Author: kannadanewsnow09

ಶಿವಮೊಗ್ಗ: ಜಿಲ್ಲೆಯಲ್ಲಿ ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ ಎನ್ನುವಂತೆ ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಹೊಸನಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಚಂಪಕಾಪುರ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಚಂಪಕಾಪುರದ ನಿವಾಸಿಯಾಗಿದ್ದಂತ ರಾಜೇಶ್ ಎಂಬುವರ ಪತ್ನಿ ವಾಣಿ(32) ಎಂಬುವರು ತನ್ನ ಇಬ್ಬರು ಮಕ್ಕಳಾದಂತ ಸಮರ್ಥ(12) ಹಾಗೂ ಸಂಪದ(6) ಎಂಬುವರೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿಯಂದು ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ನಗರ ಠಾಣೆಯ ಪಿಎಸ್ಐ ರಮೇಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಾವಿಯಲ್ಲಿದ್ದಂತ ವಾಣಿ, ಸಮರ್ಥ ಹಾಗೂ ಸಂಪದ ಮೃತದೇಹವನ್ನು ಹೊರತೆಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರ ತನಿಖೆಯ ಬಳಿಕ ಇಬ್ಬರು ಮಕ್ಕಳೊಂದಿಗೆ ಮಹಿಳೆಯು ಆತ್ಮಹತ್ಯೆ ಹಿಂದಿನ ಕಾರಣ ತಿಳಿದು ಬರಬೇಕಿದೆ. https://kannadanewsnow.com/kannada/applications-invited-for-medical-and-paramedical-posts/ https://kannadanewsnow.com/kannada/7090908057/

Read More

ಶಿವಮೊಗ್ಗ : 2024-25ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 3 ಕ್ಲಿನಿಕ್‌ಗಳಲ್ಲಿ ಖಾಲಿಯಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಎಂಬಿಬಿಎಸ್ ವೈದ್ಯರ -2 ಹುದ್ದೆಗೆ ಎಂಬಿಬಿಎಸ್ ಉತ್ತೀರ್ಣರಾಗಿರಬೇಕು ಮತ್ತು ಕಡ್ಡಾಯವಾಗಿ ಇಂರ‍್ನ್ಶಿಪ್ ಪೂರೈಸಿರಬೇಕು. ಕಿರಿಯ ಆರೋಗ್ಯ ಸಹಾಯಕ(ಆರೋಗ್ಯ ನಿರೀಕ್ಷಣಾಧಿಕಾರಿಗಳು)ರ-3 ಹುದ್ದೆಗೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಕರ್ನಾಟಕ ರಾಜ್ಯದ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿದ್ದೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿಯನ್ನು ಪಡೆದಿರಬೇಕು. ಅಥವಾ ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 3 ವರ್ಷಗಳ ಆರೋಗ್ಯ ನೀರಿಕ್ಷಕರ ಡಿಪ್ಲೋಮಾ ಹೊಂದಿರಬೇಕು. ಅಥವಾ ಪಿಯುಸಿ (ವಿಜ್ಞಾನ) ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 2 ವರ್ಷಗಳ ಆರೋಗ್ಯ ನೀರಿಕ್ಷಕರ ಡಿಪ್ಲೋಮಾ ಹೊಂದಿರಬೇಕು. ನೇಮಕಾತಿಯು ಮೇರಿಟ್ ಕಂ ರೋಸ್ಟರ್ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ಆಸಕ್ತರು ಅರ್ಜಿ ನಮೂನೆಯನ್ನು ಎನ್.ಹೆಚ್.ಎಂ. ವಿಭಾಗ, ಜಿಲ್ಲಾ ಆರೋಗ್ಯ…

