Author: kannadanewsnow09

ನವದೆಹಲಿ: ರಿಲಯನ್ಸ್ ಜಿಯೋ ಅವರ ಮೊಬೈಲ್ ಸೇವೆ ಡೌನ್ ಆಗಿದೆ. ಈ ಹಿನ್ನಲೆಯಲ್ಲಿ ಜೀಯೋ ಸೇವೆ ಬಳಸುತ್ತಿರುವಂತ ಸಾವಿರಾರು ಬಳಕೆದಾರರಿಗೆ ಮೊಬೈಲ್ ಇಂಟರ್ನೆಟ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡಿದ್ದಾರೆ. ವಾಟ್ಸಾಪ್, ಇನ್ಸ್ಟಾಗ್ರಾಮ್, ಎಕ್ಸ್, ಸ್ನ್ಯಾಪ್ಚಾಟ್, ಯೂಟ್ಯೂಬ್ ಮತ್ತು ಗೂಗಲ್ ಸೇರಿದಂತೆ ಎಲ್ಲಾ ದೈನಂದಿನ ಬಳಕೆಯ ಅಪ್ಲಿಕೇಶನ್ಗಳನ್ನು ಪ್ರವೇಶಿಸಲು ಸಾಧ್ಯವಾಗದ ಕಾರಣ ದೇಶಾದ್ಯಂತ ಬಳಕೆದಾರರು ಜಿಯೋ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುತ್ತಿದ್ದಾರೆ. ಡೌನ್ಡೆಟೆಕ್ಟರ್ ಪ್ರಕಾರ, ಶೇಕಡಾ 54 ಕ್ಕೂ ಹೆಚ್ಚು ದೂರುದಾರರು ಮೊಬೈಲ್ ಇಂಟರ್ನೆಟ್, 38 ಪ್ರತಿಶತದಷ್ಟು ಜಿಯೋ ಫೈಬರ್ ಮತ್ತು 7 ಪ್ರತಿಶತದಷ್ಟು ಮೊಬೈಲ್ ನೆಟ್ವರ್ಕ್ಗಳೊಂದಿಗೆ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಪ್ರಮುಖ ಟೆಲಿಕಾಂ ಪೂರೈಕೆದಾರ ಜಿಯೋ ಮಂಗಳವಾರ ದೇಶಾದ್ಯಂತ ಸಾವಿರಾರು ಬಳಕೆದಾರರ ಮೇಲೆ ಪರಿಣಾಮ ಬೀರಿದ್ದು, ಭಾರಿ ನೆಟ್ವರ್ಕ್ ಸ್ಥಗಿತವನ್ನು ಅನುಭವಿಸಿದೆ. ನೈಜ-ಸಮಯದ ಸ್ಥಗಿತಗಳನ್ನು ಮೇಲ್ವಿಚಾರಣೆ ಮಾಡುವ ಪ್ಲಾಟ್ಫಾರ್ಮ್ ಡೌನ್ಡೆಟೆಕ್ಟರ್, ತಮ್ಮ ಜಿಯೋ ಸೇವೆಗಳೊಂದಿಗೆ ಸಂಪರ್ಕ ಸಮಸ್ಯೆಗಳನ್ನು ಎದುರಿಸುತ್ತಿರುವ 2,437 ವ್ಯಕ್ತಿಗಳಿಂದ ದೂರುಗಳನ್ನು ದಾಖಲಿಸಿದೆ. ಮಧ್ಯಾಹ್ನ 1:42 ರ…

