Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ ಇಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಬಾಂಬರ್ ಪೋಟೋವನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕೇವಲ ಐದು ಸೆಕೆಂಡುಗಳಲ್ಲಿ 2 ಬಾರಿ ಬಾಂಬ್ ಸ್ಪೋಟಗೊಳಿಸಲಾಗಿತ್ತು. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದರು. ರಾಜ್ಯ ಸರ್ಕಾರದಿಂದ ಆರಂಭದಲ್ಲಿ ಈ ಪ್ರಕರಣವನ್ನು ಸಿಸಿಬಿಗೆ ವಹಿಸಿತ್ತು. ಆ ಬಳಿಕ ವಿಪಕ್ಷಗಳ ಒತ್ತಾಯಕ್ಕೆ ಮಣಿದು ಎನ್ಐಎ ತನಿಖೆಗೆ ವಹಿಸಲಾಗಿತ್ತು. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ್ದಂತ ಎನ್ಐಎ ಅಧಿಕಾರಿಗಳು ಇಂದು ಬಾಂಬರ್ ಪೋಟೋವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಆತನ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. https://kannadanewsnow.com/kannada/fsl-report-of-private-firms-will-not-be-recognised-cm/ https://kannadanewsnow.com/kannada/breaking-in-yet-another-shocking-incident-in-the-state-a-case-of-73-foeticide-has-come-to-light-in-nelamangala/
ಬೆಂಗಳೂರು: ರಾಜ್ಯದ ಗ್ರಾಮೀಣ ಕರ್ನಾಟಕಕ್ಕೆ ಸುಲಲಿತ ಜನಸೇವೆಯ ಗ್ಯಾರಂಟಿಯ ಯೋಜನೆಯಾಗಿ ಪಂಚಮಿತ್ರ ಪೋರ್ಟಲ್ ಮೂಲಕ ವಾಟ್ಸಾಪ್ ಚಾಟ್ ಸೇವೆಯನ್ನು ಆರಂಭಿಸಲಾಗಿದೆ. ಇದೇ ದೇಶದಲ್ಲೇ ಮೊದಲು ಜಾರಿಗೊಳಿಸಿದಂತ ಸೇವೆಯಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗ್ರಾಮ ಪಂಚಾಯ್ತಿಗಳ ಸಂಪೂರ್ಣ ಮಾಹಿತಿ ಈಗ ನಿಮ್ಮ ಅಂಗೈಯಲ್ಲೇ ಲಭ್ಯವಾಗಲಿದೆ. ಅದಕ್ಕಾಗಿ ಪಂಚಮಿತ್ರ ಪೋರ್ಟಲ್ ಮತ್ತು ದೇಶದಲ್ಲಿಯೇ ಮೊದಲ ಬಾರಿ ವಾಟ್ಸಾಪ್ ಚಾಟ್ ಲೋಕಾರ್ಪಣೆಗೊಳಿಸಲಾಗಿದೆ ಎಂದಿದ್ದಾರೆ. ರಾಜ್ಯ ಸರ್ಕಾರಿ ಗ್ರಾಮೀಣ ಕರ್ನಾಟಕಕ್ಕೆ ಸುಲಲಿತ ಜನಸೇವೆಯ ಗ್ರಾರಂಟಿಯ ಯೋಜನೆ ಇದಾಗಿದೆ. ಗ್ರಾಮೀಣ ಜನರು ಜಸ್ಟ್ ವಾಟ್ಸಾಪ್ ಮಾಡಿ ಗ್ರಾಮ ಪಂಚಾಯ್ತಿಯ ಸೇವೆಗಳನ್ನು ಕುಳಿತಲ್ಲೇ ಪಡೆಯಬಹುಗಾಗಿದೆ ಎಂದು ತಿಳಿಸಿದ್ದಾರೆ. ಏನಿದು ಪಂಚಮಿತ್ರ ಪೋರ್ಟಲ್ ವಾಟ್ಸಾಪ್ ಚಾಟ್.? ಗ್ರಾಮೀಣ ಪ್ರದೇಶದ ಜನರು ಕುಳಿತಲ್ಲೇ ನಾನಾ ಸೇವೆಗಳನ್ನು ಪಡೆಯಲು ಹಾಗೂ ತಮ್ಮ ಕುಂದು ಕೊರತೆಗಳನ್ನು ದಾಖಲಿಸುವ ಸಲುವಾಗಿ ನಮ್ಮ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಪಂಚಮಿತ್ರ ಪೋರ್ಟಲ್ ಹಾಗೂ ವಾಟ್ಸಾಪ್ ಚಾಟ್ ಲೋಕಾರ್ಪಣೆಗೊಳಿಸಿದ್ದು, https://panchamitra.karnataka.gov.in ಪೋರ್ಟಲ್ ಮೂಲಕ…
