Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಂತ ಕೆ.ಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವಂತ ರಘುಪತಿ ಭಟ್ ಗೆ ನೋಟಿಸ್ ನೀಡಿ ಶಾಕ್ ನೀಡಿದೆ. ಇಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅದರಲ್ಲಿ ದಿನಾಂಕ 03-06-2024ರ ಸೋಮವಾರದಂದು ನಡೆಯುವ ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೀರಿ. ಇದು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದಂತೆ ಆಗಿದೆ ಎಂದಿದ್ದಾರೆ. ಇನ್ನೂ ಈ ಪತ್ರ ತಲುಪಿದ ಎರಡು ದಿನಗಳ ಒಳಗಾಗಿ ಬಿಜೆಪಿ ಶಿಸ್ತು ಸಮಿತಿಯ ಮುಂದೆ ಸ್ಪಷ್ಠೀಕರಣ ನೀಡಬೇಕು ಎಂದು ನೋಟೀಸ್ ನಲ್ಲಿ ಮಾಜಿ ಶಾಸಕ ರಘುಪತಿ ಭಟ್ ಗೆ ಸೂಚಿಸಲಾಗಿದೆ. https://kannadanewsnow.com/kannada/former-speaker-kagodu-thimmappas-health-deteriorated-admitted-to-hospital/ https://kannadanewsnow.com/kannada/big-shock-for-prajwal-revanna-passport-cancellation-process-started-arrest-soon/
ಶಿವಮೊಗ್ಗ : ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸ್ಪೀಕರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ. ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರಿಗೆ ನಿನ್ನೆ ಜ್ವರ ಕಾಣಿಸಿಕೊಂಡು, ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಸಾಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರೋದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನೂ ಜ್ವರದಿಂದ ಬಳಲುತ್ತಿರುವಂತ ಕಾಗೋಡು ತಿಮ್ಮಪ್ಪ ಅವರನ್ನು, ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತ್ರ, ಹೆಚ್ಚಿನ ಚಿಕಿತ್ಸೆಗಾಗಿ ಅವರ ಪುತ್ರಿ ಡಾ.ರಾಜನಂದಿನಿ ಅವರು ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ. ಈಗ ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. 93 ವರ್ಷದ ಕಾಗೋಡು ತಿಮ್ಮಪ್ಪ ಅವರು ಚಿಕಿತ್ಸೆಯ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಯಾರೂ ಆತಂಕ ಪಡುವಂತ ಅಗತ್ಯವಿಲ್ಲ ಅಂತ ಅವರ ಪುತ್ರಿ ಡಾ.ರಾಜನಂದಿನಿ ಮಾಹಿತಿ ಹಂಚಿಕೊಂಡಿದ್ದಾರೆ. https://kannadanewsnow.com/kannada/big-shock-for-prajwal-revanna-passport-cancellation-process-started-arrest-soon/ https://kannadanewsnow.com/kannada/good-news-for-the-farmers-of-the-state-cm-instructs-not-to-discharge-drought-relief-amount-for-loan/
ಬೆಂಗಳೂರು: ಸಿದ್ದರಾಮಯ್ಯನವರ ಬಲಗೈ ಬಂಟ ಮರಿಗೌಡರ ಊರಿನಲ್ಲಿ ಕಲುಷಿತ ನೀರು ಸೇವಿಸಿ ಒಬ್ಬರು ಮೃತಪಟ್ಟಿದ್ದಾರೆ. ಕೆ.ಸಾಲುಂಡಿಯಲ್ಲಿ ಈ ದುರ್ಘಟನೆ ನಡೆದಿದೆ. ಪಕ್ಕದ ಊರಿನಲ್ಲಿ ಜನರಿಗೆ ವಾಂತಿ ಭೇದಿ (ಕಾಲರಾ) ಕಾಣಿಸಿಕೊಂಡಿದೆ. ಡಿಎಚ್ಒಗೆ ದೂರು ನೀಡಿದ್ದರೂ ಗಮನ ಹರಿಸಿಲ್ಲ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಆರೋಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯನವರ ಜಿಲ್ಲೆ ಆಗಿದ್ದರೂ, ಪ್ರಭಾವಿ ಸಚಿವ ಮಹದೇವಪ್ಪ ಅವರು ಇದ್ದರೂ ಒಬ್ಬರು ಮೃತಪಟ್ಟಿದ್ದಾರೆ; 37 ಜನರು ಆಸ್ಪತ್ರೆಯಲ್ಲಿರುವುದು ಸರಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದು ಟೀಕಿಸಿದರು. ಜಿಲ್ಲಾಡಳಿತವು ಕುಡಿಯುವ ನೀರಿನ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಯ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರನ್ನು ಕುಡಿದು 9 ಜನರು ಮೃತಪಟ್ಟ ಘಟನೆ ನಮ್ಮ ಕಣ್ಮುಂದೆ ಇದೆ. ತನಿಖೆ ಮಾಡಿದಾಗ ಕುಡಿಯುವ ನೀರಿಗೆ ಮನುಷ್ಯನ ಮಲ, ವಿಷಕಾರಿ ಅಂಶಗಳು ಸೇರಿತ್ತು ಎಂದು ತನಿಖೆ,…
ಬೆಂಗಳೂರು: ನಗರದಲ್ಲಿ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ಸಂಚಾರ ಪೊಲೀಸರು ಆರೋಪಿ ಶ್ರೀಕಾಂತ್ ಶರ್ಮಾ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಶ್ರೀಕಾಂತ್ ಶರ್ಮಾ ಅನಿವಾಸಿ ಭಾರತೀಯ ಆಗಿದ್ದಾರೆ. ಬೆಂಗಳೂರಲ್ಲಿ ನಡೆದಿದ್ದಂತ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ಅನಿವಾಸಿ ಭಾರತೀಯ ಆಗಿರುವಂತ ಶ್ರೀಕಾಂತ್ ಶರ್ಮಾ ಎಂಬಾತನನ್ನು ವಿಜಯನಗರ ಸಂಚಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶ್ರೀಕಾಂತ್ ಶರ್ಮಾ ರಾಜಾಜಿನಗರದಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ. ಲಂಡನ್ ನಲ್ಲಿ ಸ್ವಂತ ಕಂಪನಿ ಹೊಂದಿರುವಂತ ಅವರು, ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಇಂತಹ ಅನಿವಾಸಿ ಭಾರತೀಯ ಶ್ರೀಕಾಂತ್ ಶರ್ಮಾ ಅವರು ಹಿಟ್ ಅಂಡ್ ರನ್ ಮಾಡಿದ್ದರ ಬಗ್ಗೆ ಬೆಂಗಳೂರಿನ ವಿಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಅವರನ್ನು ಬಂಧಿಸಲಾಗಿದೆ. https://kannadanewsnow.com/kannada/big-shock-for-prajwal-revanna-passport-cancellation-process-started-arrest-soon/ https://kannadanewsnow.com/kannada/good-news-for-the-farmers-of-the-state-cm-instructs-not-to-discharge-drought-relief-amount-for-loan/
