Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ. ವಿಪಕ್ಷಗಳ ಗದ್ದಲ ಕೋಲಾಹರದ ಕಾರಣ ಸ್ಪೀಕರ್ ಈ ಕ್ರಮ ಕೈಗೊಂಡಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಂಸದೀಯ ಲಾಗ್ಜಾಮ್ ಮುಂದುವರಿಯಿತು, ಮೊದಲನೆಯದು ಅಷ್ಟೇನೂ ಕಾರ್ಯನಿರ್ವಹಿಸಲಿಲ್ಲ. ಬೆಳಿಗ್ಗೆ 11 ಗಂಟೆಗೆ ಕಲಾಪಗಳು ಪ್ರಾರಂಭವಾದ ಕೂಡಲೇ ಸಂಸತ್ತಿನ ಕೆಳಮನೆಯನ್ನು 12 ರವರೆಗೆ ಮುಂದೂಡಲಾಯಿತು. ಸದನ ಪುನರಾರಂಭಗೊಂಡ ನಂತರ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಬೇಕಾಯಿತು ಮತ್ತು ಈಗ ಅದನ್ನು ಮಧ್ಯಾಹ್ನ 3 ರವರೆಗೆ ಮುಂದೂಡಲಾಗಿದೆ. ಏತನ್ಮಧ್ಯೆ, ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಐಎನ್ಡಿಐಎ ನಡುವೆ ಜಟಾಪಟಿ ನಡೆಯಿತು. ಮೊದಲನೆಯದು ಸೊರೊಸ್-ಕಾಂಗ್ರೆಸ್ ಸಂಪರ್ಕದ ಬಗ್ಗೆ ಚರ್ಚೆಗೆ ಒತ್ತಾಯಿಸಿತು ಮತ್ತು ಎರಡನೆಯದು ಅದಾನಿ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿತು. ಈ ಅಡೆತಡೆಯನ್ನು ನಿವಾರಿಸಲು ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ಸದನದ ನಾಯಕ ಮತ್ತು ವಿರೋಧ ಪಕ್ಷದ ನಾಯಕರಾದ ಜೆ.ಪಿ.ನಡ್ಡಾ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಕೊಠಡಿಗಳಿಗೆ…
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಬಾಣಸವಾಡಿ ಸ್ಟೇಷನ್ ನಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 10.12.2024 (ಮಂಗಳವಾರ) ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 05:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. “ಹೊರಮಾವು ಪಿ&ಟಿ ಲೇಔಟ್, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಆರಶಿರ್ವಾದ್ ಕಾಲೋನಿ, ಜ್ಯೋತಿನಗರ, ಗರ, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಲೇಔಟ್, ಕೋಕೋನಟ್ ಗ್ರೋವ್, ದೇವಮತ ಶಾಳೆ, ಅಮರ್ಗೀಜೆನ್ಸಿ, ವಿಜಯ ಬ್ಯಾಂಕ್ ಕಾಲೋನಿ, ಹೆಚ್.ಆರ್.ಬಿ.ಆರ್. ಲೇಔಟ್, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣ ನಗರ, ಬಿಡಬ್ಲ್ಯೂ ಎಸ್.ಎಸ್.ಬಿ. ವಾಟರ್ ಟ್ಯಾಂಕ್, ಹೆಣ್ಣೂರು ಗ್ರಾಮ, ಚಳ್ಳಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಜಾನಕೀರಾಮ್ ಲೇಔಟ್, ಬಿ.ಡಿ.ಎಸ್. ಗಾರ್ಡನ್, ಸತ್ಯಎನ್ ಕ್ಲೇವ್, ಪ್ರಕೃತಿ ಲೇಔಟ್ ಹೊಯ್ಸಸಳನಗರ, ಬೃಂದಾವನ ಲೇಔಟ್, ವಿನಾಯಕ ಲೇಔಟ್, ವಿವೇಕಾನಂದ ಲೇಔಟ್, ಮಂಜುನಾಥ್ ನಗರ ರಸ್ತೆ, ಎನ್.ಆರ್.ಐ ಲೇಔಟ್, ರಿಚಸ್ ಗಾರ್ಡನ್, ಸುಂದರಾಂಜನೇಯ ದೇವಸ್ಥಾನ, ಡಬಲ್ರಸ್ತೆ,…
