Author: kannadanewsnow09

ಬೆಂಗಳೂರು: ಕಟ್ಟಡ ಕಾರ್ಮಿಕರ ಕಾರ್ಡ್‌ಗಳ ದುರುಪಯೋಗ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸಿ, ಅರ್ಹರಿಗೆ ಮಾತ್ರ ಸೌಲಭ್ಯ ದೊರೆಯುವುದನ್ನು ಖಾತ್ರಿಪಡಿಸಬೇಕು ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಪೊಲೀಸ್‌ ಕಾನ್ಸ್‌ಸ್ಟೇಬಲ್‌ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ 2025 ಸಿಂಧುತ್ವ ಪ್ರಮಾಣ ಪತ್ರಗಳು ವಿಲೇವಾರಿಗೆ ಬಾಕಿಯಿದೆ. ಜಿಲ್ಲಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸಿಂಧುತ್ವ ಪ್ರಮಾಣ ಪತ್ರವನ್ನು ಆದಷ್ಟು ಬೇಗನೆ ನೀಡಬೇಕು. ಪೊಲೀಸ್‌ ಗೃಹ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಒದಗಿಸಬೇಕು ಎಂದರು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಸಂಬಂಧಿಸಿದಂತೆ ರೂ. 1252 ಕೋಟಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿದ್ದು, ಇದುವರೆಗೆ ಕೋಟಿ ರೂ. ವೆಚ್ಚವಾಗಿದೆ. ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಅನುಷ್ಠಾನಗೊಳಿಸುವ ಮೂಲಕ ಅನುದಾನ ವೆಚ್ಚ ಮಾಡಬೇಕು. ಯುವ ಸಬಲೀಕರಣ ಬೆಂಗಳೂರಿನಲ್ಲಿ ಯಲಹಂಕ ಬಳಿ 60 ಎಕ್ರೆ ಪ್ರದೇಶದಲ್ಲಿ ಕ್ರೀಡಾ ನಗರ ನಿರ್ಮಾಣಕ್ಕೆ ಜಮೀನು ಒದಗಿಸುವ ಪ್ರಸ್ತಾವನೆಯನ್ನು ಸಂಪುಟದ ಮುಂದಿರಿಸಬೇಕು. ಇದೇ ರೀತಿ ಬೆಂಗಳೂರಿನಲ್ಲಿ ನಾಲ್ಕು ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ತಲಾ ಕನಿಷ್ಠ…

Read More

ಶಿವನ ಅಂಶವೇ ತಿರುನೀರು. ಜೀವನದ ನಿಜವಾದ ಅರ್ಥವನ್ನು ವ್ಯಕ್ತಪಡಿಸುವ ಈ ನಿರಾಭರಣ ಹಣೆಯು ನಿಷ್ಪ್ರಯೋಜಕ ಹಣೆಯಾಗಿದೆ. ಜೀವನದ ನಿಜವಾದ ಅರ್ಥವೆಂದರೆ ನಾವೆಲ್ಲರೂ ಅಂತಿಮವಾಗಿ ಕೈಬೆರಳೆಣಿಕೆಯ ಬೂದಿಯಾಗಿ ಬದಲಾಗುತ್ತೇವೆ. ಅದನ್ನು ಅರಿತುಕೊಳ್ಳಲು ನಾವು ಈ ತಿರುನೀರವನ್ನು ನಮ್ಮ ಹಣೆಯ ಮೇಲೆ ಪ್ರತಿದಿನ ಹಚ್ಚುತ್ತೇವೆ. ನೀರಿಲ್ಲದ ಹಣೆಯು ಕೊಳಕು ಎಂದು ಅವರು ಹೇಳುತ್ತಾರೆ. ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿದ ಶಿವನ ಜಲವನ್ನು ಬಳಸಿ ಇಂದು ಪರಿಹಾರವನ್ನು ನೋಡಲಿದ್ದೇವೆ. ಬಹಳಷ್ಟು ಜನರಲ್ಲಿ ಭಯದ ಸ್ವಭಾವ ಇರುತ್ತದೆ. ಅವರು ಧೈರ್ಯದಿಂದ ವರ್ತಿಸುವುದಿಲ್ಲ. ಜೀವ ಭಯದಲ್ಲಿ ಹಿಂದೆ ಸರಿಯುತ್ತಾರೆ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ…

