Subscribe to Updates
Get the latest creative news from FooBar about art, design and business.
Author: kannadanewsnow09
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಜೂನ್ 11) ಪಾಕಿಸ್ತಾನ ಮತ್ತು ಕೆನಡಾ ನಡುವಿನ 2024 ರ ಟಿ 20 ವಿಶ್ವಕಪ್ ಪಂದ್ಯದ ಸಮಯದಲ್ಲಿ ಹ್ಯಾರಿಸ್ ರವೂಫ್ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಅದೇ ಐ20ಐ ಪಂದ್ಯಾವಳಿಯಲ್ಲಿ ಅತಿ ವೇಗದಲ್ಲಿ ವಿಕೆಟ್ ಪಡೆದ ವೇಗದ ಬೌಲರ್ ಎಂಬುದಾಗಿದೆ. ಶ್ರೇಯಸ್ ಮೊವ್ವಾ ಮತ್ತು ರವೀಂದರ್ ಪಾಲ್ ಸಿಂಗ್ ಅವರ ವಿಕೆಟ್ ಗಳನ್ನು ಪಡೆಯಲು ರವೂಫ್ ಎರಡು ವಿಕೆಟ್ ಓವರ್ ಮೂಲಕ ಪಂದ್ಯವನ್ನು ಪಾಕಿಸ್ತಾನದ ಪರವಾಗಿ ತಿರುಗಿಸಿದರು. ಟಾಸ್ ಗೆದ್ದ ಬಾಬರ್ ಅಜಮ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನಂತರ, ರವೂಫ್ ಅವರನ್ನು ಪವರ್ಪ್ಲೇ ಕೊನೆಯಲ್ಲಿ ಆಕ್ರಮಣಕ್ಕೆ ಕರೆತರಲಾಯಿತು. ಆದಾಗ್ಯೂ, ಅವರ ಮೊದಲ ಓವರ್ 13 ರನ್ಗಳನ್ನು ಬಿಟ್ಟುಕೊಟ್ಟಿದ್ದರಿಂದ ಮರೆಯಲಾಗದು ಎಂದು ಸಾಬೀತುಪಡಿಸಿತು. ಆದಾಗ್ಯೂ, ಅವರು 10 ನೇ ಓವರ್ನಲ್ಲಿ ಕೇವಲ ಮೂರು ರನ್ಗಳನ್ನು ನೀಡಿ ಎರಡು ವಿಕೆಟ್ಗಳನ್ನು ಪಡೆಯುವ ಮೂಲಕ ತಿದ್ದುಪಡಿಗಳನ್ನು ಮಾಡಿದರು. ಇತಿಹಾಸ…
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಹಿರಾನಗರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ದಾಳಿ ನಡೆದಿದೆ ಎಂಬುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೆಡಾ ಸೋಹಲ್ ಗ್ರಾಮದ ನಿವಾಸಿಗಳು ಹತ್ತಿರದಲ್ಲಿ ಎರಡರಿಂದ ಮೂರು ಬಂದೂಕುಧಾರಿಗಳನ್ನು ನೋಡಿದ ನಂತರ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಂದೂಕುಧಾರಿಗಳು ಹತ್ತಿರದ ಕಾಡುಗಳಿಗೆ ಪರಾರಿಯಾಗುವ ಮೊದಲು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶಂಕಿತ ವ್ಯಕ್ತಿಗಳನ್ನು ಪತ್ತೆಹಚ್ಚಲು ಪೊಲೀಸರು ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್) ಈ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳಿಂದ ತುಂಬಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ ಕೈವಾಡವಿದೆ ಎಂದು ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ. ಭಯೋತ್ಪಾದಕರನ್ನು ಪತ್ತೆಹಚ್ಚುವ ವ್ಯಾಪಕ ಪ್ರಯತ್ನಗಳು ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭದ್ರತಾ ಸಿಬ್ಬಂದಿಯ 11 ತಂಡಗಳು…
ನವದೆಹಲಿ: ಮೋದಿ 3.0 ಸಚಿವ ಸಂಪುಟ ಸೇರಿದ್ದಂತ ಹೆಚ್.ಡಿ ಕುಮಾರಸ್ವಾಮಿಯವರು ತಾವು ಬೃಹತ್ ಕೈಗಾರಿಕಾ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರೋದಾಗಿ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ವಿಶ್ವಾಸವಿರಿಸಿ ಹಂಚಿಕೆ ಮಾಡಿರುವ ಕೇಂದ್ರ ಬೃಹತ್ ಕೈಗಾರಿಕೆ ಖಾತೆಯ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ. ಭಾರತವು ಜಗತ್ತಿನ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಂಕಲ್ಪ ತೊಟ್ಟಿರುವ ಪ್ರಧಾನಿಗಳ ಕನಸು ನನಸು ಮಾಡುವುದು, ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿ ದೇಶಾದ್ಯಂತ ವಿಸ್ತೃತವಾಗಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಶ್ರಮಿಸಲಾಗುವುದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಚಿವಾಲಯದ ಅಧಿಕಾರಿಗಳ ಜತೆ ಸಭೆ ನಡೆಸಲಾಯಿತು ಅಂತ ಮಾಹಿತಿ ಹಂಚಿಕೊಂಡಿದ್ದಾರೆ. https://twitter.com/hd_kumaraswamy/status/1800545563378897033 https://kannadanewsnow.com/kannada/hunter-biden-found-guilty-of-all-three-charges-in-historic-federal-gun-trial/ https://kannadanewsnow.com/kannada/health-minister-dinesh-gundu-rao-launches-10-day-yoga-utsav-programme/
ವಾಷಿಂಗ್ಟನ್: ಅಕ್ರಮವಾಗಿ ಬಂದೂಕು ಖರೀದಿಸಲು ಮಾದಕವಸ್ತು ಬಳಕೆಯ ಬಗ್ಗೆ ಸುಳ್ಳು ಹೇಳಿದ ಆರೋಪದ ಮೇಲೆ ಅಧ್ಯಕ್ಷ ಜೋ ಬೈಡನ್ ಅವರ ಪುತ್ರ ಹಂಟರ್ ಬೈಡನ್ ಅವರನ್ನು ಮಂಗಳವಾರ ತೀರ್ಪುಗಾರರು ದೋಷಿ ಎಂದು ಘೋಷಿಸಿದ್ದಾರೆ. ಡೆಲಾವೇರ್ನ ವಿಲ್ಮಿಂಗ್ಟನ್ನ ನ್ಯಾಯಾಧೀಶರು ಈ ತೀರ್ಪು ನೀಡಿದ್ದು, ಹಂಟರ್ ಬೈಡನ್ ಅವರು ಅಪರಾಧದಲ್ಲಿ ಶಿಕ್ಷೆಗೊಳಗಾದ ಅಮೆರಿಕದ ಹಾಲಿ ಅಧ್ಯಕ್ಷರ ಮೊದಲ ಮಗು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 12 ಸದಸ್ಯರ ತೀರ್ಪುಗಾರರ ತೀರ್ಪು ಪ್ರತಿ ಅಂಶದಲ್ಲೂ ಸರ್ವಾನುಮತದಿಂದ ಇರಬೇಕು. ನವೆಂಬರ್ 5 ರಂದು ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ಗೆ ರಿಪಬ್ಲಿಕನ್ ಪ್ರತಿಸ್ಪರ್ಧಿ ಮತ್ತು ಅಪರಾಧಿ ಎಂದು ಸಾಬೀತಾಗಿರುವ ಮೊದಲ ಮಾಜಿ ಯುಎಸ್ ಅಧ್ಯಕ್ಷ ಟ್ರಂಪ್ ಅವರನ್ನು ಮೇ 30 ರಂದು ಕ್ರಿಮಿನಲ್ ಶಿಕ್ಷೆಗೆ ಗುರಿಪಡಿಸಿದ ನಂತರ ಈ ವಿಚಾರಣೆ ನಡೆಯಿತು. ಲೈಂಗಿಕ ಹಗರಣವನ್ನು ಮುಚ್ಚಿಹಾಕಲು ವ್ಯವಹಾರ ದಾಖಲೆಗಳನ್ನು ಸುಳ್ಳು ಮಾಡಿದ 34 ಕ್ರಿಮಿನಲ್ ಆರೋಪಗಳಲ್ಲಿ ಶಿಕ್ಷೆಗೊಳಗಾದ ಟ್ರಂಪ್, ಜೋ ಬೈಡನ್ ಅವರೊಂದಿಗಿನ ಮರು ಮುಖಾಮುಖಿಯಲ್ಲಿ ಅಧಿಕಾರವನ್ನು ಮರಳಿ…
ಬೆಂಗಳೂರು: ಇಂದು ಅನಾರೋಗ್ಯದಿಂದ ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನರಾಗಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂತಾಪ ಸೂಚಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಜಗತ್ಪ್ರಸಿದ್ದ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ ರಾಜೀವ್ ತಾರಾನಾಥ್ ಅವರ ನಿಧನದಿಂದ ದು:ಖಿತನಾಗಿದ್ದೇನೆ ಎಂದಿದ್ದಾರೆ. ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ ತುಂಬಲಾರದ ನಷ್ಟ ಅಂತ ತಿಳಿಸಿದ್ದಾರೆ. ರಾಜೀವ್ ತಾರಾನಾಥ್ ಖ್ಯಾತ ಸಂಗೀತ ಕಲಾವಿದರು ಮಾತ್ರ ಆಗಿರಲಿಲ್ಲ, ಅದನ್ನು ಮೀರಿ ಶ್ರೇಷ್ಠ ಮಾನವತಾವಾದಿಯಾಗಿದ್ದರು. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. https://twitter.com/siddaramaiah/status/1800532379762561066 https://kannadanewsnow.com/kannada/pm-asks-people-to-remove-modi-ka-parivar-tag-from-social-media/ https://kannadanewsnow.com/kannada/health-minister-dinesh-gundu-rao-launches-10-day-yoga-utsav-programme/
