Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು : ರಿಲಯನ್ಸ್ ರೀಟೇಲ್‌ನ ಪ್ರಮುಖ ದಿನಸಿ ಮಳಿಗೆಯ ಬ್ರ್ಯಾಂಡ್ ಫ್ರೆಶ್‌ಪಿಕ್, ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆ ಪ್ರಾರಂಭಿಸುತ್ತಿದೆ. ಟ್ರಿನಿಟಿ ವೃತ್ತದ 1ಎಂಜಿ ಮಾಲ್‌ನ 4ನೇ ಮಹಡಿಯಲ್ಲಿ ಹೊಸ ಮಳಿಗೆ ಸಜ್ಜಾಗಿದೆ. ಫ್ರೆಶ್‌ಪಿಕ್ ಬ್ರ್ಯಾಂಡ್ ಭಾರತದಲ್ಲಿ ತೆರೆಯುತ್ತಿರುವ ಎರಡನೇ ಮಳಿಗೆ ಇದಾಗಿದೆ. ಮುಂಬೈನಲ್ಲಿ ಮೊದಲ ಮಳಿಗೆಯು ಅಭೂತಪೂರ್ವ ಯಶಸ್ಸು ಕಂಡ ಬಳಿಕ ಬೆಂಗಳೂರಿನಲ್ಲಿ ಎರಡನೇ ಮಳಿಗೆ ತೆರೆಯಲಾಗುತ್ತಿದೆ. 1ಎಂಜಿ ಮಾಲ್‌ನಲ್ಲಿ ಇರುವ ಹೊಸ ಮಳಿಗೆಯು 14,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಸಾಟಿಯಿಲ್ಲದ ಉತ್ತಮ ಶಾಪಿಂಗ್ ಅನುಭವವನ್ನು ಈ ಮಳಿಗೆ ನೀಡುತ್ತದೆ. ಆಹಾರ ಪ್ರಿಯರು ಮತ್ತು ಆರೋಗ್ಯ ಪ್ರಜ್ಞೆಯುಳ್ಳ ಗ್ರಾಹಕರ ಪರಿಷ್ಕೃತ ರುಚಿಯನ್ನು ಪೂರೈಸುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಹೊಸ ಫ್ರೆಶ್‌ಪಿಕ್ ಸ್ಟೋರ್ ಪ್ರಮುಖ ದಿನಸಿ ತಾಣವಾಗಲು ಸಜ್ಜಾಗಿದೆ. ಗ್ರಾಹಕರು ಅದ್ಭುತವಾದ “ಶಾಪಿಂಗ್ ಥಿಯೇಟರ್” ಅನುಭವಗಳನ್ನು ಕಾಣಬಹುದು – ಇದು ವ್ಯಾಪಕ ಶ್ರೇಣಿಯ ಲೈವ್ ಫುಡ್ ಸ್ಟೇಷನ್ ಗಳನ್ನು ನೀಡುವ ನವೀನ ಪರಿಕಲ್ಪನೆಯಾಗಿದೆ. ಕ್ಯುರೇಟೆಡ್ ಪಾಕಶಾಲೆಯ ಅನುಭವಗಳ ಅನನ್ಯ ಸಮ್ಮಿಳನವನ್ನು…
ಕೋಲಾರ: ನಗರದ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ಇಂದು ಕಾಂಗ್ರೆಸ್ ಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ಮುಖಂಡರ ನಡುವೆ ಪರಸ್ಪರ ಗದ್ದಲ, ಕೋಲಾಹಲ ಉಂಟಾಗಿ, ಆ ಬಳಿಕ ಮಾರಾಮಾರಿ ನಡೆದಿರುವಂತ ಘಟನೆ ನಡೆದಿದೆ. ಕೋಲಾರದ ನಂದಿನಿ ಪ್ಯಾಲೇಸ್ ನಲ್ಲಿ ಇಂದು ನಡೆಯುತ್ತಿದ್ದಂತ ಕಾಂಗ್ರೆಸ್ ಸಭೆಯಲ್ಲಿ ರಮೇಶ್ ಕುಮಾರ್ ಸೇರಿದಂತೆ ಕೆಲವರಿಗೆ ಸಭೆಗೆ ಆಹ್ವಾನಿಸಿಲ್ಲ ಎಂಬುದಾಗಿ ಗಲಾಟೆ ಶುರುವಾಗಿತ್ತು. ಕಾಂಗ್ರೆಸ್ ಶಾಸಕರ ಎದುರೇ ಪರಸ್ಪರ ತಳ್ಳಾಟ ನೂಕಾಟ ಕೂಡ ವಾಗ್ವಾದದ ಬಳಿಕ ಉಂಟಾಗಿತ್ತು. ಗಲಾಟೆ ತಾರಕಕ್ಕೇರಿದ ನಂತ್ರ ಪರಸ್ಪರ ಗುಂಪುಗಳ ಮಧ್ಯೆ ಮುಖಂಡರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಶಾಸಕರ ಸಮ್ಮುಖದಲ್ಲಿಯೇ ಮಾರಾಮಾರಿ ನಡೆದಿದೆ. ಕೆಹೆಚ್ ಮುನಿಯಪ್ಪ ಹಾಗೂ ಕೆಲವು ಶಾಸಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದ ನಂತ್ರ, ಈ ಗಲಾಟೆ, ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಈ ವೇಳೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಕಾಂಗ್ರೆಸ್ ಮುಖಂಡರನ್ನು ಸಮಾಧಾನಿಸಿದರು. https://kannadanewsnow.com/kannada/ips-officer-m-chandrasekhar-exposes-a-series-of-irregularities/ https://kannadanewsnow.com/kannada/breaking-muslims-say-hum-paanch-hamara-punchis-mla-yatnal/
ಬೆಂಗಳೂರು: ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್ ಅವರ ಅಕ್ರಮಗಳ ಸರಮಾಲೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಎಳೆಎಳೆಯಾಗಿ ಬಿಡಿಸಿಟ್ಟರು. ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ದಾಖಲೆಗಳ ಸಮೇತ ಮಾತನಾಡಿದ ಅವರು; ಅಧಿಕಾರಿ ಚಂದ್ರಶೇಖರ್, ವಿಜಯ್ ತಾತಾ ಕುಮ್ಮಕ್ಕಾಗಿ ಮಾಡಿರುವ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಚಂದ್ರಶೇಖರ ಸಾಧನೆ ಏನು? ಪೊಲೀಸ್ ಇಲಾಖೆಯಲ್ಲಿ ದರೋಡೆಕೋರರು ಇದ್ದಾರೆ ಎಂದು ಹೇಳಿದ್ದೆ. ಅದಕ್ಕೆ ಒಂದು ಉದಾಹರಣೆ ಕೊಡುತ್ತೇನೆ ನೋಡಿ… ದೆಹಲಿಯಲ್ಲಿ PACL ಎಂಬ ಕಂಪನಿ ಇದೆ. ಭೂಮಿ ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡುವ ಕೆಲಸ ಇದು ಮಾಡುತ್ತದೆ. ಎರಡು ಲಕ್ಷ ಕೋಟಿ ಆಸ್ತಿಯನ್ನು ಕಂಪನಿ ಹೊಂದಿತ್ತು. ವಿಜಯ್ ತಾತಾ ಎಂಬವರು ಖಾಸಗಿ ವಾಹಿನಿ ನಡೆಸುತ್ತಿದ್ದರು. ಆ ವಾಹಿನಿ ಮುಚ್ಚಿ ಹೋಯಿತು, ಈಗ ಮತ್ತೊಂದು ಖಾಸಗಿ ಚಾನಲ್ ಇಟ್ಟಿಕೊಂಡು ಫೋರ್ಜರಿ ಮಾಡಲಾಗಿದೆ. ಆ ಇಡೀ ಹಗರಣಕ್ಕೆ ಈ ಚಂದ್ರಶೇಖರ ಗಾಡ್ ಫಾದರ್! 2023 ಫೆಬ್ರುವರಿಯಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ದೂರು ಕೊಡಲಾಗುತ್ತದೆ. ಹಣ…