ಹುಬ್ಬಳ್ಳಿ : ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿನ ಅಂಜಲಿ ಅಂಬಿಗೇರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಐಡಿ ಅಧಿಕಾರಿಗಳು ಹಂತಕ ವಿಶ್ವನನ್ನು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೋರ್ಟ್, 8 ದಿನ ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ. ಅಂಜಲಿಯನ್ನ ಹತ್ಯೆ ಮಾಡಿದ ಬಳಿಕ ಆರೋಪಿ ವಿಶ್ವ, ದಾವಣಗೆರೆಗೆ ತೆರಳಿದ್ದ.ಅಲ್ಲಿಂದ್ದ ಮತ್ತೆ ವಾಪಸ್ ಬರುವಾಗ ರೈಲಿನಿಂದ ಬಿದ್ದು ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಿಐಡಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆತನ ಹೇಳಿಕೆಯನ್ನು ಪಡೆದುಕೊಂಡು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಸಿಐಡಿ ಆರೋಪಿ ಗಿರೀಶನನ್ನು ಕೋರ್ಟಿಗೆ ಹಾಜರುಪಡಿಸಿದೆ. ಒಂದನೇ ಹೆಚ್ಚುರಿ ಸಿವಿಲ್ ನ್ಯಾಯಾಲಯದಲ್ಲಿ ಆರೋಪಿ ಗಿರೀಶ್ ಸಾವಂತನ ವಿಚಾರಣೆ ನಡೆಸಿತು. ಆರೋಪಿಯನ್ನು ಮತ್ತೆ ಕಸ್ಟಡಿಗೆ ನೀಡುವಂತೆ ಸಿಐಡಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ವೇಳೆ ನ್ಯಾಯಾಧೀಶರ ಮುಂದೆ ಆರೋಪಿ ಗಿರೀಶ್ ಕಣ್ಣೀರು ಹಾಕಿದ ಘಟನೆ ನಡೆಯಿತು. ಈ ವೇಳೆ ಜಡ್ಜ್ ಹತ್ಯೆ ಮಾಡುವಾಗ ಗೊತ್ತಾಗಲಿಲ್ವಾ…
ಬೆಂಗಳೂರು : ಬೆಂಗಳೂರು ಬನಶಂಕರಿ ಬಳಿಯ ಬಿ.ಎಂ.ಕಾವಲ್ ಸರ್ವೆ ನಂ. 92ರಲ್ಲಿ ಒತ್ತವರಿ ಮಾಡಲಾಗಿದ್ದ ಸುಮಾರು 60 ಕೋಟಿ ರೂ. ಮೌಲ್ಯದ 5 ಎಕರೆ ಅರಣ್ಯಭೂಮಿಯನ್ನು ತೆರವು ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ವಿಕಾಸಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ಅರಣ್ಯ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈಗಾಗಲೇ ಆದೇಶ ಆಗಿರುವ ಪ್ರಕರಣಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸುವಂತೆ ನೀಡಿದ್ದ ಸ್ಪಷ್ಟ ಸೂಚನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಾರ್ಯಪ್ರವೃತ್ತರಾದ ಬೆಂಗಳೂರು ಅರಣ್ಯಾಧಿಕಾರಿಗಳು 5.2 ಎಕರೆ ಒತ್ತುವರಿ ತೆರವು ಮಾಡಿಸಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ಬಿ.ಎಂ. ಕಾವಲ್ ವ್ಯಾಪ್ತಿಯ ಗೊಟ್ಟೆಗೆರೆಪಾಳ್ಯದ ವೆಂಕಟಪ್ಪ ಮತ್ತು ಅವರ ತಾಯಿ ತಿಮ್ಮಕ್ಕ ಎಂಬುವವರು 5 ಎಕರೆ 20 ಗುಂಟೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದರು. ಎ.ಸಿ.ಎಫ್. ನ್ಯಾಯಾಲಯದ ಆದೇಶದ ಮೇರೆಗೆ ಈ ಭೂಮಿ ತೆರವು ಮಾಡಲಾಗಿದೆ. ಈ ಸಂಬಂಧ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಪ್ರತಿವಾದಿಗಳು ಹಾಕಿದ್ದ…
