Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿದ್ದಂತ ಸುರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಈ ಕುರಿತಂತೆ ಇಂದು ಎಕ್ಸ್ ಮಾಡಿರುವಂತ ಅವರು, ಸುರಪುರದ ಶಾಸಕರು, ಬಹುಕಾಲದ ನನ್ನ ರಾಜಕೀಯ ಒಡನಾಡಿ ರಾಜ ವೆಂಕಟಪ್ಪ ನಾಯಕ ಅವರ ನಿಧನದ ಸುದ್ದಿ ಅತೀವ ನೋವುಂಟುಮಾಡಿದೆ. ಮೂರು ದಿನದ ಹಿಂದೆಯಷ್ಟೇ ಅವರನ್ನು ಭೇಟಿಮಾಡಿ ಆರೋಗ್ಯ ವಿಚಾರಿಸಿದ್ದೆ ಎಂದು ತಿಳಿಸಿದ್ದಾರೆ. ಜನಾನುರಾಗಿ ವ್ಯಕ್ತಿತ್ವದ ರಾಜಾ ವೆಂಕಟಪ್ಪ ನಾಯಕ ಅವರ ಅಗಲಿಕೆ ವೈಯಕ್ತಿಕವಾಗಿ ಮತ್ತು ರಾಜ್ಯ ರಾಜಕಾರಣಕ್ಕೆ ತುಂಬಿಬಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. https://twitter.com/siddaramaiah/status/1761689626605936653 https://kannadanewsnow.com/kannada/congress-mla-raja-venkatappa-nayaka-passes-away-due-to-cardiac-arrest/ https://kannadanewsnow.com/kannada/congress-committed-big-crime-on-mahadayi-issue-former-cm-basavaraj-bommai/
BREAKING: ಹೃದಯಾಘಾತದಿಂದ ‘ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ’ ನಿಧನ | MLA Raja Venkatappa Nayaka No More
ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿದ್ದಂತ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇಂತಹ ಅವರು ಚಿಕಿತ್ಸೆ ಫಲಿಸದೇ ನಿಧರಾಗಿರೋದಾಗಿ ತಿಳಿದು ಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ(67) ಅವರು ನಾಲ್ಕು ಬಾರಿ ಶಾಸಕರಾಗಿದ್ದರು. ಅವರಿಗೆ ಇಂದು ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಅಂದಹಾಗೇ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮೊನ್ನಯಷ್ಟೇ ನಿಗಮ-ಮಂಡಳಿ ನೇಮಕಾತಿ ಆದೇಶ ಮಾಡಲಾಗಿತ್ತು. ಈ ವೇಳೆಯಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ಉಗ್ರಾಣ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಮೊನ್ನೆಯಷ್ಟೇ ಅವರು ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಇಂತಹ ಅವರು ಇಂದು ಹೃದಯಾಘಾತದಿಂದ ನಿಧನರಾಗಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/big-shock-to-primary-and-secondary-school-hindi-co-teachers-in-the-state-school-education-department-withdraws-promotions/ https://kannadanewsnow.com/kannada/congress-committed-big-crime-on-mahadayi-issue-former-cm-basavaraj-bommai/
