Author: kannadanewsnow09

ನವದೆಹಲಿ: ಬಿಜೆಪಿಯಿಂದ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಎಲ್ಲಾ ಸಿದ್ಧತೆ ತಯಾರಿ ನಡೆಯುತ್ತಿವೆ. ಈ ನಡುವೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವೀಕ್ಷಕರಾಗಿ ಬಿಜೆಪಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ನೇಮಕ ಮಾಡಲಾಗಿದೆ. ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ. ಅದರ್ಲಲಿ ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿಯು ಗೌರವಾನ್ವಿತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷದ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಕೇಂದ್ರ ವೀಕ್ಷಕರಾಗಿ ನೇಮಿಸಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/decision-to-provide-quality-infrastructure-in-savadatti-renuka-yellamma-constituency-cm-siddaramaiah/ https://kannadanewsnow.com/kannada/ccpa-orders-ola-app-to-issue-refund-option-auto-ride-receipt/

Read More

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಇನ್ನೂ ಒಂದು ವಾರ ಮಳೆಯಾಗಲಿ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂದಿನ 24 ಗಂಟೆಯಲ್ಲಿ 10 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾವೇರಿ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ಮೈಸೂರು, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಕರಾವಳಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗರುದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದೆ. ಬೆಂಗಳೂರಿನಲ್ಲೂ ಮುಂದಿನ 24 ಗಂಟೆಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಹಗುರದಿಂದ ಸಾಧಾರಣ…

Read More

ಬೆಳಗಾವಿ : ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರವಾಸೋದ್ಯಮ ಮಂಡಳಿ ಹಾಗೂ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆ ನಡೆಸಲಾಗಿದೆ. ಈ ಕ್ಷೇತ್ರಕ್ಕೆ ಸುಮಾರು ಎರಡು ಕೋಟಿ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವನೀರು, ಶೌಚಾಲಯ, ಪಾರ್ಕಿಂಗ್, ತಂಗುದಾಣದ ವ್ಯವಸ್ಥೆಯನ್ನು ಪೂರೈಸಬೇಕಾಗಿದೆ. ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಈ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಕ್ಷೇತ್ರದಲ್ಲಿ 1087ಎಕರೆ ಪ್ರದೇಶ ಲಭ್ಯವಿದ್ದು, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವ ಉದ್ದೇಶಕ್ಕೆ ಈ ಪ್ರದೇಶವನ್ನು ಬಳಸಿಕೊಳ್ಳಲಾಗುವುದು. ಮನುಷ್ಯರಿಗೆ ದಾಸೋಹ ವ್ಯವಸ್ಥೆಯಿರುವಂತೆ ರಾಸುಗಳಿಗೂ ಮೇವು ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು.…

Read More

ಸಹಾಯ ಮಾಡುವ ಅವಕಾಶ ಭಗವಂತ ಪ್ರತಿಯೊಬ್ಬನಿಗೂ ಒದಗಿಸುತ್ತಾನೆ ಆ ಕ್ಷಣ ಉಪಯೋಗಿಸಿಕೊಂಡವನಿಷ್ಟೇ ಅದರ ನಿಜ ಸುಖದ ಅನುಭವವಾಗುತ್ತದೆ. ಯಾರದ್ದಾದರೇನು ? ತಂದೆ..ತಂದೆಯೇ ಅಲ್ಲವೇ??…. ಅದು ಬ್ಯಾಂಕ್ ನ ಕ್ಯಾಶ್ ಕೌಂಟರ್ ರಶ್ ಇತ್ತು. ಅಲ್ಲಿ ಒಬ್ಬರು ಸುಮಾರು 75 ವರ್ಷದ ಅಜ್ಜ ಕೈಯ್ಯಲ್ಲಿ ಚೀಟಿ ಯೊಂದನ್ನು ಹಿಡಿದು ಬಂದಿದ್ದರು. ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 660 ರೂ ಮಾತ್ರ ಇತ್ತು. ಕಳೆದ 2 ತಿಂಗಳಿಂದ 15 ಲಕ್ಷದ ಹೋಂ ಲೋನ್ ನ 14,000 ರೂ EMI ಕಟ್ಟಿರಲಿಲ್ಲ ಆ ಮನುಷ್ಯ. ಕ್ಯಾಶಿಯರ್ ಸಿಟ್ಟಲ್ಲಿದ್ದ..🥱 “ಏನಜ್ಜ, 2 ತಿಂಗಳಿಂದ EMI ಕಟ್ಟಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ ಏನಾಗಿದೆ ನಿಮಗೆ?” ಮತ್ತೆ ಕೂಗಿದ.. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು…