Read More

ಉತ್ತರ ಕನ್ನಡ: ಜಿಲ್ಲೆಯ ಬನವಾಸಿಯಲ್ಲಿ ಉಗ್ರರ ಜೊತೆಗೆ ನಂಟು ಹೊಂದಿದ್ದಂತ ಆರೋಪಿಯ ನಿವಾಸದ ಮೇಲೆ ಎನ್ಐಎ ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ದಾಸನಕೊಪ್ಪದಲ್ಲಿನ ಅಬ್ದುಲ್ ಶುಕ್ಕೂರ್ ಎಂಬಾತನ ನಿವಾಸದ ಮೇಲೆ ಎನ್ಐಎ, ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಿಗ್ಗೆ ಐವರು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಅಬ್ದುಲ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಾಸ್ ಪೋರ್ಟ್ ಗೆ ನಕಲಿ ದಾಖಲೆ ನೀಡಿದ್ದು ದೃಢಪಟ್ಟಿರೋದಾಗಿ ತಿಳಿದು ಬಂದಿದೆ. ಅಬ್ದುಲ್ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟಕ ಪ್ರಕರಣ, ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿಗಳಿಗೆ ಪ್ರಚೋದನೆ ನೀಡುತ್ತಿದ್ದನು ಎನ್ನಲಾಗಿದೆ. ಅಲ್ಲದೇ ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯ ಕೂಡ ಆಗಿದ್ದನಂತೆ. ಬಕ್ರಿದ್ ಹಬ್ಬಕ್ಕಾಗಿ ಬನಸವಾಸಿಯ ದಾಸನಕೊಪ್ಪಕ್ಕೆ ಅಬ್ದುಲ್ ಬಂದಿದ್ದನು. ದುಬೈನಲ್ಲಿ ಕೆಲಸ ಮಾಡುತ್ತಿದ್ದಂತ ಅಬ್ದುಲ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕವನ್ನು ಆನ್ ಲೈನ್ ಮೂಲಕ ಹೊಂದಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು,…

Read More

ಬೆಂಗಳೂರು: ಕಾಂಗ್ರೆಸ್ ಪಕ್ಷ ಸೇರಿದ್ದಂತ ಜಗದೀಶ್ ಶೆಟ್ಟರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಆದ್ರೇ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಆ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಸದರಾಗಿದ್ದರು. ಈ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಉಪ ಚುನಾವಣೆ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದು, ಜುಲೈ.12ರಂದು ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದಂತ ಸ್ಥಾನಕ್ಕೆ ಉಪ ಚುನಾವಣೆ ನಡೆಸಲಾಗುತ್ತಿದೆ ಎಂದಿದ್ದಾರೆ. ವಿಧಾನಸಭೆಯಿಂದ ವಿಧಾನ ಪರಿಷತ್ ಸ್ಥಾನಕ್ಕೆ ಈ ಉಪ ಚುನಾವಣೆ ನಡೆಯಲಿದೆ. ಸಂಸದರಾಗುವ ಮೊದರು ಜಗದೀಶ್ ಶೆಟ್ಟರ್ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರು. ಕಾಂಗ್ರೆಸ್ ಪಕ್ಷ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷ ಸೇರಿ ಕಣಕ್ಕೆ ಇಳಿದು ಗೆಲುವು ಸಾಧಿಸಿದ್ದಾರೆ. ಈಗ ಸಂಸದರು ಕೂಡ ಆಗಿದ್ದಾರೆ. https://kannadanewsnow.com/kannada/renukaswamy-murder-case-police-seize-3-bikes-from-actor-darshans-house/ https://kannadanewsnow.com/kannada/market-cap-crosses-5-trillion-mark-after-modi-becomes-pm-pm-modi/

Read More

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣ ಸಂಬಂಧ ಸ್ಥಳ ಮಹಜರನ್ನು ಪೊಲೀಸರು ನಡೆಸುತ್ತಿದ್ದಾರೆ. ಇದೇ ವೇಳೆಯಲ್ಲಿ ನಟ ದರ್ಶನ್ ಮನೆಯಲ್ಲಿದ್ದ 3 ಬೈಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳ ಸಮ್ಮುಖದಲ್ಲಿ ಕೃತ್ಯ ನಡೆದಂತ ವಿವಿಧ ಸ್ಥಳಗಳಲ್ಲಿ ಸ್ಥಳ ಮಹಜರು ನಡೆಸುತ್ತಿದ್ದಾರೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ವಿವಿಧ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಈಗಾಗಲೇ ರೇಣುಕಾಸ್ವಾಮಿ ಕಿನ್ನ್ಯಾಪ್ ಮಾಡೋದಕ್ಕೆ ಬಳಸಿದ್ದಂತ ಕಾರೊಂದನ್ನು ವಶಕ್ಕೆ ಪಡೆದಿದ್ದರು. ಈ ಬಳಿಕ ನಟ ದರ್ಶನ್ ನಿವಾಸದಲ್ಲಿದ್ದಂತ 3 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. https://kannadanewsnow.com/kannada/market-cap-crosses-5-trillion-mark-after-modi-becomes-pm-pm-modi/ https://kannadanewsnow.com/kannada/expensive-duniya-for-common-man-prices-of-essential-commodities-including-pulses-and-grains-rise-sharply/

