Author: kannadanewsnow09

ಮಂಗಳೂರು: ಇಂದು ಜಿಲ್ಲೆಯಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ನಿರ್ಮಾಣ ಹಂತದ ಸೇತುವೆಯೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ 7 ಮಂದಿ ಕಾರ್ಮಿಕರು ಗಾಯಗೊಂಡಿರೋ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ  ಹಂತದ ಕಟ್ಟಡ ಏಕಾಏಕಿ ಕುಸಿತಗೊಂಡಿದೆ. ಇದರಿಂದಾಗಿ ಕಟ್ಟಡದ ಅವಶೇಷಗಳಡಿ ಸಿಲುಕಿ 7 ಕಾರ್ಮಿಕರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಮಲ್ಲಿಪ್ಪಾಡಿ ಸಮೀಪದಲ್ಲಿನ ನಿರ್ಮಾಣ ಹಂತದ ಸಂಪರ್ಕ ಕಲ್ಲಿಸೋ ಸೇತುವೆ ಇದಾಗಿದೆ. ಬರೆಂಜ ಹಾಗೂ ಕುರುಡಕಟ್ಟೆ ನಡುವೆ ಸಂಪರ್ಕ ಕಲ್ಪಿಸೋ ನಿಟ್ಟಿನಲ್ಲಿ ಈ ಸೇತುವೆ ನಿರ್ಮಿಸಲಾಗುತ್ತಿತ್ತು. ಇಂದು ದಿಢೀರ್ ಕುಸಿತಗೊಂಡ ಪರಿಣಾಮ, 7 ಕಾರ್ಮಿಕರು ಗಾಯಗೊಂಡಿದ್ದಾರೆ. ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. https://kannadanewsnow.com/kannada/modiji-dont-you-remember-karnataka-at-a-different-time-if-you-leave-at-the-time-of-elections-cms-question/ https://kannadanewsnow.com/kannada/breaking-21-retired-judges-write-to-cji-condemning-attempts-to-weaken-judiciary/

Read More

ಚಿತ್ರದುರ್ಗ: ಮತದಾರರನ್ನು ಆಮಿಷ ಒಡ್ಡುವಂತ ಹೇಳಿಕೆ ನೀಡುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಿದ್ದರೂ ಸಚಿವ ಸುಧಾಕರ್ ಮಾತ್ರ 70 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ರೆ, ನಿಮ್ಮ ಕ್ಷೇತ್ರಕ್ಕೆ 20 ಕೋಟಿ ಅನುದಾನ ಕೊಡಿಸೋದಾಗಿ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವಂತ ಸಚಿವ ಸುಧಾಕರ್ ಅವರು, ನಾಯಕನಹಟ್ಟಿಯ ತಳುಕಿನಲ್ಲಿ ಚುನಾವಣಾ ಪ್ರಚಾರವನ್ನು ಇಂದು ನಡೆಸಿದರು. ಈ ಸಂದರ್ಭದಲ್ಲಿ ತಳುಕಿಗೆ ಅನುದಾನ ಒದಗಿಸೋದಕ್ಕಾಗಿ ಸಿಎಂ ಸಿದ್ಧರಾಮಯ್ಯ ಜೊತೆಗೆ ಮಾತನಾಡಿರೋದಾಗಿ ತಿಳಿಸಿದರು. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. 70 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇ ಆದಲ್ಲಿ ತಳುಕು ಅಭಿವೃದ್ಧಿಗಾಗಿ 20 ಕೋಟಿ ಅನುದಾನವನ್ನು ಸರ್ಕಾರ ನೀಡಲಿದೆ. ಈಗಾಗಲೇ ಸಿಎಂ ಸಿದ್ಧರಾಮಯ್ಯ ಜೊತೆಗೆ ಈ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ. ಈ ಮೂಲಕ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎನ್ನಲಾಗುತ್ತಿದೆ. https://kannadanewsnow.com/kannada/modiji-dont-you-remember-karnataka-at-a-different-time-if-you-leave-at-the-time-of-elections-cms-question/ https://kannadanewsnow.com/kannada/the-bjp-is-against-the-constitution-bjp-parivars-plan-to-change-constitution-cm-siddaramaiah/