Read More

ನವದೆಹಲಿ: ರಾಕೆಟ್ ಉಡಾವಣೆಯ ಪರೀಕ್ಷೆಯಲ್ಲಿ ಎಕ್ಸ್ ಸ್ಟಾರ್ ಶಿಪ್ ಯಶಸ್ವಿಯಾಗಿದೆ. ಅಲ್ಲದೇ ಸೂಪರ್ ಹೆವಿ ಬೂಸ್ಟರ್ ಅನ್ನು ಉಡಾವಣಾ ಗೋಪುರಕ್ಕೆ ಮರಳಿ ತರುವ ಪ್ರಯತ್ನದಲ್ಲೂ ಸಕ್ಸಸ್ ಆಗಿದೆ. ಈ ಬಗ್ಗೆ ಎಕ್ಸ್ ನಲ್ಲಿ ಎಲೋನ್ ಮಸ್ಕ್ ವೀಡಿಯೋವನ್ನು ಸೇರ್ ಮಾಡಿದ್ದು, ಸ್ಪೇಸ್ ಎಕ್ಸ್ ನ ಸ್ಟಾರ್ ಶಿಪ್ ಭಾನುವಾರ ತನ್ನ ಐದನೇ ಪರೀಕ್ಷಾ ಹಾರಾಟದಲ್ಲಿ ಯಶಸ್ವಿಯಾಗಿ ಉಡಾವಣೆಯಾಗಿದೆ. ಟೆಕ್ಸಾಸ್ ಉಡಾವಣಾ ಪ್ಯಾಡ್ ನಿಂದ ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು. ಸ್ಪೇಸ್ ಎಕ್ಸ್ ತನ್ನ ಸೂಪರ್ ಹೆವಿ ಬೂಸ್ಟರ್ ಅನ್ನು ಗಾಳಿಯಲ್ಲಿ ಯಶಸ್ವಿಯಾಗಿ ಹಿಡಿದಿದೆ ಎಂದಿದ್ದಾರೆ. ಇಂದು ರಾಕೆಟ್ನ ಸೂಪರ್ ಹೆವಿ ಬೂಸ್ಟರ್ ಅನ್ನು ಉಡಾವಣಾ ಗೋಪುರಕ್ಕೆ ಮರಳಿ ತರುವ ಕಂಪನಿಯ ಮೊದಲ ಪ್ರಯತ್ನವಾಗಿದೆ ಎಂಬುದಾಗಿ ವೀಡಿಯೊ ಹಂಚಿಕೊಂಡು ಎಲೋನ್ ಮಸ್ಕ್ ಸಂತಸ ವ್ಯಕ್ತ ಪಡಿಸಿದ್ದಾರೆ. https://twitter.com/elonmusk/status/1845446365717156265 https://kannadanewsnow.com/kannada/first-keep-bjp-away-from-dividing-country-state-in-the-name-of-god-religion-siddaramaiah/ https://kannadanewsnow.com/kannada/another-good-news-for-reliance-jio-users-new-isd-plans-announced/