Read More

ಮಂಡ್ಯ : ಕುಟುಂಬದ ರಕ್ಷಣೆಯಂತೆ ಪರಿಸರ ಸಂರಕ್ಷಣೆಗೂ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಮಂಗಳವಾರ ವನಮಹೋತ್ಸವ ಕಾರ್ಯಕ್ರಮ ನಿಮಿತ್ತ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪರಿಸರ ಸಂರಕ್ಷಣೆಯ ಜವಾಬ್ದಾರಿ ತಮ್ಮ ತಮ್ಮ ಮನೆಗಳಿಂದಲೇ ಆದಾಗ ಮಾತ್ರ ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಯವರು ನಿರ್ಭೀತಿಯಿಂದ ಬದುಕಲು ಸಾಧ್ಯವಾಗುತ್ತದೆ. ವರ್ಷ ಪೂರ್ತಿ ಮರಗಳನ್ನು ಕಡಿದು ಪರಿಸರ ದಿನದಂದು ನಾಲ್ಕು ಗಿಡಗಳನ್ನು ನೆಡುವುದಲ್ಲ ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ನಗರೀಕರಣ, ಪರಿಸರ ಮಾಲಿನ್ಯ ದಿನೇ ದಿನೇ ಅದರೊಂದಿಗೆ ಬೆರೆಯುತ್ತಿದ್ದು, ಇದು ಆತಂಕಕಾರಿ ಸಂಗತಿಯಾಗಿದೆ ಎಂದರು. ಅಭಿವೃಧ್ಧಿ ಮತ್ತು ವಿನಾಶ ಒಟ್ಟಿಗೆ ಸಾಗಬಾರದು, ಇರುವ ಒಂದು ಭೂಮಿಯನ್ನು ರಕ್ಷಿಸಲು ನಾವೆಲ್ಲ ಟೊಂಕಕಟ್ಟಿ ನಿಲ್ಲಬೇಕು. ಪರಿಸರ ಸ್ವಚ್ಛತೆಯ ಬಗ್ಗೆ ನಾವುಗಳು ಸೇರಿದಂತೆ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು.…

Read More

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 185 ಮಂದಿಗೆ ಡೆಂಗ್ಯೂ ಫೀವರ್ ಪಾಸಿಟಿವ್ ( Dengue Fever Positive ) ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 948 ಮಂದಿಯನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು. ಅವರಲ್ಲಿ 185 ಮಂದಿಗೆ ಡೆಂಗ್ಯೂ ಪಾಸಿಟಿವ್ ಅಂತ ದೃಢರಟ್ಟಿರುವುದಾಗಿ ತಿಳಿಸಿದೆ. 0-1ವರ್ಷದೊಳಗಿನ ಒಬ್ಬರಿಗೆ, 1 ವರ್ಷದಿಂದ 18 ವರ್ಷದೊಳಗಿ 81 ಜನರಿಗೆ, 18ಕ್ಕೂ ಹೆಚ್ಚು ವಯಸ್ಸಿನ 103 ಜನರು ಸೇರಿದಂತೆ 185 ಜನರಿಗೆ ಕಳೆದ 24 ಗಂಟೆಯಲ್ಲಿ ಡೆಂಗ್ಯೂ ದೃಢಪಟ್ಟಿದೆ ಅಂತ ಹೇಳಿದೆ. ಅಂದಹಾಗೇ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 425 ಮಂದಿಯನ್ನು ಪರೀಕ್ಷೆ ಮಾಡಲಾಗಿದ್ದು, 91 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ಬಂದಿದೆ. ರಾಮನಗರದಲ್ಲಿ 23 ಮಂದಿಯಲ್ಲಿ 11, ಚಿಕ್ಕಬಳ್ಳಾಪುರ 28 ಜನರಲ್ಲಿ 2, ಚಿತ್ರದುರ್ಗ 95…

