Author: kannadanewsnow09

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಮನು ಭಾಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಭಾನುವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಫೈನಲ್ನಲ್ಲಿ ಭಾಕರ್ ಕಂಚಿನ ಪದಕ ಗೆದ್ದರು. ಪ್ರಧಾನಿ ಮೋದಿ ಅವರ ಗೆಲುವನ್ನು “ನಂಬಲಾಗದ ಸಾಧನೆ” ಎಂದು ಕರೆದರು. ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ನಲ್ಲಿ, ಪ್ರಧಾನಿ ಮೋದಿ, “ಐತಿಹಾಸಿಕ ಪದಕ! 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮನು ಭಾಕರ್ಗೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಅಭಿನಂದನೆಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್ನಲ್ಲಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಎಂದಿದ್ದಾರೆ. https://twitter.com/narendramodi/status/1817511901355721186 https://kannadanewsnow.com/kannada/https-kannadanewsnow-com-kannada-manu-bhaker-wins-bronze/ https://kannadanewsnow.com/kannada/itr-filling-can-the-tax-regime-change-by-july-31-what-do-the-income-tax-department-rules-say/

Read More

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ 10 ಮೀಟರ್ ಏರ್ ರೈಫಲ್ ಫೈನಲ್ಸ್ಗೆ ಭಾರತದ ಶೂಟರ್ ಅರ್ಜುನ್ ಬಬುಟಾ 630.1 ಅಂಕಗಳನ್ನು ಗಳಿಸಿ 7ನೇ ಸ್ಥಾನ ಪಡೆದಿದ್ದಾರೆ. ದುರದೃಷ್ಟವಶಾತ್, ಕಳೆದ ಸರಣಿಯಲ್ಲಿ ಸಂದೀಪ್ ಸಿಂಗ್ ಅವರ ಪ್ರಭಾವಶಾಲಿ ಪುನರಾಗಮನವು ಫೈನಲ್ನಲ್ಲಿ ಸ್ಥಾನ ಪಡೆಯಲು ಸಾಕಾಗಲಿಲ್ಲ, ಏಕೆಂದರೆ ಅವರು 629.3 ಅಂಕಗಳನ್ನು ಗಳಿಸಿ ಒಟ್ಟಾರೆ 12 ನೇ ಸ್ಥಾನ ಪಡೆದರು. https://twitter.com/sportwalkmedia/status/1817508772535050307 https://kannadanewsnow.com/kannada/manu-bhaker-wins-bronze/ https://kannadanewsnow.com/kannada/itr-filling-can-the-tax-regime-change-by-july-31-what-do-the-income-tax-department-rules-say/

Read More

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಪ್ಯಾರಿಸ್ ಒಲಂಪಿಕ್ಸ್ 2024ರಲ್ಲಿ ಭಾರತದ ಪದಕದ ಭೇಟೆ ಆರಂಭಗೊಂಡಿದೆ. ಮಹಿಳೆಯರ ಏರ್ ಪಿಸ್ತೂಲ್ 10 ಮೀಟರ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು. ನಂತರ ಮನು ಸರಣಿ 6 ರಲ್ಲಿ 10.1 ಮತ್ತು 10.3 ಅಂಕಗಳನ್ನು ಗಳಿಸಿದರು, ಒಟ್ಟು 221.7 ಕ್ಕೆ ತಲುಪಿದರು, ಇದು ಅವರ ಮೂರನೇ ಸ್ಥಾನ ಪಡೆದುಕೊಂಡರು. https://twitter.com/ANI/status/1817507317404914001 https://kannadanewsnow.com/kannada/home-minister-g-parameshwara-clarifies-that-goat-meat-and-not-dog-meat-came-to-bengaluru/ https://kannadanewsnow.com/kannada/itr-filling-can-the-tax-regime-change-by-july-31-what-do-the-income-tax-department-rules-say/

