Author: kannadanewsnow09

ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಸಂತನ್ ಅಲಿಯಾಸ್ ಟಿ ಸುತೀಂದ್ರರಾಜ (55) ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಶ್ರೀಲಂಕಾ ಪ್ರಜೆಯಾಗಿದ್ದ ಸಂತನ್ ಅವರನ್ನು 2022ರಲ್ಲಿ ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿತ್ತು. 1991 ರಲ್ಲಿ ಮಾಜಿ ಪ್ರಧಾನಿಯ ಹತ್ಯೆಗೆ ಸಂಬಂಧಿಸಿದಂತೆ 20 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ 2022 ರಲ್ಲಿ ಉನ್ನತ ನ್ಯಾಯಾಲಯವು ಬಿಡುಗಡೆ ಮಾಡಿದ ಏಳು ಜನರಲ್ಲಿ ಸಂತನ್ ಕೂಡ ಒಬ್ಬರು. ಪಿತ್ತಜನಕಾಂಗದ ವೈಫಲ್ಯದಿಂದ ಬಳಲುತ್ತಿದ್ದ ಸಂತನ್ ಅವರು ಬೆಳಿಗ್ಗೆ 7.50 ಕ್ಕೆ ನಿಧನರಾದರು ಎಂದು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯ ಡೀನ್ ಇ ಥೆರಾನಿರಾಜನ್ ತಿಳಿಸಿದ್ದಾರೆ. ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಅವರಿಗೆ ಹೃದಯ ಸ್ತಂಭನವಾಯಿತು. ಆದರೆ ಸಿಪಿಆರ್ (ಕಾರ್ಡಿಯೋಪಲ್ಮೊನರಿ ಪುನರುಜ್ಜೀವನ) ಕಾರ್ಯವಿಧಾನವನ್ನು ಅನುಸರಿಸಿ ಅವರನ್ನು ಪುನರುಜ್ಜೀವನಗೊಳಿಸಲಾಯಿತು ಮತ್ತು ಆಮ್ಲಜನಕ ಪೂರೈಕೆಯನ್ನು ನೀಡಲಾಯಿತು. ವೆಂಟಿಲೇಟರ್ನಲ್ಲಿದ್ದರು ಎಂದು ಥೆರಾನಿರಾಜನ್ ಸುದ್ದಿಗಾರರಿಗೆ ತಿಳಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಸಂತನ್ ಇಂದು…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಉಚಿತವಾಗಿ ನೀಡುವಂತ ಶುಚಿ ಯೋಜನೆಗೆ ಚಾಲನೆಯನ್ನು ನೀಡಲಾಗಿದೆ. ಹೀಗಾಗಿ ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಶಾಲೆ, ಕಾಲೇಜುಗಳಲ್ಲಿನ ಹದಿಹರೆಯದ 10 ರಿಂದ 18 ವಯೋಮಾನದ ಹೆಣ್ಣಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಗುತ್ತದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ಗಾಂಧಿನಗರದಲ್ಲಿರುವ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ದಿನಾಂಕ:28.02.2024, ಬುಧವಾರದಂದು ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು “ಶುಚಿ” ಯೋಜನೆಗೆ ಮರು ಚಾಲನೆ ನೀಡಿದರು ಎಂದಿದ್ದಾರೆ. ಋತುಸ್ರಾವದ ಕುರಿತು ಇರುವ ಅವೈಜ್ಞಾನಿಕ ಅಭಿಪ್ರಾಯ / ಮೂಡ ನಂಬಿಕೆಗಳನ್ನು ದೂರಗೊಳಿಸಿ ಶುಚಿತ್ವ ಹಾಗೂ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳುವ ಮೂಲಕ ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ, ಶಾಲಾ ಹಾಜರಾತಿ, ಸುಧಾರಿಸಲು ಕರ್ನಾಟಕ ಸರ್ಕಾರ 2013-14ನೇ ಸಾಲಿನಲ್ಲಿ “ಶುಚಿ” ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ತಿಳಿಸಿದ್ದಾರೆ. ಅದರಂತೆ, ಈ ಕಾರ್ಯಕ್ರಮದಡಿ ರಾಜ್ಯದ…