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್ನ ಆಳ ಸಮುದ್ರದಲ್ಲಿ ನೀರಿನಲ್ಲಿ ಮುಳುಗಿದ್ದು, ಭಗವಾನ್ ಕೃಷ್ಣನ ನಿಧನದ ನಂತರ ಅರೇಬಿಯನ್ ಸಮುದ್ರದ ಅಡಿಯಲ್ಲಿ ಮುಳುಗಿದೆ ಎಂದು ನಂಬಲಾದ ಪ್ರಾಚೀನ ನಗರ ದ್ವಾರಕಾದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಾಚೀನ ನಗರವು ಭಗವಾನ್ ಕೃಷ್ಣನೊಂದಿಗೆ ನಿಕಟ ಸಂಪರ್ಕ ಹೊಂದಿತ್ತು ಮತ್ತು ಭವ್ಯತೆ ಮತ್ತು ಸಮೃದ್ಧಿಯ ಕೇಂದ್ರವಾಗಿತ್ತು ಎಂದು ನಂಬಲಾಗಿದೆ. ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯಿಂದ ಕಲ್ಪನೆಗಳನ್ನು ಆಕರ್ಷಿಸುತ್ತಿರುವ ದ್ವಾರಕಾ ನಗರಕ್ಕೆ ಮೋದಿ ಗೌರವ ಸಲ್ಲಿಸಿದರು. ನೀರೊಳಗೆ, ನವಿಲು ತಂದೆಯರಿಗೆ ಗೌರವ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು. “ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥಿಸುವುದು ಬಹಳ ದೈವಿಕ ಅನುಭವವಾಗಿದೆ. ಆಧ್ಯಾತ್ಮಿಕ ಭವ್ಯತೆ ಮತ್ತು ಕಾಲಾತೀತ ಭಕ್ತಿಯ ಪ್ರಾಚೀನ ಯುಗದೊಂದಿಗೆ ನಾನು ಸಂಪರ್ಕ ಹೊಂದಿದ್ದೇನೆ ಎಂದು ನಾನು ಭಾವಿಸಿದೆ. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನೂ ಆಶೀರ್ವದಿಸಲಿ” ಎಂದು ಮೋದಿ ಬರೆದಿದ್ದಾರೆ. https://twitter.com/narendramodi/status/1761663670373769451 ಪ್ರಾಚೀನ ನಗರವಾದ ದ್ವಾರಕಾ ಹಿಂದೂ ಪುರಾಣ ಮತ್ತು ಇತಿಹಾಸದಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿರುವ…
ಕಾರವಾರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂಬುದಾಗಿ ಕರೆಯುವ ಮೂಲಕ ಅವಹೇಳನ ಮಾಡಿದ್ದ ಕಾರಣ, ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಫೆಬ್ರವರಿ.23ರಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಂತ ಸಭೆಯಲ್ಲಿ ಭಾಗಿಯಾಗಿ ಸಿಎಂ ಸಿದ್ಧರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂಬುದಾಗಿ ಕರೆದಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಕಾರಣ, ಮುಂಡಗೋಡು ಪೊಲೀಸರು ಸುಮೋಟೋ ಕೇಸ್ ಅನ್ನು ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ದಾಖಲಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು, ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟಕ್ಕೆ ತಿರುಗೇಟು ನೀಡುವ ಭರದಲ್ಲಿ ದೇಶದಲ್ಲಿ 99.9% ಹಿಂದೂಗಳು ತೆರಿಗೆ ಕಟ್ಟುತ್ತಾರೆ. ಆದರೆ ಮುಸ್ಲಿಮರ ಮಸೀದಿಗೆ ಯಾಕೆ ಅನುದಾನ ಕೊಟ್ರಿ? ಸಿದ್ರಾಮುಲ್ಲಾ ಖಾನ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ರಾಜ್ಯದಲ್ಲಿ ಸಿದ್ರಮುಲ್ಲಾ ಖಾನ್ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದ್ದರು. https://kannadanewsnow.com/kannada/congress-committed-big-crime-on-mahadayi-issue-former-cm-basavaraj-bommai/ https://kannadanewsnow.com/kannada/pm-modis-mann-ki-baat-will-not-air-for-the-next-three-months-heres-the-reason-mann-ki-baat/
