Subscribe to Updates
Get the latest creative news from FooBar about art, design and business.
Author: kannadanewsnow09
ಚಿತ್ರದುರ್ಗ: ರಾಜ್ಯದಲ್ಲಿ ಕ್ರೈಂ ತಡೆಗೆ ಪೊಲೀಸರು ಎಷ್ಟೇ ಕ್ರಮವಹಿಸಿದ್ರೂ, ಮರುಕಳಿಸುತ್ತಲೇ ಇದ್ದಾವೆ. ಹೀಗಿರುವಾಗ, ಸಾರ್ವಜನಿಕರನ್ನು ಜಾಗೃತಿಗೊಳಿಸುವಂತ ಕೆಲಸವನ್ನು ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಠಾಣೆಯ ಪೊಲೀಸರು ಕೈಗೊಂಡಿದ್ದಾರೆ. ಆ ಬಗ್ಗೆ ಮುಂದೆ ಓದಿ. ಈ ಕುರಿತಂತೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಅಬ್ಬಿನಹೊಳೆ ಠಾಣೆಯ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಮನೆ ಕಳ್ಳತನ, ದೇವಸ್ಥಾನ ಕಳ್ಳತನ ಹಾಗೂ ಸರ ಕಳ್ಳತನ ಮತ್ತು ಕುರಿ-ದನಕರುಗಳ ಕಳ್ಳಕಾಕರ ಬಗ್ಗೆ, ಕಡ್ಡಾಯವಾಗಿ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣಾ ಭಾಗಗಳಲ್ಲಿ ಬೀಗ ಹಾಕಿರುವ ಮನೆಗಳು, ದೇವಸ್ಥಾನಗಳ ಕಳ್ಳತನ ಹೆಚ್ಚಾಗಿದ್ದು ನೀವು ಬೇರೆ ಊರಿಗೆ ಹೋಗುವ ಸಂದರ್ಭದಲ್ಲಿ ಅಕ್ಕ-ಪಕ್ಕದ ಮನೆಯವರಿಗೆ ತಿಳಿಸಿ, ರಾತ್ರಿ ವೇಳೆಯಲ್ಲಿ ಹೊರಗಡೆ ಲೈಟ್ ಗಳನ್ನು ಹಾಕಬೇಕು ಮತ್ತು ಇಂಟರ್ ಲಾಕ್ ಹಾಗೂ ಬಗರ್ ಅಲರಾಂ ಮತ್ತು ಸಿ.ಸಿ ಕ್ಯಾಮರ ಅಳವಡಿಸಿಕೊಳ್ಳಿ. ದೇವಸ್ಥಾನಗಳಲ್ಲಿ ದೇವಸ್ಥಾನದ ಕಮಿಟಿಯವರು…
ತುಮಕೂರು : “ರಾಜ್ಯ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿದೆ. ಹೀಗಾಗಿ ಇ.ಡಿ ( ಜಾರಿ ನಿರ್ದೇಶನಾಲಯ) ದಾಳಿ ಮಾಡುವ ಅವಶ್ಯಕತೆ ಇರಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಮಾಜಿ ಸಚಿವ ನಾಗೇಂದ್ರ ಮನೆ ಸೇರಿ ಹಲವು ಕಡೆ ಇ.ಡಿ ದಾಳಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಉತ್ತರಿಸಿದ ಅವರು “ಇಷ್ಟು ದೊಡ್ಡ ಮೊತ್ತದ ಹಗರಣ ಎಂದ ಮೇಲೆ ಬ್ಯಾಂಕ್ ನವರು ತನಿಖೆ ನಡೆಸುವ ಅಧಿಕಾರವಿದೆ. ಇ.ಡಿ ಅವರು ಅವಶ್ಯಕತೆ ಇರದಿದ್ದರೂ ಬಂದಿದ್ದಾರೆ” ಎಂದು ಹೇಳಿದರು. ಎಸ್ ಐಟಿ ರಚನೆ ಮಾಡಿದರೂ ಇ.ಡಿ ತನಿಖೆ ನಡೆಸಲು ಮುಂದುವರೆಯುತ್ತಿದೆ ಎಂದು ಕೇಳಿದಾಗ “ಇದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ನಾಗೇಂದ್ರ ಅವರದ್ದು ಯಾವುದೇ ತರದ ತಪ್ಪಿಲ್ಲ. ಕಳಂಕರಹಿತರಾಗಿ ಪ್ರಕರಣದಿಂದ ಹೊರಗಡೆ ಬರುತ್ತಾರೆ ಎನ್ನುವ ನಂಬಿಕೆ ಇದೆ” ಎಂದು ಹೇಳಿದರು. “ಈ ಹಿಂದೆ ಬಿಜೆಪಿ ಕಾಲದಲ್ಲಿಯೂ ಇಂತಹ ಪ್ರಕರಣ ನಡೆದಿರುವ ಉದಾಹರಣೆಗಳಿವೆ. ಬಹಳ ವ್ಯವಸ್ಥಿತವಾಗಿ ವಂಚನೆ ಮಾಡಿದ್ದಾರೆ.…
