Subscribe to Updates
Get the latest creative news from FooBar about art, design and business.
Author: kannadanewsnow09
ಮಂಗಳ ಗ್ರಹಕ್ಕೆ ಬೇರೆ ಯಾವ ಗ್ರಹಕ್ಕೂ ಇಲ್ಲದ ವಿಶೇಷ ಅಂಶವಿದೆ. ಹೌದು ಲಾರ್ಡ್ ಮಂಗಳವನ್ನು ಮಾತ್ರ ದುಷ್ಟ ಚಿಹ್ನೆ ಎಂದು ಹೇಳಲಾಗುತ್ತದೆ. ಆದರೆ ಮಂಗಳ ಗ್ರಹದಿಂದ ಉಂಟಾಗಬಹುದಾದ ದೋಷಗಳನ್ನು ಪರಿಗಣಿಸಿ, ಮಂಗಳ ಭಗವಂತನು ತೊಂದರೆದಾಯಕ ವ್ಯಕ್ತಿ ಎಂದು ಭಾವಿಸುತ್ತೇವೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನಾವು ಮಂಗಳ ಗ್ರಹದಿಂದ ಉಂಟಾಗುವ ದೋಷಗಳನ್ನು ತೊಡೆದುಹಾಕಲು ಮಾಡಬಹುದಾದ ಸರಳ ಪರಿಹಾರವನ್ನು ನೋಡುತ್ತೇವೆ . ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ,…
ಶಿವಮೊಗ್ಗ: ಸಾಗರದಲ್ಲಿ ಹಾಲಪ್ಪ, ಸಂಸದ ಬಿವೈ ರಾಘವೇಂದ್ರ ಅವರ ಸಾಧನೆ ಶೂನ್ ಆಗಿದೆ. ಅವರು ಸಾಧನೆ ಏನೂ ಮಾಡಿಲ್ಲ. ಬಿಜೆಪಿಯವರು ಓಸಿ ಮಾಡೋರಿಗೆ, ಸಾರಾಯಿ ಹೆಂಡ ಮಾರೋರಿಗೆ ಆಸರೆ ಆಗೋರು ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ಧಾಳಿ ನಡೆಸಿದರು. ಇಂದು ತಮ್ಮ ಹುಟ್ಟೂರು ಬೇಳೂರಿನಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ದಂಪತಿ, ಪುತ್ರನ ಸಮೇತವಾಗಿ ಆಗಮಿಸಿ ಮತ ಚಲಾಯಿಸಿದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇವತ್ತಿನ ವಾತಾವರಣ ನೋಡಿದ್ರೆ ಗೀತಾ ಶಿವರಾಜ್ ಕುಮಾರ್ ಹೈ ಲೀಡಲ್ಲಿ ಗೆಲ್ಲುತ್ತಾರೆ. ಇಡೀ ತಾಲೂಕಿನಲ್ಲಿ ನಾನು ಓಡಾಡಿದ್ದೇನೆ. ಒಳ್ಳೆಯ ಅಭಿಪ್ರಾಯವಿದೆ. ರಾಘವೇಂದ್ರ ಯಾವುದೇ ಬಡವರು, ಜನರ ಪರ ಕೆಲಸ ಮಾಡಿಲ್ಲ. ಅವರು ಕೇಳಿರೋದು ಒಂದೇ ಮೋದಿ ಪರ ವೋಟು ಕೊಡಿ ಅಂತ. ಅವರು ಯಾವತ್ತೂ ನನಗೆ ವೋಟ್ ಕೊಡಿ ಎಂದು ಕೇಳಿಲ್ಲ ಎಂದರು. ಬಂಗಾರಪ್ಪನವರ ಕುಟುಂಬ, ಶಿವರಾಜ್ ಕುಮಾರ್ ಅವರ ಹೆಂಡತಿ. ಮಹಿಳೆಯರ ಬಗ್ಗೆ ಸಾಗರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಈ ಬಾರಿಯೂ ಸಾಗರದಲ್ಲಿ…
ಬೆಂಗಳೂರು: ಅನಾರೋಗ್ಯದಿಂದಾಗಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಇಂದು ಸಿಎಂ ಸಿದ್ಧರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರಿಂದ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಆರೋಗ್ಯದ ಕುರಿತಂತೆ ಮಾಹಿತಿ ಪಡೆದರು. ಅಲ್ಲದೇ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. https://kannadanewsnow.com/kannada/firing-at-car-showroom-in-delhis-tilak-nagar/ https://kannadanewsnow.com/kannada/teachers-aspirants-should-note-applications-invited-for-recruitment-to-these-posts/ https://kannadanewsnow.com/kannada/bjp-hd-kumaraswamy-pen-drive-mahanayaks-lr-shivarame-gowda/
