Author: kannadanewsnow09

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಾಳಿ, ಮಳೆ ಬಂದ್ರೆ ಸಾಕು ಮರಗಳು ಧರೆಗುರುಳಿ ವಿದ್ಯುತ್ ಕಂಬಗಳು ಮುರಿದು ಬೀಳೋದು, ವೈಯರ್ ಕಟ್ಟಾಗೋದು ಕಾಮನ್ ಆಗಿಬಿಟ್ಟಿದೆ. ಕೆಲವೊಮ್ಮ ಬೆಸ್ಕಾಂನಿಂದ ತಕ್ಷಣವೇ ಸರಿ ಪಡಿಸೋ ಕೆಲಸವಾದ್ರೇ, ಮತ್ತೆ ಕೆಲವೊಮ್ಮೆ ಲೇಟ್ ಆಗುತ್ತಿತ್ತು. ಆದ್ರೇ ಈಗ ಈ ಸಮಸ್ಯೆ ಸರಿಪಡಿಸೋ ನಿಟ್ಟಿನಲ್ಲಿ ಬೆಂಗಳೂರು ವ್ಯಾಪ್ತಿಗೆ ಸೀಮಿತವಾಗಿ ಗ್ರಾಹಕರಿಗೆ ವಾಟ್ಸ್ ಆಪ್, ಎಸ್ಎಂಎಸ್ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಸ್ಕಾಂ ಮಾಹಿತಿ ನೀಡಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ-ಮಳೆಗೆ ವಿದ್ಯುತ್‌ ಕಂಬಗಳು ಮುರಿದು, ವಿದ್ಯುತ್‌ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ. ಹೀಗಾಗಿ ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳು ಹರಿದು ಬಂದಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್‌ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ  ಗ್ರಾಹಕರಿಗೆ ಈ ಕೆಳಕಂಡ ಪಯಾರ್ಯ ವಾಟ್ಸ್‌ ಆಪ್‌ ಸಂಖ್ಯೆಗಳನ್ನು ನೀಡಲಾಗಿದೆ ಎಂದು ತಿಳಿಸಿದೆ. ವಾಟ್ಸ್‌ಪ್‌ ಸಂಖ್ಯೆಗಳಿಗೆ…

Read More

ನವದೆಹಲಿ: ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿಷಯದ ಬಗ್ಗೆ ದೃಢವಾದ ನಿಲುವನ್ನು ತೆಗೆದುಕೊಂಡ ಸುಪ್ರೀಂ ಕೋರ್ಟ್, ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಗಳು ಅವರನ್ನು ಒಳಗೊಂಡಿರುವ ಉತ್ಪನ್ನ ಅಥವಾ ಸೇವೆಯ ಜಾಹೀರಾತು ಮೋಸಕರವೆಂದು ಕಂಡುಬಂದರೆ ಸಮಾನವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದೆ. ಪತಂಜಲಿ ಆಯುರ್ವೇದ ದಾರಿತಪ್ಪಿಸುವ ಜಾಹೀರಾತುಗಳ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಯಾವುದೇ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೊದಲು ಪ್ರಸಾರಕರು ಸ್ವಯಂ ಘೋಷಣೆ ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದೆ. ಮಂಗಳವಾರ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಎ ಅಮಾನುಲ್ಲಾ ಅವರ ನ್ಯಾಯಪೀಠವು ದಾರಿತಪ್ಪಿಸುವ ಜಾಹೀರಾತುಗಳ ತಡೆಗಟ್ಟುವಿಕೆ ಮತ್ತು ದಾರಿತಪ್ಪಿಸುವ ಜಾಹೀರಾತುಗಳಿಗಾಗಿ ಅನುಮೋದನೆಗಳ ಮಾರ್ಗಸೂಚಿಗಳು, 2022 ಅನ್ನು ಉಲ್ಲೇಖಿಸಿತು. ಈ ಮಾರ್ಗಸೂಚಿ 13 ರ ಪ್ರಕಾರ ಒಬ್ಬ ವ್ಯಕ್ತಿಯು ಅವನು ಅಥವಾ ಅವಳು ಅನುಮೋದಿಸುತ್ತಿರುವ ಉತ್ಪನ್ನ ಅಥವಾ ಸೇವೆಯೊಂದಿಗೆ ಸಾಕಷ್ಟು ಮಾಹಿತಿ ಅಥವಾ ಅನುಭವವನ್ನು ಹೊಂದಿರಬೇಕು. ಅದು ಮೋಸಗೊಳಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಗಮನಸೆಳೆದಿದೆ. “ಈ ನಿಬಂಧನೆಗಳು ಗ್ರಾಹಕರಿಗೆ ಸೇವೆ…

