Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದಲ್ಲಿ ನಿನ್ನೆ ನಡೆದಂತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಶೇ.69ರಷ್ಟು ಮತದಾನ ನಡೆದಿದೆ. ಅಲ್ಲದೇ ಬಹುತೇಕ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ. ಚಾಮರಾಜನಗರ ತಾಲೂಕಿನ ಮಹದೇಶ್ವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯಲ್ಲಿ ಮತಯಂತ್ರಕ್ಕೆ ಬೆಂಕಿ ಹಚ್ಚಿ, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದಂತೆ ಘಟನೆ ನಡೆದಿದೆ. ಅಲ್ಲದೇ ಬೆಂಗಳೂರಿನ ಮಂಜುನಾಥ ನಗರ ಕಾಂಗ್ರೆಸ್ ಕಾರ್ಯಕರ್ತರಿಂದ ಚೊಂಬು ಖಾಲಿ ಸಿಲಿಂಡರ್ ಪ್ರದರ್ಶನ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್ ನಲ್ಲಿ ತಾಂತ್ರಿಕ ದೋಷ ಸೇರಿದಂತೆ ಸಣ್ಣಪುಟ್ಟ ಘಟನೆ ಹೊರತುಪಡಿಸಿ, ರಾಜ್ಯಾಧ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ. ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಶೇ.69.23ರಷ್ಟು ಮತದಾನವಾಗಿದೆ. ಮತದಾನಕ್ಕೆ 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 30,602 ಮತಗಟ್ಟೆ ಸ್ಥಾಪಿಸಲಾಗಿತ್ತು. https://kannadanewsnow.com/kannada/omaha-airport-shut-down-after-tornado-touchdown-in-nebraska-city-flights-delayed/
ಒಮಾಹಾ: ಇಲ್ಲಿ ಶುಕ್ರವಾರ ಭಾರಿ ಸುಂಟರಗಾಳಿ ನೆಬ್ರಾಸ್ಕಾ ನಗರದ ವಿಮಾನ ನಿಲ್ದಾಣವಾದ ಎಪ್ಪ್ಲಿ ವಾಯುನೆಲೆಗೆ ಹಾನಿಯನ್ನುಂಟು ಮಾಡಿದೆ. ಚಂಡಮಾರುತದ ಚಟುವಟಿಕೆಯಿಂದಾಗಿ ಪ್ರಸ್ತುತ ಮುಚ್ಚಲಾಗಿದೆ ಎಂದು ವಿಮಾನ ನಿಲ್ದಾಣವು ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ತಿಳಿಸಿದೆ. ಸ್ಥಳೀಯರು ವಿಮಾನಯಾನ ಸಂಸ್ಥೆಗಳಲ್ಲಿ ವಿಳಂಬವನ್ನು ನಿರೀಕ್ಷಿಸಬಹುದು. “ಹಾನಿಯ ಮೌಲ್ಯಮಾಪನಕ್ಕಾಗಿ ಎಪ್ಪ್ಲಿ ವಾಯುನೆಲೆ (ಒಎಂಎ) ಮುಚ್ಚಲ್ಪಟ್ಟಿದೆ. ಒಎಂಎ ಟರ್ಮಿನಲ್ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಪ್ರಯಾಣಿಕರು ಆಶ್ರಯದಿಂದ ಹೊರಗುಳಿದಿದ್ದಾರೆ. ಯಾವುದೇ ವಿಮಾನ ವಿಳಂಬಕ್ಕಾಗಿ ದಯವಿಟ್ಟು ನಿಮ್ಮ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ” ಎಂದು ವಿಮಾನ ನಿಲ್ದಾಣ ತಿಳಿಸಿದೆ. ಒಮಾಹಾದಲ್ಲಿ, ಬಹುಶಃ ಎಪ್ಪ್ಲಿ ವಾಯುನೆಲೆಯ ಮೇಲೆ ಅನೇಕ ತಿರುವುಗಳು ಕಂಡುಬಂದ ನಂತರ ಈ ಪ್ರಕಟಣೆ ಬಂದಿದೆ. “ಒಎಂಎ ಟರ್ಮಿನಲ್ನಲ್ಲಿರುವ ಪ್ರಯಾಣಿಕರನ್ನು ಚಂಡಮಾರುತ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ” ಎಂದು ವಿಮಾನ ನಿಲ್ದಾಣ ಈ ಹಿಂದೆ ತಿಳಿಸಿತ್ತು. ಸ್ಥಳೀಯರು ಮತ್ತು ಚಂಡಮಾರುತ ಬೆನ್ನಟ್ಟುವವರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸುಂಟರಗಾಳಿಯ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು ನಿವಾಸಿಗಳಿಗೆ…
