Author: kannadanewsnow09

ಬೆಂಗಳೂರು: ರಾಜ್ಯದಲ್ಲೇ ಅತಿಹೆಚ್ಚು ಎನ್ನುವಂತೆ ಕಳೆದ 7 ವರ್ಷಗಳಲ್ಲೇ ಅತ್ಯಧಿಕ ದಾಖಲೆಯ 46.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಂದು ದಾಖಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕಳೆದ 7 ವರ್ಷಗಳಲ್ಲೇ ಅತ್ಯಧಿಕ ಎನ್ನುವಷ್ಟು 46.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು, ಮೇ 02 ರಂದು ಕರ್ನಾಟಕ ರಾಜ್ಯದಲ್ಲಿ ದಾಖಲಾದ ಗರಿಷ್ಠ ತಾಪಮಾನದ ವರ್ಷವಾರು (2017-2024) ಹೋಲಿಕೆ. ಕಳೆದ 7 ವರ್ಷಕ್ಕೆ ಹೋಲಿಸಿದರೆ 46.7˚C ಅತಿ ಹೆಚ್ಚು ತಾಪಮಾನ ದಾಖಲಾಗಿದೆ ಎಂದು ತಿಳಿಸಿದೆ. ಕೆಎಸ್ ಡಿಎಂಸಿ ನೀಡಿರುವಂತ ಮಾಹಿತಿಯ ಅಂಕಿ ಅಂಶಗಳ ಪ್ರಕಾರ 2017ರಲ್ಲಿ 42.30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 2018ರಲ್ಲಿ 45, 2019ರಲ್ಲಿ 43.70, 2020ರಲ್ಲಿ 41.90, 2021ರಲ್ಲಿ41.90, 2022ರಲ್ಲಿ 44.70, 2023ರಲ್ಲಿ 38.80 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದ್ರೇ 2024ರ ಮೇ.1ರ ಬೆಳಿಗ್ಗೆ 8.30ರಿಂದ ಮೇ.2ರ ಬೆಳಿಗ್ಗೆ 8.30ರವರೆಗೆ…

Read More

ಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ ಮಾಡಿಸಿಕೊಟ್ಟಿರುವುದಕ್ಕಾಗಿ ನೇಹಾ ಹಿರೇಮಠ ಅವರ ತಂದೆ -ತಾಯಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬೆಳಗಾವಿಯ ಮನೆಗೆ ಬಂದು ಕೃತಜ್ಞತೆ ಸಲ್ಲಿಸಿದರು. ಗುರುವಾರ ಸಂಜೆ ಆಗಮಿಸಿದ ನಿರಂಜನ ಹಿರೇಮಠ ದಂಪತಿ, ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಮನಃಪೂರ್ವಕ ಧನ್ಯವಾದ ಸಲ್ಲಿಸಿದರು. ಜೊತೆಗೆ ಬೆಳಗಾವಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಮೃಣಾಲ ಹೆಬ್ಬಾಳಕರ್ ಅವರಿಗೆ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ನಿರಂಜನ ಹಿರೇಮಠ, ನಮ್ಮ ಕಷ್ಟಕಾಲದಲ್ಲಿ ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಲಕ್ಷ್ಮೀ ಹೆಬ್ಬಾಳಕರ್ ಅವರು ಸುರಿಯುತ್ತಿದ್ದ ಮಳೆಯ ಮಧ್ಯೆಯೂ ನಮ್ಮ ಮನೆಗೆ ಬಂದು ನಮ್ಮ ದುಃಖದಲ್ಲಿ ಭಾಗಿಯಾದರು. ಜೊತೆಗೆ ನಮಗೆ ಭದ್ರತೆ ಒದಗಿಸುವ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಮತ್ತು ಪ್ರಕರಣದ ತನಿಖೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ ಮಾಡುವ ಕೆಲಸ ಮಾಡಿದರು. ಹಾಗಾಗಿ ಅವರಿಗೆ ಕೃತತ್ಜ್ಞತೆ ಸಲ್ಲಿಸಬೇಕೆಂದು ನಾವು…

