Author: kannadanewsnow09

ಚಿತ್ರದುರ್ಗ: ಆನ್ ಲೈನ್ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಹೀಗಿದ್ದರೂ ವಂಚಕರು ಮಾತ್ರ ದಿನಕ್ಕೊಂದು ದಾರಿ ಹಿಡಿದು, ಸೈಬರ್ ವಂಚನೆ ಎಸಗುತ್ತಿದ್ದಾರೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಒಂದು ವೇಳೆ ಆ ನಿಯಮವನ್ನು ಮೀರಿದ್ರೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಈ ಕುರಿತು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಬ್ಯಾಂಕ್ ಖಾತೆಗಳನ್ನು “ಡ್ಯೂಲ್” ಅಕೌಂಟ್‌ಗಳೆಂದು ಪರಿಗಣಿಸಿ ಖಾತೆದಾರರು ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಭಾವಿಸಿ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರದ “ಪೈನಾನ್ಸಿಯಲ್ ಇಂಟೆಲಿಜೆನ್ಸ್ ಯುನಿಟ್” ರವರು ಆದೇಶಿಸಿರುತ್ತಾರೆ ಎಂದಿದ್ದಾರೆ. ಕೆಲವರು ಅಲ್ಪ ಹಣದ ಆಸೆಯಿಂದ ಅಥವಾ ಅತಿಯಾದ ನಂಬಿಕೆಯಿಂದ ಅಥವಾ ತಿಳುವಳಿಕೆ ಕೊರತೆಯಿಂದ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ತಮ್ಮದಲ್ಲದ ಮೊಬೈಲ್ ನಂಬರ್‌ಗಳನ್ನು ಲಿಂಕ್ ಮಾಡಿಸಿ,…

Read More

ರಾಂಚಿ: ಜಾರ್ಖಂಡ್ನಲ್ಲಿ ಅಬಕಾರಿ ಕಾನ್ಸ್ಟೇಬಲ್ಗಳ ನೇಮಕಾತಿಯ ಸಂದರ್ಭದಲ್ಲಿ ದೈಹಿಕ ಪರೀಕ್ಷೆಗಳನ್ನು ಕೈಗೊಳ್ಳುವಾಗ ಕೆಲವು ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಡ್ರೈವ್ ಸಮಯದಲ್ಲಿ 10 ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಬಿಜೆಪಿ ಹೇಳಿಕೊಂಡಿದೆ. ಅಲ್ಲದೇ ಅಧಿಕಾರಿಗಳ “ದುರಾಡಳಿತ” ಇದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದೆ. ರಾಂಚಿ, ಗಿರಿದಿಹ್, ಹಜಾರಿಬಾಗ್, ಪಲಮು, ಪೂರ್ವ ಸಿಂಗ್ಭುಮ್ ಮತ್ತು ಸಾಹೇಬ್ಗಂಜ್ ಜಿಲ್ಲೆಗಳ ಏಳು ಕೇಂದ್ರಗಳಲ್ಲಿ ಜಾರ್ಖಂಡ್ ಅಬಕಾರಿ ಕಾನ್ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಗಳ ಅಡಿಯಲ್ಲಿ ದೈಹಿಕ ಪರೀಕ್ಷೆಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. “ದುರದೃಷ್ಟವಶಾತ್, ದೈಹಿಕ ಪರೀಕ್ಷೆಯ ಸಮಯದಲ್ಲಿ ಕೆಲವು ಆಕಾಂಕ್ಷಿಗಳು ಕೆಲವು ಕೇಂದ್ರಗಳಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾವಿಗೆ ಕಾರಣವನ್ನು ಕಂಡುಹಿಡಿಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ತಂಡಗಳು, ಔಷಧಿಗಳು, ಆಂಬ್ಯುಲೆನ್ಸ್ ಮತ್ತು ಕುಡಿಯುವ ನೀರು ಸೇರಿದಂತೆ ಸಾಕಷ್ಟು ವ್ಯವಸ್ಥೆಗಳನ್ನು ಖಚಿತಪಡಿಸಲಾಗಿದೆ. 10 ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ, ಈ ಬಗ್ಗೆ…