ಬೆಂಗಳೂರು: ರಾಜ್ಯದ ಜನರು ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದಾರೆ. ಅಬ್ಬಾ ಮಳೆ ಬಂದ್ರೆ ಸಾಕು, ಧರಣಿ ತಂಪಾಗಿ, ತಣ್ಣಗಾದ್ರೆ ಸಾಕು ಅಂತ ಕಾಯುತ್ತಿದ್ದಾರೆ. ಈ ನಿರೀಕ್ಷೆಯಲ್ಲಿರುವಂತ ಜನರಿಗೆ ಮುಂದಿನ 4 ದಿನಗಳ ಕಾಲ ಭರ್ಜರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 11ಕ್ಕೂ ಹೆಚ್ಚು ಚಿಲ್ಲೆಗಳಲ್ಲಿ 4 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂಬುದಾಗಿ ತಿಳಿಸಿದೆ. ರಾಜ್ಯದ ಬೀದರ್, ಕೊಪ್ಪಳ, ಯಾದಗಿರಿ, ಬಳ್ಳಾರಿ, ಗದಗ, ಬಾಗಲಕೋಟೆ, ಕಲಬುರ್ಗಿ, ದಾವಣಗೆರೆ, ಮಂಡ್ಯ, ಕೊಡಗು, ತುಮಕೂರು, ಹಾಸನ, ಮೈಸೂರು ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆಯ ಕಾರಣ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು, ಬೆಳಗಾವಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾದ್ರೇ, ಇನ್ನುಳಿದ ಜಿಲ್ಲೆಗಳಲ್ಲಿ ಮುಂದಿನ 7 ದಿನ ಯಾವುದೇ ಮಳೆಯ ಮುನ್ಸೂಚನೆ ಇಲ್ಲ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ. https://kannadanewsnow.com/kannada/here-is-the-constituency-wise-polling-list-of-14-lok-sabha-constituencies-in-karnataka/ https://kannadanewsnow.com/kannada/the-first-phase-of-polling-for-14-lok-sabha-constituencies-in-the-state-ends/
ಬೆಂಗಳೂರು: ಇಂದು ಕರ್ನಾಟಕದ ಲೋಕಸಭಾ ಚುನಾವಣೆಯ 14 ಕ್ಷೇತ್ರಗಳ ಮೊದಲ ಹಂತದ ಮತದಾನ ಸಂಜೆ 6 ಗಂಟೆಗೆ ಮುತ್ತಾಯವಾಗಿದೆ. ಹಾಗಾದ್ರೆ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಕ್ಷೇತವಾರು ವಿವರ ಮುಂದೆ ಓದಿ. ಕೇಂದ್ರ ಚುನಾವಣಾ ಆಯೋಗದ ಮಾಹಿತಿಯಂತೆ ಸಂಜೆ 7.30ರವರೆಗಿನ ಮತ ಲೆಕ್ಕಾಚಾರದಲ್ಲಿ ರಾಜ್ಯದ 14 ಕ್ಷೇತ್ರದಲ್ಲಿ ಶೇಕಡಾ 65ರಷ್ಟು ಮತದಾನವಾಗಿದೆ. ಇದರಲ್ಲಿ ಅತಿ ಕಡಿಮೆ ಬೆಂಗಳೂರು ಸೆಂಟ್ರಲ್ನಲ್ಲಿ 49 ಪರ್ಸೆಂಟ್ ವೋಟಿಂಗ್ ಆಗಿದೆ. ಬೆಂಗಳೂರು ಉತ್ತರದಲ್ಲಿ 51 ಪರ್ಸೆಂಟ್, ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 61ರಷ್ಟು ಮತದಾನವಾಗಿದೆ. ಇನ್ನೂ ಬೆಂಗಳೂರು ದಕ್ಷಿಣದಲ್ಲಿ 49ರಷ್ಟು ವೋಟಿಂಗ್ ಆಗಿದೆ. ಚಾಮರಾಜನಗರದಲ್ಲಿ 69, ಚಿಕ್ಕಬಳ್ಳಾಪುರದಲ್ಲಿ 71, ಚಿತ್ರದುರ್ಗದಲ್ಲಿ 67, ದಕ್ಷಿಣ ಕನ್ನಡದಲ್ಲಿ 