ಬೆಂಗಳೂರು : ಈ ಬಾರಿ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಎಲ್ಲಿಯೂ ಮೋದಿ ಅಲೆ ಕಾಣಲೇ ಇಲ್ಲ. ಗ್ಯಾರಂಟಿ ಅಲೆ ಎಲ್ಲೆಡೆ ಪಸರಿಸಿದ್ದು, ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂಬ ವಿಶ್ವಾಸವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಈ ಅವಧಿಯಲ್ಲಿ ಪಾರದರ್ಶಕ ಮತ್ತು ಜನಪರವಾದ ಆಡಳಿತವನ್ನು ನೀಡಿದ್ದು, ಜನರ ವಿಶ್ವಾಸ ಇಮ್ಮಡಿಯಾಗಿದೆ. ಇದು ಚುನಾವಣೆಯ ಫಲಿತಾಂಶದಲ್ಲೂ ಪ್ರತಿಫಲಿಸಲಿದೆ ಎಂದರು. ಪ್ರತಿಪಕ್ಷಗಳಿಂದ ದಿಕ್ಕುತಪ್ಪಿಸುವ ಪ್ರಯತ್ನ: ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಅತ್ಯಂತ ಹೇಯವಾದುದಾಗಿದ್ದು, ದೇಶದಾದ್ಯಂತ ಚರ್ಚೆಯ ವಸ್ತುವಾಗಿದೆ. ಈ ಪ್ರಕರಣದ ತನಿಖೆಯನ್ನು ಎಸ್.ಐ.ಟಿ. ಗೆ ವಹಿಸಲಾಗಿದ್ದು, ಪ್ರಾಮಾಣಿಕವಾಗಿ ಅಧಿಕಾರಿಗಳು ತಮ್ಮ ಕಾರ್ಯ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅನುಮಾನ ವ್ಯಕ್ತಪಡಿಸುವುದು, ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದರು. ಪ್ರತಿಪಕ್ಷ…
ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಬುಧವಾರ ರಾಷ್ಟ್ರೀಯ ಚುನಾವಣೆಗೆ ಕರೆ ನೀಡಿದ್ದು, ಜುಲೈ 4 ರಂದು ತಮ್ಮ ಆಡಳಿತಾರೂಢ ಕನ್ಸರ್ವೇಟಿವ್ಗಳು 14 ವರ್ಷಗಳ ಅಧಿಕಾರದ ನಂತರ ಪ್ರತಿಪಕ್ಷ ಲೇಬರ್ ಪಕ್ಷದ ವಿರುದ್ಧ ಸೋಲುವ ನಿರೀಕ್ಷೆಯಿದೆ. ಹೊಸ ಮತದಾನದ ಸಮಯದ ಬಗ್ಗೆ ತಿಂಗಳುಗಳ ಊಹಾಪೋಹಗಳಿಗೆ ತೆರೆ ಎಳೆದ 44 ವರ್ಷದ ಸುನಕ್, ತಮ್ಮ 10 ಡೌನಿಂಗ್ ಸ್ಟ್ರೀಟ್ ನಿವಾಸದ ಹೊರಗೆ ಕೆಲವರು ನಿರೀಕ್ಷಿಸಿದ್ದಕ್ಕಿಂತ ಮುಂಚಿತವಾಗಿ ಚುನಾವಣೆಗೆ ಕರೆ ನೀಡುತ್ತಿರುವುದಾಗಿ ಘೋಷಿಸಿದರು. ಚುನಾವಣೆಯಲ್ಲಿ ಸುನಕ್ ಅವರು ಲೇಬರ್ ಪಕ್ಷಕ್ಕಿಂತ ಬಹಳ ಹಿಂದೆ ಬಿದ್ದಿರುವುದು ಮಾತ್ರವಲ್ಲ, ಅವರ ಪಕ್ಷದ ಕೆಲವರಿಂದ ಪ್ರತ್ಯೇಕವಾಗಿದ್ದಾರೆ ಮತ್ತು ಕೊಳಕು ಪ್ರಚಾರದ ಮೂಲಕ ಅವರನ್ನು ಮುನ್ನಡೆಸಲು ಸಲಹೆಗಾರರ ಸಣ್ಣ ತಂಡದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ ಹಣದುಬ್ಬರ ಕುಸಿತ ಮತ್ತು ಸುಮಾರು ಮೂರು ವರ್ಷಗಳಲ್ಲಿ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳೆಯುತ್ತಿರುವಂತಹ ಕೆಲವು ಆರ್ಥಿಕ ಲಾಭಗಳೊಂದಿಗೆ, ಈಗ ಅಪಾಯವನ್ನು ತೆಗೆದುಕೊಳ್ಳುವ ಮತ್ತು ಹೊಸ ಅವಧಿಗೆ ತನ್ನ ಕಾರ್ಯಸೂಚಿಯನ್ನು ಮತದಾರರಿಗೆ ಔಪಚಾರಿಕವಾಗಿ ಪ್ರಸ್ತುತಪಡಿಸುವ ಸಮಯ…
