Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಪ್ರೀತಿಸಿದಂತ ಯುವತಿ ಕೈ ಕೊಟ್ಟ ಬಳಿಕ, ಆಕೆಯ ಖಾಸಗಿ ಪೋಟೋಗಳನ್ನು ಇಟ್ಟುಕೊಂಡು ಕೆಲ ತಿಂಗಳಿಂದ ಬ್ಲಾಕ್ ಮೇಲ್ ಮಾಡುತ್ತಿದ್ದಂತ ಕಿರುತೆರೆ ನಟ ವರುಣ್ ಆರಾಧ್ಯ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ಪಶ್ಚಿಮ ವಿಭಾಗದ ಸೆನ್ ಠಾಣೆಗೆ ತೆರಳಿರುವಂತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂತ ಯುವತಿಯೊಬ್ಬಳು ತನಗೆ ಕಿರುತೆರೆ ನಟ ವರುಣ್ ಆರಾಧ್ಯ ಇನ್ಸ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದನು. ಪರಿಚಯ ಸ್ನೇಹಕ್ಕೆ ತಿರುಗಿ, ಆ ಬಳಿಕ ತಾವಿಬ್ಬರೂ ಪ್ರೀತಿಸುತ್ತಿದ್ದವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೆಲ ತಿಂಗಳ ಹಿಂದಿನಿಂದ ತಾನು, ಅರುಣ್ ಆರಾಧ್ಯ ದೂರವಾಗಿದ್ದೆವು. ಈ ಬಳಿಕ ವರುಣ್ ಆರಾಧ್ಯ ತನ್ನ ಖಾಸಗಿ ಕ್ಷಣದ ಪೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ಮನವಿ ಮಾಡಿದ್ದಾರೆ. ಯುವತಿಯ ದೂರಿನ ಹಿನ್ನಲೆಯಲ್ಲಿ ಬೆಂಗಳೂರಿನ ಪಶ್ಟಿಮ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/women-in-the-state-applications-invited-for-incentives-subsidies/ https://kannadanewsnow.com/kannada/loan-facility-up-to-rs-5-lakh-from-central-government-if-you-have-these-documents-apply-immediately/
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಾದ ಚೇತನ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಧನಶ್ರೀ ಯೋಜನೆಯಡಿ ಪ್ರೋತ್ಸಾಹಧನ ಹಾಗೂ ಉದ್ಯೋಗಿನಿ ಯೋಜನೆಯಡಿ ಸಹಾಯಧನ ಸೌಲಭ್ಯ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಸೆಪ್ಟೆಂಬರ್ 21 ರ ಸಂಜೆ 5.30ರ ಒಳಗೆ ಗ್ರಾಮ ಒನ್, ಶಿವಮೊಗ್ಗ, ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ವ್ಯಾಪ್ತಿಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/for-the-first-time-five-gst-officers-were-arrested-in-bengaluru/ https://kannadanewsnow.com/kannada/bjp-calls-for-state-wide-protest-tomorrow-over-rahul-gandhis-remarks-on-scrapping-reservation/
