Subscribe to Updates
Get the latest creative news from FooBar about art, design and business.
Author: kannadanewsnow09
ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲುಪಾಲಾಗಿದ್ದಂತ ನಟ ದರ್ಶನ್ ಗೆ ( Actor Darshan ) 6 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಈ ಹಿನ್ನಲೆಯಲ್ಲಿ ಅವರು ಬಳ್ಳಾರಿ ಜೈಲಿನಿಂದ 131 ದಿನಗಳ ಬಳಿಕ ಬಿಡುಗಡೆಯಾಗಿದ್ದಾರೆ. ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲುಪಾಲಾಗಿದ್ದರು. ಅವರಿಗೆ ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆ ಆಗಬೇಕಿದೆ. ಇಲ್ಲದಿದ್ದರೇ ಪ್ರಾಣಾಪಾಯವಿದೆ ಎಂಬುದಾಗಿ ಹೈಕೋರ್ಟ್ ಗೆ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿ ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪುರಸ್ಕರಿಸಿದ್ದಂತ ಹೈಕೋರ್ಟ್ ನ್ಯಾಯಪೀಠವು ನಟ ದರ್ಶನ್ ಗೆ 6 ವಾರಗಳ ಕಾಲ ಮಧ್ಯಂತ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ನೀಡಿದ್ದಂತ ಜಾಮೀನಿನ ಹಿನ್ನಲೆಯಲ್ಲಿ ನಟ ದರ್ಶ್ ಅವರು ಬಳ್ಳಾರಿಯ ಹೈ ಸೆಕ್ಯೂರಿಟಿ ಸೆಲ್ ನಿಂದ ಹೊರ ಬಂದು, ಅಲ್ಲಿಂದ ಜೈಲಿನ ಬಿಡುಗಡೆಯ ಎಲ್ಲಾ ನಿಯಮಗಳನ್ನು ಪಾಲಿಸಿ, ಸಹಿ ಹಾಕಿದ ನಂತ್ರ, ಬಳ್ಳಾರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಹಲವು ತಿಂಗಳುಗಳ ಕಾಲ…
ಬೆಂಗಳೂರು: ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹಾಗೂ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷರಾದ ಸ್ಟಾರ್ ಚಂದ್ರು (ವೆಂಕಟರಮಣೆ ಗೌಡ) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವರಾದ ಶಿವರಾಜ್ ತಂಗಡಗಿ, ಕಡತ ಮಂಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಮನವಿ ಪಾತ್ರದಲ್ಲೇನಿದೆ? ನಾಡಿನ ಹಿರಿಯ ರಾಜಕೀಯ ನಾಯಕರು , ನಾಲ್ಕು ಸದನಗಳನ್ನು ಪ್ರತಿನಿಧಿಸಿ ಹಲವು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿ ಸರ್ವ ಹುದ್ದೆಗಳಿಗೂ ಭೂಷಣರಾಗಿ ದೇಶಕ್ಕೆ ಅದರಲ್ಲೂ ಕನ್ನಡ ನಾಡಿಗೆ ಹೆಮ್ಮೆಯ ಕಳಶ ಪ್ರಯಾರಾಗಿರುವ ಎಸ್.ಎಂ. ಕೃಷ್ಣ ಅವರಿಗೆ ಕರ್ನಾಟಕ ರಾಜ್ಯ ನಾಮಾಂಕಿತ ವಾಗಿ ಐವತ್ತು ವಸಂತಗಳನ್ನು ಪೂರೈಸಿ ಸುವರ್ಣ ಸಂಭ್ರಮದಲ್ಲಿರುವ ಶುಭ ಸಂಧರ್ಭದಲ್ಲಿ ಶ್ರೀಯುತರಿಗೆ ರಾಜ್ಯದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಮೂಲಕ…
