Author: kannadanewsnow09

ನವದೆಹಲಿ: ದೇಶದ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ಬಂಪರ್ ಗಿಫ್ಟ್ ನೀಡಿದ್ದಾರೆ. ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ಕಾರ್ಮಿಕ ಸಂಹಿತೆಗಳನ್ನು ಅಧಿಸೂಚನೆ ಹೊರಡಿಸಿದ್ದಾರೆ. ಈ ಅಧಿಸೂಚನೆಯಂತೆ ಇನ್ಮುಂದೆ ಎಲ್ಲಾ ಕಾರ್ಮಿಕರಿಗೆ ಸಕಾಲಿಕ ಕನಿಷ್ಠ ವೇತನ ಖಾತರಿ ಜಾರಿಯಾಗಲಿದೆ. ಭಾರತದ ಬಹುನಿರೀಕ್ಷಿತ ಕಾರ್ಮಿಕ ಸುಧಾರಣೆಗಳು ಇಂದು ಜಾರಿಗೆ ಬಂದಿದ್ದು, ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಅಧಿಕೃತವಾಗಿ ಅಧಿಸೂಚನೆ ಮತ್ತು ನವೆಂಬರ್ 21, 2025 ರಿಂದ ಜಾರಿಗೆ ತರಲಾಗಿದೆ. ಈ ಸುಧಾರಣೆಗಳು ಕೇವಲ ಸಾಮಾನ್ಯ ಬದಲಾವಣೆಗಳಲ್ಲ, ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಮಿಕರ ಕಲ್ಯಾಣಕ್ಕಾಗಿ ತೆಗೆದುಕೊಂಡ ಪ್ರಮುಖ ಹೆಜ್ಜೆಯಾಗಿದೆ ಎಂದು ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. “ಇಂದಿನಿಂದ, ದೇಶದಲ್ಲಿ ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲಾಗಿದೆ” ಎಂದು ಮಾಂಡವಿಯಾ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಮನ್ಸುಖ್ ಮಾಂಡವಿಯಾ ಎಕ್ಸ್ ಪೋಸ್ಟ್ ನಲ್ಲಿ ಈ ಕೆಳಗಿನಂತಿದೆ… ಮೋದಿ ಸರ್ಕಾರದ ಭರವಸೆ: ಪ್ರತಿಯೊಬ್ಬ ಕೆಲಸಗಾರನಿಗೂ ಗೌರವ! ದೇಶದಲ್ಲಿ ಇಂದು ಹೊಸ ಕಾರ್ಮಿಕ ಸಂಹಿತೆಗಳು ಜಾರಿಗೆ…

Read More

ಬೆಂಗಳೂರು: “ವೃತ್ತಿ ಯಾವುದೇ ಇರಲಿ. ಮೇಲು- ಕೀಳು ಎಂಬ ಮನೋಭಾವ ಬಿಟ್ಟುಬಿಡಿ. ಪ್ರಾಮಾಣಿಕತೆ, ನೈತಿಕೆ ಉಳಿಸಿಕೊಂಡಲ್ಲಿ ವೃತ್ತಿಯಲ್ಲಿ ಯಶಸ್ಸು ಕಾಣಬಹುದು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎಐಸಿಟಿಇ) ಮಾಜಿ ಅಧ್ಯಕ್ಷ ಅನಿಲ್ ಸಹಸ್ರಬುಧೆ ಹೇಳಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಆಯೋಜಿಸಿದ್ದ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ `ಸಾರ್ವತ್ರಿಕ ಮಾನವೀಯ ಮೌಲ್ಯ’ ವಿಷಯ ಕುರಿತು ಮಾತನಾಡಿದ ಅವರು, “ವೃತ್ತಿಯಲ್ಲಿ ಮೇಲು- ಕೀಳು ಎಂಬುದು ಇಲ್ಲ. ವೃತ್ತಿಯಾವುದೇ ಇರಲಿ ಅದಕ್ಕೆ ಗೌರವ ನೀಡುವುದನ್ನು ನೀವು ಕಲಿಯಬೇಕು. ಅದು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡಲಿದೆ ಎಂದರು. ವಿದ್ಯಾರ್ಥಿಗಳು ಘಟಿಕೋತ್ಸವದ ವೇಳೆ ಸತ್ಯದಿಂದ ನಡೆಯುತ್ತೇನೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸುತ್ತೀರಿ, ಇದನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಂಡು ಹೋಗಬೇಕು. ಅಲ್ಲದೆ, ನೀವು ಜೀವನದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿ.ಎಚ್.ಡಿ ಗೆ ನಿಮ್ಮ ಕಲಿಕೆ ಮುಗಿಯಿತು ಎಂದು ಭಾವಿಸುವುದು ತಪ್ಪು. ಕಲಿಕೆ ಎಂಬುದು ಜೀವನದಲ್ಲಿ ನಿರಂತರ. ಶಿಕ್ಷಕರು ಸಹ ಪ್ರತಿನಿತ್ಯ ಅಪ್ಡೇಟ್ ಆಗಬೇಕು. ಏಕೆಂದರೆ, ತಂತ್ರಜ್ಞಾನ ವೇಗವಾಗಿ…

