Author: kannadanewsnow09

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಬರ ಪರಿಹಾರ ಬಿಡುಗಡೆ ಮಾಡದಂತ ಆಸ್ತ್ರವನ್ನ ಕಾಂಗ್ರೆಸ್ ನಾಯಕರು ಬಳಿಸಿಕೊಂಡು ಧರಣಿ, ಪ್ರತಿಭಟನೆ ಇಳಿದಿದ್ದಾರೆ. ಇಂದು ವಿಧಾನಸೌಧದ ಬಳಿ ಇರುವಂತ ಗಾಂಧಿ ಪ್ರತಿಮೆಯ ಬಳಿಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಸಿಎಂ ಸಿದ್ಧರಾಮಯ್ಯ, ಸಚಿವರು, ಶಾಸಕರು, ಎಂಎಲ್ಸಿಗಳು ಸೇರಿ ಪ್ರತಿಭಟನೆ ಕೈಗೊಂಡಿದ್ದಾರೆ. ಬರ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರ್ಕಾರದ ಅನ್ಯಾಯ ಖಂಡಿಸಿ ಧರಣೆಯನ್ನು ಕಾಂಗ್ರೆಸ್ ನಾಯಕರಿಂದ ನಡೆಸಲಾಗುತ್ತಿದೆ. ಗೋ ಬ್ಯಾಕ್ ಅಮಿತ್ ಶಾ ಎಂಬುದಾಗಿಯೂ ಘೋಷಣೆ ಕೂಗಿ ಆಕ್ರೋಶವನ್ನು ಹೊರ ಹಾಕಲಾಗುತ್ತಿದೆ. ಇಂದು ಬೆಂಗಳೂರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಪ್ರಚಾರದಲ್ಲಿ ತೊಡಗೋದಕ್ಕೆ ರಾತ್ರಿ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಗೋ ಬ್ಯಾಕ್ ಘೋಷಣೆ ಕೂಗಿ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಭಿತ್ತಿ ಪತ್ರ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಕೂಡಲೇ ಬರ ಪರಿಹಾರವನ್ನು ಬಿಡುಗಡೆ ಮಾಡುವಂತೆ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ.…

Read More

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಂಗಳೂರಲ್ಲಿ ಲೋಕಸಭಾ ಚನಾವಣೆ ಹಿನ್ನಲೆಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮತಬೇಟೆಯಲ್ಲಿ ತೊಡಗಲಿದ್ದಾರೆ. ಬೆಂಗಳೂರಿಗೆ ರಾತ್ರಿ 7.35ಕ್ಕೆ ಹೆಚ್ಎಎಲ್ ಏರ್ ಪೋರ್ಟ್ ಗೆ ಆಗಮಿಸಲಿರುವಂತ ಅವರು, ರಸ್ತೆ ಮಾರ್ಗದ ಮೂಲಕ ರೋಡ್ ಶೋಗೆ ತೆರಳಲಿದ್ದಾರೆ. ರಾತ್ರಿ 7.50ಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬೊಮ್ಮನಹಳ್ಳಿ ಸರ್ಕಲ್ ಬಳಿ ವಿವೇಕಾನಂದ ವೃತ್ತದಿಂದ ಆರಂಭವಾಗಲಿರುವ ರೋಡ್ ಶೋ ರಾತ್ರಿ 8.45ಕ್ಕೆ ಸೆಂಟ್ ಫ್ರಾನ್ಸಿಸ್ ಸ್ಕೂಲ್ ಬಳಿಯಲ್ಲಿ ಅಂತ್ಯವಾಗಲಿದೆ. ಇಂದು ಬೆಂಗಳೂರಿನಲ್ಲಿನ ಲೋಕಸಭಾ ಚುನಾವಣಾ ಪ್ರಚಾರದ ರೋಡ್ ಶೋ ಮುಗಿದ ಬಳಿಕ, ಅಮಿತ್ ಶಾ ಅವರು ಕೇರಳದ ಕೊಚ್ಚಿನ್ ಗೆ ಪ್ರಯಾಣ ಬೆಳೆಸಲಿದ್ದಾರೆ. https://kannadanewsnow.com/kannada/bengaluru-karaga-mahotsava-today-traffic-restrictions-on-these-roads-heres-the-alternative-route/ https://kannadanewsnow.com/kannada/minor-girl-commits-suicide-by-hanging-herself-after-boyfriend-makes-obscene-video-viral/