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವಂತ ಅನೇಕ ಶಿಕ್ಷಕರು ಬಡ್ತಿ ನಿರೀಕ್ಷೆಯಲ್ಲಿದ್ದಾರೆ. ಅವರೆಲ್ಲರನ್ನು ಶೀಘ್ರವೇ ಬಡ್ತಿಗೊಳಿಸಿ ಆದೇಶಿಸಲಾಗುತ್ತದೆ ಎಂಬುದಾಗಿ ಶಾಲಾ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಭರವಸೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರೌಢ ಶಾಲಾ ಸಹ ಶಿಕ್ಷಕರ ಬಡ್ತಿಗಾಗಿ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಮೊದಲು ತಾತ್ಕಾಲಿಕ ಪಟ್ಟಿ ಪ್ರಕಟಿಸಿ, ಅದಕ್ಕೆ ಸ್ವೀಕಾರವಾಗುವಂತ ಆಕ್ಷೇಪಗಳನ್ನು ಸರಿಪಡಿಸಿದ ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸುವುದಾಗಿ ಹೇಳಿದರು. ಶಿಕ್ಷಣ ಇಲಾಖೆಯಿಂದ ಈಗಾಗಲೇ 2013ನೇ ಸಾಲಿನವರೆಗೆ ಪದೋನ್ನತಿ ಪ್ರಕ್ರಿಯೆಯನ್ನು ನಡೆಸಲಾಗಿರುತ್ತದೆ. 2024ರ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಏಪ್ರಿಲ್ ತಿಂಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಬಡ್ತಿ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದರು. ಈಗಾಗಲೇ ಈ ಪ್ರಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಕ್ಟೋಬರ್ 16, 2024ರಂದು ನೀಡಿದಂತ ಅಭಿಪ್ರಾಯದ ಅನ್ವಯ ಶಾಲಾ ಶಿಕ್ಷಣ ಇಲಾಖೆಯ…
ಬೆಳಗಾವಿ :“ಇದೇ ತಿಂಗಳು ಡಿಸೆಂಬರ್ 26 ಹಾಗೂ 27ರಂದು ಗಾಂಧಿ ಭಾರತ ಕಾರ್ಯಕ್ರಮ ಅಂಗವಾಗಿ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಹಾಗೂ ಬೃಹತ್ ಸಾರ್ವಜನಿಕ ಸಭೆ ಮಾಡಲಾಗುವುದು. ಇಡೀ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಇಲ್ಲಿನ ಬೆಳಕವಾಡಿಯ ವೀರಸೌಧದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯಿಸಿ, ಗಾಂಧಿ ಭಾರತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. “ಮಹಾತ್ಮಾ ಗಾಂಧಿಜಿ ಅವರು ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಲು ಕಾಂಗ್ರೆಸ್ ಅಧ್ಯಕ್ಷ ಜವಾಬ್ದಾರಿಯನ್ನು ಸ್ವೀಕರಿಸಿದ ಬೆಳಗಾವಿ ಅಧಿವೇಶನಕ್ಕೆ ನೂರು ವರ್ಷವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ನಾವೆಲ್ಲರೂ ಇದರ ಫಲವನ್ನು ಅನುಭವಿಸುತ್ತಿದ್ದು, ಈ ಶತಮಾನೋತ್ಸವದ ಸಂಭ್ರಮಾಚರಣೆ ಮಾಡುತ್ತಿದ್ದೇವೆ” ಎಂದರು. “ನೂರು ವರ್ಷದ ಈ ಸಂಭ್ರಮವನ್ನು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಭಾರತ ಎಂಬ ಕಾರ್ಯಕ್ರಮದ ಅಡಿ ವರ್ಷಪೂರ್ತಿ ಆಚರಣೆಗೆ ಮುಂದಾಗಿದ್ದೇವೆ. ಗಾಂಧಿ ಭಾರತದ ಚಿಹ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣ…