72, ಹಾಸನದಲ್ಲಿ ಶೇ.72ರಷ್ಟು ಮತದಾನವಾಗಿದೆ. ಇನ್ನೂ ಕೋಲಾರದಲ್ಲಿ 73ರಷ್ಟು ಮತದಾನವಾಗಿದೆ. ಇನ್ನೂ ಮಂಡ್ಯದಲ್ಲಿ ಅತಿ ಹೆಚ್ಚು ಅಂದ್ರೆ, 74.87ರಷ್ಟು ವೋಟಿಂಗ್ ಆಗಿದೆ. ಮೈಸೂರಲ್ಲಿ 66, ತುಮಕೂರು ಮತ್ತು ಚಿಕ್ಕಮಗಳೂರಲ್ಲಿ 72ರಷ್ಟು ಮತದಾನವಾಗಿದೆ. https://kannadanewsnow.com/kannada/bjp-is-not-confident-of-winning-even-in-its-stronghold-dinesh-gundu-rao/ https://kannadanewsnow.com/kannada/breaking-cbse-board-exams-likely-to-be-held-twice-a-year-from-academic-year-2025-26-sources/
ಬೆಂಗಳೂರು: ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಕಂಡುಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನ ಆರ್.ಟಿ ನಗರದ ಬೋಸ್ಟನ್ ಸ್ಕೂಲ್ ನಲ್ಲಿ ಇಂದು ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ತನ್ನ ಭದ್ರಕೋಟೆಯಲ್ಲೂ ನಿಶ್ಚಿತವಾಗಿ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನ ಕಳೆದುಕೊಂಡಿದೆ. ಕರಾವಳಿ ಭಾಗದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ತೀವ್ರ ಪೈಪೋಟಿ ನೀಡಿದ್ದಾರೆ. ದಕ್ಷಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟ ಎಂಬ ಪರಿಸ್ಥಿತಿಯಿತ್ತು. ಆದರೆ ಮತಗಟ್ಟೆಗಳಿಂದ ಬರುತ್ತಿರುವ ಮಾಹಿತಿ ನೋಡಿದರೆ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ. ನಮ್ಮ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳನ್ನ ತಳ್ಳಿಹಾಕುವಂತಿಲ್ಲ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಚುನಾವಣೆ ಸಮಯದಲ್ಲಿ ಇನ್ನಷ್ಟು ಹೆಚ್ಚಾಗಿರುವುದನ್ನ ಗಮನಿಸಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಪೈಪೋಟಿ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಕ್ಷೇತ್ರಗಳಲ್ಲಿ ನಮ್ಮ…
ವಿಜಯಪುರ: ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ, ಬದ್ಧತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಜಯಪುರ ನಗರ ದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ರಾಜು ಹಲಗೂರು ರವರ ಪರವಾಗಿ ಮಾತಾಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ. ಇದರಲ್ಲಿ ನಂಬಿಕೆ ಇಟ್ಟು ಅವಕಾಶ ವಂಚಿತರಿಗೆ ಅವಕಾಶ ಕೊಡಲಾಗುತ್ತಿದೆ. ಗರೀಬಿ ಹಠಾವೋ, ಭೂ ಸುಧರಣಾ ಕಾಯ್ದೆ, ಜೀತ ಪದ್ಧತಿ ರದ್ದು ಕಾಯ್ದೆ, ಮಲ ಹೊರುವ ಪದ್ಧತಿ ರದ್ದತಿ ಜಾರಿಗೆ ಬಂದಿದ್ದು ಕಾಂಗ್ರೆಸ್ ಕಾಲದಲ್ಲಿ. ವಾಜಪೇಯಿ ಅವರು ಇಂಡಿಯಾ ಶೈನಿಂಗ್ ಎಂದು 2004 ರ ಸೋತರು. 2047 ಕ್ಕೇ ವಿಕಸಿತ ಭಾರತ್ ಎಂದು ನರೇಂದ್ರ ಮೋದಿಯವರು ಹೇಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಮೋದಿ ಸೋಲುತ್ತಾರೆ . ಅದಕ್ಕಾಗಿಯೇ 400 ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಸಂವಿಧಾನ ಬದಲಾಯಿಸಲು 400…