Read More

ಬೆಂಗಳೂರು: ನನ್ನ ಕರ್ತದಲ್ಲೇ ಗುಂಪುಗಾರಿಕೆ ಅನ್ನೋದು ಇಲ್ಲ. ನಾನು ಯಾವುದೇ ಬಣದ ನಾಯಕನೂ ಅಲ್ಲ. ನಾನು ಪಕ್ಷದ ಕಟ್ಟಾಳು. ನಾನು 140 ಮಂದಿ ಶಾಸಕರ ಅಧ್ಯಕ್ಷ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ದೆಹಲಿಗೆ ಶಾಸಕರು ತೆರಳಿರೋ ಬಗ್ಗೆ ಸುದ್ದಿಗಾರರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಸಂಪುಟ ಪುನಾರಚನೆಯ ಬಗ್ಗೆ ಸಿಎಂ ಸಿದ್ಧರಾಮಯ್ಯ ಹೇಳಿದ್ದರು. ಆ ಕಾರಣಕ್ಕಾಗಿ ಅವರು ಮಂತ್ರಿ ಸ್ಥಾನ ಕೇಳೋದಕ್ಕೆ ದೆಹಲಿಗೆ ತೆರಳಿರಬೇಕೇನೋ ಎಂದರು. ಶಾಸಕರಂದ ಮೇಲೆ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡೋದು ಸಾಮಾನ್ಯವಾಗಿದೆ. ಅದೇ ಕಾರಣಕ್ಕಾಗಿ ಅವರು ದೆಹಲಿಗೆ ಹೋಗಿರಬಹುದು. ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಲು ಕಾಂಗ್ರೆಸ್ ಶಾಸಕರು ದೆಹಲಿಗೆ ಹೋದ್ರೆ ತಪ್ಪೇನು? ಈ ಹಿಂದೆ ಸಿದ್ದರಾಮಯ್ಯ ಜೊತೆಗೆ ಕೆಲವರು ದೆಹಲಿಗೆ ಹೋಗಿರಲಿಲ್ಲವೇ ಎಂದರು. ನಾನು ಯಾರನ್ನು ದೆಹಲಿಗೆ ಕರೆದುಕೊಂಡು ಹೋಗಿಲ್ಲ. ಮುಖ್ಯಮಂತ್ರಿ ಹೈಕಮಾಂಡ್ ಹೇಳಿದಂತೆ ಕೇಳುತ್ತಾರೆ. ಸಿದ್ಧರಾಮಯ್ಯ ಅವರ ವಿಚಾರ ಹೇಳಿದ್ದಾರೆ. ನಾನೇ ಐದು ವರ್ಷ ಸಿಎಂ ಎಂದಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್. ನಾವೆಲ್ಲರೂ…

Read More

ಶಿವಮೊಗ್ಗ : ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರಾದಂತ ಜಿ.ನಾಗೇಶ್ ಅವರಿಗೆ ಶ್ರೀ ಮುರುಘರಾಜೇಂದ್ರ ಸಂಸ್ಥಾನ ಮಠದಿಂದ ಸಮಾಜಸೇವಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂನ ಮುರುಘಾಮಠದಲ್ಲಿ ಗುರುವಾರ ಶ್ರೀ ಮುರುಘರಾಜೇಂದ್ರ ಸಂಸ್ಥಾನ ಮಠದ ವತಿಯಿಂದ ಏರ್ಪಡಿಸಿದ್ದ ಕಂಚಿನ ರಥ ಕಾರ್ತಿಕ ರಥ ದೀಪೋತ್ಸವ ಮತ್ತು ಭಾವೈಕ್ಯ ಸಮ್ಮೇಳನದಲ್ಲಿ ಕೆಯುಡಬ್ಲ್ಯೂಜೆ ನಿಕಟಪೂರ್ವ ಅಧ್ಯಕ್ಷ, ಸಾಗರ ಸುತ್ತ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಜಿ.ನಾಗೇಶ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಣಂದೂರು ಲಿಂಗಪ್ಪ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಗಳು, ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು, ಕುಂದುಗೋಳು ಮಠದ ಶ್ರೀ ಅಭಿನವ ಬಸವಣಜ್ಜ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಡಾ. ಶಾಲಿನಿ ನಾಲ್ವಾಡ್, ಸಂಧ್ಯಾ ಶೆಣೈ, ಡಾ. ಅರ್.ಸಿ.ಜಗದೀಶ್, ಸ್ವಾಮಿರಾವ್, ಬಿ.ಟಾಕಪ್ಪ, ವಿ.ಟಿ.ಸ್ವಾಮಿ, ವಿವಿಧ…