ಬೆಳಗಾವಿ : ಬ್ರಿಟಿಷರ ಕಾಲದಲ್ಲಿ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 9 ಕಂಪನಿಗಳಿಗೆ ಬ್ರಿಟಿಷರ್ ಕಾಲದಲ್ಲಿ ಗುತ್ತಿಗೆ ನೀಡಲಾಗಿರುವ ಸುಮಾರು 5150 ಎಕರೆ ಅರಣ್ಯ ಭೂಮಿಯ ಮರು ವಶಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ವಿಧಾನಪರಿಷತ್ತಿನಲ್ಲಿಂದು ಕುಶಾಲಪ್ಪ ಎಂ.ಪಿ. (ಸುಜಾ) ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೊಡಗು ಜಿಲ್ಲೆಯಲ್ಲಿ ಮರ್ಕೆರಾ ರಬ್ಬರ್ ಕಂಪನಿ (1074 ಎಕರೆ), ನೀಲಾಂಬುರ್ ರಬ್ಬರ್ ಕಂಪನಿಗೆ (713.03 ಎಕರೆ), ಥಾಮ್ಸನ್ ರಬ್ಬರ್ ಕಂಪನಿ (625 ಎಕರೆ), ಪೋರ್ಟ್ ಲ್ಯಾಂಡ್ ರಬ್ಬರ್ ಕಂಪನಿ (1289.29 ಎಕರೆ), ಟಾಟಾ ಕಾಫಿ ಲಿ. (923.378 ಎಕರೆ), ಗೈನ್ ಲೋರೆನ್ ಪ್ಲಾಂಟೇಷನ್ (279.748 ಎಕರೆ), ಚಾಮರಾಜನಗರ ಜಿಲ್ಲೆಯ ಎಮರಾಲ್ಡ್ ಹೆವೆನ್ ಎಸ್ಟೇಟ್, ಬೇಡಗುಳಿ (37.25 ಎಕರೆ), ಬಿಳಿಗಿರಿ ರಂಗನ ಎಸ್ಟೇಟ್, ಬೇಡಗುಳಿ (25 ಎಕರೆ), ನೀಲಗಿರಿ ಪ್ಲಾಂಟೇಷನ್ ಲಿ. ಹೊನ್ನಮೇಟಿ 184 ಎಕರೆ ಸೇರಿ ಒಟ್ಟು 5150…
ನಿಮ್ಮ ಕನಸುಗಳನ್ನು ನನಸಾಗಿಸಲು ನೀವು ಬಯಸಿದರೆ, ನಿಮಗೆ ಮೊದಲನೆಯದು ನಂಬಿಕೆ. ನಾವು ದೃಢಸಂಕಲ್ಪ ಮತ್ತು ಆತ್ಮವಿಶ್ವಾಸವನ್ನು ಹೊಂದಿದ್ದರೆ ಮಾತ್ರ ನಮ್ಮ ಆಸೆಗಳು ಈಡೇರುತ್ತವೆ. ಕನಸುಗಳು ನಿಜವಾಗುತ್ತವೆ. ಯಾವ ಮನುಷ್ಯನೂ ಆಸೆಯಿಲ್ಲದೆ ಬದುಕಲಾರ. ನಿಮ್ಮ ಮನಸ್ಸಿನಲ್ಲಿ ಖಂಡಿತವಾಗಿಯೂ ಅಪೂರ್ಣವಾದದ್ದು ಇದೆ. ಉದಾಹರಣೆಗೆ, ನಾವು ಒಳ್ಳೆಯ ಉದ್ಯೋಗ ಪಡೆಯಬೇಕು, ಕೈತುಂಬಾ ಹಣ ಸಂಪಾದಿಸಬೇಕು, ಸಮಾಜದಲ್ಲಿ ನಾಲ್ಕು ಜನ ಗೌರವಿಸುವ ಉನ್ನತ ಸ್ಥಾನದಲ್ಲಿ ಬದುಕಬೇಕು. ಆ ಆಸೆಯನ್ನು ಈಡೇರಿಸಿಕೊಳ್ಳಲು ಸತತ ಪ್ರಯತ್ನ ಮಾಡಬೇಕು. ನಾವು ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು ಮತ್ತು ಪ್ರಗತಿಯತ್ತ ಮಾತ್ರ ಗಮನಹರಿಸಬೇಕು. ಇತರ ಅನಗತ್ಯ ವಿಷಯಗಳತ್ತ ಗಮನ ಹರಿಸಬಾರದು. ಅದಕ್ಕೊಂದು ಪುಟ್ಟ ಕಸರತ್ತು ಈ ಶಕ್ತಿ ಸರ್ಕಾರ್ ಕಸರತ್ತು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ…
