Author: kannadanewsnow09

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರದ ಖಾಸಗಿ ಶಾಲೆಯೊಂದರಲ್ಲಿ ಶಾಲಾ ಕ್ರೀಡಾಕೂಟದ ವೇಳೆಯಲ್ಲಿ ವಿದ್ಯುತ್ ಶಾಕ್ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದರೇ, 13 ಮಂದಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಈ ಕುರಿತಂತೆ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ದಿನಾಂಕ: 10.022024ರ ಇಂದು ಮಧ್ಯಾಹ್ನ ಸುಮಾರು 2.00 ಗಂಟೆ ಸಮಯದಲ್ಲಿ ಗೌರಿಬಿದನೂರು ನಗರದ ಶ್ರೀ ರಾಮಕೃಷ್ಣ ಶಾರದದೇವಿ ವಿದ್ಯಾಮಂದಿರ ಶಾಲೆಯಲ್ಲಿ ಈ ದಿನ ಶಾಲಾ ಮಕ್ಕಳ ಪೋಷಕರಿಗೆ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಮೈದಾನದಲ್ಲಿ ಪೆಂಡಾಲ್ ಹಾಕಿ ಚೇರ್ ಹಾಕಿದ್ದು ಮಧ್ಯಾಹ್ನ ಕ್ರೀಡೆಗಳು ನಡೆಯುತ್ತಿದ್ದಾಗ ಏಕಾ ಏಕಿ ಸುಂಟರ ಗಾಳಿ ಬೀಸಿದ್ದ ಕಾರಣ ಶಾಲೆಯ ಆವರಣದ ಮೇಲ್ಬಾಗದಲ್ಲಿ ಹಾದು ಹೋಗಿದ್ದು 66 ಕೆ.ವಿ ವಿದ್ಯುತ್ ಲೈನ್ ಗೆ ಪೆಂಡಾಲ್ ಟಚ್ ಆಗಿದೆ. ಹಾರಿಹೋಗುತ್ತಿದ್ದ ಪೆಂಡಾಲ್ ಹಿಡಿಯಲು ಹೋದ ಶಿಕ್ಷಕರು, ಮಕ್ಕಳು, ಪೋಷಕರು ಸೇರಿ 18 ಜನರಿಗೆ ವಿದ್ಯುತ್ ಶಾಕ್ ನಿಂದ ಗಾಯಗಳಾಗಿರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆ ಹಾಗೂ…

Read More

ಶಿವಮೊಗ್ಗ: ಯಕ್ಷಗಾನ ಪ್ರಿಯರಿಗೆ ಸಂತಸದ ಸುದ್ದಿ ಎನ್ನುವಂತೆ ನಾಳೆ ಸಂಜೆ 7 ಗಂಟೆಗೆ ಸಾಗರದ ಗಾಂಧಿ ಮೈದಾನದಲ್ಲಿ ಮಾಗಧ ಕೃಷ್ಣ ಅಭಿಮನ್ಯು ಎಂಬಂತ ಪೌರಾಣಿಕ ಯಕ್ಷಗಾನ ಆಯೋಜಿಸಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಸಂಘಟಕರಾದಂತ ಸುದ್ದಿಸಾಗರ ಉಮೇಶ್ ಮೊಗವೀರ ಅವರು, ನಾಳೆ ಮೆಕ್ಕೆಕಟ್ಟು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಾಗಧ ಕೃಷ್ಣ ಅಭಿಮನ್ಯು ಎಂಬ ಪೌರಾಣಿಕ ಯಕ್ಷಗಾನವನ್ನು ಸಾಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ನಾಳೆ ಸಂಜೆ 7 ಗಂಟೆಯಿಂದ ಯಕ್ಷಗಾನ ಪ್ರಾರಂಭವಾಗಲಿದೆ. ಈ ಯಕ್ಷಗಾನದಲ್ಲಿ ಅತಿಥಿ ಕಲಾವಿದರಾಗಿ ಗಾನ ಕೋಗಿಲಿ ಸುಬ್ರಹ್ಮಣ್ಯ ಧಾರೇಶ್ವರ, ಗೋಪಾಲ ಆಚಾರ್ಯ ತೀರ್ಥಹಳ್ಳಿ, ಮಲೆನಾಡಿನ ಕುವರ ಭಾಸ್ಕರ್ ತುಂಬ್ರಿಯವರು ಭಾಗಿಯಾಗಲಿದ್ದಾರೆ. ಇವರಿಗೆ ಸನ್ಮಾನ ಕಾರ್ಯಕ್ರಮ ಕೂಡ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಯಕ್ಷಗಾನ ಕಾರ್ಯಕ್ರಮಕ್ಕೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಮೇಶ್ ಮೊಗವೀರ -8317369016, ನಾಗರಾಜ್ ಹೊಳೆಕೊಪ್ಪ -9449147023 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. https://kannadanewsnow.com/kannada/note-deputy-cm-dk-shivakumar-will-not-be-available-for-public-interview-from-tomorrow-till-february-23/ https://kannadanewsnow.com/kannada/good-news-for-state-contractual-outsourced-employees-equal-work-equal-pay-to-be-implemented/

