Subscribe to Updates
Get the latest creative news from FooBar about art, design and business.
Author: kannadanewsnow09
ಚಿತ್ರದುರ್ಗ: ಜಿಲ್ಲೆಯಲ್ಲಿ ರಾಜ್ಯದ ಪಂಚಾಯತ್ ರಾಜ್ ಇಲಾಖೆಯಲ್ಲೊಂದು ಬಹುದೊಡ್ಡ ಕರ್ಮಕಾಂಡ ಎನ್ನುವಂತೆ, ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಕಾಮಗಾರಿ ನಡೆಸದೇ ಬಿಲ್ ಗುಳುಂ ಮಾಡೋದಕ್ಕೆ ಹೋಗಿ, ಪ್ರಕರಣ ಹೊರಬಿದ್ದಂತೆ ಅಕ್ರಮ ಮುಚ್ಚಿ ಹಾಗೋದಕ್ಕೆ ಇಲ್ಲ ಸಲ್ಲದ ಕಥೆಯನ್ನು ಅಧಿಕಾರಿಗಳು ಕಟ್ಟುತ್ತಿದ್ದಾರೆ. ಹಾಗಾದ್ರೇ ಏನಾಗಿದೆ ಅಂತಹ ಕರ್ಮಕಾಂಡ ಎನ್ನುವ ಬಗ್ಗೆ ಮುಂದೆ ಓದಿ. ಕಾಮಗಾರಿ ಮೊತ್ತವಿಲ್ಲ, ಪ್ರಾರಂಭದ ದಿನಾಂಕವಿಲ್ಲ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯ್ತಿಯಲ್ಲೇ ಹೀಗೊಂದು ಬಹುದೊಡ್ಡ ಕರ್ಮಕಾಂಡ ನಡೆದಿದೆ. ಅದೆಲ್ಲೋ ಕುರುಚಲು ಗಿಡಗಳ ಮಧ್ಯೆ ಗೋ ಕಟ್ಟೆ ನಿರ್ಮಾಣ ಮಾಡ್ತಿವಿ ಅಂತ ಯಾರಿಗೂ ಗೊತ್ತಾಗದಂತೆ ಪಿಡಿಒ ಹಾಗೂ ಕಾಮಗಾರಿ ಮಾಡಿಸೋರು ಸೇರಿ ಬೋರ್ಡ್ ಹಾಕ್ತಾರೆ ಅಂದ್ರೆ ನೀವೇ ಯೋಚನೆ ಮಾಡಿ. ಇನ್ನೂ ತಾಲೂಕಿನ ಉಡುವಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಅಜ್ಜಯ್ಯನಹಟ್ಟಿ ಗ್ರಾಮದ ಸರ್ವೆ ನಂಬರ್.11ರಲ್ಲಿ ಬಾಲಪ್ಪನ ಜಮೀನಿನ ಹತ್ತಿರ ಗೋಕಟ್ಟೆ ನಿರ್ಮಾಣಕ್ಕಾಗಿ ಹಾಕಿರೋ ಬೋರ್ಡ್ ನಲ್ಲಿ ಕಾಮಗಾರಿ ಆರಂಭ, ಕಾಮಗಾರಿ ಮುಕ್ತಾಯದ ಮಾಹಿತಿಯಿಲ್ಲ. ಅದು ಕಾಮಗಾರಿ ಆರಂಭವಾದಾಗ,…
ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ನಿಂದ ಸಂಗ್ರಹಿಸಿದ ಬಾವಲಿ ಮಾದರಿಗಳಲ್ಲಿ ನಿಪಾಹ್ ವೈರಸ್ ಇರುವುದು ಪತ್ತೆಯಾಗಿದೆ, ಅಲ್ಲಿ ಜೂನ್ 21 ರಂದು ಸೋಂಕಿನಿಂದ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಪ್ರಕಾರ, ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಗ್ರಹಿಸಿದ 27 ಹಣ್ಣಿನ ಬಾವಲಿ ಮಾದರಿಗಳಲ್ಲಿ ಆರರಲ್ಲಿ ಪ್ರತಿಕಾಯಗಳು ಕಂಡುಬಂದಿವೆ. ನಿಪಾಹ್ ಪ್ರೋಟೋಕಾಲ್ ಪ್ರಕಾರ ನಡೆಸಿದ ಸೋಂಕಿತ ವ್ಯಕ್ತಿಯ ಸಂಪರ್ಕ ಪಟ್ಟಿಯಲ್ಲಿರುವವರ ಎಲ್ಲಾ ಪರೀಕ್ಷೆಗಳು ಇಲ್ಲಿಯವರೆಗೆ ವೈರಸ್ಗೆ ನಕಾರಾತ್ಮಕವಾಗಿವೆ ಎಂದು ಸಚಿವರು ಹೇಳಿದರು. ಒಟ್ಟು 472 ಜನರು ಸಂಪರ್ಕ ಪಟ್ಟಿಯಲ್ಲಿದ್ದಾರೆ ಮತ್ತು ಕಡ್ಡಾಯ 21 ದಿನಗಳ ಪ್ರತ್ಯೇಕತೆಯ ಅವಧಿಯನ್ನು ಪೂರ್ಣಗೊಳಿಸಿದ 261 ವ್ಯಕ್ತಿಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು. ಒಂದೆಡೆ ವಯನಾಡು ಭೂ ಕುಸಿತ ದುರಂತದಿಂದ ಕೇರಳ ತತ್ತರಿಸಿ ಹೋಗಿದೆ. ಈ ಬೆನ್ನಲ್ಲೇ ನಿಪಾಹ್ ವೈರಸ್ ಪತ್ತೆಯಾಗಿರೋದು, ಮತ್ತಷ್ಟು ಆಂತಕಕ್ಕೆ ಕಾರಣವಾಗಿದೆ. https://kannadanewsnow.com/kannada/death-toll-rises-to-91-hundreds-injured-in-clashes-between-protesters-in-bangladesh/ https://kannadanewsnow.com/kannada/death-toll-in-wayanad-tragedy-rises-to-387/
