Author: kannadanewsnow09

ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸುವಂತ ಘಟನೆಯೊಂದು ನಡೆದಿದೆ. ಪ್ರಯಾಣಿಕನೊಬ್ಬ ಬಿಎಂಟಿಸಿ ಕಂಡಕ್ಟರ್ ಗೆ ಚಾಕುವಿನಿಂದ ಇರಿದು ಹಲ್ಲೆಗೊಳಿಸಿರುವಂತ ಘಟನೆ ನಡೆದಿದೆ. ಬೆಂಗಳೂರಿನ ವೈಟ್ ಫೀಲ್ಡ್ ನ ಐಟಿಪಿಎಲ್ ಬಸ್ ನಿಲ್ದಾಣದಲ್ಲಿ ಇಂದು ಬಿಎಂಟಿಸಿ ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್ ಎಂಬುವರಿಗೆ ಪ್ರಯಾಣಿಕನೊಬ್ಬ ಚಾಕುವಿನಿಂದ ಇರಿದು ಹಲ್ಲೆಗೊಳಿಸಿರುವುದಾಗಿ ತಿಳಿದು ಬಂದಿದೆ. ಪ್ರಯಾಣಿಕರಿನಂದ ಚಾಕು ಇರಿತಕ್ಕೆ ಒಳಗಾದಂತ ಬಿಎಂಟಿಸಿ ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/ed-summons-muda-case-complainant-snehamayi-krishna-asks-him-to-submit-documents/ https://kannadanewsnow.com/kannada/will-work-with-conscience-wont-resign-siddaramaiah/

Read More

ಬೆಂಗಳೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಇಡಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಇಸಿಐಆರ್ ಕೂಡ ದಾಖಲಿಸಲಾಗಿತ್ತು. ಈ ಪ್ರಕರಣ ಸಂಬಂಧ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ, ವಿಚಾರಣೆಗೆ ಹಾಜರಾಗುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಇಡಿ ಸಮನ್ಸ್ ಜಾರಿಗೊಳಿಸಿದೆ. ಇಂದು ಮುಡಾ ಹಗರಣ ಸಂಬಂಧ ಸಿಎಂ ಸಿದ್ಧರಾಮಯ್ಯ ವಿರುದ್ಧ ದೂರು ನೀಡಿದ್ದಂತ ದೂರು ದಾಖಲಿಸಿದ್ದಂತ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಇಡಿ ಸಮನ್ಸ್ ಜಾರಿಗೊಳಿಸಿದೆ. ಅದರಲ್ಲಿ ಅಕ್ಟೋಬರ್.3ರಂದು ಬೆಳಿಗ್ಗೆ 11 ಗಂಟೆ ಒಳಗಾಗಿ ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ಸಾಕ್ಷ್ಯಾಧಾರ, ದಾಖಲೆಗಳನ್ನು ಇ-ಮೇಲ್ ಮೂಲಕ ಸಲ್ಲಿಸುವಂತೆ ಸೂಚಿಸಿದೆ. ಅಂದಹಾಗೇ ಮುಡಾದಿಂದ ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿಗೆ ನೀಡಲಾಗಿದ್ದಂತ 14 ಸೈಟ್ ಗಳನ್ನು ಅವರು ಹಿಂದಿರುಗಿಸಿದ್ದರು. ಈ ಬೆನ್ನಲ್ಲೇ ಕಂದಾಯ ಇಲಾಖೆಯಿಂದ ಕ್ರಯಪತ್ರವನ್ನು ರದ್ದುಗೊಳಿಸಲಾಗಿತ್ತು. ಆ ಬಳಿಕ ಮುಡಾಗೆ ಸೈಟ್ ಗಳನ್ನು ವಾಪಾಸ್ ನೀಡಲಾಗಿತ್ತು. ಈ ಕೇಸ್ ಸಂಬಂಧ…

