Author: kannadanewsnow09

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಬರದಿಂದ ಸಾಗಿದೆ. ಹೀಗೆ ಜಾತಿಗಣತಿ ಸಮೀಕ್ಷೆ ಕೈಗೊಳ್ಳುವ ಶಿಕ್ಷಕರಿಗೆ ಗೌರವಧನವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಉಲ್ಲೇಖ(1)ರ ಆದೇಶದನ್ವಯ ರಾಜ್ಯಾದ್ಯಂತ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ:22.09.2025 ರಿಂದ 07.10.2025ರ ವರೆಗೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲೆಗಳಲ್ಲಿ ಸಮೀಕ್ಷಾ ಕಾರ್ಯವನ್ನು ಪ್ರಾರಂಭಿಸಿದ್ದು, ಸಮೀಕ್ಷೆಯ ಕಾರ್ಯ ಪ್ರಗತಿಯಲ್ಲಿದೆ ಎಂದಿದೆ. ಉಲ್ಲೇಖ (2)ರ ಆದೇಶದಲ್ಲಿ ಆಯೋಗದಿಂದ ಕೈಗೊಳ್ಳಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಆರ್ಥಿಕ ಇಲಾಖೆಯಿಂದ ಪೂರಕ ಆಯವ್ಯಯ-2 ರಲ್ಲಿ ಅನುದಾನ ಒದಗಿಸುವ ಷರತ್ತುಗಳಿಗೆ ಒಳಪಟ್ಟು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ನಿಗಮಗಳ ಪಿ.ಡಿ. ಖಾತೆಗಳಲ್ಲಿ ಲಭ್ಯವಿರುವ ರೂ.348.36 ಕೋಟಿಗಳನ್ನು ಸಮೀಕ್ಷೆಯ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಮೋದನೆ ನೀಡಿ ಆದೇಶಿಸಲಾಗಿದೆ. ಉಲ್ಲೇಖ (3)ರ ಆದೇಶದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ…

Read More

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನಿಕೇತ್ ರಾಜ್.ಎಂ ಅವರು ಅಧಿಕಾರ ವಹಿಸಿಕೊಂಡರು.  ದಿನಾಂಕ 26-09-2025 ರಂದು ನಿಕೇತ್ ರಾಜ್. ಎಂ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ. ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸುವ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್. ಆರ್ (ಭಾ.ಆ.ಸೇ), ನಿರ್ದೇಶಕರು (ಮಾ.ತಂ) ಶಿಲ್ಪಾ. ಎಂ (ಭಾ.ಆ.ಸೇ) ಹಾಗೂ ನಿರ್ದೇಶಕರು (ಭ&ಜಾ) ಶ್ರೀ ಅಬ್ದುಲ್ ಅಹದ್ (ಭಾ.ಪೊ.ಸೇ) ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ, ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೊಸ ಅಧ್ಯಕ್ಷರನ್ನು ಸ್ವಾಗತಿಸಿದರು.

Read More

ಬೆಂಗಳೂರು: ಇಂದು ಕರ್ನಾಟಕ ರಾಜ್ಯ ಕುರುಬರ ಜಾಗೃತಿ ಸಮಿತಿ ಪತ್ರಿಕಾಗೋಷ್ಠಿ ನಡೆಸಿತು. ಆ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಮುಂದಿದೆ.. ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರು, ಮಾಜಿ ಸಚಿವ ಎಚ್.ಎಂ ರೇವಣ್ಣ ಅವರು ಮಾತನಾಡಿ ಕಳೆದ 1931 ರಿಂದ ದೇಶದಲ್ಲಿ ಜನಗಣತಿ ಆಗಿಲ್ಲ. ಹೀಗಾಗಿ ಸಮುದಾಯಗಳ ಸ್ಥಿತಿಗತಿ ತಿಳಿಯಬೇಕಿದೆ ಎಂದರು. ಹಾವನೂರು ವರದಿ ಬಳಿಕ ಯಾವ ವರದಿಗಳು ಆಗಲಿಲ್ಲ. ಕಾಂತರಾಜ್ ವರದಿಗೆ 10 ವರ್ಷ,ಅದು ಸರಿ ಇಲ್ಲ ಎಂದವರು ಮತ್ತೆ ಮಾಡಿ ಎಂದಿದ್ದರು. ಇದು ಹಿಂದುಳಿದ ಜಾತಿಗಳ ಪ್ರಶ್ನೆ ಮಾತ್ರ ಅಲ್ಲ. ಎಲ್ಲಾ ಸಮುದಾಯಗಳ ಪರಿಸ್ಥಿತಿ ತಿಳಿಯಲಿದೆ ಎಂದರು. ನಾವು ಕುರುಬ ಸಮುದಾಯಗಳು ಈ ಸಮೀಕ್ಷೆಯಲ್ಲಿ ಭಾಗಿಯಾಗಬೇಕು. ಇದು ಸಿದ್ದರಾಮಯ್ಯ ಉಳಿವಿಗಾಗಿ ಅಂತ ಬಹಳ ಜನ ಮಾತಾಡ್ತಾರೆ. ದೇವರಾಜು ಅರಸು ನಂತರ ಎಲ್ಲಾ ಸಮುದಾಯಗಳ ಏಳಿಗೆ ಬಗ್ಗೆ ಕಾಳಜಿ ಇರುವುದು ಸಿದ್ದರಾಮಯ್ಯ ಅವರಿಗೆ. ಕಾನೂನು ಅಡಿ, ಸಾಂವಿಧಾನಿಕ ಅಡಿ ನಡೆಯುತ್ತಿರುವ ಸಮೀಕ್ಷೆಯಾಗಿದೆ. ಯಾರನ್ನೂ ಒತ್ತಾಯ ಮಾಡಬಾರದು ಅಂತ ಕೋರ್ಟ್ ಹೇಳಿದೆ…