Read More

ಹಿಮಾಚಲ ಪ್ರದೇಶ: ಸುಖ್ವಿಂದರ್ ಸಿಂಗ್ ಸುಖು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ವರದಿಗಳ ನಂತರ, ಹಿಮಾಚಲ ಮುಖ್ಯಮಂತ್ರಿ, “ನಾನು ಯಾವುದೇ ರಾಜೀನಾಮೆಯನ್ನು ನೀಡಿಲ್ಲ. ನಾನೊಬ್ಬ ಯೋಧ, ಹೋರಾಟ ಮುಂದುವರಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಐದು ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ರಾಜೀನಾಮೆಗೆ ಮುಂದಾದಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಅವರು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೇ ನೀಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಪ್ರಸ್ತುತ ಸರ್ಕಾರವು ಶಾಸಕರನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ವಿಕ್ರಮಾದಿತ್ಯ ಸಿಂಗ್ ಅವರು ಸಚಿವ ಸಂಪುಟಕ್ಕೆ ರಾಜೀನಾಮೆ ಘೋಷಿಸಿದ ಕೆಲವೇ ಗಂಟೆಗಳ ನಂತರ, ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬುದಾಗಿ ವರದಿಗಳಿಂದ ತಿಳಿದು ಬಂದಿತ್ತು. ಪರಿಸ್ಥಿತಿಯ ಉಸ್ತುವಾರಿ ವಹಿಸಲು ಬುಧವಾರ ಶಿಮ್ಲಾಕ್ಕೆ ಧಾವಿಸಿದ ಕಾಂಗ್ರೆಸ್ ವೀಕ್ಷಕರಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ಡಿ.ಕೆ.ಶಿವಕುಮಾರ್ ಅವರು ಅವರ ರಾಜೀನಾಮೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ…

Read More

ಬೆಂಗಳೂರು: ರಾಜ್ಯಸಭೆಯ 4 ಸ್ಥಾನಗಳಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮತದಾನ ನಡೆಯುತ್ತಿದೆ. ಈ ವೇಳೆಯಲ್ಲಿ ಕಾಂಗ್ರೆಸ್ ಪರವಾಗಿ ಅಡ್ಡ ಮತದಾನವನ್ನು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಮಾಡಿರುವುದಾಗಿ ತಿಳಇದು ಬಂದಿದೆ. ಇಂದು ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ರಾಜ್ಯಸಭಾ ಚುನಾವಣೆಗೆ ಮತದಾನ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ನನ್ನ ಆತ್ಮಸಾಕ್ಷಿಯಾಗಿ ಅನುದಾನದ ಭರವಸೆ ನೀಡಿದವರಿಗೆ ಮತ ಚಲಾಯಿಸಿದ್ದೇನೆ ಎಂಬುದಾಗಿ ತಿಳಿಸಿದರು. ಈ ಮೂಲಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ಮಾಡಿರೋದನ್ನು ಖಚಿತ ಪಡಿಸಿದ್ದಾರೆ. ಅಂದಹಾಗೇ 9 ಗಂಟೆಯಿಂದ ರಾಜ್ಯಸಭಾ ಚುನಾವಣೆಗೆ ಮತದಾನ ಆರಂಭಗೊಂಡಿದೆ. ಈವರೆಗೆ 116 ಶಾಸಕರು ಮತದಾನ ಮಾಡಿದ್ದಾರೆ. ಇನ್ನೂ ಮತ್ತಷ್ಟು ಶಾಸಕರು ಮತದಾನ ಮಾಡುತ್ತಿದ್ದಾರೆ. https://kannadanewsnow.com/kannada/school-education-department-issues-order-making-it-mandatory-for-schools-to-take-oath-on-national-science-day-on-february-28/ https://kannadanewsnow.com/kannada/voting-process-begins-for-4-rajya-sabha-seats-s-suresh-kumar-casts-his-vote/