31-10-2024 ನಾಳೆ ಕುಬೇರ ಪೂಜೆ ಮಾಡಲು ಸಾಧ್ಯವಾಗದವರು ಈ 1 ವಸ್ತುವನ್ನು ತಂದು ಪೂಜಾ ಕೋಣೆಯಲ್ಲಿ ಇರಿಸಿ. ಕೋಟಿಗಟ್ಟಲೆ ಹಣ ಹರಿದು ಬರಲಿದೆ. ಕೆಲವು ವರ್ಷಗಳ ಹಿಂದೆ ದೀಪಾವಳಿ ಎಂದರೆ ಕುಬೇರ ಪೂಜೆ ಮತ್ತು ಲಕ್ಷ್ಮಿ ಪೂಜೆ. ಉತ್ತರದವರು ದೀಪಾವಳಿಯಂದು ಭಗವಾನ್ ಕುಬೇರ ಮತ್ತು ಲಕ್ಷ್ಮಿಯನ್ನು ಪೂಜಿಸುತ್ತಾರೆ. ಆದರೆ ಈಗ ಈ ಆರಾಧನೆಗಳು ನಮ್ಮ ದೇಶದಲ್ಲೂ ಬಹಳ ಜನಪ್ರಿಯವಾಗಿವೆ. ನಮ್ಮ ಕರ್ನಾಟಕ ಕರುನಾಡಿನಲ್ಲೂ ದೀಪಾವಳಿಯ ಸಂಜೆ ಕುಬೇರನ ಪ್ರತಿಮೆ, ಕುಬೇರ ಭಾವಚಿತ್ರ, ಕುಬೇರ ನಾಣ್ಯ, ಕುಬೇರ ದೀಪ ಖರೀದಿಸಿ ಈ ಲಕ್ಷ್ಮೀ ಕುಬೇರ ಪೂಜೆಯನ್ನು ಮಾಡುತ್ತಿದ್ದಾರೆ. ತಪ್ಪಿಲ್ಲ. ಪೂಜೆ ಎಲ್ಲರಿಗೂ ಸಾಮಾನ್ಯ. ಇದನ್ನು ಅವರದು ಮತ್ತು ಅವರದು ಎಂದು ವಿಭಜಿಸಲು ಮನುಷ್ಯರಿಗೆ ಅಧಿಕಾರವಿಲ್ಲ. ದೀಪಾವಳಿ ಹಬ್ಬದ ಪುಣ್ಯಕಾಲ 30.10.2024 ತ್ರಯೋದಶಿ ಬುಧವಾರ ನೀರು ತುಂಬುವ ಹಬ್ಬ, ರಾತ್ರಿ ಚಂದ್ರೋದಯ ಕಾಲದಲ್ಲಿ ನರಕ ಚತುರ್ದಶಿ ಅಭ್ಯಂಜನ (ಚಂದ್ರೋದಯ ರಾತ್ರಿ 4.25) 31.10.2024 ಚತುರ್ದಶಿ ಗುರುವಾರ ನರಕ ಚತುರ್ದಶಿ, ಧನಲಕ್ಷ್ಮೀ ಪೂಜೆ. 1.11.2024 ಅಮಾವಾಸ್ಯೆ…
ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಾರಿಗೆ-ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಐರಾವತ ಕ್ಲಬ್ ಕ್ಲಾಸ್ 2.0 ಬಸ್ಸುಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ಕೆ ಎಸ್ ಆರ್ ಟಿಸಿ ಬಸ್ಸುಗಳು ಪ್ರಯಾಣಿಕರಿಗೆ ಹೈಟೆಕ್ ಸ್ಪರ್ಷದ ಅನುಭವ ನೀಡಲಿದೆ. ಹಾಗಾದ್ರೇ ಐರಾವತ ಕ್ಲಬ್ ಕ್ಲಾಸ್ 2.0 ಬಸ್ಸಿನ ವಿಶೇಷತೆ ಏನು.? ಲೋಕಾರ್ಪಣೆಗೊಂಡಂತ 20 ಬಸ್ಸುಗಳು ಎಲ್ಲಿಂದ ಎಲ್ಲಿಗೆ ಸಂಚರಿಸಲಿದ್ದಾವೆ ಎನ್ನುವ ಸಂಪೂರ್ಣ ಮಾಹಿತಿ ಮುಂದೆ ಓದಿ. ಇಂದು ಐರಾವತ ಕ್ಲಬ್ ಕ್ಲಾಸ್ 2.0 ಲೋಕಾರ್ಪಣೆಗೊಳಿಸಿದ ನಂತ್ರ ಸಿಎಂ ಸಿದ್ಧರಾಮಯ್ಯ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಪಘಾತಕ್ಕೆ ಒಳಪಟ್ಟು ಮೃತರಾದ 2 ಸಿಬ್ಬಂದಿಗಳ ಅವಲಂಭಿತರಿಗೆ ಸಾರಿಗೆ ಸುರಕ್ಷಾ ಪರಿಹಾರ ವಿಮಾ ಯೋಜನಡಿ ತಲಾ ರೂ.1 ಕೋಟಿ ಪರಿಹಾರ ಚೆಕ್ನ್ನು ಹಾಗೂ ಅಪಘಾತ ಹೊರತುಪಡಿಸಿ ಖಾಯಿಲೆ ಇತ್ಯಾದಿ ಕಾರಣಗಳಿಂದ ಮೃತರಾದ 5 ಸಿಬ್ಬಂದಿಗಳ ಅವಲಂಭಿತರಿಗೆ ಕುಟುಂಬ ಕಲ್ಯಾಣ ಯೋಜನೆ ಅಡಿ ತಲಾ ರೂ.10 ಲಕ್ಷಗಳ ಪರಿಹಾರ ಚೆಕ್ನ್ನು ವಿತರಿಸಿದರು. ಇಂದು, ಖಾಸಗಿ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ…