Read More

ಸವದತ್ತಿ : ದೇವರು-ಧರ್ಮದ ಹೆಸರಲ್ಲಿ ದೇಶವನ್ನು-ರಾಜ್ಯವನ್ನು ಒಡೆಯುವ ಬಿಜೆಪಿಯನ್ನು ಮೊದಲು ದೂರ ಇಡಿ. ಇಲ್ಲದಿದ್ದರೆ ನಮ್ಮ ನಾಡೂ ಉಳಿಯಲ್ಲ, ದೇಶವೂ ಉಳಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು. ಸವದತ್ತಿ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ, ಮಹಿಳಾ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣ ವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಮುಂದಿನ ವರ್ಷದ ವೇಳೆಗೆ 6 ಸಾವಿರ ಭಕ್ತರು ಉಳಿಯಲು ರೇಣುಕಾ ಯಲ್ಲಮ್ಮ ಸನ್ನಿಧಿಯಲ್ಲಿ ವ್ಯವಸ್ಥೆ ರೂಪಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಶಕ್ತಿ ಯೋಜನೆಯಿಂದಾಗಿ ಇದುವರೆಗೂ ರಾಜ್ಯದಲ್ಲಿ ಮಹಿಳೆಯರು 300 ಕೋಟಿ ಉಚಿತ ಟ್ರಿಪ್ ಮಾಡಿದ್ದಾರೆ. ಇವರಲ್ಲಿ ಲಕ್ಷಾಂತರ ಮಂದಿ ತಾಯಿ ರೇಣುಕಾ ಯಲ್ಲಮ್ಮನ ದರ್ಶನ ಕೂಡ ಪಡೆದಿದ್ದಾರೆ ಎಂದರು. ದೇವರು-ಧರ್ಮ ತಮಗೆ ಮಾತ್ರ ಸೇರಿದ್ದು ಬಿಜೆಪಿಯವರು ಭಯಾನಕ ಮಾತಾಡ್ತಾರಲ್ಲಾ, ಆದರೆ ಇದುವರೆಗೂ ದೇವಿಯ ಭಕ್ತರಿಗೆ ನಾವು ಮಾಡಿದಂಥಾ ಕಾರ್ಯಕ್ರಮವನ್ನು ಬಿಜೆಪಿಯವರು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ತಾಯಿ ಯಲ್ಲಮ್ಮ ಶಕ್ತಿ ದೇವತೆ. ಯಾವ ದೇವರೂ…

Read More

ನವದೆಹಲಿ: ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಅಂತರರಾಷ್ಟ್ರೀಯ ಪ್ಯಾಕ್‌ಗಳನ್ನು ಘೋಷಿಸಿದೆ. ನಿರ್ದಿಷ್ಟ ದೇಶಗಳಿಗೆ ಅನ್ವಯಿಸುವಂತೆ ₹39 ರಿಂದ ಆರಂಭವಾಗುವ ಪ್ರೀ-ಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್‌ನ ಹೊಸ ಐಎಸ್‌ಡಿ ಪ್ಯಾಕ್‌ಗಳನ್ನು ನೀಡಿದೆ. ಈ ಎಲ್ಲಾ ಯೋಜನೆಗಳು 7 ದಿನಗಳ ವ್ಯಾಲಿಡಿಟಿ ಹೊಂದಿರಲಿವೆ. ಯುಎಸ್‌ಎ ಮತ್ತು ಕೆನಡಾ ದೇಶಗಳಿಗೆ ₹39 ದರದ ಐಎಸ್‌ಡಿ 7 ದಿನಗಳ ವ್ಯಾಲಿಡಿಟಿಯ ಪ್ಲಾನ್ ನೀಡಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರು 30 ನಿಮಿಷಗಳ ಕರೆ ಸೌಲಭ್ಯ ಇರಲಿದೆ. ಅದೇ ರೀತಿ ಯುಎಇ, ಸೌದಿ ಅರೇಬಿಯಾ, ಕುವೈತ್, ಟರ್ಕಿ ಮತ್ತು ಬಹ್ರೇನ್ ದೇಶಗಳಿಗೆ ₹99ರ ಪ್ಲಾನ್‌ನಲ್ಲಿ 10 ನಿಮಿಷಗಳ ಕರೆ ಸೌಲಭ್ಯ ಲಭ್ಯ. ಸಿಂಗಪುರ, ಥಾಯ್ಲೆಂಡ್, ಮಲೇಷ್ಯಾ ಮತ್ತು ಹಾಂಗ್‌ಕಾಂಗ್‌ಗೆ ಕರೆ ಮಾಡುವವರಿಗೆ 15 ನಿಮಿಷಗಳ ಕರೆ ಸೌಲಭ್ಯ ಇರುವ ₹59 ರ ಯೋಜನೆ ನೀಡಲಾಗಿದೆ. ಚೀನಾ, ಜಪಾನ್, ಬೂತಾನ್‌ಗೆ 15 ನಿಮಿಷಗಳ ಕರೆ ಸೌಲಭ್ಯದ ₹89ರ ಪ್ಲಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗೆ ₹69 ರ ಬೆಲೆಯ 15 ನಿಮಿಷಗಳ…