ಬೆಂಗಳೂರು: ಪ್ರಿಯಕರನ ಮೊಬೈಲ್ ನಲ್ಲಿದ್ದಂತ ತನ್ನ ಖಾಸಗಿ ಪೋಟೋ, ವೀಡಿಯೋ ಡಿಲೀಟ್ ಮಾಡೋ ಸಲುವಾಗಿ ಚಾಲಾಕಿ ಪ್ರಿಯತಮೆಯೊಬ್ಬಳು ಆತನ ಮೊಬೈಲ್ ರಾಬರಿ ಮಾಡಿಸಿ, ತಗಲಾಕಿಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಪ್ರಿಯಕರನನ್ನೇ ರಾಬರಿ ಮಾಡಿದಂತ ಪ್ರಿಯತಮೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಂತ ಶೃತಿ ಎಂಬಾಕೆ ಪ್ರಿಯಕರ ವಂಶಿಕೃಷ್ಣನನ್ನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಳು. ಕೆಲ ದಿನಗಳಿಂದ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರಾಗುವಂತ ಪ್ಲಾನ್ ಮಾಡಿದ್ದಳು. ಆದರೇ ವಂಶಿಕೃಷ್ಣ ಮೊಬೈಲ್ ನಲ್ಲಿ ಆಕೆಯ ಖಾಸಗಿ ಪೋಟೋ, ವೀಡಿಯೋಗಳು ಇದ್ದವು. ಅವುಗಳನ್ನು ಡಿಲಿಟ್ ಮಾಡುವಂತ ಪ್ಲಾನ್ ಮಾಡಿದ್ದಳು. ಈ ಕಾರಣದಿಂದಲೇ ಸೆಪ್ಟೆಂಬರ್.20ರಂದು ವಂಶಿಕೃಷ್ಣ ಭೇಟಿಯಾಗುವಂತೆ ಟೆಕ್ಕಿ ಸೂಚಿಸಿದ್ದರು. ಆಕೆಯ ಸೂಚನೆಯಂತೆ ಕಾರಿನಲ್ಲಿ ವಂಶಿಕೃಷ್ಣ ತೆರಳುತ್ತಿದ್ದಾಗ ಆತನ ಕಾರಿಗೆ ಬೈಕ್ ನಲ್ಲಿ ಬಂದಂತವರು ತಾಗಿಸಿ ಕಿರಿಕ್ ತೆಗೆದಿದ್ದರು. ಈ ಗಲಾಟೆಯಲ್ಲಿ ವಂಶಿಕೃಷ್ಣ ಅವರ ಒಂದೂವರೆ ಲಕ್ಷ ಬೆಲೆಯ ಮೊಬೈಲ್ ಪೋನ್ ರಾಬರಿ ಮಾಡಿದ್ದರು. ರಾಬರಿ ಮಾಡಿದ್ದಂತ ಮೊಬೈಲ್ ನಲ್ಲಿದ್ದಂತ ಟೆಕ್ಕಿ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಬಗ್ಗೆ ಎರಡು ನಾಲಿಗೆಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು; ಹಿಂದೆ ಐದು ವರ್ಷ ಅಧಿಕಾರದಲ್ಲಿ ಇದ್ದಾಗ, ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡದ ವೇಳೆ ರಾಜ್ಯಪಾಲರನ್ನು ವಾಚಾಮಗೋಚರ ಹೊಗಳಿದ್ದ ಸಿದ್ದರಾಮಯ್ಯ, ಅದೇ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟ ಮೇಲೆ ರಾಜ್ಯಪಾಲರನ್ನು ಹೀನಾಮಾನವಾಗಿ ತೆಗಳುತ್ತಿದ್ದಾರೆ. ಅವರ ಪಕ್ಷದ ಶಾಸಕರು, ಸಚಿವರು ಇದನ್ನೇ ಮಾಡುತ್ತಿದ್ದಾರೆ ಎಂದು ಅವರು ದೂರಿದರು. ಕಾಂಗ್ರೆಸ್ ನಾಯಕರದ್ದು ಹಂಸರಾಜ್ ಭಾರಧ್ವಾಜ್ ಅವರು ರಾಜ್ಯಪಾಲರು ಆಗಿದ್ದ ವೇಳೆ ಒಂದು ವರಸೆ, ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯಪಾಲರಾಗಿರುವ ವೇಳೆ ಇನ್ನೊಂದು ವರಸೆ. ಅದಕ್ಕೆ ಇಲ್ಲಿದೆ ನೋಡಿ ಸಾಕ್ಷಿ ಎಂದು ಈ ಹಿಂದೆ ಸಿದ್ದರಾಮಯ್ಯ ಅವರು ರಾಜ್ಯಪಾಲರ ಹೊಣೆಗಾರಿಕೆ ಬಗ್ಗೆ ನೀಡಿದ್ದ ಹೇಳಿಕೆಯನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದರು. ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟ…
