Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳ ಜೊತೆಗಿನ ಕಾರ್ಯಕ್ರಮವೊಂದರಲ್ಲಿ, ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂಬುದಾಗಿ ಹೇಳಿದ್ದರು. ಅಂತಹ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಕಾರ್ಯಕ್ರಮದಲ್ಲೇ ಸೂಚಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಈಗ ನಾನು ಹಾಗೆ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸೂಚಿಸಿಲ್ಲ ಎಂಬುದಾಗಿ ಸಚಿವ ಮಧು ಬಂಗಾರಪ್ಪ ಉಲ್ಟಾ ಹೊಡೆದಿದ್ದಾರೆ. ಇಂದು ಸುದ್ದಿಗಾರರೊಂದಿಗೆ ವಿದ್ಯಾರ್ಥಿ ಮೇಲೆ ಕ್ರಮಕ್ಕೆಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ನಾನು ಅಲ್ಲಿ ಕ್ರಮದ ಬಗ್ಗೆ ಎಲ್ಲು ಮಾತನಾಡಿಲ್ಲ. ಮಕ್ಕಳ ಮೇಲೆ ಪ್ರಾಂಶುಪಾಲರು ಹತೋಟಿ ಇರಬೇಕು. ಅದಕ್ಕೆ ಪ್ರಾಂಶುಪಾಲರಿಗೆ ನಾನು ಹೇಳಿದ್ದು. ಮಕ್ಕಳನ್ನ ಹತೋಟಿಯಲ್ಲಿಡಬೇಕು. 50 ಸಾವಿರ ಮಕ್ಕಳು ಲೈವ್ ನೋಡ್ತಿದ್ದಾರೆ. ಅವರ ಭವಿಷ್ಯಕ್ಕೆಯೋಜನೆ ರೂಪಿಸ್ತಿದ್ದೇವೆ. ಕ್ಲಾಸ್ ನಲ್ಲಿ ಡಿಸಿಪ್ಲೀನ್ ಇರಬೇಕಲ್ಲ. ನಾನು ಒಬ್ಬ ತಂದೆಯಾಗಿ ಅದನ್ನ ಹೇಳ್ತೇನೆ. ನೀವು ಟ್ರೋಲ್ಮಾಡಿದ್ರೆ ನನಗೇನು. ಅದಕ್ಕೆಲ್ಲ ನಾನುತಲೆ ಕೆಡಿಸಿಕೊಳ್ಳಲ್ಲ ಎಂದರು. ನಾಗೇಶ್ ನನ್ನನ್ನ ದಡ್ಡ ಅಂದ್ರು. ಈ ದಡ್ಡನನ್ನ ಜನ ಗೆಲ್ಲಿಸಿದ್ರು, ಬುದ್ಧಿವಂತರನ್ನ ಸೋಲಿಸಿದ್ರು. ನಿಮ್ಮ ಮಕ್ಕಳು ಈ ರೀತಿ ಮಾಡೋದು ಸರಿಯೇ. ನನ್ನ ಸ್ವಂತ ಮಕ್ಕಳಂಗೆ ಶಾಲಾ ಮಕ್ಕಳನ್ಮನೋಡ್ತೇನೆ. ಸಿಇಟಿ ಕಾರ್ಯಕ್ರಮ ಎಂತ ದೊಡ್ಡದು. ಅಂತದ್ದನ್ನ ನೀವು…
ಬಾಕು : 29 ನೇ ಕಾಪ್ ಶೃಂಗ ಸಭೆಯಲ್ಲಿ ಭಾರತವು ಇವಿ ಕಡೆಗಿನ ತನ್ನ ಪಯಾಣವನ್ನು ಜಾಗತಿಕ ವೇದಿಕೆಯ ಮುಂದೆ ಪ್ರಸ್ತುತಪಡಿಸಿತು. ಗ್ಲೋಬಲ್ ಸೌತ್ನಲ್ಲಿ ಭಾರತವು ಇವಿ ಸಾರಿಗೆ ಕ್ಷೇತ್ರದ ಕಡೆಗೆ ಹೊರಳುವ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಹವಾಮಾನ ಬದಲಾವಣೆಗೆ ಪ್ರೇರಣೆ ನೀಡಬೇಕಾದ ‘ಸಿಒಪಿ 29’ ಶೃಂಗಸಭೆಯು ನಿಧಾನಗತಿಯ ಮಾತುಕತೆ ಮತ್ತು ಕಡಿಮೆ ನಿರೀಕ್ಷೆಗಳಿಂದ ಸೊರಗುತ್ತಿರುವ ನಡುವೆಯೂ ಭಾರತದ ಉಪಕ್ರಮಗಳು ಆಶಾದಾಯಕ ಸಂಗತಿ ಎನಿಸಿತು. ಅಜೆರ್ಬೈಜಾನ್ ರಾಜಧಾನಿಯಲ್ಲಿ ಇತ್ತೀಚೆಗೆ ಹವಾಮಾಣ ಬದಲಾವಣೆ ಕುರಿತ ಚರ್ಚಗಾಗಿ ಸದಸ್ಯ ರಾಷ್ಟ್ರಗಳ ʼಕಾಪ್ 29ʼ ಶೃಂಗಸಭೆಯ ನಡೆಯಿತು. ಅಲ್ಲಿನ ʼವಿ ಮೀನ್ ಬಿಸಿನೆಸ್ ಪೆವಿಲಿಯನ್ನಲ್ಲಿ ನಡೆದ “ಇಂಡಿಯಾಸ್ ಎಲೆಕ್ಟ್ರಿಕ್ ಮೊಬಿಲಿಟಿ ಲೀಡರ್ಶಿಪ್ : ಸ್ಪಾಟ್ಲೈಟಿಂಗ್ ಇವಿ ಟ್ರಾನ್ಸಿಷನ್ ಪಾಥ್ವೇಸ್ ಫಾರ್ ದ ಗ್ಲೋಬಲ್ ಸೌತ್ʼ ಎಂಬ ಗೋಷ್ಠಿಯಲ್ಲಿ ಭಾರತದ ಸುಸ್ಥಿರ ಸಾರಿಗೆ ಹವಾಮಾನ ಬದಲಾವಣೆಯಲ್ಲಿ ಭಾರತದ ನೀತಿಗಳು, ಉಪಕ್ರಮಗಳು ಹಾಗೂ ಸಹಭಾಗಿತ್ವವನ್ನು ವಿವರಿಸಲಾಯಿತು. ಸಂವಾದ ಗೋಷ್ಠಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಪರಿವರ್ತನೆಗೊಳ್ಳುವಲ್ಲಿ ಭಾರತದ ಪ್ರವರ್ತಕ ಪ್ರಯತ್ನಗಳನ್ನು…