Read More

ನವದೆಹಲಿ: ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರೆಹಮಾನ್ ಬಾರ್ಕ್ (94) ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾದರು. ಬಾರ್ಕ್ ಅವರು ಸಂಸತ್ತಿನ ಅತ್ಯಂತ ಹಿರಿಯ ಸಂಸದರಾಗಿದ್ದರು. ಅವರು ಮೊರಾದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸಮಾಜವಾದಿ ಪಕ್ಷದ ಸಂಭಾಲ್ ಸಂಸದ ಶಫಿಕುರ್ ರೆಹಮಾನ್ ಬಾರ್ಕ್ ದೀರ್ಘಕಾಲದ ಅನಾರೋಗ್ಯದ ನಂತರ ಮಂಗಳವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. 2024 ರ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷವು ಸಂಭಾಲ್ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಅವರು 5 ಬಾರಿ ಸಂಸದರಾಗಿದ್ದಾರೆ. ಫೆಬ್ರವರಿ 21 ರಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮೊರಾದಾಬಾದ್ನ ಖಾಸಗಿ ಆಸ್ಪತ್ರೆಗೆ ತೆರಳಿ ಸಂಸದರ ಸ್ಥಿತಿಯ ಬಗ್ಗೆ ವಿಚಾರಿಸಿದ್ದರು. https://twitter.com/yadavakhilesh/status/1762342464575475808 ಎಸ್ಪಿ ಸಂಸದ ಕಳೆದ ಒಂದು ತಿಂಗಳಿನಿಂದ ಮೊರಾದಾಬಾದ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಹಲವಾರು ಬಾರಿ ಸಂಸದರಾಗಿದ್ದ ಶಫಿಕುರ್ ರೆಹಮಾನ್ ಬಾರ್ಕ್ ಸಾಹೇಬ್ ಅವರ ನಿಧನವು ಅತ್ಯಂತ ದುಃಖಕರವಾಗಿದೆ ಎಂದು ಅಖಿಲೇಶ್ ಯಾದವ್ ಸಂತಾಪ ಸೂಚಿಸಿದ್ದಾರೆ. ವಿವಾದಾತ್ಮಕ ನಾಯಕ…

Read More

ಬೆಂಗಳೂರು: ನಮಗೆ ತೀರ್ಥ, ಪ್ರಸಾದ ಬೇಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ, ಶಾಲೆಗೆ ಹೋಗಿ ಬರೋದಕ್ಕೆ ಬಸ್ ಕೊಡಿ ಎಂದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪತ್ರ ಬರೆದಿದ್ದರು. ಹೀಗೆ ಸಿಎಂ ಸಿದ್ಧರಾಮಯ್ಯಗೆ ವಿದ್ಯಾರ್ಥಿನಿ ಬರೆದಂತ ಪತ್ರ ವೈರಲ್ ಆಗಿತ್ತು. ಈ ಬೆನ್ನಲ್ಲೇ ಬೆಂಗಳೂರಲ್ಲಿ ಉತ್ತಮ ಸಾರಿಗೆ ಸೇವೆ ಒದಗಿಸುತ್ತಿರುವಂತ BMTCಯಿಂದ ಈ ಕೆಳಗಿನಂತೆ ಸ್ಪಷ್ಟನೆ ನೀಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ BMTCಯು, ಕುಮಾರಿ ಹರ್ಷಿನ್‌‌ ವಿ.ವೈ. 8ನೇ ತರಗತಿ ವಿದ್ಯಾರ್ಥಿನಿಯು ತಾವರೆಕೆರೆಯಿಂದ ಶ್ರೀನಗರಕ್ಕೆ ನೇರ ಬಸ್‌ ವ್ಯವಸ್ಥೆಯನ್ನು ನೀಡುವಂತೆ ಕೋರಿರುವ ಮನವಿಯನ್ನು ಹಾಗೂ ಸದರಿ ವಿದ್ಯಾರ್ಥಿನಿಯ ಮನವಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊನ್ನಗನಹಟ್ಟಿ, ಚನ್ನೇನಹಳ್ಳಿ, ಜಟ್ಟಿಪಾಳ್ಯ, ಸೀಗೇಹಳ್ಳಿಗಳಿಂದ ಬೆಂಗಳೂರು ನಗರಕ್ಕೆ ಬಸ್‌ ಸೌಲಭ್ಯವಿಲ್ಲವೆಂದು ಪ್ರಕಟವಾದ ಸುದ್ದಿಗೆ ಕೆಳಕಂಡಂತೆ ವಿವರಣೆ ನೀಡಲಾಗಿದೆ ಎಂದಿದೆ. ಕುಮಾರಿ ಹರ್ಷಿನ್‌‌ ವಿ.ವೈ. 8ನೇ ತರಗತಿ ವಿದ್ಯಾರ್ಥಿನಿಯು ತಾವರೆಕೆರೆಯಿಂದ ಶ್ರೀನಗರಕ್ಕೆ ನೇರ ಸಾರಿಗೆ ಸೌಲಭ್ಯವನ್ನು ಕೋರಿದ್ದು, ಪ್ರಸ್ತುತ ತಾವರೆಕೆರೆಯಿಂದ ಹಾಗೂ ತಾವರೆಕೆರೆ ಮಾರ್ಗವಾಗಿ ಕೆಂಪೇಗೌಡ ಬಸ್‌…