ದಕ್ಷಿಣ ಕನ್ನಡ: ಪಿಎಸ್ಐಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಇಂದು ಬೆಳ್ತಂಗಡಿ ಠಾಣೆಗೆ ಪೊಲೀಸರ ಮುಂದೆ ವಿಚಾರಣೆ ಹಾಜರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪಿಎಸ್ಐಗೆ ಧಮ್ಕಿ ಹಾಕಿದ ಆರೋಪದಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅವರನ್ನು ಇಂದು ಪೊಲೀಸರು ಬಂಧಿಸಲಿದ್ದಾರೆ ಎನ್ನಲಾಗುತ್ತಿತ್ತು. ಇಂದು ಬೆಳ್ತಂಗಡಿಯ ಗಾರ್ಡಿಡ್ ಗ್ರಾಮದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿವಾಸದ ಎದುರು ಅವರ ಬೆಂಬಲಿಗರ ದಂಡೇ ನೆರೆದು, ಭಾರೀ ಹೈಡ್ರಾಮಾವೇ ಏರ್ಪಟ್ಟಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಬಂಧಿಸದೇ ಕಾಲಾವಕಾಶ ಕೋರಿದ್ದರ ಹಿನ್ನಲೆಯಲ್ಲಿ 3 ದಿನ ಕಾಲಾವಕಾಶ ನೀಡಿದ್ದಂತ ನೋಟಿಸ್ ನೀಡಿ ಪೊಲೀಸರು ಬಂಧಿಸದ್ದೇ ತೆರಳಿದ್ದರು. ಈ ಬೆನ್ನಲ್ಲೇ ಬೆಳ್ತಂಗಡಿ ಠಾಣೆಗೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಇದೀಗ ಆಗಮಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿದ್ದಂತ ಪ್ರಕರಣ ಸಂಬಂಧ ಪೊಲೀಸರ ಮುಂದೆ ವಿಚಾರಣೆಗೆ ಬಿಜೆಪಿ ಶಾಸಕ ಹರೀಶ್…
ಶಿವಮೊಗ್ಗ : ಗದಗ, ಹಾವೇರಿ ಜಿಲ್ಲಾ ವ್ಯಾಪ್ತಿಗೆ ಬರುವ ಗ್ರಾಮಗಳ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಮೇ 22 ರ ರಾತ್ರಿ 10.00 ರಿಂದ 28ರವರೆಗೆ ಪ್ರತಿ ದಿನ 2000 ಕ್ಯುಸೆಕ್ಸ್ಗಳಂತೆ ಒಟ್ಟು 11,574 ಕ್ಯೂಸೆಕ್ಸ್ ನೀರು ಹರಿಸಲಾಗುವುದು ಎಂದು ಕ.ನೀ.ನಿ.ನಿ ಬದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಅವಧಿಯಲ್ಲಿ ಸಾರ್ವಜನಿಕರು ನದಿ ಪಾತ್ರದಲ್ಲಿ ತಿರುಗಾಡುವುದು, ದನಕರುಗಳನ್ನು ನದಿಗೆ ಇಳಿಸುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದೆ. ಹಾಗೂ ರೈತರು ನದಿ ದಂಡೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರೆತ್ತುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. https://kannadanewsnow.com/kannada/applications-invited-for-free-computer-dtp-graphic-designing-training/ https://kannadanewsnow.com/kannada/army-doesnt-want-agniveer-we-will-throw-it-in-dustbin-rahul-gandhi/