Read More

ಬೆಂಗಳೂರು : ಬಜೆಟ್ ಅಧಿವೇಶನ, ಪಕ್ಷದ ಸಮಾವೇಶ, ಕುಟುಂಬ ಕಾರ್ಯಕ್ರಮ ನಿಮಿತ್ತ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಫೆಬ್ರವರಿ 11 ರಿಂದ ಫೆ. 23 ರವರೆಗೆ ಸಾರ್ವಜನಿಕರ ಸಂದರ್ಶನಕ್ಕೆ ಲಭ್ಯವಿರುವುದಿಲ್ಲ. ಫೆ. 11ರಂದು ಕುಟುಂಬದಲ್ಲಿ ಮದುವೆ ಕಾರ್ಯಕ್ರಮ, 12 ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ, ಫೆ. 13 ಅಧಿವೇಶನ, ಫೆ. 14 ರಂದು ಲೋಕಸಭೆ ಚುನಾವಣೆ ತಯಾರಿ ಸಭೆ, ಫೆ. 15 ರಂದು ರಾಜ್ಯಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಮತ್ತು ಕುಟುಂಬದಲ್ಲಿ ವಿವಾಹ ಕಾರ್ಯಕ್ರಮ, ಫೆ. 16 ರಂದು ಲೂನವಾಲದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ ಸಭೆ, ಫೆ. 17 ಮಂಗಳೂರಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ, ಫೆ. 18 ರಂದು “ಬಾಗಿಲಿಗೆ ಬಂತು ಸರಕಾರ” ಕಾರ್ಯಕ್ರಮ ಹಾಗೂ ಮಂಗಳೂರಲ್ಲಿ ಕರ್ನಾಟಕ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮ, ಫೆ. 23 ರವರೆಗೆ ವಿಧಾನ ಮಂಡಲ ಅಧಿವೇಶನ ಇರುವುದರಿಂದ ಈ ದಿನಗಳಲ್ಲಿ ಸಾರ್ವಜನಿಕರ ಸಂದರ್ಶನಕ್ಕೆ ಲಭ್ಯ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಈ…

Read More

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಸಾರಿಗೆ ಸಂಸ್ಥೆಗಳಲ್ಲಿ ಒಂದು ಕೆಎಸ್ಆರ್ ಟಿಸಿಯಾಗಿದೆ. ಈಗಾಗಲೇ ಪ್ರಯಾಣಿಕ ಸ್ನೇಹಿಯಾದಂತ ಸೇವೆಗೆ ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇಂತಹ ಕೆಎಸ್ಆರ್ ಟಿಸಿಗೆ ಈಗ ಸ್ಕಾಚ್ನ 2 ರಾಷ್ಟ್ರೀಯ ಪ್ರಶಸ್ತಿಯ ಗರಿಮೆ ಲಭಿಸಿದೆ. ಈ ಕುರಿತಂತೆ ನಿಗಮದಿಂದ ಮಾಹಿತಿ ಹಂಚಿಕೊಂಡಿದ್ದು,  ಕರಾರಸಾ ನಿಗಮಕ್ಕೆ ಕಾರ್ಮಿಕ ಕಲ್ಯಾಣ ಉಪಕ್ರಮ ಮತ್ತು ಶಕ್ತಿ ಯೋಜನೆಗಳಿಗೆ ಸ್ಕಾಚ್‌ ನ 2 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ ಎಂದಿದೆ. ದೆಹಲಿ ಮೂಲದ ಸ್ಕ್ವಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು,ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡುತ್ತದೆ ಎಂದು ತಿಳಿಸಿದೆ. ಇಂದು ಸ್ಕಾಚ್ ಸಂಸ್ಥೆಯು…

