Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಇನ್ಮುಂದೆ ಕರ್ನಾಟಕದಲ್ಲಿ ತಯಾರಾಗುವ ಮತ್ತು ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಬಳಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಾಹಿತಿ ಹಂಚಿಕೊಂಡಿದ್ದು, ಭಾಷೆಯು ನೆಲದ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಒಂದು ಭಾಷೆ ಬೆಳವಣಿಗೆಯಾಗಬೇಕಾದರೆ ಆ ನೆಲದಲ್ಲಿನ ಉತ್ಪಾದನೆ, ಮಾರುಕಟ್ಟೆ, ವ್ಯವಹಾರಗಳು ಸ್ಥಳೀಯ ಭಾಷೆಯಲ್ಲಿರಬೇಕು. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ನ್ನು ದಿನಾಂಕ: 12.03.2024 ರಿಂದ ಜಾರಿಗೆ ತಂದಿರುತ್ತದೆ ಎಂದು ಹೇಳಿದ್ದಾರೆ. ಸದರಿ ಅಧಿನಿಯಮದ ಕಲಂ 17 (7)ರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಎಲ್ಲಾ ಕೈಗಾರಿಕೆ ಮತ್ತು ಗ್ರಾಹಕ ಉತ್ಪನ್ನಗಳ ಮೇಲೆ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಇತರೆ ಭಾಷೆಗಳ ಜೊತೆಗೆ ಕನ್ನಡದಲ್ಲಿ ಇರತಕ್ಕದ್ದೆಂದು ಸೂಚಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. https://twitter.com/KarnatakaVarthe/status/1895838155070488851…
ಮಂಡ್ಯ : ಟಾಟಾ ನಿಕ್ಸಾನ್ ಕಾರಿಗೆ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ವಿ.ಮನು (36) ಎಂಬುವವರು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪ ಬೋರಾಪುರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಪತ್ರಕರ್ತೆ ಹರವು ಸ್ಪೂರ್ತಿ ಅವರ ಪತಿ, ಕೆ.ಎಂ.ದೊಡ್ಡಿ ವೆಂಕಟೇಶ್ ಅವರ ಪುತ್ರ ಬೆಂಗಳೂರಿನ ಖಾಸಗಿ ಕಂಪೆನಿಯ ಸಾಪ್ಟ್ ವೇರ್ ಇಂಜಿನಿಯರ್ ವಿ.ಮನು ಮೃತ ವ್ಯಕ್ತಿ. ಶನಿವಾರ ಬೆಂಗಳೂರಿನಿಂದ ಸ್ವಗ್ರಾಮ ಕೆ..ಎಂ.ದೊಡ್ಡಿಗೆ ಮೃತ ವ್ಯಕ್ತಿ ವಿ.ಮನು ಟಾಟಾ ನಿಕ್ಸಾನ್ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾಗ ಮಳವಳ್ಳಿಯಿಂದ ಕೆ.ಎಂ.ದೊಡ್ಡಿ ಮಾರ್ಗ ಮದ್ದೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಬಸ್ ನ ಮುಂಬದಿಯ ಚಕ್ರ ಪಂಕ್ಚರ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ವಿ.ಮನು ಅವರನ್ನು ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಮಿಮ್ಸ್ ಗೆ…
ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ. ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು: ಇಂದ್ರ-ಪೂರ್ವ, ಕುಬೇರ-ಉತ್ತರ, ಯಮ-ದಕ್ಷಿಣ, ವರುಣ-ಪಶ್ಚಿಮ, ಈಶಾನ (ಶಿವ)- ಈಶಾನ್ಯ, ಅಗ್ನಿ-ಆಗ್ನೇಯ, ವಾಯು-ವಾಯುವ್ಯ, ನಿರುಋುತಿ(ರಾಕ್ಷಸ)- ನೈಋುತ್ಯ. ಇಂದ್ರ: ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿಧಿದೇವತೆ. ಐರಾವತ ಇವನ ವಾಹನ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ. ಅಗ್ನಿ: ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ. ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಧಿಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ. ಅಗ್ನಿಯು ಪೃಥ್ವಿಗೆ ಅಧಿಧಿಪತಿಯಾದ ದೇವತೆ ಎಂದೂ ಪ್ರಸಿದ್ಧ. ಯಮ: ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ ಮೃತ್ಯುದೇವತೆ. ಕಾಲಪುರುಷ ಎಂತಲೂ…
