Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಿನ್ನೆ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಇಂದು ಮಧ್ಯಂತರ ಜಾಮೀನು ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿದ ನಂತ್ರ, ಮೇ.20ಕ್ಕೆ ಹೆಚ್.ಡಿ ರೇವಣ್ಣ ಅವರ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿದೆ. ಅಲ್ಲದೇ ಮೇ.20ರ ಸೋಮವಾರದವರೆಗೆ ಮಧ್ಯಂತರ ಜಾಮೀನು ಮುಂದುವರಿಸಿದೆ. ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿನ್ನೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಒಂದು ದಿನದ ಮಟ್ಟಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇಂದು ಜಾಮೀನು ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ನ್ಯಾಯಪೀಠವು, ಅರ್ಜಿಯ ವಿಚಾರಣೆ ನಡೆಸಿತು. ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ ನ್ಯಾಯಪೀಠದ ಮುಂದೆ ಎಸ್ಐಟಿ ಪರ ಎಸ್ ಪಿಪಿ ಜಾಯ್ನಾ ಕೊಥಾರಿ ಅವರು ಆರಂಭದಲ್ಲಿ ವಾದ ಮಂಡಿಸಿದರು. ಅವರು ಐಪಿಸಿ ಸೆಕ್ಷನ್ 436ರಡಿ…
ಶಿವಮೊಗ್ಗ : ಎಂ.ಆರ್.ಎಸ್. ಶಿವಮೊಗ್ಗದ 220 ಕೆವಿ ವಿವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಮೇ 19 ರಂದು ಬೆಳಗ್ಗೆ 09.00 ರಿಂದ ಸಂಜೆ 5.00ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಕುರಿತಂತೆ ಮೆಸ್ಕಾಂ ಮಾಹಿತಿ ಹಂಚಿಕೊಂಡಿದ್ದು, ಮೇ.19ರಂದು ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ ಪವರ್ ಕಟ್ ಆಗಲಿದೆ ಎಂದಿದೆ. ಇನ್ನೂ ಬಂಗಾಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಹೊನ್ನವಿಲೆ, ಮೆ|| ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐಟಿಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ.ಕಾಲೋನಿ, ನವುಲೆಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. https://kannadanewsnow.com/kannada/good-news-for-cancer-patients-from-state-government-now-treatment-under-yashaswini-scheme/…
ಬೆಂಗಳೂರು: ರಾಜ್ಯದ ಬಡವರ್ಗದವರಿಗೆ ಉಚಿತ ಚಿಕಿತ್ಸಾ ಸೌಲಭ್ಯಕ್ಕಾಗಿ ಯಶಸ್ವಿನಿಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ ಈಗಾಗಲೇ ಹಲವು ರೋಗಗಳಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಸೌಲಭ್ಯವನ್ನು ಒದಗಿಸುತ್ತಿದೆ. ಈಗ ಮುಂದುವರೆದು ರಾಜ್ಯದ ಕ್ಯಾನ್ಸರ್ ಪೀಡಿತರಿಗೆ ಗುಡ್ ನ್ಯೂಸ್ ಎನ್ನುವಂತೆ ಯಶಸ್ವಿನಿ ಯೋಜನೆಯಡಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಚಿಕಿತ್ಸೆ ನೀಡಲು ಸೇರ್ಪಡೆ ಮಾಡಿದೆ. ಕ್ಯಾನ್ಸರ್ ಬಂದಿದೆ ಅಂದ್ರೆ ಸಾವೇ ಮುಂದಿನ ದಾರಿ ಅನ್ನೋ ಮಾತಿದೆ. ಈ ರೋಗಕ್ಕೆ ಚಿಕಿತ್ಸೆ ಪಡೆಯುವುದಂತೂ ಬಡ ವರ್ಗದ ಜನರಿಗೆ ಕನಸಿನ, ಆರ್ಥಿಕ ಹೊರೆಯ ಮಾತೇ ಸರಿ. ಆದ್ರೇ ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯಡಿ ಕ್ಯಾನ್ಸರ್ ರೋಗಿಗಳಿಗೆ ನೀಡುವಂತ ಕಿಮೋಥೆರಪಿ ಚಿಕಿತ್ಸೆಯನ್ನು ನೀಡಲು, ಈ ಯೋಜನೆಗೆ ಸೇರ್ಪಡೆ ಮಾಡಿದೆ. ಈಗಾಗಲೇ ರಾಜ್ಯದಲ್ಲಿ 474 ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಯಶಸ್ವಿನಿ ನೆಟ್ವರ್ಕ್ ಅಡಿಯಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಡವರ ಆರ್ಥಿಕ ಹೊರೆ ನೀಗಿಸೋ ನಿಟ್ಟಿನಲ್ಲಿ ಈಗ ಕ್ಯಾನ್ಸರ್ ರೋಗದ ಚಿಕಿತ್ಸೆಯಾಗಿರುವಂತ ಕಿಮೋಥೆರಪಿಯನ್ನು ಯಶಸ್ವಿನಿ ಯೋಜನೆಯಡಿ ಉಚಿತವಾಗಿ ನೀಡೋದಕ್ಕೆ…
BREAKING: ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಸಲ್ಲಿಸಿದ್ದ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್ ವಜಾ | Hemant Soren
ನವದೆಹಲಿ: ಚುನಾವಣಾ ಪ್ರಚಾರದ ಉದ್ದೇಶಗಳಿಗಾಗಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ (ಮೇ 17) ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠವು ಮುಂದಿನ ಮಂಗಳವಾರ (ಮೇ 21) ಸುಪ್ರೀಂ ಕೋರ್ಟ್ನ ರಜಾಕಾಲದ ಪೀಠದ ಮುಂದೆ ಈ ವಿಷಯವನ್ನು ಪಟ್ಟಿ ಮಾಡಲು ನಿರ್ದೇಶನ ನೀಡಿತು. ಭೂ ಹಗರಣಕ್ಕೆ ಸಂಬಂಧಿಸಿದಂತೆ ಜನವರಿ 31 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸೊರೆನ್ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ. ಇಂದು ಈ ವಿಷಯವನ್ನು ಕೈಗೆತ್ತಿಕೊಂಡಾಗ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು (ಇಡಿ ಪ್ರತಿನಿಧಿ) ಸಮಯ ಕೋರಿದರು. ಮಧ್ಯಂತರ ಜಾಮೀನು ಅರ್ಜಿಯ ಬಗ್ಗೆ ನ್ಯಾಯಪೀಠ ಎಎಸ್ಜಿಯನ್ನು ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್ಜಿ, ಸೊರೆನ್ ಅವರನ್ನು ಬಹಳ ಹಿಂದೆಯೇ (ಜನವರಿ 31) ಬಂಧಿಸಲಾಯಿತು. ಅವರ ನಿಯಮಿತ…
ರಾಮನಗರ: ಜಿಲ್ಲೆಯಲ್ಲಿ ಈಜಲು ಕಲ್ಲಿನ ಹೊಂಡಕ್ಕೆ ತೆರಳಿದ್ದಂತ ಮೂವರು ಮಕ್ಕಳು ನೀರುಪಾಲಾಗಿರೋ ಘಟನೆ ನಡೆದಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬೆಟ್ಟದ ಮೇಲಿರುವಂತ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಈ ನೀರಿನಲ್ಲಿ ಈಜಾಡೋದಕ್ಕಾಗಿ ಮೂವರು ಮಕ್ಕಳು ತೆರಳಿದ್ದರು. ಹೀಗೆ ಈಜಲು ತೆರಳಿದ್ದಂತ ಮೂವರು ಮಕ್ಕಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಮೂವರು ಮಕ್ಕಳ ಮೃತದೇಹವನ್ನು ಹುಡುಕಿ ಹೊರ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದಹಾಗೇ ನಿನ್ನೆಯಷ್ಟೇ ಹಾಸನದ ಅಲೂರಿನ ಮುತ್ತಿಗೆ ಗ್ರಾಮದಲ್ಲಿ ಬೇಸಿಗೆ ರಜೆ ನಿಮಿತ ನಾಲ್ವರು ಮಕ್ಕಳು ಈಜಾಡುವ ಸಲುವಾಗಿ ಕೆರೆಗೆ ಹೋಗಿ, ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮೃತ ಮಕ್ಕಳನ್ನು ಜೀವನ್, ಸಾತ್ವೀಕ್, ವಿಶ್ವ, ಪೃಥ್ವಿ ಎಂಬುದಾಗಿ ಗುರುತಿಸಲಾಗಿತ್ತು. ಈ ಘಟನೆ ಬೆನ್ನಲ್ಲೇ ಇಂದು ರಾಮನಗರದಲ್ಲಿ ಮೂವರು ಮಕ್ಕಳು ನೀರುಪಾಲಾಗಿದ್ದಾರೆ. https://kannadanewsnow.com/kannada/students-who-have-registered-for-sslc-exam-ii-should-note-special-class-to-be-organized-till-june-05/ https://kannadanewsnow.com/kannada/cm-siddaramaiah-orders-cancellation-of-sslc-grace-marks-from-next-year/