ಬೆಂಗಳೂರು: ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ಸಂಬಂಧ ಐಎಎಸ್ ಅಧಿಕಾರಿ ಎಂ.ಕನಗವಲ್ಲಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದದಾರೆ. ಅದರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವಿನ ಕುರಿತಂತೆ ಹಾಗೂ ರಾಜ್ಯದಲ್ಲಿ ಇದೇ ತರಹದ ಪಕರಣಗಳು ಮರು ಕಳಿಸದಂತೆ ಮೂಲ ವ್ಯವಸ್ಥೆ ಸುಧಾರಣೆಗಳನ್ನು ತರಲು (Basic System reforms) ತರಲು ಸೂಕ್ತ ಶಿಫಾರಸ್ಸಿನೊಂದಿಗೆ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಂಬಂಧ ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿರುತ್ತದೆ ಎಂದಿದ್ದಾರೆ. ಕೆಎಸ್ಎಂಎಸ್ಸಿಎಲ್ ರವರು ಟೆಂಡರ್ ಮೂಲಕ ಔಷಧಿಗಳ ಖರೀದಿ ಮತ್ತು ಎಂಪ್ಯಾನಲ್ ಲ್ಯಾಬೋರೇಟರಿಗಳಿಗೆ ಔಷಧಗಳ ಮಾದರಿಗಳನ್ನು ಒಳಪಡಿಸುವಲ್ಲಿ ಆಗಿರುವ ನಿಯಮಗಳ ಉಲ್ಲಂಘನೆಗಳ ಬಗ್ಗೆ ಕೆಎಸ್ಎಂಎಸ್ಸಿಎಲ್ ಅಧಿಕಾರಿಗಳ ಪಾತ್ರ ಮತ್ತು ಲೋಪಗಳನ್ನು ಎಸಗಿದ ಅಧಿಕಾರಿಗಳ ಮೇಲೆ ಜವಾಬ್ದಾರಿಗಳನ್ನು ನಿಗದಿ ಮಾಡುವ ಬಗ್ಗೆ ಮತ್ತು ಕೆಎಸ್ಎಂಎಸ್ಸಿಎಲ್ ನಲ್ಲಿ existing…
ಬೆಂಗಳೂರು: ಸಾರಿಗೆ ಸಂಸ್ಥೆಗಳ ನೌಕರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮವಹಿಸಿದ್ದು, ಈ ಹಂತದಲ್ಲಿ ಮುಷ್ಕರಕ್ಕೆ ಮುಂದಾಗುವುದು ಸರಿಯಲ್ಲ. ನೌಕರರ ಬೇಡಿಕೆ ಈಡೇರಿಕೆ ಸಂಬಂಧ ಈಗಾಗಲೇ ಮಾತುಕತೆಗಳು ನಡೆದಿದ್ದು, ಬಹುತೇಕ ಬೇಡಿಕೆಗಳ ಈಡೇರಿಕೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಈಗಾಗಲೇ ಸಾರಿಗೆ ಸಚಿವರು ನೌಕರರ ಸಂಘಟನೆಗಳೊಂದಿಗೆ ಅವರ ಬೇಡಿಕೆಗಳಿಗೆ ಸಂಬಂಧಿಸಿ ದಂತೆ ಮಾತುಕತೆ ನಡೆಸಿದ್ದು, ಅವುಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿದೆ ಎಂದು ತಿಳಿಸಿದ್ದಾರೆ. ಪ್ರಮುಖವಾಗಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ನೌಕರರ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ವ್ಯತ್ಯಾಸದ ಮೊತ್ತ ಪಾವತಿಸಲು ರೂ.224 ಕೋಟಿ ಗಳನ್ನು ನೀಡಲು ಸರ್ಕಾರವು ದಿನಾಂಕ: 07.12 2024 ರಂದು ಸರ್ಕಾರಿ ಆದೇಶ ಹೊರಡಿಸಿದೆ. ಅಧಿವೇಶನದ ನಂತರ ಹಣ ಬಿಡುಗಡೆಯಾಗಲಿದೆ ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣೆಯ ಪಟ್ಟಿ ಬಿಡುಗಡೆ ಮಾಡಲಾಗಿದೆ. ಭವಿಷ್ಯನಿಧಿ…