Read More

ಮಂಡ್ಯ: ಮುಡಾ ಹಗರಣದ ವಿಚಾರ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಕೋರ್ಟ್ ಆದೇಶದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರೆಯುತ್ತಾರೆಯೋ ಇಲ್ಲವೋ ಎನ್ನುವುದು ತೀರ್ಮಾನ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಭಾನುವಾರ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಒಂದು ಪ್ರಕರಣವನ್ನು ಪ್ರಾಷಿಕ್ಯೂಶನ್‌ಗೆ ಕೊಟ್ಟಿರುವುದು ಇದೇ ಮೊದಲ ಪ್ರಕರಣ ಅಲ್ಲ. ಹಲವಾರು ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ಆಗಿವೆ. ರಾಜ್ಯದಲ್ಲಿಯೂ ಆಗಿವೆ. ಇದೊಂದು ಸ್ಥಾಪಿತ ವ್ಯವಸ್ಥೆ ಆಗಿದೆ. ಹಲವಾರು ಸುಪ್ರೀಂ ಕೋರ್ಟ್ ತೀರ್ಪುಗಳು ಇವೆ. 2018 ರಲ್ಲಿ ಒಂದು ತಿದ್ದುಪಡಿ ಆಗಿದೆ. ಅದರ ಆಧಾರದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ. ಸಂವಿಧಾನದ ಕಲಂ 17/2 ತಿದ್ದುಪಡಿ ಆದ ನಂತರ ಏನು ಬದಲಾವಣೆ ಆಗಿದೆ ಎನ್ನುವುದನ್ನು ಇಲ್ಲಿ ಒಂದು ಗಮನಿಸಬೇಕು. ಕಾಂಗ್ರೆಸ್ ಮಿತ್ರರು ಯಾಕೆ ಅಷ್ಟೊಂದು ಆತಂಕಕ್ಕೆ ಒಳಗಾಗಿದ್ದಾರೊ ಗೊತ್ತಿಲ್ಲ. ರಾಜ್ಯಪಾಲರು ಒಂದು ತನಿಖೆ ನಡೆಸುವಂತೆ ಆದೇಶ ಮಾಡಿದ್ದಾರೆ. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಹಾಗೆ ಆಗಿರಲಿಲ್ಲ. ತನಿಖೆ ಅಂತ ಇರಲಿಲ್ಲ. ಪ್ರಾಶಿಕ್ಯೂಷನ್ ಮಾಡಿ…