Read More

ಬೆಂಗಳೂರು: ಆಗಸ್ಟ್.15ರಂದು ದೇಶಾಧ್ಯಂತ ಸ್ವಾತಂತ್ರೋಯತ್ಸವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ತಿರಂಗದ ರಾಷ್ಟ್ರ ಧ್ವಜವನ್ನು ದೇಶದ ಹೆಮ್ಮೆಯ ಪ್ರತೀಕವಾಗಿ ಬಳಕೆ ಮಾಡಲಾಗುತ್ತದೆ. ಆದರೇ ಈ ಧ್ವಜ ಪ್ಲಾಸ್ಟಿಕ್ ನಿಂದ ಮಾಡಿದ್ದಾಗಿರುವಂತಿಲ್ಲ. ಬದಲಾಗಿ ಬಟ್ಟೆಯ ಧ್ವಜವನ್ನು ಬಳಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮ ಮೀರಿ ಬಳಕೆ ಮಾಡಿದ್ರೇ, ಅಂತವರ ವಿರುದ್ಧ ಕೇಸ್ ಫಿಕ್ಸ್ ಎಂಬುದಾಗಿ ರಾಜ್ಯ ಸರ್ಕಾರ ಎಚ್ಚರಿಸಿದೆ. ಈ ಕುರಿತಂತೆ ಭಾರತ ಸರ್ಕಾರದ  ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಗೃಹ ಮಂತ್ರಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಬಳಸದಂತೆ ನಿರ್ದೇಶನ ನೀಡಿದೆ. ರಾಷ್ಟ್ರೀಯ ಗೌರವ ಕಾಯ್ದೆ, 1971 ಮತ್ತು ಭಾರತ ಧ್ವಜ ಸಂಹಿತೆ 2002 ರಡಿ ಎಲ್ಲಾ  ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ ಪ್ರಮುಖ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳಲ್ಲಿ ಹಾಗೂ ಸ್ವಾತಂತ್ರ‍್ಯ ದಿನಾಚರಣೆಯ ದಿನ ನಿಷೇಧಿತ ಪ್ಲಾಸ್ಟಿಕ್ ಧ್ವಜವನ್ನು ಬಳಸದಂತೆ ಖಡಕ್ ಆದೇಶದಲ್ಲಿ ಸೂಚಿಸಿದೆ. ಒಂದು ವೇಳೆ ಈ…

Read More

ಬೆಂಗಳೂರು: ಮಾನಹಾನಿ ಹೇಳಿಕೆ ಸಂಬಂಧದ ಪ್ರಕರಣದಲ್ಲಿ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಕಾರ್ಕಳ ಅವರ ವಿರುದ್ಧ ವಿಚಾರಣಾ ನ್ಯಾಯಾಲಯ ಜಾರಿಗೊಳಿಸಿದ್ದಂತ ವಾರೆಂಟ್ ಗೆ ಹೈಕೋರ್ಟ್ ತಡೆ ನೀಡಿದೆ. ಈ ಮೂಲಕ ಮಾಜಿ ಸಚಿವ ಸುನೀಲ್ ಕುಮಾರ್ ಗೆ ಬಿಗ್ ರಿಲೀಫ್ ನೀಡಿದೆ. ಮೇ.14, 2023ರಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಕಾರ್ಕಳ ಅವರು ಮಾನಹಾನಿ ಹೇಳಿಕೆಯನ್ನು ನೀಡಿದ್ದರು. ಈ ಸಂಬಂಧ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಸೆಪ್ಟೆಂಬರ್.7, 2023ರಂದು ಬೆಂಗಳೂರಿನ ಸಿಜೆಎಂ ಕೋರ್ಟ್ ಗೆ ಖಾಸಗಿ ದೂರು ದಾಖಲಿಸಿದ್ದರು. ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದಂತ ಮಾನಹಾನಿ ಹೇಳಿಕೆಯ ಖಾಸಗಿ ದೂರನ್ನು ವಿಚಾರಣೆ ನಡೆಸಿದ್ದಂತ ನ್ಯಾಯಾಲಯವು, ಸುನೀಲ್ ಕುಮಾರ್ ಗೆ ವಾರಂಟ್ ಜಾರಿಗೊಳಿಸಿತ್ತು. ಇಂತಹ ವಿಚಾರಣಾ ನ್ಯಾಯಾಲಯದ ವಾರಂಟ್ ಪ್ರಶ್ನಿಸಿ ಸುನೀಲ್ ಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಆರಂಭದಲ್ಲಿ ವಾರಂಟ್ ಗೆ ತಡೆ ನೀಡಲು ನಿರಾಕರಿಸಿತು ಆದರೂ, ಪಕ್ಷವು ವಿಪ್ ಜಾರಿಗೊಳಿಸಿದ್ದರಿಂದ ವಿಚಾರಣೆಗೆ ವಿ.ಸುನೀಲ್…

