Author: kannadanewsnow09

ಬೆಂಗಳೂರು : SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ Rank ಪಡೆದ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಕುಮಾರಿ ಅಂಕಿತ ಹಾಗೂ ದ್ವಿತೀಯ Rank ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸನ್ಮಾನಿಸಿದರು. ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಿ ಸಾಗಲಿ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು.‌ ಅಂಕಿತ ಮತ್ತು ನವನೀತ್ ಸಾಧನೆಗೆ ಮೆಚ್ವುಗೆ ವ್ಯಕ್ತಪಡಿಸಿದ ಸಿಎಂ, ಪೋಷಕರನ್ನೂ ಅಭಿನಂದಿಸಿದರು. ಮುಂದಿನ‌ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್ ಗೆ 3 ಲಕ್ಷ ರೂ.ಗಳ ನೆರವನ್ನು ಸಿಎಂ ಘೋಷಿಸಿದರು. ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದರು. ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೋಷಕರು ಸರ್ಕಾರದ…

Read More

ಬೆಂಗಳೂರು: ರೈಲಿಗೆ ಸಿಲುಕಿ ಕುರಿಗಾಯಿಯೊಬ್ಬರ 46 ಕುರಿಗಳು ಧಾರುಣವಾಗಿ ಸಾವನ್ನಪ್ಪಿದ್ದವು. ಆ ದುಃಖದ ನಡುವೆಯೂ ಸತ್ತ ಕುರಿಗಳನ್ನೇ ಬಂದಷ್ಟು ದುಡ್ಡು ಬರಲಿ ಅಂತ ಮಾರುತ್ತಿದ್ದ ರೈತನಲ್ಲೇ ರೈಲ್ವೆ ಸಿಬ್ಬಂದಿಯೊಬ್ಬರು ಪಾಲು ಕೇಳಿರುವಂತ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರೈತ ದೇವರಾಜ್ ಕುರಿಗಳನ್ನು ರೈಲ್ವೆ ಹಳಿಯ ಮೇಲಿನಿಂದ ಮತ್ತೊಂದು ಬದಿಗೆ ಹೊಡೆಯುತ್ತಿದ್ದಾಗ ರೈಲು ಹರಿದು 46 ಕುರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಿಡವಂದ ಬಳಿಯಲ್ಲಿ ಸಾವನ್ನಪ್ಪಿದ್ದವು. ಧಾರುಣವಾಗಿ ರೈಲಿಗೆ ಸಿಲುಕಿ ಸಾವನ್ನಪ್ಪಿದಂತ 46 ಕುರಿಗಳನ್ನು ದುಃಖದ ನಡುವೆಯೂ ಅರ್ಧ ಬೆಲೆಗೆ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದರು. ದಬಾಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಂತ ಕುರಿಗಳನ್ನು ಅರ್ಧ ಬೆಲೆಗೆ ಮಾರುತ್ತಿದ್ದಂತ ಕುರಿಗಾಯಿ ದೇವರಾಜ್ ಬಳಿಯಲ್ಲಿ ತಮಗೆ 5 ಕುರಿಯನ್ನು ಉಚಿತವಾಗಿ ನೀಡುವಂತೆ ರೈಲ್ವೆ ಸಿಬ್ಬಂದಿ ವೆಂಕಟೇಶ್ ಎಂಬಾತ ಧಮ್ಕಿ ಹಾಕಿದ್ದಾರೆ. ಅಲ್ಲ ಸ್ವಾಮಿ ರೈಲು ಹರಿದು ಕುರಿ…