Read More

ಬೆಂಗಳೂರು: ಬಿಬಿಎಂಪಿಯಿಂದ ಬರಬೇಕಿರುವಂತ ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ನಾಳೆಯಿಂದ ಗುತ್ತಿಗೆದಾರರು ಎಲ್ಲಾ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಪ್ರತಿಭಟನೆಗೆ ಇಳಿಯುತ್ತಿದ್ದಾರೆ. ಈ ಮೂಲಕ ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿದ್ದಾರೆ. ಈ ಕುರಿತಂತೆ ಗುತ್ತಿಗೆದಾರರ ಸಂಘದಿಂದ ಮಾಹಿತಿ ನೀಡಲಾಗಿದ್ದು, ಬಿಬಿಎಂಪಿಯಿಂದ ಶೇ.75ರಷ್ಟು ಕಾಮಗಾರಿಯ ಬಿಲ್ ಬಿಡುಗಡೆ ಮಾಡಲಾಗಿದೆ. ಇನ್ನೂ ಶೇ.25ರಷ್ಟು ಬಿಲ್ ಬಾಕಿ ಇದೆ. ಇದನ್ನು ಬಿಡುಗಡೆ ಮಾಡುವವರೆಗೂ ಎಲ್ಲಾ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ. ಗುತ್ತಿಗೆದಾರರು ನಡೆಸಿದಂತ ಕಾಮಗಾರಿಯ ಬರೋಬ್ಬರಿ 1600 ಕೋಟಿ ಹಣ ಬಾಕಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಳಿಸಿಕೊಂಡಿದೆ. ಕಳೆದ 2 ವರ್ಷದಿಂದ ಬಿಲ್ ಬಾಕಿ ಉಳಿಸಿಕೊಂಡಿದೆ. ಬಾಕಿ ಬಿಲ್ ಬಿಡುಗಡೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಮನವಿ ಮಾಡಲಾಗಿತ್ತು ಎಂದಿದೆ. ಈವರೆಗೆ ಶೇ.25ರಷ್ಟು ಬಾಕಿ ಇರುವಂತ ಕಾಮಗಾರಿ ಬಿಲ್ ಅನ್ನು ಬಿಬಿಎಂಪಿ ಬಿಡುಗಡೆ ಮಾಡಿಲ್ಲ. ಈ ಹಿನ್ನಲೆಯಲ್ಲಿ ಬಾಕಿ ಬಿಲ್ ಪಾವತಿಯಾಗುವವರೆಗೂ ನಾಳೆಯಿಂದ ಮುಷ್ಕರ ನಡೆಸಲಾಗುತ್ತಿದೆ. ಗುತ್ತಿಗೆದಾರರಿಂದ ಎಲ್ಲಾ ಕಾಮಗಾರಿ ಸ್ಥಗಿತಗೊಳಿಸಿ, ಪ್ರತಿಭಟನೆ ನಡೆಸಲಾಗುತ್ತದೆ ಎಂಬುದಾಗಿ ತಿಳಿಸಿದೆ. https://kannadanewsnow.com/kannada/free-lpg-cylinder-for-women-what-are-the-applying-eligibility-criteria-documents-heres-the-information/…

Read More

ನವದೆಹಲಿ: ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ ಎಲ್ ಪಿ ಜಿ ಸಿಲಿಂಡರ್ ನೀಡಲಾಗುತ್ತಿದೆ. ಇದಕ್ಕಾಗಿ ಪಿಎಂ ಉಜ್ವಲ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹಾಗಾದ್ರೆ ಈ ಯೋಜನೆಯ ಲಾಭ ಪಡೆಯಲು ಅರ್ಹತಾ ಮಾನದಂಡಗಳು ಏನು? ದಾಖಲೆಗಳು ಏನು ಎನ್ನುವ ಬಗ್ಗೆ ಮುಂದೆ ಓದಿ. ಪಿಎಂ ಉಜ್ವಲ್ ಯೋಜನಾ 2.0 ಅಡಿ, ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು, ಮಹಿಳೆಯರು ನೋಂದಾಯಿಸಿಕೊಳ್ಳಬೇಕಿದೆ. ಹೀಗೆ ನೋಂದಾಯಿಸಿಕೊಂಡಂತ ಅರ್ಹ ಮಹಿಳೆಯರಿಗೆ ಉಚಿತ ಸಿಲಿಂಡರ್ ಮತ್ತು ಒಲೆ ನೀಡಲಾಗುತ್ತದೆ. ಅರ್ಹತಾ ಮಾನದಂಡಗಳು ಏನು? ಅರ್ಜಿದಾರರು ಮಹಿಳೆಯಾಗಿರಬೇಕು. ಅರ್ಜಿದಾರ ಮಹಿಳೆಯು ಮನೆಯ ಮುಖ್ಯಸ್ಥೆಯಾಗಿರಬೇಕು 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರವೇ ಅರ್ಜಿಯನ್ನು ಸಲ್ಲಿಸಬಹುದು. ದಾಖಲೆಗಳು ಏನೇನು ಬೇಕು? ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ಪಾಸ್ ವಿವರ ಮೊಬೈಲ್ ಸಂಖ್ಯೆ ಪಾಸ್ ಪೋರ್ಟ್ ಅಳತೆಯ ಪೋಟೋ ಪಡಿತರ ಚೀಟಿ ನೋಂದಣಿ ಮಾಡಿಕೊಳ್ಳುವುದು ಹೇಗೆ? ಉಜ್ವಲ ಯೋಜನೆ 2.0 ಗಾಗಿ ನೋಂದಾಯಿಸಲು ಹಲವಾರು ಮಾರ್ಗಗಳಿವೆ: ಜನ ಸೇವಾ ಕೇಂದ್ರ: ನಿಮ್ಮ ಹತ್ತಿರದ ಜನ ಸೇವಾ ಕೇಂದ್ರಕ್ಕೆ ಭೇಟಿ…