ಬೆಂಗಳೂರು: ರಾಜ್ಯ ಸರ್ಕಾರದಿಂದ 69 ಸಾದಕರಿಗೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ 50 ಜನ ಪುರುಷರು, 50 ಜನ ಮಹಿಳಾ ಸಾಧಕರಿಗೆ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಆ ಸಂಪೂರ್ಣ ಪಟ್ಟಿ ಮುಂದೆ ಓದಿ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಸರ್ಕಾರವು ಅನುಸರಿಸಿಕೊಂಡು ಬಂದಿರುತ್ತದೆ. ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 2024ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರ್ಕಾರವು ನಿರ್ಧರಿಸಿ ಎಂದಿದೆ. ಹೀಗಿದೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಜಾನಪದ ಇಮಾಮಸಾಬ ಎಂ ವಲ್ಲೆಪನವರ -ಧಾರವಾಡ ಅಶ್ವರಾಮಣ್ಣ – ಬಳ್ಳಾರಿ ಕುಮಾರಯ್ಯ – ಹಾಸನ ವೀರಭದ್ರಯ್ಯ – ಚಿಕ್ಕಬಳ್ಳಾಪುರ ನರಸಿಂಹಲು ( ಅಂಧ ಕಲಾವಿದ ) – ಬೀದರ್ ಬಸವರಾಜ ಸಂಗಪ್ಪ ಹಾರಿವಾಳ – ವಿಜಯಪುರ ಎಸ್ ಜಿ ಲಕ್ಷ್ಮೀ ದೇವಮ್ಮ –…
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 69 ಸಾಧಕರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ಹಂಚಿಕೊಂಡಂತ ಸಚಿವ ಶಿವರಾಜ್ ತಂಡರಗಿ ಅವರು, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 1 575 ಭೌತಿಕ ಅರ್ಜಿಗಳು ಬಂದಿದ್ದವು. ಇದಲ್ಲದೇ ಸೇವಾ ಸಿಂಧೂ ಮೂಲಕ 1309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಇವುಗಳನ್ನೆಲ್ಲಾ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅರ್ಹರ ಆಯ್ಕೆ ಮಾಡಲಾಗಿದೆ ಎಂದರು. 1. ಈ ಬಾರಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 2. ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿದ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ. 3. ಈ ವರ್ಷ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ-50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50…