ಶಿರಸಿ: ಖಾಸಗಿ ಸಂಸ್ಥೆಗಳ FSL ವರದಿಗಳಿಗೆಲ್ಲಾ ಸರ್ಕಾರ ಮಾನ್ಯತೆ ಕೊಡುವುದಿಲ್ಲ. ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ ಎಂದು ಸಿಎಂ ಸಿದ್ದರಾಮಯ್ಯ ನುಡಿದರು. ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. BJP ಖಾಸಗಿ ಸಂಸ್ಥೆಯೊಂದರ FSL ವರದಿಯನ್ನು ತಂದಿಟ್ಟು ರಾಜ್ಯದ ಜನರ ದಿಕ್ಕು ತಪ್ಪಿಸಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಖಾಸಗಿ ಸಂಸ್ಥೆ ನೀಡುವ FSL ವರದಿಯನ್ನು ಸರ್ಕಾರ ಒಪ್ಪುವುದಿಲ್ಲ, ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ ಎಂದರು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧ್ಯತೆಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 854 ಕೋಟಿ ರೂ ಪಿಡಿ ಖಾತೆಯಲ್ಲಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಉಚಿತ ಸಹಾಯವಾಣಿ ಆರಂಭಿಸಲಾಗುವುದು. ಸಚಿವರು ಮತ್ತು ಶಾಸಕರ ಅಧ್ಯಕ್ಷತೆ ಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ. ಪ್ರತೀ ವಾರಕ್ಕೊಮ್ಮೆ ಪಿಡಿಒ ಗಳು ಮತ್ತು ವಿಎ ಗಳ…
ಬೆಂಗಳೂರು: ರಾಜ್ಯದಲ್ಲೇ ಬೆಚ್ಚಿ ಬೀಳಿಸೋ ಮಂಡ್ಯದ ಭ್ರೂಣ ಹತ್ಯೆ ಪ್ರಕರಣದ ನಂತ್ರ, ನೆಲಮಂಗಲದಲ್ಲೂ 74 ಭ್ರೂಣ ಹತ್ಯೆ ಪ್ರಕರಣ ಪತ್ತೆಯಾಗಿತ್ತು. ನೆಲಮಂಗಲ ನಗರದ ಆಸರೆ ಆಸ್ಪತ್ರೆಯಲ್ಲಿ 74 ಭ್ರೂಣ ಹತ್ಯೆಯನ್ನು ಮಾಡಿರೋದಾಗಿ ತಿಳಿದು ಬಂದ ಕಾರಣ ಆಸ್ಪತ್ರೆಯ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಆಸರೆ ಆಸ್ಪತ್ರೆಯ ಮಾಲೀಕ ಡಾ.ರವಿಕುಮಾರ್ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿರುವಂತ ಆಸರೆ ಆಸ್ಪತ್ರೆಯಲ್ಲಿ 74 ಹೆಣ್ಣು ಭ್ರೂಣ ಹತ್ಯೆ ಮಾಡಿರುವಂತ ಶಾಕಿಂಗ್ ಮಾಹಿತಿ ಆರೋಗ್ಯ ಇಲಾಖೆಯ ಅಧಿಕಾರಿಗಳ ದಾಳಿಯ ನಂತ್ರ ಪತ್ತೆಯಾಗಿದೆ. ಆಸರೆ ಆಸ್ಪತ್ರೆಯ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಈ ಆಘಾತಕಾರಿ ವಿಷಯವನ್ನು ಬೆಳಕಿಗೆ ತಂದಿದ್ದಾರೆ. ನೆಲಮಂಗಲದ ಆಸರೆ ಆಸ್ಪತ್ರೆಯ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿ 74 ಭ್ರೂಣ ಲಿಂಗ ಪತ್ತೆ ಪ್ರಕರಣವನ್ನು ಪತ್ತೆ ಹಚ್ಚುತ್ತಿದ್ದಂತೇ, ಆಸ್ಪತ್ರೆಯ ಮಾಲೀಕ ಡಾ.ರವಿಕುಮಾರ್ ಅವರು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ…
ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಿಧ ಜಿಲ್ಲೆಗಳ ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆಗಳ ಜೀರ್ಣೋದ್ಧಾರ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ಮಂಜೂರು ಮಾಡಿ ಆದೇಶಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆಗಳ ಜೀರ್ಣೋದ್ಧಾರ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ 136 ಧಾರ್ಮಿಕ ಸಂಸ್ಥೆಗಳಿಗೆ ಒಟ್ಟು ರೂ.713.50 ಲಕ್ಷಗಳ ಅನುದಾವನ್ನು ಮಂಜೂರು ಮಾಡಲಾಗಿದೆ ಎಂದಿದ್ದಾರೆ. ಧಾರ್ಮಿಕ ಸಂಸ್ಥೆಗಳಇಗೆ ಮಂಜೂರು ಮಾಡಲಾಗ ಅನುದಾನವನ್ನು ಖಜಾನೆ-2 ಮುಖಾಂತರ ಜಿಲ್ಲಾಧಿಕಾರಿಗಳ ಡಿಡಿಓ ಸಂಕೇತಕ್ಕೆ ಅಪ್ ಲೋಡ್ ಮಾಡುವಂತೆ ಷರತ್ತು ವಿಧಿಸಲಾಗಿದೆ. ಅಲ್ಲದೇ ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳು ಇವರು ಖಜಾನೆ-2ರಡಿ ನಿಯಮಾನುಸಾರ ಅನುದಾವನ್ನು ಡ್ರಾ ಮಾಡಲು ಕ್ರಮವಹಿಸುವುದು. ಅನುದಾನ ಬಿಡುಗಡೆ ಮಾಡಿರುವ ಸಂಸ್ಥೆಯು ನಿಯಮಾನುಸಾರ ನೀಡಬಹುದಾದ ಮೊತ್ತವನ್ನು ಮುಂಗಡ ರಸೀದಿ ಪಡೆದು ಖಜಾನೆ-2ರಡಿ ಬಿಲ್ಲು ತಯಾರಿಸಿ ಪಾವತಿಸುವಂತೆ ತಿಳಿಸಲಾಗಿದೆ. ಉದ್ದೇಶಿತ ಕಾಮಗಾರಿಗಳ ಅಂದಾಜುಪಟ್ಟಿಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ…
ಅಥಣಿ : ಕಾಂಗ್ರೆಸ್ ಸರಕಾರ ಗ್ಯಾರಂಟಿಯ ಜೊತೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಬಿಜೆಪಿಯವರ ಕಣ್ಣಿಗೆ ಇದೆಲ್ಲ ಕಾಣುತ್ತಿಲ್ಲವೇ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದ್ದಾರೆ. ಅಥಣಿಯಲ್ಲಿ ಬುಧವಾರ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್ ಎಂದರೆ ಬದ್ದತೆ, ಬಸವಣ್ಣನವರು ಕಂಡ ಸಮಾನತೆಯ ಕನಸನ್ನು ನನಸು ಮಾಡುವ ಪಕ್ಷ. ಆದರೆ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಬಗ್ಗೆ ಬಹಳಷ್ಟು ಕೀಳಾಗಿ ಮಾತನಾಡಿದರು. ಗ್ಯಾರಂಟಿ ಸುಳ್ಳು ಎಂದರು, ಗ್ಯಾರಂಟಿಯಿಂದ ಮಹಿಳೆಯರು ದೇವಸ್ಥಾನಗಳಿಗೆ ತಿರುಗುತ್ತಿದ್ದಾರೆ, ಗಂಡಸರು ಕುಡಿದು ಹಾಳಾಗುತ್ತಿದ್ದಾರೆ ಎಂದು ಅವಮಾನ ಮಾಡಿದರು. ಆದರೆ ಮಹಿಳಾ ಸ್ವಾವಲಂಬನೆ ಕಾಂಗ್ರೆಸ್ ಬದ್ದತೆ. ಅದನ್ನು ಅತ್ಯಂತ ಸಮರ್ಥವಾಗಿ ಈಡೇರಿಸಿದ್ದೇವೆ ಎಂದು ಅವರು ಹೇಳಿದರು. 1.20 ಕೋಟಿ ಮನೆಯ ಯಜಮಾನಿಯರು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಎಲ್ಲ 5 ಗ್ಯಾರಂಟಿಗಳನ್ನು ಈಡೇರಿಸಿ ಕಾಂಗ್ರೆಸ್ ಪಕ್ಷ ಜನಪ್ರಿಯತೆ ಪಡೆಯುತ್ತಿರುವುದನ್ನು ಬಿಜೆಪಿಯವರಗೆ ಸಹಿಸಿಕೊಳ್ಳಲು ಆಗುವುದಿಲ್ಲ. 5 ಗ್ಯಾರಂಟಿ…