ಮುರುಡೇಶ್ವರ : “ನಿಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳೆಲ್ಲಾ ತಲೆಕೆಳಗಾಗುತ್ತವೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿಗೆ ಮರಳುವ ಮುನ್ನ ಮುರುಡೇಶ್ವರ ಗಾಲ್ಫ್ ಕ್ಲಬ್ ನ ಹೆಲಿಪ್ಯಾಡ್ ಬಳಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಉಪಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗುತ್ತಿದ್ದು, ಮಹಾರಾಷ್ಟ್ರದ ಚುನಾವಣೋತ್ತರ ಸಮೀಕ್ಷೆ ಕುರಿತು ಬಗ್ಗೆ ಕೇಳಿದಾಗ, “ನಾವು ಅಲ್ಲಿಯೂ ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸವಿದೆ. ನನಗೆ ಆ ರಾಜ್ಯದ ಬಗ್ಗೆ ಹೆಚ್ಚು ಚಿತ್ರಣವಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಸರಳ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾನು ಕೂಡ ಪ್ರಚಾರಕ್ಕೆ ಹೋಗಿದ್ದೆ, ಆಗ ಕಾಂಗ್ರೆಸ್ ಪರ ಅಲೆ ಕಂಡಿತು. ಆದರೆ ಮತ ಪೆಟ್ಟಿಗೆಯಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಜಾರ್ಖಂಡ್ ಬಗ್ಗೆ ಗೊತ್ತಿಲ್ಲ” ಎಂದು ಹೇಳಿದರು. ಚನ್ನಪಟ್ಟಣದಲ್ಲಿ ಗೆಲುವು ಖಂಡಿತ ಎಲ್ಲಾ ಎಕ್ಸಿಟ್ ಪೋಲ್ ಗಳು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಸೋಲು ಹಾಗೂ ಜಮೀರ್ ಅವರ ಮೈ…
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ/ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗಾಗಿ ಯು.ಯು.ಸಿ.ಎಂ.ಎಸ್. ಪೊರ್ಟಲ್ ಮೂಲಕ ಆರ್ಜಿ ಆಹ್ವಾನಿಸಿದ್ದು, ಖಾಲಿಯಿರುವ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಆಯಾ ವಿಭಾಗಗಳಲ್ಲಿ ಆಫ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನ. 30 ರವರೆಗೆ ವಿಸ್ತರಿಸಲಾಗಿದೆ ಎಂದು ಉಪ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ವಿವಿಯ ಅಂತರ್ಜಾಲ ತಾಣ www.kuvempu.ac.in ನ್ನು ವೀಕ್ಷಿಸುವುದು. https://kannadanewsnow.com/kannada/why-is-adani-not-being-arrested-who-is-protecting-it/ https://kannadanewsnow.com/kannada/bjp-govt-employees-taxpayers-should-not-be-given-bpl-cards-cm/
ಬೆಂಗಳೂರು: ಸರ್ಕಾರಿ ನೌಕರರಿಗೆ, ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್ ಕೊಡಬಾರದು ಅಂತ ನಿಯಮಾವಳಿ, ಗೈಡ್ ಲೈನ್ ರಚಿಸಿದ್ದೇ ಬಿಜೆಪಿ. ಈಗ ಇವರೇ ಪ್ರತಿಭನೆ ಅಂತ ಫೋಟೋ ತೆಗೆಸಿಕೊಳ್ತಾ ಇದಾರೆ ಎಂದು ಸಿಎಂ ಸಿದ್ಧರಾಮಯ್ಯ ಅವರು ಲೇವಡಿ ಮಾಡಿದರು. ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ? ಆದಾಯ ತೆರಿಗೆ ಪಾವತಿಸುವವರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ? ಏನ್ ಆರ್.ಅಶೋಕಾ ಫೋಟೋ ತೆಗೆಸಿಕೊಂಡಿದ್ದೇ ಕೊಂಡಿದ್ದು ಎಂದು ಲೇವಡಿ ಮಾಡಿದರು. ಆಹಾರ ಭದ್ರತಾ ಕಾಯ್ದೆ ನಮ್ಮದು-ವಿರೋಧಿಸಿದ್ದು ಮುರುಳಿ ಮನೋಹರ ಜೋಶಿ ಕೇಂದ್ರ ಸರ್ಕಾರವೇ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದೆ. ಈಗ ಅವರೇ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರಲ್ಲಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಆಕ್ರೋಶಗೊಂಡ ಸಿಎಂ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿ ಮಾಡಿದ್ದು ಪ್ರಧಾನಿ ಮನಮೋಹನ್ ಸಿಂಗ್ ಅವರು. ಇದನ್ನು ಬಿಜೆಪಿ ವಿರೋಧಿಸಿತ್ತು. ಹಿಂದಿನ ಕೇಂದ್ರ ಸಚಿವರಾಗಿದ್ದ ಮುರಳಿ ಮನೋಹರ ಜೋಶಿಯವರು ಆಹಾರ ಭದ್ರತೆ ಕಾಯ್ದೆಯನ್ನು ವಿರೋಧಿಸಿದ್ದರು. ಈಗ ಅನ್ಯಾಯ ಅನ್ಯಾಯ ಅಂತ ಸುಳ್ ಸುಳ್ಳೇ ರಾಜ್ಯದ ಜನರ…
ಬೆಂಗಳೂರು: ಅರೆಸ್ಟ್ ವಾರೆಂಟ್ ಬಂದಿದ್ದರೂ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಅದಾನಿಯನ್ನು ಬಂಧಿಸಿ ತಪ್ಪಿಸಿಕೊಳ್ಳಲು ಬಿಡಬೇಡಿ ಎಂದು ಆಗ್ರಹಿಸಿದರು. ಮೈಸೂರು ವಿಮಾನನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಅದಾನಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಪದೇ ಪದೇ ಹರಾಜಾಗುತ್ತಿದೆಯಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅದಾನಿಗೆ ರಕ್ಷಣೆ ಕೊಡುತ್ತಿರುವವರು ಯಾರು ಎನ್ನುವುದು ದೇಶಕ್ಕೇ ಗೊತ್ತಿದೆ. ನಿಮಗೆ ಗೊತ್ತಿಲ್ವಾ? ಈ ಸತ್ಯವನ್ನು ಮಾಧ್ಯಮಗಳು ದೇಶದ ಜನರಿಗೆ ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು. ರಾಜ್ಯದ ರೈತರಿಗೆ ಕೇಂದ್ರ ಮಾಡಿದ ಅನ್ಯಾಯ ಸರಿಯಾ? ರೈತರಿಗೆ ರಿಯಾಯ್ತಿ ಬಡ್ಡಿ ದರದಲ್ಲಿ ಕೊಡುವ ಸಾಲದ ಮೊತ್ತವನ್ನು ನಬಾರ್ಡ್ ಈ ಬಾರಿ ಶೇ 58 ರಷ್ಟು ರಾಜ್ಯಕ್ಕೆ ಕಡಿತಗೊಳಿಸಿದೆ. ಇದು ರಾಜ್ಯದ ರೈತರಿಗೆ ಮಾಡಿದ ಪರಮ ಅನ್ಯಾಯ ಎಂದರು. ಆದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಅನ್ಯಾಯ ಸರಿ ಎಂದು ಹೇಳಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ,…