Read More

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯನ್ನು ನಾವು ಕೇವಲ ಮೂರು ರೂ. ಏರಿಸಿದ್ದೇವೆ ಅಷ್ಟೇ.‌ ಮೋದಿ ಅಧಿಕಾರಕ್ಕೆ ಬಂದ ನಂತರ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್‌ ‌ಬೆಲೆಗಳು ಕ್ರಮವಾಗಿ 400, 38 ಮತ್ತು 35 ರೂ. ದುಬಾರಿ ಆಗಿದೆ. ಆಗ ತೆಪ್ಪಗಿದ್ದ ಬಿಜೆಪಿಯ ಅಶೋಕ್ ಮತ್ತು ವಿಜಯೇಂದ್ರ ಗ್ಯಾಂಗ್ ಈಗ ಪ್ರತಿಭಟಿಸುತ್ತಿರುವುದು ಬರೀ ನಾಟಕ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಎದಿರೇಟು ನೀಡಿದ್ದಾರೆ. ಮಂಗಳವಾರ ಇಲ್ಲಿನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಬಿಜೆಪಿ ಅಧಿಕಾರದಲ್ಲಿ ಇರುವ ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಗಳು ನಮಗಿಂತ ಜಾಸ್ತಿ ಇದೆ. ಬಿಜೆಪಿ ಅಲ್ಲೇಕೆ ಪ್ರತಿಭಟಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಈಗಿನ ಬೆಲೆ ಏರಿಕೆಗೂ ಸಂಬಂಧ ಇಲ್ಲ. ಜೊತೆಗೆ ನಾವು ಕೊಟ್ಟಿರುವ ಗ್ಯಾರಂಟಿ ಗಳು ಕೂಡ ನಿಲ್ಲುವುದಿಲ್ಲ. ಅವುಗಳ ಜತೆಯಲ್ಲೇ ನಾವು ಅಭಿವೃದ್ಧಿ ಕೂಡ ಸಾಧಿಸುತ್ತೇವೆ ಎಂದು…

Read More

ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಇಂದು ಈ ಪ್ರಕರಣ ಸಂಬಂಧ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಗೆ ಎಸ್ಐಟಿ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಹಾಜರುಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ನ್ಯಾಯಾಧೀಶರು, ಮತ್ತೆ 14 ದಿನಗಳ ಕಾಲ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರು ಎಸ್ಐಟಿ ಅಧಿಕಾರಿಗಳು ತನ್ನನ್ನು ಚೆನ್ನಾಗಿ ನೋಡಿಕೊಂಡಿಲ್ಲ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ತೋರಿಸಿಲ್ಲ ಎಂಬುದಾಗಿ ನ್ಯಾಯಾಧೀಶರ ಮುಂದೆ ಆರೋಪಿಸಿದ್ದಾಗಿ ಹೇಳಲಾಗುತ್ತಿದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ ಎನ್ನಲಾಗಿದೆ. https://kannadanewsnow.com/kannada/market-cap-crosses-5-trillion-mark-after-modi-becomes-pm-pm-modi/ https://kannadanewsnow.com/kannada/the-world-is-going-to-be-more-deadly-than-coronavirus-the-earth-will-be-filled-with-corpses/

