Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯೊಂದಿಗೆ ಶಿಕ್ಷ ಕೋಪೈಲಟ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಚಿವ ಮಧು ಬಂಗಾರಪ್ಪ ತಿಳಿಸಿದರು. ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ, ಅವರು ಶಿಕ್ಷ ಕೋಪೈಲಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು ಸ್ಥಳೀಯ ಪಠ್ಯಕ್ರಮ, ಭಾಷೆ ಮತ್ತು ಸಂದರ್ಭವನ್ನು ಆಧರಿಸಿ ಸಮಗ್ರ ಬೋಧನಾ ಸಂಪನ್ಮೂಲಗಳು ಮತ್ತು ಕಲಿಕೆಯ ಅನುಭವಗಳನ್ನು ರಚಿಸಲು ಶಿಕ್ಷ ಕೋಪೈಲಟ್ ಯೋಜನೆ ಶಿಕ್ಷಕರನ್ನು ಸಶಕ್ತಗೊಳಿಸುತ್ತದೆ. ಕರ್ನಾಟಕ ರಾಜ್ಯದ ನಗರ ಮತ್ತು ಗ್ರಾಮೀಣ ಭಾಗಗಳ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಲ್ಲಿ 750ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಂದ ಆಯ್ದ 1000 ಶಿಕ್ಷಕರಿಗೆ ಶಿಕ್ಷ ಕೋಪೈಲಟ್ -AI ಚಾಲಿತ ಡಿಜಿಟಲ್ ಸಹಾಯವನ್ನು ನೀಡಲಾಗುವುದು ಎಂದು ತಿಳಿಸಿದರು. ಶಿಕ್ಷಣ ಕೋಪೈಲಟ್ ಉತ್ತಮ ಗುಣಮಟ್ಟದ ವೈಯಕ್ತೀಕರಿಸಿದ ವಿಷಯವನ್ನು ರಚಿಸಲು ಶಿಕ್ಷಕರನ್ನು…
ನವದೆಹಲಿ: ಬಾರ್ & ಬೆಂಚ್ನ ವರದಿಯ ಪ್ರಕಾರ, ಸುಪ್ರೀಂ ಕೋರ್ಟ್ ಈಗಾಗಲೇ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದೆ ಮತ್ತು ಎಲ್ಲಾ ಸುಪ್ರೀಂ ಕೋರ್ಟ್ ಪೀಠಗಳಿಂದ ಕಲಾಪಗಳನ್ನು ನೇರ ಪ್ರಸಾರ ಮಾಡುವ ಅಪ್ಲಿಕೇಶನ್ ಈಗಾಗಲೇ ಪರೀಕ್ಷೆಯಲ್ಲಿದೆ. ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠದ ಅಡಿಯಲ್ಲಿನ ವಿಚಾರಣೆಗಳನ್ನು 2022 ರಿಂದ ನೇರ ಪ್ರಸಾರ ಮಾಡಲಾಗಿದ್ದರೂ, ಹೊಸ ಕ್ರಮವು ಜಾರಿಗೆ ಬಂದಾಗ, ದೈನಂದಿನ ವಿಚಾರಣೆಗಳನ್ನು ನೇರ ಪ್ರಸಾರ ಮಾಡುವ ಮೊದಲ ನಿದರ್ಶನವನ್ನು ಸೂಚಿಸುತ್ತದೆ. ಆದಾಗ್ಯೂ, ಸೈಬರ್ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ಸುಮಾರು ಒಂದು ತಿಂಗಳ ಹಿಂದೆ, ಸುಪ್ರೀಂ ಕೋರ್ಟ್ನ ಯೂಟ್ಯೂಬ್ ಚಾನೆಲ್ ಅನ್ನು ಹ್ಯಾಕ್ ಮಾಡಲಾಯಿತು ಮತ್ತು ಯುಎಸ್ ಮೂಲದ ಕಂಪನಿ ರಿಪ್ಪಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಕ್ರಿಪ್ಟೋಕರೆನ್ಸಿಯನ್ನು ಉತ್ತೇಜಿಸುವ ವೀಡಿಯೊಗಳನ್ನು ತೋರಿಸಲಾಯಿತು. https://kannadanewsnow.com/kannada/nandini-idli-and-dosa-ready-flour-to-hit-the-market-soon/ https://kannadanewsnow.com/kannada/to-the-attention-of-senior-citizens-of-bengaluru-call-this-number-for-free-legal-advice/
ಬೆಂಗಳೂರು: ನಗರದಲ್ಲಿನ ಹಿರಿಯ ನಾಗರೀಕರಿಗೆ ನೆರವಾಗೋದಕ್ಕೆ ಸಹಾಯವಾಣಿ ಸಂಖ್ಯೆ ಆರಂಭಿಸಲಾಗಿದೆ. ಈ ಸಹಾಯವಾಣಿ ಸಂಖ್ಯೆಗೆ ಹಿರಿಯ ನಾಗರೀಕರು ಕರೆ ಮಾಡಿ ತಮ್ಮ ಸಮಸ್ಯೆ, ದೂರು ಸಲ್ಲಿಸಬಹುದು. ಅಲ್ಲದೇ ಕಾನೂನು ಸಲಹೆ ಬೇಕಿದ್ದರೂ ಕೋರಬಹುದಾಗಿದೆ. ಅಂತವರಿಗೆ ಕಾನೂನು ಸಲಹೆ ಉಚಿತವಾಗಿ ನೀಡಲಾಗುತ್ತದೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಗರ ಪೊಲೀಸ್ ಹಾಗೂ ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಜಂಟಿ ಸಹಯೋಗದಲ್ಲಿ ಕಳೆದ 22 ವರ್ಷಗಳಿಂದ ಹಿರಿಯರ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದೆ ಎಂದಿದೆ. ಹಿರಿಯರ ಸಹಾಯವಾಣಿ ಪೊಲೀಸ್ ಆಯುಕ್ತರ ಕಛೇರಿಯ ಕಮಾಂಡ್ ಸೆಂಟರ್ ವಿಭಾಗದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕಾನೂನಿಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳು ಇದ್ದರೆ, ಪ್ರತಿ ಶನಿವಾರ ಮಧ್ಯಾಹ್ನ 2.30 ಗಂಟೆಯಿಂದ ಸಂಜೆ 4.30 ಗಂಟೆಯ ವರೆಗೆ ಉಚಿತ ಕಾನೂನು ಸಲಹೆಯನ್ನು ನುರಿತ ವಕೀಲರಿಂದ ನೀಡಲಾಗುತ್ತಿದೆ ಎಂದು ಹೇಳಿದೆ. ಹಿರಿಯ ನಾಗರಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ.…
ಬೆಂಗಳೂರು: ನಗರದಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಹಿನ್ನಲೆಯಲ್ಲಿ, ಬೆಂಗಳೂರಿನ ಕೆಲ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರು ಕವಿಪ್ರನಿನಿ ವತಿಯಿಂದ 66/11 ಕೆ.ವಿ. ರಾಜರಾಜೇಶ್ವರಿ ನಗರ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ಜಯನಗರ ವಿಭಾಗದ ದ18ನೇ ಉಪವಿಭಾಗದ ಈ ಪ್ರದೇಶಗಳಾದ ಮ್ಯೆಲಸಂದ್ರ, ಐಡಿಯಲ್ ಹೋಮ್ಸ್, ಉತ್ತರಹಳ್ಳಿ, ಸಚ್ಚಿದಾನಂದ ನಗರ, ವಡ್ಡರ ಪಾಳ್ಯ, ಗಾಮಕಲ್ಲು, ಬೆಮ್ಎಲ್ ಲೇಔಟ್, ಬಿಹೆಚ್ ಸಿಎಸ್ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ದಿನಾಂಕ.19-10-2024 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 5.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಿದೆ. ದಿನಾಂಕ 19.10.2024 (ಶನಿವಾರ) ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 01:00 ಗಂಟೆಯವರೆಗೆ 66/11ಕೆ.ವಿ ಬ್ರಿಗೇಡ್ ಮೆಟ್ರೋಪೋಲಿಸ್’ ಸ್ಟೇಷನ್ ನಲ್ಲಿ 31.5 ಎಮ್.ವಿ.ಎ ಶಕ್ತಿ ಪರಿವರ್ತಕ-01 ರ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ…
ಬೆಂಗಳೂರು: ನಂದಿನಿ ಉತ್ಪನ್ನಗಳನ್ನು ಬಳಕೆ ಮಾಡುತ್ತಿರುವವರಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರದಲ್ಲೇ ಗ್ರಾಹಕ ಸ್ನೇಹಿಯಾಗಿ ಮಾರುಕಟ್ಟೆಗೆ ನಂದಿನಿ ಇಡ್ಲಿ ಮತ್ತು ದೋಸೆ ಸಿದ್ಧ ಹಿಟ್ಟು ಬರಲಿದೆ. ಹೌದು… ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿಯೇ ಇಡ್ಲಿ, ದೋಸೆಯ ಸಿದ್ಧ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಉತ್ಪನ್ನ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಇಡ್ಲಿ ಮತ್ತು ದೋಸೆಯ ಸಿದ್ಧ ಹಿಟ್ಟಿನ ದರಕ್ಕಿಂತ ಕಡಿಮೆ ಬೆಲೆಗೆ ನಂದಿನಿ ಬ್ರ್ಯಾಂಡ್ನ ಇಡ್ಲಿ ಮತ್ತು ದೋಸೆಯ ಹಿಟ್ಟು ಗ್ರಾಹಕರಿಗೆ ಸಿಗಲಿದೆ. https://twitter.com/KarnatakaVarthe/status/1847179460149497971 https://kannadanewsnow.com/kannada/good-news-for-those-going-home-for-diwali-these-special-trains-will-be-a-traffic-arrangement/ https://kannadanewsnow.com/kannada/pm-modi-to-visit-russia-on-october-22-23-to-attend-brics-summit/