ಬಾಗ್ಲಾದೇಶ: ಬಾಂಗ್ಲಾದೇಶದಲ್ಲಿ ನಡೆದ ಹೊಸ ಹಿಂಸಾಚಾರದಲ್ಲಿ 14 ಪೊಲೀಸರು ಸೇರಿದಂತೆ ಕನಿಷ್ಠ 91 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪತ್ರಿಕೆ ಪ್ರೊಥೋಮ್ ಅಲೋ ಅವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಇದು ಸಿಲ್ಹೆಟ್ನಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ತನ್ನ ಪ್ರಜೆಗಳನ್ನು ಜಾಗರೂಕರಾಗಿರಲು ಕೇಳಲು ಪ್ರೇರೇಪಿಸಿತು ಮತ್ತು ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿತು. ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿ ಆಂದೋಲನ ಘೋಷಿಸಿದ ಅಸಹಕಾರ ಚಳವಳಿಗೆ ಕುಳಿತವರು ಅವಾಮಿ ಲೀಗ್, ಛತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರೊಂದಿಗೆ ಘರ್ಷಣೆ ನಡೆಸಿದಾಗ ಹಿಂಸಾಚಾರ ಪುನರಾರಂಭವಾಯಿತು. ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ವಿದ್ಯಾರ್ಥಿಗಳು ಕರೆ ನೀಡುವುದರೊಂದಿಗೆ ಜುಲೈನಲ್ಲಿ ಪ್ರಾರಂಭವಾದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ 200 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ನಂತರ ಪ್ರತಿಭಟನಾಕಾರರು ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಪ್ರತಿಭಟನಾಕಾರರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ನಡುವಿನ ಹಿಂಸಾತ್ಮಕ ಘರ್ಷಣೆಗಳ ಮಧ್ಯೆ ಜಾಗರೂಕರಾಗಿರಲು ಸಿಲ್ಹೆಟ್ನಲ್ಲಿರುವ ಭಾರತೀಯ…
ಕೇರಳ: ವಯನಾಡಿನಲ್ಲಿ ಭೂಕುಸಿತದ 6ನೇ ದಿನದ ನಂತ್ರ, ನಾಪತ್ತೆಯಾಗಿರುವವರು, ಬದುಕುಳಿದವರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ. ಇಲ್ಲಿಯವರೆಗೆ 387 ಜನರು ಸಾವನ್ನಪ್ಪಿದ್ದು, 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ವಯನಾಡಲ್ಲಿ ಎಲ್ಲೆಲ್ಲೂ ಸ್ಮಶಾನ ಮೌನವೇ ಆವರಿಸಿದಂತೆ ಆಗಿದೆ. ಕೇರಳದ ವಯನಾಡಲ್ಲಿ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆಯಾಗಿದೆ. ಮುಂಡಕ್ಕೈ, ಚೂರಲ್ಮಲದಲ್ಲಿ 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ವಯನಾಡಿನ ಸೂಚಿಪ್ಪಾರ ಫಾಲ್ಸ್ ನಲ್ಲಿ ಭೂಕುಸಿತದಿಂದ ಕೊಚ್ಚಿ ಹೋಗಿದ್ದಂತ 11 ಮೃತದೇಹಗಳು ದೊರೆತಿದ್ದಾರೆ. ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿ ಹೋಗಿ, ಅಲ್ಲಿ ತಲುಪಿರೋದಾಗಿ ತಿಳಿದು ಬಂದಿದೆ. ಕೇರಳದ ವಯನಾಡು ಭೂಕುಸಿತ ದುರಂತವು ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡಾ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ಮುಂದುವರಿಸಿವೆ. ಇದರ ನಡುವೆ ಭೂಕುಸಿತ ದುರಂತವು ಹಲವು ಮನಕಲಕುವ ಘಟನಾವಳಿಗಳಿಗೆ ಸಾಕ್ಷಿಯಾಗಿದೆ. 6 ದಿನಗಳಿಂದ ತನ್ನ ಮಾಲೀಕನಿಗಾಗಿ ಹುಡುಕಾಡಿದಂತ ನಾಯಿಯೊಂದಕ್ಕೆ ಒಡತಿಯೊಬ್ಬರು ದೊರೆತಿದ್ದು ಕಂಡು, ಸಂತಸಗೊಂಡಿರುವಂತ ಪೋಟೋಗಳು…