Read More

ನಿಮಗೆಲ್ಲರಿಗೂ ತಿಳಿದೇ ಇದೆ ಉಪ್ಪಿನ ಮಹತ್ವ ನಮ್ಮ ಹಿರಿಯರು ಉಪ್ಪಿನ ಮೇಲೆ ಒಂದು ಗಾದೆಯನ್ನೇ ಕಟ್ಟಿದ್ದಾರೆ ಅದೇನೆಂದರೆ ಸ್ನೇಹಿತರೇ ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ ಅಂತ ಅಲ್ವಾ ಸ್ನೇಹಿತರೇ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564 ಈ ಗಾದೆಗೆ ತುಂಬಾನೇ ಅರ್ಥವಿದೆ ಅದಲ್ಲದೆ ನಾವು ಉಪ್ಪನ್ನು ನಮ್ಮ ಪ್ರತಿ ದಿನ ಆಹಾರದಲ್ಲಿ ಬಳಸುತ್ತೇವೆ…

Read More

ಬೆಂಗಳೂರು: ಅನೇಕರಿಗೆ ನಾನು ಪತ್ರಕರ್ತ ಆಗಬೇಕು. ಸಾಮಾಜಿಕ ಕೆಲಸ ಮಾಡಬೇಕು. ಜನರ ಕಸ್ಟಗಳಿಗೆ ಪ್ರತಿಸ್ಪಂದಿಸೋ ಕಾರ್ಯ ಪ್ರವೃತ್ತನಾಗಬೇಕು ಎಂಬುದು ಕನಸಾಗಿರುತ್ತದೆ. ನಿಮಗೆ ಜರ್ನಲಿಸ್ಟ್ ಆಗಬೇಕು ಎಂಬ ಕನಸಿದ್ದರೇ, ಆ ಕನಸಿಗೆ ಸಂವಾದ ಬದುಕು ಸುವರ್ಣಾವಕಾಶ ಒದಗಿಸಿಕೊಡುತ್ತಿದೆ. ಆ ಬಗ್ಗೆ ಮುಂದೆ ಓದಿ. ಬದುಕು ಸೆಂಟರ್ ಫಾರ್ ಲೈವ್ಲಿವುಡ್ಸ್ ಲರ್ನಿಂಗ್ ‘ಅಭಿವ್ಯಕ್ತಿ’ ಹೆಸರಿನ 9 ತಿಂಗಳ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್‌ಗೆ ಆಸಕ್ತ ಯುವಜನರಿಂದ ಅರ್ಜಿ ಆಹ್ವಾನಿಸಿದೆ. ಪತ್ರಿಕೆ, ಸುದ್ದಿ ವಾಹಿನಿ, ಮನರಂಜನಾ ವಾಹಿನಿ, ಸಿನಿಮಾ, ಡಿಜಿಟಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವ; ಪದವಿ, ಸ್ನಾತಕೋತ್ತರ ಪದವಿ ಮುಗಿಸಿರುವ ಯುವಜನರು ಅರ್ಜಿ ಸಲ್ಲಿಸಬಹುದು. ಯುವತಿಯರಿಗೆ ವಿಶೇಷ ಆದ್ಯತೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋರ್ಸ್‌ ಅವಧಿಯಲ್ಲಿ ಸ್ಕಾಲರ್‌ಶಿಪ್‌ ಸಿಗಲಿದೆ. ವರದಿಗಾರಿಕೆ, ಬರವಣಿಗೆಗೆ ಬೇಕಾದ ದೃಷ್ಟಿಕೋನ, ತಾಂತ್ರಿಕ ಕೌಶಲ್ಯದ ಜೊತೆಗೆ ಪ್ರಾಯೋಗಿಕ ಕಲಿಕೆ, ಸುದ್ದಿ ಸಂಪಾದನೆ, ಭಾಷಾಂತರದ ಜತೆಗೆ ಕಿರುತೆರೆ-ಹಿರಿತೆರೆಗಳಿಗೆ ಸೃಜನಶೀಲ ಸ್ಕ್ರಿಪ್ಟ್ ಬರವಣಿಗೆಯ ಪ್ರಾಯೋಗಿಕ ಕಲಿಕೆ, ಕ್ಯಾಮೆರಾ ನಿರ್ವಹಣೆ, ವಿಡಿಯೊ ಎಡಿಟಿಂಗ್, ಪೇಜ್ ಡಿಸೈನಿಂಗ್ (ಪ್ರಿಂಟ್ /…