ನವದೆಹಲಿ: ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿರುವ ಕಾರು ಶೋರೂಂನಲ್ಲಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಶೋ ರೂಂನಲ್ಲಿದ್ದಂತ ಹಲವರು ಗಾಯಗೊಂಡಿದ್ದಾರೆ. ಇದೀಗ ನಡೆದಿರುವಂತ ಘಟನೆಯಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಪರಿಸ್ಥಿತಿಯ ಸ್ವರೂಪ, ಸಂಭಾವ್ಯ ಸಾವುನೋವುಗಳು ಮತ್ತು ಗುಂಡಿನ ದಾಳಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ಹೆಚ್ಚುವರಿ ವಿವರಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. https://twitter.com/PTI_News/status/1787499213208649808 https://kannadanewsnow.com/kannada/prajwal-pornography-video-case-dk-shivakumar-clarifies-that-advocate-devarajegowda-is-making-false-allegations-against-me/ https://kannadanewsnow.com/kannada/teachers-aspirants-should-note-applications-invited-for-recruitment-to-these-posts/
ಬೆಂಗಳೂರು: ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ನನ್ನ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳು ಹಾಗೂ ಆಧಾರರಹಿತ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಇಂದು ವಕೀಲ ದೇವರಾಜೇಗೌಡ ಅವರ ಆಪಾದನೆ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ದೇವರಾಜೇಗೌಡ ಹಿಂದೆ ಬಿಜೆಪಿಯಿಂದ ಚುನಾವಣೆಗೆ ನಿಂತಿದ್ದವರು. ಆ ಪಕ್ಷದ ಸಕ್ರಿಯ ಕಾರ್ಯಕರ್ತ. ಈಗ ಪ್ರಜ್ವಲ್ ಪ್ರಕರಣದಲ್ಲಿ ಜೆಡಿಎಸ್ ಜತೆಗೆ ಅದರ ಮಿತ್ರ ಪಕ್ಷ ಬಿಜೆಪಿಗೂ ಬಹಳ ಮುಜುಗರ ಮತ್ತು ಮುಖಭಂಗ ಆಗಿದೆ. ಈಗ ಆಗಿರುವ ಡ್ಯಾಮೇಜ್ ನಿವಾರಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ನಾಯಕರು ದೇವರಾಜೇಗೌಡನ ಮೂಲಕ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿಸಿದ್ದಾರೆ ಎಂದು ಅಪಾದಿಸಿದ್ದಾರೆ. ಇದೇ ದೇವರಾಜೇಗೌಡ ಈ ಹಿಂದೆಯೇ ತಮ್ಮಲ್ಲಿ ಪೆನ್ ಡ್ರೈವ್ ಇರುವ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದರು. ಬಿಜೆಪಿ ನಾಯಕರ ಅನುಮತಿ ಪಡೆದು ಅದನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದ್ದರು. ಹೀಗಿರುವಾಗ ನನಗೂ ಪೆನ್ ಡ್ರೈವ್ ಬಿಡುಗಡೆಗೂ ಏನು…
ಕೇವಲ ಶ್ರೀಗಂಧ ಎಂದು ಕರೆದರೆ ಸಂಸಾರದ ನೆಮ್ಮದಿಯ ನಗುಮುಖದ ಸಂತಾನ ಫಲದ ಕಂದ ಎಂದು ಕೊಡಬಹುದಾದ ಕರುಣೆಯ ಸಾಗರವೇ ನಮ್ಮ ಪ್ರಭು. ಅಂತಹ ಕರುಣಾಮಯಿ ದೇವರನ್ನು ಈ ರೀತಿ ಸರಳವಾಗಿ ಪೂಜಿಸುವುದರಿಂದ ನಮ್ಮ ಮನೆಯಲ್ಲಿ ಸಮೃದ್ಧ ಜೀವನ ನಡೆಸಬಹುದು ಎಂದು ಹೇಳಲಾಗುತ್ತದೆ. ಇದು ಯಾವ ರೀತಿಯ ಪೂಜೆ ಮತ್ತು ಅದನ್ನು ಹೇಗೆ ಮಾಡಬೇಕೆಂದು ನೀವು ಆಧ್ಯಾತ್ಮಿಕತೆಯ ಈ ಪೋಸ್ಟ್‌ನಲ್ಲಿ ನೋಡಬಹುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ…
