Subscribe to Updates
Get the latest creative news from FooBar about art, design and business.
Author: kannadanewsnow09
ಹರಿಯಾಣ: ಗುರುಗ್ರಾಮದ ಹೊರವಲಯದಲ್ಲಿರುವ ಬಾದ್ಶಾಹ್ಪುರದ ಬಳಿ ಅಪರಿಚಿತ ದುಷ್ಕರ್ಮಿಗಳು ಫಜಿಲ್ಪುರಿಯಾ ಮೇಲೆ ಗುಂಡು ಹಾರಿಸಿದ್ದರಿಂದ ಜನಪ್ರಿಯ ಹರ್ಯಾಣವಿ ಗಾಯಕ ಮತ್ತು ರ್ಯಾಪರ್ ಫಜಿಲ್ಪುರಿಯಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಫಜಿಲ್ಪುರಿಯಾ ಮೇಲೆ ಹಲವು ಸುತ್ತು ಗುಂಡು ಹಾರಿಸಲಾಗಿದ್ದು, ಇದು ಉದ್ದೇಶಿತ ದಾಳಿಯಂತೆ ಕಾಣುತ್ತದೆ. ದಾಳಿ ನಡೆದಾಗ ಅವರು ತಮ್ಮ ಕಾರಿನಲ್ಲಿದ್ದರು. ರಾಹುಲ್ ಯಾದವ್ ಎಂಬ ಗಾಯಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ದಕ್ಷಿಣ ಪೆರಿಫೆರಲ್ ರಸ್ತೆಯಲ್ಲಿದ್ದಾಗ ಗುರುತಿಸಲಾಗದ ದುಷ್ಕರ್ಮಿಗಳು ಗಾಯಕನ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ. ಈ ಘಟನೆಯು ಸ್ಥಳೀಯ ಸಂಗೀತ ಸಮುದಾಯದಲ್ಲಿ ಮತ್ತು ಹರಿಯಾಣದ ಚಾರ್ಟ್ಬಸ್ಟರ್ಗಳಿಗೆ ಹೆಸರುವಾಸಿಯಾದ ಗಾಯಕನ ಅಭಿಮಾನಿಗಳಲ್ಲಿ ಆಘಾತದ ಅಲೆಗಳನ್ನು ಉಂಟುಮಾಡಿದೆ. ಈ ರ್ಯಾಪರ್ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ಸ್ನೇಹಿತ ಎಂದು ನಂಬಲಾಗಿದೆ. ಫಜಿಲ್ಪುರಿಯಾ ಯಾರು? ಫಜಿಲ್ಪುರಿಯಾ ಹರಿಯಾಣ ಮತ್ತು ಪಂಜಾಬಿ ಸಂಗೀತದಲ್ಲಿ ತಮ್ಮ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು…
ಬೆಂಗಳೂರು: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿಗಳ ವಿಷಪ್ರಾಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಫ್ಎಸ್ ಅಧಿಕಾರಿ ಚಕ್ರಪಾಣಿಯನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ. ಇಂದು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಮಲೆಮಹದೇಶ್ವರ ವನ್ಯಧಾಮದಲ್ಲಿ ಹುಲಿಗಳ ವಿಷಪ್ರಾಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಫ್ಎಸ್ ಅಧಿಕಾರಿ ಚಕ್ರಪಾಣಿ ಅವರನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ಡಿಸಿಎಫ್ ಆಗಿ ಚಕ್ರಪಾಣಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಡಿಸಿಎಫ್ ಚಕ್ರಪಾಣಿಯನ್ನು ಕರ್ತವ್ಯಲೋಪ ಕಂಡು ಬಂದ ಹಿನ್ನಲೆಯಲ್ಲಿ ಕಡ್ಡಾಯ ರಜೆ ಮೇಲೆ ರಾಜ್ಯ ಸರ್ಕಾರ ಕಳುಹಿಸಿತ್ತು. ಇದೀಗ ಐಎಫ್ಎಸ್ ಅಧಿಕಾರಿ ಚಕ್ರಪಾಣಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಬೆಂಗಳೂರು: ಅಂಧರ ಅನುಕೂಲಕ್ಕಾಗಿ ಬಿಎಂಟಿಸಿಯ 125 ಬಸ್ಗಳಲ್ಲಿ ಆನ್ಬೋರ್ಡ್ ತಂತ್ರಜ್ಞಾನ ಪರಿಚಯಿಸಲಾಗಿದ್ದು, ಆಗಸ್ಟ್ ಅಂತ್ಯದ ಒಳಗೆ 500 ಬಸ್ಗಳಲ್ಲಿ, ಅನಂತರ ಎಲ್ಲ ಬಸ್ಗಳಲ್ಲಿ ಅಳವಡಿಸಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1944750741547307418 ರೇಸ್ಡ್ ಲೈನ್ಸ್ ಫೌಂಡೇಶನ್ ಮತ್ತು ಐಐಟಿ ದೆಹಲಿ ಅಭಿವೃದ್ಧಿಪಡಿಸಿರುವ ಈ ಉಪಕರಣವು ದೃಷ್ಟಿ ವಿಶೇಷ ಚೇತನ ವ್ಯಕ್ತಿಗಳು ಸಾರ್ವಜನಿಕ ಬಸ್ಸುಗಳನ್ನು ಹತ್ತಲು ಸಹಾಯ ಮಾಡುವ ಸಾಧನವಾಗಿರುತ್ತದೆ. ಇದು ದೃಷ್ಟಿ ವಿಶೇಷಚೇತನರು ಎದುರಿಸುವ ಸವಾಲುಗಳನ್ನು ಪರಿಹರಿಸುವ ಮೂಲಕ ಸಾರ್ವಜನಿಕ ಬಸ್ಸುಗಳಲ್ಲಿ ಸ್ವತಂತ್ರವಾಗಿ ಪ್ರಯಾಣ ಮಾಡಲು ಸಹಾಯ ಮಾಡುತ್ತದೆ. ಈ ಸಾಧನವು ಬಸ್ ನಲ್ಲಿ ಅಳವಡಿಸಿರುವ ಸ್ಪೀಕರ್ ಮತ್ತು ರಿಮೋಟ್ ಹೊಂದಿರುತ್ತದೆ. ಬಸ್ ನಿಲ್ದಾಣದ ಹತ್ತಿರ ಬಸ್ಸು ಬಂದಾಗ, ದೃಷ್ಟಿ ವಿಶೇಷ ಚೇತನ ಪ್ರಯಾಣಿಕರು, Find ಬಟನ್ ಒತ್ತಿದರೆ, ಬಸ್ಸಿನಲ್ಲಿ ಅಳವಡಿಸಿರುವ ಸ್ಪೀಕರ್ ನಿಂದ ಬಸ್ ಮಾರ್ಗ ಸಂಖ್ಯೆ ಘೋಷಣೆ ಯಾಗುತ್ತದೆ, ಆಗ ಅವರು ಬಸ್ಸನ್ನು ಹತ್ತುತ್ತಾರೆ. ಮತ್ತು ಚಾಲಕ ಮತ್ತು ನಿರ್ವಾಹಕರಿಗೆ ದೃಷ್ಟಿ ವಿಶೇಷ ಚೇತನ ಪ್ರಯಾಣಿಕರು ಬಸ್ಸಿಗೆ…
ಬೆಂಗಳೂರು: 2025ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 889 ಎಂಡಿಎಸ್ ಸೀಟು ಲಭ್ಯ ಇದ್ದು, ಮೊದಲ ಸುತ್ತಿನಲ್ಲಿ 636 ಮಂದಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಟ್ಟು 1,400 ಮಂದಿ ಸೀಟು ಪಡೆಯಲು ಅರ್ಜಿ ಸಲ್ಲಿಸಿದ್ದರು. ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ತಮಗೆ ಸೂಕ್ತ ಅನಿಸಿದರೆ ಛಾಯ್ಸ್ -1 ಅನ್ನು ಆಯ್ಕೆ ಮಾಡಿಕೊಂಡು ಕಾಲೇಜಿಗೆ ಪ್ರವೇಶ ಪಡೆಯಬಹುದು. ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಯುಜಿನೀಟ್: ನೋಂದಣಿಗೆ ಜುಲೈ 17ರವರೆಗೆ ಅವಕಾಶ ವೈದ್ಯಕೀಯ ಕೋರ್ಸ್ ಗಳ ಸೀಟು ಹಂಚಿಕೆ ಸಲುವಾಗಿ ಇದುವರೆಗೂ ನೋಂದಣಿ ಮಾಡದಿರುವವರಿಗೆ ಅನುಕೂಲವಾಗಲಿ ಎಂದು ಜು.17ರವರೆಗೆ ಅವಕಾಶ ನೀಡಲಾಗಿದೆ. ಹೊಸದಾಗಿ ನೋಂದಣಿ ಮಾಡಿಕೊಂಡು, ಅರ್ಜಿ ಸಲ್ಲಿಸಬಹುದು. ಹಾಗೆಯೇ ನೀಟ್ ರೋಲ್ ನಂಬರ್…
ಮೈಸೂರು: ಅಂಧರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್ಸುಗಳ ನಂತ್ರ ಮೈಸೂರು ನಗರ ಸಾರಿಗೆಯ ಬಸ್ಸುಗಳಲ್ಲೂ ಆನ್ಬೋರ್ಡ್ ತಂತ್ರಜ್ಞಾನ ಪರಿಚಯಿಸಲಾಗಿದೆ. ಆನ್ಬೋರ್ಡ್ ಸಾಧನವು ದೃಷ್ಟಿ ಸಮಸ್ಯೆಯ ವ್ಯಕ್ತಿಗಳಿಗೆ ಬಸ್ ಮಾರ್ಗ ಸಂಖ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವರು ಆ ಸಾಧನದಲ್ಲಿ ಸಂಖ್ಯೆ ಒತ್ತಿದಾಗ ಬಸ್ನಲ್ಲಿ ಅಳವಡಿಸಿದ್ದ ಮೌಂಟೆಡ್ ಸ್ಪೀಕರ್ ಧ್ವನಿ ಹೊರಡಿಸುತ್ತದೆ. ಇದು ಬಸ್ನ ಚಾಲಕ ಮತ್ತು ನಿರ್ವಾಹಕರಿಗೂ ಮಾಹಿತಿ ನೀಡುವುದರಿಂದ ಅವರನ್ನು ಬಸ್ ಹತ್ತಿಸಲು ಸಹಾಯ ಮಾಡುತ್ತಾರೆ. ಅಲ್ಲದೇ ಇದೇ ಧ್ವನಿಯ ಆಧಾರದಲ್ಲಿ ಆ ವ್ಯಕ್ತಿಗಳು ಕೂಡ ಬಸ್ನ ಬಾಗಿಲಿನತ್ತ ಬರಲು ಉಪಯೋಗವಾಗುತ್ತದೆ. ಇಳಿಯಬೇಕಾದ ಸ್ಥಳದಲ್ಲಿಯೂ ಬಟನ್ ಒತ್ತಿದರೆ ಅವರನ್ನು ಸುರಕ್ಷಿತವಾಗಿ ಇಳಿಸಲು ಅನುಕೂಲವಾಗಲಿದೆ. ಇಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರು, ಬೆಂಗಳೂರು ನಂತರ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಭಾರತ ಹಾಗೂ ಜರ್ಮನಿ ಸರ್ಕಾರದ ನಡುವಿನ ಅರ್ಬನ್ ಮೊಬಿಲಿಟಿ ಸಹಭಾಗಿತ್ವದಲ್ಲಿ, GIZ ಕಂಪನಿಯ ಹಣಕಾಸು ನೆರವಿನಿಂದ ದೃಷ್ಟಿ ವಿಶೇಷ ಚೇತನರಿಗೆ 200 ಬಸ್ಸುಗಳಲ್ಲಿ, ಅವರ ಆಯ್ಕೆಯ ಬಸ್ ಮಾರ್ಗವನ್ನು…