Read More

ನಮ್ಮ ಜೀವನದ ಪ್ರತಿ ದಿನವೂ ನಾವು ಸಂತೋಷವಾಗಿರುತ್ತೇವೆಯೇ ಅಥವಾ ದುಃಖಿಸುತ್ತೇವೆಯೇ ಎಂಬುದನ್ನು ನಿರ್ಧರಿಸುವುದು ಹಣ. ನಮ್ಮಲ್ಲಿ ಹೆಚ್ಚು ಹಣವಿದೆ, ನಮಗೆ ಹೆಚ್ಚು ಸಂತೋಷ ಮತ್ತು ಶಾಂತಿ ಇರುತ್ತದೆ. ಹಣವೊಂದಿದ್ದರೆ ಅಲ್ಲಿ ಸುಖ-ಶಾಂತಿ? ನಿಮ್ಮ ಬಳಿ ಹಣವಿಲ್ಲದಿದ್ದರೆ, ಅದು ಖಂಡಿತವಾಗಿಯೂ ಎರಡೂ ಅಲ್ಲ ಎಂದು ನೀವು ಒಪ್ಪಿಕೊಳ್ಳಬೇಕು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ…

Read More

ಪೆರಾಕ್ : ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿರುವ ಘಟನೆ ಪೆರಾಕ್ ನ ಲುಮುಟ್ ನಲ್ಲಿ ಮಂಗಳವಾರ ನಡೆದಿದೆ. ಫ್ರೀ ಮಲೇಷ್ಯಾ ಟುಡೇ ವರದಿಯ ಪ್ರಕಾರ, ಪೆರಾಕ್ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಇಲಾಖೆ ಈ ಘಟನೆಯನ್ನು ದೃಢಪಡಿಸಿದೆ ಮತ್ತು ವೈದ್ಯಕೀಯ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಅವರ ಸಾವುಗಳನ್ನು ದೃಢಪಡಿಸಿದ್ದಾರೆ ಎಂದು ಹೇಳಿದರು. ಆಕಾಶದ ಮಧ್ಯದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ https://twitter.com/BNONews/status/1782616782601154680 ಹೆಲಿಕಾಪ್ಟರ್ ಗಳಿಂದ ಸಂತ್ರಸ್ತರ ಶವಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. https://kannadanewsnow.com/kannada/bengaluru-karaga-mahotsava-today-traffic-restrictions-on-these-roads-heres-the-alternative-route/

Read More

ಪೆರಾಕ್: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿರುವ ಘಟನೆ ಪೆರಾಕ್ ನ ಲುಮುಟ್ ನಲ್ಲಿ ಮಂಗಳವಾರ ನಡೆದಿದೆ. ಫ್ರೀ ಮಲೇಷ್ಯಾ ಟುಡೇ ವರದಿಯ ಪ್ರಕಾರ, ಪೆರಾಕ್ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಇಲಾಖೆ ಈ ಘಟನೆಯನ್ನು ದೃಢಪಡಿಸಿದೆ ಮತ್ತು ವೈದ್ಯಕೀಯ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಅವರ ಸಾವುಗಳನ್ನು ದೃಢಪಡಿಸಿದ್ದಾರೆ ಎಂದು ಹೇಳಿದರು. ಹೆಲಿಕಾಪ್ಟರ್ ಗಳಿಂದ ಸಂತ್ರಸ್ತರ ಶವಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. https://twitter.com/Megatron_ron/status/1782618136002347085 ಅಂದಹಾಗೆ ರಾಯಲ್ ಮಲೇಷ್ಯಾ ನೌಕಾಪಡೆಯ ಆಚರಣೆ ಕಾರ್ಯಕ್ರಮಕ್ಕಾಗಿ ಪೂರ್ವಾಭ್ಯಾಸ ನಡೆಸುತ್ತಿದ್ದಾಗ ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದು, ಈ ದುರಂತ ನಡೆದಿದೆ. https://kannadanewsnow.com/kannada/three-pedestrians-killed-as-bolero-collides-with-vehicle-in-raichur/ https://kannadanewsnow.com/kannada/bengaluru-karaga-mahotsava-today-traffic-restrictions-on-these-roads-heres-the-alternative-route/