ದಾವಣಗೆರೆ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ರಾಜ್ಯ ಸರಕಾರದ ಭ್ರಷ್ಟಾಚಾರದ ಬಂಡವಾಳವನ್ನು ಬಯಲಿಗೆ ಎಳೆಯುತ್ತೇವೆ; ಉತ್ತರ ಕರ್ನಾಟಕ ಸೇರಿ ರಾಜ್ಯದ ವಿಚಾರದಲ್ಲಿ ಅಭಿವೃದ್ಧಿಶೂನ್ಯ ಸರಕಾರದ ಕಿವಿಹಿಂಡುವ ಕೆಲಸವನ್ನು ವಿರೋಧ ಪಕ್ಷವಾಗಿ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಗಳಿಗೆ ಉತ್ತರಿಸಿದರು. ರೈತರು, ಬಡವರಿಗೆ ನ್ಯಾಯ ಸಿಗುತ್ತಿಲ್ಲ; ಮನೆಗಳನ್ನು ಕೊಡುತ್ತಿಲ್ಲ. ರೈತರು ಬೆಳೆದ ಬೆಳೆ ನಾಶವಾದರೆ ಪರಿಹಾರ ಕೊಡುತ್ತಿಲ್ಲ. ಎಲ್ಲ ವರ್ಗದ ಜನರು ಇವತ್ತು ಸಂಕಷ್ಟದಲ್ಲಿದ್ದಾರೆ. ಇವರು ಭ್ರಷ್ಟಾಚಾರದಲ್ಲಿ ಮುಳುಗಿ, ಅಭಿವೃದ್ಧಿ ಮಾಡದ ಕಾರಣ ಜನರಿಗೆ ಕಾಂಗ್ರೆಸ್ ಪಕ್ಷದ ಸರಕಾರ ಶಾಪವಾಗಿ ಪರಿಣಮಿಸಿದೆ ಎಂದು ಟೀಕಿಸಿದರು. ವಕ್ಫ್ ಸಮಸ್ಯೆ ಸಂಬಂಧ ಪ್ರವಾಸ ಸಂಪೂರ್ಣ ಮುಗಿದಿಲ್ಲ; ಅಧಿವೇಶನ ಮುಗಿದ ಬಳಿಕ ಪ್ರವಾಸವನ್ನು ಮುಂದುವರೆಸುತ್ತೇವೆ. ಅಂತಿಮವಾಗಿ ನಾವು ವರದಿಯನ್ನು ಕೇಂದ್ರದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷರಿಗೆ ನೀಡುತ್ತೇವೆ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ಗ್ಯಾರಂಟಿ ಹೆಸರಿನಲ್ಲಿ ಬಡವರಿಗೆ ಅವಮಾನ…
ಮಂಡ್ಯ: ಡಿಸೆಂಬರ್ 15 ರಂದು ಕುಮಾರಸ್ವಾಮಿ ಅಭಿನಂದನಾ ಸಭಾರಂಭ ರದ್ದು ಮಾಡಲಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಎಚ್ಡಿಕೆ ಅಭಿನಂದನಾ ಸಮಾರಂಭ ಮುಂದೂಡಿಕೆ ಮಾಡಲಾಗಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸೂಚನೆ ಮೇರೆಗೆ ಕಾರ್ಯಕ್ರಮ ಮುಂದೂಡಲಾಗಿದೆ ಅಂತ ಮದ್ದೂರಿನಲ್ಲಿ ಮಾಜಿ ಸಚಿವ ಸಿಎಸ್ ಪುಟ್ಟರಾಜು ತಿಳಿಸಿದ್ದಾರೆ. ಮಂಡ್ಯದ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಸೂಚನೆ ಮೇರೆಗೆ ಡಿಸೆಂಪರ್.15ರಂದು ನಿಗದಿ ಪಡಿಸಲಾಗಿದ್ದಂತ ಅಭಿನಂದನಾ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ. ಬೇರೆ ಯಾವುದೇ ಕಾರಣಗಳು ಇಲ್ಲ. ಯಾವುದೇ ಗೊಂದಲಗಳು ಆಗಬಾರದು ಎಂದು ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ. ಈ ಕಾರ್ಯಕ್ರಮ ಮಾಡುವ ಬಗ್ಗೆ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇವು. ಸಮ್ಮೇಳನ ಮುಗಿದ ಮೇಲೆ ದಿನಾಂಕ ನಿಗದಿ ಮಾಡುತ್ತೇವೆ ಎಂದರು. ಈ ಕಾರ್ಯಕ್ರಮದ ಬಗ್ಗೆ ಸಚಿವ ಚಲುವರಾಯಸ್ವಾಮಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಇಂತಹ ಜಿಲ್ಲಾ ಮಂತ್ರಿಗಳನ್ನ ಬಹಳ ನೋಡಿದ್ದೇವೆ. ಚಲುವರಾಯಸ್ವಾಮಿ ಚುನಾವಣೆಯಲ್ಲಿ ಸೋತಿಲ್ವಾ. ಸಮ್ಮಿಶ್ರವಾಗಿ ಚುನಾವಣೆ ಮಾಡಿದ್ದಾಗ ಇವರು ಏನು ಮಾಡಿದ್ರು.…