ಬೆಂಗಳೂರು: ಶ್ರೀ ವರದರಾಜೇಶ್ವರ ಶಿವಾಲಯ.. ನಿಮ್ಮೆಲ್ಲ ಇಷ್ಟಾರ್ಥಗಳನ್ನ ಈಡೇರಿಸುವ ದೇಗುಲ. ಈ ದೇವಾಲಯ 13ನೇ ಜ್ಯೋತಿರ್ಲಿಂಗ ಆಗುತ್ತೆ ಅಂತ ಸಾಕಷ್ಟು ಸಾಧು-ಸಂತರು ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಶ್ರೀವರದರಾಜೇಶ್ವರ ಶಿವಾಲಯದ ಇತಿಹಾಸ, ಪವಾಡವನ್ನು ಕೇಳಿದರೆ ಖಂಡಿತ ನಿಮಗೆ ಅಚ್ಚರಿಯಾಗುತ್ತೆ. ಇಲ್ಲಿಗೆ ಬಂದ ಭಕ್ತರ ಇಷ್ಟಾರ್ಥಗಳನ್ನು ಆ ಶಿವ ಪರಮಾತ್ಮ ಪೂರೈಸದೇ ಕಳುಹಿಸಲಾರ. ಶ್ರೀವರದರಾಜೇಶ್ವರ ಶಿವಾಲಯದ ಇತಿಹಾಸ, ಪವಾಡ, ಪೂಜೆ ಹಾಗೂ ಸೇವೆಗಳೇ ವಿಭಿನ್ನ. ಹೌದು, ಇದು ಬಿಡದಿಯ ಸಮೀಪವಿರುವ ಜಡೇನಹಳ್ಳಿ ಗ್ರಾಮದಲ್ಲಿರುವ ಅತ್ಯಂತ ಶಕ್ತಿಶಾಲಿ ಶಿವ ದೇವಾಲಯ. ಶ್ರೀ ನಾರಾಯಣ ರೆಡ್ಡಿ ಗುರುಗಳು ಈ ದೇವಾಲಯದ ಮೂಲ ಸಂಸ್ಥಾಪಕರು. ಖುಷಿಯೊಬ್ಬರು ಕನಸಿನಲ್ಲಿ ಬಂದು ಹೇಳಿದಂತೆ ನರ್ಮದಾ ತೀರದಲ್ಲಿ ಕೆಂಪು ಶಿವಲಿಂಗ ದೊರಕಿತ್ತು. ಅದನ್ನ ವಿಧಿವಿಧಾನಗಳಂತೆ ಪ್ರತಿಷ್ಟಾಪನೆ ಮಾಡಿ ಪೂಜಿಸಿಕೊಂಡು ಬರಲಾಗಿದೆ. ಪ್ರತಿಷ್ಟಾಪನೆಯ ದಿನವೇ ಅಚ್ಚರಿ ಎಂಬಂತೆ ಕಪ್ಪೆಯೊಂದು ಇದ್ದಕ್ಕಿದ್ದಂತೆ ಬಂದು ಶಿವಲಿಂಗವನ್ನ 3 ಬಾರಿ ಪ್ರದಕ್ಷಿಣೆ ಮಾಡಿ ಹೋಗುತ್ತದೆ. ಇದಾದ 2 ತಿಂಗಳ ಬಳಿಕ ಶಿವ ದೇವಾಲಯದ ಬಳಿ ಎಂದೂ ಕೇಳರಿಯದ ಗುಡುಗು…
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದಂತ ಮೂವರು ಆರೋಪಿಗಳನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದರು. ಈ ಬಳಿಕ ಮೂವರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಇಂತಹ ಆರೋಪಿಗಳಲ್ಲಿ ಇಬ್ಬರಿಗೆ ನ್ಯಾಯಾಂಗ ಬಂಧನ, ಓರ್ವ ಪೊಲೀಸ್ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಫೆಬ್ರವರಿ.27ರಂದು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಿದಂತ ಘಟನೆ ನಡೆದಿತ್ತು. ವಿಧಾನಸೌಧದ ಕಾರಿಡಾರಿನಲ್ಲಿ ನಡೆದಿದ್ದಂತ ಈ ಘಟನೆ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಬಳಿಕ ವಿಧಾನಸೌಧದ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಘಟನೆ ಸಂಬಂಧ ತನಿಖೆ ನಡೆಸಿದ್ದಂತ ವಿಧಾನಸೌಧ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರಿನ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದಂತೆ ಬೆಂಗಳೂರಿನ 39ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರು ಮೊಹಮ್ಮದ್ ನಾಶಿ ಪುಡಿಯನ್ನು ಪೊಲೀಸ್ ವಶಕ್ಕೆ ನೀಡಿದೆ. ಅಲ್ಲದೇ ಇಲ್ತಾಜ್ ಹಾಗೂ ಮುನಾವರ್ ನನ್ನು ನ್ಯಾಾಯಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಅಂದಹಾಗೇ, ಇಲ್ತಾಜ್,…