Read More

ಶಿವಮೊಗ್ಗ : ಸಾಗರದಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ಜೊತೆಗೆ ಗುಂಪು ಮನೆ ನಿರ್ಮಾಣಕ್ಕೆ ಗಮನ ಹರಿಸಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಈ ಮೂಲಕ ಸಾಗರದ ನಿವೇಶನ ರಹಿತರಿಗೆ ಶಾಸಕರು ಗುಡ್ ನ್ಯೂಸ್ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆಯಲ್ಲಿ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆ ಆಶ್ರಯ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ನಿವೇಶನ ಕೊಡುವ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ ಎಂದರು. ಎಲ್ಲರಿಗೂ ಪ್ರತ್ಯೇಕ ನಿವೇಶನ ಕೊಡಲು ಕಷ್ಟಸಾಧ್ಯವಾಗಬಹುದು. ಈ ಹಿನ್ನೆಲೆಯಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ, ಎಲ್ಲರಿಗೂ ಸೂರು ಕಲ್ಪಿಸುವ ಉದ್ದೇಶವನ್ನೂ ಹೊಂದಲಾಗಿದೆ. ಈಗಾಗಲೆ ನಿವೇಶನ ನೀಡಲು ಅಗತ್ಯವಾದ ಜಾಗವನ್ನು ಕೆಲವು ಕಡೆಗಳಲ್ಲಿ ಗುರುತಿಸಲಾಗಿದ್ದು, ಅದನ್ನು ಮಂಜೂರಾತಿಗೆ ಕಳಿಸಲಾಗುತ್ತದೆ ಎಂದು ಹೇಳಿದರು. ಹಿಂದೆ ಕೆಲವರು ಮನೆ ಕಟ್ಟಿಕೊಳ್ಳಲು ಆಶ್ರಯ ನಿವೇಶನ ಪಡೆದಿದ್ದು ಮನೆಕಟ್ಟದೆ ನಿವೇಶನ ಹಾಗೆ ಬಿಟ್ಟಿದ್ದಾರೆ. ಆಶ್ರಯ ನಿವೇಶನ ಪಡೆದು ಯರ‍್ಯಾರು ಮನೆ ಕಟ್ಟಿಲ್ಲವೋ ಅಂತಹವರಿಗೆ…