ಧಾರವಾಡ: ಜಿಲ್ಲೆಯಲ್ಲಿನ ಕೇಂದ್ರ ಕಾರಾಗೃಹ ಜೈಲಿನಲ್ಲೇ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಆರೋಪಿ, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡದಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಕೈದಿ ಬಸವರಾಜ ಹೊಸೂರ(47) ಎಂಬಾತ ನೇಣಿಗೆ ಶರಣಾಗಿದ್ದಾನೆ. ಕಾರಾಗೃಹದಲ್ಲಿನ ಕಿಟಗಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಬಸವರಾಜ ಹೊಸೂರ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಕೈದಿಯಾಗಿದ್ದನು. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸಂದಿಗವಾಡ ನಿವಾಸಿಯಾಗಿದ್ದರು. ಡಬ್ಬಲ್ ಮರ್ಡರ್ ಕೇಸಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಂತ ಕೈದಿ, ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. https://kannadanewsnow.com/kannada/dk-shivakumar-ji-i-have-not-looted-everything-you-see-like-you-hd-kumaraswamy/ https://kannadanewsnow.com/kannada/breaking-major-fire-breaks-out-at-andhra-pradeshs-visakhapatnam-railway-station-trains-gutted-in-fire/ https://kannadanewsnow.com/kannada/decision-to-remove-sirigere-swamiji-from-chair-coordination-committee-formed-under-the-chairmanship-of-shamanur/
ರಾಮನಗರ: ಡಿ.ಕೆ.ಶಿವಕುಮಾರ್ ಅವರೇ.. ನಿಮ್ಮ ಹಾಗೆ ಕಂಡ ಕಂಡ ಕಂಡ ಕಂಡಿದ್ದೆಲ್ಲವನ್ನೂ ಲೂಟಿ ಹೊಡೆದಿಲ್ಲ. ನಿಮ್ಮ ಹಾಗೆ ನಾನು ಎಲ್ಲಿಯೂ ಲೂಟಿ ಮಾಡಿಲ್ಲ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ರಾಮನಗರದಲ್ಲಿ ಮೈಸೂರು ಚಲೋ ಪಾದಯಾತ್ರೆಯ ಬೃಹತ್ ರೋಡ್ ಶೋ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಡದಿಯ ಕೇತಿಗಾನಹಳ್ಳಿ ಗ್ರಾಮದಲ್ಲಿರುವ ತಮ್ಮ ಜಮೀನು ಬಗ್ಗೆ ಉಲ್ಲೇಖ ಮಾಡಿದ ಕೇಂದ್ರ ಸಚಿವರು; ನಾನು ಚಲನಚಿತ್ರ ಡಿಸ್ಟ್ರಿಬ್ಯೂಟರ್ ಆಗಿದ್ದಾಗ ಚೈನಾ ಸಾಬ್ರು ಅಂತ ಇಬ್ಬರು ಇದ್ದರು. ನೀನು ದೇವೆಗೌಡರ ಮಗ, ಬೇಸಾಯ ಮಾಡಬೇಕು. ನೀನು ರೈತನಾಗಿ ಬಾಳಿ ಬದುಕಬೇಕು ಎಂದು ಹೇಳಿ ಕರೆದುಕೊಂಡು ಹೋಗಿ ಈ ಜಾಮೀನು ತೋರಿಸಿದರು. ಆ ಜಾಗ ನೋಡಿ ನಾನು. ನೀವು ನೋಡಿದ್ರೆ ಕಲ್ಲು ಹೊಡೆಯುವ ಜಾಗ ತೋರಿಸ್ತಿದ್ದೀರಲ್ಲ ಅಂದೆ. ಆಮೇಲೆ ಕಷ್ಟಪಟ್ಟು ಒಳ್ಳೆಯ ತೋಟ ಮಾಡಿದ್ದೇನೆ. ಯಾರು ಬೇಕಾದರೂ ಬಂದು ನೋಡಬಹುದು. ನನಗೆ ಆ ಜಾಮೀನು ಮಾರಿದ ಯಾರನ್ನು ನಾನು ಕೊಟ್ಟವರನ್ನು ಯಾರನ್ನು ಮರೆತಿಲ್ಲ, ಡಿ.ಕೆ.ಶಿವಕುಮಾರ್ ಅವರೇ..…