Read More

ದಾವಣಗೆರೆ: ಬೆಂಗಳೂರಿಗೆ ರಾಜಸ್ಥಾನದಿಂದ ರೈಲಿನ ಮೂಲಕ ಸರಬರಾಜು ಆಗಿರುವುದು ನಾಯಿ ಮಾಂಸವಲ್ಲ. ಅದು ಮೇಕೆ ಮಾಂಸ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನ ಮೂಲಕ ಬಂದಂತ ಮಾಂಸ ನಾಯಿಯದ್ದು ಎಂಬುದಾಗಿ ಆರೋಪಿಸಲಾಗಿತ್ತು. ಈ ಸಂಬಂಧ ಆರೋಗ್ಯ ಇಲಾಖೆಯಿಂದ ಮಾಂಸದ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪರೀಕ್ಷೆಯ ವರದಿ ಬಂದಿದೆ. ಅದರಲ್ಲಿ ಮೇಕೆ ಮಾಂಸ ಎಂಬುದಾಗಿ ತಿಳಿದು ಬಂದಿದೆ. ಆದರೇ ನಾಯಿ ಮಾಂಸ ಎಂಬುದಾಗಿ ಅನಾವಶ್ಯಕವಾಗಿ ದುರುದ್ದೇಶದಿಂದ ದೂರು ನೀಡಲಾಗಿದೆ ಅಂತ ಹೇಳಿದರು. ರಾಜಸ್ಥಾನದಿಂದ ವಾರಕ್ಕೊಮ್ಮೆ, 15 ದಿನಗಳಿಗೊಮ್ಮೆ ಈ ರೀತಿಯಾಗಿ ರೈಲಿನ ಮೂಲಕ ಮಾಂಸವನ್ನು ತರುತ್ತಾರೆ. ಹೀಗೆ ತಂದಂತ ಮಾಂಸವನ್ನು ಮಾರಾಟ ಮಾಡುವುದೇ ಅವರ ಪ್ರವೃತ್ತಿಯಾಗಿದೆ. ಆದರೇ ತಂದಿರೋದು ನಾಯಿಯ ಮಾಂಸವಲ್ಲ. ಅದು ಮೇಕೆಯದ್ದು ಎಂಬುದಾಗಿ ಲ್ಯಾಬ್ ರಿಪೋರ್ಟ್ ನಿಂದ ದೃಢಪಟ್ಟಿದೆ ಎಂದು ಸ್ಪಷ್ಟ ಪಡಿಸಿದರು. ಇದೇ ಸಂದರ್ಭದಲ್ಲಿ ಮುಡಾ ಹಗರಣದ ಬಗ್ಗೆ ಮಾತನಾಡಿದಂತ ಅವರು,…

Read More

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಟೇಬಲ್ ಟೆನಿಸ್ ಆಟಗಾರ್ತಿ ಶ್ರೀಜಾ ಅಕುಲಾ ಅವರು ಸ್ವೀಡನ್ನ ಕ್ರಿಸ್ಟಿನಾ ಕಾಲ್ಬರ್ಗ್ ವಿರುದ್ಧ 4-0 ಅಂತರದಿಂದ ನಿರ್ಣಾಯಕ ಗೆಲುವು ಸಾಧಿಸುವ ಮೂಲಕ 32ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಡಬ್ಲ್ಯುಟಿಟಿ ಸ್ಪರ್ಧಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಪ್ಯಾಡ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶ್ರೀಜಾ, ಸ್ವೀಡನ್ ವಿರುದ್ಧ 30 ನಿಮಿಷಗಳ ಪಂದ್ಯದಲ್ಲಿ 11-4, 11-9, 11-7 ಮತ್ತು 11-8 ಅಂಕಗಳಿಂದ ಗೆಲುವು ಸಾಧಿಸಿದರು. ಮೊದಲ ಸೆಟ್ ಅನ್ನು ಸುಲಭವಾಗಿ ತೆಗೆದುಕೊಳ್ಳಲು ಭಾರತೀಯರಿಗೆ ಸುಲಭವಾಗಿತ್ತು ಆದರೆ ಎರಡನೇ ಸೆಟ್ ನಲ್ಲಿ ಹೆಚ್ಚಿನ ಪ್ರತಿರೋಧವನ್ನು ಎದುರಿಸಬೇಕಾಯಿತು, ನಂತರದ ಸೆಟ್ ಗಳಲ್ಲಿಯೂ ಕಾಲ್ಬರ್ಗ್ ಅವರಿಗೆ ಸವಾಲು ಹಾಕಿದರು. ಮೂರನೇ ಸೆಟ್ ನಲ್ಲಿ ಶ್ರೀಜಾ 7-5ರಲ್ಲಿ ಸೋಲನುಭವಿಸಿ ಸೆಟ್ ಗೆಲ್ಲುವವರೆಗೂ ಇಬ್ಬರೂ ಆಟಗಾರರು ಪೈಪೋಟಿ ನಡೆಸಿದರು. ನಾಲ್ಕನೇ ಸೆಟ್ ನಲ್ಲಿ ಉತ್ತಮ ಆರಂಭ ಪಡೆದ ಶ್ರೀಜಾ 9-3ರ ಮುನ್ನಡೆ ಸಾಧಿಸಿದರು.…

