Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಟೆಲಿವಿಷನ್ ಚಾನೆಲ್ ಗಳಲ್ಲಿ ಯಾವುದೇ ಲೋಕಸಭಾ ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. ಟಿಆರ್ ಪಿಗಾಗಿ ಊಹಾಪೋಹಗಳು ಮತ್ತು ಕೆಸರೆರಚಾಟದಲ್ಲಿ ತೊಡಗಲು ಬಯಸುವುದಿಲ್ಲ ಎಂದು ಹೇಳಿದೆ. ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಮತ್ತು ಅವರ ತೀರ್ಪು ಸುರಕ್ಷಿತವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ ಹೇಳಿದರು. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಅದಕ್ಕೂ ಮೊದಲು, ಟಿಆರ್ಪಿಗಾಗಿ ಊಹಾಪೋಹಗಳು ಮತ್ತು ಕೆಸರೆರಚಾಟದಲ್ಲಿ ತೊಡಗಲು ನಮಗೆ ಯಾವುದೇ ಕಾರಣ ಕಾಣುತ್ತಿಲ್ಲ” ಎಂದು ಅವರು ಎಕ್ಸ್ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ. https://twitter.com/ANI/status/1796542256280994163 ಚುನಾವಣೋತ್ತರ ಸಮೀಕ್ಷೆಗಳ ಚರ್ಚೆಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾಗವಹಿಸುವುದಿಲ್ಲ. ಯಾವುದೇ ಚರ್ಚೆಯ ಉದ್ದೇಶವು ಜನರಿಗೆ ತಿಳಿಸುವುದಾಗಿರಬೇಕು. ಜೂನ್ 4 ರಿಂದ ನಾವು ಸಂತೋಷದಿಂದ ಚರ್ಚೆಗಳಲ್ಲಿ ಭಾಗವಹಿಸುತ್ತೇವೆ” ಎಂದು ಖೇರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಕ್ಷದೊಳಗಿನ ಸಮಾಲೋಚನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. https://kannadanewsnow.com/kannada/minister-ramalinga-reddy-hits-back-at-pralhad-joshi-for-saying-that-kannadigas-are-rearing-keralites-in-taxes/ https://kannadanewsnow.com/kannada/breaking-court-orders-sit-custody-of-mp-prajwal-revanna-2/
ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕನ್ನಡಿಗರ ತೆರಿಗೆಯಲ್ಲಿ ಕೇರಳಿಗರನ್ನು ಸಿದ್ದರಾಮಯ್ಯ ಸಾಕುತ್ತಿದ್ದಾರೆ ಎಂಬುದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಏನು ಹೇಳಿದ್ರು ಅಂತ ಮುಂದೆ ಓದಿ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿರುವಂತ ಅವರು, ಕೇಂದ್ರ ಸರ್ಕಾರದಲ್ಲಿಯೇ ಇದ್ದು, ಪ್ರಧಾನ ಮಂತ್ರಿ ಮೋದಿಯವರ ನೀತಿ ನಿಯಮಗಳ ಬಗ್ಗೆಯೇ ಅರಿವಿಲ್ಲದೆ ಮಾತನಾಡುತ್ತಿರುವ ಪ್ರಹ್ಲಾದ್ ಜೋಷಿ ಅವರೇ, ರಾಜ್ಯದ ವಿರೋಧ ಪಕ್ಷದ ನಾಯಕರಾದ ಅಶೋಕ್,ಬಿ.ಜೆ.