BIG UPDATE: ಚುನಾವಣಾ ಬಾಂಡ್ ಮೂಲಕ ಸುಲಿಗೆ ಕೇಸ್: ನಿರ್ಮಲಾ ಸೀತಾರಾಮನ್ ಸೇರಿ ಬಿಜೆಪಿ ಮುಖಂಡರ ವಿರುದ್ಧ ‘FIR’ ದಾಖಲು
ಬೆಂಗಳೂರು: ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪದಲ್ಲಿ ವ್ಯಕ್ತಿಯೊಬ್ಬರು ನೀಡಿದಂತ ದೂರಿನ ಅನ್ವಯ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್, ಇಡಿ, ನಳೀನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರಿನ ತಿಲಕ್ ನಗರದಲ್ಲಿ ಆದರ್ಶ್ ಎಂಬುವರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಪೊಲೀಸರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಎ1 ಆರೋಪಿಯಾಗಿ, ಎ2 ಆರೋಪಿಯಾಗಿ ಇಡಿ, ಎ3 ಆರೋಪಿಯಾಗಿ ಬಿಜೆಪಿ ಪದಾಧಿಕಾರಿಗಳು, ಎ4 ಆರೋಪಿಯಾಗಿ ನಳೀನ್ ಕುಮಾರ್ ಹಾಗೂ ರಾಜ್ಯ ಬಿಜೆಪಿ ಪದಾಧಿಕಾರಿಗಳನ್ನು ಎ5 ಆರೋಪಿಯಾಗಿ ಮಾಡಿ ಎಫ್ಐಆರ್ ದಾಖಲಿಸಲಾಗಿದೆ. ಆದರ್ಶ್ ಅಯ್ಯರ್ ಎಂಬುವರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಬೆಂಗಳೂರಿನ ತಿಲಕ್ ನಗರದಲ್ಲಿ ಐಪಿಸಿ ಸೆಕ್ಷನ್ 384, 120ಬಿ, 34ರಡಿ ಪ್ರಕರಣ ದಾಖಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. https://kannadanewsnow.com/kannada/breaking-muslims-say-hum-paanch-hamara-punchis-mla-yatnal/ https://kannadanewsnow.com/kannada/that-mother-never-came-out-she-was-innocent-what-ks-eshwarappa-said-about-cms-wife-parvathi/
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗದಂತಹ ಪ್ರದೇಶದಲ್ಲಿ ಆಹಾರದ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಪಾಲಿಕೆಯ ಪಶುಸಂಗೋಪನಾ ವಿಭಾಗದಿಂದ ಪ್ರಾಯೋಗಿಕವಾಗಿ ಹೊಸ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರು ತಿಳಿಸಿದ್ದಾರೆ. ನಗರದಲ್ಲಿ ಅನೇಕ ಸ್ಥಳಗಳಲ್ಲಿ ಸಮುದಾಯ ಪ್ರಾಣಿಗಳಿಗೆ ದಿನಕ್ಕೆ ಒಂದು ಹೊತ್ತಿನ ಆಹಾರವೂ ಸಹ ಸಿಗದಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಇದರಿಂದ ಬೀದಿ ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಬೀದಿ ನಾಯಿಗಳು ಸಾರ್ವಜನಿಕರಿಗೆ ಕಚ್ಚುವ ಪ್ರಕರಗಳು ಕಂಡಬರುತ್ತಿದ್ದು, ಅದನ್ನು ನಿಂಯಂತ್ರಿಸಬೇಕಿದೆ. ಆದ್ದರಿಂದ ನಾಯಿಗಳಿಗೆ ಸರಿಯಾಗಿ ಆಹಾರ ಸಿಗುವಂತೆ ಮಾಡಲು ಪಾಲಿಕೆಯು ಪ್ರಾಣಿ ಪಾಲಕರು, ಪೌರಕಾರ್ಮಿಕರು, ಹೋಟೆಲ್ ಮಾಲಿಕರು, ಆರೋಗ್ಯ ವಿಭಾಗದ ಸಿಬ್ಬಂದಿ ಹಾಗೂ ಇತರೆ ಆಸಕ್ತರೊಂದಿಗೆ ಸಮನ್ವಯ ಸಾಧಿಸಿ ಇದನ್ನು ಮಾಡಲಾಗುವುದು. ಯೋಜನೆಯ ಜಾರಿ ವಿಧಾನ: ಪ್ರಾಣಿಗಳಿಗೆ ಆಹಾರ ನೀಡುವ ಪ್ರಾಣಿ ಪ್ರಿಯರ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ನಂತರ ಪೌರ ಕಾರ್ಮಿಕರು ಮತ್ತು ಖಾಸಗಿ ಹೋಟೆಲ್ ಮಾಲಿಕರನ್ನು…
ಮೈಸೂರು : ಹೊಟ್ಟೆ ತುಂಬ ಹಿಟ್ಟು-ಬಾಯಿ ತುಂಬ ಅನ್ನ ಎಂದು ನನ್ನಮ್ಮ ಹೇಳುತ್ತಿದ್ದರು. ನಾನು ಅನ್ನ ಭಾಗ್ಯ ಜಾರಿಗೆ ತರಲು ಅನ್ನಕ್ಕಾಗಿ ಕಾದು ನಿಂತ ಪರಿಸ್ಥಿತಿಯೇ ಕಾರಣ ಎಂದು ಮುಖ್ಯಮಂತ್ರಿಗಳು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ “ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ” ಕೃತಿ ಬಿಡುಗಡೆ ಮಾಡಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. 1949 ನವೆಂಬರ್ 25 ರಂದು ಸಂವಿಧಾನ ಜಾರಿ ಸಭೆಯಲ್ಲಿ ಮಾಡಿದ ಭಾಷಣ ನನ್ನ ಗ್ಯಾರಂಟಿಗಳಿಗೆ ಸ್ಫೂರ್ತಿ. ಅವಕಾಶಗಳಿಂದ ವಂಚಿತರಾಗಿರುವವರಿಗೆ ಸಮಾನ ಅವಕಾಶಗಳು ಸಿಕ್ಕಾಗ ಸಮ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರು, ಬುದ್ದ ಕೂಡ ಸಮ ಸಮಾಜದ ಬಗ್ಗೆ ಹೇಳಿದ್ದಾರೆ. ಕೇವಲ ಭಾಷಣಳಿಂದ ಸಮ ಸಮಾಜದ ಆಶಯ ಈಡೇರಲ್ಲ. ಈ ಕಾರಣಕ್ಕೇ ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜಾರಿ ಮಾಡಿದೆ ಎನ್ನುತ್ತಾ ತಮ್ಮ ಬಾಲ್ಯದ ಬಡತನದ ದಿನಗಳನ್ನು ಸ್ಮರಿಸಿದರು. ಹಬ್ಬ ಬಂದಾಗ ಮಾತ್ರ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ದದ ಮುಡಾ ಹಗರಣ ಕುರಿತಂತೆ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ. ಸಿದ್ದರಾಮಯ್ಯ ಕುಟುಂಬ ವಿರುದ್ದದ ಆರೋಪಗಳು ಗಂಭೀರವಾಗಿದ್ದು ನ್ಯಾಯಾಲಯವೇ ಶಾಕ್ ಆಗಿದೆ ಎಂದು