Read More

ಬೆಂಗಳೂರು: ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಮತದಾನ ಆರಂಭಗೊಂಡಿದೆ. ಮೊದಲ ಮತವನ್ನೇ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಚಲಾಯಿಸಿದರು. ಈವರೆಗೆ 39 ಶಾಸಕರಿಂದ ಮತದಾನ ಮಾಡಲಾಗಿದೆ. ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ರಾಜ್ಯಸಭಾ ಚುನಾವಣೆಗೆ ಮತದಾನ ಆರಂಭಗೊಂಡಿದೆ. ಈವರೆಗೆ ಕಾಂಗ್ರೆಸ್ ಪಕ್ಷದ ಐವರು, ಬಿಜೆಪಿಯ 30 ಹಾಗೂ ಜೆಡಿಎಸ್ ಪಕ್ಷದ ನಾಲ್ವರು ಸೇರಿದಂತೆ 39 ಮಂದಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ನಿಂದ ಅಜಯ್ ಮಾಕೆನ್, ಸೈಯದ್ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್, ಬಿಜೆಪಿಯಿಂದ ನಾರಾಯಣಸಾ ಬಾಂಡಗೆ, ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಅಡ್ಡ ಮತದಾನದ ಭೀತಿಯ ನಡುವೆ ಮಂಗಳವಾರದಂದು ಚುನಾವಣೆಯಲ್ಲಿ ಕಡ್ಡಾಯವಾಗಿ ಭಾಗಿಯಾಗಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸುವಂತ ಶಾಸಕರಿಗೆ ಎಲ್ಲಾ ಪಕ್ಷಗಳು ವಿಪ್ ಜಾರಿ ಮಾಡಲಾಗಿದೆ. ಕಾಂಗ್ರೆಸ್ 134, ಬಿಜೆಪಿ 66, ಜೆಡಿಎಸ್ 19, ಇತರರು 4 ಶಾಸಕರನ್ನು ಹೊಂದಿದ್ದಾರೆ. ಉಳಿದ ನಾಲ್ವರಲ್ಲಿ ಇಬ್ಬರು ಪಕ್ಷೇತರರು ಮತ್ತು ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಅವರ ಬೆಂಬಲವಿದೆ…

Read More

ಮಂಡ್ಯ: ಜಿಲ್ಲೆಯಲ್ಲಿ ಆಸ್ತಿ ವಿಚಾರವಾಗಿ ಉಂಟಾದಂತ ಜಗಳದಲ್ಲಿ ತಂದೆಯನ್ನೇ ಮಗ ಬರ್ಬರವಾಗಿ ಹತ್ಯೆ ಮಾಡಿರುವಂತ ಶಾಕಿಂಗ್ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಸುಂಡಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಪುತ್ರ ಮಹದೇವ್ ಹಾಗೂ ತಂದೆ ನಂಜಪ್ಪ ನಡುವೆ ಗಲಾಟೆಯಾಗಿತ್ತು. ಈ ಗಲಾಟೆಯ ಬಳಿಕ ತಂದೆ ನಂಜಪ್ಪ(65) ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆಯನ್ನು ಪುತ್ರ ಮಹದೇವ್ ಮಾಡಿರೋದಾಗಿ ತಿಳಿದು ಬಂದಿದೆ. ಮಗಳ ಹೆಸರಿಗೆ ಆಸ್ತಿ ಬರೆದುಕೊಟ್ಟಿದ್ದ ನಂಜಪ್ಪನ ಜೊತೆಗೆ ಪುತ್ರ ಮಹದೇವ್ ಕಿರಿಕ್ ತೆಗೆದಿದ್ದಾನೆ. ಆಸ್ತಿ ಕೊಡಲಿಲ್ಲವೆಂದು ಆಕ್ರೋಶಗೊಂಡಿದ್ದಂತ ಮಹದೇವಪ್ಪ ಇಂದು ಬೆಳಗಿನ ಜಾವ ರಸ್ತೆಯಲ್ಲಿ ಒಡಾಡಿಸಿಕೊಂಡು ನಂಜಪ್ಪ ಅವರನ್ನು ಹಲ್ಲೆ ಮಾಡಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾನೆ. ಗಲಾಟೆಯ ವೇಳೆಯಲ್ಲಿ ಅಡ್ಡಬಂದ ತಾಯಿ ಮಹದೇವಮ್ಮಳಿಗೂ ಗಾಯವಾಗಿದೆ. ಹತ್ಯೆಯ ಬಳಿಕ ಮಗ ಮಹದೇವ ಎಸ್ಕೇಪ್ ಆಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಮ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ವರದಿ: ಗಿರೀಶ್ ರಾಜ್,…