Read More

ಶಿವಮೊಗ್ಗ : ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣ, ಅದ್ಭುತ ಚಿಂತಕ – ಮಹಾ ಯೋಗಿ ಸಿದ್ದರಾಮೇಶ್ವರರು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಹೇಳಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬೋವಿ ವಿದ್ಯಾವರ್ಧಕ ಸಂಘ ಇವರ ಸಂಯುಕ್ತಾ ಆಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರರ 852ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿದ್ದ ಕರ್ಮಯೋಗಿ ಎಂದೇ ಖ್ಯಾತನಾಮರಾಗಿದ್ದ ಸಿದ್ಧರಾಮರು ಜಾತಿ, ಧರ್ಮವನ್ನು ಮೀರಿದ ಅನುಭಾವಿಗಳು. ಇವರು ಕಾಲಾನಂತರದಲ್ಲಿ ತಮ್ಮ ನಿರಂತರ ಸಾಧನೆಯಿಂದಾಗಿ ಮಹಾಶಿವಯೋಗಿಯಾದರು ಎಂದರು. ಭೋವಿ ಸಮುದಾಯದವರು ತಮ್ಮ ಕಾಯಕದಿಂದಾಗಿ ಚದುರಿ ಹೋಗಿದ್ದು, ತಮ್ಮ ಅಸ್ಮಿತತೆಗಾಗಿ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಂಘಟಿತರಾಗಬೇಕಾದ ಅಗತ್ಯವಿದೆ. ಇದು ಶಕ್ತಿಯುತ ಸಂಘಟನೆಯಾಗಿ…

Read More

ಹಾವೇರಿ : ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಎರಡು ಬಾರಿ ರಾಜ್ಯ ಸರ್ಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.ಪರಿಶಿಷ್ಟ ವರ್ಗಕ್ಕೆ ಸೇರಲು ಸಮುದಾಯ ಸಂಪೂರ್ಣ ಅರ್ಹತೆ ಪಡೆದಿದ್ದು, ಕೇಂದ್ರ ಸರ್ಕಾರ ಈಗ ಪುನಃ ಕೇಳಿರುವ ಸ್ಪಷ್ಟೀಕರಣವನ್ನು ಕೂಡಲೇ ಮಾಹಿತಿ ತರಿಸಿ ಸ್ಪಷ್ಟೀಕರಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಅವರು ಇಂದು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ 904 ನೇ ಜಯಂತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ನಂತರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕ್ರಮ ವಹಿಸಬೇಕು ಎಂದರು. 96-97 ರಲ್ಲಿಯೇ ದಿವಂಗತ ಶಾಸಕ ನಾರಾಯಣ ರಾವ್ ಎಸ್.ಟಿ ಗೆ ಸೇರಿಸಲು ಪ್ರಯತ್ನಿಸಿದ್ದರು ಎಂದು ಮರೆಯಬಾರದು ಎಂದರು. ದೋಣಿ ನಡೆಸುವುದು ಹಾಗೂ ಮೀನು ಹಿಡಿಯುವ ಕಾಯಕ ಅಂಬಿಗರದ್ದು. ಕಾಯಕದಲ್ಲಿ ಮೇಲುಕೀಳು ಎಂಬುದಿಲ್ಲ. ಮನುಷ್ಯರ ನಡುವೆ ತಾರತಮ್ಯ ಇರಬಾರದು. ಕಾಯಕವನ್ನು ಆಧರಿಸಿ ಮೇಲು ಕೀಳು ಎಂದು ತಾರತಮ್ಯ…