Read More

ಮಂಡ್ಯ: ಭವಿಷ್ಯದಲ್ಲಿ ಪಕ್ಷ ಸಂಘಟನೆ ಡಿಕೆಶಿಗೆ ಸಿಎಂ ಪಟ್ಟ ಸಿಗಬೇಕು. ಕೊಟ್ಟ ಮಾತಿಗೆ ಹೈಕಮಾಂಡ್ ತಪ್ಪಬಾರದು. ಡಿಕೆಶಿ ಶ್ರಮಕ್ಕೆ ತಕ್ಕ ಫಲ ಸಿಗಬೇಕು ಎಂಬುದಾಗಿ ಡಿಕೆಶಿ ಪರ ಶಾಸಕ ಕದಲೂರು ಉದಯ್ ಬ್ಯಾಟ್ ಬೀಸಿದ್ದಾರೆ. ಇಂದು ಡಿಸಿಎಂ ಡಿಕೆಶಿ ಸಿಎಂ ಚರ್ಚೆ ವಿಚಾರವಾಗಿ ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್ ಮಾತನಾಡಿ, ಹೈಕಮಾಂಡ್ ಮಟ್ಟದಲ್ಲಿ ಇದು ತೀರ್ಮಾನ ಆಗಿರುತ್ತೆ. ಒಬ್ಬೊಬ್ಬರು ಒಂದೊಂದು ಮಾತು ಹೇಳ್ತಾರೆ ಅಷ್ಟೆ. ಇದಕ್ಕೆಲ್ಲ ಹೈಕಾಮಂಡ್ ಪರಿಹಾರ ಕೊಡಬೇಕು. ಬಹಳಷ್ಟು ಶಾಸಕರಿಗೆ ಅಭಿಲಾಷೆ ಇದೆ ಆ ನಿಟ್ಟಿನಲ್ಲಿ ದೆಹಲಿಗೆ ಶಾಸಕರು ಹೋಗಿದ್ದಾರೆ ಅಷ್ಟೆ. ಪಕ್ಷಕ್ಕೆ ದಕ್ಕೆ ಆಗಬಾರದು ಅನ್ನೊ ನಿಟ್ಟಿನಲ್ಲಿ ಭೇಟಿ. ಸಿಎಂ ಚರ್ಚೆ ವಿಚಾರಕ್ಕೆ ತೆರೆ ಹೆಳೆಯೋದಕ್ಕೆ ಭೇಟಿ ಎಂದರು. ನಮಗಿಂತ ವಿರೋಧ ಪಕ್ಷದವರೇ ಹೆಚ್ಚು ಚರ್ಚೆ ಮಾಡ್ತಿದ್ದಾರೆ. ನಮ್ಮ ಪಾರ್ಟಿ ತೀರ್ಮಾನ ವಿರೋಧ ಪಕ್ಷಕ್ಕೆ ಏನು ಸಂಬಂಧ? 140 ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದೇವೆ ಯಾವುದೇ ಅನುಮಾನ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ಈ ಚರ್ಚೆ ಬೇಡ ತೆರೆ ಎಳೆಯಿರಿ ಅನ್ನೋದಕ್ಕೆ…