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದೆ. ಪ್ರತಿ ತಿಂಗಳು ರೂ.2000 ಯಜಮಾನಿ ಮಹಿಳೆಯರ ಖಾತೆಗೆ ಸರ್ಕಾರದಿಂದ ಜಮಾ ಮಾಡಲಾಗುತ್ತಿದೆ. ಬರೋಬ್ಬರಿ ಒಂದು ವರ್ಷ ಪೂರೈಸಿರುವಂತ ಗೃಹಲಕ್ಷ್ಮಿ ಯೋಜನೆ ಆರಂಭದ ಬಳಿಕ, ಯಜಮಾನಿಯರಿಗೆ ನೆರವಾಗಿದ್ದು ಮಾತ್ರ ವಿವಿಧ ರೀತಿಯಲ್ಲಿ ಆಗಿದೆ. ಹಾಗಾದ್ರೇ ಆ ಯಶೋಗಾಥೆ ಓದಿ, ನೀವೇ ಅಚ್ಚರಿ ಪಡ್ತೀರಿ. ವಿದ್ಯಾಭ್ಯಾಸಕ್ಕೆ ನೆರವಾದ ಗೃಹಲಕ್ಷ್ಮಿ ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವೇದಾಂತ್ ಕುಟುಂಬಕ್ಕೆ ನೆರವಾಗಿದ್ದು ಗೃಹಲಕ್ಷ್ಮಿ ಯೋಜನೆಯ ಹಣವಾಗಿದೆ. ಗೃಹ ಲಕ್ಷ್ಮೀ ಯೋಜನೆಯ ಹಣ ಆಸರೆಯಾಗಿ, ಶಿಕ್ಷಣ ಪಡೆಯಲು ನೆರವಾಗಿದ್ದು, ಈ ಯೋಜನೆಯ ಸಾರ್ಥಕತೆಗೆ ಮತ್ತೊಂದು ಸಾಕ್ಷಿಯಾಗಿದೆ. ತಂದೆಯನ್ನು ಕಳೆದುಕೊಂಡ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದರು. ಅವರಿಗೆ ಬರುತ್ತಿದ್ದ ಗೃಹಲಕ್ಷ್ಮಿ ಹಣವು ವೇದಾಂತ್ ಅವರ ಅಧ್ಯಯನ ಮತ್ತು ಹಾಸ್ಟೆಲ್ ವಾಸ್ತವ್ಯ ಹಾಗೂ ಇತರೆ ಖರ್ಚುಗಳಿಗೆ ಸಹಕಾರಿಯಾಗಿದೆ. ಒಟ್ಟಾರೆಯಾಗಿ ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು. ಅಂತಹ ವ್ಯವಸ್ಥೆಯೊಂದನ್ನು ನಿರ್ಮಾಣ…