Read More

ಬೆಂಗಳೂರು: ಇಂದು ವರ್ಷದ ಮೊದಲ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿ ನಾಳಿನಲ್ಲಿಡೆ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿಯ ಚಮತ್ಕಾರವೇ ನಡೆಯಿತು. ಈ ಬೆಳಕಿನ ವಿಸ್ಮಯದ ಕೌತುಕವನ್ನು ಕಂಡ ಭಕ್ತರು, ಪುಳಕಿತರಾದರು. ಸಂಕ್ರಾಂತಿ ಹಬ್ಬದ ದಿನದಂದು ಸೂರ್ಯನು ದಕ್ಷಿಣ ಪಥದಿಂದ ಉತ್ತರಪದಕೆತನ ದಿಕ್ಕನ್ನು ಬದಲಿಸುವ ವೇಳೆ ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿರುವ ಶಿವನ ಮೂರ್ತಿಗೆ ಸೂರ್ಯನ ಕಿರಣಗಳು ಸ್ಪರ್ಶಿಸಿದೆ. ಇದು ಪ್ರತಿವರ್ಷ ಸಂಕ್ರಾಂತಿ ಹಬ್ಬದ ದಿನದಂದೇ ವಿಸ್ಮಯ ಹಾಗೂ ಕೌತುಕ ಘಟನೆ ನಡೆಯಲಿದೆ. ಇದನ್ನು ನೆರೆಸಿದ್ದಂತ ಅಪಾರ ಪ್ರಮಾಣದ ಭಕ್ತರು ಕಣ್ತುಂಬಿಕೊಂಡಿದ್ದಾರೆ. ಇಂದು ಸಂಜೆ 5.20 ರಿಂದ 5.23 ನಿಮಿಷದ ವರೆಗೆ ಸೂರ್ಯರಶ್ಮಿ ಶಿವನಿಗೆ ನಮಿಸಿತು. ಸುಮಾರು ಮೂರು ನಿಮಿಷಗಳ ಕಾಲ ಸೂರ್ಯನ ಕಿರಣಗಳು ಗಂವಿ ಗಂಗಾಧರೇಶ್ವರ ಮೂರ್ತಿಯನ್ನು ಸ್ಪರ್ಶಿಸಿತು. ಈ ಸೂರ್ಯ ರಶ್ಮಿಯ ಚಮತ್ಕಾರವನ್ನು ನೆರೆದಿದ್ದಂತ ನೂರಾರು ಭಕ್ತರು ಕಣ್ ತುಂಬಿಕೊಂಡರು. ಇನ್ನು ದೇವಸ್ಥಾನದಲ್ಲಿ ಬೆಳಿಗ್ಗೆ 5 ಗಂಟೆಗೆ…

Read More

ಬೆಂಗಳೂರು: ಜ.17ರಂದು ನಗರದಲ್ಲಿ ನಡೆಯುವ ಟಿ-20 ಕ್ರಿಕೆಟ್ ಪಂದ್ಯಾವಳಿಯ ಪ್ರಯುಕ್ತ ದಿನಾಂಕ 17.01.2024 ರಂದು  ಮೆಟ್ರೋ ರೈಲು ಸೇವೆಗಳ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಟಿ20 ಕ್ರಿಕೆಟ್ ಪ್ರಿಯರಿಗೆ ಮೆಟ್ರೋ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 17-01-2024ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್ ಪಂದ್ಯದ ಪ್ರಯುಕ್ತ, ಬಿ.ಎಂ.ಆರ್.ಸಿ.ಎಲ್ ನೇರಳೆ ಹಾಗೂ ಹಸಿರು ಮಾರ್ಗದಲ್ಲಿನ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ರೈಲು ಸೇವೆಗಳನ್ನು ರಾತ್ರಿ 11.45 ಗಂಟೆಯವರೆಗೆ ವಿಸ್ತರಿಸಲಿದೆ ಎಂದು ತಿಳಿಸಿದೆ. ಪ್ರಯಾಣಿಕರ ಅನೂಕೂಲಕ್ಕಾಗಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ದಿನಾಂಕ 17ನೇ ಜನವರಿ 2024 ಬುಧವಾರ ಮಧ್ಯಾಹ್ನ 2.00 ಗಂಟೆಯಿಂದ ಮಾರಾಟಕ್ಕೆ ಲಭ್ಯವಿರುತ್ತದೆ. ಈ ಕಾಗದದ ಟಿಕೆಟ್‌ಗಳು ರಾತ್ರಿ 8.00  ಗಂಟೆಯಿಂದ  ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ದಿನದ ವಿಸ್ತೃತ ಅವಧಿಯಲ್ಲಿ ಒಂದು ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರುತ್ತದೆ…