ಬಳ್ಳಾರಿ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಬಿಜೆಪಿ ಸರ್ಕಾರ ಜಾರಿಗೆ ತಂದಿರುವಂತ ಅಗ್ನಿವೀರ್ ಯೋಜನೆ ರದ್ದುಗೊಳಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಬಳ್ಳಾರಿಯ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದ್ರೆ ಅಗ್ನಿವೀರ್ ಯೋಜನೆ ರದ್ದು ಪಡಿಸುುತ್ತೇವೆ ಎಂದರು. ಸದ್ಯ ಇರುವಂತ ಜಿಎಸ್ಟಿ ಬದಲಿ ಸರಳ ಜಿಎಸ್ಟಿ ಯೋಜನೆ ಜಾರಿಗೆ ತರಲಾಗುತ್ತದೆ. ಸರಳ ಜಿಎಸ್ಟಿಯಿಂದ ರೈತರು, ಬಡವರು, ಕಾರ್ಮಿಕರಿಗೆ ನೆರವಾಗಲಿದೆ ಎಂದರು. ಕರ್ನಾಟಕಕ್ಕೆ ಬರಬೇಕಾಗಿದ್ದಂತ 18000 ಕೋಟಿ ಹಣವನ್ನು ಬಿಜೆಪಿ ಅಲ್ಲ ಭಾರತೀಯ ಚೊಂಬು ಪಾರ್ಟಿ ಕೊಟ್ಟಿಲ್ಲ. ಕರ್ನಾಟಕಕ್ಕೆ 18000 ಕೋಟಿ ಬರ ಪರಿಹಾರ ಕೊಡಬೇಕಾಗಿದೆ. ಆದ್ರೇ ಬಿಜೆಪಿ ಕೊಡದೇ ಚೊಂಬು ಕಟ್ಟಿದೆ ಎಂದರು. ಬಳ್ಳಾರಿ ಜಿಲ್ಲೆಯ ಜನರಿಗೆ ಈ ಹಿಂದೆ ನಾನು ಒಂದು ಭರವೆಸೆ ನೀಡಿದ್ದೆ. ಐದು ಗ್ಯಾರಂಟಿ ಕೊಡುವ ಭರವಸೆ ನೀಡಿದ್ದೆನು. ಅದರಂತೆ ಐದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು. https://kannadanewsnow.com/kannada/chamarajanagar-tahsildar-injured-in-clash-between-police-and-villagers-hospitalised/ https://kannadanewsnow.com/kannada/breaking-x-down-across-the-country-including-karnataka/
ಚಾಮರಾಜನಗರ: ಮತದಾನ ಬಹಿಷ್ಕಾರ ಹಾಕಿದ್ದ ಮತದಾರರನ್ನು ಮನ ವೊಲಿಸಲು ಯತ್ನಿಸಿದ್ದ ಪೊಲೀಸ್ ಇನ್ಸ್ ಪೆಕ್ಟರ್, ತಹಸೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಮಾತಿಗೆ ಕೆರಳಿದ ಗುಂಪೊಂದು ಮಾತಿನ ಚಕಮಕಿಯಿಂದಾಗಿ ಮತಗಟ್ಟೆ ದ್ವಂಸ ಮಾಡಿ ಸಿಬ್ಬಂದಿಗಳ ಕೂಡಿ ಹಾಕಿ ಬೆಂಕಿ ಹಚ್ಚಿರೊ ಘಟನೆ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ನಡೆದಿತ್ತು. ಈ ಗಲಾಟೆಯಲ್ಲಿ ತಹಶೀಲ್ದಾರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕೊರತೆ ಹಿನ್ನಲೆಯಲ್ಲಿ ಮತ ಬಹಿಷ್ಕಾರಕ್ಕೆ ಮುಂದಾಗಿದ್ದರು. ಇದನ್ನು ಅರಿತ ತಹಸೀಲ್ದಾರ್ ಗುರುಪ್ರಸಾದ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ರವರು ಮತದಾರರನ್ನು ಮನವೊಲಿಸಲು ಮುಂದಾದರು. ಮತ ಚಲಾವಣೆಗೆ ಬಂದ ಮತದಾರರನ್ನು ಕಂಡು ಕೆರಳಿದ ಮತ್ತೊಂದು ಗುಂಪಿನವರು ಮಾತಿನ ಚಕಮಕಿ ನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮತಗಟ್ಟೆ ಗೆ ನುಗ್ಗಿದ ಪ್ರತಿಭಟನಾಕಾರರು ವಿದ್ಯುನ್ಮಾನ…