Read More

ಬೆಂಗಳೂರು: ಮೇಕೆದಾಟು ಪಾದಯಾತ್ರೆ ವೇಳೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಕೋರ್ಟ್ ಗೆ ನಿರಂತರವಾಗಿ ಗೈರಾಗಿದ್ದರ ಹಿನ್ನಲೆಯಲ್ಲಿ, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆಯನ್ನು ನಡೆಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿಯೇ ಪಾದಯಾತ್ರೆ ಮಾಡಿದ್ದಂತ ಕಾಂಗ್ರೆಸ್ ನಾಯಕರ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಇದೇ ರೀತಿಯಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿರುದ್ಧವೂ ದೂರು ದಾಖಲಾಗಿತ್ತು. ಈ ಸಂಬಂಧ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಗೆ ಅವರು ಹಾಜರಾಗದೇ ನಿರಂತರವಾಗಿ ಗೈರಾಗಿದ್ದರು. ಪೊಲೀಸರ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಬಳಿಕ ಕೋರ್ಟ್ ನಿಂದ ಸಮನ್ಸ್ ಜಾರಿಯಾಗಿತ್ತು. ಆದರೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೋರ್ಟ್ ವಿಚಾರಣೆ ಹಾಜರಾಗಿರಲಿಲ್ಲ. ಈ ಹಿನ್ನಲೆಯಲ್ಲಿ ರಾಮಲಿಂಗಾರೆಡ್ಡಿ ವಿರುದ್ಧ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರಾದಂತ ಜೆ.ಪ್ರೀತಂ ಅವರು ಜಾಮೀನು ರಹಿತ…

Read More

ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಸಾಲದ ಸಮಸ್ಯೆಗಳು ಹೆಚ್ಚಾಗಿ ಇದ್ದರೆ ಮನೆಯಲ್ಲಿ ಈ ಒಂದು ಮರದ ಬೇರಿನ ಕಟ್ಟಿಗೆಯನ್ನು ಇಟ್ಟು ನೋಡಿ. ಮನೆಯಲ್ಲಿ ಈ ಒಂದು ಬೇರಿನ ಕಡ್ಡಿ ಇದ್ದರೆ ಸಾಕು ಈ ಕಡ್ಡಿಗೆ ವಿಶೇಷವಾದ ದೇವ ಶಕ್ತಿ ಇದೆ ಈ ಕಡ್ಡಿಯನ್ನು ಮನೆಯಲ್ಲಿ ಇಟ್ಟಿದ್ದೆ ಆದಲ್ಲಿ ಯಾವುದೇ ದೋಷಗಳು ಇದ್ದರೂ ಕೂಡ ಸಮಯದಲ್ಲಿ ಕಳೆಯುತ್ತದೆ ಮುಖ್ಯವಾಗಿ ವಾಸ್ತು ದೋಷ ದಾರಿದ್ರ್ಯಾ ಕಳೆಯುತ್ತದೆ ವಾಸ್ತು ದೋಷ ಮನೆಯಲ್ಲಿ ಇಲ್ಲ ಎಂದರೆ ಮನೆಯಲ್ಲಿ ಇರುವ ಸದಸ್ಯರಿಗೆ ಅಭಿವೃದ್ಧಿ ಆಗುತ್ತದೆ ಹಣ ಕಾಸಿನ ವಿಚಾರದಲ್ಲಿ ಆಗಿರಬಹುದು ಅಥವಾ ಪ್ರತಿಯೊಂದು ಕೆಲಸದಲ್ಲಿ ಕೂಡ ಯಶಸ್ಸು ಸಿಗುವುದು ಆಗಿರಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ವಿದ್ವಾನ್ ವಿದ್ಯಾಧರ್ ತಂತ್ರಿ 9686268564 ಈ ಮರದ ಬೇರಿನ ಈ ಕಡ್ಡಿಗೆ ಇರುವ ವಿಶೇಷ…