Read More

ನವದೆಹಲಿ: ಮಹತ್ವದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ಅಸ್ಸಾಂನ ಲಖಿಂಪುರ ಜಿಲ್ಲೆಯಲ್ಲಿ ಜೀವಂತ ಐಇಡಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಬೆಂಗಳೂರಲ್ಲಿ ಬಂಧಿಸಿದ್ದಂತ ಶಂಕಿತ ಉಗ್ರನಿಂದ ಬಯಲಾದಂತ ರಹಸ್ಯದಿಂದ ಜೀವಂತ ಐಇಡಿ ವಶಕ್ಕೆ ಪಡೆದಂತೆ ಆಗಿದೆ. ಆಗಸ್ಟ್.15ರಂದು ಸ್ವಾತಂತ್ರ್ಯ ದಿನಾಚರಣೆಯ ಪಿತೂರಿಯ ಭಾಗವಾಗಿ ಉಲ್ಫಾ (ಐ) ಭಯೋತ್ಪಾದಕರು ಇರಿಸಿದ್ದ ಸ್ಫೋಟಕವನ್ನು ಎನ್ಐಎ ತಂಡ ಇಂದು ಮುಂಜಾನೆ ವಶಪಡಿಸಿಕೊಂಡಿದೆ. ನಂತರ ಅಸ್ಸಾಂ ಪೊಲೀಸರ ಬಾಂಬ್ ನಿಷ್ಕ್ರಿಯ ದಳವು ಅದನ್ನು ನಿಷ್ಕ್ರಿಯಗೊಳಿಸಿತು. ಆಗಸ್ಟ್ 15 ರಂದು ಅಸ್ಸಾಂ ಪೊಲೀಸರು ಉತ್ತರ ಲಖಿಂಪುರ ಜಿಲ್ಲೆಯಿಂದ ಐಇಡಿಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ಸಮಯದಲ್ಲಿ ಎನ್ಐಎಗೆ ಬಾಂಬ್ ಬಗ್ಗೆ ತಿಳಿದುಬಂದಿದೆ. ಉಲ್ಫಾ (ಐ) ನ ಎಸ್ಎಸ್ ಸಿ-ಇನ್-ಸಿ ಪರೇಶ್ ಬರುವಾ ಅವರು ಸ್ವಾತಂತ್ರ್ಯ ದಿನದಂದು ಅಸ್ಸಾಂನಾದ್ಯಂತ ನಿಷೇಧಿತ ಭಯೋತ್ಪಾದಕ ಸಂಘಟನೆಯಿಂದ ‘ಮಿಲಿಟರಿ’ ಪ್ರತಿಭಟನೆಯನ್ನು ಘೋಷಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ರಾಜ್ಯ ಪೊಲೀಸರು ಕ್ರಮ ಕೈಗೊಂಡಿದ್ದರು. ಸ್ವಾತಂತ್ರ್ಯ ದಿನಾಚರಣೆಯನ್ನು ಸಾರ್ವಜನಿಕವಾಗಿ ಬಹಿಷ್ಕರಿಸುವಂತೆ ಅವರು ಕರೆ…

Read More

ಬೆಂಗಳೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಇಡಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಇಸಿಐಆರ್ ಕೂಡ ದಾಖಲಿಸಲಾಗಿತ್ತು. ಈ ಪ್ರಕರಣ ಸಂಬಂಧ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಇಡಿ ಸಮನ್ಸ್ ಜಾರಿಗೊಳಿಸಿದೆ. ಇಂದು ಮುಡಾ ಹಗರಣ ಸಂಬಂಧ ಸಿಎಂ ಸಿದ್ಧರಾಮಯ್ಯ ವಿರುದ್ಧ ದೂರು ನೀಡಿದ್ದಂತ ದೂರು ದಾಖಲಿಸಿದ್ದಂತ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಇಡಿ ಸಮನ್ಸ್ ಜಾರಿಗೊಳಿಸಿದೆ. ಅದರಲ್ಲಿ ಅಕ್ಟೋಬರ್.3ರಂದು ಬೆಳಿಗ್ಗೆ 11 ಗಂಟೆ ಒಳಗಾಗಿ ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ಸಾಕ್ಷ್ಯಾಧಾರ, ದಾಖಲೆಗಳನ್ನು ಇ-ಮೇಲ್ ಮೂಲಕ ಸಲ್ಲಿಸುವಂತೆ ಸೂಚಿಸಿದೆ. ಅಂದಹಾಗೇ ಮುಡಾದಿಂದ ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿಗೆ ನೀಡಲಾಗಿದ್ದಂತ 14 ಸೈಟ್ ಗಳನ್ನು ಅವರು ಹಿಂದಿರುಗಿಸಿದ್ದರು. ಈ ಬೆನ್ನಲ್ಲೇ ಕಂದಾಯ ಇಲಾಖೆಯಿಂದ ಕ್ರಯಪತ್ರವನ್ನು ರದ್ದುಗೊಳಿಸಲಾಗಿತ್ತು. ಆ ಬಳಿಕ ಮುಡಾಗೆ ಸೈಟ್ ಗಳನ್ನು ವಾಪಾಸ್ ನೀಡಲಾಗಿತ್ತು. ಈ ಕೇಸ್ ಸಂಬಂಧ ಇಡಿ ಸ್ನೇಹಮಯಿ…