Read More

ಸೂರತ್: ಟಾಟಾ ಸಮೂಹದ ದೊರೆ ರತನ್ ಟಾಟಾ ಇನ್ನಿಲ್ಲವಾಗಿದ್ದಾರೆ. ಅವರ ಮಾತು, ಚಿಂತನೆ, ಸರಳ ನಡೆಯ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದಾವೆ. ಈ ನಡುವೆ 11,000 ವಜ್ರಗಳನ್ನು ಬಳಸಿ ರತನ್ ಟಾಟಾ ಅವರ ಭಾವಚಿತ್ರವನ್ನು ನಿರ್ಮಿಸಿದಂತ ಕುಶಲ ಕಲೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೂರತ್ ನ ಉದ್ಯಮಿಯೊಬ್ಬರು ಟಾಟಾ ಸನ್ಸ್ ನ ದಿವಂಗತ ಅಧ್ಯಕ್ಷ ರತನ್ ಟಾಟಾ ಅವರ ಭಾವಚಿತ್ರವನ್ನು ರಚಿಸಿದ್ದಾರೆ. ಸ್ಥಳೀಯ ವ್ಯಾಪಾರಿಯೊಬ್ಬರು 11,000 ಅಮೆರಿಕನ್ ವಜ್ರಗಳನ್ನು ಬಳಸಿಕೊಂಡು ಪೂಜ್ಯ ನಾಯಕನ ಸಂಕೀರ್ಣ ಭಾವಚಿತ್ರವನ್ನು ರಚಿಸಿದರು. ಭಾರತೀಯ ಕಾರ್ಪೊರೇಟ್ ಭೂದೃಶ್ಯವನ್ನು ರೂಪಿಸಿದ ಮತ್ತು ದೇಶದ ಅಭಿವೃದ್ಧಿಯ ಮೇಲೆ ಶಾಶ್ವತ ಛಾಪು ಮೂಡಿಸಿದ ಟಾಟಾ ಸನ್ಸ್ನ ಮಾಜಿ ಅಧ್ಯಕ್ಷರಾಗಿ ಟಾಟಾ ಅವರ ಪರಂಪರೆಯನ್ನು ಈ ಭಾವಚಿತ್ರವು ಗೌರವಿಸುತ್ತದೆ. https://twitter.com/T_Investor_/status/1845143329693929730 ಬುಧವಾರ 86 ನೇ ವಯಸ್ಸಿನಲ್ಲಿ ನಿಧನರಾದ ರತನ್ ಟಾಟಾ ಅವರ ನಿಧನಕ್ಕೆ ರಾಷ್ಟ್ರವು ಶೋಕಿಸುತ್ತಿರುವ ಸಮಯದಲ್ಲಿ ಈ ಗೌರವ ಬಂದಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್…