ಬೆಂಗಳೂರು: ಏಪ್ರಿಲ್ 26ರ ಇಂದು ಬೆಳಗ್ಗೆ 7.00 ರಿಂದ ಸಂಜೆ 6.00 ಗಂಟೆಯವರೆಗೆ ಮತದಾನ ನಡೆಯಿತು. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಿತು. ಅದಕ್ಕಿಂತ ಮುಂಚಿತವಾಗಿ ಬೆಳಗ್ಗೆ 5.30ಕ್ಕೆ ಅಣುಕು ಮತದಾನ ಪ್ರಾರಂಭವಾಯಿತು. 7.00 ಗಂಟೆಯೊಳಗಾಗಿ ಪೂರ್ಣಗೊಂಡಿತು. ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಇದರ ನಡುವೆ ನಡೆದಂತ ಮತದಾನ ಇದೀಗ ಅಂತ್ಯಗೊಂಡಿದೆ. ಎಲ್ಲಾ ಮಸ್ಟರಿಂಗ್ ಕೇಂದ್ರಗಳಿಂದ ಬ್ಯಾಲೆಟ್ ಯುನಿಟ್(ಇವಿಎಂ), ಕಂಟ್ರೋಲ್ ಯುನಿಟ್(ಸಿಯು), ವಿವಿ ಪ್ಯಾಟ್ ಗಳನ್ನು ಮತಗಟ್ಟೆಗಳಿಗೆ ಮತದಾನಕ್ಕೂ ಮುನ್ನಾ ದಿನವೇ ತಲುಪಿಸಲಾಗಿತ್ತು. ಅಣುಕು ಮತದಾನದ ವೇಳೆ ಇವಿಎಂ ನಲ್ಲಿ ಲೋಪದೋಷಗಳು ಕಂಡುಬಂದರೆ ಸೆಕ್ಟರ್ ಅಧಿಕಾರಿ ಮೂಲಕ ಕನಿಷ್ಠ 10 ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವಂತಹ ಮಾರ್ಗ ಅಧಿಕಾರಿಯು(Route Officer) ಪರ್ಯಾಯ ವ್ಯವಸ್ಥೆ ಮಾಡೋದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಚುನಾವಣಾ ಆಯೋಗದ ಸಕಲ ವ್ಯವಸ್ಥೆಯ ನಡುವೆ, ಇಂದು ಶಾಂತಿಯುತವಾಗಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ಸಂಜೆ 5…
ಬೆಂಗಳೂರು: ನಾನು ದೇಶದ ಬದಲಾವಣೆಗಾಗಿ ಮತದಾನ ಮಾಡಿದ್ದೇನೆ. ದ್ವೇಷದ ವಿರುದ್ಧ ತ ಹಾಕಿರುವೆ. ನೀವು ತಪ್ಪದೇ ಮತದಾನ ಮಾಡಿ ಎಂಬುದಾಗಿ ನಟ ಪ್ರಕಾಶ್ ರಾಜ್ ಅವರು ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಈ ವೇಳೆಯಲ್ಲಿ ನಟ ಪ್ರಕಾಶ್ ರಾಜ್ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಬಳಿಕ ವೀಡಿಯೋ ಶೇರ್ ಮಾಡಿರುವಂತ ಅವರು, ದೇಶದ ಬದಲಾವಣೆಗಾಗಿ ಮತದಾನ ಮಾಡಿರುವೆ, ದ್ವೇಷದ ವಿರುದ್ಧ ಮತ ಹಾಕಿರುವೆ. ಸಂಸತ್ ನಲ್ಲಿ ನನ್ನ ಪರವಾಗಿ ಧ್ವನಿ ಕೇಳಲಿ ಎಂದು ವೋಟು ಮಾಡಿದ್ದೇನೆ. ದಯಮಾಡಿ ವೋಡು ಮಾಡಿ, ಬದಲಾವಣೆಗೆ ಮತ ಹಾಕಿ ಎಂದಿದ್ದಾರೆ. https://twitter.com/prakashraaj/status/1783681379848327529? ನಟ ಪ್ರಕಾಶ್ ರಾಜ್ ಅವರ ಈ ವೀಡಿಯೋ ಈಗ ವೈರಲ್ ಆಗಿದೆ. ಇಂದು ಬೆಳಿಗ್ಗೆ 7.45ಕ್ಕೆ ಮತಚಲಾಯಿಸಿದ ನಂತ್ರ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಆ ಬಳಿಕ ಈವರೆಗೆ 536ಕೆ ವೀಕ್ಷಕರು ನಟ ಪ್ರಕಾಶ್ ರಾಜ್ ಪೋಸ್ಟ್ ಮಾಡಿರುವಂತ ವೀಡಿಯೋ ವೀಕ್ಷಿಸಿದ್ದಾರೆ. ಅಲ್ಲದೇ 1.8ಕೆ ನೋಡುಗರು ಕಾಮೆಂಟ್…