್: ಉಕ್ರೇನ್ ಭಾನುವಾರ ರಷ್ಯಾದ ಮೇಲೆ ತನ್ನ ಅತಿದೊಡ್ಡ ಡ್ರೋನ್ ಆಧಾರಿತ ಕಾರ್ಯಾಚರಣೆಯ ದಾಳಿಯನ್ನು ನಡೆಸಿದೆ. ಇದು ತನ್ನ ಗಡಿಯಿಂದ ಸಾವಿರಾರು ಕಿಲೋಮೀಟರ್ (ಮೈಲುಗಳು) ದೂರದಲ್ಲಿರುವ ಪೂರ್ವ ಸೈಬೀರಿಯಾದಲ್ಲಿರುವ ವಾಯುನೆಲೆಯ ಮೇಲೆ ದಾಳಿ ಮಾಡಿತು. ಇರ್ಕುಟ್ಸ್ಕ್ ಪ್ರದೇಶದ ರಷ್ಯಾದ ಗವರ್ನರ್ ದಾಳಿಯನ್ನು ದೃಢಪಡಿಸಿದರು. ಉಕ್ರೇನಿಯನ್ ರಿಮೋಟ್-ಪೈಲಟ್ ವಿಮಾನವು ಸ್ರಿಡ್ನಿ ಗ್ರಾಮದಲ್ಲಿನ ಮಿಲಿಟರಿ ಘಟಕದ ಮೇಲೆ ದಾಳಿ ಮಾಡಿದೆ, ಇದು ಸೈಬೀರಿಯಾದಲ್ಲಿ ಅಂತಹ ಮೊದಲ ದಾಳಿಯಾಗಿದೆ ಎಂದು ಹೇಳಿದರು. ಉಕ್ರೇನ್‌ನ ಭದ್ರತಾ ಸೇವೆ (SBU) ನಡೆಸಿದ ದೊಡ್ಡ ಪ್ರಮಾಣದ ವಿಶೇಷ ಕಾರ್ಯಾಚರಣೆಯು “ರಷ್ಯಾದ ಒಕ್ಕೂಟದ ಹಿಂಭಾಗ” ದಲ್ಲಿರುವ ವಾಯುನೆಲೆಗಳಲ್ಲಿ “40 ಕ್ಕೂ ಹೆಚ್ಚು” ರಷ್ಯಾದ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನಿಯನ್ ಮಾಧ್ಯಮ ಹೇಳಿಕೊಂಡಿದೆ. ಅಧಿಕಾರಿಗಳನ್ನು ಉಲ್ಲೇಖಿಸಿ, ಸುದ್ದಿ ಸಂಸ್ಥೆ AFP ವರದಿ ಮಾಡಿದಂತೆ, ಪೂರ್ವ ಸೈಬೀರಿಯನ್ ನಗರವಾದ ಬೆಲಾಯಾ, ಫಿನ್ಲ್ಯಾಂಡ್ ಬಳಿಯ ಆರ್ಕ್ಟಿಕ್‌ನಲ್ಲಿರುವ ಒಲೆನ್ಯಾ ಮತ್ತು ಮಾಸ್ಕೋದ ಪೂರ್ವಕ್ಕೆ ಇವನೊವೊ ಮತ್ತು ಡಯಾಗಿಲೆವೊದಲ್ಲಿರುವ ರಷ್ಯಾದ ವಾಯುನೆಲೆಗಳನ್ನು ಗುರಿಯಾಗಿಸಲಾಗಿದೆ. https://twitter.com/RT_com/status/1929137870054334534? ದಾಳಿಯಲ್ಲಿ ನಾಶವಾದ ವಿಮಾನಗಳಲ್ಲಿ…

Read More

ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವಂತ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದೇ ಹೋದರೇ ಕ್ಷಮೆಗೆ ಆಗ್ರಹಿಸಿ ಕರ್ನಾಟಕ ಬಂದ್ ಮಾಡುತ್ತೇವೆ. ಅವರ ನಟನೆಯ ಥಗ್ ಲೈಫ್ ಬಿಡುಗಡೆಯಾದ್ರೆ ಕರ್ನಾಟಕ ರಣರಂಗ ಆಗಲಿದೆ ಎಂಬುದಾಗಿ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲಾ ಸಂಘಟನೆಗಳ ಜೊತೆಗೆ ಮಾತನಾಡಿ ಬೆಂಬಲ ಕೇಳುತ್ತೇವೆ ಎಂದರು. ಕಮಲ್ ಹಾಸನ್ ಚಿತ್ರ ಬಿಡುಗಡೆ ಆದ್ರೇ ಕರ್ನಾಟಕ ರಣರಂಗವಾಗುತ್ತೆ. ಜಿಲ್ಲಾ, ತಾಲ್ಲೂಕುಗಳಲ್ಲಿಯೂ ಹೋರಾಟಗಾರರು ಸಜ್ಜಾಗಬೇಕು. ಜೈಲಿಗೆ ಹೋಗೋದಕ್ಕೂ ಎಲ್ಲಾ ಹೋರಾಟಗಾರರು ಸಜ್ಜಾಗಿ ಎಂದರು. ನಟ ಕಮಲ್ ಹಾಸನ್ ಒಬ್ಬ ಅವಿವೇಕಿ. ಅಯೋಗ್ಯ. ಮೂರ್ಖ. ರಾಜ್ಯ ಸರ್ಕಾರ ತುರ್ತಾಗಿ ವಿಶೇಷ ಅಧಿವೇಶನ ಕರೆಯಬೇಕು. ಕನ್ನಡಕ್ಕೆ ಆಗುತ್ತಿರುವ ಅವಮಾನದ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