Read More

ಯಾದಗಿರಿ: ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು, ಹಲವರು ಗಾಯಗೊಂಡಿರುವಂತ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಬಾದ್ಯಾಪುರ ಗ್ರಾಮದಲ್ಲಿ ಇಂದು ಸುರಪುರ ಕ್ಷೇತ್ರಕ್ಕೆ ಉಪ ಚುನಾವಣೆ ಹಾಗೂ ಯಾದಗಿರಿ ಜಿಲ್ಲೆಗೆ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ವೇಳೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ಗಲಾಟೆ ತಾರಕಕ್ಕೇರಿದ ವೇಳೆಯಲ್ಲಿ ದೊಣ್ಣೆ, ಕೋಲು, ಬಡಿಗೆ, ಕಲ್ಲುಗಳಿಂದ ಮಾರಾಮಾರಿಯಾಗಿದೆ. ಈ ಘಟನೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅನೇಕ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. https://kannadanewsnow.com/kannada/yogesh-gowda-murder-case-hc-allows-mla-vinay-kulkarni-to-cast-his-vote/ https://kannadanewsnow.com/kannada/tushar-girinath-asks-officials-to-ensure-that-bengaluru-is-not-affected-by-rain/

Read More

ಶಿವಮೊಗ್ಗ: ನಗರದಲ್ಲಿ ಇಂದು ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದ ಹುಮ್ಮಸ್ಸಿನಿಂದಲೇ ಜಿಲ್ಲೆಯಲ್ಲಿ ಮತದಾರರು ಮತವನ್ನು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ದಾಖಲೆಯ ಶೇ.58.04% ಮತದಾನವಾಗಿದೆ. ಈ ಬಗ್ಗೆ ಜಿಲ್ಲಾ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಡೆತಡೆಯಿಲ್ಲದೇ ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಕೆಲವೆಡೆ ಅಷ್ಟೇ ತಾಂತ್ರಿಕ ಸಮಸ್ಯಯಿಂದ ಇವಿಎಂ ಸ್ಥಗಿತಗೊಂಡಿತ್ತು. ಅದನ್ನು ಬದಲಾಯಿಸಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದಿದೆ. ಮಧ್ಯಾಹ್ನ 3:00 ಗಂಟೆ ವರೆಗೆ‌ ಚಲಾವಣೆಯಾದ ಮತದಾನದ ಶೇಕಡವಾರು ವಿವರ ಶಿವಮೊಗ್ಗ ಲೋಕಸಭಾ ಕ್ಷೇತ್ರ: 58.04% ಒಟ್ಟು ಮತಗಳು: 1752885 ಚಲಾವಣೆ ಮತಗಳು:1014226 https://kannadanewsnow.com/kannada/patiraya-casts-his-vote-for-bjp-candidate-do-you-know-where/ https://kannadanewsnow.com/kannada/yogesh-gowda-murder-case-hc-allows-mla-vinay-kulkarni-to-cast-his-vote/

Read More

ದಾವಣಗೆರೆ: ಚುನಾವಣಾ ಮಾರ್ಗಸೂಚಿಯಂತೆ ಒಬ್ಬರ ಮತವನ್ನು ಮತ್ತೊಬ್ಬರು ಹಾಕುವಂತಿಲ್ಲ. ಒಂದು ವೇಳೆ ಹಾಕಿದ್ರೆ ಅದು ಚುನಾವಣಾ ಮಾರ್ಗಸೂಚಿ ಉಲ್ಲಂಘನೆಯೇ ಆಗಲಿದೆ. ಹೀಗಿದ್ದರೂ ಬಿಜೆಪಿ ಅಭ್ಯರ್ಥಿಯ ಪರವಾಗಿ ಪತಿರಾಯನೊಬ್ಬ ಮತ ಚಲಾಯಿಸಿದ್ದಾರೆ. ಅದು ಎಲ್ಲಿ ಅಂತ ಮುಂದೆ ಓದಿ. ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿ ಬಂದಿದೆ. ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರೋದಾಗಿ ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತಗಟ್ಟೆಗೆ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಜೊತೆಗೆ ಸಂಸದ ಜಿ.ಎಂ ಸಿದ್ದೇಶ್ವರ್ ಆಗಮಿಸಿದ್ದರು. ಮತಗಟ್ಟೆಯ ಬಳಿಗೆ ಬಂದಾಗ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತ ಚಲಾಯಿಸೋದಕ್ಕೂ ಗೊಂದಲಕ್ಕೆ ಒಳಗಾದರು ಎನ್ನಲಾಗಿದೆ. ಮತ ಹಾಕುವಾಗ ಗೊಂದಲಕ್ಕೆ ಒಳಗಾದಂತ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಬದಲಾಗಿ, ಸಂಸದ ಜಿಎಂ ಸಿದ್ದೇಶ್ವರ್ ಅವರೇ ಪತ್ನಿಗೆ ಸಹಾಯ ಮಾಡಲು ತಾನೇ ಮತದಾ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಮತವನ್ನು…