ನವದೆಹಲಿ: ದೇಶದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು (Foreign Exchange Management Act -FEMA) ಉಲ್ಲಂಘಿಸಿದ ಆರೋಪದ ಮೇಲೆ ಭಾರತದ ಹಣಕಾಸು ಅಪರಾಧ ಹೋರಾಟ ಸಂಸ್ಥೆಯಿಂದ ಭಾರತದ ಪೇಟಿಎಂಗೆ ಶನಿವಾರ ಶೋಕಾಸ್ ನೋಟಿಸ್ ನೀಡಲಾಗಿದೆ. 2015 ರಿಂದ 2019 ರವರೆಗೆ ಲಿಟಲ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಮತ್ತು ನಿಯರ್ಬೈ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಎರಡು ಅಂಗಸಂಸ್ಥೆಗಳ ಸ್ವಾಧೀನಕ್ಕೆ ಸಂಬಂಧಿಸಿದ ಉಲ್ಲಂಘನೆಗಳಿಗೆ ನೋಟಿಸ್ ಸಂಬಂಧಿಸಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಈ ನೋಟಿಸ್ ತನ್ನ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ತನ್ನ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪೇಟಿಎಂ ಹೇಳಿದೆ. https://kannadanewsnow.com/kannada/cm-siddaramaiah-announces-world-class-film-city-to-be-built-in-mysuru/ https://kannadanewsnow.com/kannada/private-caste-census-to-know-real-number-of-veerashaivas-lingayats-minister-ishwar-khandre/
ಬೆಂಗಳೂರು: ವಿಶ್ವದರ್ಜೆಯ ಫಿಲ್ಮ್ ಸಿಟಿ ಮೈಸೂರಿನಲ್ಲಿ ನಿರ್ಮಿಸುತ್ತೇವೆ. ಇದಕ್ಕಾಗಿ ಈಗಾಗಲೇ 150 ಎಕರೆ ಜಾಗವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನ ಸಂಭ್ರಮದ ಕಾರ್ಯಕ್ರಮದಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಚಿತ್ರೋತ್ಸವ ವಿಶ್ವ ಸಮುದಾಯದ ಸಂಸ್ಕೃತಿಯ ಪ್ರತಿಬಿಂಬ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು. ಕರ್ನಾಟಕವೇ ಒಂದು ಜಗತ್ತು. ಇಲ್ಲಿ ಎಲ್ಲ ಅವಕಾಶಗಳನ್ನು ಸೃಷ್ಟಿಸಬಹುದು. ಇದಕ್ಕಾಗಿ ವಿಶ್ವ ದರ್ಜೆಯ ಅತ್ಯುನ್ನತ ಗುಣಮಟ್ಟದ ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿ ನಿರ್ಮಿಸುತ್ತಿದ್ದೇವೆ. ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಸೆಯುವ ಸಿನಿಮಾಗಳನ್ನು ವಿಶ್ವದರ್ಜೆ ಗುಣಮಟ್ಟದಲ್ಲಿ ಇಲ್ಲಿ ನಿರ್ಮಾಣ ಆಗಬೇಕು ಎಂದು ಆಶಿಸಿದರು. ನಮ್ಮಲ್ಲಿ ಅಸಹನೆ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಅಸಂತೋಷ ಹೆಚ್ಚುತ್ತಿದೆ. ಸಂಪತ್ತಿನ ಅಸಮಾನ ಹಂಚಿಕೆ ಈ ಅಸಂತೋಷಕ್ಕೆ ಕಾರಣ. ದೇಶದ 1% ಜನರ ಕೈಯಲ್ಲಿ ದೇಶದ 50% ಸಂಪತ್ತು ಸೇರಿಕೊಂಡಿದೆ. ಸಂಪತ್ತಿನ ಈ ವಿಪರೀತ ಅಸಮಾನ ಹಂಚಿಕೆ ಸಮಾಜದಲ್ಲಿ ಅಸಂತೋಷ ಹೆಚ್ಚುತ್ತಿದೆ. ಇದಕ್ಕೆ ಕಲಾ…