ಬೆಂಗಳೂರು : ಅನೇಕ ಮಂದಿ ಹೆಣ್ಣು ಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಉಚಿತ ಪ್ರಯಾಣ ಬೇಡ ಎಂದು ಟ್ವೀಟ್ ಹಾಗೂ ಇ-ಮೇಲ್ ಮೂಲಕ ವಿಚಾರ ತಿಳಿಸುತ್ತಿದ್ದಾರೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ವಿಧಾನಸೌಧದ ಮುಂಭಾಗ ಬುಧವಾರ ಐರಾವತ ಕ್ಲಬ್ ಕ್ಲಾಸ್ 2.0 ನೂತನ ಬಸ್ಸುಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು, “ನಾವು ಹಣ ಕೊಡಲು ಮುಂದಾದರೂ, ಕಂಡಕ್ಟರ್ ಅವರು ಹಣ ತೆಗೆದುಕೊಳ್ಳುತ್ತಿಲ್ಲ ಎಂದು ಅನುಕೂಲ ಸ್ಥಿತಿಯಲ್ಲಿರುವ ಶೇ 5 ರಿಂದ 10 ರಷ್ಟು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಶೀಘ್ರದಲ್ಲಿ ಇದರ ಬಗ್ಗೆ ನಾನು ರಾಮಲಿಂಗಾರೆಡ್ಡಿ ಅವರ ಜತೆ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚೆ ನಡೆಸುತ್ತೇವೆ” ಎಂದರು. “ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕೆ ಎಸ್ ಆರ್ ಟಿ ಸಿ ಸಂಸ್ಥೆ ಹೆಸರು ಮಾಡಿದೆ. ಕಳೆದ ಒಂದು ವರ್ಷದಲ್ಲಿ 112 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಸಾಧನೆಗೆ ಸಂಸ್ಥೆಯ…
ಬೆಂಗಳೂರು: AWPO (Army Welfare Placement Organisation) ಮತ್ತು The Maven Cohort ಎಂಬ ಸಂಸ್ಥೆಯ ಸಹಯೋಗದೊಂದಿಗೆ ಭಾರತೀಯ ಸೇನೆಯ ಜೆ.ಸಿ.ಓ ರ್ಯಾಂಕ್ವರೆಗಿನ ಕೊನೆಯ ವರ್ಷದ ನಿವೃತ್ತಿಯಂಚಿನಲ್ಲಿರುವ ಸೈನಿಕರು ಹಾಗೂ ನಿವೃತ್ತ ಮಾಜಿ ಸೈನಿಕರುಗಳ ಕೇಂದ್ರ ಸರ್ಕಾರಿ ಉದ್ಯೋಗ ಮತ್ತು ಬ್ಯಾಂಕ್ ಉದ್ಯೋಗ ನೇಮಕಾತಿಗಾಗಿ ಪಾವತಿಯ ಮೇರೆಗೆ ಪೂರ್ವ ತಯಾರಿ ಆನ್ಲೈನ್ ತರಬೇತಿಗಳನ್ನು ನ.06 ರಿಂದ ಆಯೋಜಿಸುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜಾಲತಾಣ https://me-qr.com/ZIoLV2HS ದಲ್ಲಿ ನೋಂದಾಯಿಸಿಕೊಳ್ಳುವುದರ ಮೂಲಕ ಈ ಸುವರ್ಣವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ AWPO (Army Welfare Placement Organisation) ನ ಜಾಲತಾಣ ವನ್ನು ಸಂಪರ್ಕಿಸಬಹುದಾಗಿದೆ. https://kannadanewsnow.com/kannada/fir-lodged-against-builders-for-creating-fake-maps-in-bengaluru/ https://kannadanewsnow.com/kannada/good-news-for-ksrtc-passengers-cm-siddaramaiah-launches-airavata-club-class-2-0-buses/