ಕಾಂಗ್ರೆಸ್ ನಾಯಕರು ತಮ್ಮ ಕಾರ್ಯಕರ್ತರ ಕ್ರಿಮಿನಲ್ ಕಾರ್ಯಗಳ ಬಗ್ಗೆ ಮಾತನಾಡಲಿ: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ
ಕಲಬುರಗಿ: ಒಂದೊಂದಾಗಿ ಹೊರ ಬರುತ್ತಿರುವ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಕ್ರಿಮಿನಲ್ ಕಾರ್ಯಗಳ ಬಗ್ಗೆ ಜಿಲ್ಲೆಯ ಸಚಿವರು ಹಾಗೂ ಆಡಳಿತಾರೂಢ ಕಾಂಗ್ರೆಸ್ ಶಾಸಕರು ಮಾತನಾಡಲಿ, ತುಟಿ ಬಿಚ್ಚಲಿ ಎಂದು ಬಿಜೆಪಿ ವಿಭಾಗೀಯ ಪ್ರಬಾರಿ ಹಾಗೂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಡ್ರಗ್ಸ್ ಸಾಗಾಣಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೇ ಹಾಗೂ ಕಾರ್ಯಕರ್ತರು ಭಾಗಿ ಮಹಾರಾಷ್ಟ್ರದಲ್ಲಿ ಬಂಧನವಾಗಿರುವುದು ಹಾಗೂ ಕೆಲ ತಿಂಗಳುಗಳ ಹಿಂದೆ ಬಸವೇಶ್ವರ ಆಸ್ಪತ್ರೆ ಎದರುಗಡೆ ಡ್ರಗ್ಸ್ ದಾಸ್ತಾನು ಮಳಿಗೆಯಲ್ಲಿ ಡಗ್ಸ್ ಕಳ್ಳತನವಾಗಿದೆ ಎಂದು ವ್ಯಕ್ತಿಯನ್ನು ಕೊಂದಿದ್ದರ ಪ್ರಕರಣದಲ್ಲಿ ಕೆಲ ವರ್ಷಗಳ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಗನೇ ಬಂಧನವಾಗಿರುವುದು ಹಾಗೂ ಸಚಿವರ ವಿಧಾನಸಭಾ ಕ್ಷೇತ್ರದಲ್ಲಿ ಅವರದ್ದೇ ಇಲಾಖಾಧಿಕಾರಿಗಳು ಎಲ್ಲರಿಗೂ ಕಮಿಷನ್ ಕೊಡಬೇಕೆಂದು ಹೇಳಿ ಇಂತಿಷ್ಟು ಲಂಚ ಕೊಡಲೇಬೇಕೆಂದು ಹೇಳಿರುವುದನ್ನು ನೋಡಿದರೆ ಜಿಲ್ಲೆಯಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯದಂತಾಗಿದೆ. ನಮ್ಮದೇ ಸರ್ಕಾರವಿದೆ ಏನ್ ಮಾಡಿದ್ರೂ ನಡೆಯುತ್ತದೆ. ನಮ್ಮ ರಕ್ಷಣೆ ಗೆ ನಾಯಕರು ಬರುತ್ತಾರೆಂದು…
ಮೈಸೂರು: ಮೈಸೂರು ವಿಭಾಗದ ಹಾಸನ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ಹಳಿ ನವೀಕರಣ ಕಾರ್ಯ ಕೈಗೊಂಡಿರುವುದರಿಂದ, ಜುಲೈ 16 ರಿಂದ ಆಗಸ್ಟ್ 8, 2025 ರವರೆಗೆ ವಿವಿಧ ದಿನಾಂಕಗಳಲ್ಲಿ ಈ ಕೆಳಗಿನ ರೈಲು ಸೇವೆಗಳನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ. 