ತುಮಕೂರು: ಚನ್ನಪಟ್ಟಣ ಕ್ಷೇತ್ರಕ್ಕೆ ನೀವು ಅಭ್ಯರ್ಥಿಯಾಗುತ್ತೀರಾ ಎನ್ನುವ ಚರ್ಚೆ ನಡೆಯುತ್ತಿದೆ ಎಂದಾಗ “ಚನ್ನಪಟ್ಟಣದಲ್ಲಿ ಯಾರೇ ನಿಂತರು ನಾನೇ ಅಭ್ಯರ್ಥಿ ಅಲ್ಲವೇ?” ಎಂದು ಮಾರ್ಮಿಕವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಉತ್ತರಿಸಿದರು. ಮಾಜಿ ಸಚಿವ ನಾಗೇಂದ್ರ ಮನೆ ಸೇರಿ ಹಲವು ಕಡೆ ಇ.ಡಿ ದಾಳಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಉತ್ತರಿಸಿದ ಅವರು “ಇಷ್ಟು ದೊಡ್ಡ ಮೊತ್ತದ ಹಗರಣ ಎಂದ ಮೇಲೆ ಬ್ಯಾಂಕ್ ನವರು ತನಿಖೆ ನಡೆಸುವ ಅಧಿಕಾರವಿದೆ. ಇ.ಡಿ ಅವರು ಅವಶ್ಯಕತೆ ಇರದಿದ್ದರೂ ಬಂದಿದ್ದಾರೆ” ಎಂದು ಹೇಳಿದರು. ನಾನು ಮಠಕ್ಕೆ ಬರುವುದು ಸಹಜ ನೊಣವಿನಕೆರೆ ಮಠಕ್ಕೆ ಭೇಟಿ ಕೊಟ್ಟ ವಿಚಾರವಾಗಿ ಕೇಳಿದಾಗ “ನಾನು ನೊಣವಿನಕೆರೆ ಮಠಕ್ಕೆ ಬರೋದು ಸಹಜ. ಇದು ನನ್ನ ನಂಬಿಕೆ ಮತ್ತು ವಿಚಾರ” ಎಂದರು. ಹಂದನಕೆರೆ ಮಠಕ್ಕೆ ಭೇಟಿ ನೀಡಿದ ಬಗ್ಗೆ ಕೇಳಿದಾಗ “ನಾನು ಮಠಕ್ಕೆ ಹೋಗಿರಲಿಲ್ಲ. ಅಲ್ಲಿ ಗವಿ ಸಿದ್ದೇಶ್ವರ ಬೆಟ್ಟಕ್ಕೆ ರಸ್ತೆ ಮಾಡಿಸಿದ್ದೆ. ಅರಣ್ಯ ಇಲಾಖೆಯಿಂದ ತೊಂದರೆ ಇದ್ದ ಕಾರಣಕ್ಕೆ, ಯಾವ ರೀತಿಯ ತೊಂದರೆ…
ಬೆಂಗಳೂರು: ಚುನಾವಣೆಯ ಸಂದರ್ಭದಲ್ಲಿ ಅಫಿಡವಿಟ್ ನಲ್ಲಿ ಮಾಹಿತಿ ಮುಚ್ಚಿಟ್ಟ ಆರೋಪದಡಿ ಚುನಾವಣಾ ಆಯೋಗಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ದೂರು ಸಲ್ಲಿಸಲಾಗಿದೆ. ಸಾಮಾಜಿಕ ಹೋರಾಟಗಾರ ಅಬ್ರಾಹಂ ಎಂಬುವರು ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಅದರಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಕೃಷಿ ಭೂಮಿಯನ್ನು ಹೊಂದಿದ್ದರೂ, ಮಾಹಿತಿ ಮುಚ್ಚಿಟ್ಟಿರುವುದಾಗಿ ಆರೋಪಿಸಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಹೆಸರಿನಲ್ಲಿ 3.16 ಎಕರೆ ಕೃಷಿ ಭೂಮಿ ಇದೆ. ಆದ್ರೇ ಆ ಬಗ್ಗೆ ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿರುವಂತ ಅಫಿಡವಿಟ್ ನಲ್ಲಿ ಉದ್ದೇಶಪೂರ್ವಕವಾಗೇ ಕಲಂನಲ್ಲಿ ಖಾಲಿ ಬಿಡಲಾಗಿದೆ ಅಂತ ತಿಳಿಸಿದ್ದಾರೆ. ಚುನಾವಣಾ ಅಫಿಡವಿಟ್ ನಲ್ಲಿ ಕೃಷಿ ಭೂಮಿಯ ಬಗ್ಗೆ ಮಾಹಿತಿ ಮುಚ್ಚಿಟ್ಟ ಸಿಎಂ ಸಿದ್ಧರಾಮಯ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದಂತ ದೂರಿನಲ್ಲಿ ಕೋರಲಾಗಿದೆ. https://kannadanewsnow.com/kannada/good-news-for-job-seekers-notification-for-recruitment-of-2000-linemen-to-be-issued-in-15-days/ https://kannadanewsnow.com/kannada/shivamogga-world-population-day-celebrations-to-be-held-at-soraba-tomorrow/