Read More

ಹಿಂದೂ ಧರ್ಮದಲ್ಲಿ ಹಾವುಗಳಿಗೆ ವಿಶೇಷ ಸ್ಥಾನ ಹಾಗೂ ಗೌರವವನ್ನು ನೀಡಲಾಗುತ್ತದೆ. ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಹಾವುಗಳು ದೇವತೆಗಳೊಂದಿಗೆ ನಿಕಟ ಸಂಬಂಧವನ್ನು ಪಡೆದುಕೊಂಡಿವೆ. ನಾಗರ ಹಾವು ಮತ್ತು ಕಾಳ ಸರ್ಪವು ಅತ್ಯಂತ ಶಕ್ತಿಯುತವಾದ ಹಾಗೂ ದೈವ ಶಕ್ತಿಯನ್ನು ಪಡೆದಿರುವ ಸರೀಸೃಪ. ಇವುಗಳನ್ನು ಸಾಯಿಸುವುದು ಅಥವಾ ಹಿಂಸಿಸುವುದು ಮಾಡಿದರೆ ನಮ್ಮ ಜನ್ಮಕ್ಕೆ ಕಳಂಕ ಹಾಗೂ ಮಹಾ ಪಾಪ ಅಂಟಿಕೊಳ್ಳುವುದು. ಒಮ್ಮೆ ಹಾವು ದ್ವೇಷವನ್ನು ಹೊಂದಿದ್ದರೆ 12 ವರ್ಷಗಳ ಕಾಲ ಕಾಯುವುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ಸಿಂಗದೂರು ಚೌಡಮ್ಮನವರ ಉಪಾಸಕರು ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ,…

Read More

ಚಿತ್ರದುರ್ಗ: ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಕಾಡುಗೊಲ್ಲ ಮುಖಂಡರು ಸಿಡಿದೆದ್ದಿದ್ದಾರೆ. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಇಂದು ಡಿಸಿ ಕಚೇರಿ ಮುಂದೆ ಸಾಂಕೇತಿಕ ಧರಣಿ, ಪ್ರತಿಭಟನೆಯನ್ನು ನಡೆಸಲಿದ್ದಾರೆ. ಈ ಕುರಿತಂತೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ.ಶಿವು ಯಾದವ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಜನಾಂಗದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಿನಾಂಕ 09-08-2024ರ ಇಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಒಂದು ದಿನದ ಸಾಂಕೇತಿಕ ಧರಣಿಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ, ಕೇಂದ್ರ ಸರ್ಕಾರಕ್ಕೆ ಕಾಡುಗೊಲ್ಲ ಜನಾಂಗದ ಜಾತಿ ಪ್ರಮಾಣಪತ್ರ ನೀಡುವಂತೆ ಮನವಿ ಪತ್ರವನ್ನು ನೀಡಿ ಒತ್ತಾಯಿಸಲಾಗುತ್ತದೆ. ಅಲ್ಲದೇ ಅಲೆಮಾರಿ ಪಟ್ಟಿಗೆ ಸೇರಿಸಬೇಕು. ಈ ತಕ್ಷಣವೇ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವಂತೆ ಆಗ್ರಹಿಸಲಾಗುವುದು ಎಂದಿದ್ದಾರೆ. ಇನ್ನೂ ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಕಾಡುಗೊಲ್ಲರ ಹಟ್ಟಿಗಳಲ್ಲಿ ಸರ್ಕಾರದ ವತಿಯಿಂದ ಜಾಗೃತಿ ಕಾರ್ಯಕ್ರಮ ಏರ್ಪಡಿಸುವಂತೆ ಮನವಿ…