ರಾಮನಗರ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಜೆಡಿಎಸ್ ಬಿಜೆಪಿ ಅಶ್ವಮೇಧ ಆರಂಭಿಸಿವೆ. ಈ ಸರಕಾರದ ಅಂತಿಮ ಕಾಲ ಹತ್ತಿರಲ್ಲಿಯೇ ಇದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು. ರಾಮನಗರದಲ್ಲಿ ಮೈಸೂರು ಚಲೋ ಪಾದಯಾತ್ರೆಯ ಬೃಹತ್ ರೋಡ್ ಶೋ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಂದಕ್ಕೂ ಲೆಕ್ಕ ಕೊಡುತ್ತೇವೆ. ನಿಮ್ಮ ಲೆಕ್ಕ ಚುಕ್ತಾ ಮಾಡುತ್ತೇವೆ. ಅಶ್ವಮೇಧಕ್ಕೆ ಚಾಲನೆ ಕೊಟ್ಟಿದ್ದೇವೆ. ನಿಮ್ಮನ್ನು ಮುಗಿಸುವ ಕಾಲ ಹತ್ತಿರ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಸರಕಾರವು ಯಡಿಯೂರಪ್ಪ ಅವರ ವಿಷಯದಲ್ಲಿ ಅಮಾನುಷವಾಗಿ ವರ್ಸಿಸಿದೆ. ಅವರ ಮನಸ್ಸಿಗೆ ನೋವು ಕೊಟ್ಟಿದೆ. ನಿಮ್ಮ ಪಾಪದ ಕೊಡ ತುಂಬಿದೆ. ನಿಮ್ಮ ಅಂತಿಮ ಕಾಲ ಹತ್ತಿರಕ್ಕೆ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ-ಜೆಡಿಎಸ್ ಶವಯಾತ್ರೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ ಅವರು. ಕಲಬುರ್ಗಿಯಲ್ಲಿ ಒಬ್ಬ ಪೋಲಿಸ್ ಅಧಿಕಾರಿಯ ಶವಯಾತ್ರೆ ಮಾಡಿಸಿದ್ದರಲ್ಲ, ಆ ಅಧಿಕಾರಿಯನ್ನು ಬಲಿ ತೆಗೆದುಕೊಂಡು ಆ ಕುಟುಂಬವನ್ನು…
ಬೆಂಗಳೂರು: ಬಿಜೆಪಿ–ಜೆಡಿಎಸ್ ಪಕ್ಷಗಳ ಪಿತೂರಿಗೆ ನಾವು ಜಗ್ಗುವುದಿಲ್ಲ. ನಾವು ಜನರ ಬಳಿಗೆ ಹೋಗುತ್ತೇವೆ. ಅವರಿಗೆ ವಾಸ್ತವಾಂಶ ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸ್ಪಷ್ಟ ಪಡಿಸಿದರು. ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಚಿವರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಗಂಭೀರ ಬೆಳವಣಿಗೆಗಳ ಕುರಿತು ರಾಜ್ಯದ ಸಚಿವರೊಂದಿಗೆ ಚರ್ಚಿಸಲಾಯಿತು. ಕರ್ನಾಟಕ ರಾಜ್ಯ ಬಿಜೆಪಿಯು ಸರ್ಕಾರಗಳನ್ನು ಉರುಳಿಸುವ ಇತಿಹಾಸವನ್ನು ಹೊಂದಿದೆ. 2018ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿದ್ದೇ ಬಿಜೆಪಿ ಕೇಂದ್ರ ನಾಯಕತ್ವದ ಪಿತೂರಿಯಿಂದ. ಅದೇ ರೀತಿಯ ಸ್ಪಷ್ಟ ಉದ್ದೇಶದಿಂದ ಈಗಲೂ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂದಾಗಲೇ ಇಡೀ ದೇಶ ಕಾಂಗ್ರೆಸ್ ಸರ್ಕಾರದ ವಿರುದ್ಧದ ಪಿತೂರಿಯನ್ನು ಗಮನಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ನ ಮುಖಂಡರು ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು…