ಬೆಂಗಳೂರು: ರಾಜ್ಯದ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ಮಾಸಿಕ ಮಿತ ವೇತನವನ್ನು ರೂ.13,000ರಿಂದ ರೂ.15,000ಕ್ಕೆ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ನಡವಳಿಯನ್ನು ಹೊರಡಿಸಿದ್ದು, ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 9903 ಗ್ರಾಮ ಸಹಾಯಕರ ಮಾಸಿಕ ಮಿತಿ ವೇತನವನ್ನು ದಿನಾಂಕ 01-04-2024ರಿಂದ ಅನ್ವಯವಾಗುವಂತೆ ಮಾಸಿಕ ರೂ.13,000ಗಳಿಂದ ರೂ.15,000ಗಳಿಗೆ ಹೆಚ್ಚಿಸಿ ಆದೇಶಿಸಿದೆ. ಇನ್ನೂ ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2029-101-1-01-Revenue Divisions-034-Contract/Outsource ರ ಅಡಿಯಲ್ಲಿ ಭರಿಸುವಂತೆ ಸೂಚಿಸಿದೆ. ಅಲ್ಲದೇ ಈ ಆದೇಶವನ್ನು ಆರ್ಥಿಕ ಇಲಾಖೆಯು ದಿನಾಂಕ 27-02-2024ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ ಎಂದಿದ್ದಾರೆ. https://kannadanewsnow.com/kannada/farmer-gets-45-feet-of-2-5-inches-of-water-in-borewells-even-in-summer/
ವರದಿ: ವಸಂತ ಬಿ ಈಶ್ವರಗೆರೆ ಬೆಂಗಳೂರು: ರಾಜ್ಯ ಸರ್ಕಾರದಿಂದ ಪಠ್ಯಪುಸ್ತಕಗಳ ಪರಿಷ್ಕರಣಾ ವರದಿಯನ್ನು ಪ್ರಕಟಿಸಲಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದಲ್ಲಿ 1 ರಿಂದ 10ನೇ ತರಗತಿ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳು 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಶಾಲಾ ಶಿಕ್ಷಣ ಆಯುಕ್ತರು ಹಾಗೂ ಕರ್ನಾಟಕ ಪಠ್ಯಪುಸ್ತಕ ಸಂಘ(ರಿ)ಯಿಂದ ಮಾಹಿತಿ ನೀಡಲಾಗಿದೆ. ಅದರಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದಲ್ಲಿ 01 ರಿಂದ 10 ನೇ ತರಗತಿವರೆಗಿನ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 09 ಮತ್ತು 10 ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳು ಮತ್ತು 06 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಗೆ ವಿಷಯವಾರು ತಜ್ಞರ ಸಮಿತಿಯನ್ನು…