Read More

ಬೆಂಗಳೂರು: ನಗರದಲ್ಲಿ ಬೇಸಿಗೆಯ ಬಿಸಿಯಿಂದ ತತ್ತರಿಸಿ ಹೋಗಿದ್ದಂತ ಜನತೆಗೆ ಇಂದು ಮಳೆರಾಯನ ಆಗಮನದ ಮೂಲಕ ತಂಪೆರೆದಂತೆ ಆಗಿದೆ. ನಗರದ ಹಲವೆಡೆ ಮಳೆರಾಯ ಆರ್ಭಟಿಸಿದ್ದಾನೆ. ಬೆಂಗಳೂರು ನಗರದ ವಸಂತಪುರ, ವಿಜಯನಗರ, ಕುಮಾರಸ್ವಾಮಿ ಲೇಔಟ್, ಕಲ್ಯಾಣ ನಗರ, ವೈಟ್ ಫೀಲ್ಡ್, ಕೆಆರ್ ಪುರಂ ಸೇರಿದಂತೆ ವಿವಿಧ ಕಡೆಯಲ್ಲಿ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಸುರಿದಂತೆ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಬೆಂಗಳೂರಿನ ಪೂರ್ವ ವಲಯ ಹಾಗೂ ನಗರದ ದಕ್ಷಿಣ ಭಾಗದಲ್ಲಿ ಹಲವೆಡೆ ಮಿಂಚು, ಗುಡುಗು ಸಹಿತ ಮಳೆ ಸುರಿಯುತ್ತಿದೆ. ಈ ಮೂಲಕ ಕಳೆದ ಮೂರರಿಂದ ನಾಲ್ಕು ತಿಂಗಳ ಬಳಿಕ ಬೆಂಗಳೂರಲ್ಲಿ ಮಳೆಯಾಗಿ ತಂಪೆರೆದಂತೆ ಆಗಿದೆ. https://kannadanewsnow.com/kannada/another-death-due-to-heat-wave-in-the-state/ https://kannadanewsnow.com/kannada/elections-to-six-legislative-council-seats-in-karnataka-to-be-held-on-june-3-results-to-be-declared-on-june-6/

Read More

ರಾಯಚೂರು: ದಿನೇ ದಿನೇ ರಾಜ್ಯದಲ್ಲಿ ಬಿರು ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಜನ, ಜಾನುವಾರು ಬಸವಳಿದು ಹೋಗುತ್ತಿದ್ದಾರೆ. ಇಂದು ರಾಜ್ಯದಲ್ಲಿ ಬಿರು ಬಿಸಿಲಿನ ತಾಪಕ್ಕೆ ರೈತನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರೋ ಘಟನೆ ರಾಯಚೂರಲ್ಲಿ ನಡೆದಿದೆ. ರಾಯಚೂರು ತಾಲೂಕಿನ ಜಾಲಿಬೆಂಚಿ ಗ್ರಾಮದ ಹನುಮಂತು(45) ಎಂಬ ರೈತ, ಹೊಲದಲ್ಲಿ ಕೆಲಸಕ್ಕೆಂದು ತೆರಳಿದ್ದರು. ಹೊಲದಿಂದ ಬಣವೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ ಆದ ಬಳಿಕ, ನೀರು ಕುಡಿಯುತ್ತಿದ್ದಂತೆ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ. ರೈತ ಹನುಮಂತು ಬಿಸಿಲ ತಾಪಕ್ಕೆ ಬಸವಳಿದು ಕುಸಿದು ಬಿದ್ದು ಸಾವನ್ನಪ್ಪಿರೋದಾಗಿ ಹೇಳಲಾಗುತ್ತಿದೆ. ಈ ಹಠಾತ್ ರೈತ ಹನುಮಂತು ಸಾವಿನಿಂದಾಗಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಅಲ್ಲದೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/bank-of-namibia-signs-digital-payments-agreement/ https://kannadanewsnow.com/kannada/elections-to-six-legislative-council-seats-in-karnataka-to-be-held-on-june-3-results-to-be-declared-on-june-6/

Read More

ಒಂದು ವೇಳೆ ಕಟ್ಟು ಮಂತ್ರವು ನಮ್ಮ ಬಳಿ ಇದ್ದರೆ ಶತ್ರುಗಳು ಮಾಡುವಂತಹ ಪ್ರತಿಯೊಂದು ಷಡ್ಯಂತರಗಳನ್ನು ದೂರ ಮಾಡಿಕೊಳ್ಳಬಹುದು. ಈ ಕಟ್ಟು ಮಂತ್ರವನ್ನು ಹೇಳಿಕೊಳ್ಳುವುದರಿಂದ ಕೇವಲ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದಲ್ಲದೆ ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬಹುದು. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564. ಈ ಕಟ್ಟು ಮಂತ್ರವನ್ನು ಹೇಳಿಕೊಳ್ಳುವುದರಿಂದ ಶತ್ರುಗಳು ನಮಗೆ ಎಂತಹದ್ದೇ ತೊಂದರೆಯನ್ನು…