Read More

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವು ತನ್ನ ದುರಾಡಳಿತದ ಮೂಲಕ ಶಿಕ್ಷಣ ಕ್ಷೇತ್ರವನ್ನು ಹಾಳುಗಡೆವಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ ಅವರು ಆಕ್ಷೇಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣ ವ್ಯವಸ್ಥೆಯಡಿ ರಾಜ್ಯ ಪಠ್ಯಕ್ರಮದಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 9 ಲಕ್ಷದಷ್ಟು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಸರಕಾರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಇಲಾಖೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು. 1 ಕೋಟಿ ಮಕ್ಕಳ ಭವಿಷ್ಯವನ್ನು ಅತಂತ್ರಕ್ಕೆ ತಳ್ಳುವ ಕೆಲಸ ಮಾಡಿದ್ದಾರೆ ಎಂದು ದೂರಿದರು. 10ನೇ ತರಗತಿ ಪರೀಕ್ಷೆ ಬರೆದ 9 ಲಕ್ಷದಷ್ಟು ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕದಲ್ಲಿದ್ದಾರೆ. ಕೆಎಸ್‍ಇಎಪಿ ಮೂಲಕ ಪರೀಕ್ಷೆ ನಡೆಸಿದ್ದಾರೆ. ಯಶಸ್ವಿ ಪರೀಕ್ಷೆ ನಡೆಸಿದ್ದಾಗಿ ಹೇಳಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಅತ್ಯಂತ…

Read More

ಬೆಂಗಳೂರು: ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿ ಆಗೋದರಲ್ಲಿ ಎರಡು ಮಾತಿಲ್ಲ. ಅದು ಖಚಿತ ಅಂತ ಸಾಹಿತಿ, ಕಾದಂಬರಿಕಾರ ಡಾ.ಎಸ್ ಎಲ್ ಭೈರಪ್ಪ ಹೇಳಿದ್ದಾರೆ. ಇಂದು ವಾರಣಾಸಿ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರು ನಾಮಪತ್ರ ಸಲ್ಲಿಸಿದ್ದಾರೆ. ಈ ವಿಚಾರವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ವಾರಣಾಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಈ ಐತಿಹಾಸಿಕ ಸ್ಥಾನದ ಜನರಿಗೆ ಸೇವೆ ಸಲ್ಲಿಸುವುದು ಗೌರವವಾಗಿದೆ. ಜನರ ಆಶೀರ್ವಾದದಿಂದ, ಕಳೆದ ದಶಕದಲ್ಲಿ ಗಮನಾರ್ಹ ಸಾಧನೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಈ ಕೆಲಸದ ವೇಗವು ಇನ್ನಷ್ಟು ವೇಗವಾಗಲಿದೆ ಎಂದು ತಿಳಿಸಿದ್ದಾರೆ. https://twitter.com/narendramodi/status/1790300480884592816 ಇದೇ ಹೊತ್ತಿನಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಾಹಿತಿ ಡಾ.ಎಸ್ ಎಲ್ ಭೈರಪ್ಪ ಅವರು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗೋದು ಖಚಿತ ಎಂಬುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. https://twitter.com/SLBhyrappa/status/1790319487138623800 https://kannadanewsnow.com/kannada/one-dead-as-fire-breaks-out-at-delhis-income-tax-office-7-rescued/ https://kannadanewsnow.com/kannada/in-an-inhuman-incident-in-the-state-father-sold-his-son-to-pay-off-his-debts/

Read More

ನವದೆಹಲಿ: ರಾಷ್ಟ್ರ ರಾಜಧಾನಿಯ ಐಟಿಒ ಪ್ರದೇಶದ ಕೇಂದ್ರ ಕಂದಾಯ ಕಟ್ಟಡದಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಒಟ್ಟು 21 ಅಗ್ನಿಶಾಮಕ ಟೆಂಡರ್ ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಕಟ್ಟಡದಿಂದ ಏಳು ಜನರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಯ ಸಮಯದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. 46 ವರ್ಷದ ಪುರುಷ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿದೆ. ಹಳೆಯ ಪೊಲೀಸ್ ಪ್ರಧಾನ ಕಚೇರಿಯ ಎದುರಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರ ಕೆಲವು ಘಟಕಗಳಿಗೆ ಬೆಂಕಿ ಆವರಿಸಿದೆ. ಆದಾಯ ತೆರಿಗೆ ಸಿಆರ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಮಗೆ ಮಧ್ಯಾಹ್ನ 3.07 ಕ್ಕೆ ಕರೆ ಬಂತು. ನಾವು ಒಟ್ಟು 21 ಅಗ್ನಿಶಾಮಕ ಟೆಂಡರ್ ಗಳನ್ನು ರವಾನಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಈ ವಿಷಯದ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಡಿಎಫ್ಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ…