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 22-23 ರಿಂದ ರಷ್ಯಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಂತೆ ವಿಸ್ತರಿಸಿರುವ ಬ್ರಿಕ್ಸ್ ಅನ್ನು ಜಾಗತಿಕ ರಾಜಕೀಯ ಮತ್ತು ವ್ಯಾಪಾರದಲ್ಲಿ ಪಶ್ಚಿಮಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿ ನಿರ್ಮಿಸಲು ಪುಟಿನ್ ಉತ್ಸುಕರಾಗಿದ್ದಾರೆ. https://kannadanewsnow.com/kannada/man-arrested-for-issuing-bomb-threats-to-schools-colleges-in-bengaluru/ https://kannadanewsnow.com/kannada/good-news-for-those-going-home-for-diwali-these-special-trains-will-be-a-traffic-arrangement/
ಬೆಂಗಳೂರು: ದೀಪವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ನೈರುತ್ಯ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್ ನೀಡಿದೆ. ಅದೇ ದೀಪಾವಳಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲಗಳ ಸಂಚಾರದ ವ್ಯವಸ್ಥೆ ಮಾಡಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆ ಇಲಾಖೆಯು ಮಾಹಿತಿ ಹಂಚಿಕೊಂಡಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸುವ ಸಲುವಾಗಿ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಕಾರವಾರ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ. ವಿವರಗಳು ಈ ಕೆಳಗಿನಂತಿವೆ: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಾರವಾರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (06597/98) ರೈಲು ಸಂಚಾರ ರೈಲು ಸಂಖ್ಯೆ 06597 ಅಕ್ಟೋಬರ್ 30, 2024 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿರುವ ಈ ರೈಲು ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ…
ಬೆಂಗಳೂರು; ಬಹುತೇಕರು ಆನ್ ಲೈನ್ ಮೂಲಕ ವಸ್ತುಗಳನ್ನು ಮನೆಯಲ್ಲೇ ಕುಳಿತು ಖರೀದಿಸೋರೇ ಹೆಚ್ಚು. ಆದರೇ ನೀವು ಹೀಗೆ ಖರೀದಿಸುತ್ತಾ ಇದ್ದರೇ, ಸ್ವಲ್ಪ ಜಾಗ್ರತೆ ವಹಿಸಬೇಕಿದೆ. ಯಾಕೆಂದ್ರ ನಕಲಿ ಐಟಿ, ಡ್ರೈವ್ ಕ್ರಿಯೇಟ್ ಮಾಡಿ ವಂಚಿಸುವವಂತ ವಂಚಕರಿದ್ದಾರೆ. ಆ ಬಗ್ಗೆ ಮುಂದೆ ಓದಿ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ:23/07/2024 ರಂದು ಲಕ್ಕಸಂದ್ರ ವಾಸಿಯಾದ ಪಿರಾದುದಾರರು ಆಗ್ನಿಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದಿಯವರು Smart Shift Logistics Solutions Pvt Ltd. ಎಂಬ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಪಿರಾದಿಯವರಿಗೆ ಅಪರಿಚಿತರು ಪಿರಾದುದಾರರ ಕಂಪನಿಯ ಅಪ್ಲಿಕೇಷನ್ ಆದ PORTER ಎಂಬ ಆಪ್ಲಿಕೇಷನ್ನನ್ನು ಬಳಸಿಕೊಂಡು ಫೇಕ್ ಕಸ್ಟಮರ್ ಐಡಿ ಹಾಗೂ ಫೇಕ್ ಡ್ರೈವರ್ ಐಡಿಗಳನ್ನು ಕ್ರಿಯೇಟ್ ಮಾಡಿರುತ್ತಾರೆ. ಈ ರೀತಿ ಫೇಕ್ ಐಡಿ ಬಳಸಿಕೊಂಡು, ಫೇಕ್ ಡ್ರೈವರ್ಗಳನ್ನು ಸೆಲೆಕ್ಟ್ ಮಾಡಿಕೊಂಡು, Geo Spoofing ಬಳಸಿಕೊಂಡು ದೂರದ ಸ್ಥಳಗಳಿಗೆ ಆರ್ಡರ್…