Read More

ಮಂಡ್ಯ : ಕೆಎಂಎಫ್ ಸಂಸ್ಥೆಯು ಹಾಲಿನಿಂದ ತಯಾರಿಸುವ ಉಪ ಉತ್ಪನ್ನಗಳ ಮಾದರಿಯಲ್ಲೇ ಕೋಳಿ ಮಾಂಸದ ವಿವಿಧ ಭಾಗಗಳನ್ನು ಪ್ರತ್ಯೇಕಿಸಿ ರಿಟೇಲ್ ಮಳಿಗೆಗಳಲ್ಲಿ ಮಾರಾಟ ಮಾಡುವ ಮಹತ್ವದ ಯೋಜನೆಯನ್ನು ನಮ್ಮ ಒಕ್ಕೂಟವು ಈಗಾಗಲೇ ರೂಪುರೇಷೆ ತಯಾರಿಸಿದೆ ಎಂದು ಒಕ್ಕೂಟದ ನೂತನ ಅಧ್ಯಕ್ಷ ಎಂ.ಆರ್.ಬಾಲಕೃಷ್ಣ ಹೇಳಿದರು. ಇಂದು ಮಂಡ್ಯದ ಮದ್ದೂರು ನಗರದ ಶಿವಪುರದ ಒಕ್ಕೂಟದ ಕಛೇರಿ ಆವರಣದಲ್ಲಿ ಮಂಡ್ಯ ಜಿಲ್ಲಾ ಕೋಳಿ ಉತ್ಪಾದಕ ರೈತರ ಸಹಕಾರ ಒಕ್ಕೂಟಕ್ಕೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಿತು. ಇಂದಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಆರ್.ಬಾಲಕೃಷ್ಣ, ಉಪಾಧ್ಯಕ್ಷರಾಗಿ ಡಿ.ಕೃಷ್ಣಪ್ಪ ಹಾಗೂ ನಿರ್ದೇಶಕರಾಗಿ ಕೆ.ಕೃಷ್ಣಯ್ಯ, ಗೋಪಾಲ, ಬೆಟ್ಟಸ್ವಾಮಿ, ಆತ್ಮಾನಂದ, ಎಂ.ವಿ.ವೆಂಕಟೇಶ್, ಜೋಗಿಗೌಡ, ಬಿ.ಗಿರೀಶ್, ಆರ್.ಸಿದ್ದಪ್ಪ, ಎಸ್.ಎಲ್. ಜಯಲಿಂಗೇಗೌಡ, ಸಿ.ಕೆಂಪರಾಜು, ಎಂ.ಸಿ.ಯೋಗೇಶ್, ಎಲ್.ಸಿ.ಪ್ರವೀಣ್ ಕುಮಾರ್, ಚುನಾಯಿತರಾದರು‌. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಬಾಲಕೃಷ್ಣ ಅವರು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಂಡ್ಯ ಜಿಲ್ಲಾ ಕೋಳಿ ಉತ್ಪಾದಕ ರೈತರ ಸಹಕಾರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಕೆಎಂಎಫ್ ಸಂಸ್ಥೆಯು ಹಾಲಿನಿಂದ ತಯಾರಿಸುವ ಉಪ ಉತ್ಪನ್ನಗಳ ಮಾದರಿಯಲ್ಲೇ ಕೋಳಿ…

Read More

ಬೆಂಗಳೂರು: ಪ್ರತಿ ದಿನ ಜಿಲ್ಲಾವಾರು ಕನಿಷ್ಠ ಶೇಕಡಾ 10ರಷ್ಟು ಸಮೀಕ್ಷೆ ಗುರಿಯನ್ನು ಸಾಧಿಸಬೇಕು. ಪ್ರಾದೇಶಿಕ ಆಯುಕ್ತರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಮೀಕ್ಷೆ ಪ್ರಗತಿಯ ಪರಿಶೀಲನೆ ನಡೆಸಬೇಕು ಮತ್ತು ಸಕ್ರಿಯವಾಗಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಗಣತಿದಾರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂದು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಕುರಿತಂತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜೊತೆಗೆ ವೀಡಿಯೋ ಸಂವಾದ ನಡೆಸಿದರು. * ಸಮೀಕ್ಷೆ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದ್ದು, ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳ ಕಾರಣ ಸಮೀಕ್ಷೆ ನಿಧಾನವಾಗಿತ್ತು. ಈಗ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇಂದಿನಿಂದ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. * ಸಮೀಕ್ಷೆ ಕಾರ್ಯಕ್ಕೆ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ತಾಂತ್ರಿಕ ತೊಂದರೆಗಳು ಎದುರಾದರೆ ತಕ್ಷಣ…