ಪಿ ಯ ರಾಜ್ಯಧ್ಯಕ್ಷಾದ ವಿಜಯೇಂದ್ರ ಅವರುಗಳೇ ನಿಜಕ್ಕೂ ನೀವುಗಳು ತಮ್ಮ ಬುದ್ಧಿವಂತಿಕೆಯನ್ನು ಅಡವಿಟ್ಟಿರುವ ಹಾಗೆ ಕಾಣಿಸುತ್ತಿರುವುದು ಸಾಬೀತಾಗಿದೆ. ಯಾವುದೇ ಒಂದು ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನೇ ಪಡೆಯದೆ, ಟ್ವೀಟ್ ಮಾಡುತ್ತೀರೋ ನೀವುಗಳು ಜನರ ಮುಂದೆ ತಮಗೆ ಅರಿವಿಲ್ಲ ಎಂಬುದನ್ನು ಪದೇ ಪದೇ ತೋರಿಸಿಕೊಳ್ಳುವ ಖಯಾಲಿಗೆ ಬಿದ್ದಂತಿದೆ ಎಂದಿದ್ದಾರೆ. ನಾವು ಸಾರ್ವಜನಿಕರಿಗೆ ಸರಿಯಾದ ಮತ್ತು ಸತ್ಯವನ್ನು ತಿಳಿಸುವ ಬದ್ಧತೆ ಮತ್ತು ಜವಾಬ್ದಾರಿಯನ್ನು ಹೊಂದಿದ್ದೇವೆ . ಆದ್ದರಿಂದ ತಮ್ಮ ಸಾವಿರ ಸುಳ್ಳಿನ ಟ್ಟೀಟ್ ಗಳಿಗೂ ಕೂಡ…
ಶಿವಮೊಗ್ಗ: ಅಪಘಾತವಾಗಿದ್ರೇ ನಾಮುಂದು, ತಾಮುಂದು ಅಂತ ನೋಡಿ, ಅಯ್ಯೋ ಅಂತ ಮರುಗೋರೋ ಹೆಚ್ಚು. ಇನ್ನೂ ಕೆಲವರು ಮೊಬೈಲ್ ಕ್ಯಾಮರಾ ಆನ್ ಮಾಡಿ, ವೀಡಿಯೋ ಮಾಡಿಕೊಳ್ಳುದು ಹುಚ್ಚು. ಇದರ ನಡುವೆ ಅಪಘಾತದಂತ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿದ್ರೆ ಅಮೂಲ್ಯ ಜೀವ ಉಳಿಸಬಹುದು ಎಂಬ ಧ್ಯೇಯ ಹೊಂದಿರೋ, ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತ್ರ, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಸಿಗಂದೂರು ದೇವಸ್ಥಾನಕ್ಕೆ ತೆರಳುತ್ತಿದ್ದ ದಂಪತಿಗಳಿಗೆ ಅಪಘಾತದಲ್ಲಿ ಗಾಯ ಸಿಗಂದೂರು ದೇವಸ್ಥಾನಕ್ಕೆ ಬೈಕ್ ನಲ್ಲಿ ದಂಪತಿಗಳಿಬ್ಬರು ತೆರಳುತ್ತಿದ್ದರು. ಈ ವೇಳೆ ಸಾಗರ-ಆನಂದಪುರ ಮಾರ್ಗ ಮಧ್ಯದ ಹೊಸಗುಂದ ರಸ್ತೆಯ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ದಂಪತಿಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ ನಿಲ್ಲಿಸಿ ಅಪಘಾತದಲ್ಲಿ ಗಾಯಗೊಂಡವರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ನೆರವು ಇದೇ ಮಾರ್ಗದಲ್ಲಿ ಸಾಗುತ್ತಿದ್ದಂತ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅಪಘಾತದ ಘಟನಾ ಸ್ಥಳಕ್ಕೆ ತೆರಳಿ, ದಂಪತಿಗಳನ್ನು ತುರ್ತು ಚಿಕಿತ್ಸೆಗಾಗಿ ತಮ್ಮ ಬೆಂಗಾವಲು ವಾಹದಲ್ಲಿ…
ಶಿವಮೊಗ್ಗ: ಜೂನ್.1ರ ನಾಳೆ ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಗಿಸಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಸೊರಬ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪ್ರಭು ಸಾಹುಕಾರ್ ಅವರು, ದಿನಾಂಕ 01-06-2024ರ ನಾಳೆ ಬೆಳಿಗ್ಗೆ 9 ಗಂಟೆಯಿಂದ 3 ಗಂಟೆಯವರೆಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸೊರಬ ಇಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದಿದ್ದಾರೆ. ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳು ಶಿವಮೊಗ್ಗ, ರಕ್ತನಿಧಿ ಘಟ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಶಿವಮೊಗ್ಗ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸೊರಬ, ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ, ಸೊರಬ ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸೊರಬ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಯಾರು ರಕ್ತದಾನ ಮಾಡಬಹುದು? ಕನಿಷ್ಠ 45 ಕೆಜಿ ದೇಹ ತೂಕ ಇರುವಂತ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. 18 ರಿಂದ 60 ವರ್ಷದ ಒಳಗಿನ…
ಬೆಂಗಳೂರು: ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರವು ಮತ್ತೊಂದು ಹಗರಣವನ್ನು ವಿಶೇಷ ತನಿಖಾ ದಳದ ಅಧಿಕಾರಿಗಳಿಗೆ ವಹಿಸಿ ಅಧಿಕೃತವಾಗಿ ಆದೇಶ ಹೊರಡಿಸಿದೆ. ಅದೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಕೇಸ್ ಆಗಿದೆ. ಇಂದು ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಅಧೀಕ್ಷಕರಾದ ಚಂದ್ರಶೇಖರ್ ಪಿ ರವರು ಅವರಾಹ್ನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಅನುದಾನ ಹಣವು ದುರುಪಯೋಗವಾಗಿರುವುದಾಗಿ ಆರೋಪಿಸಿ ಡೆತ್ ನೋಟ್ ಬರೆದು, ದಿನಾಂಕ: 26.05.2024 ರಂದು ಆತ್ಮಹತ್ಯೆಗೆ ಶರಣಾಗಿರುವುದಾಗಿ ಮೃತರ ಪತ್ನಿಯು ನೀಡಿದ ದೂರಿನ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪುಕರಣ ದಾಖಲಾಗಿರುತ್ತದೆ ಎಂದಿದ್ದಾರೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಮುಖ್ಯ ನಿಬಂಧಕರಾದ ಎ. ರಾಜಶೇಖರ್ ರವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ…
ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್ ಅವರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬಿಜೆಪಿಯಿಂದ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಸಚಿವರು ರಾಜೀನಾಮೆ ನೀಡಿ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು. ಮೃತ ಪಿ.ಚಂದ್ರಶೇಖರನ್ ಅವರ ಕುಟುಂಬದವರನ್ನು ಆರ್.ಅಶೋಕ ಭೇಟಿಯಾಗಿ ಸಾಂತ್ವನ ಹೇಳಿದ ಅವರು, ಸರಕಾರದ ಮೊದಲ ವಿಕೆಟ್ ಪತನ ಖಚಿತ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್ ಅವರ ಕುಟುಂಬ ಬೀದಿಗೆ ಬಂದಿದೆ. ಇಲ್ಲಿಗೆ ಬಂದ ಸಚಿವರು ಯಾವುದೇ ವ್ಯವಸ್ಥೆ ಮಾಡಿಲ್ಲ. ಯಾವುದೇ ಹಿರಿಯ ಅಧಿಕಾರಿಗಳು, ಗೃಹ ಸಚಿವರು ನೆರವು ನೀಡಿಲ್ಲ. 1 ಕೋಟಿ ರೂ. ಗೂ ಅಧಿಕ ಅಕ್ರಮ ನಡೆದಾಗ ಅದು ಸಿಬಿಐ ತನಿಖೆಗೆ ಒಳಪಡುತ್ತದೆ. ಬ್ಯಾಂಕ್ನವರು ಸಿಬಿಐಗೆ ವಹಿಸಿ ಎಂದು ಮನವಿ ಮಾಡಿದ್ದಾರೆ. ಇದು ಸಿಬಿಐಗೆ ಹೋಗುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಯದಿಂದಾಗಿ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.…