Read More

ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ಮಂತ್ರಾಕ್ಷತೆಯ ಮಹಿಮೆ ಏನು ಎಂದು ತಿಳಿಯೋಣ ಬನ್ನಿ ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ವಿಘ್ನೇಶ್ವರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಗಳಲ್ಲಿ ನಿಮ್ಮ ಕಷ್ಟಗಳಿಗೆ ಫೋನಿನ ಮುಖಾಂತರ ಪರಿಹಾರ ಸೂಚಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿಯೂ ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಖಚಿತ ನಿಮ್ಮ ಗುಪ್ತ ಸಮಸ್ಯೆಗಳಿಗೂ ಹಾಗೂ ನಿಮ್ಮ ಮನೆಚ ಕಾರ್ಯಗಳಿಗೂ ಇಲ್ಲಿ 💯 ಗ್ಯಾರಂಟಿ ಪರಿಹಾರ ಶತಸಿದ್ಧ ಇಂದೇ ಕರೆ ಮಾಡಿ. 9535839666 ರಾಯರ ಸನ್ನಿಧಾನದಲ್ಲಿ ಸಿಗುವಂತಹ ಮಂತ್ರಾಕ್ಷತೆ ಎಷ್ಟು ಪವರ್ಫುಲ್ ಎಂದು ತಿಳಿದುಕೊಳ್ಳೋಣ ಈ ಮಂತ್ರಾಕ್ಷತೆಯಿಂದ ಆರೋಗ್ಯ ಸಮಸ್ಯೆ ಎನ್ನುವುದು ನಿವಾರಣೆ ಆಗುತ್ತದೆ ಪ್ರತಿದಿನ ನೀವು ಸ್ನಾನ ಮಾಡಿ ನಂತರ ಮಂತ್ರಾಕ್ಷತೆಯನ್ನು ನಿಮ್ಮ ತಲೆಯ ಮೇಲೆ ಹಾಕಿಕೊಂಡು ಹೊರಗಡೆ ಹೋಗುವುದರಿಂದ ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಹೌದು ವೀಕ್ಷಕರೇ ಪ್ರತಿ ಗುರುವಾರ ನೀವು ರಾಯರ ಮಠಕ್ಕೆ ಹೋಗಿ ಅಲ್ಲಿ ಸಿಗುವ ಮಂತ್ರಾಕ್ಷತೆಯನ್ನು…

Read More

ಬೆಂಗಳೂರು: ನಗರದಲ್ಲಿ ಇಂದು ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ. ವಾಕಿಂಗ್ ಮಾಡುತ್ತಿದ್ದಂತ ಮಹಿಳೆಯೊಬ್ಬರಿಗೆ ಏಕಾಏಕಿ ಕಲ್ಲಿನಿಂದ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲಿನಿಂದ ಜಜ್ಜಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಹಕಾರ ನಗರದಲ್ಲಿ ಇಂದು ಈ ಘಟನೆ ನಡೆದಿದೆ. ವಾಕಿಂಗ್ ಮಾಡುತ್ತಿದ್ದಂತ ಸುನೀತಾ ಎಂಬುವರ ಮೇಲೆ ಏಕಾಏಕಿ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲಿನಿಂದ ಜಜ್ಜಿದ್ದಾನೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದಂತ ಸುನೀತಾರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಅಲ್ಲದೇ ಮಹಿಳೆಗೆ ಜಜ್ಜಿದಂತ ಅಪರಿಚಿತ ವ್ಯಕ್ತಿಯನ್ನು ಹಿಡಿದು ಥಳಿಸಿದಂತ ಜನರು, ಕೊಡಿಗೆಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂದಹಾಗೇ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಭಿಕ್ಷಾಟನೆ ಮಾಡುತ್ತಿದ್ದನು ಎಂಬುದಾಗಿ ತಿಳಿದು ಬಂದಿದೆ. ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/ask-rtos-to-check-dl-of-lorry-drivers-in-bengaluru-ramesh-babu-writes-to-cm/ https://kannadanewsnow.com/kannada/sc-leaders-support-bjps-fight-mlc-chalavadi-narayanasamy/