Read More

ಶಿವಮೊಗ್ಗ : ಜಿಲ್ಲೆಯ ಸಾಗರದ ಸರ್ಕಾರಿ ಬಸ್ ನಿಲ್ದಾಣವನ್ನು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತಿದ್ದು, ಡೆಲ್ಟಾ ಯೋಜನೆಯಡಿ 1 ಕೋಟಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನ 2 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಸದ್ಯದಲ್ಲಿಯೆ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಶುಕ್ರವಾರ ವಿವಿಧ ಅಭಿವೃದ್ದಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಶಾಸಕನಾಗಿದ್ದ ಸಂದರ್ಭದಲ್ಲಿಯೆ ಹಿಂದೆ ಲೋಕಾರ್ಪಣೆ ಮಾಡಲಾಗಿತ್ತು. ಅಂದಿನಿಂದ ಹೊಸ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಇದೀಗ ಪ್ರಯಾಣಿಕರ ನಿರೀಕ್ಷಣಾ ಕೊಠಡಿಗಳಿಗೆ ಮೇಲ್ಚಾವಣಿ, ಮುಖ್ಯ ಕಟ್ಟಡ ಹಾಗೂ ನೆಲಕ್ಕೆ ಗ್ರಾನೈಟ್, 8 ಬಸ್ ನಿಲ್ಲಿಸುವುದಕ್ಕೆ ಹೊಸದಾಗಿ 3 ಬಸ್ ನಿಲ್ಲಿಸಲು ಜಾಗ ವಿಸ್ತರಿಸುವುದು, ಸುಸಜ್ಜಿತ ಶೌಚಾಲಯ, ಶುದ್ದ ಕುಡಿಯುವ ನೀರಿನ ಘಟಕ, ಪಾರ್ಕಿಂಗ್ ವ್ಯವಸ್ಥೆ ವಿಸ್ತರಣೆ, ಉಪಹಾರ ಗೃಹ ನವೀಕರಣ, ಮಹಿಳೆಯರಿಗೆ…

Read More

ಶಿವಮೊಗ್ಗ: ಮಹಿಳೆಯರ ಸಬಲೀಕರಣಕ್ಕಾಗಿ ರಚನೆಯಾದಂತ ಸಾಗರ ತಾಲ್ಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷರಾಗಿ ಶ್ಯಾಮಲಾ ದೇವರಾಜ್, ಉಪಾಧ್ಯಕ್ಷರಾಗಿ ಲತಾ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಮಟ್ಟದ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಾಗರ ತಾಲ್ಲೂಕಿನಾಧ್ಯಂತ ಗ್ರಾಮ ಪಂಚಾಯ್ತಿಗೊಂದು ಒಕ್ಕೂಟ ರಚನೆಯಾಗಿದೆ. ಸಾಗರ ತಾಲ್ಲೂಕಿನಲ್ಲಿ 35 ಒಕ್ಕೂಟದ ಸದಸ್ಯರಿದ್ದು, ಪ್ರತಿ ಎರಡು ವರ್ಷಗಳಿಗೊಮ್ಮೆ ಸಾಗರ ತಾಲ್ಲೂಕು ಮಟ್ಟದ ಒಕ್ಕೂಟಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಂದು ಸಾಗರ ತಾಲ್ಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷರಾಗಿ ಶ್ಯಾಮಲಾ ದೇವರಾಜ್, ಉಪಾಧ್ಯಕ್ಷರಾಗಿ ಲತಾ, ಕಾರ್ಯದರ್ಶಿಯಾಗಿ ಮಮತಾ, ಸಹ ಕಾರ್ಯದರ್ಶಿಯಾಗಿ ಶಾಂತಾ ಬಿ.ಸಿ ಹಾಗೂ ಖಜಾಂಚಿಯಾಗಿ ವನಿತಾ ಆಯ್ಕೆಯಾಗಿದ್ದಾರೆ. ಏನಿದು ತಾಲ್ಲೂಕು ಮಟ್ಟದ ಒಕ್ಕೂಟ? ಏನಿದರ ಕಾರ್ಯ ನಿರ್ವಹಣೆ? ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆಯಡಿ ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ತಲುಪಿಸುವಂತ ಕೆಲಸವನ್ನು ಮಾಡುವುದಕ್ಕೆ ರಚನೆಯಾದಂತ ಒಕ್ಕೂಟ ಇದಾಗಿದೆ. ಪ್ರತಿ ಗ್ರಾಮ ಪಂಚಾಯ್ತಿ…