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಿದ ಭಾರತದ ಜನರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಮಾಧ್ಯಮಗಳಲ್ಲಿನ ತಮ್ಮ ಪ್ರೊಫೈಲ್ಗಳಿಂದ ‘ಮೋದಿ ಕಾ ಪರಿವಾರ್’ ಟ್ಯಾಗ್ ಅನ್ನು ತೆಗೆದುಹಾಕುವಂತೆ ವಿನಂತಿಸಿದ್ದಾರೆ. ಆರ್ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ‘ಪರಿವಾರ್ವಾದ್’ (ಸ್ವಜನಪಕ್ಷಪಾತ) ವ್ಯಂಗ್ಯದ ನಂತರ ಬಿಜೆಪಿ ನಾಯಕರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಮಾರ್ಚ್ನಲ್ಲಿ ತಮ್ಮ ಸಾಮಾಜಿಕ ಮಾಧ್ಯಮ ಬಯೋದಲ್ಲಿ ಟ್ಯಾಗ್ ಅನ್ನು ಸೇರಿಸಿದ್ದರು. “ಚುನಾವಣಾ ಪ್ರಚಾರದ ಮೂಲಕ, ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ತಮ್ಮ ಸಾಮಾಜಿಕ ಮಾಧ್ಯಮಗಳಿಗೆ ‘ಮೋದಿ ಕಾ ಪರಿವಾರ್’ ಅನ್ನು ಸೇರಿಸಿದ್ದಾರೆ. ನಾನು ಅದರಿಂದ ಸಾಕಷ್ಟು ಶಕ್ತಿಯನ್ನು ಪಡೆದುಕೊಂಡೆ. ಭಾರತದ ಜನರು ಎನ್ಡಿಎಗೆ ಸತತ ಮೂರನೇ ಬಾರಿಗೆ ಬಹುಮತವನ್ನು ನೀಡಿದ್ದಾರೆ, ಇದು ಒಂದು ರೀತಿಯ ದಾಖಲೆಯಾಗಿದೆ ಮತ್ತು ನಮ್ಮ ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಜನಾದೇಶವನ್ನು ನೀಡಿದ್ದಾರೆ” ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.…
ಬೆಂಗಳೂರು: ರಾಜ್ಯದ ಪ್ರಾಣಿ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಸರ್ಕಾರದಿಂದ ಪ್ರಾಣಿಗಳ ಆರೈಕೆ-ನಿರ್ಹಣೆಗಾಗಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗಿದೆ. ಈ ಮೂಲಕ ಪ್ರಾಣಿ ಆರೈಕೆಯ ತರಬೇತಿಯನ್ನು ನೀವು ಕಲಿಯೋದಕ್ಕೆ ಅವಕಾಶ ಮಾಡಿಕೊಟ್ಟಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ ವಿಷಯ ಕುರಿತ ಡಿಪ್ಲೊಮಾ ಕೋರ್ಸ್ ಆರಂಭಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅನುಮೋದನೆ ನೀಡಿದ್ದಾರೆ. ಈ ಕೋರ್ಸ್ 10 ತಿಂಗಳ ಅವಧಿಯದ್ದಾಗಿರುತ್ತದೆ. ಮೃಗಾಲಯಗಳಲ್ಲಿ ವನ್ಯಜೀವಿಗಳ ಆರೈಕೆಗೆ ನುರಿತ ಸಿಬ್ಬಂದಿಯ ಅಗತ್ಯವಿದ್ದು, ಬೆಂಗಳೂರು ವಿಶ್ವವಿದ್ಯಾಲಯಗಳ ಮಾನ್ಯತೆಯೊಂದಿಗೆ ಬೆಂಗಳೂರಿನ ಲೈಫ್ ಸೈನ್ಸ್ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಆರಂಭಿಸಲಾಗುವುದು ಎಂದು ಅವರು ವಿಕಾಸಸೌಧದಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ ಸಭೆಯಲ್ಲಿ ವಿವರಿಸಿದರು. https://twitter.com/KarnatakaVarthe/status/1800516450337124620 https://kannadanewsnow.com/kannada/9000-posts-to-be-filled-up-in-transport-department-ramalinga-reddy/ https://kannadanewsnow.com/kannada/health-minister-dinesh-gundu-rao-launches-10-day-yoga-utsav-programme/
ಬೆಂಗಳೂರು: ಸಾರಿಗೆ ಇಲಾಖೆಯಲ್ಲಿನ 9000 ಹುದ್ದೆಗಳ ಭರ್ತಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ 2000 ಹುದ್ದೆಗಳನ್ನು ತುಂಬಲಾಗಿದೆ ಎಂಬುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಅವರು, ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಸೇರಿ ನಾಲ್ಕು ನಿಗಮಗಳಲ್ಲಿ 9,000 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧಾರ ಕೈಗೊಂಡಿದ್ದೇವೆ. 2,000 ಹುದ್ದೆಗಳನ್ನು ಈಗಾಗಲೇ ತುಂಬಲಾಗಿದೆ. ಉಳಿದವು ನೇಮಕಾತಿ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದ್ದಾರೆ. 5,800 ಹೊಸ ಬಸ್ಗಳನ್ನು ಖರೀದಿ ಮಾಡಲಾಗುತ್ತಿದ್ದು, ಅದರಲ್ಲಿ ಈಗಾಗಲೇ 2,400 ಬಸ್ ಖರೀದಿಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಸಾರಿಗೆ ಇಲಾಖೆಯ 9000 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. https://kannadanewsnow.com/kannada/mohan-charan-manjhi-to-be-new-odisha-chief-minister/ https://kannadanewsnow.com/kannada/health-minister-dinesh-gundu-rao-launches-10-day-yoga-utsav-programme/
ಬೆಂಗಳೂರು: ವಿಶ್ವ ಸಂಗೀತ ಲೋಕದ ಧ್ರುವತಾರೆ ಎನಿಸಿದ್ದ ಖ್ಯಾತ ಸರೋದ್ ವಾದಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂ.ರಾಜೀವ್ ತಾರಾನಾಥ್ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಪಂಡಿತ್ ರಾಜೀವ್ ತಾರಾನಾಥ್ ಕರ್ನಾಟಕದ ಹೆಮ್ಮೆಯ ದಿಗ್ಗಜ ಕಲಾವಿದರಲ್ಲಿ ಒಬ್ಬರು, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯುವಂತಹದ್ದು. ಅಂತಹ ಅದ್ಭುತ ಕಲಾವಿದ ವಿಧಿವಶರಾಗಿದ್ದು ನಮ್ಮ ದುರ್ದೈವ, ಅವರ ನಿಧನದಿಂದ ಕರ್ನಾಟಕದ ಸಾಂಸ್ಕೃತಿಕ ಲೋಕ ಬಹಳ ದೊಡ್ಡ ನಷ್ಟ ಅನುಭವಿಸಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ದೇಶ ವಿದೇಶಗಳಲ್ಲಿ ಅವರು ತಮ್ಮ ಸಂಗೀತದ ಮೂಲಕ ಕರ್ನಾಟಕದ ಕೀರ್ತಿಯನ್ನ ಪಸರಿಸಿದ್ದರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಸಹ ಕಾರ್ಯನಿರ್ವಹಿಸಿದ್ದರು, ಸಂಗೀತ ನಾಟಕ ಅಕಾಡೆಮಿ ಹಾಗೂ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಸೇರಿದಂತೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ರಾಜೀವ್ ತಾರಾನಾಥ್ ಈ…
ಬೆಂಗಳೂರು: ಬೆಂಗಳೂರಿಗೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದಂತ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಕೋರ್ಟ್ 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದಿಂದ ಬಿಗಿ ಭದ್ರತೆಯಲ್ಲಿ ಪೊಲೀಸರು 13 ಆರೋಪಿಗಳನ್ನು ಕೊರೆದೆಯ್ದರು. ಅಶ್ಲೀಲ ಸಂದೇಶ ಕಳುಹಿಸಿದ ಒಂದೇ ಒಂದು ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಹತ್ಯೆಗೈದು, ಮೋರಿಗೆ ಶವವನ್ನು ಎಸೆಯಲಾಗಿತ್ತು. ಈ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್ ಸೇರಿ 13 ಮಂದಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದರು. ಅವರಿಗೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಎಂಬಾತ ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಸ ಸಂದೇಶ ಕಳುಹಿಸುತ್ತಿದ್ದನಂತೆ. ಅಲ್ಲದೇ ನಟ ದರ್ಶನ್ ಬಗ್ಗೆಯೂ ಬಗ್ಗೆಯೂ ಕೆಟ್ಟದಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಕೂಡ ಹಾಕುತ್ತಿದ್ದನಂತೆ. ಇದೇ ಕಾರಣಕ್ಕೆ ಅನೇಕ ಬಾರಿ…