ಬೆಂಗಳೂರು: ನಗರದ ಹಲವು ಕಾಲೇಜುಗಳಿಗೆ ಬಾಂಬ್ ಇರಿಸಲಾಗಿದೆ ಎಂಬುದಾಗಿ ಬೆದರಿಕೆಯ ಇ-ಮೇಲ್ ಕಳುಹಿಸಲಾಗಿತ್ತು. ಆ ಬಳಿಕ ಕಾಲೇಜುಗಳಲ್ಲಿ ಪರಿಶೀಲಿಸಲಾಗಿ, ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದಾಗಿ ಪೊಲೀಸರು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಕಾಲೇಜುಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮುಖಾಂತರ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ಓರ್ವ ವ್ಯಕ್ತಿಯ ಬಂಧಿಸಲಾಗಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ದಿನಾಂಕ:04/10/2024 ರಂದು ವಿ.ವಿ.ಪುರಂ ಠಾಣಾ ಸರಹದ್ದಿನಲ್ಲಿರುವ ಬೆಂಗಳೂರು ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ (ಬಿ.ಐ.ಟಿ) ಕಾಲೇಜಿನ ಪ್ರಾಂಶುಪಾಲರು ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:04/10/2024 ರಂದು ಕಾಲೇಜಿನ ಆವರಣದಲ್ಲಿ ಹೈಡೋಜನ್ ಆಧಾರಿತ ಸುಧಾರಿತ ಐಇಡಿ ಗಳನ್ನು ಇಟ್ಟಿರುವುದಾಗಿ ಇ-ಮೇಲ್ ಐಡಿ s_ve sekr@hotmail.com ನಿಂದ ಬೆದರಿಕೆಯ ಇ ಮೇಲ್ ಸಂದೇಶವೊಂದು ಬಂದಿದ್ದು, ಈ ಕುರಿತು ಇ-ಮೇಲ್ ಕಳುಹಿಸಿರುವ ವ್ಯಕ್ತಿಯನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದಿದ್ದಾರೆ. ಇದೇ ಪ್ರಕಾರ ದಿನಾಂಕ:04/10/2024…
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency -NTA) ಜಂಟಿ ಪ್ರವೇಶ ಪರೀಕ್ಷೆ ಮೇನ್ 2025 ರಲ್ಲಿ ( Joint Entrance Examination (JEE) Main 2025 ) ಮಹತ್ವದ ಬದಲಾವಣೆಯನ್ನು ಘೋಷಿಸಿದೆ. 2025 ರಿಂದ, ಎಂಜಿನಿಯರಿಂಗ್ (ಬಿಇ / ಬಿಟೆಕ್, ಪೇಪರ್ 1) ಮತ್ತು ಆರ್ಕಿಟೆಕ್ಚರ್ / ಪ್ಲಾನಿಂಗ್ (ಬಿಆರ್ಕ್ / ಬಿಪ್ಲಾನಿಂಗ್, ಪೇಪರ್ 2) ಎರಡಕ್ಕೂ ಪರೀಕ್ಷಾ ಪತ್ರಿಕೆಗಳ ವಿಭಾಗ ಬಿ ಇನ್ನು ಮುಂದೆ ಐಚ್ಛಿಕ ಪ್ರಶ್ನೆಗಳನ್ನು ಒಳಗೊಂಡಿರುವುದಿಲ್ಲ. ಇದು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಶೈಕ್ಷಣಿಕ ಸವಾಲುಗಳಿಗೆ ಅನುಗುಣವಾಗಿ 2021 ರಲ್ಲಿ ಪರಿಚಯಿಸಲಾದ ವೈಶಿಷ್ಟ್ಯವಾಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ, ಅಭ್ಯರ್ಥಿಗಳು ವಿಭಾಗ ಬಿ ಯಲ್ಲಿ ಹತ್ತು ಪ್ರಶ್ನೆಗಳಲ್ಲಿ ಐದನ್ನು ಆಯ್ಕೆ ಮಾಡಬಹುದಾಗಿತ್ತು, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಾದ್ಯಂತ ಒಟ್ಟು 90 ಪ್ರಶ್ನೆಗಳು ಹರಡಿದ್ದವು. ಆದಾಗ್ಯೂ, 2025 ರ ಪರೀಕ್ಷೆಯು ಮೂಲ ಮಾದರಿಗೆ ಮರಳುತ್ತದೆ. ಅಲ್ಲಿ ಪ್ರತಿ ವಿಷಯವು 25 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಎಲ್ಲಾ ಮೂರು…