Read More

ಬೆಂಗಳೂರು: ನಗರದಲ್ಲಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿಯ ಹಿನ್ನಲೆಯಲ್ಲಿ, ಪಣತ್ತೂರು ಬಳಿಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ವಾಹನ ಸವಾರರು ಪರ್ಯಾಯ ಸಂಚಾರ ಮಾರ್ಗದ ಮೂಲಕ ಸಂಚರಿಸುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ವೈಟ್‌ಫೀಲ್ಡ್‌ ಸಂಚಾರ ಠಾಣೆಯ ಪೊಲೀಸರು, ತಮ್ಮ ಠಾಣಾ ವ್ಯಾಪ್ತಿಯ ಪಣತ್ತೂರು ರೈಲ್ವೆ ಬ್ರಿಡ್ಜ್‌ ಬಳಿ ಅಂಡರ್‌ ಪಾಸ್‌ ನಿರ್ಮಾಣ ಕಾಮಗಾರಿ ಕೈಗೊಂಡಿರುವುದರಿಂದ ಜುಲೈ 9 ರಿಂದ ಜುಲೈ 12ರ ವರೆಗೆ ಪಣತ್ತೂರು ದಿಣ್ಣೆಯಿಂದ ಪಣತ್ತೂರು ರೈಲ್ವೆ ಬ್ರಿಡ್ಜ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಅಂತ ತಿಳಿಸಿದ್ದಾರೆ. ಹೀಗಿದೆ ಪರ್ಯಾಯ ಸಂಚಾರ ಮಾರ್ಗದ ರಸ್ತೆಗಳ ಮಾಹಿತಿ ಪಣತ್ತೂರು ದಿಣ್ಣೆ ಕಡೆಯಿಂದ ಪಣತ್ತೂರು ಮತ್ತು ಕುಂದಲಹಳ್ಳಿ ಕಡೆಗೆ ಹೋಗುವ ಸವಾರರು ಗುಂಜೂರು ಪಾಳ್ಯ ರಸ್ತೆಯಿಂದ ಸಿಲ್ವರ್‌ ಓಕ್‌ ರಸ್ತೆ ಮೂಲಕ ಬಳಗೆರೆ ಮುಖ್ಯರಸ್ತೆ ಬಳಸಿ ಪಣತ್ತೂರು ಮತ್ತು ಕುಂದಲಹಳ್ಳಿ ಕಡೆಗೆ ಸಂಚರಿಸಬಹುದು ಅಂತ ಮಾಹಿತಿ ನೀಡಿದ್ದಾರೆ. ಪಣತ್ತೂರು ಕಡೆಯಿಂದ ಪಣತ್ತೂರು ದಿಣ್ಣೆ…

Read More

ಬೆಂಗಳೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಿಸುವುದಕ್ಕೆ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು; ಕೇವಲ ಕೆಲವರನ್ನು ತುಷ್ಟೀಕರಣ ಮಾಡಲಿಕ್ಕೆ ಮಾತ್ರ ರಾಮನಗರ ಹೆಸರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಪುರಾಣ ಪ್ರಸಿದ್ಧವಾದ ರಾಮನಗರ ಹೆಸರನ್ನು ಕಿತ್ತುಹಾಕಿ, ಅದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದರಲ್ಲಿ ಯಾವ ಹಿಡೆನ್ ಅಜೆಂಡಾ ಅಡಗಿದೆಯೋ ಗೊತ್ತಿಲ್ಲ. ಆದರೆ, ಯಾರನ್ನು ಓಲೈಸಲು ರಾಮನಗರ ಹೆಸರಿಗೆ ಗೇಟ್ ಪಾಸ್ ನೀಡಲಾಗುತ್ತಿದೆ ಎನ್ನುವ ಒಳಗುಟ್ಟು ಮಾತ್ರ ರಟ್ಟಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಯಲ್ ಎಸ್ಟೇಟ್ ದಂಧೆಕೋರರಿಗೆ ಜಿಲ್ಲೆಯನ್ನು ಸ್ವರ್ಗವನ್ನಾಗಿ ಮಾಡುವುದು ಈ ಷಡ್ಯಂತ್ರ್ಯದ ಕರಾಳಮುಖ. ಕೆಲವರ ತುಷ್ಟೀಕರಣ ಮತ್ತೊಂದು ಮುಖ. ರಾಜಕೀಯವಾಗಿ ಬಹಳ ಎತ್ತರದ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯ ಹೆಗ್ಗುರುತನ್ನೇ ಸರ್ವನಾಶ ಮಾಡುವ ಹುನ್ನಾರ ನಡೆದಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ. ವಿಧಾನಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯನವರು, ಈ ದೇಶದ…