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಅರೆಬೆಂದ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಗಳು ಬಡವರ ಮೇಲೆ ಪ್ರಹಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು. ದೆಹಲಿಯಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಪ್ರಾಮಾಣಿಕರಾಗಿದ್ದರೆ ಗ್ಯಾರಂಟಿ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಬಿಪಿಎಲ್ ಕಾರ್ಡ್ ವಿಷಯದಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಅನರ್ಹರ ಕಾರ್ಡ್ ಬದಲಿಸಲು ಆಕ್ಷೇಪವಿಲ್ಲ; ಆದರೆ, ರಾಜ್ಯ ಸರಕಾರವು ಸಮರ್ಪಕ ಮಾನದಂಡವೇ ಇಲ್ಲದೆ ಪ್ಯಾನ್ ಕಾರ್ಡ್, ಆದಾಯ ತೆರಿಗೆ ವಿಚಾರಗಳನ್ನು ಮುಂದಿಟ್ಟುಕೊಂಡು 10ರಿಂದ 20 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ವಜಾ ಮಾಡಿದೆ ಎಂದು ಟೀಕಿಸಿದರು. ಬಿಪಿಎಲ್ ಕಾರ್ಡಿಗೆ ಕತ್ತರಿ ಹಾಕಿದರೆ, ಗೃಹಲಕ್ಷ್ಮಿ ಹಣ ಉಳಿತಾಯ ಉಳಿತಾಯ ಆಗುತ್ತದೆ. ಗೃಹಲಕ್ಷ್ಮಿ ಹಣ ಇವರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. 5 ಕೆಜಿ ಅಕ್ಕಿಗೆ ಕೊಡುವ ಹಣವೂ ಉಳಿಯಲಿದೆ. ಸಾವಿರಾರು…
ಶಿವಮೊಗ್ಗ: ಸಾಗರದ ಪರಿಣಿತಿ ಕಲಾಕೇಂದ್ರ(ರಿ)ಯಿಂದ 10ನೇ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತ ಮಹೋತ್ಸವವನ್ನು ನವೆಂಬರ್.23, 24ರಂದು ಆಯೋಜಿಸಲಾಗಿದೆ. ಈ ಬಗ್ಗೆ ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಪರಿಣಿತಿ ಕಲಾ ಕೇಂದ್ರದ ಪ್ರೋಗ್ರಾಂ ಡೈರೆಕ್ಟರ್ ವಿದ್ವಾನ್ ಎಂ.ಗೋಪಾಲ್ ಅವರು, ದಿನಾಂಕ 23-11-2024 ಮತ್ತು 24-11-2024ರಂದು ಎರಡು ದಿನ 10ನೇ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತ ಮಹೋತ್ಸವ 2024 ಆಯೋಜಿಸಲಾಗಿದೆ. ಸಾಗರದ ಗಾಂಧಿ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ವಾದ್ಯಗಳನ್ನು ನುಡಿಸುವುದು, ರಾಜ್ಯ, ಹೊರ ರಾಜ್ಯಗಳ ಕಲಾವಿಧರಿಂದ ಕಲಾ ಪ್ರದರ್ಶನ ಕೂಡ ಆಯೋಜಿಸಲಾಗಿದೆ ಎಂದು ಹೇಳಿದರು. ದಿನಾಂಕ 23-11-2024ರಂದು ಸಂಜೆ 5 ಗಂಟೆಗೆ ಸಾಗರದ ಗಾಂಧಿ ಮೈದಾನದಲ್ಲಿನ ಕಾರ್ಯಕ್ರಮವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಬೆಂಗಳೂರಿನ ಹಿರಿಯ ಸಂಗೀತ ವಿದ್ವಾನ್ ಕರ್ನಾಟಕ ಕಲಾಶ್ರೀ ವಿ.ಆನೂರು ಆರ್ ಅನಂತಕೃಷ್ಣ ಶರ್ಮ ಅವರು ಉದ್ಘಾಟಿಸಲಿದ್ದಾರೆ. ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷರಾದಂತ ವೀಣಾ ಬೆಳೆಯೂರು ಅಧ್ಯಕ್ಷತೆ…
ಶಿವಮೊಗ್ಗ: ಜಿಲ್ಲಾ ಮಟ್ಟದ ಸಂಘಟನೆಯಾಗಿರುವಂತ ಸಾಗರದ ಹೆಚ್.ಗಣಪತಿಯಪ್ಪ ರೈತ ಸಂಘವನ್ನು ರಾಜ್ಯ ಮಟ್ಟದ ಸಂಘಟನೆಯಾಗಿ ಪರಿವರ್ತಿಸಲಾಗುತ್ತಿದೆ. ಈ ಸಂಘವನ್ನು ಕರ್ನಾಟಕ ರಾಜ್ಯ ರೈತ ಸಂಘದ ಜೊತೆಗೆ ಸೇರ್ಪಡೆಗೊಳಿಸುತ್ತಿರುವುದಾಗಿ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದ್ದಾರೆ. ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರದ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘವನ್ನು ರಾಜ್ಯ ಮಟ್ಟದ ಸಂಘಟನೆಯೊಂದಿಗೆ ಸೇರ್ಪಡೆಗೊಳಿಸುವ ಬಗ್ಗೆ ಈಗಾಗಲೇ ಎರಡು ಮೂರು ಸುತ್ತಿನ ಮಾತುಕತೆಯಾಗಿದೆ. ನಮ್ಮ ಸಂಘದ ಪದಾಧಿಕಾರಿಗಳು, ಸದಸ್ಯರ ಜೊತೆಗೂ ಈಗಾಗಲೇ ಸಭೆ ನಡೆಸಿ, ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಸುಮಾರು 6 – 7 ವರ್ಷಗಳಿಂದ ಸಾಗರದಲ್ಲಿ ಹೆಚ್.ಗಣಪತಿಯಪ್ಪ ಸಾಗರ ತಾಲ್ಲೂಕು ರೈತ ಸಂಘಟನೆಯು ರೈತರ ಪರ ಹೋರಾಟ ನಡೆಸಿಕೊಂಡು ಬಂದಿದೆ. ಮುಂದೆಯೂ ಇದು ಮುಂದುವರೆಯಲಿದೆ. ಜಿಲ್ಲಾ ಮಟ್ಟದ ಸಂಘಟನೆಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು. ಸಾಗರ ತಾಲ್ಲೂಕು ಸಂಘವಾಗಿ ಶುರುವಾದಂತ…
ಬೆಂಗಳೂರು: ಕುಡಿಯುವ ನೀರು ಸೇರಿದಂತೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಮಾರ್ಚ್ ಅಂತ್ಯದವರೆಗೆ ನೀರು ಒದಗಿಸಲು ತುಂಗಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ. ವಿಕಾಸಸೌಧಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಎರಡನೇ ಬೆಳೆಗೆ ಮಾರ್ಚ್ ತಿಂಗಳ ಅಂತ್ಯದವರೆಗೆ ನೀರು ಒದಗಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ.1ರಿಂದ ಡಿಸೆಂಬರ್ 15 ರವರೆಗೆ 1500 ಡಿ. 16 ರಿಂದ 31ರವರೆಗೆ 2000 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ಜ.1ರಿಂದ 31 ವರೆಗೆ 3800 ಕ್ಯೂಸೆಕ್ಸ್ ನಂತೆ, ಫೆ.1ರಿಂದ 28 ರವರಿಗೆ 3800 ಕ್ಯೂಸೆಕ್ಸ್ ಹಾಗೂ ಮಾರ್ಚ್ 1ರಿಂದ 31ರವರೆಗೆ 3800 ಕ್ಯೂ ಸೆಕ್ಸ್ ನಂತೆ ಮತ್ತು ಕುಡಿಯುವ ನೀರಿಗಾಗಿ ಏ. ಒಂದರಿಂದ ಹತ್ತರವರೆಗೆ 1650 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು…