Read More

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಆರ್ಭಟಿಸುತ್ತಿದೆ. ಈ ಹೊತ್ತಿನಲ್ಲೇ ಆರೋಗ್ಯ ಇಲಾಖೆಯಿಂದ ನಿಯಂತ್ರಣ ಕ್ರಮ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಡೆಂಗ್ಯೂ ಜ್ವರವು ವೈರಲ್ ಸೋಂಕುಗಳಲ್ಲಿ ಒಂದಾಗಿದೆ. ಡೆಂಗ್ಯೂ, ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಜಾತಿಯ ಸೊಳ್ಳೆಗಳಿಂದ ಡೆಂಗಿ ಜ್ವರವು ಒಬ್ಬರಿಂದ ಒಬ್ಬರಿಗೆ  ಹರಡುತ್ತದೆ ಎಂದು ತಿಳಿಸಿದೆ. ರೋಗಲಕ್ಷಣಗಳು ಸೊಳ್ಳೆ ಕಚ್ಚಿದ ನಾಲ್ಕರಿಂದ ಹತ್ತು ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಡೆಂಗ್ಯೂ ಜ್ವರ ಇದ್ದರೆ ವಿಪರೀತವಾಗಿ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ತೀವ್ರ ಜ್ವರ, ಕಣ್ಣಿನ ಗುಡ್ಡೆಯ ಹಿಂಭಾಗದಲ್ಲಿ ನೋವು, ತಲೆ ನೋವು , ಮೈ-ಕೈ ನೋವು , ಇವು ಡೆಂಗಿ ಜ್ವರದ ಸಾಮಾನ್ಯ ಲಕ್ಷಣಗಳಾಗಿವೆ. ಡೆಂಗಿ ಜ್ವರಕ್ಕೆ  ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಇಲ್ಲದಿರುವುದಿಂದ,  ರೋಗ ಲಕ್ಷಣಗಳಿಗೆ ಅನುಸಾರವಾಗಿ ಚಿಕಿತ್ಸೆ ನೀಡಲಾಗುವುದು. ಪ್ರಸ್ತುತ, 2024ನೇ ಸಾಲಿನಲ್ಲಿ ದಿನಾಂಕ: 13.5.2024ರವರೆಗೆ ರಾಜ್ಯದಲ್ಲಿ…

Read More

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಇಂದು ಎಸ್ಐಟಿ ಅಧಿಕಾರಿಗಳಿಂದ ಬಿಜೆಪಿ, ಜೆಡಿಎಸ್ ಮುಖಂಡರಿಗೆ ಬಿಗ್ ಶಾಕ್ ನೀಡಲಾಗಿದೆ. ಹಾಸನದಲ್ಲಿ ಪ್ರೀತಂ ಗೌಡ ಆಪ್ತರ ಬಾರ್, ಹೋಟೆಲ್ ಮೇಲೆ ದಾಳಿ ನಡೆಸಿದ್ರೇ, ವಕೀಲ ದೇವರಾಜೇಗೌಡ ಅವರ ನಿವಾಸದ ಮೇಲೂ ದಾಳಿ ನಡೆಸಿ, ಶಾಕ್ ಮೇಲೆ ಶಾಕ್ ನೀಡಿದ್ದಾರೆ. ಹಾಸನದ ರವೀಂದ್ರನಗರದಲ್ಲಿರುವಂತ ವಕೀಲ ದೇವರಾಜೇಗೌಡ ಅವರ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನದ ರವೀಂದ್ರನಗರದಲ್ಲಿರುವಂತ ವಕೀಲ ದೇವರಾಜೇಗೌಡ ಅವರ ನಿವಾಸದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಅಂದಹಾಗೇ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಮೊದಲು ಟ್ವಿಸ್ಟ್ ಸಿಕ್ಕಿದೇ ವಕೀಲ ದೇವರಾಜೇಗೌಡ ಅವರಿಂದ ಆಗಿದೆ. ನನ್ನ ಬಳಿ ಇದ್ದಂತ ಪೆನ್ ಡ್ರೈವ್ ಅನ್ನು ವಕೀಲ ದೇವರಾಜೇಗೌಡ ಅವರಿಗೆ ನೀಡಲಾಗಿತ್ತು ಎಂಬುದಾಗಿ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿದ್ದರು. ಈ ಪ್ರಕರಣದ ನಂತ್ರ ವಕೀಲ ದೇವರಾಜೇಗೌಡ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ…