1. ಜುಲೈ 16, 18, 21, 23, 25, ಹಾಗೂ ಜುಲೈ 28 ರಿಂದ ಆಗಸ್ಟ್ 1, 2025 ರವರೆಗೆ ಮತ್ತು ಆಗಸ್ಟ್ 4 ರಿಂದ ಆಗಸ್ಟ್ 8, 2025 ರವರೆಗೆ ಹೊರಡುವ ರೈಲು ಸಂಖ್ಯೆ 16221 ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ. 2. ಜುಲೈ 16, 18, 21, 23, 25, ಹಾಗೂ ಜುಲೈ 28 ರಿಂದ ಆಗಸ್ಟ್ 1, 2025 ರವರೆಗೆ ಮತ್ತು ಆಗಸ್ಟ್ 4 ರಿಂದ ಆಗಸ್ಟ್ 8, 2025 ರವರೆಗೆ ಹೊರಡುವ ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ ರೈಲು ಮಾರ್ಗಮಧ್ಯೆ…
ಬೆಂಗಳೂರು: ಪುದುಚೇರಿ – ದಾದರ್ ಎಕ್ಸ್’ಪ್ರೆಸ್ (ಸಂಖ್ಯೆ 11006) ಕಟ್ಪಾಡಿ ಜಂಕ್ಷನ್’ನಲ್ಲಿ ಮತ್ತು ಎಸ್ಎಂವಿಟಿ ಬೆಂಗಳೂರು – ಕಾಕಿನಾಡ ಟೌನ್ ಎಕ್ಸ್’ಪ್ರೆಸ್ (ಸಂಖ್ಯೆ 17209) ಜೋಲಾರ್’ಪೇಟೆ ಜಂಕ್ಷನ್’ನಲ್ಲಿ ಆಗಮಿಸುವ ಮತ್ತು ನಿರ್ಗಮಿಸುವ ಸಮಯಗಳಲ್ಲಿ ಪರಿಷ್ಕರಿಸಿರುವುದಾಗಿ ದಕ್ಷಿಣ ರೈಲ್ವೆಯು ತಿಳಿಸಿದೆ. ಅದರಂತೆ, ರೈಲು ಸಂಖ್ಯೆ 11006 ಪುದುಚೇರಿ – ದಾದರ್ ಚಾಲುಕ್ಯ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ರೈಲು, ಪ್ರಸ್ತುತ ಕಟ್ಪಾಡಿ ಜಂಕ್ಷನ್’ಗೆ 01:20 ಗಂಟೆಗೆ ಆಗಮಿಸಿ, 01:40 ಗಂಟೆಗೆ ನಿರ್ಗಮಿಸುತ್ತದೆ. ಆದರೆ, ಸೆಪ್ಟೆಂಬರ್ 9, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ, ಈ ರೈಲು 01:05 ಗಂಟೆಗೆ ಆಗಮಿಸಿ 01:25 ಗಂಟೆಗೆ ನಿರ್ಗಮಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17209 ಎಸ್ಎಂವಿಟಿ ಬೆಂಗಳೂರು – ಕಾಕಿನಾಡ ಟೌನ್ ಶೇಷಾದ್ರಿ ಡೈಲಿ ಎಕ್ಸ್’ಪ್ರೆಸ್ ರೈಲು, ಪ್ರಸ್ತುತ ಜೋಲಾರ್’ಪೇಟೆ ಜಂಕ್ಷನ್’ಗೆ 14:03 ಗಂಟೆಗೆ ಆಗಮಿಸಿ 14:05 ಗಂಟೆಗೆ ನಿರ್ಗಮಿಸುತ್ತದೆ. ಸೆಪ್ಟೆಂಬರ್ 10, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ, ಈ ರೈಲು 14:00 ಗಂಟೆಗೆ ಆಗಮಿಸಿ 14:05 ಗಂಟೆಗೆ ನಿರ್ಗಮಿಸಲಿದೆ.