ಬೆಂಗಳೂರು: 108 ಆರೋಗ್ಯ ಕವಚದ ಅಂಬ್ಯುಲೆನ್ಸ್ ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅಂಬ್ಯುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನ ಸರ್ಕಾರ ನೀಡುತ್ತಿದೆ ಎಂದರು. ಸರ್ಕಾರದಲ್ಲಿ ಯಾವುದೇ ಹಣಕಾಸಿನ ತೊಂದರೆ ಇಲ್ಲ. 108 ಅಂಬ್ಯುಲೆನ್ಸ್ ಯೋಜನೆ ಸುಗಮವಾಗಿ ನಡೆಸಲು ಆರ್ಥಿಕ ವರ್ಷ 2023-24 ನೇ ಸಾಲಿನಲ್ಲಿ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ ರೂ. 210.33 ಕೋಟಿಗಳ ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು, ಸದರಿ ಅನುದಾನದಲ್ಲಿ ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ನಿಗದಿಯಾದ ರೂ. 162.40 ಕೋಟಿಗಳ ಪೂರ್ಣ ಅನುದಾನವನ್ನು ಸೇವಾದಾರರಿಗೆ ಬಿಡುಗಡೆಗೊಳಿಸಲಾಗಿದೆ. 2024-25 ನೇ ಸಾಲಿನಲ್ಲಿ 108-ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ ರೂ. 260.33 ಕೋಟಿಗಳ ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ವಾರ್ಷಿಕ ರೂ. 162.40 ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸಬೇಕಾಗಿರುತ್ತದೆ. ಆರೋಗ್ಯ ಇಲಾಖೆ ಹಾಗೂ ಇ.ಎಂ.ಆರ್.ಐ ಗ್ರೀನ್ ಹೆಲ್ತ್…
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡದಂತೆ ಎಸ್ಐಟಿ ಖಡಕ್ ಸೂಚನೆ ನೀಡಿತ್ತು. ಈಗ ಅಶ್ಲೀಲ ವೀಡಿಯೋಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದ ಅಪರಾಧ ಎಂಬುದಾಗಿ ಮನವರಿಕೆ ಮಾಡಿಕೊಟ್ಟಿದೆ. ಈ ಕುರಿತು ಸಿಐಟಿಯ ವಿಶೇಷ ತನಿಖಾ ತಂಡದ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಅಧಿನಿಯಮದಲ್ಲಿ ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ, ಪ್ರಸಾರ ಮಾಡುವ ವ್ಯಕ್ತಿಗಳನ್ನು ಸಂದೇಶದ ರಚನಾಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಆದ್ದರಿಂದ ಯಾರಾದರೂ ತಮ್ಮ ಬಳಿ ಅಶ್ಲೀಲ ವಿಡಿಯೋ, ಚಿತ್ರಗಳು ಹಾಗೂ ಧ್ವನಿ ಮುದ್ರಣಗಳನ್ನು ಇಟ್ಟುಕೊಂಡಿದ್ದರೂ ಅದು ಅಪರಾಧವಾಗುತ್ತದೆ. ಕಾರಣ ಜನರು ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳನ್ನು ಇಟ್ಟುಕೊಳ್ಳುವುದನ್ನು ಅಥವಾ ಪ್ರಸಾರ ಮಾಡುವುದನ್ನು ನಿರ್ಬಂಧಿಸಿಕೊಳ್ಳುವುದು ಸೂಕ್ತ ಎಂದಿದ್ದಾರೆ. ಒಂದು ವೇಳೆ ಅಂಥಹ ವಿಡಿಯೋ, ಚಿತ್ರಗಳು ಮತ್ತು ಧ್ವನಿ ಮುದ್ರಣಗಳನ್ನು ತಮ್ಮ ಮೊಬೈಲ್ ಅಥವಾ ಇತರೆ ಸಾಧನಗಳಲ್ಲಿ ಹೊಂದಿದ್ದರೆ ‘ಡಲೀಟ್’…