Read More

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಹಾಗೂ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಅವರು ಜೈಲುಪಾಲಾಗಿದ್ದಾರೆ. ಈ ಬೆನ್ನಲ್ಲೇ ಅವರ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನದ ರವೀಂದ್ರನಗರದಲ್ಲಿರುವಂತ ವಕೀಲ ದೇವರಾಜೇಗೌಡ ಅವರ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನದ ರವೀಂದ್ರನಗರದಲ್ಲಿರುವಂತ ವಕೀಲ ದೇವರಾಜೇಗೌಡ ಅವರ ನಿವಾಸದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಅಂದಹಾಗೇ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಮೊದಲು ಟ್ವಿಸ್ಟ್ ಸಿಕ್ಕಿದೇ ವಕೀಲ ದೇವರಾಜೇಗೌಡ ಅವರಿಂದ ಆಗಿದೆ. ನನ್ನ ಬಳಿ ಇದ್ದಂತ ಪೆನ್ ಡ್ರೈವ್ ಅನ್ನು ವಕೀಲ ದೇವರಾಜೇಗೌಡ ಅವರಿಗೆ ನೀಡಲಾಗಿತ್ತು ಎಂಬುದಾಗಿ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿದ್ದರು. ಈ ಪ್ರಕರಣದ ನಂತ್ರ ವಕೀಲ ದೇವರಾಜೇಗೌಡ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ನೀಡಿದಂತ ಆರೋಪದಲ್ಲಿ ದೂರು ನೀಡಿದ್ದರು. ಈ ದೂರು ಸಂಬಂಧ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಈಗ…

Read More

ನವದೆಹಲಿ: ತನ್ನ ಕೋಟ್ಯಂತರ ಚಂದಾದಾರರಿಗೆ ಉಡುಗೊರೆ ನೀಡುವ ಇಪಿಎಫ್ಒ ಶಿಕ್ಷಣ, ಮದುವೆ ಮತ್ತು ಮನೆ ಖರೀದಿಸಲು ಮುಂಗಡ ಕ್ಲೈಮ್ಗಳಿಗಾಗಿ ಆಟೋ-ಮೋಡ್ ಇತ್ಯರ್ಥ ಪ್ರಕ್ರಿಯೆಯನ್ನು ಪರಿಚಯಿಸಿದೆ. ಇಪಿಎಫ್ಒ ಸ್ವಯಂ ಕ್ಲೈಮ್ ಪರಿಹಾರವನ್ನು ಪ್ರಾರಂಭಿಸಿದೆ. ಇದರಲ್ಲಿ ಈಗ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಐಟಿ ವ್ಯವಸ್ಥೆಯ ಮೂಲಕ ಕ್ಲೈಮ್ ಅನ್ನು ಸ್ವಯಂಚಾಲಿತವಾಗಿ ಇತ್ಯರ್ಥಪಡಿಸಲಾಗುತ್ತದೆ. ಈ ಹಿಂದೆ, ರೋಗದ ಚಿಕಿತ್ಸೆಗಾಗಿ ಮುಂಗಡ ಕ್ಲೈಮ್ ವ್ಯವಸ್ಥೆಯನ್ನು ಏಪ್ರಿಲ್ 2020 ರಲ್ಲಿ ಆಟೋ ಮೋಡ್ ಸೆಟಲ್ಮೆಂಟ್ ಮೂಲಕ ಪರಿಚಯಿಸಲಾಯಿತು. ಆಟೋ ಕ್ಲೈಮ್ ಸೌಲಭ್ಯ ಪ್ರಾರಂಭ 2023-24ರ ಹಣಕಾಸು ವರ್ಷದಲ್ಲಿ ಒಟ್ಟು 2.84 ಕೋಟಿ ಮುಂಗಡ ಕ್ಲೇಮ್ಗಳನ್ನು ಇತ್ಯರ್ಥಪಡಿಸಲಾಗಿದ್ದು, ಅದರಲ್ಲಿ 89.52 ಲಕ್ಷ ಕ್ಲೈಮ್ಗಳನ್ನು ಆಟೋ ಮೋಡ್ ಮೂಲಕ ಇತ್ಯರ್ಥಪಡಿಸಲಾಗಿದೆ. ಇಪಿಎಫ್ ಯೋಜನೆ 1952 ರ ಅಡಿಯಲ್ಲಿ ಪ್ಯಾರಾ 68 ಕೆ (ಅಧ್ಯಯನ ಮತ್ತು ಮದುವೆಗಾಗಿ), 68 ಜೆ (ಅನಾರೋಗ್ಯಕ್ಕಾಗಿ) ಮತ್ತು 68 ಬಿ (ವಸತಿ) ಗೆ ಈಸ್ ಆಫ್ ಲಿವಿಂಗ್ ಅಡಿಯಲ್ಲಿ ಆಟೋ ಕ್ಲೈಮ್ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಇದರೊಂದಿಗೆ, ಇಪಿಎಫ್ಒ ಆಟೋ…