Read More

ಬೆಂಗಳೂರು: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರಿಗೆ ಗುಡ್ ನ್ಯೂಸ್ ಎನ್ನುವಂತೆ, ಬೆಂಗಳೂರಿನ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯ ಬಳಿ ಇರುವಂತ ಜಯದೇವ ಹೃದ್ರೋಗ ಆಸ್ಪತ್ರೆ ಇನ್ಮುಂದೆ 24 ಗಂಟೆ ಓಪನ್ ಇರಲಿದೆ. ಈ ಕುರಿತಂತೆ ಜಯದೇವ ಆಸ್ಪತ್ರೆಯ ನಿರ್ದೇಶಕರಾದಂತ ಡಾ.ಕೆಎಸ್ ರವೀಂದ್ರನಾಥ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿಯಲ್ಲಿನ ಜಯದೇವ ಆಸ್ಪತ್ರೆ 24 ಗಂಟೆಗಳ ಕಾಲ ಓಪನ್ ಇರಲಿದೆ. ಸಂಜೆ 4 ಗಂಟೆಗೆ ಕ್ಲೋಸ್ ಆಗುತ್ತಿದ್ದಂತ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ. ದಿನಾಂಕ 01-09-2024ರಿಂದ ಜಾರಿಗೆ ಬರುವಂತೆ ಜಯದೇವ ಸ್ಯಾಟಲೈಟ್ ಸೆಂಟರ್, ಕೆಸಿ ಜನರಲ್ ಆಸ್ಪತ್ರೆ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು ಇದು 24 ಗಂಟೆ ಹೃದ್ರೋಗಿಗಳ ಸೇವೆಗೆ ತೆರೆದಿರಲಿದೆ. ರೋಗಿಗಳು ಈ ಅವಕಾಶವನ್ನು ಉಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅಂದಹಾಗೇ ಈಗಾಗಲೇ ಬನ್ನೇರುಘಟ್ಟ ರಸ್ತೆಯಲ್ಲಿರುವಂತ ಜಯದೇವ ಹೃದ್ರೋಗ ಆಸ್ಪತ್ರೆ 24 ಗಂಟೆ ತೆರದು ರೋಗಿಗಳಿಗೆ ಸೇವೆ ಒದಗಿಸಲಾಗುತ್ತಿದೆ. ಈಗ…