Read More

ಬೆಂಗಳೂರು: ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾದ ಪರಿಣಾಮ, ಜುಲೈ.29ರ ನಾಳೆಯಿಂದ ಜುಲೈ.4ರವರೆಗೆ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಮಾಹಿತಿ ನೀಡಿದೆ. ಯಡಕುಮೇರಿ ನಡುವೆ ಭೂಕುಸಿತ ಸಂಭವಿಸಿದ ಕಾರಣ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಕಡಗರವಳ್ಳಿ ವಿಭಾಗ ಈ ಕೆಳಗಿನ ರೈಲುಗಳನ್ನು ರದ್ದುಪಡಿಸಲಾಗಿದೆ ಅಂತ ತಿಳಿಸಿದೆ. ಅಂದಹಾಗೇ ದಿನಾಂಕ 29-07-2024ರಂದು ಐದು ರೈಲುಗಳು, ದಿನಾಂಕ 30-07-2024ರಂದು 10 ರೈಲುಗಳು, ದಿನಾಂಕ 31-07-2024ರಂದು 10 ರೈಲುಗಳು, ದಿನಾಂಕ 01-08-2024ರಂದು 10 ರೈಲುಗಳು, ದಿನಾಂಕ 02-08-2024ರಂದು 10 ರೈಲುಗಳು, ದಿನಾಂಕ 03-08-2024ರಂದು 10 ರೈಲು ಹಾಗೂ ದಿನಾಂಕ 04-08-2024ರಂದು ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ದಿನಾಂಕ 29-07-2024ರಂದು ಈ ರೈಲುಗಳ ಸಂಚಾರ ರದ್ದು ರೈಲು ಸಂಖ್ಯೆ 16511 ಕೆ ಎಸ್ ಆರ್ ಬೆಂಗಳೂರು ಟು ಕಣ್ಣೂರು ರೈಲು ಸಂಖ್ಯೆ 16595 ಕೆ ಎಸ್ ಆರ್ ಬೆಂಗಳೂರು ಟು ಕಾರವಾರ ರೈಲು ಸಂಖ್ಯೆ 16585…

Read More

ಉತ್ತರ ಕನ್ನಡ: ಜಿಲ್ಲೆಯ ಕಾರವಾರದ ಅಂಕೋಲ ಬಳಿಯ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತಗೊಂಡು 13 ಜನರು ನಾಪತ್ತೆಯಾಗಿದ್ದರು. ಅವರಲ್ಲಿ ಈವರೆಗೆ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ಆದರೇ ಇನ್ನೂ ಮೂವರ ಮೃತದೇಹ ಪತ್ತೆಯಾಗಿರಲಿಲ್ಲ. ಇದರ ನಡುವೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣ ನಡೆದಿತ್ತು. ಈ ಘಟನೆಯಲ್ಲಿ 13 ಮಂದಿ ನಾಪತ್ತೆಯಾಗಿದ್ದರು. ಇವರಲ್ಲಿ 10 ಮಂದಿಯ ಮೃತದೇಹ ಪತ್ತೆಯಾಗಿತ್ತು. ಆದರೇ 13 ದಿನಗಳ ಇಂದಿನವರೆಗೂ ಮೂವರ ಮೃತದೇಹ ಪತ್ತೆಯಾಗಿಲ್ಲ. 13ನೇ ದಿನವಾದಂತ ಇಂದು ಬೆಳಿಗ್ಗೆಯಿಂದ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಿದರೂ ಮೂವರ ಬಗ್ಗೆ ಸಣ್ಣ ಸುಳಿವೂ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂಬುದಾಗಿ ಜಿಲ್ಲಾಡಳಿತದಿಂದ ಮಾಹಿತಿ ಹೊರ ಬಿದ್ದಿರೋದಾಗಿ ಹೇಳಲಾಗುತ್ತಿದೆ. https://kannadanewsnow.com/kannada/i-am-in-congress-party-not-in-government-mlc-bk-hariprasad/ https://kannadanewsnow.com/kannada/itr-filling-can-the-tax-regime-change-by-july-31-what-do-the-income-tax-department-rules-say/