Read More

ಬೆಂಗಳೂರು: ನಾನು ಯಾವುದೇ ರೀತಿಯ ಅಡ್ಡಮತದಾನವನ್ನು ರಾಜ್ಯಸಭಾ ಚುನಾವಣೆಯಲ್ಲಿ ಮಾಡುವುದಿಲ್ಲ. ನನ್ನ ಮತ ಜೆಡಿಎಸ್ ಅಭ್ಯರ್ಥಿಗೆ ಹೊರತು ಬೇರೆ ಯಾರಿಗೂ ಇಲ್ಲ ಎಂಬುದಾಗಿ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು ನಾನು ಯಾವುದೇ ರೀತಿಯ ಅಡ್ಡಮತದಾನ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದವರು ನನ್ನನ್ನು ಸಂಪರ್ಕಿಸಿದ್ದಾರೆ ಎಂಬುದು ಎಲ್ಲ ಸುಳ್ಳು ಎಂಬುದಾಗಿ ಹೇಳಿದರು. ನಾನು ಯಾವತ್ತೂ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಪರವಾಗಿದ್ದೇನೆ. ನಾನು ಯಾವುದೇ ರೀತಿಯ ಅಡ್ಡಮತದಾನ ಮಾಡುವುದಿಲ್ಲ. ನಾನು ಜೆಡಿಎಸ್ ಅಭ್ಯರ್ಥಿ ಪರವಾಗಿ ಮತ ಹಾಕುತ್ತೇನೆ ಎಂಬುದಾಗಿ ತಿಳಿಸಿದರು. ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ನಿಜ. ಸಿಎಂ, ಡಿಸಿಎಂ ಭೇಟಿ ಮಾಡಿದ್ದು ಕ್ಷೇತ್ರದ ಅನುದಾನದ ವಿಚಾರವಾಗಿಯೇ ಆಗಿದೆ. ಅದರ ಹೊರತಾಗಿ ಭೇಟಿಯ ವೇಳೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು. https://kannadanewsnow.com/kannada/voting-process-begins-for-4-rajya-sabha-seats-s-suresh-kumar-casts-his-vote/ https://kannadanewsnow.com/kannada/school-education-department-issues-order-making-it-mandatory-for-schools-to-take-oath-on-national-science-day-on-february-28/

Read More

ಬೆಂಗಳೂರು: ಕರ್ನಾಟಕದ ರಾಜ್ಯಸಭೆಯ 4 ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ಆರಂಭಗೊಂಡಿದೆ. ಇಂದು ಕರ್ನಾಟಕ ರಾಜ್ಯಸಭೆಯ 4 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಇದೀಗ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಬೆಂಗಳೂರಿನ ವಿಧಾನಸೌಧದ 106 ಕೊಠಡಿಯಲ್ಲಿ ಮತದಾನ ಪ್ರಾರಂಭಗೊಂಡಿದೆ. ರಾಜ್ಯಸಭೆ 4 ಸ್ಥಾನಗಳ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೇ, ಮೊದಲು ಬಿಜೆಪಿಯ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್ ಸುರೇಶ್ ಕುಮಾರ್ ಅವರು ಮತದಾನ ಮಾಡಿದರು. ಕಾಂಗ್ರೆಸ್ 3, ಬಿಜೆಪಿ 1 ಸ್ಥಾನ ಗೆಲುವು ಖಚಿತ ಅಡ್ಡ ಮತದಾನದ ಭೀತಿಯಲ್ಲೇ ಇಂದು ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ. ಈ ಅಡ್ಡ ಮತದಾದನದಿಂದ ತಮ್ಮ ಶಾಸಕರನ್ನು ಕಾಪಾಡಿಕೊಳ್ಳುವ ಮುಂಜಾಗ್ರತೆ ಕ್ರಮವಾಗಿ ಆಡಳಿತಾರೂಡ ಕಾಂಗ್ರೆಸ್ ಪಕ್ಷ ಪಂಚತಾರಾ ಹೋಟೆಲ್ ವೊಂದರಲ್ಲಿ ಸದಸ್ಯರನ್ನು ಸ್ಥಳಾಂತರಿಸಿದೆ. ರಾಜ್ಯಸಭೆಯಲ್ಲಿ ಕರ್ನಾಟಕದಿಂದ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ತುಂಬಲು ದ್ವೈವಾರ್ಷಿಕ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಸೋಮವಾರ ತನ್ನ ಎಲ್ಲಾ ಶಾಸಕರನ್ನು ಹೋಟೆಲ್ ಗೆ…

Read More