Read More

ಬೆಂಗಳೂರು: ನಗರದ ಚಿಕ್ಕಪೇಟೆ ಸಂಚಾರ ಠಾಣೆಯ ಹೆಸರನ್ನು ರಾಜ್ಯ ಸರ್ಕಾರ ಬದಲಾಯಿಸಿ, ಚಾಮರಾಜಪೇಟೆ ಸಂಚಾರ ಠಾಣೆಯೆಂದು ಮರುನಾಮಕರಣಗೊಳಿಸಿತ್ತು. ಈ ಹಿನ್ನಲೆಯಲ್ಲಿ ಇದೀಗ ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆಯೆಂದು ಮರುನಾಮಕರಣಗೊಳಿಸಿ, ಹೊಸ ಬೋರ್ಡ್ ಹಾಕಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅನಿತಾ ಅವರು ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅವರಿಗೆ ರಾಜ್ಯ ಸರ್ಕಾರದ ಆದೇಶವನ್ನು ಕೂಡಲೇ ಪಾಲಿಸುವಂತೆ ಸೂಚಿಸಿದ್ದರು. ಡಿಸಿಪಿ ಸೂಚನೆ ಕಾರಣ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆ ಎಂಬುದಾಗಿ ಹಾಕಲಾಗಿದ್ದಂತ ಬೋರ್ಡ್ ಬದಲಿಸಿ, ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆ ಎಂಬುದಾಗಿ ಹೊಸ ಬೋರ್ಡ್ ಅಳವಡಿಸಲಾಗಿದೆ. https://kannadanewsnow.com/kannada/good-news-for-the-people-of-the-state-e-khata-system-to-be-implemented-in-all-local-bodies-from-october-7/ https://kannadanewsnow.com/kannada/will-work-with-conscience-wont-resign-siddaramaiah/

Read More

ಬೆಂಗಳೂರು: ಸಿದ್ದರಾಮಯ್ಯನವರು ಈಗ ಸಿಕ್ಕಿಬಿದ್ದಿದ್ದಾರೆ. ಜಗ್ಗೋಲ್ಲ; ಬಗ್ಗೋಲ್ಲ; ಏನೇ ಬಂದ್ರೂ ಎದುರಿಸ್ತೀನಿ ಎಂದವರು ನಿನ್ನೆ ಕತ್ತಲಾದ ಮೇಲೆ ಜಗ್ಗಿದ್ಯಾಕೆ? ಬಗ್ಗಿದ್ಯಾಕೆ? ರಾತ್ರೋರಾತ್ರಿ ಜಗ್ಗಿದ್ದು, ಬಗ್ಗಿದ್ದು ಯಾಕೆ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದರಿಂದ ಅವರ ಕಪಟತನ ಎಂಥದ್ದೆಂದು ಅರ್ಥವಾಗುತ್ತದೆ. ನಿನ್ನೆ 14 ಸೈಟ್ ಸರೆಂಡರ್ ಮಾಡಿದ್ದಾಗಿ ಲೆಟರ್ ಕೊಟ್ಟಿದ್ದಾರೆ. ಆ ಪತ್ರದಲ್ಲಿ ದಿನಾಂಕವೂ ಇಲ್ಲ; ಆದ್ದರಿಂದ ಅದು ಖಾತ್ರಿಯೇನಲ್ಲ ಎಂದು ತಿಳಿಸಿದರು. ಹಳ್ಳಿಕಡೆ ‘ನೂರು ಬಾರಿ ಕದ್ದೋನು ಒಂದು ಸಾರಿಯಾದ್ರೂ ಸಿಗಲೇಬೇಕು’ ಎಂಬ ಗಾದೆ ಇದೆ. ಹಾಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಚಾ ಅಲ್ಲ. ನೂರಾರು ಬಾರಿ ಕದ್ದವರು ಒಂದು ಸಾರಿ ಸಿಕ್ಕಿ ಹಾಕಿಕೊಳ್ತಾರಲ್ವ? ಒಂದು ಸಾರಿ ಸಿಕ್ಕಿದರೂ ನೂರು ಬಾರಿ ಮಾಡಿದ ಹಾಗೇ ಎಂದು ವಿಶ್ಲೇಷಿಸಿದರು. ಇವರು ಜಗ್ಗಿದ ಮೇಲೆ ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ನಿಜವಾಗಿಯೂ…