Read More

ನವದೆಹಲಿ: ನಮೀಬಿಯಾಕ್ಕೆ ಯುಪಿಐ ರೀತಿಯ ತ್ವರಿತ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಎನ್ಪಿಸಿಐನ ಸಾಗರೋತ್ತರ ವಿಭಾಗವು ಬ್ಯಾಂಕ್ ಆಫ್ ನಮೀಬಿಯಾ (ಬಿಒಎನ್) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತದ ಯುಪಿಐ ತಂತ್ರಜ್ಞಾನ ಮತ್ತು ಅನುಭವಗಳನ್ನು ಬಳಸಿಕೊಂಡು, ಈ ಪಾಲುದಾರಿಕೆಯು ನಮೀಬಿಯಾ ತನ್ನ ಹಣಕಾಸು ಪರಿಸರ ವ್ಯವಸ್ಥೆಯನ್ನು ಆಧುನೀಕರಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ಪಾವತಿ ಕಾರ್ಯವಿಧಾನಗಳೊಂದಿಗೆ ಪ್ರವೇಶ, ಕೈಗೆಟುಕುವಿಕೆ ಮತ್ತು ಸಂಪರ್ಕ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಸುಧಾರಿಸುವುದನ್ನು ಒಳಗೊಂಡಿದೆ. ನಮೀಬಿಯಾಕ್ಕಾಗಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ನಂತಹ ತ್ವರಿತ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಎನ್ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್ಐಪಿಎಲ್) ಬ್ಯಾಂಕ್ ಆಫ್ ನಮೀಬಿಯಾ (ಬಿಒಎನ್) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಎನ್ಪಿಸಿಐ ಇಂಟರ್ನ್ಯಾಷನಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಿತೇಶ್ ಶುಕ್ಲಾ, ಈ ತಂತ್ರಜ್ಞಾನವನ್ನು ಸಕ್ರಿಯಗೊಳಿಸುವುದರಿಂದ ಡಿಜಿಟಲ್ ಪಾವತಿ ಈ ದೇಶಕ್ಕೆ ಸಿಕ್ಕಂತೆ ಆಗಿದೆ. ಇದು ಜನರಿಗೆ ಉತ್ತಮ ಪಾವತಿ ಅಂತರ-ಕಾರ್ಯಾಚರಣೆ ಮತ್ತು…

Read More

ಬೆಂಗಳೂರು: ಕಾಂಗ್ರೆಸ್ಸಿಗೆ ನಾಯಕ ಯಾರು? ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಪ್ರಶ್ನಿಸಿದರು. ಬೆಳಗಾವಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಇಂಡಿ ಒಕ್ಕೂಟದ ನಾಯಕ ಯಾರು ಎಂದು ಕೇಳಿದರು. ನಿಮಗೆ ನೀತಿಯೂ ಇಲ್ಲ; ನೇತೃತ್ವವೂ ಇಲ್ಲ ಎಂದು ಟೀಕಿಸಿದರು. ನಿಮ್ಮ ನೀತಿ ಏನೆಂಬುದನ್ನು ನಿಮ್ಮ ಮಾತುಗಳೇ ಸಾಬೀತುಪಡಿಸುತ್ತವೆ ಎಂದು ಆಕ್ಷೇಪಿಸಿದರು. ರಾಹುಲ್ ಗಾಂಧಿಯವರು ಮೊಹಬ್ಬತ್ ಕೆ ದೂಕಾನ್‍ನ ಮಾತನಾಡುತ್ತಿದ್ದರು. ಅವರ ಈ ದೂಕಾನ್‍ನಲ್ಲಿ ನಫರತ್‍ನ ಬಿಕರಿ ಆಗುತ್ತಿದೆ. ‘ಬಿಜೆಪಿಯವರ ಮನೆ ಹಾಳಾಗಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ದೇಶದ ಅತಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ, ಅತಿ ಹೆಚ್ಚು ಜನರು ಮತ ಹಾಕಿದ, ಅತಿ ಹೆಚ್ಚು ಸಂಸದರು, ಶಾಸಕರು ನಾಶವಾಗಲಿ ಎಂದರೆ ಭಾರತವೇ ನಾಶವಾಗಲಿ ಅವರು ಬಯಸಿದಂತೆ ಕಾಣುತ್ತದೆ ಎಂದು ವಿಶ್ಲೇಷಿಸಿದರು. ನಿನ್ನೆ ಕಾಂಗ್ರೆಸ್ ಪಕ್ಷದ ಕಾಗವಾಡ ಕ್ಷೇತ್ರದ ಶಾಸಕರು ‘ಮೋದಿ ಸತ್ತರೆ ಬೇರ್ಯಾರೂ ಪ್ರಧಾನಿ ಆಗಲ್ವೇನೋ’ ಎಂದಿದ್ದಾರೆ. ಅಲ್ಲದೆ, ‘ಕಾಂಗ್ರೆಸ್…