ಬೆಂಗಳೂರು: ಇಂದು ಕೂಡ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ವರುಣ ಆರ್ಭಟಿಸಿದ್ದಾರೆ. ನಗರದ ವಿವಿಧೆಡೆ ಇಂದು ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಹೀಗಾಗಿ ಸಿಲಿಕಾನ್ ಸಿಟಿ ಜನತೆ ಮನೆಯಲ್ಲಿ ಮಿಂದು ಚಿಲ್ ಆಗಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಲ್ಲಿ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದಂತ ಬೆಂಗಳೂರು ಜನತೆ ಮಳೆಯಿಂದಾಗಿ ಕೂಲ್ ಕೂಲ್ ಆಗಿದ್ದಾರೆ. ಇಂದು ಕೂಡ ವರುಣ ಆರ್ಭಟಿಸಿದ್ದಾನೆ. ನಗರದ ವಿವಿಧೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಬೆಂಗಳೂರಿನ ಮತ್ತಿಕೆರೆ, ಹೆಬ್ಬಾಳ, ಸುಬ್ಬಯ್ಯ ಸರ್ಕಲ್, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆ ಆರ್ ಮಾರ್ಕೆಟ್, ಕಾರ್ಪೋರೇಷನ್, ಯಶವಂತಪುರ, ಕಮ್ಮನಹಳ್ಳಿ, ಜೆಪಿ ನಗರ, ಟ್ಯಾನರಿ ರಸ್ತೆ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಮಳೆಯಿಂದಾಗಿ ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದ್ದು ಕಂಡು ಬಂದಿದೆ. https://kannadanewsnow.com/kannada/people-of-bengaluru-note-bbmp-electricity-department-officials-staff-change-working-hours/ https://kannadanewsnow.com/kannada/mlc-mtb-nagaraj-alleges-illegal-voting-in-chikkaballapur-constituency/
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿದ್ಯುತ್ ವಿಭಾಗದ ಎಲ್ಲಾ ಅಭಿಯಂತರರು/ಅಧಿಕಾರಿಗಳಿಗೆ ಕಾರ್ಯನಿರ್ವಹಿಸುವ ಅವಧಿ ಬದಲಾವಣೆ ಮಾಡಲಾಗಿದೆ. ಈ ಕುರಿತಂತೆ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ವಿಭಾಗಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕರ ವಲಯದಿಂದ ಹಲವಾರು ಬೀದಿ ದೀಪಗಳು ಹುರಿಯದೇ ಇರುವ ಬಗ್ಗೆ ದೂರುಗಳು ಬಂದಿರುತ್ತದೆ ಎಂದಿದ್ದಾರೆ. ಸದರಿ ದೂರುಗಳು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿ ಅಂದರೆ ಸಂಜೆ 6.00 ಗಂಟೆಯಿಂದ ರಾತ್ರಿ 9.00 ಗಂಟೆಯವರೆಗೂ ಬರುತ್ತಿದ್ದು, ಬೀದಿ ದೀಪಗಳ ನಿರ್ವಹಣೆಗೆ ನಿಯೋಜಿಸಲ್ಪಟ್ಟ ಗುತ್ತಿಗೆದಾರರು ನಿಗದಿಪಡಿಸಲಾದ ಸಮಯಕ್ಕೆ ಸರಿಪಡಿಸದಿರುವುದು ಕಂಡುಬಂದಿದ್ದು, ಸದರಿ ಕಾರ್ಯಕ್ಷಮತೆಯ ಕೊರತೆಯು ಬಿಬಿಎಂಪಿ ವಿದ್ಯುತ್ ವಿಭಾಗದ ಮೇಲು ಉಸ್ತುವಾರಿಯು ನಡೆಯದೇ ಇರುವುದು ಸಹ ಒಂದು ಕಾರಣವಾಗಿರುತ್ತದೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರ ನಿರ್ದೇಶನದಂತೆ ವಿದ್ಯುತ್ ಇಲಾಖೆಯ ಎಲ್ಲಾ ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ/ಕಿರಿಯ ಅಭಿಯಂತರರು, ಗುತ್ತಿಗೆ ಅಭಿಯಂತರರು ದಿನಾಂಕ:07.05.2024ರಿಂದ ಪ್ರಾರಂಭಿಸಿದಂತೆ ಬೆಳಗ್ಗೆ…