Read More

ಬೆಂಗಳೂರು: ನಗರದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರರ ಕರಿನೆರಳಿನ ಮುನ್ಸೂಚನೆ ತಿಳಿದು ಬಂದಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಬೆಂಗಳೂರು ನಗರ ಪೊಲೀಸರು ಹೈ ಎಲರ್ಟ್ ಆಗಿದ್ದು, ಹೋಟೆಲ್ ಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ದಿನಾಂಕ 15-08-2024ರಂ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕವಾಯತು ಮತ್ತು ಸಮಾರಂಭಗಳು ನಡೆಯಲಿದೆ ಎಂದಿದ್ದಾರೆ. ಉಗ್ರಗಾಮಿಗಳು ಬೆಂಗಳೂರು ನಗರವನ್ನು ಗುರಿಯಾಗಿಟ್ಟುಕೊಂಡಿರುವ ಹಿನ್ನಲೆಯಲ್ಲಿ ತಾವು ಸಂಘದಲ್ಲಿ ಸದಸ್ಯರಾಗಿರುವ ಹೋಟೆಲ್ ಗಳ ಮಾಲೀಕರಿಗೆ, ಹೋಟೆಲ್ ಗಳ ಮ್ಯಾನೇಜರ್ ಹಾಗೂ ಇತರೆ ನೌಕರರಿಗೆ ಹೋಟೆಲ್ ಗಳಲ್ಲಿ ತಂಗುವ ವಿದೇಶಿಯರು ಮತ್ತು ಸಂಶಯಾಸ್ಪದ ಹಾಗೂ ಅಪರಿಚಿತ ವ್ಯಕ್ತಿಗಳು ಹೋಟೆಲ್ ಗಳಲ್ಲಿ ತಂಗಿದಲ್ಲಿ ಅವರ ಬಗ್ಗೆ ನಿಗಾವಹಿಸಿ, ವಿಶೇಷವೇನಾದರೂ ಕಂಡು ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ಭದ್ರತಾ ಕಾರ್ಯದಲ್ಲಿ ಪೊಲೀಸರಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕೆಂದು…

Read More

ಬೆಂಗಳೂರು : ಕಾಳ್ಗಿಚ್ಚು ಎಚ್ಚರಿಕೆ, ಗಸ್ತುಪಡೆ ಎಚ್ಚರಿಕೆ, ಅರಣ್ಯ ಹೊದಿಕೆ ಬದಲಾವಣೆ ಎಚ್ಚರಿಕೆ ಆಪ್, ಇ-ಎಫ್.ಐ.ಆರ್ ಸೇರಿದಂತೆ ಅರಣ್ಯ ಮತ್ತು ವೃಕ್ಷ ಸಂಪತ್ತಿನ ಸಂರಕ್ಷಣೆಗಾಗಿ ಕರ್ನಾಟಕ ಅರಣ್ಯ ಇಲಾಖೆ ಐಸಿಟಿ ವಿಭಾಗ ಸಿದ್ಧಪಡಿಸಿರುವ ವಿವಿಧ ಆನ್ವಯಿಕ (ಆಪ್)ಗಳ ಬಗ್ಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರಶಂಸೆ ವ್ಯಕ್ತಪಡಿಸಿದರು. ಅರಣ್ಯ ಭವನಕ್ಕಿಂದು ಭೇಟಿ ನೀಡಿ ಅರಣ್ಯ ಇಲಾಖೆ ಇಸ್ರೋ ಸಹಯೋಗದಲ್ಲಿ ರೂಪಿಸಿರುವ ವಿವಿಧ ಆಪ್ ಗಳ ಪ್ರಾತ್ಯಕ್ಷಿಕೆ ವೀಕ್ಷಿಸಿ, ಮಾಹಿತಿ ಪಡೆದ ಅವರು ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ಬಳಿಕ ಅರಣ್ಯ ಸಂರಕ್ಷಣೆಗೆ ನೀಡಿರುವ ಆದ್ಯತೆ ಮತ್ತು ತೋರುತ್ತಿರುವ ಕಾಳಜಿಗೆ ಪ್ರಶಂಸೆ ವ್ಯಕ್ತಪಡಿಸಿದರು. 2023-24ನ ಸಾಲಿನಲ್ಲಿ 5 ಕೋಟಿ 48 ಲಕ್ಷ ಸಸಿಗಳನ್ನು ನೆಟ್ಟು, ಅವುಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ಜಿಯೋ ಟ್ಯಾಗ್ ಮಾಡಿ, ಆಡಿಟ್ ಮಾಡಿಸುತ್ತಿರುವ ಕರ್ನಾಟಕದ ಕ್ರಮ ಎಲ್ಲ ರಾಜ್ಯಗಳಿಗೂ ಅನುಕರಣೀಯ ಎಂದು ಅಭಿಪ್ರಾಯಪಟ್ಟರು. ಈ ಎಲ್ಲ ತಂತ್ರಾಂಶಗಳ ಬಗ್ಗೆ ತಮ್ಮ ಅಧಿಕಾರಿಗಳಿಗೂ ತರಬೇತಿ…

Read More