ನವದೆಹಲಿ: ಇಂದು ಬಳಕೆದಾರರು twitter.com ಭೇಟಿ ನೀಡಿದಾಗ, ಅವರನ್ನು x.com ಗೆ ಮರುನಿರ್ದೇಶಿಸಲಾಯಿತು. ಪಾಪ್-ಅಪ್ ಅಧಿಸೂಚನೆಯು ಬ್ರೌಸರ್ಗಳ ಮೂಲಕ ಮೈಕ್ರೋಬ್ಲಾಗಿಂಗ್ ಸೈಟ್ ಅನ್ನು ಪ್ರವೇಶಿಸುವವರನ್ನು ಸ್ವಾಗತಿಸಿತು. “x.com ಗೆ ಸ್ವಾಗತ! ನಾವು ನಮ್ಮ URL ಅನ್ನು ಬದಲಾಯಿಸುತ್ತಿದ್ದೇವೆ ಎಂದು ನಾವು ನಿಮಗೆ ತಿಳಿಸುತ್ತಿದ್ದೇವೆ. ಆದರೆ ನಿಮ್ಮ ಗೌಪ್ಯತೆ ಮತ್ತು ಡೇಟಾ ಸಂರಕ್ಷಣಾ ಸೆಟ್ಟಿಂಗ್ ಗಳು ಒಂದೇ ಆಗಿರುತ್ತವೆ ಎಂದಿತು. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮತ್ತು ಅವರ ಭದ್ರತಾ ವಿವರಗಳು ಜನವರಿ 27, 2023 ರಂದು ಯುಎಸ್ನ ವಾಷಿಂಗ್ಟನ್ನಲ್ಲಿರುವ ಕಂಪನಿಯ ಸ್ಥಳೀಯ ಕಚೇರಿಯಿಂದ ಹೊರಹೋಗುತ್ತವೆ. ಮೂರು ಗಂಟೆಗಳ ಹಿಂದೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಎಲೋನ್ ಮಸ್ಕ್, ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಸಾಮಾಜಿಕ ನೆಟ್ವರ್ಕ್ ಸಂಪೂರ್ಣವಾಗಿ X.com ಬದಲಾಗಿದೆ ಎಂದು ಹಂಚಿಕೊಂಡಿದ್ದಾರೆ. “ಎಲ್ಲಾ ಪ್ರಮುಖ ವ್ಯವಸ್ಥೆಗಳು ಈಗ X.com ನಲ್ಲಿವೆ” ಎಂದು ಅವರು ಬರೆದಿದ್ದಾರೆ. https://x.com/elonmusk/status/1791351500217754008 ಟೆಸ್ಲಾ, ಸ್ಪೇಸ್ಎಕ್ಸ್ ಮತ್ತು ಇತರ ಕಂಪನಿಗಳ ಬಿಲಿಯನೇರ್ ಮುಖ್ಯಸ್ಥರು 2022 ರ ಕೊನೆಯಲ್ಲಿ…
ಬೆಂಗಳೂರು: ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‍ಇಪಿ) ರಾಜಕೀಯ ಮೇಲಾಟದ ಕಾರಣ ತಿಲಾಂಜಲಿ ಕೊಟ್ಟು, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ತಿಳಿಸಿದ ಈ ರಾಜ್ಯ ಸರಕಾರ ಇವತ್ತಿನವರೆಗೂ ಯಾವುದೇ ಪ್ರಗತಿಯನ್ನು ಮಾಡದೆ ಇರುವುದು ಒಂದು ಸಾಧನೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಅವರು ವಿಶ್ಲೇಷಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ಕಳೆದ ಒಂದು ವರ್ಷದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಮುಂದಿಡುವುದಾಗಿ ತಿಳಿಸಿದರು. ಈ ಸರಕಾರವು ವಿಶೇಷವಾಗಿ ಪದವಿ ತರಗತಿಗಳಲ್ಲಿ, ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ಷೇಪಿಸಿದರು. ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳ ಭವಿಷ್ಯವನ್ನೇ ಮಸಕು ಮಾಡುತ್ತಿದೆ ಈ ಸರಕಾರ ಎಂದು ಟೀಕಿಸಿದ ಅವರು, ನಮ್ಮಲ್ಲಿ ಸಿಬಿಎಸ್‍ಇ, ಐಸಿಎಸ್‍ಇ ಸೇರಿದಂತೆ ಕೇಂದ್ರ ಪಠ್ಯಕ್ರಮದ ಶಾಲೆಗಳು, ಜೊತೆಗೆ ಸ್ವಾಯತ್ತ ವಿಶ್ವವಿದ್ಯಾಲಯಗಳು ಇವೆ. ಆ ವಿದ್ಯಾರ್ಥಿಗಳಿಗೆ ಒಂದು ನೀತಿಯಾದರೆ, ಸರಕಾರಿ ಶಾಲೆಗೆ…