Read More

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಜಾಮೀನು ಬಳಿಕ ಇಂದು ಬಿಡುಗಡೆಯಾಗಿದ್ದರು. ಆ ಬಳಿಕ ಟೆಂಪಲ್ ರನ್ನ ಕೂಡ ಮಾಡುತ್ತಿದ್ದಾರೆ. ಈ ವೇಳೆಯಲ್ಲಿ ಮೊದಲ ಪ್ರತಿಕ್ರಿಯೆ ಏನು ನೀಡಿದ್ರು ಅಂತ ಮುಂದೆ ಓದಿ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರ ಬರುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಪದ್ಮನಾಭ ನಗರದ ನಿವಾಸದಲ್ಲಿ ಭೇಟಿಯಾದರು. ಆ ಬಳಿಕ, ಅಲ್ಲಿನ ದೇವರ ಕೋಣೆಗೆ ತೆರಳಿ ಪೂಜೆ ಕೂಡ ನೆರವೇರಿಸಿದ್ದಾರೆ. ಅಲ್ಲಿಂದ ಬೆಂಗಳೂರಿನ ಜೆಪಿ ನಗರದಲ್ಲಿ ಇರುವಂತ ತಿರುಮಲ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ತೆರಳಿದಂತ ಅವರು, ವಿಶೇಷ ಪೂಜೆಯನ್ನು ಸಲ್ಲಿಸಿದರು. ಜೊತೆಗೆ ಕುಂಬಳಕಾಯಿ, ಈಡುಗಾಯಿ ಹೊಡೆದು ದೃಷ್ಠಿ ತೆಗೆಸಿ, ಒಬ್ಬರೇ ಪೂಜೆ ಮಾಡಿದ್ರು. ಅಲ್ಲಿಂದ ಬಸವನಗುಡಿಯಲ್ಲಿರುವಂತ ಕಾರಂಜಿ ಆಂಜನೇಯ ದೇವಸ್ಥಾನಕ್ಕೆ ತೆರಳಿದಂತ ಅವರು, ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿಂದ ನೇರವಾಗಿ ಬೆಂಗಳೂರಿನ ನಿವಾಸಕ್ಕೆ ತೆರಳಿದಂತ ಅವರು, ಸಂಪ್ರದಾಯದಂತೆ ಮನೆ ಒಳಗೆ ಹೋಗಿ, ಕೆಲ ಕಾಲವಿದ್ದು, ಹೊರ…

Read More