ಬೆಂಗಳೂರು: ಬೆಂಗಳೂರಲ್ಲಿ ಮೊಟ್ಟಲ ಮೊದಲ ಬಾರಿ ಎನ್ನುವಂತೆ ಉದ್ಯಮಿಯೊಬ್ಬರಿಂದ ಹಣ ಪಡೆದು ಪರಾರಿಯಾಗಿದ್ದಂತ ನಾಲ್ವರು ಕೇಂದ್ರದ ಜಿಎಸ್ಟಿ ಅಧಿಕಾರಿಗಳನ್ನು ಪೊಲೀಸರು ಭರ್ಜರಿ ಬೇಟೆಯಾಡುವ ಮೂಲಕ ಬಂಧಿಸಿದ್ದಾರೆ. ಈ ಕುರಿತಂತೆ ಬೆಂಗಳೂರು ನಗರ ಪೊಲೀಸರಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ದಿನಾಂಕ:09-09-2024 ರಂದು ಸಂಜೆ 16-35 ಗಂಟೆಗೆ ಪಿರಾದುದಾರರಾದ ಕೇಶವ್ ಟಾಕ್ ರವರು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, Mexo Solutions Private Limited having its address at L4, 2nd Floor, 11th Sector, Jeevan Bhimanagar Main Road, Bengaluru-560075 0 ಮಾಡಿಕೊಂಡಿರುತ್ತೇನೆ. ದಿನಾಂಕ:30-08-2024 ರಂದು 8-30 ರಿಂದ 9-00 ಗಂಟೆ ನಡುವೆ ಅಪರಿಚಿತ ವ್ಯಕ್ತಿಗಳು ತಾವು ಜಿಎಸ್‌ಟಿ ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು, ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿ ನಮ್ಮ ಮೊಬೈಲ್ ಫೋನ್ ಮತ್ತು ಇತರೆ ವಸ್ತುಗಳನ್ನು ತೆಗೆದುಕೊಂಡು ನನ್ನನ್ನು ಪವನ್ ತಕ್, ಮುಖೇಶ್ ಜೈನ್, ರಾಕೇಶ್ ಮಾಣಕ್…
ಬೆಂಗಳೂರು: ಮೀಸಲಾತಿ ರದ್ದುಪಡಿಸುವುದಾಗಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. ಇದನ್ನು ಖಂಡಿಸಿ ಇವತ್ತಿನಿಂದ ಎರಡು ದಿನಗಳ ಕಾಲ ರಾಹುಲ್ ಗಾಂಧಿಯವರ ಪ್ರತಿಕೃತಿ ದಹನ ಮಾಡಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಪ್ರಕಟಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎಸ್‍ಸಿ, ಎಸ್‍ಟಿಗಳಿಗೆ ಗೌರವ ಕೊಡಬೇಕು; ಅವರಿಗೆ ರಕ್ಷಣೆ ಕೊಡಬೇಕೆಂಬ ದೃಷ್ಟಿಯಿಂದ ನಾವು ರಾಜ್ಯಾದ್ಯಂತ ನಾಳೆ, ನಾಡಿದ್ದು ರಾಹುಲ್ ಗಾಂಧಿಯವರ ಪ್ರತಿಕೃತಿ ದಹನ ಮಾಡುತ್ತೇವೆ ಎಂದು ತಿಳಿಸಿದರು. ರಾಹುಲ್ ಗಾಂಧಿಯವರು ಮೀಸಲಾತಿ ನಿಲ್ಲಿಸುವುದಾಗಿ ಹೇಳಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಸಾರಿ ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್. ಸಂವಿಧಾನವನ್ನು ಬರೆದ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅವತ್ತು ಅಪಮಾನ ಮಾಡಲಾಗಿತ್ತು. ಈಗ ಮೀಸಲಾತಿ ರದ್ದುಪಡಿಸುವುದಾಗಿ ಹೇಳಿ ಅವರ ವಿಚಾರಕ್ಕೇ ತಿಲಾಂಜಲಿ ನೀಡಲು ಹೊರಟಿದ್ದಾರೆ ಎಂದು ಟೀಕಿಸಿದರು. ದಲಿತರ ಬದುಕಿಗೆ, ಎಸ್‍ಸಿ, ಎಸ್‍ಟಿಗಳ…
ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸುಮಾರು 21 ಹಗರಣಗಳು ನಡೆದಿದ್ದು, ಈ ಎಲ್ಲ ಹಗರಣಗಳ ತನಿಖೆಗೆ ತ್ವರಿತವಾಗಿ ಚಾಲನೆ ನೀಡಲು ಹಾಗೂ ಈ ಬಗ್ಗೆ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಅರಣ್ಯಭವನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಕುರಿತ ತನಿಖೆಗಳ ಪ್ರಗತಿ ಹಾಗೂ ಸಮನ್ವಯ ಸಂಬಂಧ ಕ್ರಮ ವಹಿಸುವ ನಿಟ್ಟಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್ ಹಾಗೂ ಎಚ್.ಕೆ.ಪಾಟೀಲ್ ರವರು ಸದಸ್ಯರಾಗಿದ್ದಾರೆ. ಸಮಿತಿಯು ವರದಿಯನ್ನು ನೀಡಲು ಒಂದರಿಂದ ಎರಡು ತಿಂಗಳ ಅವಧಿಯನ್ನು ನೀಡಲಾಗಿದೆ. ಪಿಎಸ್ ಐ ಹಗರಣ, 40% ಕಮಿಷನ್ ಹಗರಣ, ಕೋವಿಡ್ 19, ಬಿಟ್ ಕಾಯಿನ್ ಹಗರಣಗಳಿಗೆ ಮಾತ್ರ ತನಿಖಾ ಆಯೋಗಗಳನ್ನು ರಚಿಸಲಾಗಿದೆ. ಅದರಲ್ಲಿ ಕೋವಿಡ್…
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) 1,44,716 ಕೋಟಿ ರೂ.ಗಳ 10 ಬಂಡವಾಳ ಸ್ವಾಧೀನ ಪ್ರಸ್ತಾಪಗಳಿಗೆ ಅಗತ್ಯವನ್ನು (ಎಒಎನ್) ಅಂಗೀಕರಿಸಿತು. ವಿಶೇಷವೆಂದರೆ, ಈ ವೆಚ್ಚದ 99% ಅನ್ನು ಖರೀದಿ (ಭಾರತೀಯ) ಮತ್ತು ಖರೀದಿ (ಭಾರತೀಯ-ದೇಶೀಯವಾಗಿ ವಿನ್ಯಾಸಗೊಳಿಸಿದ ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ) ವಿಭಾಗಗಳ ಅಡಿಯಲ್ಲಿ ಸ್ಥಳೀಯ ಮೂಲಗಳಿಗೆ ನಿರ್ದೇಶಿಸಲಾಗಿದೆ. ಈ ಮೂಲಕ ಭಾರತೀಯ ಸೇನೆಗೆ ಭೀಮ ಬಲ ಬಂದಂತೆ ಆಗಿದೆ. ಭಾರತೀಯ ಸೇನೆಯ ಟ್ಯಾಂಕ್ ನೌಕಾಪಡೆಯನ್ನು ಆಧುನೀಕರಿಸಲು, ಭವಿಷ್ಯದ ಸಿದ್ಧ ಯುದ್ಧ ವಾಹನಗಳನ್ನು (ಎಫ್ಆರ್ಸಿವಿ) ಖರೀದಿಸಲು ಕೌನ್ಸಿಲ್ ಅನುಮೋದನೆ ನೀಡಿತು. ಈ ಎಫ್ಆರ್ಸಿವಿಗಳನ್ನು ಉನ್ನತ ಚಲನಶೀಲತೆ, ಎಲ್ಲಾ-ಭೂಪ್ರದೇಶದ ಸಾಮರ್ಥ್ಯ, ಬಹುಸ್ತರದ ರಕ್ಷಣೆ, ನಿಖರ ಶಸ್ತ್ರಾಸ್ತ್ರಗಳು ಮತ್ತು ನೈಜ-ಸಮಯದ ಸನ್ನಿವೇಶದ ಜಾಗೃತಿಯೊಂದಿಗೆ ಸುಧಾರಿತ ಮುಖ್ಯ ಯುದ್ಧ ಟ್ಯಾಂಕ್ಗಳಾಗಿ ಕಲ್ಪಿಸಲಾಗಿದೆ. ವೈಮಾನಿಕ ಗುರಿಗಳನ್ನು ಪತ್ತೆಹಚ್ಚಲು ಮತ್ತು ಪತ್ತೆಹಚ್ಚಲು ಮತ್ತು ಫೈರಿಂಗ್ ಪರಿಹಾರಗಳನ್ನು ಒದಗಿಸಲು ಪ್ರಮುಖ ಪಾತ್ರ ವಹಿಸುವ ವಾಯು ರಕ್ಷಣಾ ಅಗ್ನಿಶಾಮಕ ನಿಯಂತ್ರಣ ರಾಡಾರ್ಗಳ ಖರೀದಿಗೆ…
ಬೆಂಗಳೂರು: ನಗರದಲ್ಲಿ ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದು, ಐವರು ಕೇಂದ್ರದ ಜಿಎಸ್ಟಿ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ಉದ್ಯಮಿಯೊಬ್ಬರ ವಿರುದ್ಧದ ಕೇಸ್ ಮುಚ್ಚಿ ಹಾಕಲು 1.50 ಕೋಟಿ ಹಣವನ್ನು ಪಡೆದಿದ್ದಂತ ಐವರು ಜಿಎಸ್ಟಿ ಅಧಿಕಾರಿಗಳು ನಾಪತ್ತೆಯಾಗಿದ್ದರು. ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆಯ ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು. ಈ ದೂರು ಆಧರಿಸಿ ಕಾರ್ಯಾಚರಣೆಗೆ ಇಳಿದಂತ ಪೊಲೀಸರು ಮಹಿಳಾ ಅಧಿಕಾರಿ ಸೇರಿದಂತೆ ಐವರು ಕೇಂದ್ರದ ಜಿಎಸ್ಟಿ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬೈಯ್ಯಪ್ಪನಹಳ್ಳಿ ಠಾಣೆಯ ಪೊಲೀಸರು 1.50 ಕೋಟಿ ಹಣ ಪಡೆದು ಪರಾರಿಯಾಗಿದ್ದಂತ ಐವರು ಅಧಿಕಾರಿಗಳನ್ನು ಅರೆಸ್ಟ್ ಮಾಡಿದೆ. ಅಂದಹಾಗೇ ಉದ್ಯಮಿಯ ವಿರುದ್ಧ ಏನಿತ್ತು ಕೇಸ್? ಅವರು ಅಷ್ಟೊಂದು ಹಣ ಕೊಟ್ಟಿದ್ದೇಕೆ? ಸೇರಿದಂತೆ ಇತರೆ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಈ ಸಂಬಂಧ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/i-am-healthy-now-dont-worry-kiran-rajs-first-reaction-after-accident/ https://kannadanewsnow.com/kannada/loan-facility-up-to-rs-5-lakh-from-central-government-if-you-have-these-documents-apply-immediately/
ಶಿವಮೊಗ್ಗ : ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ(ಆರ್‌ಪಿಸಿ) ಹುದ್ದೆಗಳ ನೇಮಕಾತಿಗಾಗಿ ಶಿವಮೊಗ್ಗ ನಗರದಲ್ಲಿ ಸೆ.14 ಮತ್ತು 15 ರಂದು ನಡೆಯಲಿರುವ ಪರೀಕ್ಷೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಂಡು, ಶಾಂತಿಯುತವಾಗಿ, ಪಾರದರ್ಶಕವಾಗಿ ಮತ್ತು ಯಶಸ್ವಿಯಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಪ್ರದೀಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕೆಪಿಎಸ್‌ಸಿ ಕಾರ್ಯದರ್ಶಿಗಳೊಂದಿಗೆ ನಡೆದ ವಿಡಿಯೋ ಸಂವಾದದ ಬಳಿಕೆ ಅಧಿಕಾರಿಗಳೊಂದಿಗೆ ಪರೀಕ್ಷೆ ಕುರಿತು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿವಮೊಗ್ಗ ನಗರದ ಒಟ್ಟು 28 ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳ ನೇಮಕಾತಿಗೆ ಕನ್ನಡ ಭಾಷಾ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಸೆ.14 ರಂದು ಮಧ್ಯಾಹ್ನ 2 ಗಂಟೆಯಿAದ ಸಂಜೆ 4 ಗಂಟೆವರೆಗೆ ಕನ್ನಡ ಭಾಷಾ ಪರೀಕ್ಷೆ, ಸೆ.15 ರಂದು ಬೆಳಿಗ್ಗೆ 10 ಗಂಟೆಯಿAದ 11.30 ರವರೆಗೆ ಕನ್ನಡ ಭಾಷಾ ಪರೀಕ್ಷೆ ಪತ್ರಿಕೆ-1, ಸಾಮಾನ್ಯ ಪತ್ರಿಕೆ…