Read More

ಬೆಂಗಳೂರು: ನಗರದಲ್ಲಿ ಮಳೆಗಾಲದ ವೇಳೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯಾ ವಲಯ ವ್ಯಾಪ್ತಿಯ ಅಧಿಕಾರಿಗಳು ಮಳೆಗಾಲದ ವೇಳೆ ಎಲ್ಲಿಯೂ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಸೂಚಿಸಿದರು. ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಮಳೆ ನೀರಿನ ಸರಾಗ ಹರಿವಿಗೆ ಸಮಸ್ಯೆ ಆಗಲಿದೆಯೇ ಎಂಬುದನ್ನು ಪರಿಶೀಲಿಸಬೇಕು. ಏನಾದರು ಸಮಸ್ಯೆ ಇದ್ದಲ್ಲಿ ಮೆಟ್ರೋ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ತಿಳಿಸಿದರು. ರಾಜಕಾಲುವೆ ಹಾಗೂ ರಸ್ತೆ ಬದಿ ಚರಂಡಿಗಳಲ್ಲಿ ಹೂಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು. ನಗರದಲ್ಲಿ ಜೋರು ಮಳೆಯಾಗುವ ಸಮಯದಲ್ಲಿ ರಸ್ತೆಗಳ ಮೇಲೆ ಹೆಚ್ಚು ನೀರು ನಿಂತು ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಮೇಲೆ ಬೀಳುವ ನೀರು…

Read More

ಬೆಂಗಳೂರು: ಬಿರು ಬಿಸಿಲಿನಿಂದ ರಾಜ್ಯದ ಜನರು ಕಂಗೆಟ್ಟಿದ್ದಾರೆ. ಅಬ್ಬಾ ಮಳೆ ಬಂದ್ರೆ ಸಾಕಪ್ಪ ಅಂತ ಕಾಯುತ್ತಿದ್ದಾರೆ. ಈಗ ಬೇಸಿಗೆಯಿಂದ ಬಳಲಿರುವಂತ ಜನರಿಗೆ ಸಂತರಸದ ಸುದ್ದಿ ಎನ್ನುವಂತೆ ಇಂದು ರಾಜ್ಯದ ವಿವಿಧೆಡೆ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆಯಾಗಲಿದೆ ಅಂತ ಮುಂದೆ ಓದಿ. ಈ ಕುರಿತಂತೆ ಹವಾಮಾನ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಮೇ.11ರವರೆಗೆ ರಾಜ್ಯದ ಹಲವೆಡೆ ಇಂದಿನಿಂದ ಮಳೆಯಾಗಲಿದೆ. ಗುಡುಗು, ಸಡಿಲು ಸಮೇತ ಮಳೆಯಾಗೋ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯನ್ನು ವಹಿಸುವಂತೆ ಸೂಚಿಸಿದೆ. ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ ಮತ್ತು ಕೋಲಾರದಲ್ಲಿ ಮಳೆಯಾಗೋ ನಿರೀಕ್ಷೆಯಿದೆ ಎಂದಿದೆ. ಸಿಲಿಕಾನ್ ಸಿಟಿ ಜನತೆಗೂ ಸಂತಸ ಸುದ್ದಿ ಎನ್ನುವಂತೆ ನಾಳೆ, ನಾಡಿದ್ದು ಬೆಂಗಳೂರಲ್ಲಿ ಮಳೆಯಾಗಲಿದೆ. ವಾಹನ ಸವಾರರು, ಜನರು ಮುಂಜಾಗ್ರತಾ ಕ್ರಮವಹಿಸಿದ್ರೆ ಒಳ್ಳೇದು ಎಂಬುದಾಗಿ ಹೇಳಿದೆ. ಇನ್ನೂ ಉತ್ತರ ಒಳನಾಡಿನ ಕೆಲ‌ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗೋ ಮುನ್ಸೂಚನೆಯನ್ನು ನೀಡಲಾಗಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗುಡುಗು, ಸಿಡಿಲ ಜೊತೆಗೆ ವರುಣ…