Read More

ಬೆಂಗಳೂರು: ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ಕುರಿತು ಐಸಿಎಂಆರ್ ಜೊತೆ ಚರ್ಚೆ ನಡೆಸಲಾಗಿದ್ದು, ವ್ಯಾಕ್ಸಿನ್ ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಉಡುಪಿಯಲ್ಲಿ ಇಂದು ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು. ಮಳೆಗಾಲ ಆರಂಭ ಮತ್ತು ಅಂತ್ಯದಲ್ಲಿ ಮಂಗನ ಕಾಯಿಲೆ ಹೆಚ್ಚಳವಾಗುತ್ತದೆ.‌ ಮಾರ್ಚ್ ವರೆಗೆ ಜನ ಬಹಳ ಎಚ್ಚರಿಕೆಯಿಂದ ಇರಬೇಕು. ಲಕ್ಷಣಗಳು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.‌ ಮಂಗನ ಕಾಯಿಲೆಗೆ ಎಬಿಎಆರ್ ಕೆ ಫಂಡ್ ನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ಈಗಾಗಲೇ ಸೂಚಿಸಲಾಗಿದೆ. ಅಲ್ಲದೇ ಕೆ.ಎಫ್.ಡಿ ಪಾಸಿಟಿವ್ ಬಂದವರನ್ನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ರಾಜ್ಯದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಒಟ್ಟು 70 ಕೆಎಫ್ ಡಿ ಪ್ರಕರಣ ದಾಖಲಾಗಿವೆ. ಹಲವರು ಚಿಕಿತ್ಸೆ…

Read More

ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್-10ರಲ್ಲಿ ಭಾಗಿಯಾಗಿ, ಹವಾ ಕ್ರಿಯೇಟ್ ಮಾಡಿದ್ದಂತ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ವರ್ತೂರು ಠಾಣೆಯ ಎಸ್ಐ ತಿಮ್ಮರಾಯಪ್ಪ ಸನ್ಮಾನಿಸಿದ್ದರು. ಅವರನ್ನು ಇಂದು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ, ಬಿಗ್ ಬಾಸ್ ಮನೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದರು. ಹುಲಿಯುಗುರು ಪ್ರಕರಣದಲ್ಲೂ ಆರೋಪಿಯಾಗಿ, ಜಾಮೀನು ಪಡೆದು ಹೊರ ಬಂದಿದ್ದರು. ಇಂತಹ ಅವರನ್ನು ವರ್ತೂರು ಠಾಣೆಯ ಎಸ್ಐ ತಿಮ್ಮರಾಯಪ್ಪ ಅವರು ಸಮವಸ್ತ್ರದಲ್ಲೇ ಸನ್ಮಾನಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಠಾಣೆಯ ಎಸ್ಐ ಅಲ್ಲದೇ ಅವರೊಂದಿಗೆ ಸಿಬ್ಬಂದಿಗಳು ಕೂಡ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಬೆನ್ನಲ್ಲೇ ವರ್ತೂರು ಠಾಣೆಯ ಎಸ್ಐ ತಿಮ್ಮರಾಯಪ್ಪ ಅವರನ್ನು ಆಡುಗೋಡಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ, ಆದೇಶಿಸಿಲಾಗಿದೆ. https://kannadanewsnow.com/kannada/lok-sabha-adjourned-sine-die-as-budget-session-concludes/ https://kannadanewsnow.com/kannada/namo-hatric-anurag/