Read More

ಬೆಂಗಳೂರು : ರಾಜ್ಯದಿಂದ ಈ ಬಾರಿಯ ಹಜ್ ಯಾತ್ರೆಗೆ 11 ಸಾವಿರ ಮಂದಿ ಆಕಾಂಕ್ಷಿ ಗಳು ಅರ್ಜಿ ಸಲ್ಲಿಸಿದ್ದು ಇದೇ 4 ರಂದು ಮಧ್ಯಾಹ್ನ ಕೇಂದ್ರ ಹಜ್ ಮಂಡಳಿ ಯಲ್ಲಿ ಈ ಲಾಟರಿ ಪ್ರಕ್ರಿಯೆ ನಡೆಯಲಿದೆ ಎಂದು ರಾಜ್ಯ ಹಜ್ ಸಮಿತಿ ಕಾರ್ಯ ನಿರ್ವಹಣಾ ಧಿಕಾರಿ ಸರ್ಫಾರಾಜ್ ಖಾನ್ ತಿಳಿಸಿದ್ದಾರೆ. ಈ ಲಾಟರಿ ಪ್ರಕ್ರಿಯೆ ನಡೆದ ತಕ್ಷಣ ಆಯ್ಕೆ ಯಾದವರಿಗೆ ಎಸ್ ಎಂ ಎಸ್ ಸಂದೇಶ ರವಾನೆ ಆಗಲಿದೆ. ಕಳೆದ ಬಾರಿ 9.500 ದಿಂದ 10 ಸಾವಿರ ಮಂದಿಗೆ ಅವಕಾಶ ದೊರೆತಿತ್ತು ಈ ಬಾರಿ ಇನ್ನೂ ಹೆಚ್ಚಿನ ಜನರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಈ ಬಾರಿಯ ಕೋಟಾ ಇನ್ನೂ ನಿಗದಿ ಆಗಿಲ್ಲ. ಅ.4 ರಂದು ಕೋಟಾ ಬಗ್ಗೆಯೂ ಸ್ಪಷ್ಟ ಸಂಖ್ಯೆ ಸಿಗಲಿದೆ. ನಂತರ ಹಜ್ ಸಮಿತಿ ಮುಂದಿನ ಸಿದ್ಧತೆ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/major-surgery-to-administrative-machinery-by-state-government-11-kas-officers-transferred/ https://kannadanewsnow.com/kannada/accounts-of-14-muda-plots-allotted-to-cm-siddaramaiahs-wife-parvathi-cancelled/

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ.ಆರ್ ಹಳ್ಳಿಯ ಗ್ರಾಮ ಆಡಳಿತಾಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದಂತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ದೃಶ್ಯಾವಳಿ ಆಧರಿಸಿ ಹಿರಿಯೂರು ತಾಲ್ಲೂಕಿನ ಕೆ ಆರ್ ಹಳ್ಳಿ ವಿಎ ದಾಸೇಗೌಡ ಅವರನ್ನು ಅಮಾನತುಗೊಳಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ ಆರ್ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ದಾಸೇಗೌಡ ಅವರು ವ್ಯಕ್ತಿಯೊಬ್ಬರು ತಮ್ಮ ಜಮೀನು ಕೆಲಸದ ವಿಚಾರವಾಗಿ ಹೋಗಿದ್ದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೆಲಸ ಮಾಡಿ ಕೊಡಲು ದುಡ್ಡು ಕೇಳಿದ್ದರು. ಅದರಂತೆ ವ್ಯಕ್ತಿಯೊಬ್ಬರು ಗ್ರಾಮ ಆಡಳಿತಾಧಿಕಾರಿ ದಾಸೇಗೌಡ ಅವರಿಗೆ ಲಂಚದ ಹಣವನ್ನು ನೀಡಿದ್ದಲ್ಲದೇ, ಅದನ್ನು ಪಡೆಯುತ್ತಿದ್ದ ವೇಳೆ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಲಂಚ ಪಡೆಯುತ್ತಿದ್ದಂತ ವೇಳೆಯಲ್ಲಿ ಗ್ರಾಮ ಆಡಳಿತಾಧಿಕಾರಿ ದಾಸೇಗೌಡ ಅವರು ನನಗೇನು ಉಳಿಯೋದಿಲ್ಲ. ಇದರಲ್ಲಿ ಆರ್ ಐಗೆ ಕೊಡಬೇಕು. ಅವರಿಗೆ, ಇವರಿಗೆ ಕೊಡಬೇಕು ಅಂತ ಹೇಳಿದ್ದಲ್ಲದೇ, ಲಂಚ ಪಡೆದು ನಾಳೆ ಬನ್ನಿ. ನಿಮ್ಮ ಕೆಲಸ ರೆಡಿ ಮಾಡಿರುವೆ ಅಂತ ತಿಳಿಸಿದ್ದರು. ಈ ಎಲ್ಲಾ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ…