Read More

ರಾಯಚೂರು: ಇಂದು ಜಿಲ್ಲೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಬೊಲೆರೋ ವಾಹನವೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಮೂವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ.  ರಾಯಚೂರಿನ ಶಕ್ತಿ ನಗರದಲ್ಲಿನ ಯಾದವ ನಗರದ ಕ್ರಾಸ್ ಬಳಿಯಲ್ಲಿ ಬೆಳಗಿನ ಜಾವ 5 ಗಂಟೆಯ ವೇಳೆಯಲ್ಲಿ ಯಮ ಸ್ವರೂಪಿಯಾಗಿ ಬಂದಂತ ಬೊಲೆರೋ ವಾಹನವೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಅಯ್ಯನಗೌಡ(28), ಮಹೇಶ್ (22) ಹಾಗೂ ಉದ ಕುಮಾರ(28) ಎಂಬುದಾಗಿ ಗುರುತಿಸಲಾಗಿದೆ. ರಮೇಶ ಭೂಷಣ ಸೇರಿದಂತೆ ಇಬ್ಬರು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೋಳಿ ತುಂಬಿಕೊಂಡು ಬರುತ್ತಿದ್ದ ಬುಲೇರೋ ವಾಹನ ಚಾಲಕ ನಿರ್ಲಕ್ಷ್ಯದಿಂದ ಹಾಗೂ ವೇಗವಾಗಿ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನಾ ಸ್ಥಳಕ್ಕೆ ಶಕ್ತಿ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/challenging-star-darshan-campaigns-for-star-chandru/ https://kannadanewsnow.com/kannada/bengaluru-karaga-mahotsava-today-traffic-restrictions-on-these-roads-heres-the-alternative-route/

Read More

ಮಂಡ್ಯ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ( ಸ್ವಾರ್ ಚಂದ್ರು ) ಪರ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್, ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಗಣಿಗ ರವಿ ಹಾಗೂ ಮಾಜಿ ಎಂಎಲ್ಸಿ ಎನ್.ಅಪ್ಪಾಜಿಗೌಡ ಜೊತೆಗೂಡಿ ಸೋಮವಾರ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಗ್ರಾಮದಲ್ಲಿ ಭರ್ಜರಿ ಮತ ಶಿಕಾರಿ ನಡೆಸಿದರು. ನಟ ದರ್ಶನ್ ಪ್ರಚಾರಕ್ಕೆ ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ ನೆಚ್ಚಿನ ನಟನನ್ನು ನೋಡಲು ಕೊಪ್ಪ ಗ್ರಾಮದಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅಂತೆಯೇ ಕೊಪ್ಪ ಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಕ್ರೇನ್ ಮೂಲಕ ಬೃಹತ್ ಗುಲಾಬಿ ಹಾರ ಹಾಕಿ ಸ್ವಾಗತ ಕೋರಲಾಯಿತು. ಬಳಿಕ ಮದ್ದೂರು ವಿಧಾನಸಭಾ ಕ್ಷೇತ್ರದ ಕೆಸ್ತೂರು, ಕೆ.ಹೊನ್ನಲಗೆರೆ, ಮುಡೇನಹಳ್ಳಿ ಗೇಟ್, ಕೆ.ಎಂ.ದೊಡ್ಡಿ (ಭಾರತೀ ನಗರ ), ಬೆಸಗರಹಳ್ಳಿ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮದ್ದೂರು ಪಟ್ಟಣದ ಟಿಬಿ ವೃತ್ತದಿಂದ ಪೇಟೆ ಬೀದಿ ಮೂಲಕ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದವರೆಗೆ ಬೃಹತ್…

Read More

ರಾಯಚೂರು: ಜಿಲ್ಲೆಯಲ್ಲಿ ಹನುಮ ಮಾಲಾಧಾರಿಗಳಿಗೆ ಬೊಲೆರೋ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಮೂವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ರಾಯಚೂರಿನ ಶಕ್ತಿ ನಗರದಲ್ಲಿನ ಯಾದವ ನಗರದ ಕ್ರಾಸ್ ಬಳಿಯಲ್ಲಿ ಹನುಮ ಮಾಲಾಧಾರಿಗಳು ಹನುಮ ಜಯಂತಿಯ ಪ್ರಯುಕ್ತ ಕೃಷ್ಣಾ ನದಿಗೆ ನೀರು ತರಲು ತೆರಳಿದ್ದರು. ಬೆಳಗಿನ ಜಾವ 5 ಗಂಟೆಯ ವೇಳೆಯಲ್ಲಿ ಹನುಮ ಮಾಲಾಧಾರಿಗಳಿಗೆ ಯಮ ಸ್ವರೂಪಿಯಾಗಿ ಬಂದಂತ ಬೊಲೆರೋ ವಾಹನವೊಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಅಯ್ಯನಗೌಡ(28), ಮಹೇಶ್ (22) ಹಾಗೂ ಉದ ಕುಮಾರ(28) ಎಂಬುದಾಗಿ ಗುರುತಿಸಲಾಗಿದೆ. ರಮೇಶ ಭೂಷಣ ಸೇರಿದಂತೆ ಇಬ್ಬರು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೋಳಿ ತುಂಬಿಕೊಂಡು ಬರುತ್ತಿದ್ದ ಬುಲೇರೋ ವಾಹನ ಚಾಲಕ ನಿರ್ಲಕ್ಷ್ಯದಿಂದ ಹಾಗೂ ವೇಗವಾಗಿ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನಾ ಸ್ಥಳಕ್ಕೆ ಶಕ್ತಿ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/k-p-nanjundi-resigns-as-mlc/ https://kannadanewsnow.com/kannada/retail-inflation-likely-to-fall-to-five-year-low-in-2024-25-cmie-report/