Read More

ನವದೆಹಲಿ: ಇಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿದರು. ಈ ಭಾಷಣದ ಬಳಿಕ, 17ನೇ ಲೋಕಸಭೆಗೆ ಅಧಿಕೃತವಾಗಿ ತೆರೆಯನ್ನು ಎಳೆಯಲಾಗಿದೆ. ಈ ಮೂಲಕ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು. ಕಳೆದ ಐದು ವರ್ಷಗಳ ಆಡಳಿತದ ಅವಧಿಯನ್ನು “ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ”ಯನ್ನು ಭಾರತ ಕಂಡಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ವ್ಯಾಖ್ಯಾನಿಸಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು 17ನೇ ಲೋಕಸಭೆಯ ಅಂತಿಮ ಅಧಿವೇಶನದ ಅಂತಿಮ ದಿನದಂದು ಸಂಸತ್ತಿನಲ್ಲಿ ಮಾತನಾಡಿದಂತ ಅವರು, ಈ ಐದು ವರ್ಷಗಳು ದೇಶದಲ್ಲಿ ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆಯ ಬಗ್ಗೆ ಇದ್ದವು. ಸುಧಾರಣೆ ಮತ್ತು ಕಾರ್ಯಕ್ಷಮತೆ ಎರಡೂ ನಡೆಯುವುದು ಬಹಳ ಅಪರೂಪ ಮತ್ತು ನಾವು ನಮ್ಮ ಕಣ್ಣ ಮುಂದೆಯೇ ಪರಿವರ್ತನೆಯನ್ನು ನೋಡಬಹುದು ಎಂದು ಹೇಳಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಪ್ರಧಾನಿ ಮೋದಿ ಕೃತಜ್ಞತೆ ನೀವು ಯಾವಾಗಲೂ ನಗುತ್ತಿದ್ದಿರಿ. ನಿಮ್ಮ ನಗು ಎಂದಿಗೂ ಮರೆಯಾಗಲಿಲ್ಲ. ನೀವು ಈ ಸದನಕ್ಕೆ ಹಲವಾರು ಸಂದರ್ಭಗಳಲ್ಲಿ ಸಮತೋಲಿತ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ಮಾರ್ಗದರ್ಶನ…

Read More

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League -IPL) 2024 ರ ಮುಂಬರುವ ಆವೃತ್ತಿಗೆ ವೇಗಿ ಮಾರ್ಕ್ ವುಡ್ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಶಮರ್ ಜೋಸೆಫ್ ( Shamar Joseph ) ಅವರನ್ನು ಹೆಸರಿಸಿದೆ. 68 ರನ್ಗಳಿಗೆ 7 ವಿಕೆಟ್ ಪಡೆಯುವ ಮೂಲಕ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದ ಜೋಸೆಫ್, ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ವಿಜಯಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದರು, ಅವರು ಎಲ್ಎಸ್ಜಿಗೆ 3 ಕೋಟಿ ರೂ.ಗೆ ಸೇರಲಿದ್ದಾರೆ ಎಂದು ಲಕ್ನೋ ಸೂಪರ್ ಜೈಂಟ್ಸ್ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ಬರೆದಿದೆ. ಬ್ರಿಸ್ಬೇನ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಮಿಚೆಲ್ ಸ್ಟಾರ್ಕ್ ಯಾರ್ಕರ್ನಿಂದ ಕಾಲ್ಬೆರಳಿಗೆ ಗಾಯವಾಗಿದ್ದರೂ ಜೋಸೆಫ್ ಉತ್ತಮ ಪ್ರದರ್ಶನ ನೀಡಿದರು. ಅವರು 68 ರನ್ಗಳಿಗೆ ಏಳು ವಿಕೆಟ್ಗಳನ್ನು ಪಡೆದರು, ಇದರಲ್ಲಿ ಹತ್ತು ಓವರ್ಗಳ ಸೆಷನ್ನಲ್ಲಿ ಆರು ವಿಕೆಟ್ ಸಾಧನೆಯೂ ಸೇರಿದೆ, ಇದು ಆಟದ ವೇಗವನ್ನು ಗಮನಾರ್ಹವಾಗಿ ಬದಲಾಯಿಸಿತು. ಇದು ಐಪಿಎಲ್ನಲ್ಲಿ ಜೋಸೆಫ್ ಅವರ ಮೊದಲ…

Read More