Read More

ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವಂತ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದೇ ಹೋದರೇ ಕ್ಷಮೆಗೆ ಆಗ್ರಹಿಸಿ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲಾ ಸಂಘಟನೆಗಳ ಜೊತೆಗೆ ಮಾತನಾಡಿ ಬೆಂಬಲ ಕೇಳುತ್ತೇವೆ ಎಂದರು. ಕಮಲ್ ಹಾಸನ್ ಚಿತ್ರ ಬಿಡುಗಡೆ ಆದ್ರೇ ಕರ್ನಾಟಕ ರಣರಂಗವಾಗುತ್ತೆ. ಜಿಲ್ಲಾ, ತಾಲ್ಲೂಕುಗಳಲ್ಲಿಯೂ ಹೋರಾಟಗಾರರು ಸಜ್ಜಾಗಬೇಕು. ಜೈಲಿಗೆ ಹೋಗೋದಕ್ಕೂ ಎಲ್ಲಾ ಹೋರಾಟಗಾರರು ಸಜ್ಜಾಗಿ ಎಂದರು. ನಟ ಕಮಲ್ ಹಾಸನ್ ಒಬ್ಬ ಅವಿವೇಕಿ. ಅಯೋಗ್ಯ. ಮೂರ್ಖ. ರಾಜ್ಯ ಸರ್ಕಾರ ತುರ್ತಾಗಿ ವಿಶೇಷ ಅಧಿವೇಶನ ಕರೆಯಬೇಕು. ಕನ್ನಡಕ್ಕೆ ಆಗುತ್ತಿರುವ ಅವಮಾನದ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

Read More

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 17 ಜನರಿಗೆ ಕೊರೋನಾ ಸೋಂಕು ( Corona Virus ) ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಪ್ರಕರಣಗಳ ಸಂಖ್ಯೆ 253ಗೆ ಏರಿಕೆಯಾಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿ ಸಿ ಆರ್ ಮೂಲಕ 257 ಹಾಗೂ ರಾಟ್ ಮೂಲಕ 19 ಸೇರಿದಂತೆ 276 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 17 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ ಎಂದು ತಿಳಿಸಿದೆ. ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರಾದ ಒಬ್ಬರು ಸರ್ಕಾರಿ, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತ 250 ಸೋಂಕಿತರು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದೆ. ಅಂದಹಾಗೇ ಕರ್ನಾಟಕದಲ್ಲಿ ಇದುವರೆಗೆ 442 ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದರೇ, 185 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಕೋವಿಡ್…

Read More

ಚಿಕ್ಕಬಳ್ಳಾಪುರ: ಆತನಿಗೆ ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿಯೊಂದಿಗೆ ಲವ್ವಿಡವ್ವಿ. ಜೊತೆಗೆ ಆಕೆಯನ್ನು ಗರ್ಭಿಣಿ ಮಾಡಿದ್ದನು. ಅಲ್ಲದೇ ಕದ್ದುಮುಚ್ಚಿ ಸಂಸಾರ ನಡೆಸುತ್ತಿದ್ದನು. ಈ ವಿಷಯ ಎರಡು ಕಡೆಯ ಮನೆಯವರಿಗೆ ಗೊತ್ತಿಗಿತ್ತು. ಹೀಗಾಗಿ ಇಬ್ಬರು ಮನೆ, ಊರು ಬಿಟ್ಟು ಹೋಗಿದ್ದರು. ಮನೆ, ಊರು ಬಿಟ್ಟೋದಂತ ಅವರಿಗೆ ಇರೋದಕ್ಕೆ ನೆಲೆ ಇಲ್ಲದೇ, ಬಾಡಿಗೆ ಮನೆಯಲ್ಲಿ ಸಂಸಾರ ಸಾಗಿಸುತ್ತಿದ್ದರು. ಆದರೇ ಕುಟುಂಬ ನಿರ್ವಣೆಗಾಗಿ ಆ ಪ್ರೇಮಿಗಳು ಇಳಿದಿದ್ದು ಮಾತ್ರ ಸರಗಳ್ಳತನ. ಹೌದು ಹೀಗೆ ಸರಗಳ್ಳತನಕ್ಕೆ ಇಳಿದಿದ್ದಂತ ಇಬ್ಬರು ಪ್ರೇಮಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ತಾಲ್ಲೂಕಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮುದುಗೆರೆ ಗ್ರಾಮದ ಅಶ್ವಿನಿ ಹಾಗೂ ಗೋವಿಂದರಾಜು ಎಂಬುದಾಗಿ ತಿಳಿದು ಬಂದಿದೆ. ಮನೆ ಮಾಡೋದಕ್ಕೆ ಹಣ ವಿಲ್ಲದೇ ಬೈಕ್ ಕದ್ದಿದ್ದಂತ ಗೋವಿಂದರಾಜು, ಅದೇ ಬೈಕಿನಲ್ಲಿ ಸರಗಳ್ಳತನಕ್ಕೆ ಇಳಿದಿದ್ದನು. ಸಿಸಿಟಿವಿಗಳಲ್ಲಿ ದಾಖಲಾಗಿದ್ದಂತ ದೃಶ್ಯ ಆಧರಿಸಿ ಅಶ್ವಿನಿ, ಗೋವಿಂದರಾಜು ಬಂಧಿಸಿದ್ದಾರೆ. ಬಂಧನದ ನಂತ್ರ ವಿಚಾರಣೆ ವೇಳೆಯಲ್ಲಿ ಸತ್ಯ ಬಾಯಿಬಿಟ್ಟಿದ್ದಾರೆ. https://kannadanewsnow.com/kannada/large-scale-drone-attack-due-to-the-conflict-with-ukraine-watch-the-terrifying-video/ https://kannadanewsnow.com/kannada/good-news-for-rural-people-under-this-scheme-you-will-get-rs-2-lakh-subsidized-loan/

Read More