ಶಿವಮೊಗ್ಗ: ಜಿಲ್ಲೆಯಲ್ಲಿ ವಿವಿಧ ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ, ಮೇ.18ರ ನಾಳೆ, ಮೇ.19ರ ನಾಡಿದ್ದು, ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮೇ.18ರ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಈ ಬಗ್ಗೆ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕುಂಸಿ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ಕಂಬಗಳನ್ನು ಅಳವಡಿಸುವ ಕಾಮಗಾರಿ ಇರುವುದರಿಂದ ಮೇ 18 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಈ ವ್ಯಾಪ್ತಿಯ ರೈಲ್ವೇ ಸ್ಟೇಷನ್ ಪರಿವರ್ತಕ, ಶನೇಶ್ವರ ಪರಿವರ್ತಕ, ಸೋಮಶೆಟ್ಟಿ ಕೊಪ್ಪ, ದೊಡ್ಡಕೇರಿ, ಚೆಲವಾದಿಕೇರಿ, ಮೇಕನಹಳ್ಳಿ ದಿಬ್ಬ, ಶುಭರಕೇರಿ, ಮಾವಿನಕೇರಿ, ಏಕೆ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಮೇ.19ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಎಂ.ಆರ್.ಎಸ್. ಶಿವಮೊಗ್ಗದ 110/11 ಕೆವಿ ವಿವಿ ಕೇಂದ್ರದಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಸುವ ಕಾಮಗಾರಿ ಇರುವುದರಿಂದ ಮೇ 19 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಎಂ.ಆರ್.ಎಸ್. ಎಫ್-3 ಫೀಡರ್ ಚಿಕ್ಕಲ್ಲು,…
ಬೆಂಗಳೂರು: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವಂತ ಗ್ರೇಸ್ ಮಾರ್ಕ್ ಅನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ರದ್ದು ಮಾಡುವಂತೆ ಸಿಎಂ ಸಿದ್ಧರಾಮಯ್ಯ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಚರ್ಚೆ ನಡೆಯಿತು. ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಯಾವ ಕಾರಣ ಮತ್ತು ಉದ್ದೇಶದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿದ್ದೀರಿ? ಗ್ರೇಸ್ ಮಾರ್ಕ್ಸ್ ನೀಡಲು ಯಾರು ಹೇಳಿದ್ದು ಎಂಬುದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಡಿಸಿಎಂ ಮಾತಿಗೆ ಸಿಎಂ ಸಿದ್ಧರಾಮಯ್ಯ ಕೂಡ ಸಹಮತ ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳು ಅವರ ಅರ್ಹತೆ ಆಧಾರದಲ್ಲಿ ಪ್ರಗತಿ ಸಾಧಿಸಬೇಕು. ಗ್ರೇಸ್…
ಮೈಸೂರು: ವಿಧಾನಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ಕೆ ಮಂಜುನಾಥ್ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್.3ರಂದು ಮತದಾನ ನಡೆಯಲಿದೆ. ಈ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕೆ.ಕೆ ಮಂಜುನಾಥ್ ಕುಮಾರ್ ಗುರುವಾರದಂದು ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಈ ವೇಳೆ ಮಾತನಾಡಿದಂತ ಅವರು ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ಆಯ್ಕೆಯಾಗುವ ಮೂಲಕ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಕಳೆದ ಅವಧಿಯಲ್ಲಿ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜನಪ್ರತಿನಿಧಿಗಳು ಶಿಕ್ಷಕರ ಹಿತ ಕಾಯದೇ ಸ್ವಹಿತ ಮೆರೆದಿದ್ದಾರೆ. ಈ ಬಾರಿ ಕ್ಷೇತ್ರದ ಶಿಕ್ಷಕರು ನನ್ನನ್ನು ಚುನಾಯಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಚಿಕ್ಕಮಗಳೂರು ಶಾಸಕ ಡಿ.ಸಿ ತಮ್ಮಯ್ಯ, ಹೊನ್ನಾಳಿ ಶಾಸಕ ಶಾಂತಗೌಡ, ಎಂಎಲ್ಸಿ ಮಂಜುನಾಥ ಭಂಡಾರಿ, ಮಾಜಿ ಎಂಎಲ್ಸಿ ಪ್ರಸನ್ನ ಕುಮಾರ್ ಹಾಗೂ ಪಕ್ಷದ ಇತರೆ ಕಾರ್ಯಕರ್ತರು ಹಾಜರಿದ್ದರು.…