ನವದೆಹಲಿ: ದೆಹಲಿ, ಗುಜರಾತ್, ಹರಿಯಾಣ, ಚಂಡೀಗಢ ಮತ್ತು ಗೋವಾದಲ್ಲಿ ಕಾಂಗ್ರೆಸ್ ಮತ್ತು ಎಎಪಿ ಸೀಟು ಹಂಚಿಕೆಯನ್ನು ಘೋಷಿಸಿವೆ. ದೆಹಲಿಯಲ್ಲಿ 7, ಗುಜರಾತ್ ನಲ್ಲಿ 26, ಕಾಂಗ್ರೆಸ್ 24, ಎಎಪಿ 2, ಹರ್ಯಾಣದಲ್ಲಿ 10, ಚಂಡೀಗಢದಲ್ಲಿ ಕಾಂಗ್ರೆಸ್ 9 ಮತ್ತು ಎಎಪಿ 1 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಮುಂಬರುವ ಲೋಕಸಭಾ ಚುನಾವಣೆಗೆ ದೆಹಲಿ, ಹರಿಯಾಣ, ಗುಜರಾತ್, ಚಂಡೀಗಢ ಮತ್ತು ಗೋವಾದಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಅಂತಿಮವಾಗಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿವೆ. ನವದೆಹಲಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿಯ ಸೌರಭ್ ಭಾರದ್ವಾಜ್, ಅತಿಶಿ, ಸಂದೀಪ್ ಪಾಠಕ್ ಮತ್ತು ಕಾಂಗ್ರೆಸ್ನ ಮುಕುಲ್ ವಾಸ್ನಿಕ್, ದೀಪಕ್ ಬಾಬಾರಿಯಾ, ಅರವಿಂದರ್ ಸಿಂಗ್ ಲವ್ಲಿ, ದೆಹಲಿಯಲ್ಲಿ ಪಕ್ಷಗಳು ನಾಲ್ಕು-ಮೂರು ಸೀಟು ಹಂಚಿಕೆ ಸೂತ್ರಕ್ಕೆ ನಿರ್ಧರಿಸಿವೆ, ಎಎಪಿ ನಾಲ್ಕು ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಎಂದು ಹೇಳಿದರು. ಎಎಪಿ ದಕ್ಷಿಣ ದೆಹಲಿ, ನವದೆಹಲಿ, ಪಶ್ಚಿಮ ದೆಹಲಿ ಮತ್ತು ವಾಯುವ್ಯ ದೆಹಲಿ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು,…
ಬೆಂಗಳೂರು: ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡವರಿಗೆ ಗುಡ್ ನ್ಯೂಸ್ ಎನ್ನುವಂತೆ, ಬಿಬಿಎಂಪಿಯಿಂದ ಒಂದು ಬಾರಿ ಕಡೆಯ ಅವಕಾಶ ನೀಡಲಾಗಿದೆ. ಈ ಮೂಲಕ OTS ಯೋಜನೆಯಡಿ ಪರಿಹಾರ ಕಂಡುಕೊಳ್ಳೋದಕ್ಕೆ ಅವಕಾಶ ನೀಡಲಾಗಿದೆ. ಆ ಬಗ್ಗೆ ಮುಂದಿದೆ ಪುಲ್ ಡಿಟೇಲ್ಸ್ ಓದಿ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಮಾಲೀಕರಿಗಾಗಿ ‘ಒನ್ ಟೈಮ್ ಸೆಟ್ಲ್ ಮೆಂಟ್’(ಒಟಿಎಸ್) ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಒಟಿಎಸ್ ಸೌಲಭ್ಯವನ್ನು ಆನ್‌ಲೈನ್ ಮೂಲಕ ಪಡೆದು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರವು ದಿನಾಂಕ: 22-02-2024ರಂದು(ಗುರುವಾರ) ‘ಒನ್ ಟೈಮ್ ಸೆಟ್ಲ್ ಮೆಂಟ್’(ಒಟಿಎಸ್) ಯೋಜನೆಯ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ಪಾಲಿಕೆಯ ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸುವ ಸಾಪ್ಟ್ ವೇರ್ ನಲ್ಲಿ ಒಟಿಎಸ್ ಅನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ನಾಗರಿಕರು ಈಗ ಒಟಿಎಸ್ ನ ಸಂಪೂರ್ಣ ಪ್ರಯೋಜನವನ್ನು ಪಡೆದು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ. ಬಿಬಿಎಂಪಿಯ ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ OTS ಆದೇಶವನ್ನು ಜಾರಿಗೆ ತಂದಿದ್ದು, ನಾಗರೀಕರು…
ಬೆಂಗಳೂರು: ರಾಜ್ಯದಲ್ಲಿ ಯಾವುದೇ ಸಚಿವರಾಗಲಿ, ಮಾಜಿ ಸಚಿವರಾಗಲಿ ಪ್ರಕರಣ ದಾಖಲಾದ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ವಿಧಾನಸಭಾ ಚುನಾವಣೆ ವೇಳೆಯಲ್ಲಿ ದಾಖಲಾಗಿದ್ದಂತ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದುಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಪೀಠವು ಪ್ರಕರಣ ದಾಖಲಾದ ನಂತ್ರ ಎಷ್ಟು ಬಾರಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರಾಗಿದ್ದಾರೆ ಎಂಬುದಾಗಿ ಪ್ರಶ್ನಿಸಿತು. ಇದಕ್ಕೆ ನ್ಯಾಯಪೀಠಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದಂತ ವಕೀಲರು ಈವರೆಗೆ ನಾಲ್ಕು ಬಾರಿ ಸಮನ್ಸ್ ಜಾರಿಗೊಳಿಸಲಾಗಿದೆ. ಆದರೇ ಈವರೆಗೆ ಒಮ್ಮೆಯೂ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಿಲ್ಲ ಎಂಬುದಾಗಿ ಗಮನಕ್ಕೆ ತಂದರು. ಇದರಿಂದ ಸಿಟ್ಟಾದಂತ ಹೈಕೋರ್ಟ್ ನ್ಯಾಯಪೀಠವು, ರಾಜ್ಯದಲ್ಲಿ ಯಾವುದೇ ಸಚಿವರಾಗಲಿ, ಮಾಜಿ ಸಚಿವರಾಗಲಿ ಪ್ರಕರಣ ದಾಖಲಾದ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು. ಮುಂದಿನ ವಿಚಾರಣೆ ವೇಳೆ ಮ್ಯಾಜಿಸ್ಟ್ರೇಟ್ ಮುಂದೆ ಶ್ರೀರಾಮುಲು ಹಾಜರಾಗಬೇಕು. ಒಂದು ವೇಳೆ ಹಾಜರಾಗಲಿದ್ದಲ್ಲಿ ಬಂಧನ ವಾರಂಟ್ ಹೊರಡಿಸಬೇಕಾಗುತ್ತದೆ ಎಂದು ಶ್ರೀರಾಮುಲುಗೆ…
ಬೆಂಗಳೂರು: ಫೆಬ್ರವರಿ.27ರಂದು ಬೆಂಗಳೂರಲ್ಲಿ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಮತ್ತು ಆಡಳಿತದಲ್ಲಿ ಕಾರ್ಯಕ್ಷಮತೆಯ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಈಗಾಗಲೇ 2 ದಿನ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿತ್ತು. ಈಗ ಮುಂದುವರೆದು ರಾಜ್ಯದ ಅನುದಾನಿತ ಶಾಲಾ ಶಿಕ್ಷಕರಿಗೂ ಓಓಡಿ ನೀಡಿ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ದಿನಾಂಕ: 27.02.2024 ರಂದು ಬೆಂಗಳೂರು ನಗರದ ಅರಮನೆ ಆವರಣದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಮತ್ತು ಆಡಳಿತದಲ್ಲಿ ಕಾರ್ಯಕ್ಷಮತೆ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವ ಅಧಿಕಾರಿ/ಸಿಬ್ಬಂದಿಗಳಿಗೆ ಸಮ ಸಂಖ್ಯೆಯ ಸುತ್ತೋಲೆ ದಿನಾಂಕ: 14.02.2024 ರಂತೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ ಎಂದಿದ್ದಾರೆ. ಇನ್ನೂ ಮುಂದುವರೆದು, ನಿಗಮ-ಮಂಡಳಿ, ನಗರ ಪಾಲಿಕೆಗಳು, ಪ್ರಾಧಿಕಾರಗಳು, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು…
ನವದೆಹಲಿ: ಬುಕ್ ಮಾಡಿದ ಕಲ್ಯಾಣ ಮಂಟಪದಲ್ಲಿ ಆರೋಪಿಗಳು ಮದುವೆಯನ್ನು ನಡೆಸದಿರುವುದು ಐಪಿಸಿ ಸೆಕ್ಷನ್ 417 ರ ಅಡಿಯಲ್ಲಿ ಶಿಕ್ಷಾರ್ಹ ವಂಚನೆಯ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ. ಪ್ರಸ್ತುತ ಮೇಲ್ಮನವಿದಾರರ ವಿರುದ್ಧ ಐಪಿಸಿಯ ಸೆಕ್ಷನ್ 417 ರ ಅಡಿಯಲ್ಲಿ ಅಪರಾಧವನ್ನು ಹೇಗೆ ಮಾಡಲಾಗುತ್ತದೆ ಎಂದು ನಮಗೆ ಕಾಣುತ್ತಿಲ್ಲ. ಮದುವೆ ಪ್ರಸ್ತಾಪವನ್ನು ಪ್ರಾರಂಭಿಸಲು ಮತ್ತು ನಂತರ ಪ್ರಸ್ತಾಪವು ಅಪೇಕ್ಷಿತ ಅಂತ್ಯವನ್ನು ತಲುಪದಿರಲು ಅನೇಕ ಕಾರಣಗಳಿರಬಹುದು. ಪ್ರಾಸಿಕ್ಯೂಷನ್ ಮುಂದೆ ಅಂತಹ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಸೆಕ್ಷನ್ 417 ರ ಅಡಿಯಲ್ಲಿ ಯಾವುದೇ ಅಪರಾಧವನ್ನು ಸಹ ಮಾಡಲಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಟ್ಟಾರೆಯಾಗಿ ಮದುವೆಯಿಂದ ಹಿಂದೆ ಸರಿಯುವುದು ಐಪಿಸಿ ಸೆಕ್ಷನ್ 417ರ ಅಡಿಯಲ್ಲಿ ವಂಚನೆ ಅಪರಾಧವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ.