Read More

ಬೆಂಗಳೂರು: ನಗರದ ಯಲಹಂಕ ವಲಯ ವ್ಯಾಪ್ತಿಯ ಮೇಡಿ ಅಗ್ರಹಾರ ವಿದ್ಯುತ್ ಚಿತಾಗಾರವನ್ನು ತುರ್ತು ನಿರ್ವಹಣೆ ಪ್ರಯುಕ್ತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಈ ಕುರಿತಂತೆ ಯಲಹಂಕ ವ್ಯಾಪ್ತಿಯ ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರರು(ವಿದ್ಯುತ್), ಮೇಡಿ ಅಗ್ರಹಾರ ವಿದ್ಯುತ್ ಚಿತಾಗಾರವನ್ನು ತುರ್ತು ನಿರ್ವಹಣೆ ಪ್ರಯುಕ್ತ ದಿನಾಂಕ: 11.07.2024 ರಿಂದ 20.07.2024 ರವರೆಗೆ 10 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದು, ಸಾರ್ವಜನಿಕರು ಹತ್ತಿರದ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಂಡು ಸಹಕರಿಸಲು ಕೋರಿದ್ದಾರೆ. https://kannadanewsnow.com/kannada/bengaluru-23-cases-booked-for-driving-school-vehicle-under-the-influence-of-alcohol/ https://kannadanewsnow.com/kannada/sslc-exam-2-results-to-be-declared-tomorrow-morning/

Read More

ಬೆಂಗಳೂರು: ನಗರದಲ್ಲಿ ಕುಡಿದು ಶಾಲಾ ವಾಹನವನ್ನು ಚಾಲನೆ ಮಾಡುತ್ತಿರೋ ಚಾಲಕರ ಸಂಖ್ಯೆ ಹೆಚ್ಚಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಜೊತೆ ಜೊತೆಗೆ ಶಾಲಾ ಮಕ್ಕಳ ಪೋಷಕರಲ್ಲಿ ಆತಂಕವನ್ನು ಹೆಚ್ಚಿಸುವಂತೆ ಮಾಡಿದೆ. ಇಂದು ಬೆಂಗಳೂರು ಸಂಚಾರ ಪೊಲೀಸರು ಕುಡಿದು ಶಾಲಾ ವಾಹನ ಚಾಲನೆ ಮಾಡುವಂತ ಸಾವರರ ವಿರುದ್ಧ ಸಮರವನ್ನೇ ಸಾರಿದ್ದಾರೆ. ಬರೋಬ್ಬರಿ 3016 ಶಾಲಾ ವಾಹನಗಳನ್ನು ತಪಾಸಣೆ ಮಾಡಿದ್ದಾರೆ. ಇಂದಿನ ಸಂಚಾರ ಪೊಲೀಸರ ತಪಾಸಣೆಯ ವೇಳೆಯಲ್ಲಿ ಬರೋಬ್ಬರಿ 23 ಶಾಲಾ ವಾಹನದ ಚಾಲಕರು ಕುಡಿದು ವಾಹನ ಚಾಲನೆ ಮಾಡಿದ್ದು ದೃಢಪಟ್ಟಿದೆ. ಹೀಗಾಗಿ ಅವರ ವಿರುದ್ಧ 185 ಐಎಂವಿ ಕಾಯ್ದೆಯ ಅನುಸಾರ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೇ ಚಾಲಕರ ಡಿಎಲ್ ರದ್ದುಗೊಳಿಸುವಂತೆಯೂ ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ. ಇನ್ನೂ ಬೆಂಗಳೂರಿನ ಕೆಲ ಶಾಲಾ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಷ್ ಇಲ್ಲದೇ ರಸ್ತೆಯಲ್ಲಿ ಓಡಾಡುತ್ತಿವೆ. ಫಿಟ್ನೆಸ್ ಸರ್ಟಿಫಿಕೇಟ್ ರದ್ದಾಗಿದ್ದರೂ ಅಂತಹ ಶಾಲಾ ವಾಹನ ಚಾಲನೆ ಮಾಡುತ್ತಿದ್ದಂತ 11 ವಾಹನಗಳನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. https://kannadanewsnow.com/kannada/take-strict-action-to-prevent-poor-quality-seeds-siddaramaiah-to-deputy-commissioners/ https://kannadanewsnow.com/kannada/big-news-cm-siddaramaiah-orders-cancellation-of-ineligible-bpl-card/