ಬೆಂಗಳೂರು: ರಾಜರಾಜೇಶ್ವರಿ ನಗರ ವಲಯ ಮಲ್ಲತಹಳ್ಳಿ ವ್ಯಾಪ್ತಿಯಲ್ಲಿ ಪಾಲಿಕೆ ನೀಡಿರುವ ಸಕ್ಷೆಗೆ ವ್ಯತಿರಿಕ್ತವಾಗಿ ಸಕಲಿ ನಕ್ಷೆ ಸಿದ್ದಪಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವರ ಮೇಲೆ ಎಫ್.ಐಆರ್ ದಾಖಲಿಸಲಾಗಿದೆ ಎಂದು ವಲಯ ಆಯುಕ್ತರಾದ ಬಿ.ಸಿ ಸತೀಶ್ ರವರು ತಿಳಿಸಿದರು. ರಾಜರಾಜೇಶ್ವರಿ ನಗರ ಮಲ್ಲತಹಳ್ಳಿ ಗ್ರಾಮ ಸಂ: 6 ಮತ್ತು 7 ರ ಮಾಲೀಕರಾದ ಜಿ. ಲಕ್ಷ್ಮಿ ಪ್ರಸಾದ್ ಜಿ.ಪಿ.ಎ ಹೋಲ್ಡರ್ ಆದ ಮೇ|| ಲ್ಯಾಕ್ವೆನ್ ಡೆವಲಪರ್ಸ್ ಪಾಲುದಾರರಾದ ಶ್ರೀ. ಡಿ. ಹರ್ದೀಪ್ ಮತ್ತು ಎ, ವಿಜಯಕುಮಾರ್ ರವರಿಗೆ ಮಂಜೂನಾತಿ ನಕ್ಷೆಯನ್ನು ಪಿ.ಆರ್.ಜೆ ನಂ-3384/23-24, ದಿನಾಂಕ: 03/11/2023 ರಂದು ನೀಡಿಲಾಗಿದೆ. ಪಾಲಿಕೆಯು S+GF+1st+2nd+3rd + Tereace floor, ಬಿಲ್ಟ್ ಅಪ್ ಏರಿಯಾ-1388.69 ಚ.ಮೀ ಇರುತ್ತದೆ. ಆರೋಪಿಗಳು ಕಟ್ಟುತ್ತಿರುವ ಕಟ್ಟಡವನ್ನು ಪರಿಶೀಲಿಸಲಾಗಿದ್ದು, ಪಾಲಿಕೆ ನೀಡಿರುವ ಮಂಜೂರಾತಿ ನಕ್ಷೆಯಂತೆ ಕಟ್ಟಡ ನಿರ್ಮಿಸದಂತೆ ನಕಲಿ ನಕ್ಷೆ ತಯಾರಿಸಿಕೊಂಡು ನಗರ ಯೋಜನೆಯ ಸಹಾಯಕ ನಿರ್ದೇಶಕರು ಹೆಸರು ತಾಳೆಯಾಗದಂತೆ ಸ್ವಯಾಚ್ಛಾನುಸಾರ ಕಟ್ಟಡವನ್ನು ನಿರ್ಮಿಸುತ್ತಿರುತ್ತಾರೆ. ನಕಲಿ ನಕ್ಷೆಯಲ್ಲಿ 6 ಅಂತಸ್ತುಗಳನ್ನು ನಿರ್ಮಿಸಿದ್ದು, ಒಂದು ಅಂತಸ್ತಿಗೆ 4…
ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹೊಸ ಮೆಟ್ರೋ ಫೀಡರ್ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮಧಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣರಹಿತ ಸೇವೆಯಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ 04.11.2024 ರಿಂದ ಪರಿಚಯಿಸಲಾಗುತ್ತಿದೆ. ವಿವರ ಕೆಳಕಂಡಂತಿದೆ: ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸುಗಳ ಸಂಖ್ಯೆ/ಸುತ್ತುವಳಿ ಎಂಎಫ್-38 ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ಜವರೇಗೌಡನಗರ, ವಿ ಲೆಗ್ಗೆಸಿ ಕನ್ವೆನ್ಷನ್ ಹಾಲ್ ರಸ್ತೆ, ಡಿಸೋಜನಗರ, ನಾಯಂಡನಹಳ್ಳಿ. 01 ಬಸ್ಸು ಸದರಿ ಮಾರ್ಗದ ವೇಳಾಪಟ್ಟಿ ವಿವರಗಳು ಈ ಕೆಳಗಿನಂತಿದೆ. ಮಾರ್ಗ ಸಂಖ್ಯೆ ಎಂಎಫ್-38 ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ಬಿಡುವ ವೇಳೆ 7:40, 8:10, 8:40, 9:10, 9:40, 10:30, 16:15, 17:00, 17:30, 18:00, 18:30, 19:00,…