Read More

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆವಿ ಯಲಹಂಕಾ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 23.11.2025 (ಭಾನುವಾರ) ರಂದು ಬೆಳಗ್ಗೆ 11:00 ಯಿಂದ ಸಂಜೆ 04:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. “ಕೆಎಂಎಫ್, ವೈಎನ್‌ಕೆ ನ್ಯೂ ಟೌನ್ 208, 407, ‘ಬಿ’ ಸೆಕ್ಟರ್, ಸಿಬಿ ಸಾಂದ್ರ, ಅಲ್ಲಾಳಸಂದ್ರ, ಶಾರದನಗರ, ಜನಪ್ರಿಯ, ಅನ್ರಿಯಾ, ಮಾರುತಿನಗರ, ಕೋಗಿಲು, ಬಿಬಿ ರಸ್ತೆ ಯಲಹಂಕ ಇತ್ಯಾದಿ.ಬಾಗಲೂರು ಕ್ರಾಸ್, ವೆಂಕಟಾಲ್, ನಿಟ್ಟೆ ಕಾಲೇಜು, ಬಿಎಸ್‌ಎಫ್, ಐಎಎಫ್, ಇಂಟರ್‌ನ್ಯಾಶನಲ್ ಸ್ಕೂಲ್, ಕಾಗೆನ್‌ಅಡ್ಯಾನ್‌ಕಾಲೇಜ್, ಕಾಗೆನ್‌ಅಡ್ಯಾನ್‌ಕಾಲೇಜ್, ರಾಯಣ್ಣನ ಶಾಲೆ ಪಾಲನಹಳ್ಳಿ, ದ್ವಾರಖಾನಗರ ಇತ್ಯಾದಿ.ಪೂರ್ವಂಕರ RMZ ಗ್ಯಾಲೇರಿಯಾ. ಮತ್ತು ಸುತ್ತಮುತ್ತಲಿನ ಪ್ರದೇಶಲ್ಲಿ ಕರೆಂಟ್ ಇರೋದಿಲ್ಲ. 66/11ಕೆವಿ ಅಬ್ಬಿಗೆರೆ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 23.11.2025 (ಭಾನುವಾರ) ರಂದು ಬೆಳಗ್ಗೆ 10:00 ಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಮ್ಮಗೊಂಡನಹಳ್ಳಿ, ರಾಘವೇಂದ್ರ ಬಡಾವಣೆ, ಲಕ್ಷೀಪುರ, ವಡೇರಹಳ್ಳಿ, ಅಬ್ಬಿಗೆರೆ ಇಂಡಸ್ಟ್ರಿಯಲ್ ಎರಿಯ, ಸಿಂಗಾಪುರ, ಅಬ್ಬಿಗೆರೆ, ಪೈಪ್ ಲೈನ್ ರೋಡ್,ನಿಸರ್ಗ ಬಡಾವಣೆ, ಕೆಂಪೆಗೌಡ…

Read More

ಮೈಸೂರು: ಮುಂದಿನ ಎರಡೂವರೆ ವರ್ಷವೂ ನಾನೇ ಮುಖ್ಯಮಂತ್ರಿಯಾಗಿ ಇರಲಿದ್ದೇನೆ. ಬಜೆಟ್ ಕೂಡ ಮಂಡಿಸುತ್ತೇನೆ. ನಿಮಗೆ ಯಾವುದೇ ಅನುಮಾನ ಬೇಡ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಇನ್ನೂ ಎರಡೂವರೆ ವರ್ಷ ಸಿಎಂ ಆಗಿರಲಿದ್ದೇನ. ಎರಡು ಬಜೆಟ್ ಕೂಡ ಮಂಡಿಸುತ್ತೇನೆ. ಮತ್ತೆ ಮತ್ತೆ ಸಿಎಂ ಬದಲಾವಣೆ ಬಗ್ಗೆ ಯಾಕೆ ಕೇಳುತ್ತೀರಿ. ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ಯಾ ಎಂಬುದಾಗಿ ಪ್ರಶ್ನಿಸಿದರು. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆಯ ಸೇರಿ ಎಲ್ಲದರ ಬಗ್ಗೆಯೂ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡುತ್ತದೆ. ಅದರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾತನಾಡಿದ್ಯಾ? ಇಲ್ಲ ತಾನೇ? ಹಾಗಿದ್ದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ಮತ್ತೆ ಮತ್ತೆ ಯಾಕೆ ಪ್ರಶ್ನೆ ಕೇಳುತ್ತೀರಿ ಎಂದರು.