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ನದಿ ಹಿನ್ನೀರಿನಲ್ಲಿ ನಿರ್ಮಿಸಿರುವ ಭಾರತದ 2ನೇ ಅತಿ ಉದ್ದದ ಕೇಬಲ್ ಬ್ರಿಡ್ಜ್ ಅಂಬಾರಗೋಡ್ಲು-ಕಳಸವಳ್ಳಿ-ಸಿಗಂದೂರು ಸೇತುವೆಗೆ ʼಮಾತಾ ಶ್ರೀ ಚೌಡೇಶ್ವರಿ ಸೇತುವೆʼಯಾಗಿ ಹೆಸರಿಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದರು. ಸಾಗರ ತಾಲೂಕಿನ ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಇಂದು ನೂತನ ಸೇತುವೆ ಲೋಕಾರ್ಪಣೆ ಸಮಾರಂಭ ಉದ್ದೇಶಿಸಿ ಮಾತನಾಡಿ, ಈ ಹೊಸ ಸೇತುವೆಗೆ ತಾಯಿ ಶ್ರೀ ಚೌಡೇಶ್ವರಿ ದೇವಿ ಹೆಸರನ್ನೇ ನಾಮಕರಣ ಮಾಡುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದರು. ಸಂಸದ ಬಿ.ವೈ.ರಾಘವೇಂದ್ರ ಅವರ ಒತ್ತಾಸೆಯೂ ಇದೇ ಆಗಿದೆ. ಹಾಗಾಗಿ ಅವರ ಅಭಿಲಾಷೆಯಂತೆ ಸಿಗಂದೂರು ಸೇತುವೆಗೆ ಮಾತಾ ಚೌಡೇಶ್ವರಿ ಹೆಸರನ್ನು ವೇದಿಕೆಯಲ್ಲಿ ಘೋಷಿಸಬೇಕೆಂದು ಗಡ್ಕರಿ ಅವರನ್ನು ಒತ್ತಾಯಿಸಿದರು. ದೇಶದಲ್ಲಿ ಇಂದು ಸಚಿವ ನಿತಿನ್ ಗಡ್ಕರಿ ಅವರು ಸಂಚಾರ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. 1998-99ರ ದಶಕದಲ್ಲಿ ಹಲವು ಪ್ರಥಮಗಳ ರೂವಾರಿ ಆಗಿದ್ದವರು, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಶುರು ಮಾಡಿದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ…
ಬೆಂಗಳೂರು : ದೇಶದಲ್ಲೇ ಮೊದಲ ಬಾರಿಗೆ ಶುಶ್ರೂಷಕರ ನೊಂದಣಿಗಾಗಿ, ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ ಅಭಿವೃದ್ಧಿಪಡಿಸಿರುವ ವಿಶೇಷ ಡಿಜಿ ಲಾಕರ್ ತಂತ್ರಜ್ಞಾನ ಜಾರಿಗೆ ಬಂದಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದರು. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವರು, ಆಧಾರ್, ಡಿಜಿ ಲಾಕರ್ ಇ-ಕೆವೈಸಿ ಮೂಲಕ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸುವ ತಂತ್ರಜ್ಞಾನದ ಲೋಕಾರ್ಪಣೆ ಜುಲೈ 15 ಮಂಗಳವಾರ ನಡೆಯಲಿದೆ ಎಂದರು. ಯುಐಡಿಎಐ (UIDAI), ಸಿ-ಇಜಿ (C-eG), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ತಂತ್ರಜ್ಞಾನದ ನೆರವಿನಿಂದ ಆಧಾರ್ ಇ-ಕೆವೈಸಿ (E-Kyc)ಯಿಂದ ಶುಶ್ರೂಷಕರ ವೈಯಕ್ತಿಕ ಡಾಟಾ, ವಿಳಾಸ, ಫೋಟೋ, ಹಾಗೂ ಇತರೆ ಮಾಹಿತಿಗಳನ್ನು ಆಧಾರ್ ಸರ್ವರ್ ನಿಂದ ನೇರವಾಗಿ ಕರ್ನಾಟಕ ಶುಶ್ರೂಷ ಪರಿಷತ್ ಪಡೆದುಕೊಳ್ಳಬಹುದಾಗಿದೆ. ಈ…