ಬೆಂಗಳೂರು: ಮುಂಬರುವಂತ ರಾಜ್ಯ ಆರೋಗ್ಯ ಇಲಾಖೆಯ ಶುಶ್ರೂಷಕರ ನೇಮಕಾತಿ ಸಂದರ್ಭದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಎನ್ ಹೆಚ್ ಎಂ ನೌಕರರಿಗೆ ಕೃಪಾಂಕ ನೀಡಲಾಗುತ್ತದೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ಈ ಮೂಲಕ ಎನ್ ಹೆಚ್ ಎಂ ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದಂತ ನೌಕರರ ಪ್ರತಿಭನಾ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆಯನ್ನು ಆಲಿಸಿದರು. ಆ ಬಳಿಕ ಮಾತನಾಡಿದಂತ ಅವರು, NHM ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ನಡೆಯುತ್ತಿದ್ದು, ವೇತನ ಹೆಚ್ಚಳ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಮುಮೋದನೆ ಪಡೆಯಬೇಕಾಗುತ್ತದೆ.. ಈ ನಿಟ್ಟಿನಲ್ಲಿ ಮಾರ್ಚ್ 10 ರಂದು ಸಭೆ ನಡೆಸಿ, ಸರ್ಕಾರ ತನ್ನ ನಿಲುವು ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಇನ್ನು ನರ್ಸ್ ನೇಮಕಾತಿ ವೇಳೆ NHM ಅಡಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೃಪಾಂಕ ನೀಡುವ ಮೂಲಕ ಆದ್ಯತೆ ನೀಡಲಾಗುವುದು. ಅಲ್ಲದೇ ಅಂತರ್ಜಿಲ್ಲಾ ವರ್ಗಾವಣೆಗೆ ಒಂದು ಬಾರಿ…
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಧಾನಸೌಧದ ಆವರಣದಲ್ಲಿ ಚಾಲನೆ ನೀಡಿದರು. ದೀಪ ಬೆಳಗಿಸುವ ಮೂಲಕ ಚಿತ್ರೋತ್ಸವಕ್ಕೆ ಸಿಎಂ ಚಾರನೆ ನೀಡಿದರು. ಇಂದು ವಿಧಾನಸೌಧದ ಆವರಣದಲ್ಲಿ ಸಿಎಂ ಸಿದ್ಧರಾಮಯ್ಯ ಅವರು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಇಂದಿನಿಂದ 8 ದಿನಗಳ ಕಾಲ ಚಲನಚಿತ್ರೋತ್ಸವ ನಡೆಯಲಿದೆ. 60ಕ್ಕೂ ಹೆಚ್ಚು ವಿದೇಶಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದಾವೆ. ಸಿಎಂ ಸಿದ್ಧರಾಮಯ್ಯ ಅವರು ವಿಧಾನಸೌಧದ ಆವರಣದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೇ, ನಟ ಶಿವರಾಜ್ ಕುಮಾರ್ ಚಲನಚಿತ್ರೋತ್ಸವದ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆಜೆ ಜಾರ್ಜ್, ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲಾ, ನಟ ಶಿವರಾಜ್ ಕುಮಾರ್, ರಾಯಭಾರಿ ಕಿಶೋರ್ ಕುಮಾರ್, MLC ನಜೀರ್ ಅಹಮದ್, ಗೋವಿಂದ್ ರಾಜ್, ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹಮದ್, ಉಮಾಶ್ರೀ, ಸೌತ್ ನಟಿ ಪ್ರಿಯಾಂಕಾ ಮೋಹನ್ ಸೇರಿದಂತೆ ಇತರರು…
ಬೆಳಗಾವಿ: ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಟ್ರೈಲರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, 20 ಜನರಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಕಪ್ಪಲುಗುದ್ದಿಯ ಸಮೀಪದಲ್ಲಿ ಟ್ರ್ಯಾಕ್ಟರ್ ಟ್ರೈಲರ್ ಪಲ್ಟಿಯಾಗಿದೆ. ಬಬಲಾದಿ ಜಾತ್ರೆಗೆ ತೆರಳಿ ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಟ್ರ್ಟಾಕ್ಟರ್ ನಲ್ಲಿ ತೆರಳುತ್ತಿದ್ದಂತ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರೈಲರ್ ಪಲ್ಟಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ರಾಯಭಾಗ ತಾಲ್ಲೂಕಿನ ಮಂಟೂರ ಗ್ರಾಮದವರು ಎಂಬುದಾಗಿ ಹೇಳಲಾಗುತ್ತಿದೆ. ಇದಲ್ಲದೇ ಈ ಅಪಘಾತದಲ್ಲಿ 20 ಜನರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಹಾರೋಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/two-maoists-killed-in-bastar-encounter/ https://kannadanewsnow.com/kannada/european-allies-canada-back-zelenskys-verbal-spat-with-trump-trump-zelensky/