ಬೆಂಗಳೂರು: ನಟ ಕಿರಣ್ ರಾಜ್ ಅವರ ಕಾರು ಅಪಘಾತವಾಗಿತ್ತು. ಈ ಅಪಘಾತದಲ್ಲಿ ಕಿರಣ್ ರಾಜ್ ಗಾಯಗೊಂಡಿದ್ದರು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವಂತ ಅವರು ನಾನು ಈಗ ಆರೋಗ್ಯವಾಗಿದ್ದೇನೆ, ಯಾರೂ ಚಿಂತಿಸಬೇಡಿ ಎಂಬುದಾಗಿ ತನ್ನ ಅಭಿಮಾನಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಏನಾಗಿದೆ ಎಂಬುದು ಈಗಾಗಲೇ ನಿಮಗೆ ತಿಳಿದಿದೆ. ಯಾರೆಲ್ಲ ಪ್ಯಾನಿಕ್ ಆಗಿ ಮೆಸೇಜ್ ಮಾಡ್ತಿದ್ದೀರೋ ಚಿಂತಿಸಬೇಡಿ. ಈಗ ನಾನು ಆರೋಗ್ಯವಾಗಿದ್ದೇನೆ. ಸ್ವಲ್ಪ ಪೆಟ್ಟಾಗಿತ್ತು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದಯವಿಟ್ಟು ಯಾರೂ ಆತಂಕ ಪಡಬೇಡಿ ಎಂಬುದಾಗಿ ತಿಳಿಸಿದ್ದಾರೆ. ಅಂದಹಾಗೇ ಸೆ.10ರ ನಿನ್ನೆಯ ರಾತ್ರಿ ಕನ್ನಡತಿ ಸೀರಿಯಲ್ ಪ್ರಸಿದ್ಧ ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದಂತ ಕಾರು ಅಪಘಾತಕ್ಕೀಡಾಗಿತ್ತು. ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಿರಣ್ ರಾಜ್ ಎದೆ ಭಾಗಕ್ಕೆ ಪೆಟ್ಟಾಗಿತ್ತು. ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. https://kannadanewsnow.com/kannada/for-public-attention-applications-invited-from-various-corporations-last-date-of-october-10/ https://kannadanewsnow.com/kannada/siddaramaiah-will-be-cm-for-next-three-and-a-half-years-minister-ishwar-khandre/ https://kannadanewsnow.com/kannada/loan-facility-up-to-rs-5-lakh-from-central-government-if-you-have-these-documents-apply-immediately/
ಬೆಂಗಳೂರು : ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳ ವತಿಯಿಂದ 2024-25 ನೇ ಸಾಲಿನಲ್ಲಿ ನೇರಸಾಲ ಯೋಜನೆ, ಉದ್ಯಮ ಶೀಲತಾಭಿವೃದ್ಧಿ ಯೋಜನೆ, ಸ್ವಾವಲಂಬಿ ಸಾರಥಿ, ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಲಾಗಿದೆ. ಆಸಕ್ತ ಫಲಾಪೇಕ್ಷಿಗಳು ಗ್ರಾಮ-1, ಕರ್ನಾಟಕ-1, ಸೇವಾ ಸಿಂಧು ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ವೆಬ್‌ಸೈಟ್ https://sevasindhu.karnataka.gov.in ರ ಮೂಲಕ ಅಕ್ಟೋಬರ್ 10 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-224349 ನ್ನು ಸಂಪರ್ಕಿಸಬಹುದೆAದು ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/good-news-for-sc-st-communities-applications-invited-for-purchase-of-goods-vehicles-taxis-at-75-subsidy/ https://kannadanewsnow.com/kannada/siddaramaiah-will-be-cm-for-next-three-and-a-half-years-minister-ishwar-khandre/