Read More

ಬೆಂಗಳೂರು: ಬಿಡಿಎ ಕಾಂಪ್ಲೆಕ್ಸ್‍ಗಳನ್ನು ಲೀಸ್‍ಗೆ ಕೊಡುವ ಮೂಲಕ ಪರೋಕ್ಷ ಮಾರಾಟಕ್ಕೆ ದಿವಾಳಿಯತ್ತ ಮುನ್ನಡೆಯುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಇದರ ವಿರುದ್ಧ ಬಿಜೆಪಿಯು ಜನರ ಜೊತೆಗೂಡಿ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಚ್ಚರಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‍ಎಸ್‍ಆರ್ ಲೇ ಔಟ್, ಆಸ್ಟಿನ್ ಟೌನ್, ಕೋರಮಂಗಲ, ವಿಜಯನಗರ, ಆರ್.ಟಿ.ನಗರ, ಸದಾಶಿವನಗರದ ಬಿಡಿಎ ಸ್ವತ್ತುಗಳನ್ನು ನುಂಗಣ್ಣಗಳು ನುಂಗಲು ಹೊರಟಿದ್ದಾರೆ. 2013-18ರಲ್ಲಿ ಇದೇ ಮಾದರಿಯ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್ ಸರಕಾರ ಮುಂದಾಗಿತ್ತು. ಇದರ ವಿರುದ್ಧ ಬೆಂಗಳೂರಿನ ಜನರು ಪ್ರತಿಭಟನೆ ಮಾಡಿದ್ದರು ಎಂದು ನೆನಪಿಸಿದರು. ಆಗ ಅದು ನಿಂತು ಹೋಗಿತ್ತು. ಮಡಿವಾಳದ ಆಸ್ತಿ ಕಾಂಗ್ರೆಸ್ ನಾಯಕರ ಪಾಲಾದಂತೆ ಇದು ಕೂಡ ಆಗಬಾರದೆಂದು ಜನರು ಹೋರಾಟ ಆರಂಭಿಸಿದ್ದಾರೆ. 3 ಸಾವಿರ ಕೋಟಿ ಬೆಲೆಬಾಳುವ ಆಸ್ತಿ ಇದು. ಇದರ ಹಿಂದೆ 200 ಕೋಟಿಗೂ ಮೇಲ್ಪಟ್ಟು ಕಿಕ್ ಬ್ಯಾಕ್ ಇದೆ ಎಂದು ಆರೋಪಿಸಿದರು.…

Read More

ಭಾಲ್ಕಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾಲ್ಕಿಯಲ್ಲಿ ಮತ ಚಲಾಯಿಸಿದ್ದು, ಈ ಅಪರೂಪದ ಘಟನೆಗೆ ಹಲವರು ಸಾಕ್ಷಿಯಾದರು. ಮಾಜಿ ಸಾರಿಗೆ ಸಚಿವರು, ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣ ಚಳವಳಿಯ ನೇತಾರರು ಹಾಗೂ ಲೋಕನಾಯಕ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರು ವಾರ್ಧಕ್ಯದ ನಡುವೆಯೂ ಉತ್ಸಾಹದಿಂದ ಗಾಲಿ ಕುರ್ಚಿಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹಾಗೂ ಅವರ ಪುತ್ರ ಮತ್ತು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ಅವರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ನೂತನ ಕಚೇರಿಯ ಸಭಾ ಭವನದ ಮತಗಟ್ಟೆ ಸಂಖ್ಯೆ 118ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಖಂಡ್ರೆ ಕುಟುಂಬದ ಇತರ ಸದಸ್ಯರೂ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮತಗಟ್ಟೆಯಿಂದ ಹೊರ ಬಂದ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತದಾನ…

Read More

ಶಿವಮೊಗ್ಗ: ನಗರದಲ್ಲಿ ಇಂದು ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದ ಹುಮ್ಮಸ್ಸಿನಿಂದಲೇ ಜಿಲ್ಲೆಯಲ್ಲಿ ಮತದಾರರು ಮತವನ್ನು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗೆ ಶೇ.45.19ರಷ್ಟು ಮತದಾನವಾಗಿದೆ. ಈ ಬಗ್ಗೆ ಜಿಲ್ಲಾ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಡೆತಡೆಯಿಲ್ಲದೇ ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಕೆಲವೆಡೆ ಅಷ್ಟೇ ತಾಂತ್ರಿಕ ಸಮಸ್ಯಯಿಂದ ಇವಿಎಂ ಸ್ಥಗಿತಗೊಂಡಿತ್ತು. ಅದನ್ನು ಬದಲಾಯಿಸಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದಿದೆ. ಮಧ್ಯಾಹ್ನ 1:00 ಗಂಟೆ ವರೆಗೆ‌ ಚಲಾವಣೆಯಾದ ಮತದಾನದ ಶೇಕಡವಾರು ವಿವರ ಶಿವಮೊಗ್ಗ ಲೋಕಸಭಾ ಕ್ಷೇತ್ರ: 45.19% ಒಟ್ಟು ಮತಗಳು: 1752885 ಚಲಾವಣೆ ಮತಗಳು:788545 https://kannadanewsnow.com/kannada/three-terrorists-killed-in-encounter-with-indian-army-in-jammu-and-kashmirs-kulgam/ https://kannadanewsnow.com/kannada/though-the-police-distributed-pen-drives-the-election-commission-did-not-take-any-action-said-former-cm-h-d-kumaraswamy-d-kumaraswamy/

Read More