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಮತ್ತೆ ವಿಧಾನ ಪರಿಷತ್ತಿನಲ್ಲಿ ಇಂದು ಮುಜುಗರ ಉಂಟಾಗಿದೆ. ಇಂದು ಮಂಡಿಸಲಾಗಿದ್ದಂತ ಹಿಂದೂ ಧಾರ್ಮಿಕ ದತ್ತಿ ಹಾಗೂ ಧರ್ಮದಾಯ ವಿಧೇಯಕವು ತಿರಸ್ಕೃತಗೊಂಡಿದೆ. ಇಂದು ವಿಧಾನ ಪರಿಷತ್ತಿನಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಹಿಂದೂ ಧಾರ್ಮಿಕ ದತ್ತಿ ಹಾಗೂ ಧರ್ಮದಾಯ ವಿಧೇಯಕವನ್ನು ಮಂಡಿಸಿದರು. ಆ ಬಳಿಕ ಉಪ ಸಭಾಪತಿ ಪ್ರಾಣೇಶ್ ಅವರು ಧ್ವನಿ ಮತಕ್ಕೆ ಹಾಕಿದರು. ವಿಧಾನ ಪರಿಷತ್ ನಲ್ಲಿ ಹಿಂದೂ ಧಾರ್ಮಿಕ ವಿಧೇಯಕದ ಪರವಾಗಿ 7 ಮತಗಳು, ವಿರೋಧವಾಗಿ 18 ಮತಗಳು ಚಲಾಯಿಸಲಾಯಿತು. ಹೀಗಾಗಿ ವಿಧೇಯಕದ ವಿರೋಧವಾಗಿ ಹೆಚ್ಚು ಮತ ಚಲಾವಣೆಯಾದ ಕಾರಣ, ವಿಧಾನ ಪರಿಷತ್ ನಲ್ಲಿ ಹಿಂದೂ ಧಾರ್ಮಿಕ ದತ್ತಿ ಹಾಗೂ ಧರ್ಮದಾಯ ವಿಧೇಯಕ ತಿರಸ್ಕೃತಗೊಂಡಿದೆ. ಹಿಂದೂ ಧಾರ್ಮಿಕ ದತ್ತಿ ವಿಧೇಯಕ ಪರಿಷತ್ ನಲ್ಲಿ ತಿರಸ್ಕೃತಗೊಳ್ಳುತ್ತಿದ್ದಂತೇ ಬಿಜೆಪಿ ಸದಸ್ಯರಿಂದ ಜೈ ಶ್ರೀರಾಮ ಎಂಬುದಾಗಿ ಘೋಷಣೆ ಕೂಗಲಾಯಿತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದಿಂದ ಭಾರತ್ ಮಾತಾಕಿ ಜೈ, ಜೈ ಭೀಮ್ ಎಂಬುದಾಗಿ ಘೋಷಣೆ ಕೂಗಲಾಯಿತು. ಒಟ್ಟಾರೆಯಾಗಿ ರಾಜ್ಯ ಸರ್ಕಾರಕ್ಕೆ…