Read More

ಬೆಂಗಳೂರು: “ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಕಷ್ಟಗಳನ್ನು ಆಲಿಸಬೇಕು ಹಾಗೂ ಅಗತ್ಯ ನೆರವುಗಳನ್ನು ಒದಗಿಸಿಕೊಡಬೇಕು” ಎಂದು ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಜಲ ಸಂಪನ್ಮೂಲ ಸಚಿವರೂ ಆಗಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಈ ವರ್ಷ ಭಾರಿ ಮಳೆಯಾಗುತ್ತಿದೆ ಮತ್ತು ಪ್ರವಾಹದಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿ ನೀರಿನ ಹೊರಹರಿವು ಹೆಚ್ಚಾದ ಪರಿಣಾಮ ನೆರೆ ಪರಿಸ್ಥಿತಿ ಎದುರಾಗಿದೆ. ನದಿ ಪಾತ್ರದ ಜನ, ಜಾನುವಾರು, ಆಸ್ತಿ, ಬೆಳೆಗಳಿಗೆ ಹಾನಿಗಳ ಬಗ್ಗೆ ವರದಿಯಾಗುತ್ತಿದೆ. ಇಂತಹ ಕಷ್ಟದ ಸಮಯದಲ್ಲಿ ಜನರ ಜೊತೆ ನಿಲ್ಲಬೇಕಿರುವುದು ನಮ್ಮ ಸರ್ಕಾರದ ಕರ್ತವ್ಯ. ಹೀಗಾಗಿ ಸಚಿವ ಸಹೋದ್ಯೋಗಿಗಳು ತಮ್ಮ ಕ್ಷೇತ್ರ ವ್ಯಾಪ್ತಿ ಹಾಗೂ ಇತರೆ ಪ್ರವಾಹಪೀಡಿತ ಪ್ರದೇಶಗಳ ಶಾಸಕರ ಸಂಪರ್ಕದೊಂದಿಗೆ ಭೇಟಿ ಕೊಟ್ಟು, ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಅವರ ನೆರವಿಗೆ ಧಾವಿಸಬೇಕಾಗಿ ಕೋರುತ್ತೇನೆ” ಎಂದು ಮನವಿ ಮಾಡಿದ್ದಾರೆ. “ವರುಣನ ಕೃಪೆಯಿಂದ ಉತ್ತಮ ಮಳೆಯಾಗುತ್ತಿದೆ. ಇದೇ ವೇಳೆ ಉಂಟಾಗಿರುವ ಅವಘಡಗಳಿಂದ ಜನರು…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ವೈದ್ಯಕೀಯ ಸಿಬ್ಬಂದಿಗಳ ಶ್ರೋಯೋಭಿವೃದ್ಧಿಗೆ ಬದ್ಧತೆಯ ನಡೆ ತೋರಿಸಿದೆ. ಅಲ್ಲದೇ ವೃತ್ತಿ ನಿರತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲಿನ ಹಿಂಸಾಚಾರ ತಡೆಗೆ ಮಸೂದೆ ಅಂಗೀಕರಿಸಿದೆ. ಹೀಗಾಗಿ ವೃತ್ತಿನಿರತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರೇ ಶಿಕ್ಷೆ ಫಿಕ್ಸ್ ಆದ್ರೇ, ಭಾರೀ ದಂಡವನ್ನೂ ವಿಧಿಸಲಾಗುತ್ತದೆ. ಹೌದು. ವೃತ್ತಿಪರ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಿಂಸಾಚಾರ, ಹಲ್ಲೆ, ಅಪಮಾನ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ನಿಂದನೆ ಮಾಡಿದ್ದಲ್ಲಿ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ, ₹25 ಸಾವಿರದಿಂದ ₹2 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಹಾಗೂ ವೃತ್ತಿಪರ ವೈದ್ಯರಿಗೆ ನೋಂದಣಿ ಕಡ್ಡಾಯ ಮಾಡುವ ಮಹತ್ವದ ಮಸೂದೆಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ. ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ನಕಲಿ ವೈದ್ಯ ವೃತ್ತಿಯಲ್ಲಿ ತೊಡಗಿರುವವರಿಗೆ ₹10 ಸಾವಿರದಿಂದ ₹1 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಈ ಮೂಲಕ…

Read More

ಬೆಂಗಳೂರು: ಇಂದು ಬೆಂಗಳೂರಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಂತ ಆರೋಪದಡಿ ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿತ್ತು. ಆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಅವರಿಗೆ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ. ಬೆಂಗಳೂರಿನ ಕಾಟನ್ ಪೇಟೆ ಠಾಣೆಯ ಪೊಲೀಸರು ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಂತ ಆರೋಪದಡಿ ಬಂಧಿಸಿದ್ದರು. ಆ ಬಳಿಕ ಅವರನ್ನು ಬೆಂಗಳೂರಿನ 5ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿಗಳು ಪುನೀತ್ ಕೆರೆಹಳ್ಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೇ ಸೋಮವಾರದಂದು ಜಾಮೀನು ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಜೈಲುಪಾಲಾಗಿದ್ದಾರೆ. https://kannadanewsnow.com/kannada/chitradurga-traditional-rituals-are-like-ornaments-of-the-past-says-dr-shivakumar/ https://kannadanewsnow.com/kannada/ssc-cgl-2024-job-seekers-this-is-your-last-chance-apply-now-for-17000-vacancies/

Read More