Read More

ಬೆಂಗಳೂರು: ಇಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಕರ್ನಾಟಕ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸಭೆ ನಡೆಸಿ, ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಚಿವರು ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಸಂಪೂರ್ಣ ಪರಿಶೀಲನೆ ನಡೆಸಿದರು. 9 ಹೊಸ ಲೈನ್ ಯೋಜನೆಗಳು ಮತ್ತು 5 ದ್ವಿಪಥಿಕರಣಗೊಳಿಸುವ ಯೋಜನೆಗಳು ಸೇರಿದಂತೆ 14 ಮಹತ್ವದ ಯೋಜನೆಗಳ ಸುತ್ತ ಚರ್ಚೆಗಳು ಕೇಂದ್ರೀಕೃತವಾಗಿದ್ದವು. ಈ ಯೋಜನೆಗಳು ಒಟ್ಟು 1264 ಕಿಲೋಮೀಟರ್ ಹೊಸ ಮಾರ್ಗ ಮತ್ತು 707 ಕಿಲೋಮೀಟರ್ ದ್ವಿಪಥಿಕರಣಗೊಳಿಸುವಿಕೆಯನ್ನು ಒಳಗೊಂಡಿದ್ದು, 289 ಕಿಲೋಮೀಟರ್ ಹೊಸ ಮಾರ್ಗ ಮತ್ತು 502 ಕಿಲೋಮೀಟರ್ ಡಬ್ಲಿಂಗ್ ಲೈನ್ ಈಗಾಗಲೇ ಯಶಸ್ವಿಯಾಗಿ ಕಾರ್ಯಾರಂಭಗೊಂಡಿದೆ. ಇದರಲ್ಲಿ ಐದು ಡಬಲ್-ಲೈನ್ ಯೋಜನೆಗಳು ಸೇರಿವೆ 1. ಹೊಟ್ಗಿ – ಕುಡ್ಗಿ – ಗದಗ 2. ಯಶವಂತಪುರ – ಚನ್ನಸಂದ್ರ 3. ಬೈಯ್ಯಪನಹಳ್ಳಿ – ಹೊಸೂರು 4. ಬೆಂಗಳೂರು – ವೈಟ್‌ಫೀಲ್ಡ್ 5. ಹೊಸಪೇಟೆ – ಹುಬ್ಬಳ್ಳಿ – ಲೋಂಡಾ…

Read More

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಹಾಸ್ಯನಟ ಚಿಕ್ಕಣ್ಣನನ್ನು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರು. ಈ ಬೆನ್ನಲ್ಲೇ ಮತ್ತೊಬ್ಬ ನಟನಿಗೂ ಸಂಕಷ್ಟ ಎದುರಾಗಿ ಎನ್ನಲಾಗುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು, ಹೊಡೆದು ನಟ ದರ್ಶನ್ ಅಂಡ್ ಟೀಂ ಹಲ್ಲೆ ನಡೆಸಿ, ಹತ್ಯೆಗೈದಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಬಳಿಕ ರೆಸ್ಟೋ ಬಾರ್ ನಲ್ಲಿ ಪಾರ್ಟಿ ಕೂಡ ಡಿ ಬಾಸ್ ಗ್ಯಾಂಗ್ ನಡೆಸಿತ್ತಂತೆ. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಂತ ಹಾಸ್ಯನಟ ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಇಂದು ವಿಚಾರಣೆಯ ವೇಳೆಯಲ್ಲಿ ಚಿಕ್ಕಣ್ಣ ಮತ್ತೊಬ್ಬ ನಟ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಾಹಿತಿಯನ್ನು ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಗರಡಿ ಚಿತ್ರದ ನಟ ಯಶಸ್ ಸೂರ್ಯ ಕೂಡ ರೇಣುಕಾಸ್ವಾಮಿ ಹತ್ಯೆ ಬಳಿಕ ನಟ ದರ್ಶನ್ ನಡೆಸಿದ್ದಂತ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಂಬುದಾಗಿ ಹಾಸ್ಯನಟ ಚಿಕ್ಕಣ್ಣ…

Read More