Read More

ಬೆಂಗಳೂರು: ಸಂಕ್ರಾಂತಿ ಉಡುಗೊರೆಯಾಗಿ ನಿಗಮ ಮಂಡಳಿ ನೇಮಕ ಆಗುತ್ತದೆಯೇ ಎಂದು ಕೇಳಿದಾಗ, “ಯಾವ ಕ್ಷಣದಲ್ಲಿ ಬೇಕಾದರೂ ನಿಗಮ, ಮಂಡಳಿ ಆಯ್ಕೆ ಪಟ್ಟಿ ಪ್ರಕಟವಾಗಬಹುದು. ಈ ಪಟ್ಟಿ ಮುಂದೂಡುವ ಸಾಧ್ಯತೆ ಇಲ್ಲ. ಚುನಾವಣೆ ಸಮಯದಲ್ಲಿ ನಾವು ಯಾರಿಗೆ ಮಾತು ಕೊಟ್ಟಿದ್ದೆವೋ ಅವರಿಗೆ ಸ್ಥಾನಮಾನ ನೀಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಜ. 19 ರಂದು ನಡೆವ ಸಭೆಗೆ ದೆಹಲಿಯಿಂದ ವೀಕ್ಷಕರು ಕೂಡ ಆಗಮಿಸಲಿದ್ದು, ಜಿಲ್ಲಾ ಸಚಿವರು ಅಭ್ಯರ್ಥಿ ಆಯ್ಕೆ ವಿಚಾರವಾಗಿ ನೀಡಿರುವ ವರದಿ ಬಗ್ಗೆ ಚರ್ಚೆ ಮಾಡಲಾಗುವುದು. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಇದೇ ತಿಂಗಳು 21 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಅನಂತ ಕುಮಾರ್ ಹೆಗಡೆಗೆ ಮಾನಸಿಕ ಸ್ಥಿರತೆ ಇಲ್ಲ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,…

Read More

ಬೆಂಗಳೂರು : ಇದೇ 19 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಇಂದಿರಾ ಭವನದಲ್ಲಿ ಪಕ್ಷದ ಲೋಕಸಭೆ ಚುನಾವಣೆ ಸಮಿತಿ ಸಭೆ ಕರೆಯಲಾಗಿದೆ ಹಾಗೂ ಜ. 21 ರಂದು ಮಂಗಳೂರಲ್ಲಿ ರಾಜ್ಯಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಜ. 19 ರಂದು ನಡೆವ ಸಭೆಗೆ ದೆಹಲಿಯಿಂದ ವೀಕ್ಷಕರು ಕೂಡ ಆಗಮಿಸಲಿದ್ದು, ಜಿಲ್ಲಾ ಸಚಿವರು ಅಭ್ಯರ್ಥಿ ಆಯ್ಕೆ ವಿಚಾರವಾಗಿ ನೀಡಿರುವ ವರದಿ ಬಗ್ಗೆ ಚರ್ಚೆ ಮಾಡಲಾಗುವುದು. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಇದೇ ತಿಂಗಳು 21 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸಂಕ್ರಾಂತಿ ಹಬ್ಬದ ಶುಭಾಶಯಗಳು ರಾಜ್ಯದ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ವರ್ಷ ಉತ್ತಮ ಮಳೆಯಾಗಿ, ಒಳ್ಳೆಯ ಬೆಳೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈ ವರ್ಷ 220ಕ್ಕೂ ಹೆಚ್ಚು ತಾಲೂಕುಗಳನ್ನು…