ನವದೆಹಲಿ: ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ವೈಜಾಗ್ ಸ್ಟೀಲ್ ಕಾರ್ಖಾನೆ (RNIL)ಗೆ ಭೇಟಿ ನೀಡಲಿದ್ದಾರೆ. ಬುಧವಾರ ಸಂಜೆಯೇ ವಿಶಾಖಪಟ್ಟಣಕ್ಕೆ ಆಗಮಿಸಿರುವ ಸಚಿವರು, ಗುರುವಾರ ಬೆಳಗ್ಗೆ ತಮ್ಮ ಖಾತೆಯ ಸಹಾಯಕ ಸಚಿವರು, ಆಂಧ್ರ ಪ್ರದೇಶದವರೇ ಆದ ಭೂಪತಿರಾಜು ಶ್ರೀನಿವಾಸ ವರ್ಮ ಹಾಗೂ ಉನ್ನತ ಅಧಿಕಾರಿಗಳ ಜತೆಗೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಕಂಪನಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ನವದೆಹಲಿಯ ತಮ್ಮ ಸಚಿವಾಲಯದಲ್ಲಿ ಹಲವಾರು ಸಭೆಗಳನ್ನು ನಡೆಸಿರುವ ಸಚಿವರು, ತಾವೇ ಖುದ್ದು ವಿಶಾಖಪಟ್ಟಣಕ್ಕೆ ಬಂದು ಉಕ್ಕು ಕಾರ್ಖಾನೆಯನ್ನು ವೀಕ್ಷಿಸುತ್ತಿದ್ದಾರೆ. ಆರ್ಥಿಕವಾಗಿ ಹಾಗೂ ಇನ್ನಿತರೆ ಕಾರಣಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಕಂಪನಿಯನ್ನು ಮೇಲೆತ್ತುವ ಬಗ್ಗೆ ಪ್ರಯತ್ನ ನಡೆಸಿರುವ ಸಚಿವರು; ಭೂಪತಿರಾಜು ಅವರ ಜತೆಯೂ ಹಲವು ಬಾರಿ ಚರ್ಚೆ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರನ್ನು ಸಚಿವಾಲಯದಲ್ಲಿ ಭೇಟಿಯಾಗಿದ್ದ ಆಂಧ್ರ ಪ್ರದೇಶದ ಸಂಸದರು, ಬಿಜೆಪಿ ಹಿರಿಯ ನಾಯಕಿಯಾದ ಪುರಂದೇಶ್ವರಿ ಅವರು, ಹೇಗಾದರೂ…
ಶಿವಮೊಗ್ಗ: ನಾಳೆ ಸೊರಬ ತಾಲ್ಲೂಕಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಜಾಥಾ ಮತ್ತು ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸೊರಬ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಯ್ ಪಾಟೇಲ್ ಜಿ.ಎಲ್ ಅವರು, ದಿನಾಂಕ 11-07-2024ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಹೆಚ್ ಪಿಆರ್ ಆರ್ ನರ್ಸಿಂಗ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಜಾಥಾ ಮತ್ತು ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಅಂತ ತಿಳಿಸಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳ ಹೆಮ್ಮೆ ಎನ್ನುವ ಘೋಷವಾಕ್ಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಜಾಥಾ ಬಳಿಕ ಸೊರಬದ ಸ್ತ್ರೀಶಕ್ತಿ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದನ್ನು ಶಾಲಾ…
ಕೊಡಗು: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸುವಂತ ಘಟನೆಯೊಂದು ನಡೆದಿದೆ. ಡ್ರಾಫ್ ನೀಡುವ ನೆಪದಲ್ಲಿ ಬಾಲಕಿಯೊಬ್ಬಳ ಮೇಲೆ ಕೀಚಕರ ಕೃತ್ಯವನ್ನು ದುರುಳರು ಮೆರೆದಿದ್ದಾರೆ. ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರೇ, ಮತ್ತೋರ್ವ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ನಡೆಸಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂ ಪೇಟೆ ತಾಲೂಕಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ಐವರು ಬಾಲಕಿಯರನ್ನು, ಮಾರುತಿ 800 ಅಪರಿಚಿತ ಕಾರಿನಲ್ಲಿ ಡ್ರಾಫ್ ಕೊಡುವುದಾಗಿ ಕರೆದೊಯ್ದಿದ್ದಾರೆ. ನಾಗರಹೊಳೆಗೆ ಡ್ರಾಫ್ ಕೊಡ್ತಾರೆ ಅಂತ ಕಾರು ಹತ್ತಿದಂತ ಬಾಲಕಿಯರನ್ನು ದಾರಿ ಮಧ್ಯೆ ಕಾಫಿ ತೋಟಕ್ಕೆ ಕರೆದೊಯ್ದು ಓರ್ವ ಬಾಲಕಿಯ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಮತ್ತೋರ್ವ ಬಾಲಕಿಯ ಮೇಲೆ ಮೂವರಿಂದ ಅತ್ಯಾಚಾರ ಯತ್ನ ನಡೆಸಲಾಗಿದೆ. ಆದ್ರೇ ತಪ್ಪಿಸಿಕೊಂಡು ಹೋಗಿ, ಸಮೀಪದಲ್ಲಿದ್ದಂತ ಸ್ಥಳೀಯರನ್ನು ರಕ್ಷಣೆಗೆ ಕೋರಿದಾಗ, ಕೀಚಕರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದಂತ ಅವರು, ಕುಟ್ಟ ಪೊಲೀಸ್ ಠಾಣೆಗೆ ತೆರಳಿದಂತ ಸಂತ್ರಸ್ತ ಬಾಲಕಿಯರು ದೂರು ನೀಡಿದ್ದಾರೆ. ಬಾಲಕಿಯರ ದೂರಿನ ಅನ್ವಯ ಐವರ ವಿರುದ್ಧ ದೂರು ದಾಖಲಿಸಿಕೊಂಡು, ಆ ಬಳಿಕ…
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಂದು ಒಂದೇ ದಿನ ರಾಜ್ಯಾಧ್ಯಂತ 293 ಮಂದಿಗೆ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಕುರಿತಂತೆ ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 1874 ಮಂದಿಯನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು. ಅವರಲ್ಲಿ 293 ಮಂದಿಗೆ ಡೆಂಗ್ಯೂ ಪಾಸಿಟಿವ್ ಅಂತ ದೃಢಪಟ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 100 ಆಗಿದೆ ಅಂತ ತಿಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 391 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 118 ಮಂದಿಗೆ ಡೆಂಗ್ಯೂ ಪಾಸಿಟಿವ್ ಅಂತ ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಇಬ್ಬರು, ಕೋಲಾರದಲ್ಲಿ 14, ತುಮಕೂರು 08, ದಾವಣಗೆರೆ 10, ಶಿವಮೊಗ್ಗ 07, ಬಾಗಲಕೋಟೆ 04, ಧಾರವಾಡ 15, ಹಾವೇರಿ 15, ಉತ್ತರ ಕನ್ನಡ 03, ಕಲಬುರ್ಗಿ 08, ಯಾದಗಿರಿ 04, ಬೀದರ್ 06, ಬಳ್ಳಾರಿ 03, ವಿಜಯನಗರ 10, ಕೊಪ್ಪಳ 03 ಮಂದಿಗೆ ಡೆಂಗ್ಯೂ…
ದಾವಣಗೆರೆ: ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಫ್ಯಾಶನ್ ಡಿಸೈನಿಂಗ್ ಹಾಗೂ ಟೈಲರಿಂಗ್ ಕುರಿತ 30 ದಿನಗಳ ಉಚಿತ ತರಬೇತಿ ಆಗಸ್ಟ್ 1 ರಿಂದ ಆರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಮಹಿಳೆಯರು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾμÉ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಆಧಾರ್ ಕಾರ್ಡ್ ಹಾಗೂ ನರೇಗಾ ಯೋಜನೆಯ ಜಾಬ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್‍ನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಜುಲೈ 23 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ರುಡ್‍ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9380162042, 9740982585 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‍ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ. https://kannadanewsnow.com/kannada/congress-sets-up-committee-to-submit-preliminary-report-on-bbmp-polls/ https://kannadanewsnow.com/kannada/hubballi-neha-murder-case-love-jihad-was-not-the-reason-for-murder-says-chargesheet/
ದಾವಣಗೆರೆ : ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿ.ಇಎಲ್.ಇಡಿ.ಗೆ ದಾಖಲಾತಿ ಪಡೆಯಲು ಜುಲೈ 31 ರವಗೆ ಆಫ್‍ಲೈನ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ. ಕನ್ನಡ ಮತ್ತು ಉರ್ದು ಮಾಧ್ಯಮದಲ್ಲಿ ಪ್ರವೇಶ ಪಡೆಯಬಹುದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,( ಡಯಟ್), ದಾವಣಗೆರೆ ಇಲ್ಲಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ನಮೂನೆಗಳನ್ನು WWW.schooleducation.karnataka.gov.in ನಲ್ಲಿ ಡೌನ್ ಲೋಡ್ ಮಾಡಿಕೊಂಡು ನಿಗದಿತ ದಾಖಲೆಗಳು ಮತ್ತು ಡಿ.ಡಿ.ಯೊಂದಿಗೆ ನೋಡಲ್ ಕೇಂದ್ರವಾದ ಡಯಟ್. ದಾವಣಗೆರೆ ಇಲ್ಲಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ ಅರ್ಹತೆ. ಮೀಸಲಾತಿ ವಿವರಗಳು ಮತ್ತು ಇತರೆ ಮಾಹಿತಿಗಳನ್ನು WWW.schooleducation.karnataka.gov.in ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: ಕನ್ನಡ ಮಾಧ್ಯಮ – 9164489972, 988030377. 9844401092. 08192-231156, ಉರ್ದು ಮಾಧ್ಯಮ- 9164489972, 8867932439, 08192-231156 ಸಂಪರ್ಕಿಸಲು ಡಯಟ್ ಪ್ರಾಂಶುಪಾಲರಾದ ಗೀತಾ ತಿಳಿಸಿದ್ದಾರೆ. https://kannadanewsnow.com/kannada/congress-sets-up-committee-to-submit-preliminary-report-on-bbmp-polls/ https://kannadanewsnow.com/kannada/hubballi-neha-murder-case-love-jihad-was-not-the-reason-for-murder-says-chargesheet/