Read More

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಸೆಟ್-2023ರ ಪರೀಕ್ಷೆಯ ( KSET-2023 Exam ) ತಾತ್ಕಾಲಿಕ ಅಂಕವನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಇಂದು ಕೆಇಎಯಿಂದ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, KSET ಪರೀಕ್ಷೆಯ ತಾತ್ಕಾಲಿಕ ಅಂಕ ಪ್ರಕಟಿಸಲಾಗಿದೆ. ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ KSET-23ನಲ್ಲಿ ಅಭ್ಯರ್ಥಿಗಳು ಗಳಿಸಿದ ವಿಷಯವಾರು ಅಂಕಗಳ ತಾತ್ಕಾಲಿಕ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದಿದೆ. 41 ವಿಷಯಗಳ ಅಂಕಪಟ್ಟಿ ಇದೆ. ಆಕ್ಷೇಪಣೆಗಳಿದ್ದಲ್ಲಿ ಮೇ 10ರೊಳಗೆ ಇ-ಮೇಲ್ keakset2023@gmail.com ಮಾಡಬೇಕು ಎಂಬುದಾಗಿ ತಿಳಿಸಿದೆ. https://twitter.com/KEA_karnataka/status/1786007359531454851 https://kannadanewsnow.com/kannada/centre-issued-visa-to-prajwal-revanna-to-fly-abroad-v-s-ugrappa/ https://kannadanewsnow.com/kannada/elections-to-six-legislative-council-seats-in-karnataka-to-be-held-on-june-3-results-to-be-declared-on-june-6/

Read More

ಬೆಂಗಳೂರು: ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ ಹೋಗಲು ವೀಸಾ ನೀಡಿದ್ದು ಯಾರು? ವೀಸಾ ನೀಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಕೇಂದ್ರ ಸರ್ಕಾರವೇ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಕ್ಕೆ ಹಾರಿ ಹೋಗಲು ವೀಸಾ ನೀಡಿದೆ ಎಂಬುದಾಗಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇತಿಹಾಸದಲ್ಲಿಯೇ ಕಂಡು ಕೇಳರಿಯದಂತಹ ಲೈಂಗಿಕ ಹಗರಣ ಕರ್ನಾಟಕದ ಹಾಸನದಲ್ಲಿ ನಡೆದಿರುವುದು ಇಡೀ ಮನುಕುಲವೇ ತಲೆ ತಗ್ಗಿಸುವ ಘಟನೆ. ಹೊಳೆನರಸಿಪುರದ ಬಿಜೆಪಿ ಅಭ್ಯರ್ಥಿಯಾಗಿದ್ದ ದೇವರಾಜೇಗೌಡ ಅವರು ಸುಮಾರು ನಾಲ್ಕು ತಿಂಗಳ ಹಿಂದೆ ಮಾಧ್ಯಮ ಗೋಷ್ಠಿ ನಡೆಸಿ ಪ್ರಜ್ವಲ್ ರೇವಣ್ಣ ಅವರ ಸಿಡಿಗಳು ಇವೆ ಎಂದು ಮಾಹಿತಿ ನೀಡಿದ್ದರು. ಈ ವಿಚಾರವಾಗಿ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡುವುದು ಎಂದು ಹೇಳಿದ್ದರು ಎಂದರು. ಐಪಿಸಿ ಸೆಕ್ಷನ್ 202 ಪ್ರಕಾರ ಕಾನೂನು ವಿರುದ್ದ ನಡೆದುಕೊಂಡಿದ್ದರೆ ಹಾಗೂ ಅದನ್ನು ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ನೀಡದೆ ಇದ್ದರೆ…

Read More

ಯಾದಗಿರಿ: ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ, ನಾಲ್ಕು ಗುಡಿಸಲು ಸುಟ್ಟು ಭಸ್ಮವಾಗಿರುವಂತ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರದ ಮಲ್ಲಾ ಬಿ ಗ್ರಾಮದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಒಂದು ಸ್ಪೋಟಗೊಂಡಿದೆ. ಇದರ ಪರಿಣಾಮ ಗುಡಿಸಲಿಗೆ ಬೆಂಕಿ ತಗುಲಿ, ಹೊತ್ತಿ ಉರಿದಿದೆ. ಮಲ್ಲಾ ಬಿ ಗ್ರಾಮದ ಮಲ್ಲಾರೆಡ್ಡಿ ಹಾಗೂ ಮಲ್ಕಪ್ಪ ಎಂಬುವರಿಗೆ ಸೇರಿದಂತೆ ಗುಡಿಸಲು ಸಿಲಿಂಡರ್ ಸ್ಪೋಟದಿಂದ ಹೊತ್ತಿ ಉರಿದಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಸತತ ಒಂದು ಗಂಟೆಗಳ ಕಾಲ ಹರಸಾಹಸ ನಡೆಸಿ ಬೆಂಕಿ ನಂದಿಸಿವೆ. ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/pm-modi-remembers-karnataka-only-when-elections-are-held-siddaramaiah/ https://kannadanewsnow.com/kannada/elections-to-six-legislative-council-seats-in-karnataka-to-be-held-on-june-3-results-to-be-declared-on-june-6/

Read More