Read More

ಬೆಂಗಳೂರು: ರಾಜ್ಯದಲ್ಲಿ ಕಳಪೆ ಬೀಜ ತಡೆಗಟ್ಟಲು ಎಲ್ಲಾ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ. ಇಂದು ಕೃಷಿ ಇಲಾಖೆಯ ಸಭೆ ನಡೆಸಿದ ನಂತ್ರ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 82.48 ಲಕ್ಷ ಹೆಕ್ಟೆರ್‌ ಬಿತ್ತನೆ ಗುರಿ ಇದ್ದು, ಇದುವರೆಗೆ 50.91 ಲಕ್ಷ ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಇನ್ನೂ 32 ಲಕ್ಷ ಹೆಕ್ಟೇರ್‌ ಬಿತ್ತನೆ ಮಾಡಬೇಕಾಗಿದ್ದು ಈ ಬಾರಿ ಎಲ್ಲಾ ಕಡೆ ಉತ್ತಮ ಮಳೆಯಾಗಿರುವ ಕಾರಣ ಬಿತ್ತನೆ ಗುರಿ ಸಾಧಿಸುವ ಭರವಸೆ ಹೊಂದಲಾಗಿದೆ ಎಂದರು. ಬಿತ್ತನೆ ಬಳಿಕ ಮಳೆಯಾಗದೇ ಮೊಳಕೆಯಲ್ಲೇ ಹಾಳಾಗಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಪ್ರಸ್ತುತ ಸಾಲಿನಲ್ಲಿ 291940 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು, ಬೀಜ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಬೀಜ ಮೊಳಕೆ ಬಾರದ ಬಗ್ಗೆ ಯಾವುದೇ ದೂರುಗಳು ಇದುವರೆಗೆ ಬಂದಿಲ್ಲ ಎಂದರು. ಕಳಪೆ ಬೀಜ ತಡೆಗಟ್ಟಲು ಎಲ್ಲಾ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಇದೇ ಅವಧಿಯಲ್ಲಿ 1162498…

Read More

ಬೆಂಗಳೂರು: ನಾಳೆ ಬೆಳಗ್ಗೆ 11.30ಕ್ಕೆ ಕೆಲ ದಿನಗಳ ಹಿಂದೆ ನಡೆದಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ( SSLC Exam 2 ) ಫಲಿತಾಂಶ ಪ್ರಕಟವಾಗಲಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. 2024ರ ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ಫಲಿತಾಂಶವನ್ನು ದಿನಾಂಕ 10-07-2024ರ ಬೆಳಿಗ್ಗೆ 11.30ಕ್ಕೆ NICಯ ಜಾಲತಾಣ https://karresults.nic.in ನಲ್ಲಿ ಪ್ರಕಟಿಸಲಾಗುತ್ತದೆ ಅಂತ ತಿಳಿಸಿದ್ದಾರೆ. ಅಂದಹಾಗೇ ದಿನಾಂಕ 14-06-2024ರಿಂದ 22-06-2024ರವರೆಗೆ 2024ರ ಎಸ್ ಎಸ್ ಎಲ್ ಸಿ ಪರೀಕ್ಷೆ -2 ಅನ್ನು ನಡೆಸಲಾಯಿತು. 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-2ರ ವಿಜ್ಞಾನ, ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ದ್ವಿತೀಯ ಭಾಷೆ ಕನ್ನಡ ವಿಷಯದ ಕೀ ಉತ್ತರಗಳನ್ನು ದಿನಾಂಕ:21.06.2024 ರಂದು ಮಂಡಲಿಯ ಜಾಲತಾಣದಲ್ಲಿ http://kseeb.karnataka.gov.inನಲ್ಲಿ ಪ್ರಕಟಿಸಲಾಗಿದೆ. ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು https://kannadanewsnow.com/kannada/main-sed-in-mumbai-bmw-hit-and-run-case-mihir-shah-arrested/ https://kannadanewsnow.com/kannada/major-surgery-to-administrative-machinery-by-state-government-9-kas-officers-transferred/

Read More