ತೀರ್ಪಿನಲ್ಲಿ ಹೇಳಿದೆ. ಹೀಗಿರುವಾಗ ಲೋಕಾಯುಕ್ತದಿಂದ ಸಮರ್ಪಕ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ಆದೇಶಿಸಲು ನಿರ್ದೇಶನ ನೀಡಬೇಕೆಂದು ‘ಸಿಟಿಜನ್ ರೈಟ್ಸ್ ಫೌಂಡೇಷನ್ (CRF)’ ರಾಜ್ಯಪಾಲರಿಗೆ ದೂರು ನೀಡಿದೆ. ಮುಡಾ ಅಕ್ರಮ ಮಾತ್ರವಲ್ಲ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆಯೂ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಒತ್ತಾಯಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ದಲ್ಲಿ ನಿವೇಶನ ಹಂಚಿಕೆ ಅಕ್ರಮ ಮೂಲಕ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು ಈ ಪ್ರಕರಣದ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಲು ಕೋರಿ ‘ಸಿಟಿಜನ್ ರೈಟ್ಸ್ ಫೌಂಡೇಷನ್’ದಿನಾಂಕ 03.07.2024ರಂದು ಮನವಿ ಸಲ್ಲಿಸಿತ್ತು. ಈ ಮನವಿ ಸಲ್ಲಿಸಿ ಸುಮಾರು…
ಮೈಸೂರು: ಮಹಿಷ ಮಂಡಲೋತ್ಸವ ಆಚರಣೆ ವಿಚಾರವಾಗಿ ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಮೈಸೂರು ನಗರ ಕಮೀಷನರ್ ಸೀಮಾ ಲಾಟ್ಕರ್ ಆದೇಶಿಸಿದ್ದಾರೆ. ಈ ಸಂಬಂಧ ಆದೇಶ ಹೊರಡಿಸಿರುವಂತ ಅವರು, ಮಹಿಷ ಮಂಡಲೋತ್ಸವ ಆಚರಣೆಯ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಟೌನ್ ಹಾಲ್ ನ ಒಳ ಆವರಣ ಹೊರತುಪಡಿಸಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ. ದಿನಾಂಕ 28.09.2024ರಂದು ಮಧ್ಯರಾತ್ರಿ 12 ಗಂಟೆಯಿಂದ 30.09.2024ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ವೇಳೆಯಲ್ಲಿ ಯಾವುದೇ ಸಭೆ ಸಮಾರಂಭ, ರ‌್ಯಾಲಿ ಹಾಗೂ ಮೆರವಣಿಗೆ ನಡೆಸದಂತೆ ನಿಷೇಧವಿದೆ. ಕಲಂ 163 ಬಿ.ಎನ್.ಎಸ್.ಎಸ್ ಅಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ, ಮೈಸೂರು ನಗರ ಕಮೀಷನರ್ ಸೀಮಾ ಲಾಟ್ಕರ್ ಆದೇಶಿಸಿದ್ದಾರೆ. https://kannadanewsnow.com/kannada/good-news-for-railway-passengers-6000-special-trains-to-run-on-dussehra-diwali/ https://kannadanewsnow.com/kannada/breaking-muslims-say-hum-paanch-hamara-punchis-mla-yatnal/