Read More

ಬೆಂಗಳೂರು: ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ‌ ಕಠಿಣ ಕ್ರಮಕೈಗೊಳ್ಳಲಿದೆ. 18 ವರ್ಷ ಮೀರದೆ ನಿಶ್ಚಿತಾರ್ಥ ಮಾಡಿದರೂ ಶಿಕ್ಷೆಗೆ ಗುರಿ ಪಡಿಸಲಾಗುವುದು. ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯತಿಗಳಿಗೆ ಇಲಾಖೆ ವತಿಯಿಂದ ‌ 25 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದ ಸಚಿವರು, ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗಾಗಿಯೇ ಅಕ್ಕ ಪಡೆಯನ್ನು ಆರಂಭಿಸಲಾಗುತ್ತಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕ ಎಂದರು. ಅಧಿಕಾರ ಎಂಬುದು ಶಾಶ್ವತ ಅಲ್ಲ, ಅದು ಸಿಗುವ ಅವಕಾಶ. ಅದನ್ನು ಸೂಕ್ತವಾಗಿ ಬಳಸಿಕೊಂಡು ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ -25 ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರೊಡನೆ ಮಕ್ಕಳ ಸಮಾಲೋಚನೆ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪ್ರತಿಯೊಬ್ಬರು ಜೀವನದಲ್ಲಿ ತಮ್ಮದೇ ಆದ ಗುರಿ ಇಟ್ಟು ಕೊಳ್ಳಬೇಕು ಎಂದು ಕರೆ ನೀಡಿದರು. ನಾವು…

Read More

ನವದೆಹಲಿ: ಮಧ್ಯ ದೆಹಲಿಯ ಪ್ರಮುಖ ಶಾಲೆಯೊಂದರ 10 ನೇ ತರಗತಿಯ 16 ವರ್ಷದ ವಿದ್ಯಾರ್ಥಿ ಮಂಗಳವಾರ ಮಧ್ಯಾಹ್ನ ಪಶ್ಚಿಮ ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡನು. ಪೊಲೀಸರು ವಶಪಡಿಸಿಕೊಂಡ ಟಿಪ್ಪಣಿಯಲ್ಲಿ, ತನ್ನ ಶಿಕ್ಷಕರು ಮತ್ತು ಶಾಲಾ ಪ್ರಾಂಶುಪಾಲರು ತನ್ನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವನು ಸಾಯುವ ಸಮಯದಲ್ಲಿ ಇನ್ನೂ ಶಾಲಾ ಸಮವಸ್ತ್ರದಲ್ಲಿದ್ದನು. ಈ ವಿಷಯ ತಿಳಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪಶ್ಚಿಮ ದೆಹಲಿಯ ಮೆಟ್ರೋ ನಿಲ್ದಾಣದ ಕಟ್ಟಡದಿಂದ ಬಾಲಕನೊಬ್ಬ ಬಿದ್ದಿದ್ದಾನೆ ಎಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ ಎಂದು ಹೇಳಿದರು. ತಂಡವೊಂದು ಸ್ಥಳಕ್ಕೆ ತಲುಪಿದಾಗ, ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವನು ತಲುಪುವಾಗಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು. ಅವನ ಬಳಿ ಒಂದು ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಅವನ ಶಾಲಾ ಶಿಕ್ಷಕರು ಅವನೊಂದಿಗೆ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಯಾವುದೇ ವಿದ್ಯಾರ್ಥಿಯನ್ನು ತಾನು ಹೇಗೆ ನಡೆಸಿಕೊಳ್ಳಬೇಕೆಂದು ಅವನು…

Read More

ಬೆಂಗಳೂರು: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ವಿವಿಧ ಇಲಾಖೆ/ನಿಗಮಗಳಲ್ಲಿನ 973 ಖಾಲಿ ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೈದರಾಬಾದ್ ಕರ್ನಾಟಕ (ಹೆಚ್ ಕೆ) ಕೋಟಾ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಡಿ.20, 21, ಜನವರಿ 24 ಮತ್ತು ಫೆಬ್ರುವರಿ 22ರಂದು ಪರೀಕ್ಷೆಗಳು ನಡೆಯಲಿವೆ. ಇದರಲ್ಲಿ 391 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೈದರಾಬಾದ್ ಕರ್ನಾಟಕ ಕೋಟಾ ಕ್ಲೇಮ್ ಮಾಡದವರಿಗೆ (ನಾನ್ ಹೆಚ್ ಕೆ) ಜನವರಿ 10, 11, 12 ಮತ್ತು 25ರಂದು ವಿವಿಧ ಪರೀಕ್ಷೆಗಳು ನಡೆಯಲಿವೆ. ಇದರಲ್ಲಿ 582 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ ಕೆ ಹಾಗೂ ನಾನ್- ಹೆಚ್ ಕೆ – ಎರಡೂ ಪರೀಕ್ಷೆಗಳಲ್ಲಿ ಋಣಾತ್ಮಕ ಮೌಲ್ಯಮಾಪನ ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ ಕಡಿತ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.…

Read More