Read More

ಬೆಂಗಳೂರು: ನಗರದಲ್ಲಿ ಜನವರಿ 19ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಿಗದಿ ಪಡಿಸಲಾಗಿದೆ. ಈ ಸಭೆ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತ್ರ ನಡೆಯುತ್ತಿರುವಂತ ಮೊದಲ ಸಭೆಯಾಗಿದೆ. ಈ ಸಂಬಂಧ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಹತ್ವದ ಪೂರ್ವಭಾವಿ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಬಿಜೆಪಿ ರಾಜ್ಯಕಾರ್ಯಕಾರಣಿ ಸಭೆಯಲ್ಲಿ ಯಾವೆಲ್ಲ ವಿಷಯಗಳನ್ನು ಚರ್ಚಿಸಬೇಕು ಎನ್ನುವ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಸಿದ್ರು ಎನ್ನಲಾಗುತ್ತಿದೆ. ವಿಜಯೇಂದ್ರ ರಾಜ್ಯ ಬಿಜೆಪಿಯ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವಂತ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆಯ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಸುನೀಲ್ ಕುಮಾರ್, ಪಿ.ರಾಜೀವ್, ಪ್ರೀತಂ ಗೌಡ, ಶಾಸಕರಾದಂತ ಎಸ್ ಆರ್ ವಿಶ್ವನಾಥ್ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. https://kannadanewsnow.com/kannada/big-news-hanagal-rape-case-no-question-of-protecting-anyone-says-cm-siddaramaiah/ https://kannadanewsnow.com/kannada/eminent-malayalam-music-director-k-j-joy-passes-away-at-77/

Read More

ಬೆಂಗಳೂರು: ರಾಜ್ಯದಲ್ಲಿ ಸಂಕ್ರಾಂತಿ ಹಬ್ಬದ ( Sankranti Festivel ) ದಿನವೇ ರಾಜ್ಯದಲ್ಲಿ ಸರಣಿ ಅಪಘಾತ ( Accident ) ಸಂಭವಿಸಿದೆ. ಈ ಅಪಘಾತದಲ್ಲಿ ವಿವಿಧ ಜಿಲ್ಲೆಗಳಲ್ಲಿ 11 ಮಂದಿ ಸಾವನ್ನಪ್ಪಿರೋ ಧಾರುಣ ಘಟನೆ ನಡೆದಿದೆ. ಚಾಮರಾಜ ನಗರದಲ್ಲಿ ರಜೆಯ ಹಿನ್ನಲೆಯಲ್ಲಿ ಸಫಾರಿಗೆ ಹೊರಟಿದ್ದಂತ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ದಾವಣಗೆರೆಯಲ್ಲಿ ಮೂವರು ಸಾವನ್ನಪ್ಪಿದ್ರೇ, ತುಮಕೂರಿನಲ್ಲಿ ಇಬ್ಬರು ಅಪಘಾತದಲ್ಲಿ ಬಲಿಯಾಗಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ಯುವಕನೋರ್ವ ಅಪಘಾತದಲ್ಲಿ ಬಲಿಯಾಗಿದ್ದಾನೆ. ಹಾವೇರಿಯಲ್ಲೂ ಬೈಕ್ ಸವಾರನೊಬ್ಬ ಧಾರುಣವಾಗಿ ದುರ್ಮರಣ ಹೊಂದಿದ್ದಾರೆ. ಈ ಮೂಲಕ ಸಂಕ್ರಾಂತಿ ಹಬ್ಬದ ದಿನವೇ ರಾಜ್ಯದಲ್ಲಿ ಸರಣಿ ಅಪಘಾತಕ್ಕೆ ಒಂದೇ ದಿನ 11 ಮಂದಿ ಬಲಿಯಾಗಿದ್ದಾರೆ. https://kannadanewsnow.com/kannada/big-news-hanagal-rape-case-no-question-of-protecting-anyone-says-cm-siddaramaiah/ https://kannadanewsnow.com/kannada/eminent-malayalam-music-director-k-j-joy-passes-away-at-77/

Read More