Read More

ಮೈಸೂರು: ಚೆಕ್ ಬೌನ್ಸ್ ಕೇಸ್ ನಲ್ಲಿ ಕೋರ್ಟ್ ಗೆ ಹಾಜರಾಗದ ಕಾರಣ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. ಮೈಸೂರಿನ ಕೋರ್ಟ್ ಗೆ ಚೆಕ್ ಬೌನ್ಸ್ ಕೇಸ್ ಸಂಬಂಧ ಇಂದು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಹಾಜರಾಗಬೇಕಿತ್ತು. ಆದರೇ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಕಾರಣ, ಕೋರ್ಟ್ ಮುಂದೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಮುಡಾ ದೂರುದಾರ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿ, ಬಿಗ್ ಶಾಕ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಅವರು, ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಕಾರಣ ಕೋರ್ಟ್ ಗೆ ಹಾಜರಾಗಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕೋರ್ಟ್ ಗೆ ಹಾಜರಾಗುತ್ತೇನೆ. ಜಾಮೀನು ರಹಿತ ವಾರೆಂಟ್ ರೀ ಕಾಲ್ ಮಾಡಿಸುವುದಾಗಿ ಸ್ಪಷ್ಟ ಪಡಿಸಿದರು. https://kannadanewsnow.com/kannada/accounts-of-14-muda-plots-allotted-to-cm-siddaramaiahs-wife-parvathi-cancelled/ https://kannadanewsnow.com/kannada/will-work-with-conscience-wont-resign-siddaramaiah/

Read More

ಬೆಂಗಳೂರು: ನಾಗಸಂದ್ರ ಮತ್ತು ಮಾಧವರ ಮೆಟ್ರೋ ನಿಲ್ದಾಣಗಳ ನಡುವಿನ ಹೊಸ ರೈಲು ಮಾರ್ಗದಲ್ಲಿ ದಿನಾಂಕ 03ನೇ ಅಕ್ಟೋಬರ್ 2024 ರಂದು ಸುರಕ್ಷತಾ ತಪಾಸಣೆ ನಡೆಸುತ್ತರುವುದರಿಂದ ಹಸಿರು ಮಾರ್ಗದ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.  ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ನಾಗಸಂದ್ರ ಮತ್ತು ಮಾಧವರ ನಿಲ್ದಾಣಗಳ ನಡುವಿನ ಹೊಸ ಮಾರ್ಗವನ್ನು ಮೆಟ್ರೋ ರೈಲ್ವೆ ಸುರಕ್ಷತ ಆಯುಕ್ತರಿಂದ ಶಾಸನಬದ್ಧ ಸುರಕ್ಷತಾ ತಪಾಸಣೆ ನಡೆಸುತ್ತಿರುವುದರಿಂದ, ದಿನಾಂಕ 3ನೇ ಅಕ್ಟೋಬರ್ 2024 ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಬದಲಾವಣೆಯಾಗಲಿದೆ ಎಂದಿದೆ. ದಿನಾಂಕ 3ನೇ ಅಕ್ಟೋಬರ್ 2024 ರಂದು ನಾಗಸಂದ್ರ ಮತ್ತು ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ವಾಣಿಜ್ಯ ಸೇವೆ ಲಭ್ಯವಿರುವುದಿಲ್ಲ, ಈ ಅವಧಿಯಲ್ಲಿ ಪೀಣ್ಯ ಇಂಡಸ್ಟ್ರಿ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆ ಎಂದಿನಂತೆ ಲಭ್ಯವಿರುತ್ತದೆ. ಬೆಳಿಗ್ಗೆ…

Read More