Read More

ಬೆಂಗಳೂರು: “ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಸೆ.6 ಗೌರಿ ಹಬ್ಬದಂದು ಉದ್ಘಾಟನೆ ಮಾಡಲಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಭಾನುವಾರ ಮಾಹಿತಿ ನೀಡಿದರು. “ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಜಿಲ್ಲೆಗಳು ಈ ಯೋಜನೆಯನ್ನು ಎದುರುನೋಡುತ್ತಿವೆ. ಅನೇಕ ನಾಯಕರು ಈ ಯೋಜನೆಗೆ ಹೋರಾಟ ಮಾಡಿದ್ದು, ಅನೇಕ ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ. ಕಳೆದ ಒಂದು ವರ್ಷದಿಂದ ಈ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿದ್ದೆ. ಮೊನ್ನೆಯಷ್ಟೇ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಮಾಡಿದ್ದೆ” ಎಂದು ತಿಳಿಸಿದರು. “ಈ ಯೋಜನೆಗಳ ವಿಚಾರವಾಗಿ ಅನೇಕ ಟೀಕೆಗಳು ಬರುತ್ತಿದ್ದವು. ಟೀಕೆಗಳು ಬರಲಿ. ಈ ಯೋಜನೆಯಲ್ಲಿ ನೀರನ್ನು ಪಂಪ್ ಮಾಡುವ ಮೂಲಕ ಕಾಲುವೆಗಳಿಗೆ ಹರಿಸುತ್ತಿದ್ದೇವೆ. ಈ ಯೋಜನೆ ಮಾರ್ಗದ ಮಧ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಅವುಗಳನ್ನು…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಂತ ಕ್ರಮವನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಅಲ್ಲದೇ ಇದರ ವಿರುದ್ಧ ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಈ ಬೆನ್ನಲ್ಲೇ ಯಾವುದೇ ಪ್ರಕರಣಗಳ ಪ್ರಾಸಿಕ್ಯೂಷನ್ ಅರ್ಜಿ ಬಾಕಿ ಇಲ್ಲ ಎಂಬುದಾಗಿ ರಾಜಭವನದ ಕಚೇರಿ ಸ್ಪಷ್ಟ ಪಡಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ರಾಜಭವನವು ಮಾಹಿತಿ ಬಿಡುಗಡೆ ಮಾಡಿದ್ದು, ಯಾವುದೇ ಪ್ರಕರಣಗಳ ಪ್ರಾಸಿಕ್ಯೂಷನ್ ಅರ್ಜಿಗಳು ಬಾಕಿ ಇಲ್ಲ ಎಂಬುದಾಗಿ ತಿಳಿಸಿದೆ. ಈ ಮೂಲಕ ರಾಜಭವನ ಚಲೋ ನಡೆಸಿದ್ದ ಬೆನ್ನಲ್ಲೇ ಅಚ್ಚರಿಯ ಮಾಹಿತಿ ರಾಜಭವನದಿಂದ ಹೊರ ಬಿದ್ದಿದೆ. ಅಂದಹಾಗೇ ಕಾಂಗ್ರೆಸ್ ಪಕ್ಷದಿಂದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ಧನ ರೆಡ್ಡಿ ವಿರುದ್ದದ ಪ್ರಕರಣಗಳಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿಯನ್ನೇ ನೀಡಿಲ್ಲ. ಆ ಪ್ರಕರಣಗಳಿಗೂ ಸಿದ್ಧರಾಮಯ್ಯ ವಿರುದ್ಧ ಅನುಮತಿ ನೀಡಿದಂತೆ ನೀಡುವಂತೆ ಆಗ್ರಹಿಸಲಾಗಿತ್ತು. ಈ ಬೆನ್ನಲ್ಲೇ ರಾಜಭವನದ ಈ ಸ್ಪಷ್ಟನೆ ಅಚ್ಚರಿಕೆ ಕಾರಣವಾಗಿದೆ. https://kannadanewsnow.com/kannada/cm-siddaramaiah-is-like-a-tiger-no-one-will-ever-be-afraid-minister-zameer-ahmed/…

Read More

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಟಗರು ಇದ್ದಂತೆ. ಅವರು ಯಾರಿಗೂ, ಯಾವತ್ತಿಗೂ ಭಯ ಬೀಳೋದಿಲ್ಲ ಎಂಬುದಾಗಿ ಸಿಎಂ ಪರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಬ್ಯಾಟ್ ಬೀಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪಾತ್ರ ಏನೂ ಇಲ್ಲ. ಸಿದ್ದರಾಮಯ್ಯ ಹುಲಿ ಇದ್ದಂತೆ ಎಂದರು. ಬಿಜೆಪಿಯವರಿಗೆ ಹಿಂದುಳಿದ ನಾಯಕನಾಗಿರುವಂತ ಸಿಎಂ ಸಿದ್ಧರಾಮಯ್ಯ ಅವರನ್ನು ಸಹಿಸಲು ಆಗ್ತಿಲ್ಲ. ಈ ಕಾರಣಕ್ಕೆ ಮುಡಾ ಹಗರಣ ಹೊರತಂದಿದ್ದಾರೆ. ಸಿಎಂ ಸಿದ್ಧರಾಮಯ್ಯ ಟಗರು ಇದ್ದಂತೆ. ಯಾರಿಗೂ ಯಾವತ್ತಿಗೂ ಭಯ ಬೀಳೋದಿಲ್ಲ ಎಂಬುದಾಗಿ ತಿಳಿಸಿದರು. https://kannadanewsnow.com/kannada/a-youth-of-jk-will-show-exit-gate-to-modi-company-on-1st-kharge/ https://kannadanewsnow.com/kannada/for-those-who-have-included-their-names-in-the-ration-card-check-your-name-on-the-ration-card-like-this/

Read More