ನವದೆಹಲಿ: ತೆಲಂಗಾಣ ಗಡಿಗೆ ಸಮೀಪವಿರುವ ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಕಾಡುಗಳಲ್ಲಿ ಶನಿವಾರ ಬೆಳಿಗ್ಗೆ ಮಹಿಳೆ ಸೇರಿದಂತೆ ಇಬ್ಬರು ಮಾವೋವಾದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಕ್ಮಾ ಜಿಲ್ಲಾ ಕೇಂದ್ರದಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ತೆಲಂಗಾಣ ಗಡಿಯ ಬಳಿಯ ಟೆಟೆಮಡ್ಗು ಮತ್ತು ರಸಪಲ್ಲಿ ಕಾಡುಗಳಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಎನ್ಕೌಂಟರ್ ಪ್ರಾರಂಭವಾಯಿತು. ಈ ಪ್ರದೇಶದಲ್ಲಿ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಶುಕ್ರವಾರ ಸಂಜೆ ಬಂಡಾಯ ವಿರೋಧಿ ಕಾರ್ಯಾಚರಣೆ ನಡೆಸಿದವು. ಪೊಲೀಸರು ಅಡಗುತಾಣದಿಂದ ದೇಶೀಯ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ಮಾವೋವಾದಿ ಸಾಹಿತ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸುಕ್ಮಾದ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ) ನ ಹನ್ನೆರಡು ತಂಡಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ನ ಗಣ್ಯ ಘಟಕವಾದ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ನ ಎರಡು ತಂಡಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. “ಇಬ್ಬರು ಮಾವೋವಾದಿಗಳನ್ನು – ಒಬ್ಬ ಪುರುಷ ಮತ್ತು…
ತುಮಕೂರು : ಸರ್ವೋನ್ನತ ನ್ಯಾಯಾಲಯಕ್ಕೆ ಡಿಮ್ಡ್ ಅರಣ್ಯ ಕುರಿತಂತೆ 2022ರಲ್ಲಿ ಸಲ್ಲಿಸಲಾಗಿರುವ ಪ್ರಮಾಣಪತ್ರದಲ್ಲಿರುವ ಎಲ್ಲ ಪರಿಭಾವಿತ ಅರಣ್ಯದ ಜಂಟಿ ಸರ್ವೆ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ತುಮಕೂರಿನಲ್ಲಿಂದು ಹಾಸನ ವೃತ್ತದ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಬಾಕಿ ಇರುವ ಜಂಟಿ ಸರ್ವೆ ನಡೆಸಲು ಮತ್ತು ಈಗಾಗಲೇ ಜಂಟಿ ಸರ್ವೆ ಪೂರ್ಣಗೊಂಡಿರುವ ಸರ್ವೆ ನಂಬರ್ ಗಳ ನಕ್ಷೆ ನೀಡುವಂತೆ ಉಪ ವಿಭಾಗಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಲು ಸೂಚಿಸಿದರು. ಕಂದಾಯ ಇಲಾಖೆಯವರು ಸರ್ವೆ ಮಾಡುತ್ತಿಲ್ಲ ಎಂದು ನೆಪ ಹೇಳದೆ, ಜಂಟಿ ಸರ್ವೆಗೆ ನಿಯಮಾನುಸಾರ ಅರ್ಜಿ ಸಲ್ಲಿಸಲು ಮತ್ತು ಜಿಲ್ಲಾಧಿಕಾರಿಯವರಿಗೆ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಈ ಸಂಬಂಧ ಲಿಖಿತ ಮನವಿ ಸಲ್ಲಿಸಿ ಆದಷ್ಟು ಶೀಘ್ರ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದರು. ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ದೀರ್ಘ ಕಾಲದಿಂದ ಬಾಕಿ ಇರುವ ಅರಣ್ಯ ಅಪರಾಧ,…