Read More

ಮಂಡ್ಯ: ಇಂದು ಸಂಜೆ ಕೆ ಆರ್ ಎಸ್ ನಲ್ಲಿ ಕಾವೇರಿ ಆರತಿಗೆ ಚಾಲನೆ ನೀಡಲಾಗುತ್ತದೆ. ವಿರೋಧದ ನಡುವೆಯೂ KRS ನಲ್ಲಿ ಕಾವೇರಿ ಆರತಿ ನಡೆಸಲಾಗುತ್ತಿದೆ. ಈ ಕಾವೇರಿ ಆರತಿ ವಿರೋಧಿಸಿ ರೈತರ ಪ್ರತಿಭಟನೆ ನಡೆಸಲಾಗುತ್ತಿದೆ. ಕಪ್ಪು ಪಟ್ಟಿ ಕಟ್ಟಿ ರೈತ ಸಂಘಟನೆಗಳಿಂದ KRS ಚಲೋ ನಡೆಸುತ್ತಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರ ಪ್ರತಿಭಟನೆ ನಡೆಸಲಾಗುತ್ತಿದೆ. ಹೋರಾಟಕ್ಕೆ ಬಸ್ ನಲ್ಲಿ ಮಂಡ್ಯದಿಂದ KRS ಗೆ ನೂರಾರು ರೈತರು ತೆರಳಿದ್ದಾರೆ. ದಸರಾ ಅಂಗವಾಗಿ ಇಂದಿನಿಂದ KRSನಲ್ಲಿ ಕಾವೇರಿ ಆರತಿ ಆರಂಭಗೊಳ್ಳಲಿದೆ. ಇಂದಿನಿಂದ 5 ದಿನಗಳ ಕಾಲ ಸಾಂಕೇತಿಕವಾಗಿ ಕಾವೇರಿ ಆರತಿ ನಡೆಯಲಿದೆ. ಕಾವೇರಿ ಆರತಿ ನಡೆಸುತ್ತಿರುವಂತ ರಾಜ್ಯ ಸರ್ಕಾರದ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಾವೇರಿ ಆರತಿ ಮಾಡದಂತೆ ರೈತರ ಎಚ್ಚರಿಕೆ ನೀಡಿದ್ದಾರೆ. ಕೋರ್ಟ್ ನಲ್ಲಿ ಮಧ್ಯಂತರ ಆದೇಶ ಇದ್ದರು ಕಾವೇರಿ ಆರತಿಗೆ ಹಠ ಬಿದ್ದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯ…

Read More

ಬೆಂಗಳೂರು: ನಗರದಲ್ಲಿ ಸೀರೆ ಅಂಗಡಿಯಲ್ಲಿ ಸೀರೆ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಸಾರ್ವಜನಿಕರ ಎದುರು ಅಂಗಡಿ ಮಾಲೀಕ ಹಿಗ್ಗಾಮುಗ್ಗ ಥಳಿಸಿದ್ದರು. ಗುಪ್ತಾಂಗಕ್ಕೂ ಒದ್ದು ಹಲ್ಲೆ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು ಅಂಗಡಿ ಮಾಲೀಕ ಉಮೇದ್ ರಾಮ್ ಬಂಧಿಸಿದ್ದಾರೆ. ಬೆಂಗಳೂರಲ್ಲಿ ಸ್ಯಾರಿ ಅಂಗಡಿಯೊಂದರಲ್ಲಿ ಸೀರೆ ಕದ್ದ ಕಾರಣಕ್ಕೆ ಮಹಿಳೆಯೊಬ್ಬರನ್ನು ಅಂಗಡಿ ಮಾಲೀಕ ಉಮೇದ್ ರಾಮ್ ಎಂಬಾತ ಸಾರ್ವಜನಿಕರ ಎದುರು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಂತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಸುಮೋಟೋ ಕೇಸ್ ದಾಖಲಿಸಿದಂತ ಪೊಲೀಸರು ಸೀರೆ ಅಂಗಡಿ ಮಾಲೀಕ ಉಮೇದ್ ರಾಮ್ ಎಂಬಾತನನ್ನು ಕೆ ಆರ್ ಮಾರ್ಕೆಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಂದಹಾಗೇ ಆಂಧ್ರಪ್ರದೇಶ ಮೂಲದ ಹಂಪಮ್ಮ ಎಂಬಾಕೆ ಸೀರೆ ಅಂಗಡಿಯಲ್ಲಿ 50ಕ್ಕೂ ಹೆಚ್ಚು ಸೀರೆಗಳನ್ನು ಕದ್ದಿದ್ದರು. ಈ ಎಲ್ಲಾ ದೃಶ್ಯಾವಳಿಯು ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಿನ್ನೆ ಸೀರೆ ಕದಿಯುತ್ತಿದ್ದಂತ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದರು. ಈ ಕಾರಣಕ್ಕೆ ಅಂಗಡಿಯ ಮುಂಭಾಗಕ್ಕೆ ಎಳೆದು…

Read More