Read More

ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕೆ.ಪಿ ನಂಜುಂಡಿ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಬಿಜೆಪಿಗೆ ಬಿಗ್ ಶಾಕ್ ಅನ್ನು ಕೆ.ಪಿ ನಂಜುಂಡಿ ನೀಡಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯ ನಿರ್ಧಾರವನ್ನು ಪರಿಷತ್ ಸದಸ್ಯ ಕೆ.ಪಿ ನಂಜುಂಡಿ ಕೈಗೊಂಡಿದ್ದರು. ಇದೇ ಕಾರಣಕ್ಕಾಗಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕೆ.ಪಿ ನಂಜುಂಡಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾದಂತ ಅವರು, ತಮ್ಮ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂದಹಾಗೇ ಬಿಜೆಪಿಗೆ ಗುಡ್ ಬೈ ಹೇಳಲಿರುವಂತ ಕೆ.ಪಿ ನಂಜುಂಡಿ, ಕಾಂಗ್ರೆಸ್ ಪಕ್ಷವನ್ನು ಇಂದು ಅಧಿಕೃತವಾಗಿ ಸೇರಲಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಮಾತುಕತೆ ನಡೆಸಿ, ಫೈನಲ್ ಮಾಡಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/retail-inflation-likely-to-fall-to-five-year-low-in-2024-25-cmie-report/ https://kannadanewsnow.com/kannada/bengaluru-karaga-mahotsava-today-traffic-restrictions-on-these-roads-heres-the-alternative-route/

Read More

ನವದೆಹಲಿ: ರಕ್ತದಲ್ಲಿನ ಸಕ್ಕರೆ ಮಟ್ಟವು 320 ಕ್ಕೆ ತಲುಪಿದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇಂದು ತಿಹಾರ್ ಜೈಲಿನಲ್ಲಿ ಇನ್ಸುಲಿನ್ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ. ಪದೇ ಪದೇ ವಿನಂತಿಸಿದರೂ ತಿಹಾರ್ ಜೈಲು ಆಡಳಿತವು ತನಗೆ ಇನ್ಸುಲಿನ್ ಒದಗಿಸಿಲ್ಲ ಎಂದು ಎಎಪಿ ಮುಖ್ಯಸ್ಥರು ನಿನ್ನೆ ಆರೋಪಿಸಿದ್ದಾರೆ. ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಅನಾರೋಗ್ಯದ ನೆಪದಲ್ಲಿ ಜಾಮೀನು ಪಡೆಯೋ ಸಂಬಂಧ ಸಕ್ಕರೆ ಅಂಶವಿರುವಂತ ಹಣ್ಣಿನ ರಸವನ್ನು ಸೇವಿಸುತ್ತಿದ್ದಾರೆ ಎಂಬುದಾಗಿ ತಿಹಾರ್ ಜೈಲಿನ ಅಧಿಕಾರಿಗಳು ಆರೋಪಿಸಿದ್ದರು. ಈ ಬೆನ್ನಲ್ಲೇ ಅವರ ಶುಗರ್ ಲೆವೆಲ್ ಹೆಚ್ಚಾಗಿರೋದು ಪರೀಕ್ಷೆಯಿಂದ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಕ್ಕರೆ ಮಟ್ಟದ ಏರಿಕೆಯನ್ನು ನಿಯಂತ್ರಿಸೋ ಸಂಬಂಧ ತಿಹಾರ್ ಜೈಲಿನ ವೈದ್ಯರು ಇನ್ಸುಲಿನ್ ನೀಡಿದ್ದಾರೆ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ. https://kannadanewsnow.com/kannada/bengalurus-liquor-lovers-liquor-is-not-available-in-these-areas-today/ https://kannadanewsnow.com/kannada/retail-inflation-likely-to-fall-to-five-year-low-in-2024-25-cmie-report/

Read More