ಪ್ಯಾರಿಸ್: ಇಲ್ಲಿ ನಡೆಯುತ್ತಿರುವಂತ ಒಲಿಂಪಿಕ್ಸ್ 2024ರಲ್ಲಿ ಬ್ಯಾಡ್ಮಿಂಟನ್ ನಲ್ಲಿ ಕಾರ್ಲೋಸ್ ಅಲ್ಕರಾಜ್ ಮಣಿಸಿ ನೊವಾಕ್ ಜೊಕೊವಿಕ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024ರ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿದ ನೊವಾಕ್ ಜೊಕೊವಿಕ್ ಚಿನ್ನದ ಪದಕ ಗೆದ್ದಿದ್ದಾರೆ. ಜೊಕೊವಿಕ್ 7(7)-6(3), 7(7)-6(2) ನೇರ ಸೆಟ್ ಗಳಲ್ಲಿ ಗೆಲುವು ಸಾಧಿಸಿದರು. ನೊವಾಕ್ ಜೊಕೊವಿಕ್ ಟೈಬ್ರೇಕ್ ನಲ್ಲಿ ಎರಡನೇ ಸೆಟ್ ಅನ್ನು 7-6, 7-6 ಸೆಟ್ ಗಳಿಂದ ಗೆದ್ದು ತಮ್ಮ ಮೊದಲ ಚಿನ್ನವನ್ನು ಗೆದ್ದರು. ನೊವಾಕ್ ಜೊಕೊವಿಕ್ ವೃತ್ತಿಜೀವನದ ಗೋಲ್ಡನ್ ಸ್ಲಾಮ್ ಗೆದ್ದ ಐದನೇ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. https://twitter.com/ITFTennis/status/1820112978299285610 https://kannadanewsnow.com/kannada/missing-congress-mla-channa-reddy-found-dead-at-cms-residence/ https://kannadanewsnow.com/kannada/decision-to-remove-sirigere-swamiji-from-chair-coordination-committee-formed-under-the-chairmanship-of-shamanur/
ಬೆಂಗಳೂರು: ಯಾದಗಿರಿ ಪಿಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವಿನ ಬಳಿಕ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಹಾಗೂ ಪುತ್ರನ ವಿರುದ್ಧ ದೂರು, ಎಫ್ಐಆರ್ ದಾಖಲಾಗಿತ್ತು. ಈ ನಂತ್ರ ನಾಪತ್ತೆಯಾಗಿದ್ದಂತ ಅವರು ಇದೀಗ ಸಿಎಂ ಸಿದ್ಧರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಇಂದು ಬೆಂಗಳೂರಿನ ಸಿಎಂ ಸಿದ್ಧರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದಂತ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಅವರು, ಸಿಎಂ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಜೊತೆಗೆ ತಮ್ಮ ವಿರುದ್ಧ ದಾಖಲಾಗಿರುವಂತ ಎಫ್ಐಆರ್ ಕುರಿತಂತೆ ಚರ್ಚಿಸಿದರು ಎನ್ನಲಾಗಿದೆ. ಯಾದಗಿರಿ ಪಿಎಸ್ಐ ಪರಶುರಾಮ ನಿಗೂಢ ಸಾವಿನ ಬಳಿಕ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಅವರು ನಾಪತ್ತೆಯಾಗಿದ್ದರು. ಈಗ ಸಿಎಂ, ಗೃಹ ಸಚಿವರ ಎದುರಲ್ಲೇ ಅವರು ಪ್ರತ್ಯಕ್ಷರಾಗಿದ್ದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಅವರ ವಿರುದ್ಧ ದಾಖಲಾಗಿರುವಂತ ಪ್ರಕರಣ ಸಂಬಂಧದಲ್ಲಿ ಬಂಧನಕ್ಕೆ ಒಳಗಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. https://kannadanewsnow.com/kannada/bangladesh-violence-72-dead-curfew-imposed-across-the-country/ https://kannadanewsnow.com/kannada/will-not-die-till-siddaramaiah-resigns-as-cm-by-vijayendra/ https://kannadanewsnow.com/kannada/breaking-major-fire-breaks-out-at-andhra-pradeshs-visakhapatnam-railway-station-trains-gutted-in-fire/