Read More

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯ ವಾದ, ಪ್ರತಿವಾದ ಆಲಿಸಿದ್ದಂತ ನ್ಯಾಯಾಲಯವು, ತೀರ್ಪು ನಾಳೆಗೆ ಕಾಯ್ದಿರಿಸಿತ್ತು. ಇದೀಗ ನಾಳೆ ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎ2 ಆರೋಪಿಯಾಗಿರುವಂತ ನಟ ದರ್ಶನ್ ಜಾಮೀನು ಕೋರಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಅಭಿಯೋಜಕ ಎಸ್ ಪಿಪಿ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರವಾಗಿ ವಕೀಲ ಸಿ.ವಿ ನಾಗೇಶ್ ತಮ್ಮ ವಾದ ಪ್ರತಿವಾದವನ್ನು ಮಂಡಿಸಿದ್ದರು. ಈ ಬಳಿಕ ಕೋರ್ಟ್ ನಾಳೆಗೆ ಜಾಮೀನು ಅರ್ಜಿಯ ತೀರ್ಪು ಕಾಯ್ದರಿಸಿತ್ತು. ಇದಲ್ಲದೇ ಎ.1 ಆರೋಪಿ ಪವಿತ್ರಾ ಗೌಡ, ರವಿ, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಜಾಮೀನು ಅರ್ಜಿಯನ್ನು ಕೂಡ ನಾಳೆ ನ್ಯಾಯಾಲಯ ನಡೆಸಲಿದೆ. ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ದೊರೆಯದೇ ಇದ್ದರೇ, ಹೈಕೋರ್ಟ್ ಮೊರೆ ಹೋಗುವಂತ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಾಳೆ…

Read More

ಬೆಳಗಾವಿ: ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಒತ್ತಾಯ ಹೆಚ್ಚಾಗಿದೆ. ಬಿಜೆಪಿಯವರು ಇಂದು, ನಾಳೆ, ದಸರಾ ಮುಗಿದ ನಂತ್ರ, ಅಧಿವೇಶನ ನಡೆಯೋ ಮೊದಲೇ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಭವಿಷ್ಯ ನುಡಿಯುತ್ತಿದ್ದಾರೆ. ಈ ನಡುವೆ ಸತೀಶ್ ಜಾರಕಿಹೊಳಿ ಭವಿಷ್ಯದ ಮುಂದಿನ ಮುಖ್ಯಮಂತ್ರಿಗಳು ಎಂಬುದಾಗಿ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಸಿಎಂ ಸಿದ್ಧರಾಮಯ್ಯ ಅವರು ಬೆಳಗಾವಿ ಭೇಟಿಯ ಸಂದರ್ಭದಲ್ಲೇ ಬೆಳಗಾವಿಯ ರಸ್ತೆಗಳಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಭವಿಷ್ಯದ ಮುಂದಿನ ಮುಖ್ಯಮಂತ್ರಿ ಎನ್ನುವಂತ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸಿ, ಕುತೂಹಲ ಕೆರಳಿಸಿದವು. ಒಂದೆಡೆ ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂಬುದಾಗಿಯೇ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು. ಮತ್ತೊಂದೆಡೆ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಅವರೇ ಮುಖ್ಯಮಂತ್ರಿ ಎಂಬ ಫ್ಲೆಕ್ಸ್, ಬ್ಯಾನರ್ ರಾರಾಜಿಸಿದ್ದು ಹಲವು ಕುತೂಹಲ, ಅನುಮಾನಗಳಿಗೂ ಕಾರಣವಾಗಿದೆ. ಇವುಗಳ್ನು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಮುಖಂಡರು ಕಟ್ಟಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/mahela-jayawardene-reappointed-head-coach-of-mumbai-indians/ https://kannadanewsnow.com/kannada/baba-siddique-murder-case-one-suspect-remanded-to-police-custody-other-to-undergo-age-test/ https://kannadanewsnow.com/kannada/savadatti-development-season-begins-minister-lakshmi-hebbalkar/

Read More