ನವದೆಹಲಿ: ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.8 ರಷ್ಟು ಏರಿಕೆಯಾಗಿದ್ದು, ವಾರ್ಷಿಕ ಬೆಳವಣಿಗೆಯ ದರವನ್ನು ಶೇಕಡಾ 8.2 ಕ್ಕೆ ಏರಿಸಿದೆ ಎಂದು ಇಂದು ಬಿಡುಗಡೆಯಾದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಜನವರಿ-ಮಾರ್ಚ್ ಅವಧಿಯಲ್ಲಿನ ಬೆಳವಣಿಗೆಯು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 8.6 ರ ವಿಸ್ತರಣೆಗಿಂತ ಕಡಿಮೆಯಾಗಿದೆ. 2022-23ರ ಹಣಕಾಸು ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 6.2 ರಷ್ಟು ವಿಸ್ತರಿಸಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್ಎಸ್ಒ) ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ. ಅಂಕಿಅಂಶಗಳ ಪ್ರಕಾರ, ಆರ್ಥಿಕತೆಯು 2022-23ರಲ್ಲಿ ಶೇಕಡಾ 7 ರಷ್ಟು ಬೆಳವಣಿಗೆಗೆ ಹೋಲಿಸಿದರೆ 2023-24 ರಲ್ಲಿ ಶೇಕಡಾ 8.2 ರಷ್ಟು ವಿಸ್ತರಿಸಿದೆ. ಎನ್ಎಸ್ಒ ತನ್ನ ರಾಷ್ಟ್ರೀಯ ಖಾತೆಗಳ ಎರಡನೇ ಮುಂಗಡ ಅಂದಾಜಿನಲ್ಲಿ 2023-24ರಲ್ಲಿ ದೇಶದ ಬೆಳವಣಿಗೆಯನ್ನು ಶೇಕಡಾ 7.7 ಕ್ಕೆ ನಿಗದಿಪಡಿಸಿತ್ತು. 2024 ರ ಮೊದಲ ಮೂರು ತಿಂಗಳಲ್ಲಿ ಚೀನಾ ಶೇಕಡಾ 5.3 ರಷ್ಟು ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. https://kannadanewsnow.com/kannada/google-news-google-discover-down-for-millions-of-users-in-india-world/ https://kannadanewsnow.com/kannada/breaking-court-orders-sit-custody-of-mp-prajwal-revanna-2/
ನವದೆಹಲಿ: ಭಾರತ ಸೇರಿದಂತೆ ವಿಶ್ವದಾಧ್ಯಂತ ಗೂಗಲ್ ನ ಗೂಗಲ್ ನ್ಯೂಸ್, ಗೂಗಲ್ ಡಿಸ್ಕವರ್ ಸೇವೆ ಡೌನ್ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ಪರದಾಡುವಂತಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗೂಗಲ್ ನ್ಯೂಸ್ ಸೇವೆ ಸ್ಥಗಿತಗೊಂಡಿದೆ. ಭಾರತದಲ್ಲಿ ಅನೇಕ ಬಳಕೆದಾರರು ಗೂಗಲ್ ಡಿಸ್ಕವರ್ ಮತ್ತು ಗೂಗಲ್ ನ್ಯೂಸ್ ಬಳಸಲು ತೊಂದರೆ ಅನುಭವಿಸುತ್ತಿದ್ದಾರೆ. ಗೂಗಲ್ ನ್ಯೂಸ್ ಚಾಲನೆಯಲ್ಲಿಲ್ಲದಿದ್ದಾಗ, ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟರ್ಗೆ ತಿರುಗುವಾಗ ತಮ್ಮ ದೂರುಗಳನ್ನು ಉಲ್ಲೇಖಿಸಿದ್ದಾರೆ. ಗೂಗಲ್ ನ್ಯೂಸ್ ಟ್ಯಾಬ್, ಗೂಗಲ್ ಡಿಸ್ಕವರ್ ಹೋಮ್ ಪೇಜ್ ಫೀಡ್ ಮತ್ತು ಗೂಗಲ್ ಟ್ರೆಂಡ್ಸ್ ನಂತಹ ಸೇವೆಗಳನ್ನು ಪ್ರವೇಶಿಸುವಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಗೂಗಲ್ ನ್ಯೂಸ್, ಜಿಮೇಲ್ ಮತ್ತು ನಕ್ಷೆಗಳು ಸೇರಿದಂತೆ ಗೂಗಲ್ ಸೇವೆಗಳನ್ನು ಪ್ರವೇಶಿಸುವಾಗ ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ಬಳಕೆದಾರರು ಶುಕ್ರವಾರ ಸಮಸ್ಯೆಗಳನ್ನು ಎದುರಿಸಿದರು. https://kannadanewsnow.com/kannada/breaking-court-orders-sit-custody-of-mp-prajwal-revanna-2/ https://kannadanewsnow.com/kannada/steps-to-be-taken-to-fill-up-vacant-posts-in-transport-department-soon-cm-siddaramaiah/
ಬೆಂಗಳೂರು: ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿರುವಂತ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಮತ್ತೆ ಸಂಕಷ್ಟ ಶುರುವಾಗಿದೆ. ರಾಜ್ಯ ಸರ್ಕಾರದಿಂದ ಜಾಮೀನು ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದಂತ ಅರ್ಜಿ ಸಂಬಂಧ, ಹೆಚ್.ಡಿ ರೇವಣ್ಣಗೆ ನೋಟಿಸ್ ಜಾರಿಗೊಳಿಸಲಾಗಿದೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಆರೋಪಿಯಾದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಅಧೀನ ನ್ಯಾಯಾಲಯ ನೀಡಿದ್ದ ಜಾಮೀನು ರದ್ದುಪಡಿಸಲು ಕೋರಿ ಪ್ರಶ್ನಿಸಿ ರಾಜ್ಯ ಸರ್ಕಾರ (ಎಸ್ ಐ ಟಿ) ಸಲ್ಲಿಸಿದ್ದ ಅರ್ಜಿ ಸಂಬಂಧ ರೇವಣ್ಣಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಲೈಂಗಿಕ ದೌರ್ಜನ್ಯ ಹಾಗೂ ಮಹಿಳೆಯ ಅಪಹರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಎಫ್ ಐ ಆರ್ ರದ್ದುಪಡಿಸುವಂತೆ ಕೋರಿ ಎಚ್.ಡಿ.ರೇವಣ್ಣ ಸಲ್ಲಿಸಿರುವ ಅರ್ಜಿಯ ಸಂಬಂಧ ಸರ್ಕಾರಕ್ಕೆ ( ಎಸ್ ಐ ಟಿ )ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಮತ್ತೊಂದೆಡೆ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ…
ಕೆಲವರಿಗೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಕುಟುಂಬ ಸದಸ್ಯರ ನಡುವಿನ ಜಗಳವೇ ಕಾರಣ. ತಾಯಿ ತಂದೆಯೊಂದಿಗೆ ಜಗಳವಾಡುತ್ತಾರೆ, ತಾಯಿ ಮಗಳೊಂದಿಗೆ ಜಗಳವಾಡುತ್ತಾರೆ, ತಂದೆ ಮಗನೊಂದಿಗೆ ಜಗಳವಾಡುತ್ತಾರೆ, ಅತ್ತೆ ಮತ್ತು ಸೊಸೆ ತಮ್ಮ ತಮ್ಮ ಬಂಧಗಳಿಂದ ಜಗಳವಾಡುತ್ತಾರೆ, ಮತ್ತು ಕುಟುಂಬದಲ್ಲಿ ಶಾಂತಿಯು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಕೆಲವು ಮನೆಗಳಲ್ಲಿ ತಂದೆಗೆ ಮಗುವನ್ನು ಕಂಡರೆ ಇಷ್ಟವಿಲ್ಲ, ಗಂಡನಿಗೆ ಹೆಂಡತಿಯನ್ನು ಕಂಡರೆ ಇಷ್ಟವಿಲ್ಲ ಎಂದು ಪರಸ್ಪರ ದ್ವೇಷ ಸಾಧಿಸುತ್ತಲೇ ಇರುತ್ತಾರೆ. ಇಂತಹ ಸಮಸ್ಯೆಗಳಿದ್ದರೆ ಕೆಲವರಿಗೆ ಮಾನಸಿಕ ತೊಂದರೆ ಕೊಡುತ್ತದೆ. ಇದು ಮನೆಯ ಜೀವನದಲ್ಲಿ ಬಿರುಕನ್ನು ನೀಡುತ್ತದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ…